Tuesday, 13 December 2011

ನಾವು ಪುಣ್ಯ ಮಾಡ್ಯೊಳೋ...!


ನಾಯಿಗಳಿವೆ ಎಚ್ಚರಿಕೆ..
ಮನೆಮುಂದೆ ದೊಡ್ಡ ಬೋರ್ಡ್ !
ಇವೇ ದೊಡ್ಡ ಕಳ್ಳರ್
ಇನ್ನೊಬ್ಬರ ಸುಲಿದೇ 
ದಪ್ಪ ಆದವು...
ಊಟ ಮಾಡ್ತಿರ್ವ ಕೈಲಿ
ಕಾಗೆನ ಕೂಡ ಓಡ್ಸದವು
ಲಂಚನೇ ಊಟ !
ಹೆಗ್ಗಣಗಳೇ ದೂರ ಓಡಕು
ಗೆದ್ದಲು ಕಟ್ಟಿದ ಹುತ್ತಲಿ
ಹಾವುಗಳಂಗೆ ಸೇರಿಕಂಡವೆ
ನ್ಯಾಯ ನೀತಿ ಲೆಕ್ಕಕಿಲ್ಲೆ...
ತಂಬಾ ಗಟ್ಟಿಗರು
ಇವು ನಮ್ಮನಾಳುವವು !

- ತಳೂರು ಡಿಂಪಿತಾ

ನೀವೂ ಬರೆಯನಿ..
arebhase@gmail.com

Monday, 12 December 2011

ಅರೆಭಾಷೆ ವಾರ್ತೆ



12.12.2011ರಂದ್ ಮಡಿಕೇರಿ ಆಕಾಶವಾಣಿಲಿ ಪ್ರಸಾರ ಆದ ಅರೆಭಾಷೆ ವಾರ್ತೆ
arebhase@gmail.com

ಏಣಿ ಮರೆತವು...


ಹೊಳೆ ದಾಟಿದ ಮೇಲೆ 
ಅಂಬಿಗನ ಹಂಗಿಲ್ಲೆ
ತೂಗು ಸೇತುವೆ ಬಂದುಟ್ಟು
ಇನ್ಯಾಕೆ ನಮಗೆ ದೋಣಿ ?
ರೆಕ್ಕೆಲಿ ಶಕ್ತಿ ತುಂಬ್ಯಟ್ಟು
ಆಕಾಶದ ವಿಸ್ತಾರ ಗೊತ್ತಾಗುಟ್ಟು
ಯಾವ ಮರಲಿ ಯಾವ ಹಣ್ಣ್
ಯಾವುದು ಸಿಹಿ ಯಾವುದು ಕಹಿ
ಎಲ್ಲಾ ಈಗ ತಿಳಿದುಟ್ಟು
ಇನ್ನೂ ಬೇಕಾ ಅಮ್ಮಾ ?
ಸಣ್ಣ ಜಲಲಿ ಹುಟ್ಟು
ತೋಡುಲಿ ಜೀವನ
ಹೊಳೇಲಿ ಆಟ
ಸಮುದ್ರಲ್ಲೇ ಸಂಸಾರ
ಮತ್ಯಾಕೆ ಹಿಂದಕ್ಕೆ ಈಜೋಕು ?
ಬೀಜಕ್ಕೆ ಗಿಡದ ನೆರಳು
ಗಿಡಕ್ಕೆ ಮರದ ಆಶ್ರಯ
ಮರಕ್ಕೆ ಗಗನವೇ ಶ್ರೀರಕ್ಷೆ
ಇನ್ನೆಂಥಕ್ಕೆ ಚಪ್ಪರ ?
ಎಲ್ಲನೂ ಅಷ್ಟೇ....
ಮೇಲೆ ಹತ್ತಿಕೆ ಏಣಿಯ ಸಹಾಯ
ಅಲ್ಲಿ ಕೂತ ಮೇಲೆ 
ಕಣ್ಣಿನ ನೇರಕಷ್ಟೇ ದೃಷ್ಟಿ...
ಇದ್ ಸ್ವಾರ್ಥಿಗಳ ಪ್ರಪಂಚ ತಾನೇ ?

- `ಸುಮಾ'

ನೀವೂ ಬರೆಯನಿ.
arebhase@gmail.com

Saturday, 10 December 2011

ಕುಶಾಲನಗರಲಿ ಗೌಡರಿಂದ ಹುತ್ತರಿ...


ಕುಶಾಲನಗರಲಿ ಗೌಡ ಜನಾಂಗದವು ತುಂಬಾ ಗೌಜಿಲಿ ಹುತ್ತರಿ ಹಬ್ಬನ ಆಚರಿಸಿದೋ... ಬೈಮನ ವಿಶ್ವನಾಥ ಅವ್ರ ಗದ್ದೇಲಿ ಕದಿರು ಕೊಯ್ಯುವ ಕಾರ್ಯಕ್ರಮ ಇಟ್ಕೊಂಡಿದ್ದೊ. ಇದ್ಕೂ ಮೊದ್ಲು ಗೌಡ ಸಮಾಜಲಿ ಪೂಜೆ ಮಾಡಿ ನೆರೆಕಟ್ಟಿದೊ. ಅಲ್ಲಿಂದ ಗಣಪತಿ ದೇವಸ್ಥಾನಕ್ಕೆ ಬಂದ್ ಮತ್ತೆ ವಿಶ್ವನಾಥ್ ಅವ್ರ ಗದ್ದೆಲಿ ಕದಿರು ಕೊಯ್ದೊ. ಮತ್ತೆ ಮೆರವಣಿಗೇಲಿ ಗೌಡಸಮಾಜಕ್ಕೆ ಹೋಗಿ ಜನಾಂಗ ಬಾಂಧವ್ಕೆ ಕದಿರು ಹಂಚಿದೊ. ಈ ಸಂದರ್ಭಲಿ ಕೇಚಪ್ಪನ ಮೋಹನ್, ಕೊಳಂಬೆ ರಾಜಪ್ಪ, ಪಿಎಂ ಮೋಹನ್, ಕುದುಪಜೆ ಭೋಜಪ್ಪ ಸೇರ್ದಂಗೆ ತುಂಬಾ ಜನ ಗೌಡುಗ ಸೇರಿದ್ದೊ...

`ಅರೆಭಾಷೆ ವಾರ್ತೆ '


ಚಿತ್ರ: ತೊರೆನೂರು ಪ್ರೇಂಕುಮಾರ್
arebhase@gmail.com

Friday, 9 December 2011

ಈ ಸಲ ಪಟಾಕಿ ಸದ್ದ್ ಕಡ್ಮೆ !


ಈ ವರ್ಷ ಹುತ್ರಿಲಿ ಪಟಾಕಿ ಶಬ್ಧ ತುಂಬಾ ಕಡ್ಮೆ...ವರ್ಷ ವರ್ಷ ಕೇಳ್ತಿದ್ದಷ್ಟ್ ಪಟಾಕಿಗಳ ಶಬ್ಧ ಈ ವರ್ಷ ಕೇಳ್ತ್ಲೆ. ಇದ್ ಬರೀ ಹುತ್ರಿ ಕಥೆ ಮಾತ್ರ ಅಲ್ಲ. ದೀಪಾವಳಿಲಿ ಕೂಡ ಹಿಂಗೆನೆ ಆಗಿತ್ತ್. ಏಕೆ ಹಿಂಗೆ ? ಮೊದಲ್ಲೆಲ್ಲಾ ಪಟಾಕಿ ಹೊಡ್ಸಿಕೆ ಇದ್ದ ಆಸಕ್ತಿ ಈಗ ಯಾರಿಗೂ ಇಲ್ಲೆನಾ ? ಪಟಾಕಿಗೆ ಬೆಂಕಿ ಇಡಿಕೆ ಎಲ್ಲವ್ಕೂ ಒಂಥರ ಖುಷಿ ಇದ್ದದೆ. ಗರ್ನಲ್ ಪಟಾಕಿ ನೆಲಲಿಟ್ಟ್, ಅದ್ರ ಬತ್ತಿದ್ ಸಿಪ್ಪೆನ ಸ್ವಲ್ಪ ಜಾರ್ಸಿ, ಊದುಕಡ್ಡಿನೋ ಇನ್ನೆಂಥದ್ದೋ ತಕ್ಕಂಡ್ ಕೈ ಉದ್ದ ಮಾಡಿ ಬೆಂಕಿಇಡ್ದು, ಬತ್ತಿ ಸುರುಸುರುಥೇಲಿಕ್ಕನ ಒಂದೇ ಉಸುರಿಗೆ ಓಡಿ ಹೋಗಿ ಕಿವಿಮುಚ್ಚಿಕಂಡ್ ಪಟಾಕಿ ಹೊಡೆಯುದ್ದನ್ನೇ ಬಿಟ್ಟ ಕಣ್ಣ್ ಬಿಟ್ಟ ಹಂಗೆ ನೋಡ್ದು... ಇದೊಳ್ಳೇ ಮಜಾ ಕೊಟ್ಟದೆ. ಇಂಥ ಒಂದು ಖುಷಿನ ಕಳ್ಕಣಿಕೆ ಯಾರಾರ್ ಇಷ್ಟಪಟ್ಟವೆನಾ ? ಆದ್ರೂ ಈಸಲ ಪಟಾಕಿ ಹೊಟ್ಟಿದ್ ಮಾತ್ರ ಕಡಿಮೆನೇ...
ಹುತ್ರಿ ಟೈಂಗೆ ಕುಶಾಲನಗರದಂಥ ಒಂದೇ ಊರ್ಲಿ ಲಕ್ಷಗಟ್ಟಲೆ ರೂಪಾಯಿನ ಪಟಾಕಿ ಮಾರಾಟ ಆಗ್ತಿತ್ತ್. ಆದ್ರೆ ಈ ವರ್ಷದ ಪರಿಸ್ಥಿತಿ ಮಾತ್ರ ಉಲ್ಟಾ. ಇಲ್ಲಿನ ವ್ಯಾಪಾರಿಗಳಿಗೆ ಹಾಕಿದ ಬಂಡವಾಳನೇ ಬಾತ್ಲೆ. ಅಂಗಡೀಲಿ ಪಟಾಕಿ ಹಂಗಗಂಗೆನೇ ಉಳ್ಕಂಡುಟ್ಟು. `ಏನು ಮಾಡೋದು ಸರ್, ಈ ವರ್ಷ ಪಟಾಕಿ ವ್ಯಾಪಾರ ಫುಲ್ ಡಲ್' ಇದ್ ಕುಶಾಲನಗರದ ವ್ಯಾಪಾರಿಗಳ ಮಾತ್. ಈ ವರ್ಷ ಯಾಕೆ ಹಿಂಗಾತ್? ಮೊದಲ್ನೇ ಕಾರಣ ಟಿವಿಗ. ಹೌದು, ಈ ವರ್ಷ ದೀಪಾವಳಿ ಟೈಂಲಿ ಟಿವಿಗಳ್ಲಿ ಪೂರ ಪಟಾಕಿ ಸಿಡ್ಸಿದ್ರೆ ಹಂಗಾದೆ, ಹಿಂಗಾದೆತಾ ದೊಡ್ಡ ದೊಡ್ಡ ಸ್ಟೋರಿಗಳ್ನ ದಿನಗಟ್ಟಲೇ ತೋರ್ಸಿದ್ದೋ... ಅಲ್ಲಿ ಹೇಳಿದ್ದೆಲ್ಲಾ ನಮ್ಗೆ ಗೊತ್ತಿರೋ ವಿಷ್ಯನೇ. ಆದ್ರೆ ಟೀವೀಲಿ ನೋಡಿಕಾಕನ ಮತ್ತೊಮ್ಮೆ ಯೋಚಿಸೋ ಹಂಗೆ ಆತ್ ಅಷ್ಟೆ. 
ನಿಜ, ಪಟಾಕಿ ಹೊಡೆಯುದ್ರಿಂದ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಬೆಳಕಿನ ಮಾಲಿನ್ಯ ಹಿಂಗೆ ಪರಿಸರದ ಮೇಲೆ ಎಲ್ಲಾ ಥರದ ಮಾಲಿನ್ಯಗ ಆದೆ. ಜೊತೆಗೆ ಸ್ವಲ್ಪ ಎಚ್ಚರ ತಪ್ಪಿರೆ ಕಣ್ಣಿನ ದೃಷ್ಟಿನೂ ಹೋಗಿಬಿಟ್ಟದೆ. ಇದಕ್ಕೆಲ್ಲಾ ಟೀವೀಲಿ ಬಣ್ಣ ಕಟ್ಟಿ ಹೇಳಿಕಾಕನ ಜನಕೂ `ಹೌದೌದು ಇದೂ ನಿಜ' ತಾ ಅನ್ಸಿಟ್ಟು. ಹಂಗಾಗಿ ಜನ ಕೂಡ ಈಸಲ ಪಟಾಕಿಗೆ ದುಡ್ಡು ಹಾಕುದನ ಕಡ್ಮೆ ಮಾಡಿಬಿಟ್ಟೊ. ಅದೇ ದುಡ್ಡ್ನ ತಕ್ಕಂಡ್ಹೋಗಿ ಬೇಕರಿಗೆ ಸುರ್ದೊ... ಈಸಲ ದೀಪಾವಳಿ ಮತ್ತೆ ಹುತ್ತರಿ ಟೈಮ್ಲಿ ಬೇಕರಿಗಳಿಗೆ ಬಂಪರ್ ವ್ಯಾಪಾರ !
ಈಗ ಕಾಲ ಬದಲಾಗ್ಯುಟ್ಟು. ಜನ ಏನೇ ಕೆಲ್ಸ ಮಾಡಿಕೆ ಮುಂಚೆ ಒಂದೆರಡು ಸಲ ಯೋಚನೆ ಮಾಡಿವೆ. ದುಡ್ಡು ಖರ್ಚ್  ಮಾಡಿಕೆ ಕೂಡ ಹಿಂದೆ ಮುಂದೆ ನೋಡಿವೆ. ಇದೆಲ್ಲದರ ಫಲ ಪಟಾಕಿ ವ್ಯಾಪರದ ಮೇಲೆ ಆಗ್ಯಟ್ಟು... ಇದೊಂಥರ ಒಳ್ಳೆ ಬೆಳವಣಿಗೆತಾ ಹೇಳಕ್... ನೀವೇನ್ ಹೇಳ್ಯರಿ?

- `ಸುಮ'
ನೀವೂ ಬರೆಯನಿ..

ಪೊಲಿ ಪೊಲಿಯೇ ದೇವಾ..


18 ಗೋತ್ರಗ


1. ಕಬರ್ ಗೋತ್ರ
2. ನಂದರ ಗೋತ್ರ
3. ಹೆಮನ ಗೋತ್ರ
4. ಬಂಗಾರ ಗೋತ್ರ
5. ಸೆಟ್ಟಿ(ಹಾಲುಗುಂಡರ)ಗೋತ್ರ
6. ಮೌಲ್ಯರ ಗೋತ್ರ
7. ಗೌಡ ಗೋತ್ರ
8. ಸಾಲೆ ಗೋತ್ರ
9. ಗೋಳಿ ಗೋತ್ರ
10. ನಾಯರ್ ಗೋತ್ರ
11. ಬಳಸನ್ನ ಗೋತ್ರ
12. ಕರ್ಬನ್ನ ಗೋತ್ರ
13. ಔದನ್ನ ಗೋತ್ರ
14. ಚಾಲ್ಯರ ಗೋತ್ರ
15. ಕರಂಬೆರ್ ಗೋತ್ರ
16. ಚಿತ್ತೆರ ಗೋತ್ರ
17. ಗುಂಡರ ಗೋತ್ರ
18. ಲಿಂಗಾಯಿತ ಗೋತ್ರ

- ತಳೂರು ಡಿಂಪಿತಾ (ಸಂಗ್ರಹ)
ನೀವೂ ಬರೆಯನಿ..
arebhase@gmail.com

Wednesday, 7 December 2011

ಹುತ್ತರಿ ಹಾಡು...

ಹುಣ್ಣಿಮೆ ಆಕಾಶ
ಹಾಲು ಚೆಲ್ಲಿದಂಗೆ 
ತಿಂಗಳ ಬೆಳಕು
ಮೈ ನಡುಗಿಸ್ವ 
ಮಾಗಿಯ ಚಳಿ 
ಚಿಕ್ಕ ಮಕ್ಕಳ ಕೈಲಿ 
ಸುರು ಸುರು ಬತ್ತಿ
ಸಗಣಿ ರಂಗೋಲಿ ಮೇಲೆ 
ಗಿರಗಿರ ನೆಲಚಕ್ರ
ದೂರದ ದೊಡ್ಡವ್ರ ಮನೇಂದ 
ಕಾಣ್ವ ಹೂಚೆಟ್ಟಿ
ಕಿವಿ ಒಡ್ದು ಹೋಗೋ ಹಂಗೆ 
ಗರ್ನಲ್ ಶಬ್ಧ
ಒಂದು ಹೊಟ್ಟಿ ಮತ್ತೊಂದು ಹೊಡೆಯದ
ಠುಸ್ ಪಟಾಕಿಗಳ ಕಾರ್ಬಾರ್
ಅಕ್ಕಿ ಪಾಯಸ.. 
ಅದ್ರೊಳಗೆ ಕಲ್ಲು, ಭತ್ತ, ದುಡ್ಡು!
ಅಮ್ಮ ಮಾಡ್ದ ರುಚಿ ರುಚಿ ತಿಂಡಿ
ತಂಬಿಟ್ಟು, ತುಪ್ಪ !
ಗದ್ದೆ ಕಡೇಂದ 
ಪೊಲಿ ಪೊಲಿಯೇ ಬಾ...

- `ಸುಮಾ'

ನೀವೂ ಬರೆಯನಿ....
 

ಹುತ್ತರಿ ಶುಭಾಶಯಗಳು..


Tuesday, 6 December 2011

ಸುಬ್ಬಯ್ಯನ ಬಿದಿರುಮುಂಡಲಿ ಬೆಂಕಿ !


        ಮಧ್ಯರಾತ್ರಿ ಸುಮಾರ್ 1 ಗಂಟೆ ಇರೋಕೇನೋ... ಹೋರಗೆ ನಾಯಿಗ ಜೋರಾಗಿ ಬೊಗಳ್ವ ಶಬ್ಧ. ಹಂದಿ ಗೈಪ್ ತಿಂದ್, ನೈಂಟಿ ಹೊಡ್ದ್, ಕಂಬಳಿ ಒಳಗೆ ತೊಡೆಸರೆಗೆ ಕೈ ಹಾಕ್ಕಂಡ್ ಮಲಗ್ಗಿದ್ದ ಪಳಂಗಪ್ಪಂಗೆ ಒಮ್ಮೆಲೇ ಎಚ್ಚರ ಆತ್. ಡಿಸೆಂಬರ್ ತಿಂಗ ಬೇರೆ. ಮೈ ಕೊರೆಯುವಂಗೆ ಚಳಿ. ತೆನೆಬಿಟ್ಟಿರೋ ಭತ್ತ ಹಾಳ್ ಮಾಡಿಕೆ ಆನೆಗ ಏನಾರ್ ಬಂದಿರ್ವೋ ಏನೋತಾ ಪಳಂಗಪ್ಪ ಸಣ್ಣಗೆ ಹೆದ್ರಿಕಣ್ತ್. ಮಲಗಿದ್ದಲ್ಲಿಂದನೇ ನಾಯಿಗಳಿಗೆ `ಚೂ ಚೂ.. ಕರಿಯಾ...' ತಾ ಚೂ ಕೂಡ್ಸಿತ್... ಆಗ ನಾಯಿಗ ಮತ್ತಷ್ಟ್ ಜೋರಾಗಿ ಬೊಗಳಿಕೆ ಶುರು ಮಾಡ್ದೊ. `ನಿಮ್ಮ ಬೆಂಕಿ ಹಾಕಿ ಸುಡಾ. ಒಮ್ಮೆ ಹೊರಗೆ ಹೋಗಿ ನೋಡಿಕೇನ್ ರೋಗ...?' ಇನ್ನೊಂದ್ ಕೋಂಬರೆಲಿ ಮಲಗಿದ್ದ ಪಳಂಗಪ್ಪನ ಹೆಣ್ಣ್ ಪಾರ್ವತಿ, ಹಾಸಿಗೆಂದನೇ ಗುಟುರ್ ಹಾಕಿತ್. ಎರಡ್ ತಿಂಗಳ ಹಿಂದೆ ಕುತ್ತಿಗೆ ವರೆಗೆ ಕುಡ್ದ್ ಬಂದಿದ್ದ ಪಳಂಗಪ್ಪ, ಮುಖದ ಮೇಲೆ ಐದು ಬೆರಳುಗ ಕಾಣುವಂಗೆ ಹೆಣ್ಣ್ಗೆ ಹೊಡ್ದಿತ್ತ್. ಅಲ್ಲಿಂದ ಈಚೆಗೆ ಪಾರ್ವತಿ ಪಳಂಗಪ್ಪನ ಜೊತೆ ಮಲಗದೆ, ಅವ್ಳ ಅತ್ತೆ ಉಪಯೋಗಿಸ್ತಿದ್ದ ಕೋಂಬರೆಲಿ ಮಲಗ್ತಿತ್. ಪಳಂಗಪ್ಪನ ಬೊಬ್ಬೆ, ನಾಯಿಗ ಬೊಗಳುದು ಕೇಳೊಕಾಕನ ಅವ್ಳಿಗೂ ಎಚ್ಚರಿಕೆ ಆಗಿಬಿಟ್ಟಿತ್.
ಸಾಧುಬೀಡಿನ ತುಟಿಗೆ ಸಿಕ್ಕಿಸಿಕಂಡ್, ಅದಕ್ಕೆ ಬೆಂಕಿಗೀರಿ ಪುಸ ಪುಸತ ಎರಡು ಸಲ ಧಂ ಎಳ್ದ್ ಸ್ವಲ್ಪ ಮೈ ಬಿಸಿ ಆದಂಗೆ ಆದ್ಮೇಲೆ, ಪಳಂಗಪ್ಪ ಮನೇಂದ ಹೊರಗೆ ಕಾಲಿಟ್ಟತ್. ಪುನ: ಒಂದ್ಸಲ ನಾಯಿಗಳ್ನ ಚೂ ಕೂಡ್ಸಿತ್. ದೂರಲಿ ಸುಬ್ಬಯ್ಯನ ತೋಟ ಹತ್ರ ಎಂಥದ್ದೋ ಜೋರು ಮಾತು ಕೇಳ್ದಂಗೆ ಆಗ್ತಿತ್... ಇಂದ್ ಸೋಮವಾರ ಯಾರೋ ಸಂತೆಗೆ ಹೋಗಿ ಕುಡ್ಡು ಬಂದ್ ಜಗಳ ಮಾಡ್ತಿರ್ವೇನೋತಾ ಪಳಂಗಪ್ಪ ಯೋಚ್ನೆ ಮಾಡ್ಕಂಡ್ ಮನೆ ಒಳಗೆ ಕಾಲಿಟ್ಟದ್ ಅಷ್ಟೇ... ಅದೇ ಸುಬ್ಬಯ್ಯನ ತೋಟ ಕಡೇಂದ `ಢಂ'... ಗುಂಡು ಹೊಡ್ದ ಶಬ್ಧ ಕೇಳ್ತ್. `ಸುಬ್ಬಯ್ಯನ ಮನೇಲಿ ನಾಳೆ ಗ್ಯಾರಂಟಿ ಕ್ಯಾಮದ ಗೈಪು' ತಾ ಪಳಂಗಪ್ಪ ಬಾಯಿಲಿ ನೀರು ಸುರ್ಸ್ತಾ ಮತ್ತೆ ಕಂಬಳಿ ಒಳಗೆ ಸೇರ್ಕಂಡತ್. ಆದ್ರೆ ಪಾರ್ವತಿ ಸುಮ್ಮನೆ ಮಲಗಿತ್ಲೆ. ಕಿಟಕಿ ಬಾಗ್ಲ್ನ ಮೆಲ್ಲೆ ತೆಗ್ದ್ ನೋಡ್ತ್.... ನಾಯಿಗ ಇನ್ನೂ ಬೊಗಳ್ತನೆ ಇದ್ದೊ...ಮನುಷ್ಯರ ಮಾತು ಮಾತ್ರ ಕೇಳ್ತಿತ್ಲೇ... ಸುಬ್ಬಯ್ಯನ ಬೇಲಿ ಮೂಲೆಲಿ ಇದ್ದ ಬಿದ್ರ್ಮುಂಡ ಧಗಧಗತಾ ಹೊತ್ತಿ ಉರೀತಿತ್ತ್ !
ಬೆಳಗ್ಗೆ 8 ಗಂಟೆ ಆದ್ರೂ ಪಳಂಗಪ್ಪ ಎದ್ದಿತ್ಲೆ.. ಮನೆ ಹೊರಗೆ ಯಾರ್ದೋ ಮಾತ್ ಕೇಳ್ತಿತ್... ಹಂಗೆನೇ ಬಲಬದಿಲಿ ಎದ್ದ್ ದೇವ್ರಿಗೆ ಕೈಮುಗ್ದ್ ಹೊರಗೆ ಬಂದ್ ನೋಡಿರೆ ಕೆಂಚನ ಮಂಙ ತಿಮ್ಮ ಮರಡುವಂಗೆ ಮುಖ ಮಾಡಿಕಂಡ್ ನಿಂತಿತ್ತ್. ನಿನ್ನೆ ಸಂತೆಗೆ ಹೋಗಿದ್ದ ಅವ್ನ ಅಪ್ಪ ವಾಪಸ್ ಮನೆಗೆ ಬಂದಿತ್ಲೆ. ಹಂಗೆ ಅಂವ ಹುಡ್ಕಂಡ್ ಪಳಂಗಪ್ಪನ ಮನೆ ಕಡೆ ಬಂದಿತ್ತ್. ಕೆಂಚನ ಬಗ್ಗೆ ಯಾರಿಗೂ ಒಳ್ಳೆ ಅಭಿಪ್ರಾಯ ಇತ್ಲೆ. ಏಲಕ್ಕಿ ಸೀಸನ್ಲಿ ಏಲಕ್ಕಿ ಕಳ್ಳತನ. ಕಾಫಿ ಒಣಗಿಸಿಕಾಕನ ಕಣಂದನೇ ಕಾಫಿ ಕದ್ಕಂಡ್ ಹೋದು... ಹಿಂಗೆ ಬರೀ ಕಳ್ಳತನಲೇ ಬದಕುತ್ತಿದಂವ ಕೆಂಚ. ಯಾರಾರ ಮನೇಲಿ ಕೋಳಿ ನಾಪತ್ತೆ ಆದ್ರೆ, ಮೊದ್ಲು ಮೊದ್ಲು ಹೋಗಿ ಕೆಂಚನ ಮನೆ ಮಣ್ಣ್ನ ಚೆಟ್ಟಿದ್ ಮುಚ್ಚಳ ತೆಗ್ದ್ ನೋಡ್ತಿದ್ದೊ.. ಅಲ್ಲಿ ಮಾಂಸ ಸಾರ್ ಇಲ್ಲೆತೇಳಿರೆ `ಓ ಕೋಳಿನ ಕುದ್ಕ ಹೊತ್ತಿರೋಕೇನೋ' ತಾ ಕೋಳಿ ಕಳ್ಕಂಡವ್ ಸುಮ್ನೆ ಆಗ್ತಿದ್ದೊ.. ಅಷ್ಟರ ಮಟ್ಟಿಗೆ ಕೆಂಚ ಊರವ್ರ ನಂಬಿಕೆ ಕಳ್ಕಂಡಿತ್ ! ಇಂಥ ಕೆಂಚನೇ ನಿನ್ನೆಂದ ಮನೆಗೆ ಬಾತ್ಲೆತಾ ತಿಮ್ಮ ಹುಡ್ಕಂಡ್ ಬಂದಿತ್.
ಕೆಂಚ ಕಾಣೆಯಾಗಿ ಈಗ ಒಂದ್ ತಿಂಗ. ಸುಬ್ಬಯ್ಯನ ತೋಟಲಿ ಹೊತ್ತಿ ಉರ್ದ ಬಿದರು ಮುಂಡ ಹತ್ರ ಕೆಲ್ಸದವು ಬೇಲಿ ಸರಿ ಮಾಡ್ತಿದ್ದೋ. ಎಂಥದ್ದೋ ಮೂಳೆ ಕಂಡಂಗೆ ಆತ್. ಹತ್ತಿರ ಹೋಗಿ ನೋಡಿರೆ ಅದ್ ಮನುಷ್ಯನ ಮೂಳೆಗ ! ದೂರಲಿ ನಿಂತಿದ್ದ ಸುಬ್ಬಯ್ಯ ಮೀಸೆ ಕೆಳಗೆನೇ ನಗಾಡ್ತಿತ್. ಅದ್ ರಾಕ್ಷಸ ನಗೆ. `ಬಡ್ಡೀ ಮಕ್ಕ... ನನ್ನ ತೋಟಕೆನೇ ಕಾಫೀ ಕದಿಯಕ್ಕೆ ಬಂದವೆ...ಇನ್ನು ಯಾರಾರೂ ಬರ್ಲಿ ನೋಡನಾ...' ಕೆಲ್ಸದವ್ಕೆ ಕೇಳುವಂಗೆ ಸುಬ್ಬಯ್ಯ ಜೋರಾಗಿ ಹೇಳ್ತ್.... ನಾಪತ್ತೆಯಾದ ಕೆಂಚನ ಮನೇಲಿ ಅವ್ನ ಹೆಣ್ ಮರ್ಡುದು ಇನ್ನೂ ನಿಂತೇ ಇತ್ತ್ಲೇ...

- 'ಸುಮಾ'

ನೀವೂ ಬರೆಯನಿ..
arebhase@gmail.com

Monday, 5 December 2011

ಆತ್ಮೀಯ ತಲೆದಿಂಬು !


ಕಳೆದು ಹೋದ ಬಾಲ್ಯ
ಆಗಾಗ ನೆನಪಾದೆ
ಎಷ್ಟ್ ಪೊರ್ಲಿತ್ತ್ ಆ ದಿನಗ !
  ಮಲಗಿದಲ್ಲೇ ಮುದ್ದು ಮಾಡಿ
ನೋವಾಗದಂಗೆ ಒಂದ್ ಪೆಟ್ಟು ಕೊಟ್ಟ್
ಬಾತ್ ರೂಂಗೆ ಕಳ್ಸೋ ಅಮ್ಮ
ಅಲ್ಲೂ ನಿದ್ದೆ ತೂಗಿರೇ...
ಅವಳೇ ಹಲ್ಲುಜ್ಜಿಸಿ, ಸ್ನಾನ ಮಾಡಿಸಿ
ತಲೆ ಒರೆಸಿಕೊಟ್ಟು... ಆಹಾ !
ಮತ್ತೆ ಬಾಕಿಲ್ಲೆ ಆ ಕಾಲ
ಓದಿಕೆ ಕೂತರೆ ಅಲ್ಲಿಗೇ 
ಕಾಫಿ, ತಿಂಡಿ!
ಕೈಹಿಡ್ದ್ ಅಕ್ಷರ ತಿದ್ದಿ ತೀಡಿ
ಪುಸ್ತಕದ ಮೇಲೆ ಪ್ರೀತಿ ಹುಟ್ಟಿಸಿ
ಮಸ್ತಕದಲ್ಲಿ ಉಳಿಯುವಂಗೆ ಮಾಡಿ
ಹೆಚ್ಚು ಮಾರ್ಕ್ಸ್ ಬಂದ್ರೆ 
ನಮ್ಗಿಂತ ಖುಷಿಯಾಗಿ 
ಪೇಡ ತಿನ್ನಿಸ್ತಿದ್ದ ಆ ನೆನಪು...
ಬಿದ್ದ್ ಗಾಯ ಆಗ್ತಿದ್ದದ್ ನಂಗೆ
  ನೋವ್ಲಿ ನರಳ್ತಿದ್ದದ್ ಅಮ್ಮ !
ಜ್ವರಕ್ಕೆ ಮಾತ್ರೆ ತಿಂದ ನಂಗೆ
ಸವಿ ನಿದ್ದೆ....
ಅವಳಿಗೋ ಜಾಗರಣೆ !
ಪಾಪ... ಮಕ್ಕಳಿಗಾಗಿ ಎಷ್ಟೊಂದು
ಕಷ್ಟ !
ಯಾಕೋ ಹಳೇದೆಲ್ಲಾ ನೆನಪಾದೆ
ತಲೆದಿಂಬು ಒದ್ದೆಯಾದೆ...!

`ಸುಮಾ'
ನೀವೂ ಬರೆಯನಿ...
arebhase@gmail.com

Sunday, 4 December 2011

ಕ್ಯಾಥರಿನ್ಗೂ ಅರೆಭಾಷೆ ಗೊತ್ತ್ !


ಅರೆಭಾಷೆ ಮಾತಾಡುವವೆಲ್ಲಾ ಗೌಡುಗಳಾ ? ಭಾಗಮಂಡಲ ಮತ್ತೆ ಸುತ್ತಮುತ್ತಲ ಗ್ರಾಮಗಳಿಗೊಮ್ಮೆ ಹೋಗಿ ನೋಡಿ, ಇಲ್ಲಿ ಎಲ್ಲವೂ ಮಾತಾಡ್ದು ಅರೆಭಾಷೆ. ಸುಳ್ಯ ತಾಲೂಕಿನಲ್ಲೂ ಇಂಥದ್ದೇ ವಾತಾವರಣ ಉಟ್ಟು. ಮೀನು ಮಾರ್ವಾ ಉಸ್ಮಾನ್, ಚಪ್ಪಲಿ ಅಂಗಡಿ ಉಮ್ಮರ್, ಚಿನ್ನದ ಕೆಲ್ಸ ಮಾಡ್ವ ನವೀನ್ ಆಚಾರಿ, ಮಂಗ್ಳೂರಿಂದ ಬಂದಿರ್ವ ಪೊಕ್ಕಳ ಶೆಟ್ಟಿ, ದುಗರ್ಾಭವನದ ಅಶ್ವತ್ಥ್ ರೈ, ಚೇರಂಗಾಲಲಿ ಪೂಜೆ ಮಾಡ್ವ ಭಟ್ಟ, ಐಬಿಲಿ ಇರ್ವ ಡಿಸೋಜ... ಹಿಂಗೆ ನೀವು ಯಾರ್ನ ಬೇಕಾರೂ ಮಾತಾಡ್ಸಿ, ಇವೂ ಗೌಡುಗಳೇನೋ ಅನ್ನೋ ಹಂಗೆ ತುಂಬಾ ಲಾಯ್ಕಲಿ ಅರೆಭಾಷೆ ಮಾತಾಡಿವೆ. ಈ ಸಾಲಿಗೆ ಸೇರಿದೆ ಜರ್ಮನಿಯ ಕ್ಯಾಥರಿನ್.
ಭಾಗಮಂಡಲಕ್ಕೆ ಆಗಾಗ್ಗ ಫಾರೀನ್ನವು ಟೂರ್ ಬರ್ತಿದ್ದವೆ. ಒಂದ್ಸಲ ಹಿಂಗೆ ಜರ್ಮನೀಂದ ಒಂದ್ ಅಮ್ಮ, ಮಗಳ ಜೋಡಿ ಬಂದಿತ್ತ್. ಅಮ್ಮಂಗೆ ಮೂವತ್ತು ವರ್ಷ ಆಗಿದ್ದಿರ್ದೇನೋ... ಮಗ್ಳು ಸುಮಾರ್ ಒಂಬತ್ತೋ 10 ವರ್ಷದ ಗೂಡೆ. ನಾವೂ ಆಗ ಚಡ್ಡಿ ಹಾಕ್ಕಂಡ್ ಮೂರ್ನೇ ಕ್ಲಾಸ್ಗೆ ಹೋಗ್ತಿದ್ದ ಕಾಲ. ವಾಸುಮಾಸ್ಟರ್ನ ಕಾವೇರಿ ಲಾಡ್ಜ್ಲಿ ಆ ಅಮ್ಮ ಮತ್ತೆ ಮಗಳು ಸುಮಾರ್ 3 ತಿಂಗ ಇದ್ದೊ. ನಾವು ಅಲ್ಲೇ ಬಾಣೇಲಿ ಆಟಾಡಿಕಂಡ್ ಇರ್ಕಾಕನ ಆ ಜರ್ಮನ್ ಗೂಡೆ ಕಿಟಕಿ ಕಂಬಿನ ಹಿಡ್ಕಂಡ್ ನಮ್ಮನ್ನೇ ನೋಡ್ತಿತ್... ಅವ್ಳಿಗೂ ನಂ ಜೊತೆ ಆಟ ಆಡಿಕೆ ಮನಸ್ಸು ಆಗಿತ್ತೋ ಏನೋ... ಆದ್ರೆ ಏನು ಮಾಡ್ದು? ಅವ್ಳಿಗೆ ಕನ್ನಡ ಗೊತ್ಲೆ, ನಮ್ಮ ಇಂಗ್ಲಿಷ್   ಬರೀ ಎಬಿಸಿಡಿ, ಸಂಡೆ.. ಮಂಡೇ ಅಷ್ಟೇ...ಹಿಂಗಿರ್ಕನ ಒಂದು ದಿನ ಏನಾತ್ ಗೊತ್ತಾ ?
ನಮ್ಮಲ್ಲೊಬ್ಬ ಧೈರ್ಯ ಮಾಡಿ `ಏ ಗೂಡೆ ಆಟ ಆಡಿಕೆ ಬಂದಿಯನೇ ?' ಅಂತ ಕೇಳ್ತ್. ಆ ಗೂಡೆ ಪಿಳ ಪಿಳ ಕಣ್ಣ್ ಬಿಟ್ಕಂಡ್ ಸಣ್ಣದಾಗಿ ಸ್ಮೈಲ್ ಕೊಡ್ತ್. ಅಷ್ಟ್ರಲಿ ಇನ್ನೊಬ್ಬ ಕೈ ಭಾಷೆಲಿ ಆ್ಯಕ್ಟ್ ಮಾಡಿ ತೋರ್ಸಿ ಅವ್ಳನ್ ಕರೆಯೋಕೆ ಟ್ರೈ ಮಾಡ್ತ್... ಕೊನೆಗೆ ಫಲ ಕೊಟ್ಟದ್ ಈ ಕೈ ಭಾಷೆ... ಅವ್ಳಿಗೆ ಅರ್ಥ ಆಗಿ ಅಮ್ಮನ ಹತ್ರ ಪರ್ಮಿಷನ್ ತಕ್ಕಂಡ್ ನಂ ಜೊತೆ ಆಟ ಆಡಿಕೆ ಬಾತ್... ಆಗ್ಲೂ ನಮ್ಮ ಮಧ್ಯೆ ಇದ್ದದ್ ಬರೀ ಕೈ ಭಾಷೆ... ಒಬ್ಬ ಮೆಲ್ಲೆ `ಯುವರ್ ನೇಮ್ ವಾಟ್' ತಾ ತನ್ನ ಇಂಗ್ಲಿಷ್ ಪಾಂಡಿತ್ಯ ತೋರ್ಸಿತ್.. ಅದ್ಕೆ ಅವ್ಳು `ಕ್ಯಾಥರಿನ್' ತಾ ಹೀಳ್ತ್... ನೋಡಿರೆ ಅವ್ಳಿಗೆ ನಮ್ಮಷ್ಟೂ ಇಂಗ್ಲಿಷ್ ಗೊತ್ತಿತ್ಲೆ. ಏಕೆಂತೇಳಿರೆ ಅವ್ಳ್ ಮಾತಾಡ್ದಿದ್ದದ್ ಜರ್ಮನಿ. ಕ್ಯಾಥರಿನ್ ಜರ್ಮನಿ ಮಿಕ್ಸ್ ಮಾಡಿ ಇಂಗ್ಲಿಷ್ ಮಾತಾಡಿರೆ, ನಾವು ಮುಖ ಮುಖ ನೋಡಿಕೊಳ್ಳವ ಹಂಗೆ ಆಗ್ತಿತ್ತ್... ಇನ್ ನಮ್ಮ ಇಂಗ್ಲಿಷ್ ಕೇಳಿ ಅವ್ಳಿಗೆ ಹುಚ್ಚು ಹಿಡಿಯುದು ಮಾತ್ರ ಬಾಕಿ...
ಹಿಂಗೆ ಶುರುವಾದ ನಂ ಫ್ರೆಂಡ್ಶಿಪ್ ಅವ್ಳಿಗೆ ಅರೆಭಾಷೆ ಕಲ್ಸೋ ವರೆಗೆ ಬಾತ್. ಕ್ಯಾಥರಿನ್ಗೆ ನಾವು ಕೈ ಭಾಷೆಲೇ ಅರೆಭಾಷೆ ಮಾತಾಡಿಕೆ ಕಲ್ಸಿದೊ... ಕೈನ ಬಾಯಿ ಹತ್ರ ತಂದ್ `ಊಟ ಆತಾ' ಕ್ರಿಕೆಟ್ ಬ್ಯಾಟ್ ಬೀಸುವಂಗೆ ಮಾಡಿ `ಆಟ ಆಡಿಕೆ ಬಂದಿಯಾ' ಹಿಂಗೆ ಕ್ಯಾಥರಿನಾಗೆ ಒಂದೊಂದೇ ಶಬ್ಧ ಕಲ್ಸಿದೋ... ಮೂರು ತಿಂಗ ಆಕಾಕನ ಅವ್ಳೂ ತಕ್ಕ ಮಟ್ಟಿಗೆ ಅರೆಭಾಷೆ ಮಾತಾಡಿಕೆ ಕಲ್ತ್ಬಿಟ್ಟಿತ್ ! ಆದರೆ ಅವ್ಳ ಉಚ್ಛಾರಣೆಗೆ ಕೇಳಿರೆ ಮಾತ್ರ ನಾವು ನಗಾಡಿ ನಗಾಡಿ ಸುಸ್ತಾಗಿ ಬಿಡ್ತಿದ್ದೋ.. ಏನು ಮಾಡಿರೂ ಕ್ಯಾಥರಿನ್ ಬಾಯ್ಲಿ `ಳ' ಹೇಳಿಕೆ ಆಕ್ತಿತ್ಲೆ.. `ಳ' ಕ್ಕೆ ಅವ್ಳು `ಲ' ತನೇ ಹೇಳ್ತಿತ್... ಹಂಗೆ `ಹೇಳು' ತೇಳಿಕೆ ಅವ್ಳು `ಹೇಲು' ತಾ ಹೇಳ್ತಿತ್. ಅದ್ರ ಅರ್ಥ ಹೇಳ್ದ ಮೇಲೆ ಅವ್ಳೂ ನಂಜೊತೆ ಸೇರ್ಕಂಡ್ ಜೋರಾಗಿ ನಗಾಡ್ತಿತ್... ಹಿಂಗೆ ಅರೆಭಾಷೆ ಕಲ್ತ ಕ್ಯಾಥರಿನ್ ಒಂದು ದಿನ ಜರ್ಮನ್ಗೆ ವಾಪಸ್ ಹೋಗಿಬಿಟ್ಟಿತ್. 
  ಕಳ್ದ ವರ್ಷ ಫೇಸ್ಬುಕ್ಲಿ `ಭಾಗಮಂಡಲ' ತಾ ಕೊಟ್ಟು ಹುಡುಕಿಕಾಕನ ಅಲ್ಲಿ ಕ್ಯಾಥರಿನ್ ಹೆಸ್ರ್ ! ನಂಗೇ ಕ್ಯಾಥರಿನ್ ಮರ್ತ್ ಹೋಗಿಬಿಟ್ಟಿತ್. ಹೋಮ್ ಪೇಜ್ ನೋಡಿಕಾಕನ ಅಲ್ಲೊಂದು ಕಡೆ ಭಾಗಮಂಡಲಲಿ `ಅರೆಭಾಷೆ' ಕಲ್ತದ್ನ ಹೇಳ್ಕಂಡಿತ್ತ್... ಆಗ ನಂಗೆ ಹಳೇದೆಲ್ಲಾ ಯೋಚ್ನೆ ಆತ್... ಫ್ರೆಂಡ್ರಿಕ್ವೆಸ್ಟ್ ಕಳ್ಸಿದ್ದೆ.  ಆನ್ಲೈನ್ಲಿ ಇದ್ದ ಅವ್ಳು ಕೂಡ್ಲೇ ರೆಸ್ಪಾನ್ಸ್ ಮಾಡ್ತ್... ಚಾಟಿಂಗ್ಲಿ ಅವ್ಳು ಮೊದ್ಲು ಕೇಳ್ದ್ `ಹೆಂಗೊಳ ಮಾರಾಯ?' ಜರ್ಮನಿಗೆ ಹೋದ್ರೂ ಅವ್ಳು ಅರೆಭಾಷೆ ಮತರ್ಿತ್ಲೆ... ಅವ್ಳಿಗೆ ಆಗ್ಲೇ ಮೂರು ಮದುವೆ ಆಗಿ, ಮೂರನೆಯವಂಗೂ ಡೈವೋಸರ್್ ಕೊಡೋ ಯೋಚ್ನೇಲಿ ಇತ್ತ್... `ಹಿಂಗಾದ್ರೆ ಹೆಂಗೆ ಮಾರಾಯ್ತಿ ? ಲೈಫ್ಲಿ ಇನ್ನು ಎಷ್ಟು ಮದುವೆ ಆಕುತೊಳಾ' ತಾ ನಾ ಕೇಳ್ದೆ. `ಅದೆಲ್ಲಾ ಇಲ್ಲಿ ಕಾಮನ್ ಒಬ್ಬ ಇಷ್ಟ ಆತ್ಲೆತೇಲಿಳೆ ಇನ್ನೊಬ್ಬ...' ಅವ್ಳ ಉತ್ತರ. ಪುಣ್ಯಾತ್ಮಗಿತ್ತಿ ಕ್ಯಾಥರಿನ್ ಗಂಡಂದಿರ್ನ ಚೇಂಜ್ ಮಾಡಿ ಅವ್ರನ್ನ ಮರ್ತಿದ್ದ್ರೂ ಅರೆಭಾಷೆ ಮರ್ತಿತ್ಲೆ... 
ಈಗ್ಲೂ ಒಮ್ಮೊಮ್ಮೆ ಕ್ಯಾಥರಿನ್ ಚಾಟಿಂಗ್ಗೆ ಬಂದದೆ. ಮೊನ್ನೆ ಮೊನ್ನೆ ಅವ್ಲಿಗೆ ನಾಲ್ಕನೆ ಮದುವೆ ಆಗ್ಯಟ್ಟು.. ಚಾಟ್ ಮಾಡಿಕಾಕನ ಹಳೆ ನೆನಪುಗ `ಹೇಳು' `ಹೇಲು' ಎಲ್ಲಾ ನೆನಪಾದೆ... ನಾವು ನಾವೇ ನಗಾಡಿಕೊಂಡವೆ... ಮಾತಿಗೆ ಸಿಕ್ಕಿದಗೆಲ್ಲಾ ಅವ್ಳಿಗೆ, `ನಾಲ್ಕನೇ ಗಂಡನನ್ನಾದ್ರೂ ಪರ್ಮನೆಂಟ್ ಇಟ್ಕ ಮಾರಾಯಿತಿ' ತಾ ಹೇಳ್ತಿದ್ದನೆ.... ನೋಡೋಕು, ಜರ್ಮನಿಂದ ಭಾಗಮಂಡಲಕ್ಕೆ ಬಂದ್ ನಮ್ಮಿಂದ ಅರೆಭಾಷೆ ಕಲ್ತ ಕ್ಯಾಥರಿನ್ ಮುಂದೆ ಏನು ಮಾಡ್ದೆತಾ... 

- 'ಸುಮಾ'
ನೀವೂ ಬರೆಯನಿ...
arebhase@gmail.com

Saturday, 3 December 2011

ಮಧುರ ಕ್ಷಣ !


ಸುಮಿ, ನಿನ್ನ ನೋಡ್ದ ಕ್ಷಣ
ನನ್ನ ನಾ ಮರೆತಿದ್ದೆನೇ ಅಂದ್
ನಿನ್ನ ಕಣ್ಣುಗಳಲ್ಲಿ 
ಹಾಲು-ಬೆಳದಿಂಗಳ್ನ 
ಕಂಡಿದ್ದೆ ನಾ 
ನಿನ್ನ ಪರಿಚಯ ಇತ್ಲೆ 
ಮಾತಾಡ್ಸುದು ಹೆಂಗೆ ?
ಸುಮ್ಮನೇ ಒಮ್ಮೆ ನಗಾಡಿ
ನೀ ನಗದೇ ಹೋದರೆ
ನಂಗೇ ನಾ ಮಾಡ್ದ ಅವಮಾನ 
ತಲೆ ತುಂಬಾ ಯೊಚನೆಗೆ
ಬುಗುರಿ ಸುತ್ತಿದಂಗೆ...
ಆದ್ರೂ ನನ್ನ ಧೈರ್ಯ
ನೀ ಮಾತಾಡ್ಸ್ ತಾ 
ಹೇಳ್ತನೇ ಇತ್ತ್...
ಹೆಂಗೋ ನಿನ್ನ ಹತ್ತಿರ ಬಂದ್
ನಗೆ ಚೆಲ್ಲಿಕಾಕನ
ನೀನೇ ಮಾತಾಡ್ಸಿದ 
ಕ್ಷೇಮ ಸಮಾಚಾರ ಕೇಳ್ದ
ಎಷ್ಟೊಂದು ಅತ್ಮೀಯತೆ
ಹೃದಯ ಹಿಗ್ಗಿಸಿದ ಮಾತು
ಪ್ರೀತಿ ಭಾವದ ಚಿಲುಮೆ
ಆಗಿತ್ತು ನಂಗೇ ಅ ಕ್ಷಣ
ಸುಮಧುರ !

- ತಳೂರು ಡಿಂಪಿತಾ

ನೀವೂ ಬರೆಯನಿ...
arebhase@gmail.com


ವಿಪರ್ಯಾಸ !


ನಾ ಅಂದು ಹಾಕಿದ್ದೆ
ನಾಯಿಗೆ ಒಂದು 
ತುಂಡು ರೊಟ್ಟಿ
ಅದಕ್ಕೆ ಎಂಥ ನಿಯತ್ತು !
ನಾ ಹೆತ್ತು ಹೊತ್ತು
ಕಣ್ಣಲ್ಲಿ ಕಣ್ಣನಿಟ್ಟು
ಪ್ರಾಣನ ಒತ್ತೆಯಿಟ್ಟು
ಸಾಂಕಿದ ನನ್ನ 
ಮಕ್ಕಳಿಗೇ ಇಲ್ಲೆ
ಆ ನಿಯತ್ತು !
ಕೇಳುವೇ ಇಂದ್
ನೀ ಮಾಡ್ದ 
ಆಸ್ತಿ ಎಷ್ಟುಟ್ಟು ! 

- ತಳೂರು ಡಿಂಪಿತಾ

ನೀವೂ ಬರೆಯನಿ...
arebhase@gmail.com

ಸಾವಿರ ಸಂಭ್ರಮ !


`ಅರೆಭಾಷೆ' ಬ್ಲಾಗ್ನ `ಹಿಟ್' ಸಂಖ್ಯೆ ಇಂದ್ ಸಾವಿರ ದಾಟ್ಯುಟ್ಟು. ಈ ಬ್ಲಾಗ್ ಶುರುವಾಗಿ ಬರೀ 40 ದಿನ ಆದ್ ಅಷ್ಟೇ... ಆಗ್ಲೇ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ `ನಮ್ಮವರಿಂದ' ಬಂದುಟ್ಟು. ಒಂದು ಪುಟ್ಟ ಭಾಷೆಯ ಬ್ಲಾಗ್ಗೆ ಈ ರೀತಿಯ ಸ್ಪಂದನೆ ನಿಜಕ್ಕೂ ಖುಷಿ ಕೊಡೋ ವಿಷ್ಯ. ಹಂಗಾಗಿ ನಮ್ಮ ಕಡೆಂದ ಇನ್ನೂ ಒಳ್ಳೊಳ್ಳೆ ಬರಹಗ ಬ್ಲಾಗ್ಲಿ ಬಂದದೆತಾ ಭರವಸೆ ಕೊಟ್ಟವೆ. ಒಂದು ಬೇಸರದ ಸಂಗತಿ ಅಂದ್ರೆ ನಮ್ಮವು ಬರೆಯಕ್ಕೆ ಮನಸ್ಸು ಮಾಡ್ದಿರ್ದು... ತುಂಬಾ ಜನ ಬ್ಲಾಗ್ಗೆ ಭೇಟಿ ಕೊಟ್ಟಿರವು ಅವ್ಕೂ ಅರೆಭಾಷೇಲಿ ಬರೆಯೋ ಆಸಕ್ತಿ ಇರ್ದುನ ಹೇಳಿಕೊಂಡೊಳೊ... ಅಂಥವು ಬೇಗ ಬರೆಯಕ್ಕೆ ಶುರು ಮಾಡ್ಲಿತೇಳುದೇ ನಮ್ಮ ಆಸೆ. ನಿಮ್ಮ ಅಭಿಮಾನ ಹಿಂಗೆನೇ ಮುಂದುವರೀಲಿ...
- 'ಅರೆಭಾಷೆ '
arebhase@gmail.com