ಕುಶಾಲನಗರ ಹತ್ರ ಇರ್ವ ದುಬಾರೇಲಿ ಒಂದು ಪೊರ್ಲುನ ಕಾರ್ಯಕ್ರಮ ಇತ್. ದಸರಾ ಗೌಜಿ ಮುಗ್ಸಿ ಬಂದ ಆನೆಗ ರಜೆಯ ಮೂಡ್ನಲ್ಲಿದ್ದೊ. ಇವ್ಕೆಲ್ಲಾ ಮನರಂಜನೆ ಕೊಡೋಕಲ್ಲಾ... ಅದ್ಕೆ ಆ ಆನೆಗಳಿಗಾಗಿನೇ ಒಂದು ಫುಟ್ಬಾಲ್ ಮ್ಯಾಚ್ ನಡ್ತ್. ಹೊತಾರೆನೇ ಆನೆಗಳಿಗೆ ಕಾವೇರಿ ಹೊಳೇಲಿ ಸ್ನಾನ ಮಾಡ್ಸಿ, ಹೊಟ್ಟೆತುಂಬಾ ತಿಂಡಿ ಕೊಟ್ಟ್, ಗ್ರೌಂಡ್ಗೆ ತಂದ್ ನಿಲ್ಸಿದ್ದೊ.... ಎಂಸಿ ನಾಣಯ್ಯ ಸೇರ್ದಂಗೆ ದೊಡ್ಡ ದೊಡ್ಡ ನೆಂಟರೆಲ್ಲಾ ಬಂದ ಮೇಲೆ ಆನೆಗಳ ಆಟ ಶುರು ಆತ್. ವಿಶೇಷ ಅಂದ್ರೆ, ಆನೆಗನೇ ನೆಂಟರಿಗೆಲ್ಲಾ ಹೂಮಾಲೆ ಹಾಕಿ ಸ್ವಾಗತ ಮಾಡ್ದೊ.. ಇನ್ ಫುಟ್ಬಾಲ್ ಆಟ ಅಂತೂ ತುಂಬಾ ಲಾಯ್ಕ ಇತ್ತ್. 47 ವರ್ಷದ ವಿಕ್ರಂ ಆನೆನೇ ಟೀಂ ಕ್ಯಾಪ್ಟನ್. ಇದ್ರ ಜೊತೆ ಇನ್ನೂ 11 ಗಂಡಾನೆಗೆ, 5 ಹೆಣ್ಣಾನೆಗ, 3 ಮರಿಯಾನೆಗ ಈ ಆಟದಲ್ಲಿ ಇದ್ದೊ. ಈ ಆನೆಗ ಒಂದರ ಬಾಲ ಒಂದು ಹಿಡ್ಕಂಡ್ ಮಾಡ್ದ ಪಥಸಂಚಲ ತುಂಬಾ ಪೊರ್ಲು ಇತ್ತ್... ಬೇರೆ ಬೇರೆ ಕಡೇಂದ ಬಂದಿದ್ದ ಟೂರಿಸ್ಟ್ನವು ಈ ಆಟನ ನೋಡಿ ಫುಲ್ ಎಂಜಾಯ್ ಮಾಡ್ದೋ...
- ಟಿ ಜಿ ಪ್ರೇಮ್ ಕುಮಾರ್, ಕುಶಾಲನಗರ
ನೀವೂ ಬರೆಯನಿ...
No comments:
Post a Comment