ಬೆಲ್ಲದ ಪಾಕಲಿ ಮಾಡ್ದಷ್ಟೇ ಪೊರ್ಲು !
ಅದ್ ಕರಿ ಬೆಲ್ಲ ಅಲ್ಲ ಬಿಳಿ !
ಕೋಪಟ್ಟಿ ಬೆಟ್ಟದ ಮೇಲೆ
ಬೀಳ್ವ ಮಂಜಿನಂಗೆ...
ಮುಟ್ಟಿರೆ ಕರಗಿಹೋದೆ !
ಅವ್ಳು ಪಾಕದ ಗೂಡೆ
ಜುಳು ಜುಳು ನದಿಯ ನಡಿಗೆ
ಹೆಜ್ಜೆ ಮೇಲೆ ಹೆಜ್ಜೆ...
ಝಲ್ ಝಲ್ ಸದ್ದಿನ ಬೆಳ್ಳಿ ಗೆಜ್ಜೆ
ಅಳವಾರದ ಗದ್ದೆ ಬದಿಯ
ನವಿಲಿಗೂ ಬಾಲೆ ಅಂಥ ನಾಟ್ಯ !
ಅವ್ಳು ಪಾಕದ ಗೂಡೆ
ಹುಣ್ಣಿಮೆ ಚಂದಿರನ ಮೇಲೆ
ಪುಟ್ಟ ಕಡು ಕಪ್ಪು ದುಂಬಿ !
ಫಳ ಫಳ ಹೊಳೆವ
ಮುಖಲಿ ಸಣ್ಣ ಮಚ್ಚೆ !
ದೃಷ್ಟಿ ಆಗದಿರ್ಲಿತಾ ದೇವರೇ ಇಟ್ಟದ್ !
ಅವ್ಳು ಪಾಕದ ಗೂಡೆ
ನಾಗತೀರ್ಥಲಿ ಕಾವೇರಿಯ ಝರಿ
ಬೆನ್ನ ಮೇಲೆ ಹರಡ್ಯುಟ್ಟು ಕೇಶರಾಶಿ
ಅದೆಷ್ಟು ಉದ್ದ !
ಬಿಟ್ಟರೆ ನೆಲಕ್ಕೆ ಮುತ್ತು ಕೊಟ್ಟದೆ !
ಆರು ಮೊಳ ಮಲ್ಲಿಗೆಯೂ ಕಡ್ಮೆನೇ...
ಅವ್ಳು ಪಾಕದ ಗೂಡೆ
arebhase@gmail.com
ಮೊನ್ನೆ ಕುಶಾಲನಗರಲಿ ಗೌಡ ಸಮುದಾಯದ ಸಂತೋಷ ಕೂಟ ನಡ್ತ್. ಇಲ್ಲಿ ಮಕ್ಕಳಿಗೆ ಬೇರೆ ಬೇರೆ ಪೈಪೋಟಿಗಳ್ನ ನಡೆಸಿದ್ದೊ. ಇದ್ರಲ್ಲಿ ಛದ್ಮವೇಶ ಸ್ಪಧರ್ೆ ಕೂಡ ಒಂದು. ಈ ಪೈಪೋಟೀಲಿ ತುಂಬಾ ಮಕ್ಕ ಪಾಲ್ಗೊಂಡಿದ್ದೊ. ಒಬ್ಬೊಬ್ಬರೂ ಒಂದೊಂದು ವೇಶ ಹಾಕಿ ಗಮನ ಸೆಳ್ದೊ
arebhase@gmail.com
ದೇವರಗುಂಡ ಸದಾನಂದ ಗೌಡ ಮುಖ್ಯಮಂತ್ರಿ ಆದ್ಮೇಲೆ ಮೊದಲ ಸಲ ಕೊಡಗಿಗೆ ಬಂದಿದ್ದೊ. ಕೊಡಗು ಸದಾನಂದಗೌಡರ ಮಾವನ ಮನೆ. ಅವ್ರ ಹೆಣ್ಣ್ ಡಾಟಿ ಕುಶಾಲನಗರದ ಗುಡ್ಡೇಹೊಸೂರು ಹತ್ರ ಇರ್ವ ಬೊಳ್ಳೂರು ಗ್ರಾಮದವು. ಹಂಗಾಗಿ ಸದಾನಂದ ಗೌಡ ಅವ್ರ ಈ ಭೇಟಿ ತುಂಬಾ ಮಹತ್ವ ಪಡ್ಕಂಡಿತ್ತ್. ಮೊದ್ಲು ಮಡಿಕೇರಿಗೆ ಬಂದ ಸದಾನಂದ ಗೌಡ ಗುಡ್ಡೇಮನೆ ಅಪ್ಪಯ್ಯ ಗೌಡ ಅವ್ರ ಪುತ್ಥಳಿ ಅನಾವರಣ ಮಾಡ್ದೊ. ಅದಾದ್ಮೇಲೆ ಮಡಿಕೇರಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗಿ, ಗುಡ್ಡೇಹೊಸೂರಿಗೆ ಬಂದೊ. ಇಲ್ಲಿನ ಅವ್ರ ಮಾವನ ಮನೇಲಿ ಒಳ್ಳೇ ಸ್ವಾಗತ ಸಿಕ್ತ್. ಮಧ್ಯಾಹ್ನದ ಊಟದ ವ್ಯವಸ್ಥೆ ಸದಾನಂದ ಗೌಡರ ಮಾವನ ಮನೇಲಿ ಇತ್ತ್. ಶ್ಯಾವಿಗೆ ಪಾಯಸ, ಪಲಾವ್, ಅನ್ನ, ಸಾಂಬಾರ್, ಅಕ್ಕಿರೊಟ್ಟಿ, ಕೋಳಿಸಾರ್, ಹಪ್ಪಳ, ಪಾಯಸ ಹಿಂಗೆ ಗಮ್ಮತ್ತಾದ ಊಟ ಇತ್ತ್. ಊಟ ಆದ್ಮೇಲೆ ಕುಶಾಲನಗರ ಗೌಡ ಸಮಾಜಲಿ ನಡ್ದ ಗೌಡ ಸಂತೋಷ ಕೂಟದ ಸಮಾರೋಪ ಸಮಾರಂಭಲಿ ಪಾಲ್ಗೊಂಡಿದ್ದೊ. ಗೌಡರ ಜೊತೆ ಡಾಟಿ ಸದಾನಂದಗೌಡ, ಸ್ಪೀಕರ್ ಕೆಜಿ ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ ರವಿಕುಶಾಲಪ್ಪ ಕೂಡ ಬಂದಿದ್ದೊ...
ಫೋಟೋ ಕಳ್ಸಿದವು: ಮಡಿಕೇರಿಂದ `10ಕುಟುಂಬ18 ಗೋತ್ರ' ಸಾಕ್ಷ್ಯಚಿತ್ರ ಟೀಂ ಕುಶಾಲನಗರಂದ ತೊರೆನೂರು ಪ್ರೇಂಕುಮಾರ
arebhase@gmail.com
ದೇವರಗುಂಡ ಸದಾನಂದ ಗೌಡ ಮುಖ್ಯಮಂತ್ರಿ ಆದ್ಮೇಲೆ, ಇದೇ ಮೊದ್ಲ ಸಲ ಮಾವನ ಮನೆಗೆ ಬಂದೊಳೊ. ಹೌದು, ಇಂದ್ ಮಡಿಕೇರಿ ಮತ್ತೆ ಕುಶಾಲನಗರಲಿ ನಡೆಯುವ ತುಂಬಾ ಕಾರ್ಯಕ್ರಮಗಳಲ್ಲಿ ಅವು ಪಾಲ್ಗೊಂಡವೆ. ಈಗಾಗ್ಲೇ ಅವು ಮಡಿಕೇರಿಗೆ ಬಂದ್ ಇಳ್ದೊಳೊ. ಪಾಪ, ಎಲ್ಲಿ ಹೋದ್ರೂ ಅವ್ರನ್ನ ರಾಜಕೀಯ ಬಿಡ್ತಿಲ್ಲೆ. ಮಾವನ ಮನೆಗೆ ಬಂದಿರ್ವ ಖುಷಿ ಮಧ್ಯೆನೂ ಅವ್ರನ್ನ ರಾಜಕೀಯ ಕಾಡ್ತುಟ್ಟು. ಬಿಜೇಪೀಲಿರ್ವ ಗೊಂದಲಗಳ್ನ ಸದಾನಂದ ಗೌಡ ಒಪ್ಪಿಕೊಂಡೊಳೊ. ಎಲ್ಲಾ ಗೊಂದಲಗ ಸದ್ಯದಲ್ಲೇ ಪರಿಹಾರ ಕಂಡದೆ. ನಂತರ ಮಂತ್ರಿ ಮಂಡಲನ ವಿಸ್ತರಣೆ ಮಾಡ್ನೆತಾ ಅವು ಮಡಿಕೇರಿಲಿ ಹೇಳ್ದೊ. ದೇವರಗುಂಡ ಸದಾನಂದ ಗೌಡ ಮದುವೆ ಆಗಿರ್ದು ಕುಶಾಲನಗರ ಹತ್ರದ ಗುಡ್ಡೆಹೊಸೂರಿನ ಗುಡ್ಡೆಮನೇಂದ. ಹಂಗಾಗಿ ಸದಾನಂದ ಗೌಡ ಅವ್ಕೆ ಕುಶಾಲನಗರಲಿ ದೊಡ್ಡಮಟ್ಟದ ಸ್ವಾಗತ ಕೊಡಿಕೆ ಸಿದ್ಧತೆ ನಡ್ದುಟ್ಟು..
arebhase@gmail.com