Tuesday, 10 January 2012

ಅಪರೇಷನ್ ಕೋಳಿ+ಮೊಟ್ಟೆ

ಆಗ ಎಲ್ಲವ್ಕೆ  ಗದ್ದೆ ಕೆಲಸ ಜೋರು..ಅವ್ವ ,ತಾತ ಗದ್ದೆ ಗೆ ಹೋಕನ ಅಮ್ಮ ಮತ್ತೆ ದೊಡ್ಡಮಾಮಂಗೆ ಒಂದು ಕೆಲಸ ವಹಿಸಿ ಹೋಗಿದ್ದೋ ಗಡ ..ಆ ಕೆಲಸ ಎಂತ  ಗೊತ್ತ..ಕಾಪುಲಿ ಕೋಳಿ ಮೊಟ್ಟೆ ಹಾಕಿರೆ ತೆಗ್ದ್  ಮಾಡ್ಗುದು ! ಸರಿ ಅವ್ವ ತಾತ ಮತ್ತೆ ದೊಡ್ದಮನೆಲಿ ಇದ್ದ ಎಲ್ಲವೂ  ಗದ್ದೆ ಕೆಲಸಕ್ಕೆ  ಹೋಗಿದ್ದೋ..ನನ್ನ ಅಮ್ಮ ಮತ್ತೆ ದೊಡ್ದಮಾಮಂಗೆ  ಕೋಳಿ ಮೊಟ್ಟೆ ಹಾಕಿತಾ  ಇಲ್ಲೇನಾ ತ ಆಗಾಗ ಹೋಗಿ ನೋಡ್ ದೇ ಕೆಲಸ ..ಹನ್ನೊಂದು ಗಂಟೆ ಆದರೂ  ಕೋಳಿ ಮೊಟ್ಟೆ
ಹಾಕಿತ್ಲೇ..!!(ಇವು ಹಂಗೆ ಹೋಗಿ ನೋಡ್ರೆ ಕೋಳಿಗೆ ನಾಚಿಕೆ ಆಗದೆ ಇದ್ದದೆನಾ ..??ಹ ಹ) ಅವ್ವ ನೋಡ್ರೆ ಹಂಗೆ ಹೇಳಿ ಹೊಗೊಳೋ...ಈ ಕೋಳಿ ನೋಡ್ರೆ ಮೊಟ್ಟೆ ಹಾಕಿತ್ಲೇ...ಎಲ್ಲವೂ ಊಟಕ್ಕೆ  ಬರುವ ಹೊತ್ತಾತ್ ..ಅಷ್ಟ್  ಹೊತ್ತಿಗೆ ನಮ್ಮ ಬ್ರಿಲ್ಲಿಯಂಟ್ ದೊಡ್ದಮಾಮಂಗೆ ಒಂದ್ ಐಡಿಯಾ   ಬಾತ್..ಮಾಮ  ಅಮ್ಮಂಗೆ ಹೇಳ್ದೋ ಗಡ ನಿನ್ ಕೋಳಿನ ಹಿಡಕ ನಾನ್ ಮೊಟ್ಟೆ
ಎಲ್ಡನೆ    ..(ಸಣ್ಣ ಮಕ್ಕಳ ಕಿತಾಪತಿ ನೋಡಿ!!!!!!!) 
ಸರಿ, ಅಪರೇಷನ್  ಕೋಳಿ ಶುರು ಆತ್...ಮನೆಗೆ ಅವ್ವ ಬಂದ್  ನೋಡ್ಕಾಕನ ಮೊಟ್ಟೆ ಒಂದ್ ಕಡೆ ಇತ್ತ್  , ಕೋಳಿ ಇನ್ನೊಂದು ಕಡೆ   ಸತ್ತ ಬಿದ್ದಿತ್ ಗಡ!!! ಯಾಕೆತೆಳಿರೆ ಮಾಮ ಎಳೆದ  ರಭಸಕ್ಕೆ  ಮೊಟ್ಟೆ ಒಟ್ಟಿಗೆ ಅದ್ರ ಮೊಟ್ಟೆ ಚೀಲನೂ  ಹೊರಗೆ ಬಂದಿತ್.... ಅಮ್ಮ ,ಮಾಮ  ನಡ್ದ  ಕಥೆ ಹೇಳ್ದೋ ... ಮನೇಲಿ ಎಲ್ಲವ್ಕೂ ಜೋರು ನಗೆ...ಬೈಗುಳಂದ ಬಚಾವ್ !!! ಹ ಹ ಹ ...ಅಂತೂ ಕೊನೆಗೆ ಸಾಯಂಕಾಲಕ್ಕೆ ಕೋಳಿ ಸಾರ್ ರೆಡಿ ಆಗಿತ್...!!!!!!!!!!ಆದರೆ ಪಾಪ ಕೋಳಿ???
ಇದ್ ನನ್ನ ಅಮ್ಮ ನ ಬಾಲ್ಯದ  ನೆನಪು....  ಮಾಮನ  ಮನೆಗೆ ಹೋದರೆ  ಈಗಲೂ ಈ ಘಟನೆ ಗ್ಯಾನ  ಮಾಡಿ ಎಲ್ಲವು ನಗಾಡುವೆ..!!
ಎಷ್ಟೇ  ದೊಡ್ದವಾದರೂ ನಮ್ಮ ನಮ್ಮ ಬಾಲ್ಯದ ನೆನಪುಗ ಮಾಸಿ ಹೋಕೆ  ಹೆಂಗೆ  ಸಾಧ್ಯ ? ಏನ್ ಹೇಳ್ರೆ ಸ್ನೇಹಿತರೆ ???


- ಪವಿ ನೆರಿಯನ(ಭಾವನೆಗಳ ಪಲ್ಲವಿ)  
arebhase@gmail.com

ನೆನಪಿನಂಗಳದಿ...

ನೆನಪುಗ ನೆನಪಾಗಿ ..
ಜಾರಿತ್ ಕಣ್ಣ ಹನಿ...
ಮಳೆಯಲ್ಲಿ ಜತೆ ಯಾಗಿ ..
ಇಳೆ ಸೇರಿತ್...
ನೆರೆಯಲ್ಲಿ ಮರೆಯಾಗಿ ..
ನೆನಪುಗಳ ಮರುಕಳಿಸಿ ..
ಸಾಗಿತ್ ನಿಲುಕದಸ್ಟ್ ಬಲು ದೂರ
ಮತ್ತೆ ನನ್ನಿಂದ  ದೂರಾಗಿ..
ಭಾವನೆಗಳ ಪಲ್ಲವಿ ಗೆ
ಮರೀಚಿಕೆಯಾಗಿ...
ನಿನಗಾಗಿ...
ಪವಿ -ಭಾವನೆಗಳ ಪಲ್ಲವಿ..



- ಪವಿತ್ರ ನರಿಯನ,
ಮಂಗಳೂರು  

Monday, 9 January 2012

ಬೈನೆ ಸೇಂದಿ ನೆನಪು...


`ನಂದಿ ಮರ ಹತ್ರ ಉಟ್ಟಲ್ಲಾ, ಅಲ್ಲಿರ್ವ ಬೈನೆದ್ ಸೇಂದಿ ತುಂಬಾ ಸಿಹಿ...'  ಸೇಂದಿನ ಕ್ಯಾನ್ಂದ ಚಿಪ್ಪಿಗೆ ಬಗ್ಗಿಸಿಕೊಡ್ತಾ ಐತಪಜ್ಜ ಹೇಳ್ತಿದ್ರೆ, ನಾವು ಚಪ್ಪರಿಸಿಕಂಡ್ ಕುಡೀತ್ತಿದ್ದೊ.... ಬೈನೆ ಮರನ ಐತಪಜ್ಜ ಒಂದ್ಸಲ ಕೆಳಗೆಂದ ಮೇಲಿನವರೆಗೆ ನೋಡಿರೆ ಸಾಕ್, ಆ ಮರಕ್ಕೆ ಮಡಿಕೆ ಕಟ್ಟಿರೆ ಎಷ್ಟು ಸೇಂದಿ ಸಿಕ್ಕುದು, ಅದರ ರುಚಿ ಹೆಂಗೆ ಇದ್ದದೆ, ಅದ್ರಲ್ಲಿ ಎಷ್ಟು ಟೈಂ ವರೆಗೆ ಸೇಂದಿ ತೆಗೆಯಕ್... ಹಿಂಗೆ ಪೂತರ್ಿ ಜಾತಕನ ತೆಗ್ದ್ ಇಟ್ಟ್ಬಿಟ್ಟದೆ. ಐತಪಜ್ಜತೇಳರಿ ಒಂಥರ `ಸೇಂದಿ ತಜ್ಞ' ಇದ್ದಂಗೆ. 
ಬೆಳಗ್ಗೆ ನಾವು ಏಳಿಕೆ ಮೊದ್ಲು ಅವು ಕತ್ತಿ ತಕ್ಕಂಡ್ ಮಡಿಕೆ ಕಟ್ಟಿದಲ್ಲಿಗೆ ಹೋಗಿಬಿಡ್ತಿದ್ದೊ. ಅಲ್ಲಿ ಮರಕ್ಕೆ ಕಟ್ಟಿರ್ವ ಏಣಿ ಹತ್ತಿ ಕೊಂಬುಗೆ `ಪಟ...ಪಟ..' ತಾ ಬಡಿಯಕಾಕನ ನಮ್ಗೆ ಎಚ್ಚರಿಕೆ ಆಗಿಬಿಡ್ತಿತ್ತ್. ಮುಖ ತೊಳೆಯದೆ ಬೈನೆ ಮರದ ಬುಡಕ್ಕೆ ಓಡಿ ಬಿಡ್ತಿದ್ದೊ. ಸೇಂದಿ ತೆಗ್ದ ಕೂಡ್ಲೇ ಕುಡ್ದರೆ ಸಿಹಿ ಜಾಸ್ತಿ ಇದ್ದದೆ... ನಮ್ಗೆಲ್ಲಾ ಒಂದೊಂದು ಚಿಪ್ಪಿ ಸೇಂದಿ ಕೊಟ್ಟಮೇಲೆನೇ ಐತಪಜ್ಜ ಅಲ್ಲಿಂದ ತಕ್ಕಂಡ್ ಮಾರಿಕೆ ಹೋಗ್ತಿದ್ದದ್.
ಐತಪಜ್ಜನ ಸಹವಾಸ ಮಾಡಿ, ನಮ್ಗೂ ಬೈನೆ ಮರಗಳ ಬಗ್ಗೆ ಸ್ವಲ್ಪ ಸ್ವಲ್ಪ ಗೊತ್ತಾಗಿತ್ತ್. ಯಾವ ಯಾವ ಮರದ ಸೇಂದಿ ರುಚಿ ಹೆಂಗೆ ಇದ್ದದೆತೇ ಕುದ್ದಲ್ಲಿಂದನೇ ಹೇಳಿಬಿಡ್ತಿದ್ದೊ. ಐತಪ್ಪಜ್ಜ ನಂದಿ ಮರಹತ್ರ ಸೇಂದಿ ಇಳ್ಸಿದ್ರೆ, ಅಲ್ಲಿ ನಾವು ಹಾಜರ್ ಇರ್ತಿದ್ದೊ. ಯಾಕೆತೇಳಿರೆ ಅದ್ ಸಿಹಿ ಸಿಹಿ ಸೇಂದಿ. ಇನ್ನ್ ಮಕ್ಕಿ ತೋಟದಲ್ಲಿರ್ವ ಮರದ್ ತುಂಬಾ ಹುಳಿ. ಹೊಸ ತೋಟಲಿರ್ವ ಮರದ್ ಸೇಂದಿ ಕುಡ್ದ ಕೂಡ್ಲೆ ತಲೆ ಸುತ್ತಿಕೆ ಶುರುವಾದೆ. ಹಿಂಗೆ ಒಂದೊಂದು ಬೈನೆ ಮರದ ಕಥೆನೂ ಕುದ್ದಲಿಂದ ಹೇಳಿಬಿಡ್ತಿದ್ದೊ. ಎಳೆ ಬೈನೆ ಗಿಡದ ಗಡ್ಡ ತಿಂಬಕೆ ಕಲ್ಸಿಕೊಟ್ಟದ್, ಈ ಐತಪಜ್ಜ. 
ಹೋದ ವರ್ಷ ಮಾವನ ಮಗ್ಳ ಮದ್ವೆಗೆ ಹೋಗಿಕರ್ಾಕನ, ಅದೇ `ಸೇಂದಿ ತಜ್ಞ' ಐತಪಜ್ಜ ಸಿಕ್ತ್. `ಅಜ್ಜಾ ಈಗ ಯಾವ ಮರದ ಸೇಂದಿ ತುಂಬಾ ಸಿಹಿ ಉಟ್ಟು' ತಾ ಅವ್ರನ್ನ ಕೇಳ್ದೆ. ಐತಪಜ್ಜ ಈಗ ನಿಜವಾಗ್ಲೂ ಅಜ್ಜ ಆಗಿಬಿಟ್ಟಿತ್ತ್. ಅವ್ರನ್ನ ನೋಡಿರೆ, ಮರ ಹತ್ತುವಂಗೆ ಕಾಣ್ತಿತ್ಲೆ. `ಈಗೆಂಥ ಮಂಞ, ಯಾರೂ ಮಡಿಕೆ ಕಟ್ಟುಲೆ...ಹೊಳೆ ಕರೆ ಮರಲಿ ತುಂಬಾ ಸೇಂದಿ ಇದ್ದಂಗೆ ಕಂಡದೆ. ನಂಗೂ ಈಗ ಮರಕ್ಕೆ ಹತ್ತಿಕೆ ಆದುಲೆ....' ತಾ ಐತಪ್ಪಜ್ಜ ನಡ್ಗಿಕಂಡ್, ನಡ್ಗಿಕಂಡ್ ಹೇಳ್ದೊ. ಈಗ ಬೈನೆ ಮರಕ್ಕೆ ಮಡಿಕೆ ಕಟ್ಟಿರೆ, `ಸ್ಕ್ವಾಡ್' ನವ್ರ ಕಾಟನೂ ಉಟ್ಟುತಾ ಐತಪ್ಪಜ್ಜನ ಮಂಞ ಹೇಳ್ತ್.
ಬೈನೆ ಸೇಂದಿದ್ ರುಚಿ ಯೋಚ್ನೆ ಮಾಡಿ, ಈಗ ಸೇಂದಿ ಸಿಕ್ಕರೆ ಎಷ್ಟು ಲಾಯ್ಕ ಇತ್ತ್ತಾ ಅಂದ್ಕಂಡೆ. ಕೊನೆಗೆ ಅಲ್ಲೇ ಸೀನಪ್ಪನ ಮನೆಗೆ ಹೋಗಿ ನೀರಾ ಕುಡ್ದ್ ನಮ್ಮ ಆಸೆ ತೀರಿಸಿಕೊಂಡೋ... ಆದ್ರೂ ಬೈನೆ ಸೇಂದಿದ್ ರುಚಿ ನೀರಾಲಿ ಸಿಕ್ಕುಲ್ಲೆ... 
arebhase@gmail.com

ಮೂಕ ಪಕ್ಷಿಗಳ ಶಾಪ !




ಬರೆ ಸೈಡ್ಲಿ ನಾವು ಮಾತಾಡಿಕ್ಕಂಡ್ ಹೋಗ್ತಿದ್ದೊ. ಅಷ್ಟೊತ್ತಿಗೆ ಗಾಂಧಿ ಗುಲಾಬಿ ಬಲ್ಲೆಂದ ಒಂದ್ ಕೊಟ್ಟುಮುರ್ಚಾ  ಹಕ್ಕಿ ಪರ್ರ್...ತಾ ಹಾರಿ ಹೋತು. ಇದ್ನ ನೋಡ್ದ ರಕ್ಕಿ ಹೈದ, ಮೆಲ್ಲನೆ ಆ ಬಲ್ಲೆ ಒಳಗೆ ಮೈ ಕೈ ಗಾಯ ಮಾಡ್ಕಂಡ್ ನುಗ್ಗಿತ್... ಅಲ್ಲಿಂದನೇ `ಏ ಬಾರ ಇಲ್ಲಿ... ಕೊಟ್ಟುಮುರ್ಚಾ  ಗೂಡು ನೋಡ್' ತಾ ಬೊಬ್ಬೆ ಹಾಕ್ತ್. ನಾನೂ ಕಷ್ಟಪಟ್ಟ್ ಆ ಬಲ್ಲೆ ಒಳಗೆ ನುಗ್ಗಿರೆ, ಅಲ್ಲೊಂದು ಪುಟ್ಟ ಪಕ್ಷಿಗೂಡು !
ಬೈನೆ ನಾರ್, ಒಣಗಿದ ಎಲೆಗ, ಗರಿಕೆ ಹುಲ್ಲು ಎಲ್ಲಾ ಸೇರ್ಸಿ, ಕೊಟ್ಟುಮುರ್ಚಾ ಹಕ್ಕಿ ತುಂಬಾ ಲಾಯ್ಕಲಿ ಗೂಡ್ ಕಟ್ಟಿತ್ತ್. ಗೂಡೊಳಗೆ ಮೆತ್ತನೆ ಪುಕ್ಕ, ಅದ್ರ ಮೇಲೆ ಬಿಳಿ ಮತ್ತೆ ಕೆಂಪು ಚುಕ್ಕಿಗಳಿರ್ವ ಮೂರು ಸಣ್ಣ ಮೊಟ್ಟೆಗ. ಮೊಟ್ಟೆ ಮುಟ್ಟಿಕೇತ ನಾನ್ ಗೂಡ್ ಹತ್ರ ಕೈ ಹಾಕಿಕಾಕನ ರಕ್ಕಿ ಬೊಬ್ಬೆ ಹೊಡ್ತ್, `ಮುಟ್ಬೇಡ... ಮುಟ್ಬೇಡ... ಮೊಟ್ಟೆನ ಮನುಷ್ಯ ಮುಟ್ಟಿರೆ, ಹಕ್ಕಿಗ ಮತ್ತೆ ಬಾಲೆ...' ಕರೆಂಟ್ ಶಾಕ್ ಹೊಡ್ದಂಗೆ ನಾ ಕೈನ ವಾಪಸ್ ತಕ್ಕಂಡೆ. ಈ ರಕ್ಕಿ ಕಣ್ಣಿಗೆ ಒಂದ್ಸಲ ಪಕ್ಷಿ ಗೂಡು ಬಿದ್ರೆ, ಅದ್ಕೆ ಉಳಿಗಾಲ ಇಲ್ಲೆತಾ ನಂಗೆ ಗೊತ್ತಿತ್ತ್.
ಕಾಡ್ ಮಧ್ಯೆ ಮನೆ ಇರ್ವಲ್ಲಿ ಸಾಯಂಕಾಲ ಆರೂವರೆಗೆಲ್ಲಾ ಕತ್ತಲೆ ಆಗಿಬಿಟ್ಟದೆ. ಅಷ್ಟೊತ್ತಿಗೆ ರಕ್ಕಿ ಹೆಡ್ಲೈಟ್ ಕಟ್ಟಿಕಂಡ್ ರೆಡಿಯಾತ್. ಕೈಲಿ ಒಂದು ಕತ್ತಿ. ಜೊತೆಗೆ ದಾಸ ನಾಯಿ. ಅಂವ ಮುಂದೆ ಮುಂದೆ...ನಂಗೆ ಬರ್ಬೆಡತಾ ಹೇಳಿರೂ ನಾ ಅವನ ಹಿಂದೆ ಹೆಜ್ಜೆ ಹಾಕಿದೆ. ಆ ಕೊಟ್ಟುಮುರ್ಚಾ  ಗೂಡು ಇದ್ದಲ್ಲಿಗೆ ನಿಧಾನಕ್ಕೆ ನಾವು ಹೋದೊ. ಒಂದು ಚೂರು ಶಬ್ದ ಆಗದಂಗೆ ನಮ್ಮ ಹೆಜ್ಜೆ...ದಾಸ ನಾಯಿಗೂ ಇದೆಲ್ಲಾ ಅಭ್ಯಾಸ ಇತ್ತ್. ಅದೂ ಬಾಲ ಅಲ್ಲಾಡಿಸಿಕಂಡ್ ನಮ್ಮ ಹಿಂದೆ ಸದ್ದಾಗದಂಗೆ ಬಾತ್.
ಪಕ್ಷಿ ಹಿಡಿಯಕ್ಕೆ ರಕ್ಕಿ ಎಕ್ಸ್ಪರ್ಟ್. ಅಂವ ಕೈ ಹಾಕಿತ್ತೇಳಿರೆ, ಆ ಹಕ್ಕಿದ್ ಆಯುಷ್ಯ ಮುಗ್ದುಟ್ಟುತನೇ ಅರ್ಥ. ಇಲ್ಲೂ ಹಂಗೆ ಆತ್. ಹೆಡ್ಲೈಟ್ ಬೆಳಕ್ನ ಪಿಳ ಪಿಳತಾ ನೋಡ್ತಿದ್ದ ಎರಡು ಜೊತೆ ಕಣ್ಣ್ಗಳ್ನ ಸೇರ್ಸಿ ಅಂವ ಹಿಡ್ದ್ಬಿಟ್ಟತ್. ಹೌದು, ಗೂಡ್ಲಿ ಕುದ್ದಿದ್ದ ಗಂಡ್ ಮತ್ತೆ ಹೆಣ್ಣ್  ಕೊಟ್ಟುಮುರ್ಚಾ  ರಕ್ಕಿ ಕೈ ಒಳಗೆ ಇದ್ದೊ. ಪಕ್ಷಿಗಳ್ನ ಹಂಗೆ ಹಿಡ್ಕಂಡೇ ಅಂವ ನಂಗೆ `ಈಗ ಮೊಟ್ಟೆ ತಕಾ...' ತಾ ಹೇಳ್ತ್. ನಾ ಆ ಮೂರೂ ಮೊಟ್ಟೆಗಳ್ನ ಗೂಡ್ ಸಮೇತ ತಕ್ಕಂಡ್ ಹಿಡ್ಕಂಡೆ. ಎರಡು ಪಕ್ಷಿ, ಮೂರು ಮೊಟ್ಟೆಗಳ ಜೊತೆ ವಾಪಸ್ ಮನೆಗೆ ಬಂದೊ.
ಗುಡ್ಡದ ಒಲೇಲಿ ಇನ್ನೂ ಬೆಂಕಿ ಇತ್ತ್. ನಾವಿಬ್ರೂ ಅಲ್ಲಿಗೆ ಹೋದೊ. ಪಕ್ಷಿ ಹಿಡಿಯಕ್ಕೆ ರಕ್ಕಿ ಎಷ್ಟು ಹುಷಾರೋ, ಅದ್ನ ಸುಟ್ಟು ತಿಂಬಕೂ ಅಷ್ಟೇ ಹುಷಾರ್. ಮೊದ್ಲು ಅಂವ ಒಂದ್ ಲೋಟಲಿ ನೀರ್ ತಾತ್. ಅದ್ರೊಳಗೆ ಮೊಟ್ಟೆನ ಹಾಕಿಕೆ ಹೇಳ್ತ್. ನೀರೊಳಗೆ ಆ ಮೊಟ್ಟೆಗಳ್ನ ಹಾಕಿದ ಕೂಡ್ಲೇ, ಮುಳುಗಿ ಹೋದೋ. `ಈ ಮೊಟ್ಟೆಗ ಏನೂ ಆತ್ಲೆ, ನೀರ್ಲಿ ತೇಲಿದ್ರೆ, ಹಾಳಾಗುಟ್ಟುತಾ ಅರ್ಥ. ನಾ ಹೋಗಿ ಚೆಟ್ಟಿ ತಂದನೆ, ಮೊದ್ಲು ಮೊಟ್ಟೆನ ಆಮ್ಲೆಟ್ ಮಾಡ್ನೊ' ತಾ ಹೇಳಿ ಹೋಗಿ ಚೆಟ್ಟಿ ತಂದತ್. ನಾ ಗುಡ್ಡದ ಒಲೆಲೇ ಒಂದ್ ಸೈಡ್ ಚೆಟ್ಟಿ ಇಟ್ಟ್, ಅದ್ರಲಿ ಕೊಟ್ಟುಮುರ್ಚಾ  ಮೊಟ್ಟೆದ್ ಆಮ್ಲೆಟ್ ಮಾಡ್ದೆ. ಅಷ್ಟೊತ್ತಿಗೆ ರಕ್ಕಿ ಎರಡೂ ಪಕ್ಷಿಗಳ ತುಪ್ಪಟ ತೆಗ್ದ್, ಕ್ಲೀನ್ ಮಾಡಿತ್ತ್. ಸೈಡ್ಲಿ ದಾಸ ನಾಯಿ ಅದ್ರ ಪಾಲ್ನ ಕರ್ಳ್, ಕಾಲ್ ಮೂಳೆ, ರೆಕ್ಕೆ ತುದೀನೆಲ್ಲಾ ಕಟುಂ, ಕುಟುಂತಾ ಅಗೀತಿತ್ತ್.
ಸ್ವಲ್ಪ ಉಪ್ಪು, ಒಳ್ಳೇ ಮೆಣ್ಸು ಹುಡಿ ಸೇರ್ಸಿ ಪೇಸ್ಟ್ ನಂಗೆ ಮಾಡ್ದ ರಕ್ಕಿ, ಅದ್ನ ಪಕ್ಷಿಗಳಿಗೆ ಲಾಯ್ಕ ಮೆತ್ತಿತ್. ಹೊಟ್ಟೆ ಒಳಗೆ ಅದೇ ಪೇಸ್ಟ್ನ ತುಂಬ್ಸಿ, ಬರೆಕೋಲ್ಗೆ ಸಿಕ್ಕಿಸಿ ಕೆಂಡದ ಮೇಲೆ ಇಟ್ಟತ್. ಬರೀ ಐದು ನಿಮಿಷ ಅಷ್ಟೇ... ಒಳ್ಳೇ ಪರಿಮಳ ಬಾಕೆ ಶುರುವಾತ್. ಪಕ್ಷಿಗಳ್ನ ಲಾಯ್ಕ ಸುಟ್ಟ್ ಆದ್ಮೆಲೆ, ಅದ್ಕೆ ನಿಂಬೆರಸ ಹಿಂಡಿ ಒಂದ್ನ ನಾನ್, ಮತ್ತೊಂದ್ನ ಅಂವ ತಿಂಬಕೆ ಶುರು ಮಾಡ್ದೊ. ಜೊತೆಲೆ ಆಮ್ಲೆಟ್ ಬೇರೆ. ಆಹಾ ಅದೆಂಥಾ ರುಚಿ !
ಹಿಂಗೆ ನಾವು ತಿಂದ ಪಕ್ಷಿಗ ಮತ್ತೆ ಮೊಟ್ಟೆಗಳಿಗೆ ಲೆಕ್ಕನೇ ಇಟ್ಟತ್ಲೆ... ಇದು ಸುಮಾರ್ 10-15 ವರ್ಷ ಹಿಂದಿನ ಕಥೆ. ಆಗ ಸಂಗಾತಿ ಮತ್ತೆ ಮೊಟ್ಟೆಗಳ್ನ ಕಳ್ಕಂಡ ನೋವುಲಿ ಅದೆಷ್ಟು ಪಕ್ಷಿಗ ನಮ್ಗೆ ಮೌನವಾಗಿ ಶಾಪ ಹಾಕ್ಯೊಳೊ ಏನೋ... ಈಗ ಪಕ್ಷಿಗಳ್ನ ಕಂಡ್ರೆ, ಕೊಂದು ತಿಂಬೋಕುತಾ ಅನ್ಸುದಿಲ್ಲೆ. ಬದ್ಲಿಗೆ ಕೆಮೆರಾ ತಕ್ಕಂಡ್ ಎಷ್ಟು ಸಾಧ್ಯನೋ ಅಷ್ಟು ಫೋಟೋ ತೆಗ್ದ್, ಅದ್ನ ನೋಡಿ ಖುಷಿಪಟ್ಟನೆ... 
arebhase@gmail.com

Saturday, 7 January 2012

ಇದೆಂಥಾ ವಿಪರ್ಯಾಸ ...!


ಅವ್ಳ ಕಣ್ಣ್ತುಂಬಾ ನೀರ್... ಪಾಪ, ಅದೆಂಥ ಕಷ್ಟಲಿ ಉಟ್ಟೋ ಏನೋ. ಅವಳ್ನ ಕೇಳ್ನೋತಾ ಯೋಚನೆ ಮಾಡ್ದೆ.  ಮತ್ತೆ ಅವ್ಳು ಮರಡುದು ಜೋರಾದುತಾ ಯೋಚನೆ ಮಾಡ್ಕಂಡ್ ನಾನ್ ಸುಮ್ಮನಾದೆ. ಆ ಗೂಡೆ ಸ್ವಲ್ಪ ಹೊತ್ತು ಮರ್ಡುದು, ಮತ್ತೆ ಏನೋ ಸಮಾಧಾನ ಆದಂಗೆ ಸುಮ್ಮನಾದು... ಪುನ: ದು:ಖ ತಡೆಯಕ್ಕಾದೆ ಜೋರಾಗಿ ಮರ್ಡುದು, ಕಚರ್ೀಫ್ ತಕ್ಕಂಡ್ ಕಣ್ಣ್ ಮೂಗು ವರೆಸಿಕೊಳ್ಳುದು ಮಾಡ್ತಿತ್ತ್. ಅವ್ಳು ಮರ್ಡಿಕಾಕನ ಬಸ್ಲಿ ಕುದ್ದವೆಲ್ಲಾ ನನ್ನನ್ನೇ ನೋಡ್ತಿದ್ದೊ...
ನಾನ್ ಆಫೀಸ್ಲಿ ಇರ್ಕಾಕನ ಅಮ್ಮ ಫೋನ್ ಮಾಡಿದ್ದೊ. ನನ್ನ ತಂಗೆಗೆ ಡೆಲಿವರಿ ಆಗಿತ್. `ನೀನ್ ಮಾವ ಆಗ್ಯೊಳರಾ' ತಾ ಖುಷಿ ಖುಷೀಲೇ ಹೇಳಿದ್ದೊ. ಆಗ ನಾನ್ ಮಧ್ಯಾಹ್ನ ಮೇಲಿನ ಶಿಫ್ಟ್ಲಿ ಇದ್ದೆ. ಅದೊಂಥರ ವಿಚಿತ್ರ ಶಿಫ್ಟ್. ಮಧ್ಯಾಹ್ನ ಮೂರು ಗಂಟೆಗೆ ಶುರುವಾದ್ರೆ, ಮಧ್ಯರಾತ್ರಿ 12 ಹೊಡೆಯುವ ವರೆಗೆ ಆಫೀಸ್ಲಿ ಇರೋಕು. ನಂಗೂ ತಂಗೆ ಕೂಸುನ ನೋಡಿಕೆ ಆಸೆ ಶುರುವಾತ್. ಕೂಡ್ಲೇ ಮಾರನೇ ದಿನಕ್ಕೆ ರಜೆ ಅಜರ್ಿ ಬರ್ದ್ ಕೊಟ್ಟೆ. ಅಂದ್ ರಾತ್ರಿ 12 ಗಂಟೆವರೆಗೆ ಡ್ಯೂಟಿ ಮಾಡಿ, ಮಡಿಕೇರಿ ಬಸ್ ಹತ್ತಿಕೆ ಯೋಚನೆ ಮಾಡ್ದೆ. ಆಫೀಸ್ ಕ್ಯಾಬ್ಲೇ ಸೆಟಾಲೈಟ್ ಬಸ್ಸ್ಟ್ಯಾಂಡ್ಗೆ ಡ್ರಾಪ್ ತಕ್ಕಂಡೆ.
ಶುಕ್ರವಾರ ಆಗಿದ್ದ್ರಿಂದ ಬಸ್ಗೆಲ್ಲಾ ಫುಲ್ ರಷ್. ವೀಕೆಂಡ್ಗೆ ಊರಿಗೆ ಹೋಗವು, ಮಡಿಕೇರಿ ಕಡೆ ಟ್ರಿಪ್ ಹೊರಟವು.. ಹಿಂಗೆ ಗಿಜಿ ಗಿಜಿ ಜನ. ಅಂತೂ ಒಂದ್ ಮಡಿಕೇರಿ ಬಸ್ ಸಿಕ್ತ್. ಜನರ ತಳ್ಳಾಟ ಮಧ್ಯೆನೇ ಬಸ್ ಹತ್ತಿದೆ. `ಸ್ವಾತಂತ್ರ್ಯ ಹೋರಾಟಗಾರರಿಗಾಗಿ' ತಾ ಬರ್ದಿರ್ವಲ್ಲಿ ಕಿಟಕಿ ಸೀಟ್ ಸಿಕ್ತ್. ನನ್ನ ಪಕ್ಕದ ಸೀಟ್ ಬಿಟ್ಟರೆ, ಬಸ್ಲಿ ಬೇರೆ ಕಡೆ ಸೀಟ್ ಖಾಲಿ ಇತ್ಲೆ. ಇನ್ನೇನ್ ಕಂಡಕ್ಟರ್ `ರೈಯ್ಯಾ...' ತಾ ಹೇಳೊಕು, ಅಷ್ಟೊತ್ತಿಗೆ ಆ ಗೂಡೆ ಅರ್ಜೆಂಟ್ ಅರ್ಜೆಂಟ್ ಆಗಿ ಬಂದ್ ನನ್ನ ಪಕ್ಕದ ಸೀಟ್ಲೇ ಕೂತತ್. ಸುಮಾರು 20-22 ವರ್ಷದ ಪೊರ್ಲುನ ಗೂಡೆ.
`ಸುಂಟಿಕೊಪ್ಪ...' ಆ ಗೂಡೆ ಕಂಡಕ್ಟರ್ಗೆ ಹೇಳಿ ಟಿಕೆಟ್ ತಕಣ್ತ್. ಆಗ್ಲೂ ಅವ್ಳ ಕಣ್ಣ್ಲಿ ನೀರ್. ಕಂಡಕ್ಟರ್ ನನ್ನ ಕಡೆ ಒಂದ್ಸಲ ನೋಡಿ, ಮತ್ತೆ ಅವ್ಳನ್ನೇ ಕೇಳ್ತ್... `ಒಂದೇ ಸೀಟಾ..?' ಅವ್ಳು ಮಾತಾಡ್ತ್ಲೆ, ತಲೆನಾ ಉದ್ದುದ್ದ ಆಡ್ಸಿ, ಹೌದುತೇಳ್ತ್... ಅಷ್ಟೊತ್ತಿಗೆ ನಾನ್ ಕುಶಾಲನಗರಕ್ಕೆ ಟಿಕೆಟ್ ತಕ್ಕಂಡೆ. ಬಸ್ ರಾಮನಗರಲಿ ಒಮ್ಮೆ ಜನ ಇಳ್ಸಿ, ಮತ್ತೊಂದಷ್ಟು ಜನ್ರನ್ನ ಹತ್ಸಿಕಂಡ್ ಮತ್ತೆ ಹೊರಟತ್. ಆದ್ರೂ ನನ್ನ ಪಕ್ಕಲಿ ಕೂತ ಗೂಡೆ ಮರಡುದು ನಿಲ್ಲಿಸ್ತಿಲ್ಲೆ... ನಂಗೆ ಕಿರಿ ಕಿರಿ ಆಕೆ ಶುರುವಾತು. ಆದ್ರೂ ಪಾಪ, ಅವ್ಳಿಗೆ ಅದೆಂಥ ನೋವಿರ್ದೋ ಏನೋತೇಳಿ ಹಂಗೆ ಸುಮ್ಮನೇ ಕಣ್ಣ್ ಮುಚ್ಚಿಕಂಡೆ. ನಿದ್ರೆ ಹತ್ತಿಬಿಡ್ತ್.
`ನಾನು ಮಂಡ್ಯ ಹತ್ತಿರ ಇದ್ದೀನಿ. ಆರೂವರೆ ಹೊತ್ತಿಗೆ ಅಲ್ಲಿರ್ತೀನಿ...' ನನ್ನ ಪಕ್ಕದ ಗೂಡೆ ಹಂಗೆ ಫೋನ್ಲಿ ಯಾರಿಗೋ ಹೇಳಿಕಂಡ್ ಮತ್ತೆ ಜೋರು ಮರ್ಡಿಕೆ ಶುರು ಮಾಡಿಕಾಕನ ನಂಗೆ ಎಚ್ಚರ ಆತ್. ಇದೊಳ್ಳೆ ಕಥೆ, ಒಳ್ಳೇ ಅಳುಬುರುಕಿ ಗಂಟುಬಿತ್ತಲ್ಲತಾ ಯೋಚನೆ ಮಾಡ್ಕಂಡ್ ನಾನ್ ಮೆಲ್ಲೆ ಕಣ್ಣು ಮುಚ್ಚಿಕಂಡೆ. ಮರ್ಡ್ತಿದ್ದ ಅವ್ಳು ಈಗ ಬಿಕ್ಕಳಿಸಿಕೆ ಶುರುಮಾಡ್ತ್. ಮಂಡ್ಯ ದಾಟ್ತಿದ್ದಂಗೆ ಅವ್ಳ ಬಿಕ್ಕಳಿಕೆ ಜೋರ್ ಆತ್. ಒಮ್ಮೆ ಬಲಕ್ಕೆ ತಿರುಗಿ ಅವ್ಳ ಕಡೆ ನೋಡ್ದೆ. ಕಣ್ಣ್ ಒರ್ಸಿಕಂಡೇ ಬಿಕ್ಕಳಿಸ್ತಿತ್. ಅವ್ಳ ಹತ್ರ ಕಣ್ಣೀರ್ ಬಿಟ್ರೆ ಬೇರೆ ನೀರ್ ಇದ್ದಂಗೆ ಕಾಣ್ತ್ಲೆ. ನನ್ನ ಬ್ಯಾಗ್ಂದ ನೀರ್ ತೆಗ್ದ್ ಅವ್ಳ ಮುಂದೆ ಹಿಡ್ದೆ. ಅವ್ಳು ಬೇಡತಾ ಹೇಳುವಂಗೆ ಅಡ್ಡಡ್ಡ ತಲೆ ಆಡಿಸ್ತ್. `ನೀರು ಕುಡೀರಿ ಸರಿ ಹೋಗುತ್ತೆ...' ಅವ್ಳಿಗೆ ನಾನೇನೋ ಆತ್ಮೀಯ ಅನ್ನೋ ಹಂಗೆ ಹೇಳ್ದೆ... ಒಂದ್ಸಲ ನನ್ನ ಮುಖ ನೋಡ್ತ್, ಏನ್ ಅನ್ಸಿತೋ ಏನೋ... ನೀರಿನ ಬಾಟಲಿ ತಕ್ಕಂಡ್ ನಿಧಾನಕ್ಕೆ ಕುಡ್ತ್... ಬಿಕ್ಕಳಿಕೆ ನಿಂತಂಗೆ ಆದ್ಮೇಲೆ, `ಥ್ಯಾಂಕ್ಸ್' ಹೇಳಿ ಬಾಟಲಿ ವಾಪಸ್ ಕೊಡ್ತ್.
ಅವ್ಳನ್ನ ನೋಡಿದ್ರೆ, ರಾತ್ರಿ ಊಟ ಕೂಡ ಮಾಡ್ತ್ಲೆ ಅನ್ನೋ ಹಂಗೆ ಇತ್ತ್. ಬ್ಯಾಗ್ಂದ ಹೈಡ್ ಆ್ಯಂಡ್ ಸೀಕ್ ಬಿಸ್ಕೆಟ್ 
ತೆಗ್ದ್ ಪ್ಯಾಕೆಟ್ ಓಪನ್ ಮಾಡಿ ಅವ್ಳ ಎದ್ರು ಹಿಡ್ದೆ... ಏನೂ ಮಾತಾಡದೆ, ಅವ್ಳು ಐದಾರು ಬಿಸ್ಕೆಟ್ ತಕ್ಕಂಡ್ ಗಬಗಬನೆ ತಿಂದತ್... ಕೈಭಾಷೆಲೇ ನೀರು ಕೇಳಿ ಕುಡ್ತ್. ನಾನೂ ಬಿಸ್ಕೆಟ್ ತಿಂದ್ ನೀರು ಕುಡ್ದೆ. ಅಷ್ಟು ಹೊತ್ತಿಗೆ ಅವ್ಳು ಮರ್ಡುದು ಕಡ್ಮೆ ಆಗಿತ್ತ್. ಬಹುಶ: ಕಣ್ಣಲ್ಲಿ ನೀರ್ ಆರಿ ಆಗಿತ್ತೋ ಏನೋ... ಇದೇ ಒಳ್ಳೇ ಸಂದರ್ಭತೇಳಿ ಮೆಲ್ಲನೆ ಆ ಗೂಡೆನಾ ಕೇಳ್ದೆ, `ಯಾಕೆ ಆಗ್ಲಿನಿಂದ ಒಂದೇ ಸಮನೇ ಅಳ್ತಿದ್ದೀರಿ? ಏನಾಯ್ತು?' ಅವ್ಳು ಮತ್ತೆ ಮರ್ಡಿಕೆ ಶುರು ಮಾಡ್ತ್... ನಂಗೆ ಯಾಕೆ ಬೇಕಿತ್ತಪ್ಪಾ ಈ ಪ್ರಶ್ನೆ ಕೇಳುವ ಉಸಾಬರಿತಾ ಅನ್ಸಿತ್. ಮರ್ಡುದು ಸ್ವಲ್ಪ ನಿಯಂತ್ರಣಕ್ಕೆ ಬಂದ ಮೇಲೆ ಅವ್ಳಾಗೆ ಶುರು ಮಾಡ್ತ್... ಅವ್ಳ ದು:ಖ ಹೇಳಿಕಣಿಕೆ ಯಾರೋ ಒಬ್ಬ ಬೇಕಿತ್ತ್ ಕಂಡದೆ, ಈಗ ನಾನ್ ಸಿಕ್ಕಿದ್ದೆ.
ಅವ್ಳು ಸಾಫ್ಟ್ವೇರ್ ಎಂಜಿನಿಯರ್. ಕಾಫಿತೋಟಲಿ ರೈಟರ್ ಆಗಿದ್ದ ಅವ್ಳ ಅಪ್ಪ, ಕಷ್ಟಪಟ್ ಈ ಗೂಡೆನ ಎಂಜಿನಿಯರ್ ಮಾಡಿತ್ತ್. ಆದ್ರೆ ಆ ಅಪ್ಪ ಇನ್ನ್ ಇಲ್ಲೆ. ಕಾಫಿ ತೋಟಲಿ ಕೆಲ್ಸ ಮಾಡಿಕಂಡ್ ಇರ್ಕಾಕನ, ಒಂದ್ ಕಾಡಾನೆ ಅವ್ರನ್ನ ಮೆಟ್ಟಿ ಕೊಂದ್ಬಿಟ್ಟಿತ್. ವಿಷಯ ಗೊತ್ತಾದ ಕೂಡ್ಲೇ, ಈ ಗೂಡೆ ಬಸ್ ಹತ್ತಿತ್ತ್... ತನ್ನನ್ನ ಎಂಜಿನಿಯರ್ ಮಾಡಿಕೆ ಅಪ್ಪ ಪಟ್ಟ ಕಷ್ಟ, ಆ ಅಪ್ಪ ಇನ್ನ್ ಇಲ್ಲೆತೇಳುವ ನೋವು ಅವ್ಳನ್ನ ಕಾಡ್ತಿತ್ತ್. ಆ ಅಪ್ಪನ ಹೆಣ ನೋಡುವರೆಗೆ ಅವ್ಳಿಗೆ ಇನ್ನೆಂಥ ಮಾಡಿಕೆ ಸಾಧ್ಯ? ನಾನೊಂದಿಷ್ಟು ಅವ್ಳಿಗೆ ಸಮಾಧಾನ ಮಾಡಿ, ಅವ್ಳಿಷ್ಟಕ್ಕೆ ಅವ್ಳನ್ನ ಬಿಟ್ಟೆ.
ಎಂಥ  ವಿಪರ್ಯಾಸ ನೋಡಿ, ಅಂದ್ ಹುಟ್ಟಿದ ನನ್ನ ತಂಗಿ ಕೂಸುನ ನೋಡಿಕೆ ನಾನ್ ಖುಷೀಲಿ ಹೊರ್ಟಿದ್ದೆ. ಆದ್ರೆ ಅದೇ ಬಸ್ಲಿ ಅಪ್ಪನ ಕಳ್ಕಂಡ ಗೂಡೆ ! ಒಂದು ಹುಟ್ಟಿನ ಸಂತಸ... ಮತ್ತೊಂದು ಸಾವಿನ ನೋವು ! 
arebhase@gmail.com   

Friday, 6 January 2012

ಚಟ್ನಿ ಹೆಸ್ರ್ ಎಂಥ ?


ಅಂತೂ ಅಣ್ಣಿ ಹೈದಂಗೆ ಅಮ್ಮಿ ಗೂಡೆ ಜೊತೆ ಮದ್ವೆ ಆತ್ ! ಭಾಗಮಂಡಲ ಗೌಡ ಸಮಾಜಲಿ ಭಾರೀ ಗೌಜಿಲಿ ಮದ್ವೆ ನಡ್ತ್. ಅಣ್ಣಿ ಹೈದನ ಬೆಂಗ್ಳೂರು ಫ್ರೆಂಡ್ಸ್ಗ ಕೂಡ ಮದ್ವೆಗೆ ಬಂದಿದ್ದೊ. ಚೆಟ್ಟಿಲಿ ಹಂದಿಮಾಂಸ ಖಾಲಿ ಆದ್ಮೇಲೆನೇ ಅವು ಆನೇಕಲ್ ಬಸ್ ಹತ್ತಿ ವಾಪಸ್ ಹೋದ್. ಅಣ್ಣಿಗೂ, ಅಮ್ಮಿಗೂ ಹೊಸ ಅನುಭವ ! `ಅದೂ' ಮುಗ್ದ್ ಹೋತ್. ಇನ್ನು ಮದುವೆಯ ಐದನೇ ದಿನ... ತುಪ್ಪ ತಕ್ಕೊಂಡು ಹೋದು. ಮಿಳ್ಳಿಗೆ ತುಪ್ಪ ತುಂಬ್ಸಿ ಅದ್ರಮೇಲೆ ಬಾಳೆ ಎಲೆ ಇಟ್ಟ್, ಬಕ್ಕ್ ಹಗ್ಗಂದ ಕಟ್ಟಿ ಹೊಸ ಜೋಡಿ ಹೊರಟೇ ಬಿಟ್ಟೊ... ಜೊತೇಲಿ ಅಣ್ಣಿನ ಅಕ್ಕ, ಅಕ್ಕನ ಮಂಞ, ನೆರೆಮನೆ ಗೂಡೆ... ಹಿಂಗೆ ಒಟ್ಟು ಐದ್ ಜನ ತುಪ್ಪ ತಕ್ಕಂಡ್ ರಾಮ ಬಸ್ ಹತ್ತಿದೊ..
ಚೇರಂಬಾಣೇಲಿ ಬಸ್ ಇಳ್ದ್ ಆಟೋ ಮಾಡ್ಕಂಡ್ ಎಲ್ಲವೂ ಅಮ್ಮಿ ತವ್ರು ಮನೆಗೆ ಹೊರಟೋ. ಅಣ್ಣಿ  ಡ್ರೈವರ್ದ ಹೆಗ್ಲ್ ಮೇಲೆ ಕೈ ಹಾಕ್ಕಂಡ್ ಮುಂದೆ ಕುದ್ದಕಣ್ತ್. ಇನ್ನು ನಾಲ್ಕು ಜನ ಹಿಂದೆ ಸೀಟ್ಲಿ ಅಡ್ಜೆಸ್ಟ್ ಮಾಡ್ಕಂಡ್ ಕುದ್ದುಕೊಂಡೊ. ಪಾಕ ಹೊಳೆ ದಾಟಿದಂಗೆ ಸಿಗ್ವ ಅಪ್ಪ್ಲಿ ಆ ಆಟೋ ಏನು ಮಾಡಿರೂ ಹತ್ತಿತ್ಲೆ. ಕೊನೆಗೆ ಅಣ್ಣಿ ಹೈದ ಇಳ್ದ್, `ಲೇಲೇ ಲೈಸಾ'ತಾ ದೂಡಿ, ಬಿಳಿ ಷಟರ್್ನ ಕೊಳೆ ಮಾಡ್ಕಣ್ತ್. ಕೊನೆಗೂ ಅಮ್ಮಿನ ಅಮ್ಮನ ಮನೆ ಬಾತ್. ನೆಂಟರಿಗೆ ಒಳ್ಳೇ ಉಪಚಾರನೇ ಮಾಡ್ದೊ. ಆಟೋ ದೂಡಿ ಸುಸ್ತಾಗಿದ್ದ ಅಣ್ಣಿ, ನಾದಿನಿ ಕೊಟ್ಟ ಆರೆಂಜ್ ಜ್ಯೂಸ್ನ ಒಂದೇ ಉಸುರಿಗೆ ಬಾಯಿಗೆ ಸುರ್ಕಂಡ್ ಬಿಡ್ತ್. ಅಮ್ಮಿನ ಚಾಲಾಕಿ ತಂಗೆ ಆ ಜ್ಯೂಸ್ಲಿ ಮೆಣ್ಸು ಹುಡಿ ಸೇರ್ಸಿದ್ದದ್, ಜ್ಯೂಸ್ ಕುಡ್ದ್ ಆದ್ಮೆಲೆನೇ ಅಣ್ಣಿಗೆ ಗೊತ್ತಾದ್. ಎಲ್ಲವ್ಕೆ ನಗೆ ಆದ್ರೆ, ಅಣ್ಣಿ ಹೈದನ ಪಾಡ್... ಅಯ್ಯೋ ಪಾಪ !
ಅದ್ ಇದ್ ಮಾತಾಡಿಕಂಡ್ ನೆಂಟರ್ಗ ವಡೆ ತಿನ್ತಿದ್ದೊ... ಅಮ್ಮಿಗೆ ವಡೇಲಿ ಎಂಥದ್ದೋ ಸಿಕ್ಕಿದಂಗೆ ಆತ್. ಉಗ್ದಂಗೆ ಅಲ್ಲ, ನುಂಗಿದಂಗೆ ಅಲ್ಲ... ಅದ್ರೂ ಎಷ್ಟು ಹೊತ್ತು ಸಾಧ್ಯನೋ ಅಷ್ಟೂ ಹೊತ್ತು ಆ ದವಡೆಂದ ಈ ದವಡೆಗೆ, ಈ ದವಡೆಂದ ಆ ದವಡೆಗೆ ಹಾಕಂಡ್ ಅಗೀತ್ತಿದ್ದರೆ, ಅವ್ಳ ನೆರೆಮನೆ ಹೈದಂಗೆ ಜೋರು ನಗೆ. ಅಂವ ಅಮ್ಮಿಗೆ ಕೊಟ್ಟ ವಡೇಲಿ ಬಬಲ್ ಗಮ್ ಹಾಕಿಟ್ಟಿತ್ತ್. ಸರಿ, ಹಂಗೆ ಮಧ್ಯಾಹ್ನ ಆತ್. ಎಲ್ಲವೂ ಊಟಕ್ಕೆ ಎದ್ದೊ.
ಗಮ್ಮತ್ ಊಟ. ಚಪ್ಪರ ದಿನ ಮಾಡ್ದ ಹಂದಿ ಗೈಪು ಐದು ದಿನ ಬಿಸಿ ಮಾಡಿ ಮಾಡಿ, ಈಗ ಒಳ್ಳೆ ಲಾಯ್ಕ ಆಗಿತ್ತ್. ಜೊತೆಗೆ ತುಪ್ಪದನ್ನ, ಕೋಳಿ ಸಾರ್, ಅನ್ನ, ಸಾಂಬಾರ್, ಚೆಟ್ಟು ಪಲ್ಯ, ಅಮ್ಟೆಕಾಯಿ ಉಪ್ಪಿನಕಾಯಿ, ಕೇಸರಿಬಾತ್... ಕೊನೆಗೆ ಚಟ್ನಿ ಕೂಡ ಇತ್ತ್. ತುಪ್ಪ ತರ್ವ ದಿನ ಮಾಡ್ದ ಚಟ್ನಿಲಿ ಏನೋ ಒಂದು ವಿಶೇಷನ ಮಿಕ್ಸ್ ಮಾಡಿದ್ದವೆ. ಅದ್ ಏನುತೇಳ್ದುನ ಹೊಸ ಜೋಡಿ ಹೇಳೊಕು. ಇಲ್ಲೂ ಹಂಗೆ ಆತ್. ಅಣ್ಣಿ, ಅಮ್ಮಿ ಬಿಟ್ಟ್ ಎಲ್ಲವೂ ಊಟ ಮುಗ್ಸಿ ಎದ್ದೊ. ಎಷ್ಟು ಹೊತ್ತು ಆದ್ರೂ ಚಟ್ನಿಗೆ ಏನು ಹಾಕ್ಯೊಳೊತೇಳಿ ಹೇಳಿಕೆ ಈ ಜೋಡಿಗೆ ಆತ್ಲೆ. ಅಮ್ಮಿ ತಂಗೆ ಒಂದು ಕ್ಲೂ ಕೊಟ್ಟತ್. `ಅದ್ ಬಿಳಿ ಇದ್ದದೆ'... `ಸುಣ್ಣ' ಅಣ್ಣಿದ್ ಉತ್ತರ. ಅದ್ಕೆ ಅಮ್ಮಿ, `ನಿಮ್ಮ ತಲೆ, ಸುಣ್ಣನ ಚಟ್ನಿಗೆ ಹಾಕಿವೆನಾ? ಅದ್ ಅಕ್ಕಿ ಇರೋಕು ಕಂಡದೆ' ತಾ ಹೇಳ್ತ್. ಆದ್ರೆ ಆ ಉತ್ರ ಸರಿ ಆತ್ಲೆ... ಬಿಳಿ ಇರ್ವ ಒಂದೊಂದೇ ವಸ್ತುಗಳ್ನ ಅಮ್ಮಿನೂ, ಅಣ್ಣಿನೂ ಹೇಳಿಕೆ ಶುರು ಮಾಡ್ದೊ... `ಹಾಲು, ಮೊಸರು, ನೆಸ್ಲೆ ಚಾಕ್ಲೆಟ್...' ಹೂಂ... ಯಾವ ಉತ್ತರನೂ ಸರಿ ಆತ್ಲೆ... ಅಮ್ಮಿನ ತಂಗೆ ಇನ್ನೊಂದು ಕ್ಲೂ ಕೊಟ್ಟತ್. `ಅದ್ ತಲೇಲಿ ಇದ್ದದೆ...' ಅಣ್ಣಿ ಮುಖನ ಸಿಂಡರಿಸಿಕಣ್ತ್ `ಛೀ... ಹೇನ್ ಹಾಕ್ಯೊಳನಾ ಚೆಟ್ನಿಗೆ ?' ತಾ ಕೇಳ್ತ್... ಅದ್ಕೆ ಅಮ್ಮಿನ ತಂಗೆ, `ಎಂಥ ಭಾವ ನೀವು, ಚಟ್ನಿಗೆ ಯಾರಾರ್ ಹೇನ್ ಹಾಕಿವೆನಾ? ನೀವು ತಪ್ಪು ಒಪ್ಪಿಕಂಡ್ ಉಂಗುರ ಬಿಚ್ಚಿಡಿ, ಉತ್ತರ ನಾನೇ ಹೇಳ್ನೆ'ತಾ ಹೇಳ್ತ್. ಅಣ್ಣಿಗೆ ಹೊರಡುವ ಅಜರ್ೆಂಟ್ ಆಗಿದ್ದ್ರಿಂದ, ಉಂಗುರ ಬಿಚ್ಚಿ ನಾದಿನಿ ಕೈಗೆ ಕೊಡ್ತ್... ಹಂಗಾರೆ ಚಟ್ನಿಗೆ ಹಾಕಿದ್ದ ಆ `ತಲೇಲಿರ್ವ ಬಿಳಿ ವಸ್ತು' ಯಾವ್ದು?
`ಅಯ್ಯೋ ಭಾವ, ಅಷ್ಟೂ ಗೊತ್ತಾತ್ಲೆನಾ ಅದ್ ಮಲ್ಲಿಗೆ ಹೂ..' ತೇಳಿ ಅಮ್ಮಿನ ತಂಗೆ ಅಲ್ಲಿಂದ ಜಾಗ ಖಾಲಿ ಮಾಡ್ತ್...  
arebhase@gmail.com

Thursday, 5 January 2012

ಪಾಕದ ಗೂಡೆ...


ಬೆಲ್ಲದ ಪಾಕಲಿ ಮಾಡ್ದಷ್ಟೇ ಪೊರ್ಲು !
ಅದ್ ಕರಿ ಬೆಲ್ಲ ಅಲ್ಲ ಬಿಳಿ !
ಕೋಪಟ್ಟಿ ಬೆಟ್ಟದ ಮೇಲೆ 
ಬೀಳ್ವ ಮಂಜಿನಂಗೆ...
ಮುಟ್ಟಿರೆ ಕರಗಿಹೋದೆ !
ಅವ್ಳು ಪಾಕದ ಗೂಡೆ
ಜುಳು ಜುಳು ನದಿಯ ನಡಿಗೆ
ಹೆಜ್ಜೆ ಮೇಲೆ ಹೆಜ್ಜೆ...
ಝಲ್ ಝಲ್ ಸದ್ದಿನ ಬೆಳ್ಳಿ ಗೆಜ್ಜೆ
ಅಳವಾರದ ಗದ್ದೆ ಬದಿಯ
ನವಿಲಿಗೂ ಬಾಲೆ ಅಂಥ ನಾಟ್ಯ !
ಅವ್ಳು ಪಾಕದ ಗೂಡೆ
ಹುಣ್ಣಿಮೆ ಚಂದಿರನ ಮೇಲೆ
ಪುಟ್ಟ ಕಡು ಕಪ್ಪು ದುಂಬಿ !
ಫಳ ಫಳ ಹೊಳೆವ 
ಮುಖಲಿ ಸಣ್ಣ ಮಚ್ಚೆ ! 
ದೃಷ್ಟಿ ಆಗದಿರ್ಲಿತಾ ದೇವರೇ ಇಟ್ಟದ್ !
ಅವ್ಳು ಪಾಕದ ಗೂಡೆ
ನಾಗತೀರ್ಥಲಿ ಕಾವೇರಿಯ ಝರಿ
ಬೆನ್ನ ಮೇಲೆ ಹರಡ್ಯುಟ್ಟು ಕೇಶರಾಶಿ
ಅದೆಷ್ಟು ಉದ್ದ !
ಬಿಟ್ಟರೆ ನೆಲಕ್ಕೆ ಮುತ್ತು ಕೊಟ್ಟದೆ !
  ಆರು ಮೊಳ ಮಲ್ಲಿಗೆಯೂ ಕಡ್ಮೆನೇ...
ಅವ್ಳು ಪಾಕದ ಗೂಡೆ  
arebhase@gmail.com

Wednesday, 4 January 2012

ಪುಟಾಣಿ ಗೌಡುಗ... !

ಮೊನ್ನೆ ಕುಶಾಲನಗರಲಿ ಗೌಡ ಸಮುದಾಯದ ಸಂತೋಷ ಕೂಟ ನಡ್ತ್. ಇಲ್ಲಿ ಮಕ್ಕಳಿಗೆ ಬೇರೆ ಬೇರೆ ಪೈಪೋಟಿಗಳ್ನ ನಡೆಸಿದ್ದೊ. ಇದ್ರಲ್ಲಿ ಛದ್ಮವೇಶ ಸ್ಪಧರ್ೆ ಕೂಡ ಒಂದು. ಈ ಪೈಪೋಟೀಲಿ ತುಂಬಾ ಮಕ್ಕ ಪಾಲ್ಗೊಂಡಿದ್ದೊ. ಒಬ್ಬೊಬ್ಬರೂ ಒಂದೊಂದು ವೇಶ ಹಾಕಿ ಗಮನ ಸೆಳ್ದೊ
arebhase@gmail.com

Tuesday, 3 January 2012

`ರಾಯರು ಬಂದರು ಮಾವನ ಮನೆಗೆ...' ಇನ್ನಷ್ಟು ಫೋಟೋಗ....












ಕುಶಾಲನಗರಲಿ ಗೌಡ ಸಂತೋಷ ಕೂಟದ ಸಮಾರೋಪ ಸಮಾರಂಭದ ಉದ್ಘಾಟನೆ


`ಸ್ಮೈಲ್ ಪ್ಲೀಸ್...' ಒಂದ್ ಗ್ರೂಪ್ ಫೋಟೋ


`ಕೊಡಗ್ನ ಕಾಫಿ ರುಚಿ ನೋಡಣಾ ಬನ್ನಿ..'


ಕುಶಾಲನಗರದ ಡಾಕ್ಟರ್ ದೇವಜನ ಕಿಶೋರ್ ದಂಪತಿಗೆ ಸನ್ಮಾನ


`ರಾಯರಿಗೆ' ಸ್ವಾಗತ.... ಸದಾನಂದ ಗೌಡರಿಗೆ ಚೆಲುವರಿಯರ ಸ್ವಾಗತ


`ನಮಸ್ತೆ.. ಹೆಂಗೊಳರಿ ?' ನೆಂಟರ್ನ ಕಂಡಾಗ ಉಭಯಕುಶಲೋಪರಿ