`ಸರಿಯಾಗಿ ಚಡ್ಡಿ ಹಾಕ್ಕಂಬಕೆ ಬಾಲೆ, ಬೇಟೆಗೆ ಹೋದೆ ಗಡ ಬೇಟೆಗೆ...ಮನೇಂದ ಹೊರಗೆ ಕಾಲಿಟ್ಟರೆ ಕಾಲು ಮುರ್ದು ಕೈಗೆ ಕೊಟ್ಟನೆ...ಮುಚ್ಚ್ಕಂಡ್ ಮನೇಲಿ ಕುದ್ದುಕ...' ಸೊಂಟಂದ ಜಾರ್ತಿದ್ದ ಚೆಡ್ಡಿನ ಒಂದ್ ಕೈಲಿ ಹಿಡ್ಕಂಡ್, ಮೂಗುಂದ ಸುರೀತಿದ್ದ ಗೊಣ್ಣೆನ ಮತ್ತೊಂದು ಕೈಲಿ ಉಜ್ಜಿಕಂಡ್ ಅಪ್ಪನ ಹಿಂದೆ ಹೊರ್ಟಿದ್ದ ಗಣಿಗೆ ಅಮ್ಮ ಸಾಯಂಕಾಲ ಹೊತ್ತುಲಿ ಸಹಸ್ರನಾಮಾರ್ಚನೆ ಮಾಡ್ತಿತ್. ಗಣಿನ ಅಪ್ಪ ಪಳಂಗಂಗೆ ಬೇಟೆ ಹುಚ್ಚು. ವಾರಕ್ಕೆ ಒಂದು ಸಲ ಕೋವಿ ಹಿಡ್ಕಂಡ್ ಬಾಚಿಮಲೆ ಕಾಡಿಗೆ ಹೋತ್ಲೆತೇಳಿರೆ, ಅವಂಗೆ ಊಟ ಸೇರ್ದುಲ್ಲೆ. ಬೇಟೆಗೆ ಹೋದರೆ ಪಳಂಗ ಬರೀ ಕೈಲೇನೂ ವಾಪಸ್ ಬಾಲೆ. ಏನಿಲ್ಲೆತೇಳಿರೂ ಒಂದು ಮೊಲನಾದ್ರೂ ಹೊಡ್ಕಂಡ್ ಬರ್ತಿತ್. ಪಳಂಗನ ಹತ್ರ ಇರ್ದು ಹಳೇ ಕೋವಿ. ಅವ್ನ ತಾತ ಮಿಲಿಟರೀಂದ ರೀಟೈರ್ಡ್ ಆಕಾಕನ ತಕ್ಕಂಡದ್. ಪಾಲ್ ಆಕಾಕನ ಪಳಂಗನ ಅಪ್ಪಂಗೆ ಸಿಕ್ಕಿತ್. ಈಗ ಇವನ ಕೈಗೆ ಬಂದುಟ್ಟು. ಇಂವ ದುಡ್ಡು ಕೊಟ್ಟು ತೋಟ ತಕ್ಕಣ್ವ ಪಾರ್ಟಿ ಅಲ್ಲ. ಮನೇಲೇ ಮದ್ದು, ಕೇಪು ತುಂಬ್ಸಿ ತೋಟ ರೆಡಿ ಮಾಡ್ದೆ. ಒಮ್ಮೆ ಹಿಂಗೆ ಮಾಡಿಕಾಕನ ತೋಟ ಹೊಟ್ಟಿ ಇವನ ಕೈಗೆ ಗಾಯ ಆಗಿತ್ತ್. ಹಂಗಾಗಿ ಪ್ರತೀ ಸಲ ತೋಟ ತುಂಬಿಸ್ಕಾಕನ ತುಂಬಾ ಎಚ್ಚರಿಕೆ ತಕ್ಕಂಡದೆ. ಪಳಂಗನ ಹತ್ರ ಒಂದು ಕಂತ್ರಿ ನಾಯಿನೂ ಉಟ್ಟು. ಜಾಕಿ ತಾ ಅದ್ರ ಹೆಸ್ರು. ಜಾಕಿನ ನೋಡಿರೆ ಯಾರೂ ಇದ್ನ ಕಂತ್ರಿ ನಾಯಿತಾ ಹೇಳುಲೆ...ಏಕಂದ್ರೆ, ಈ ನಾಯಿನ ಪಳಂಗ ಅಷ್ಟು ಲಾಯ್ಕಲಿ ನೋಡ್ಕೊಂಡುಟ್ಟು. ಪಳಂಗ ಕೋವಿ ತಕ್ಕಂಡ್ ಬೇಟೆಗೆ ಹೊರಟರೆ, ಜಾಕಿ ಅವನ ಹಿಂದೆನೇ ಬಾಲ ಅಲ್ಲಾಡಿಸಿಕಂಡ್ ಹೊರಟುಬಿಡ್ತಿತ್. ಇಂತ ಪಳಂಗನ ಬೇಟೆ ಹುಚ್ಚು, ರಕ್ತಲಿ ಅವನ ಮಂಙ ಗಣಿಗೂ ಬಂದುಬಿಟ್ಟಿತ್ತ್ !
ಗಣಿ ಮನೇಂದ ಶಾಲೆಗೆ ಮೂರು ಕಿಲೋಮೀಟರ್ ದೂರ. ಸ್ವಲ್ಪ ದೂರ ಹೊಳೆ ಕರೇಲಿ ಗದ್ದೆ ಏರಿ ಮೇಲೆ ನಡ್ಕಂಡ್ ಹೋಕು. ಮತ್ತೆ ಸ್ವಲ್ಪ ದೂರ ಕಾಡು ದಾರಿ. ಅದಾದ್ಮೇಲೆ ತಲಕಾವೇರಿ ರಸ್ತೆ... ಈ ರಸ್ತೇಲಿ ಹೋದ್ರೆ ಶಾಲೆ ತಲುಪಕ್. ಶಾಲೆಗೆ ಹೋಕಾಕನ ಗಣಿ ಎಲ್ಲಾ ಪುಸ್ತಕ ತಕ್ಕಂಡ್ ಹೋದೆನೋ ಬಿಟ್ಟದೆನೋ ಗೊತ್ಲೆ, ಆದ್ರೆ ಬ್ಯಾಗ್ಲಿ ಮಾತ್ರ ಒಂದು ಕ್ಯಾಟರ್ ಬಿಲ್, ಒಂದಿಷ್ಟು ಕಲ್ಲು ಅಂತೂ ಇದ್ದದೆ. ಹೊಳೇಲಿರ್ವ ಯಾವ ಗುಂಡಿಲಿ ಯಾವ ಮೀನುಗ ಎಷ್ಟು ಒಳೊ...ಈರಪ್ಪನ ತರಕಾರಿ ತೋಟಕ್ಕೆ ಹೊಸ ಪಕ್ಷಿ ಯಾವುದು ಬಂದುಟ್ಟು...ಬೀಳಿಕೆ ಆಗಿರ್ವ ಬೂರುಗ ಮರಲಿ ಎಷ್ಟು ಕುಂಡತಗ ಒಳೋ..ತಲಕಾವೇರಿ ರೋಡ್ಲಿ ಮೇಲೆ ತೊಟಂದ ಕೆಳಗೆ ತೋಟಕ್ಕೆ ಹೋಕೆ ಕಾಡು ಹಂದಿಗ ಎಲ್ಲೆಲ್ಲಿ ಕಂಡಿಗಳ್ನ ಮಾಡ್ಯೊಳೋ.. ಹಿಂಗೆ ಎಲ್ಲಾ ವಿಷಯಗಳ್ನ ತಿಳ್ಕಂಡ್ ಈ ಗಣಿ ದೊಡ್ಡ ಬೇಟೆಗಾರನಾಗುವ ಲಕ್ಷಣಗಳ್ನ ಚಿಕ್ಕದರಲ್ಲೇ ತೋರಿಸ್ತಿತ್. ಶಾಲೆಯ ಪುಸ್ತಕದಲ್ಲಿದ್ದ ಅಕ್ಷರಗ ಮಾತ್ರ ಸುಟ್ಟು ತಿಂಬಕ್ಕೆ ಬಾತಿತ್ಲೆ. ಆದ್ರೂ ಏಳನೇ ಕ್ಲಾಸ್ ಪಾಸಾಗಿ ಹೈಸ್ಕೂಲ್ ಮೆಟ್ಟಿಲು ಹತ್ತಿತ್.
ಗಣಿ ಎಲ್ಲಾ ಸಬ್ಜೆಕ್ಟ್ ಗಳಲ್ಲಿ ದಡ್ಡತಾ ಹೇಳಿಸಿಕಂಡ್ರೂ ಕನ್ನಡನ ಲಾಯ್ಕ ಕಲೀತಿತ್ತ್. ಅದ್ರಲ್ಲೂ ಪೂರ್ಣಚಂದ್ರ ತೇಜಸ್ವಿ ಕಥೆಗಳ್ನ ತುಂಬಾ ಲಾಯ್ಕ ಕೇಳ್ಸಿಕಣ್ತಿತ್. ಆ ಕಥೆಗಳಲ್ಲಿ ಬೇಟೆಯ ವಿಷ್ಯ ಬಂದ್ರಂತೂ ಮುಗ್ದೇ ಹೋತ್...ಮೈಯೆಲ್ಲಾ ಕಿವಿ ಮಾಡ್ಕಂಡ್ ಕೇಳ್ತಿತ್. ಇದ್ನ ಮೊದ್ಲು ಗಮನಿಸಿದವು, ಕನ್ನಡ ಪಾಠ ಮಾಡ್ವ ಜಾನಕಿ ಟೀಚರ್... ಅವು ಒಂದು ದಿನ ಗಣಿನ ಕೇಳ್ದೋ... `ಗಣಿ ನಿನಗೆ ತೇಜಸ್ವಿ ಕಥೆಗಳು ಅಂದ್ರೆ ಇಷ್ಟನಾ'. ಅದ್ಕೆ ಗಣಿ `ಹುಂ ಟೀಚರ್...ತುಂಬಾ ಇಷ್ಟ. ಅವ್ರು ಬೇಟೆ ಬಗ್ಗೆ ಬರ್ದಿದೆಲ್ಲಾ ನಂಗೆ ಗೊತ್ತು....'ತಾ ಉತ್ತರ ಕೊಟ್ಟತ್. `ಹಾಗಾದ್ರೆ ಅದೇ ಥರ ನಿಂಗೆ ಗೊತ್ತಿರೋದನ್ನ ಬರಿ ನೋಡೋಣ...' ಟೀಚರ್ ಹೇಳಿ ಮುಗಿಸುವ ಮೊದಲೇ ಗಣಿ ಪೆನ್ನು ಪುಸ್ತಕ ಹಿಡ್ಕಂಡ್ ಕುದ್ದುಬಿಟ್ಟತ್...10 ನಿಮಿಷಲಿ ಒಂದು ಕಥೆ ಕೂಡ ಬರ್ದ್ ಆತ್...ಅದ್ರ ಹೆಸ್ರು `ಗೊಣ್ಣೆ ಸುರುಕನ ಬೇಟೆ ಪ್ರಸಂಗ' ಜಾನಕಿ ಟೀಚರ್ಗೆ ಹೆಡ್ಡಿಂಗ್ ನೋಡಿ ನಗು ಬಾತ್. ಗಣಿ ಬರ್ದದನ್ನ ಪೂತರ್ಿ ಓದಿದೊ. ಪ್ರತೀ ವಾಕ್ಯಲೂ ತಪ್ಪು ತಪ್ಪು ಅಕ್ಷರಗ. ಆದ್ರೂ ಅಂವ ಬರ್ದ ಕಥೆ ಓದಿಸಿಕಂಡ್ ಹೋಗುವ ಹಂಗೆ ಇತ್. ತುಂಬಾ ತಮಾಷೆಯ ಬರವಣಿಗೆ ಶೈಲಿ ಗಣಿ ಹತ್ರ ಇರುದನ್ನ ಟೀಚರ್ ಗುರುತಿಸಿದೊ. ಅಲ್ಲಿಂದ ಗಣಿಯ ದೆಸೆನೇ ಬದ್ಲಾಗಿ ಹೋತ್....
ಅದ್ ಗಣಿ ಓದಿದ ಶಾಲೆ. ಅದಕ್ಕೆ 50 ವರ್ಷ ತುಂಬಿತ್ತ್. ಆ ಖುಷಿಗೊಂದು ಸಮಾರಂಭ. ಅಲ್ಲಿ ಗಣಿನೇ ಮುಖ್ಯ ಅತಿಥಿ. ಯಾಕಂದ್ರೆ ಅಂವ ಈಗ ಕನ್ನಡದ ದೊಡ್ಡ ಕಥೆಗಾರ... `ಕಥೆಗಾರ ಶ್ರೀಯುತ ಗಣೇಶ್ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿ ....' ಸ್ವಾಗತ ಭಾಷಣ ಮಾಡುವಂವ ಇನ್ನು ಏನೇನೋ ಹೇಳ್ತಿತ್.... ಮೂಗುನ ಗಣಿ ಈಗ ಬರೀ ಕೈಲಿ ಒರೆಸ್ತಿತ್ಲೆ... ಕೈಗೊಂದು ಬಿಳಿ ವಸ್ತ್ರ ಬಂದಿತ್... ಅಧ್ಯಕ್ಷರ ಕು ರ್ಚಿಲಿ ಕುದ್ದಿದ್ದ ಜಾನಕಿ ಟೀಚರ್ಗೆ ಧನ್ಯತಾಭಾವ...ಕೋವಿ
ಹಿಡಿಯಕ್ಕಾಗಿದ್ದ ಕೈಲಿ ಪೆನ್ನು ಹಿಡಿಸಿದ್ದ ಖುಷಿ ಅವ್ರಲ್ಲಿ ಕಾಣ್ತಿತ್.....
- `ಸುಮಾ'
arebhase@gmail.com
No comments:
Post a Comment