ಏ ಗೂಡೆ... ನೀನೆಷ್ಟ್ ಪೊರ್ಲು !
ಮೆಲ್ಲೆ ನಡಿನೇ ಗೂಡೇ...
ನಿನ್ನ ಎಳೆ ಕಾಲಿಗೆ ನೋವಾದು...
ಆ ರಸ್ತೇಲಿ ಮಲ್ಲಿಗೆ ಚೆಲ್ಲಿಯೊಳೊ
ಮೇಲೆ ರೇಷಿಮೆ ಹಾಸಿಯೊಳೊ...
ನೀ ಮೆಲ್ಲನೇ ನಡಿನೇ....
ನೀ ಹಂಗೆ ನೋಡಿಕಾದು ಗೂಡೆ...
ನಿನ್ನ ಸಂಪಿಗೆ ಕಣ್ಣು ಬಾಡಿಹೋದು...!
ಆಕಾಶಲಿ ಹುಣ್ಣಿಮೆ ಚಂದ್ರ ನಗಾಡ್ತುಟ್ಟು..
ಭೂಮೀಲಿ ಬೆಳದಿಂಗಳು ಚೆಲ್ಲಾಡ್ಯುಟ್ಟು...
ಕಣ್ಣು ಮುಚ್ಚಿಕನೇ ಗೂಡೆ...
ಏ ಗೂಡೆ ನೀ ಹಂಗೆ ನಗಾಡ್ಬ್ಯಾಡ...
ನಿನ್ನ ಹಲ್ಲಿನ ಹೊಳಪಿಗೆ ಸೂರ್ಯನೇ ಹೆದರಿಟ್ಟು !
ದಾಳಿಂಬೆನೂ ನಾಚಿ ಎಲೆಮರೆಗೆ ಹೋಗಿಟ್ಟು...
ಗೂಡೆ.... ನೀ ನಗಾಡಿಕಾದ್ ...
ಏ ಗೂಡೆ... ನೀನೆಷ್ಟ್ ಪೊರ್ಲು !
ಹಿಂಗೆನೇ ಇರೋಕು ನೀನ್...
ಬೇಕಾರೆ ನನ್ನ ಯವ್ವನನೂ ತಕ... !
- `ಸುಮ'
tumba layaka utto....!
ReplyDelete