ಇವು ಕುಶಾಲನಗರದ ಕಾವೇರಿ ನಿಸರ್ಗಧಾಮದ ಜಿಂಕೆಗ. ಕಾಡಿನಲ್ಲಿ ಖುಷಿಯಾಗಿ ಓಡಾಡಿಕಂಡ್ ಇದ್ದವು, ಇಲ್ಲಿ ಬೇಲಿಯೊಳಗೆ ಬಂಧಿ. ತಮಗೆ ಬೇಕಾದಷ್ಟು ತಿಂದು ಆರಾಮವಾಗಿ ಇದ್ದ ಜಿಂಕೆಗಳಿಗೆ, ಈಗ ಇಲ್ಲಿಗೆ ಬರ್ವ ಪ್ರವಾಸಿಗ ಕೊಡ್ವ ಕೈ ತುತ್ತು ಆಹಾರ !
arebhase@gmail.com
arebhase@gmail.com
`ಏ SURF ತಕ್ಕಂಬಾರಾ...ಈ ಎಣ್ಣೆ ಅರಸಿಣ ಮೈಗೆ ಲಾಯ್ಕ ಅಂಟಿಕೊಂಡುಟ್ಟು...' ಹೊಳೆ ಮಧ್ಯಲಿ ನಿಲ್ಲಿಸಿಕಂಡ್ ಜೀಪು ತೊಳ್ದ್ ಅಭ್ಯಾಸ ಇದ್ದ ಮಂಜು ಬಾತ್ರೂಮ್ಂದ ಬೊಬ್ಬೆ ಹಾಕ್ತಿತ್ತ್. ಹೌದು, ಅಂವ ಹೇಳ್ದು ನಿಜ. ಮದುಮಂಙ ಗಿರಿಗೆ ಎಲ್ಲವೂ ಸೇರ್ಕಂಡ್ ಲಾಯ್ಕ ಎಣ್ಣೆಅರಸಿಣ ಉಜ್ಜಿಬಿಟ್ಟಿದ್ದೋ... ಮನೆ ಒಳಗೆ 5 ಜನರಿಂದ ಮಾತ್ರ ಶಾಸ್ತ್ರ ಮಾಡ್ಸೊಕೂತ ಹೈದನ ಅಮ್ಮ ಯೋಚನೆ ಮಾಡಿತ್ತ್.. ಆದ್ರೆ ಐದು ಹೋಗಿ ಹತ್ತು ಜನ ಬಂದ್ರೂ ಶಾಸ್ತ್ರ ನಿಲ್ಲುವಂಗೆ ಕಾಣ್ತಿತ್ಲೆ... ಅಡೋಣಿ 15ರ ವರೆಗೆ ಲೆಕ್ಕ ಇಟ್ಟ್ಕಂಡಿತ್ತ್... ಮತ್ತೆ ಯಾರ್ಯಾರೋ ಬಂದ್ ಹೈದಂಗೆ ಎಣ್ಣೆ ಅರಸಿಣ ಉಜ್ಜಿದೇ ಉಜ್ಜಿದ್... ಇದು ಮನೆ ಒಳಗಿನ ಕಥೆ ಆತ್...
ರಜೆ ಇತ್ತ್. ಏನೋ ಒಂತರ ಬೋರ್ ಆಗ್ತಿತ್ತ್. ಯಾಕೋ ಯಾರಿಗೂ ಹೇಳಿಕಣಿಕೆ ಆಗದಷ್ಟು ನೋವು, ಸಂಕಟ, ದುಃಖ.... ಹಳೆ ನೆನಪುಗಳ ಮೆರವಣಿಗೆ.. ಅಂದು ಇದ್ದ ಸಂತೋಷ, ನಲಿವುಗಳೆಲ್ಲಾ ಮಾಯಾವಾದಂಗೆ ಆಗ್ತುಟ್ಟು. ಹಿಂಗೇ ಆಲೋಚನೆ ಮಾಡಿಕಂಡ್ ತೋಟದ ಕರೆಲ್ಲಿರುವ ಗದ್ದೆ ಏರಿಲಿ ನಡ್ಕಕಂಡ್ ಹೋಗ್ತಿದ್ದೆ...ಇನ್ನೇನು ಚಂದ್ರ ಕಾಣಿಸಿಕೊಳ್ವ ಹೊತ್ತಾತ್. ಗೆಳೆಯ ಇಂದ್ ಯಾಕೋ ನಿನ್ನ ಜೊತೆ ಇರಕ್ಕುತ್ತಾ ಮನಸ್ಸು ಬಯಸುತ್ತುಟ್ಟು. ಮೆಲ್ಲೆನೆ ನಾ ಹೆಜ್ಜೆ ಹಾಕಿದಂಗೆ, ಪೋರ್ಲನ ದುಂಡು ಮುಖ ಹೊತ್ತ್ಕಂಡ್ ಹಾಲು ಚೆಲ್ಲಿದಂಗೆ ಬೆಳದಿಂಗಳ ಸೂಸಿಕಂಡ್ ಚಂದಮಾಮನೂ ಹಿಂದೆ ಹಿಂದೆನೇ ಬರ್ತಿತ್ತ್. ಇನ್ನೇನ್ ನನ್ನ ಮನಸ್ಸಿಗೆ ತಡಕಾಣಿಕೆ ಆಗದೆ, ಮೊಬೈಲ್ ತೆಗ್ದು ಕಾಲ್ ಮಾಡಿರೇ ಅತ್ತ ಕಡೆಯಿಂದ ಮಾತೇ ಇಲ್ಲೆ. ಇಬ್ಬರಲ್ಲೂ ಮೌನ ! ಅಂದು ಮಾತಾಡಿದರೂ ಮುಗಿಯದಷ್ಟು ಮತ್ತಷ್ಟು ಮಾತಿನ ರಸಪಾಕ... ಗೆಳೆಯ ಇಂದೇಕೆ ನಿನ್ನಲ್ಲಿ ಮಾತುಗಳೇ ಇಲ್ಲದ ಮೌನ ? ತಣ್ಣನೆಯ ಗಾಳಿ ಬೀಸ್ತುಟ್ಟು. ಪೊಂಗರೆಮರದ ಒಣ ಎಲೆಗ ಪರಪರ ಸದ್ದ್ ಮಾಡಿಕಂಡ್ ಹಿಂದಿನ ನಮ್ಮಿಬ್ಬರ ಮಾತಿನ ಲೋಕಕ್ಕೆ ಜಾರಿಸ್ತುಟ್ಟು.
ಆಗ ಐದನೇ ಕ್ಲಾಸ್. 'ಉಪ್ಪಿಟ್ಟು ಸ್ಕೂಲ್' ಗಳಲ್ಲಿ ಎಬಿಸಿಡಿ ಕಲಿವಾ ಟೈಂ. ಲಕ್ಷ್ಮಣ ಮಾ ಸ್ಟರ್ ಇಂಗ್ಲೀಷ್ ಆಲ್ಫಬೆಟ್ ಹೇಳಿಕೊಡ್ವ ಮೊದ್ಲೇ ಮಕ್ಕ 'LOVE' ತಿಳ್ಕೊಂಡುಬಿಟ್ಟಿದ್ದೊ. ಪ್ರಪಂಚ ಏನೂತಾ ಇನ್ನೂ ಗೊತ್ತಾಗಿತ್ಲೆ.... ಆಗ್ಲೇ ಲವ್ ! ಬಹುಶ: ಲವ್ ತೇಳಿರೂ ಆಗ ಅವ್ಕೆ ಅರ್ಥ ಗೊತ್ತಿತ್ಲೆಯೇನೋ ! ಕನ್ನಡಲಿ ನೆಟ್ಟಗೆ ನಾಲ್ಕು ಅಕ್ಷರನೂ ಬರಿಯಕ್ಕೆ ಬಾತಿತ್ಲೆ. 'ನನ್ನ ಶಾಲೆ' ತೇಳುವ ವಿಷಯದ ಮೇಲೆ ಪ್ರಬಂಧ ಬರೆಯೊಕುತೇಳಿರೂ ಅಹಲ್ಯ ಟೀಚರ್ ಕೈಲಿ `ದಡ್ಡ..ದಡ್ಡ'ತಾ ಹೇಳಿಸಿಕಂಡ್, ಬರೆ ಬರುವಂಗೆ ಕುಂಡೆಗೆ ಹೊಡ್ಸಿಕಣಕಾಗಿತ್ತ್. ಅಂಥದ್ರಲ್ಲಿ ಲವ್ ಲೆಟರ್ ಬೇರೆ ಕೇಡು !
ಒಂದ್ ದೊಡ್ಡ ಕಾಡು...
ದು:ಖ ಅಂದ್ರೆ ಹಿಂಗೆನೂ
ಮೆಟ್ರೋ ರೈಲ್ಲಿ ಕೂರೊಕುತೇಳ್ವ ನನ್ನ ಆಸೆ ಕೊನೆಗೂ ಈಡೇರ್ತ್. ಮೆಟ್ರೋ ಪ್ರಯಾಣ ತುಂಬಾ ಬೇರೆಯದ್ದೇ ಅನುಭವ ಕೊಟ್ಟದೆತಾ ಅದರಲ್ಲಿ ಹೋಗಿ ಬಂದವು ಹೇಳ್ತಿದ್ದೊ... ಅದ್ರೆ, ನಂಗೆ ಆ ರೀತಿ ವಿಶೇಷತಾ ಏನೂ ಅನ್ನಿಸ್ತಿಲ್ಲೆ. ವೋಲ್ವೋ ಬಸ್ಲಿ ಕುದ್ದ್ಕಂಡ್, ರೈಲ್ವೆ ಕಂಬಿ ಮೇಲೆ ಹೋದಂಗೆ ಆತಷ್ಟೆ ! ವೋಲ್ವೊದಲ್ಲಿ ಒಳ್ಳೇ ಕುಷನ್ ಸೀಟ್ ಆದ್ರೂ ಇದ್ದದೆ. ಮೆಟ್ರೋಲಿ ಅದೂ ಇಲ್ಲೆ ಬಿಡಿ ! (ಮೆಟ್ರೋ ಡಿಸೈನ್ ಮಾಡಿರುದೇ ನಿಂತ್ಕಂಡ್ ಹೋಗವ್ಕೆ...)
ಡೆಲ್ಲೀಲಿ ಮೆಟ್ರೋ ರೈಲ್ನ ಜನ ತುಂಬಾ ಇಷ್ಟ ಪಟ್ಟಳೋ... ಅಲ್ಲಿ ರೈಲೊಳಗೆ ಸಿಟು ಸಿಕ್ಕೋಕುತೇಳಿರೆ ಏಳೇಳು ಜನ್ಮಲಿ ಪುಣ್ಯ ಮಾಡಿರೊಕು ! ಬರೀ ಪೀಕ್ಅವರ್ಲಿ ಮಾತ್ರ ಈ ಪರಿಸ್ಥಿತಿ ಅಲ್ಲ. ದಿನದ ಹೆಚ್ಚು ಟೈಂ ಹಿಂಗೆನೇ ಇದ್ದದೆ. ಆದ್ರೆ, ಬೆಂಗಳೂರು ಜನಕ್ಕೆ ಮೆಟ್ರೋ ರೈಲ್ ಏಕೋ ಇಷ್ಟ ಆದಂಗೆ ಕಾಣ್ತಿಲ್ಲೆ. ಈಗ್ಲೂ ಇದನ್ನ ಜನ ಒಂಥರ ಪಿಕ್ನಿಕ್ಸ್ಪಾಟ್ನಂಗೆ ನೋಡ್ದು ಬಿಟ್ಟರೆ, ದಿನ ನಿತ್ಯದ ಉಪಯೋಗಕ್ಕೆ ಬಳಸುವವು ತುಂಬಾ ಕಡಿಮೆ. ಇದ್ಕೆ ಕಾರಣ ಏನಿರ್ದು ?