Sunday 30 October 2011

ಹೋರಿ ಶಂಕರ


 ಈಗಂತೂ ಹಸು ಸಾಕುದು ಒಂದೊಳ್ಳೆ ಸಂಪಾದನೆ ದಾರಿ ಆಗ್ತುಟ್ಟು. ದಿನಕ್ಕೊಂದು 10 ಲೀಟರ್ ಹಾಲು ಸಿಕ್ಕಿಬಿಟ್ಟರೆ ಒಳ್ಳೇ ಜೀವನ ಮಾಡಕ್. ಕೆಎಂಎಫ್ ಕೂಡ ಲಾಯ್ಕಲಿ ಪ್ರೋತ್ಸಾಹ ಕೊಡ್ತುಟ್ಟು. ಹಳ್ಳಿ ಹಸುಗಳಿಗೆ ಫಾರೀನ್ ಹಸುಗಳ್ನ ಬ್ರೀಡ್ ಮಾಡ್ಸುದು ಸನಾ ಇದ್ರಲಿ ಒಂದ್... ಇದ್ನ ವೈಜ್ಞಾನಿಕ ರೀತೀಲಿ ಮಾಡಿವೆ. ಅದ್ಕೆತೇಳೀಯೇ ಟ್ರೈನಿಂಗ್ ತಕ್ಕೊಂಡಿರೋವ್ ಇದ್ದವೆ. ಅದೊಂಥರ ನೋಡಿಕೆ ಲಾಯ್ಕ ಇದ್ದದೆ. ಕಬ್ಬಿಣದ ಗೂಡೊಳಗೆ ಹಸುನ ಕೂಡಿ ಹಾಕಿ ಅದು ಬೊಬ್ಬೆ ಹೊಡೀತ್ತಿದ್ದ್ರೂ, ಆ `ಎಕ್ಸ್ಪರ್ಟ್' ಅವ್ನ ಕೆಲ್ಸ ಮುಗ್ಸಿದೆ. ಇಷ್ಟಾದ್ರೂ ತುಂಬಾ ಸಲ ಈ `ಕೃತಕ ಗರ್ಭಧಾರಣೆ' ಫೇಲ್ ಆಗಿಬಿಟ್ಟದೆ ! ಆಗ ನೆನಪಿಗೆ ಬಾದು `ಹೋರಿ ಶಂಕರ' ! ಇಂವ ಇವ್ನ ಹೋರಿ ಹಿಡ್ಕಂಡ್ ಅದೇ ಕಬ್ಬಿಣದ ಗೂಡು ಹತ್ರ ಕಾಯ್ತಿದ್ದದೆ. `ಕೃತಕ ಗರ್ಭಧಾರಣೆ' ಫೇಲ್ ಆದ್ರೆ `ಹೋರಿ ಶಂಕರ'ನ ಹತ್ರ ಹಸುನ ತಕ್ಕೊಂಡು ಹೋದವೆ.... ಅವ್ನ ಹೋರಿ ಹತ್ರ ಹಸುನ ತಕ್ಕೊಂಡು ಹೋದ್ರೆ, ಅದು ಯಾವತ್ತೂ ಫೇಲ್ ಆತ್ಲೆ ! ಅಂಥ `ಹೋರಿ ಶಂಕರ'ಂಗೆ ಮದುವೆ ಆಗಿ 30 ವರ್ಷ ಆಗಿಟ್ಟು.  ಎಂಥೆಂತ ಹಸುಗಳಿಗೆಲ್ಲಾ ಅಂವ ಅವನ ಹೋರಿ ಇಟ್ಕಂಡ್ ಕರು ಕರುಣಿಸಿಯುಟ್ಟು... ಪಾಪ `ಹೋರಿ ಶಂಕರ' ಅವಂಗಿನ್ನೂ ಮಕ್ಕ ಇಲ್ಲೆ....

- `ಸುಮ'
ನೀವೂ ಅರೆಭಾಷೇಲಿ ಬರೆಯನಿ..
arebhase@gmail.com

No comments:

Post a Comment