ಅರೆಭಾಷೆ ಕೇಳಿಕ್ಕೆ ಮತ್ತೆ ಮಾತಾಡಿಕೆ ತುಂಬಾ ಒಳ್ಳೇ ಭಾಷೆ.. ಆದ್ರೆ ಇಂದ್ ನಮ್ಮ ಈ ಭಾಷೆ ತುಂಬಾ ಅಪರೂಪ ಆಗ್ತುಟ್ಟು. ಹಂಗಾಗಿ ಇದ್ನ ಉಳ್ಸೊ ಮತ್ತೆ ಬೆಳ್ಸೋ ದೊಡ್ಡ ಹೊಣೆಗಾರಿಕೆ ಈಗ ನಾವು ಹೊತ್ತುಕೊಳೋಕು. ಸಿಟಿ ಹೋಗ್ಲಿ, ಹಳ್ಳಿ ಕಡೆನೂ ಈಗ ಮನೇಲಿ ಮಕ್ಳಿಗೆ ಅರೆಭಾಷೆ ಹೇಳಿಕೊಡ್ತಿಲ್ಲೆ. ಮೊದ್ಲೆಲ್ಲಾ ಸ್ಕೂಲ್ಗಳಲ್ಲಿ ಮಕ್ಕ ಮಕ್ಕ ಸೇರ್ಕಾಕನ ಅರೆಭಾಷೇಲಿ ಮಾತಾಡ್ತಿದ್ದೊ... ಆದ್ರೆ ಇಂದ್ ಕಾನ್ವೆಂಟ್ ಸಂಸ್ಕೃತಿ ಎಲ್ಲದಿಕ್ಕೂ ಮಣ್ಣು ಹಾಕಿಬಿಟ್ಟುಟ್ಟು...
ಇನ್ನ್ ನಮ್ಗೆ ಅರೆಭಾಷೇಲಿ ಏನಾದ್ರೂ ಬರೆಯೋಕು, ಎಂಥದ್ದಾದ್ರೂ ಹೇಳೋಕು ಅಂತ ನೋಡಿರೆ ಒಂದು ಮಾಧ್ಯಮ ಇಲ್ಲೆ... ಹಂಗೆತೇಳಿ ಸೀಮಿತ ಓದುಗ ಇರೋ ನಮ್ಮ ಭಾಷೇಲಿ ಮುದ್ರಣ ಮಾಧ್ಯಮ ಮಾಡ್ದು ಆಥರ್ಿಕವಾಗಿ ಕಷ್ಟದ ಸಂಗತಿ. ಏಕಂದ್ರೆ ನಮ್ಮವು ಈ ಪ್ರಯೋಗ ಮಾಡಿಕೆ ಹೋಗಿ ಕೈಸುಟ್ಟುಕೊಂಡೊಳೊ... ಆದ್ರೆ ಆಕಾಶವಾಣೀಲಿ ಅರೆಭಾಷೆ ಪ್ರಯೋಗ ಯಶಸ್ವಿ ಆಗಿಟ್ಟುತಾ ಹೇಳಕ್. ಮಡಿಕೇರಿ ಆಕಾಶವಾಣೀಲಿ ಸುದ್ದಿಜೊಂಪೆ ಅಂತ ಅರೆಭಾಷೆ ವಾತರ್ೆ ಪ್ರಸಾರ ಆದೆ... ಇದು ತುಂಬಾ ಜನ್ರಿಗೆ ಮುಟ್ತುಟ್ಟು. ಇನ್ನು ಆಗಾಗ ಬೇರೆ ಬೇರೆ ಕಾರ್ಯಕ್ರಮಗನೂ ಬರ್ತಿದ್ದದೆ. ಗೌಡುಗ ಖುಷೀಂದನೇ ಇದ್ನ ಕೇಳಿವೆ...
ಬ್ಲಾಗ್ಲಿ ಕೂಡ ಇಂಥ ಪ್ರಯೋಗ ಆಗೋಕು. ಏಕಂದ್ರೆ ಇಂದ್ ಕಂಪ್ಯೂಟರ್ ಗೊತ್ತಿಲ್ದೆ ಇರೋವು ಕಡಿಮೆ... ಅದ್ರಲ್ಲೂ ಹೆಚ್ಚಿನ ಯುವಜನ ಕಂಪ್ಯೂಟರ್ ಜೊತೆನೇ ಕೆಲ್ಸ ಮಾಡಿವೆ. ಹಂಗಾಗಿ ಬ್ಲಾಗ್ ಬರಹ ತುಂಬಾ ಜನ್ರಿಗೆ ತಲುಪಿದೆ ಅಂತ ನನ್ನ ಅಭಿಪ್ರಾಯ...
ನೀವೂ ಬರೆಯನಿ... ಎಂತದ್ದು ಬೇಕಾರೆ ಆಗಿರ್ಲಿ... ಬರ್ದು ಇಮೇಲ್ ಮಾಡಿ... ಭಾಷೆ ಉಳಿಸೋಕೆ ಇದು ನಮ್ಮ ಅಳಿಲು ಸೇವೆ...
No comments:
Post a Comment