ಅಂದ್ ನನ್ನ ಅತ್ತೆ ಮಗ ಚೇತುದು ಮದ್ವೆ. ಎಲ್ಲವೂ ಅದ್ ಇದ್ ಕೆಲ್ಸತಾ, ಆಚೆ ಈಚೆ ಓಡಾಡಿಕಂಡ್ ಇದ್ದೊ.. ಆದರೆ ನಂಗೆ ಅದ್ಯಾವ್ದೂ ನಿಗ ಇತ್ಲ್ಲೆ... ನನ್ನ ಕಣ್ಣ್ ಬೇರೆ ಏನೋ ಹುಡುಕ್ತಾ ಇತ್ತ್.. ಕಣ್ಣ್ ಗೌಡ ಸಮಾಜದ ಗೇಟ್ ಕಡೆಗೆನೇ ಪುನಃ ಪುನಃ ಹೊಗ್ತಿತ್ತ್...ಛೇ!! ಇನ್ನೂ ಯಾಕೆ ಬಾತ್ಲೆ ಅವ್ಳು.. ಚಪ್ಪರಕ್ಕೆ ಬಂದವ್ಳು ಮದ್ವೆಗೆ ಬಾತ್ಲೆತೇಳಿರೆ.. ಅಯ್ಯೋ... ಆ ಕಣ್ಣ್, ಆ ನೋಟ, ಆ ನೆಗೆ.. ಮತ್ತೆ ನೋಡಿಕೆ ಸಿಕ್ಕಿರೆ.. ಛೇ... ನೆನ್ನೆನೇ ಎಲ್ಲಾ ವಿಷ್ಯ ಹೇಳಿ ಬುಡೊಕ್ಕಾಗಿತ್... ಹೌದು.. ಹಿಂದಿನ ದಿನ ಚಪ್ಪರಲಿ ಅವ್ಳು ಯಾಕೆ ನನ್ನ ಕಣ್ಣಿಗೆ ಬೀತ್ತೋ.. ಕಣ್ ಮುಚ್ಚಿರೂ ಅವ್ಳೇ.. ಬುಟ್ರೂ ಅವ್ಳೇ.. ಒಂದೇ ಮಾತ್, ಒಂದೇ ನೋಟ..
ಮನೆ
ತುಂಬಾ ನೆಂಟ್ರ್ ಇದ್ದೊ..
ಬೆಳಿಗ್ಗೆ ಈರುಳ್ಳಿ ಕೊಯ್ಕಂಡ್
ಕುದ್ದಿದ್ದ ನನ್ನ ಮನ್ಸ್
ನ 'ನೋಕಿಯಾ ಸಣ್ಣ
ಪಿನ್ ಚಾರ್ಜರ್ ಉಟ್ಟಾ'
ತ ಒಂದೇ ಒಂದು
ಮಾತ್ ಕೇಳಿ ನೂರು
ಚೂರು ಮಾಡಿ ಹಾಕಿತ್ತ್ ಆ ಗೂಡೆ..
ಲವ್ ಅಟ್ ಫಸ್ಟ್
ಸೈಟ್ ತಾ.. ಹೇಳಿವೆಯಲ್ಲಾ ಹಂಗೆ. 'ಟೀವಿ ಮೇಲೆ ಉಟ್ಟು, ತಕಣಿತಾ ಹೇಳ್ದೆ..
"ಅಡುಗೆಗೆ ಈರುಳ್ಳಿ ಇಲ್ಲದಿದ್ರೂ ನಡ್ದದೆ, ಗೂಡೆನ ಮಿಸ್ ಮಾಡ್ಬೇಡ"ತಾ ಒಳಗೆಂದ ಮನ್ಸ್ ಮತ್ತೆ ಮತ್ತೆ ಹೇಳಿಕೆ ಶುರು ಮಾಡ್ತ್..!! ಈರುಳ್ಳಿನ ಅಲ್ಲೇ ಬುಟ್ಟ್ ಹಿಂದೆ ಹೋದೆ.. ಯಾರೀ ಗೂಡೆ.. ಇಷ್ಟ್ ಚಂದ ಉಟ್ಟಲಾ.. ನಮ್ಮ ನೆಂಟ್ರೇನಾ?.. ಅಲ್ಲ ಬೆಂಗಳೂರ್ ಸೆಟ್ಟಾ?.. ಮತ್ತೆ ಅರೆಭಾಷೆ ಲಾಯ್ಕ ಮಾತಾಡ್ದೆ?.. ಯಾರಪ್ಪ ಇವ್ಳು?.. ಹಿಂಗೆ ನೂರಾರು ಪ್ರಶ್ನೆಗ ತಲೆಲಿ ಬಂದ್ ಬಂದ್ ಹೋಗ್ತಿದ್ದೊ.. ಸೀದಾ ಮನೆ ಒಳಗೆ ಹೋದೆ, ಅವ್ಳ ಹಿಂದೆ.. ಕಣ್ಣ್ ಇಡಿ ರೂಮ್ ನ 3G ಸ್ಪೀಡ್ಲಿ ಸ್ಕ್ಯಾನ್ ಮಾಡ್ತಾ ಇತ್ತ್ , .. ಗೂಡೆ ಟೀವಿ ಹಿಂದೆ ಇದ್ದ ಪ್ಲಗ್ ಗೆ ಚಾರ್ಜರ್ ಹಾಕಿಕೆ ಪರ್ದಾಡ್ತ ಇತ್ತ್.. ಒಳ್ಳೇ ಛಾನ್ಸ್, ಹೆಲ್ಪ್ ಮಾಡನ ತಾ ಇನ್ನೇನ್ ಹೋಕು, ಅಷ್ಟ್ರಲ್ಲಿ ರಶ್ಮಿ ಆಂಟಿ ಪಟ್ ತ ಎಂಟ್ರಿ ಕೊಟ್ಟೊ, "ವಿಕ್ಕಿ, ಇವನ ಒಮ್ಮೆ ಬಾತ್ ರೂಮ್ ಗೆ ಕರಕೊಂಡ್ ಹೋಗು, ಅರ್ಜೆಂಟ್ ಗಡ"ತಾ , ಅವರ ಮೂರು ವರ್ಷದ ಮಂಞ ಶೋಭಿತ್ ನ ನನ್ನ ಕೈಗೆ ಕೊಟ್ಟೊ.. ಛೇ!!ತಾ ಮನ್ಸ್ ಲಿ ಬೈಕಂಡ್ ಅವನ ಕೈ ಹಿಡ್ಕಂಡ್(ಎಳ್ಕಂಡ್) ಹೋದೆ..
ಬೇಗ ಬೇಗ ಕೆಲ್ಸ ಮುಗ್ಸಿ ಬಂದ್ ನೋಡ್ನೆ, ಗೂಡೆ ಕಾವ್ಯಕ್ಕನೊಟ್ಟಿಗೆ ಮಾತಾಡಿಕಂಡ್ ಉಟ್ಟು.. ಕಾವ್ಯ ನನ್ನ ದೊಡಮ್ಮನ ಮಗ್ಳು.. ಕಾವ್ಯಕ್ಕಂಗೆ ಆ ಗೂಡೆನ ಗೊತ್ತಿರ್ದೇನೋ.. ಅವ್ಳ್ನ ಹತ್ರ ಗೂಡೆ ಬಗ್ಗೆ ಕೇಳ್ರೆ ಹೆಂಗೆ... ಬೇಡ..ಬೇಡ.. ಕಾವ್ಯಕ್ಕ ಎಂತಾರೂ ತಿಳ್ಕೊಂಬೊದು.. ಅವ್ಳ ಪ್ರಕಾರ ನಾನ್ ಡೀಸೆಂಟ್ ಹೈದ.. ಹಿಂದಿನ ದಿನ ಎಲ್ಲವೂ ಮಾತಾಡಿಕಂಡ್ ಕುದ್ದಿರ್ಕನ ಸಟ್೯ಫಿಕೇಟ್ ಕೊಟ್ಟುಟ್ಟು.. ಛೇ!! ಬೇಡ ಬೇಡ.. ಮನ್ಸ್ ಲಿ ಮತ್ತೆ ಪ್ರಶ್ನೆಗ.. ಅಷ್ಟ್ರಲಿ ಗೂಡೆ ಅಲ್ಲಿಂದ ಸ್ಟೇರ್ಕೇಸ್ ಮೆಟ್ಲ್ ಹತ್ತಿಕೊಂಡು ಮೇಲೆ ರೂಮಿಗೆ ಹೋಗ್ತಾ ಇತ್ . ಈಗಾರ್ ಮಾತಾಡ್ಸನ ತಾ ಹೇಳಿ ಅವಳ ಹಿಂದೆ ಹೋಕೆ ಹೆಜ್ಜೆ ಮುಂದೆ ಇಟ್ಟೆ ಅಷ್ಟೆ.. "ಮಿಂಚಾಗಿ ನೀನು ಬರಲು,ನಿಂತಲ್ಲಿಯೇ ಮಳೆಗಾಲ...." ನನ್ನ ಫೋನ್ ರಿಂಗ್ ಆತ್.. ಪವಿ ಅಣ್ಣ ಕಾಲ್.. ವಿಕ್ಕಿ, ಹಂದಿ ಮಾಂಸ ರೆಡಿ ಆಗುಟ್ಟು ಗಡ.. ಓಮ್ನಿ ತಕಂಡ್ ಹೋಗು, ಐದ್ ನಿಮ್ಸಲಿ ಬರೋಕು, ಅಡಿಗೆಯವು ಅರ್ಜೆಂಟ್ ಮಾಡ್ತ ಒಳೊ"..( ನಂಗೆ ಯಾಕಪ್ಪ ಫೋನ್ ರಿಸೀವ್ ಮಾಡ್ದೆತಾ ಆತ್.) ಬೇರೆ ದಾರಿ ಇಲ್ಲೆ.. ಬಂದ್ ನೋಡಿಕಣನತಾ ಬೇಗ ಹೋಗಿ ಬೇಗ ಬಂದೆ.. ಬಾಕನ ದಾರಿಲಿ ಸನಾ ಅವ್ಳ್ ದೆ ಯೋಚನೆ, ಹೋದ ತಕ್ಷಣ ಮಾತಾಡ್ಸಕು ತಾ ಪ್ಲಾನ್ ಮಾಡಿಕಂಡೇ ಬಂದ್ದಿದ್ದೆ.. ಬಂದ ತಕ್ಷಣ ಒಳಗೆ ಹೋಗಿ ಇನ್ನೊಮ್ಮೆ ಸ್ಕ್ಯಾನ್ ಮಾಡ್ದೆ.. ಒಳಗೆ ಎಲ್ಲೂ ಕಂಡತ್ತ್ಲೆ.. ಸೀದಾ ಮನೆ ಹಿಂದೆ ಹೋದೆ.. ನೋಡ್ರೆ ಅವ್ಳು ಒಬ್ಳೆ ಬಟ್ಟೆ ಒಗಿವ ಕಲ್ ಹತ್ರ ದೀಪಗಳ್ನ ತೊಳ್ಕಂಡ್ ನಿತ್ತುಟ್ಟು.. ಇ ಛಾನ್ಸ್ ಬುಟ್ರೆ ಪುನಃ ಸಿಕ್ಕುದ್ಲೆ ತಾ ಸೀದಾ ಹೋದೆ ಕಲ್ ಹತ್ರ... ನಾನ್ ಹೋಗಿ ನಿಲ್ಲುದು, ಆ ಕಡೆಂದ ಬಕೆಟ್ ಲಿ ನೀರ್ ಹಿಡ್ಕಂಡ್ ಮೇಘ ಕಲ್ಲು ಹತ್ರ ಬಾದು ಸರಿ ಆತ್.. ಬಂದವ್ಳೆ "ಎಂಥ ವಿಕ್ಕಿ ಅಣ್ಣ"ತಾ ಕೇಳ್ತ್...ನಾನ್ "ನಿನ್ನ ಅಮ್ಮ ಕರಿತುಟ್ಟು, ಹೋಕಡ" ತಾ ಹೇಳ್ದೆ.. ಆಗ ಅವ್ಳು "ಹೌದಾ, ಆಗ ನೀನ್ ಈ ಅಕ್ಕಂಗೆ ಹೆಲ್ಪ್ ಮಾಡ್ ಸ್ವಲ್ಪ, ಈಗ ಬನ್ನೆ"ತಾ ಹೇಳಿ ಓಡ್ತ್...
( ನಾ ಮನ್ಸ್ ಲೆ ಹೇಳಿಕಂಡೆ "ಅಕ್ಕ ಅಲ್ಲ ಮೇಘ, ಅತ್ತಿಗೆ")....
"ಹಾಯ್".. ನಾನ್ ಧೈರ್ಯ ಮಾಡಿ ಹೇಳ್ದೆ... ಅವ್ಳ ಕಡೆಂದ ಸ "ಹಾಯ್" ವಾಪಾಸ್ ಬಾತ್..
ನಾನ್:- ಚಾರ್ಜರ್ ಹೆಸ್ರ್
ಎಂತ,
ಅವ್ಳು:- ಎಂತ???!!
ನಾನ್:- ಆಆಆಆ.. ಸಾರಿ,
ಸಾರಿ,.. ನಿನ್ನ ಹೆಸ್ರ್
ಎಂತ...
ಅವ್ಳು:- ಪ್ರಿಯಾ!! ನಿಂದ್ ??
(ಅವ್ಳು
ದೀಪನ ಉಜ್ತಾ ಇತ್ತ್,
ನಾ ನೀರ್ ಹಾಕ್ತಾ
ಇದ್ದೆ..)
ನಾನ್:- ನನ್ನ ಹೆಸ್ರ್
ಲತನ್.. ಮನೆಲಿ ಕರಿಯೊದು
ವಿಕ್ಕಿತಾ ... ನಿಮ್ಮ
ಮನೆ ಎಲ್ಲಿ??
ಅವ್ಳು:- ಮೂರ್ನಾಡ್.. ನಿಮ್ಮದ್??
ನಾನ್:-ಸುಂಟಿಕೊಪ್ಪ..
(ಮೇಘ ವಾಪಸ್ ಬಾಕೆ ಮುಂದೆ ಹೇಳಿಕೆ ಇರುವ ವಿಷ್ಯನೆಲ್ಲ ಹೇಳೊಕು, ಅಟ್ಲಿಸ್ಟ್ ಫೋನ್ ನಂಬರ ಆದ್ರೂ ತಕಣೊಕುತಾ ಮನ್ಸ್ ಲಿ ಲೆಕ್ಕಾಚಾರ ಹಾಕಿದೆ).. ,
ನಾನ್:- ನಾನ್ ನಿಂಗೆ ಎಂತೊ ಹೇಳೊಕು..
ಅವ್ಳು:-ಎಂತ?? ಹೇಳಿ!!
ನಾನ್:- ಎಂತ ಅಂದರೆ...
ನಿನ್ನ ಫಸ್ಟ್ ಟೈಮ್
ನೋಡ್ಕನ ನೇ... ನಂಗೆ..
ಅದ್.... ಹಂಗೆ.. ನೊಕಿಯಾ.
ಅಲ್ಲ.. ನೋಡಿ... ಅದ್...
(ಫಸ್ಟ್
ಟೈಮ್ ನನ್ನ ನಾಲಿಗೆ
ಕಂಟ್ರೋಲ್ ತಪ್ಪಿದ್)
ಅವ್ಳು:- (ಆ ಕಡೆ
ತಿರ್ಗಿ ಒಮ್ಮೆ ನೆಗಾಡಿ)
ಎಂತತಾ ಹೇಳಿ...
ನಾನ್:- ನಾನ್ ನಿನ್ನ…
ಲ........ ನಿನ್ನ ಫೋನ್
ನಂಬರ್ ಕೊಡು!! (ನಾನ್
ಏನೋ ಅವಳ ಒಂದು
ಕಿಡ್ನಿ ಕೇಳ್ದೆ ತಾ ಹೇಳುವಂಗೆ
ನೋಡ್ತ್ ಒಮ್ಮೆ, ಅವ್ಳು
ಇನ್ನೇನೋ ಮಾತಾಡೊಕು, ಅಷ್ಟರಲಿ
ಮೇಘ ಬಾತ್)
ಮೇಘ:- ಅಣ್ಣಾ,.. ಅಂಕಲ್ ಕರಿತಾ ಒಳೊ.. ಕಾರು ಅಡ್ಡ ನಿಲ್ಸಿ ಬಂದೊಳನಾ.. ತೆಗಿಯೊಕು ಗಡ...
ನಾನ್ ಸೀದ ಹೋದೆ.. ಮತ್ತೆ ಪುನಃ ಟೈಮೇ ಸಿಕ್ತ್ಲೆ.. ಅದ್ ಇದ್ ಕೆಲ್ಸ, ಓಡಾಟ.. ಅದೇ ಆತ್.. ಆದ್ರೆ ಆ ಓಡಾಟ, ಪರ್ದಾಟದ ಮಧ್ಯಲಿ ಸುಮಾರು 20-25 ಸಲ ಆದರೂ ಅವ್ಳು ನನ್ನ, ನಾನ್ ಅವ್ಳ್ನ ನೋಡ್ದು .. ಸ್ಮೈಲ್ ಕೊಡ್ದು.. ಕೈ ಸನ್ನೆ, ಕಣ್ ಸನ್ನೆ ಎಲ್ಲಾ ನಡ್ತ್... ಚಪ್ಪರ ಮುಗ್ದ್ ನೆಂಟ್ರೆಲ್ಲ ಕರಗಿದೊ.. ನಾನ್ ತುಂಬಾ ಸಲ ನಂಬರ್ ಕೇಳ್ದೆ.. ಆದರೆ ಹಂಗೆ ಹಿಂಗೆ ತಾ ಆಟ ಆಡ್ಸಿತ್.. ಕಡೆಗೆ ನಾಳೆ ಕೊಟ್ನೆತಾ ಹೇಳ್ತ್.. ಸರಿ ತಾ ಹೇಳಿ ನಾನ್ ಸುಮ್ಮನೆ ಆದೆ.. ನಂಬರ್ ಕೊಡದೆ ಇರಿಕಿಲೆತಾ ನಂಬಿಕೆ ಅಂತೂ ಇತ್ತ್ ನಂಗೆ...
ಸಂಜೆ ಆತ್... ಅಷ್ಟೊತ್ತು ಕಣ್ಣಿಗೆ ಆಗಾಗ ಬೀಳ್ತ ಇದ್ದ 'ಪ್ರಿಯ', "ನನ್ನ ಪ್ರಿಯ" ಎಲ್ಲಿ ನೋಡ್ರೂ ಕಂಡತ್ಲೆ.. ಅಲ್ಲಿ ಇಲ್ಲಿ, ಒಳಗೆ ಹೊರಗೆ, ಹಿಂದೆ ಮುಂದೆ ಎಲ್ಲಾ ಕಡೆ ಸ್ಕ್ಯಾನ್ ಮಾಡ್ದೆ.. ಅದರೆ ಪ್ರಿಯಾ ಕಾಂಬಕ್ಕೆ ಸಿಕ್ಕಿತ್ಲೆ.. ಸ್ಲಲ್ಪ ಹೊತ್ತಾದ ಮೇಲೆ ಮೇಘಾ ಚಾರ್ಜರ್ ತಂದ್ ಕೊಟ್ಟತ್.. 'ಆ ಅಕ್ಕ ಎಲ್ಲಿ' ತಾ ಕೇಳ್ದೆ.. 'ಮನೆಗೆ ಹೋದೊ'ತಾ ಹೇಳ್ತ್.. 'ನಾಳೆ ಬಂದವೆನಾ' ತಾ ಕೇಳ್ದೆ.. ಅಷ್ಟಕ್ಕೆ ಮೇಘಾ "ಯಾಕಪ್ಪ, ಏನ್ ಕಥೆ, ಹಾ?? ತಾ ಅನುಮಾನಲಿ ಕೇಳ್ತ್.. ಏನಿಲ್ಲೆ ತಾ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ದೆ.. ………………….
ಹಿಂದಿನ ದಿನದ ನೆನಪುಗ ಪಟ ಪಟನೆ ಬಂದು ಹೋತ್ ತಲೆಲಿ...ಟೈಮ್ 10:30 ಆತ್.. ಇನ್ನೂ ಯಾಕೆ ಬಾತ್ಲೆ ಈ ಗೂಡೆ..(ಕಣ್ಣ್ ಮತ್ತೆ ಮತ್ತೆ ಗೇಟ್ ಕಡೆಗೆನೇ ಹೋಗ್ತಿತ್).. ಅಷ್ಟರಲ್ಲಿ ಅಮ್ಮ ಬಂದ್ " ಮಾವ ಬಸ್ ಸ್ಟಾಂಡ್ಲಿ ಒಳೊ ಗಡ, ಒಮ್ಮೆ ಹೋಗಿ ಕರ್ಕಂಡ್ ಬಾ" ತ ಹೇಳ್ದೊ.. ಬಂದವೆ ಬುಡಮ್ಮ, ಅದಿಕೆ ನಾನ್ ಬೇರೆ 'ಕೆಲ್ಸ' ಎಲ್ಲ ಬುಟ್ಟ್ ಹೋಕಾ? ಈಗ.. 'ಬ್ಯುಸಿ' ಇರ್ಕನ ನಿಂದ್ ಒಂದು ತಾ ಮುಖ ತಿರ್ಗಿಸಿದೆ.. ಅದಿಕೆ ಅಮ್ಮ "ಡೊಡ್ಡ ಬ್ಯಾಗ್ ಉಟ್ಟು ಗಡ, ಒಮ್ಮೆ ಹೋಗಿ ಬಾ, ಬೇಗ" ತಾ ಹೇಳ್ತ್.. ಪವಿ ಅಣ್ಣನ ಹತ್ರ ಜೀಪ್ ಕೀ ತಕ್ಕಂಡ್ (ಮಾವಂಗೆ ಮನ್ಸ್ ಲೇ ಬೈಕಂಡ್) ಬಸ್ ಸ್ಟಾಂಡ್ ಗೆ ಹೋದೆ.. ಮಾವ ಅರ್ಧ ಕೇಜಿ ಪ್ಲಾಸ್ಟಿಕ್ ಕವರ್ ಥರ ಇದ್ದ "ದೊಡ್ಡ" ಬ್ಯಾಗ್ ಹಿಡ್ಕಂಡ್ ಡೈರಿ ಹತ್ರ ನಿಂತ್ತಿದ್ದೊ..ಹೋಗಿ ಜೀಪ್ ನಿಲ್ಸಿದಂಗೆ ಬಂದ್ ಹತ್ತಿದ್ದೊ.. "ಎಂಥರ, ದೊಡ್ಡ ಮನ್ಸ" ತಾ ಅವರ ಮಾಮುಲಿ ಗತ್ತ್ ಲಿ ಕೇಳ್ದೊ.. "ಹೇಳಿ ಮಾವ" ತಾ ಹೇಳಿ ಸುಮ್ಮನೆ ಆದೆ.. ಕಳ್ದ ವರ್ಷ ತಾತನ ತಿಥಿ ದಿನ ಯಾವ್ದೊ ಸಣ್ಣ ವಿಷ್ಯಕ್ಕೆ ನಂಗೂ ಮಾವಂಗೂ ಜೋರು ಜೋರು ಮಾತ್ ಆಗಿತ್ತ್.. ಅದರ ಮೇಲೆ ನಮ್ಮಿಬ್ಬರಿಗೆ ಅಷ್ಟಕ್ಕೆ ಅಷ್ಟೇ.. ಜೀಪ್ ನ ಐಬಿ ರೋಡ್ಂದ ಟರ್ನ್ ಮಾಡಿ apmc ಹಾಲ್ ರೋಡ್ ಲಿ ತಕ್ಕಂಡ್ ಹೋಗ್ತಾ ಇದ್ದೆ. ಮುಂದೆ ಓಂದಷ್ಟ್ ದೂರಲಿ ಪ್ರಿಯ ಅವ್ಳ ಅಮ್ಮನೊಟ್ಟಿಗೆ ನಡ್ಕಂಡ್ ಹೊಗ್ತಾ ಇತ್ತ್... ಅವರ ಹತ್ರನೇ ಹೋಗಿ ಬ್ರೇಕ್ ಹಾಕಿದೆ, " ಸಮಾಜಕ್ಕೆ ಅಲಾ ಆಂಟಿ, ಬನ್ನಿ" ತಾ ಹೇಳ್ದೆ.. ಹಿಂದೆ ಹತ್ತಿದೊ ಅಮ್ಮ ಮಗ್ಳು.. ಕನ್ನಡಿ ನೋಡ್ದೆ, ಪ್ರಿಯಾ ನಾ ನೋಡಿಕೆ ಮುಂದೆನೇ ಕನ್ನಡಿ ನೋಡ್ತಿತ್.. ಒಂದು ಸಣ್ಣ ನಗೆ ಅವಳ ಮುಖಲಿ, ನಾನೂ ನಗಾಡ್ದೆ..ನೀಲಿ ಸೀರೆಲಿ, ಕೂದ್ಲು ಹರ್ಡಿಕಂಡ್, ತುಂಬಾ ಲಾಯ್ಕ ಕಾಣ್ತಿತ್ ಅವ್ಳು.. ಸಮಾಜಲಿ ಎಲ್ಲರ್ನೂ ಇಳ್ಸಿದೆ, ಎಲ್ಲವೂ ಹಾಲ್ ಒಳಗೆ ಹೋದೊ.. ಟೈಮ್ 11 ಗಂಟೆ ಆಗಿತ್ತ್.. ಪುನಃ ನಂದು ಪ್ರಿಯಂದ್ ಶುರು ಆತ್, ನಗೆ, ಕೈ ಭಾಷೆ, ಕಣ್ ಭಾಷೆ, ಇತ್ಯಾದಿ.. ಇತ್ಯಾದಿ.. ಸ್ವಲ್ಪ ಹೊತ್ತಾಕನ ಸ್ನ್ಯಾಕ್ಸ್ ಕೊಡಿಕೆ ಶುರು ಮಾಡ್ದೊ.. ಪ್ರಿಯಾ ಹೋಗಿ ಕಬಾಬ್ ಸರ್ವ್ ಮಾಡಿಕೆ ನಿಂತ್ಕಂಡತ್. ಅವ್ಳ ಪಕ್ಕಲೇ ಪೋರ್ಕ್ ಸರ್ವ್ ಮಾಡಿಕಂಡ್ ಒಬ್ಬ ಆಂಟಿ ನಿಂತ್ತಿದ್ದೊ, "ಕೊಡಿ ಆಂಟಿ, ನಾ ಸರ್ವ್ ಮಾಡ್ನೆ" ತಾ ಅವರ ಜಾಗಲಿ ನಾ ನಿತ್ಕಂಡೆ.. ಸರ್ವ್ ಮಾಡಿಕಂಡೇ ನಮ್ಮ ಮಾತ್ ಶುರು ಆತ್..
ನಾನ್:- ಏನ್ ಲೇಟ್??
ಅವ್ಳು:- ಮೂರ್ನಾಡ್ಂದ ಬಾದು
ಬೇಡನಾ? ..
ನಾನ್:- ಹಹಾ.. ನಂಬರ್
ಕೊಟ್ನೆತಾ ಹೇಳ್ದ
ಅಲ ನೆನ್ನೆ.. ಕೊಡು
ಈಗ..
ಅವ್ಳು:- ಓ......! ಕೊಟ್ನೆ
ತ ಹೇಳ್ರೆ, ಕೊಟ್ಟೆ
ಕೊಡೊಕಾ?
ನಾನ್:- ಮತ್ತೆ.. ನೆನ್ನೆಂದ
ಎಷ್ಟ್ ಸಲ ನೆನ್ಸಿಕಂಡೆ
ಗೊತ್ತಾ ನಿನ್ನ ?
ಅವ್ಳು:- ಯಾಕೊ??
ನಾನ್:- "ಚಾರ್ಜರ್ ಬೇಕಿತ್ತ್"..
ಅದಿಕೆ..
(ಪುನಃ ಅವ್ಳ ಒಂದು ಕಿಡ್ನಿ ಕೇಳ್ದೆ ತಾ ಹೇಳುವಂಗೆ ಒಮ್ಮೆ ನೋಡ್ತ್, ಅವು ನಿರೀಕ್ಷೆ ಮಾಡ್ದ ಉತ್ತರ ನಮ್ಮ ಕಡೆಂದ ಬಾತ್ಲೆ ತೇಳಿರೆ ಗೂಡೆಗಳಿಗೆ ಸಿಟ್ಟ್ ಬಾದು ಮಾಮುಲಿ ಅಲಾ)
ಅವ್ಳು:- ಬರೀ ಅಷ್ಟಕ್ಕೆನಾ?
ನಾನ್:- ಅಲ್ಲ.. ನೀ ತಪ್ಪು
ತಿಳ್ಕಂಬಲೆತಾ ಆದರೆ
ನಿಂಗೆ ಎಂತೊ ಹೇಳೊಕು!!
ಅವ್ಳು:- ಎಂಥ? ಹೇಳ್!
ಹೊಸ ಚಾರ್ಜರ್ ಬೇಕ?
(ಬಾಯಿಗೆ ಕೈ ಇಟ್ಕಂಡ್
ಪಿಸಿ ಪಿಸಿತಾ ನಗಾಡ್ತ್,
ಗೂಡೆಗಳ ಕೆಲವು ಜೋಕ್
ಗಳಿಗೆ ಅವೇ ನಗಾಡೊಕು,
ನಮಿಗೆ ನಗೆ ಬಾಲೆ)
ನಾನ್:- ಅಲ್ಲ.. ಐ ಲವ್
ಯು!!!
ಅವ್ಳು:- ಹಾಂ...!! ...(ಪುನಃ ಒಂದು "ಕಿಡ್ನಿ" ನೋಟ..) ನನ್ನ ನಂಬರ್ ನ ಒಂದು ಟಿಷ್ಯು ಪೇಪರ್ ಮೇಲೆ ಬರ್ದ್ ಅವ್ಳ ಕೈಗೆ ಕೊಟ್ಟ್ ಸೀದಾ ಬಂದೆ..
ಛೇ!! ನಾ ತಪ್ಪ್ ಮಾಡ್ಡೆ ನಾ?? ಅವ್ಳ ಅಭಿಪ್ರಾಯ ಕೇಳದೆ ನಾ ಹಿಂಗೆ ಮಾಡ್ದ್ ಸರಿನಾ ? ಮತ್ತೇ ಮನ್ಸ್ ಲಿ ಪ್ರಶ್ನೆಗ... ಆದು ಆಗಲಿ, ಹೋಗೆ ಬುಟ್ನೆ ಅವ್ಳ ಮುಂದೆತಾ ಹೇಳಿ ಪುನಃ ಲೇಡಿಸ್ ಕೌಂಟರ್ ಹತ್ರ ಹೋದೆ..ನೋಡ್ರೆ ಅಲ್ಲಿ ಪ್ರಿಯಾ ಇಲ್ಲೆ, ಆಚೆ ಈಚೆ ಎಲ್ಲಾ ನೋಡ್ದೆ.. ಎಲ್ಲೂ ಇಲ್ಲೆ.. "ಒಂದೇ ಸಮನೆ ನಿಟ್ಟುಸಿರು, ಪಿಸುಗುಡುವ ನೀರವ ಮೌನ...." ರಿಂಗ್ ಟೋನ್ ಚೇಂಜ್ ಮಾಡಿದ್ದೆ.. ಪೋನ್ ರಿಂಗ್ ಆತ್.. ಯಾವ್ದೋ ಹೊಸ ನಂಬರ್.. ರಿಸೀವ್ ಮಾಡಿ ಕಿವಿಗಿಟ್ಟೆ.. "ಈ ಕಡೆ ಒಳೆ ನೋಡು, ಹಿಂದೆ ತಿರ್ಗ್" ಆ ಕಡೆಂದ ಪ್ರಿಯನ ವಾಯ್ಸ್.. ಅಬ್ಬಾ!! ಆಗ ಆದ ಖುಷಿನ ಹೇಳಿಕೆ ಆಲೆ.. ಪಿಯುಸಿ ನ ಎಂಟ್ನೆ ಅಟಂಪ್ಟ್ ಲಿ ಪಾಸ್ ಮಾಡಿರ್ಕನ ಸ ನಾ ಅಷ್ಟ್ ಖುಷಿ ಪಟ್ಟಿತ್ಲೆ... ಪ್ರಿಯಾ ಹತ್ರ ಹೋದೆ, ಅವ್ಳೊಟ್ಟಿಗೆ ಇನ್ನಿಬ್ಬರು ಗೂಡೆಗ ಇದ್ದೊ.. "ವಿಕ್ಕಿ, ಇವು ನನ್ನ ಕಸಿನ್ಸ್.. ಗಾನ ಮತ್ತೆ ಹರ್ಷಿತಾ"... ಇಬ್ಬರೂ ಕೈ ಕೊಟ್ಟೊ.. ನಾನೂ ಕೊಟ್ಟೆ.. "ಇವು ನನ್ನ ಹೊಸ ಫ್ರೆಂಡ್, ವಿಕ್ಕಿತಾ "... ನನ್ನ ಅವ್ಕೆ ಪರಿಚಯ ಮಾಡ್ಸಿತ್.. ಸ್ವಲ್ಪ ಹೊತ್ತು ಮಾತಾಡಿಕಂಡ್ ಅಲ್ಲೇ ಇದ್ದೊ.
( ಗಾನ ಮತ್ತೆ ಹರ್ಷಿತಾ ನೋಡಿಕೆ ಚಂದ ಇದ್ದೊ.. ಆದರೂ ನನ್ನ ಕಣ್ಣಿಗೆ ಅವು ಕರಡಿಗಳಂಗೆ ಕಾಣ್ತಿದ್ದೊ.. ಶಿವ ಪೂಜೆ ಮಧ್ಯ ಕರಡಿಗಳಂಗೆ...)
ಮತ್ತೆ ನಾನ್ ಮಧ್ಯಾಹ್ನ ಊಟದ ಅರೆಂಜ್ಮೆಂಟ್, ಸರ್ವಿಂಗ್, ಅದ್ ಇದ್ ತಾ ಬ್ಯುಸಿ ಆದೆ.. ಅದ್ರ ಮಧ್ಯೆ ಪ್ರಿಯಂದು ನಂದು ನೋಡ್ದು, ನೆಗಾಡ್ದು, ಮಿಸ್ ಕಾಲ್ ಕೊಡ್ದು ನಡ್ದೆ ಇತ್ತ್... ನೆಂಟ್ರೆಲ್ಲಾ ಊಟ ಮಾಡ್ತ ಇದ್ದೊ.. ಊಟ ಮುಗ್ಸಿದವೆಲ್ಲಾ ಮೆಲ್ಲೆ ಮೆಲ್ಲೆ ಹೊರಡ್ತಾ ಇದ್ದೊ.. ಮದ್ವೆ ಸಮಾರಂಭ ನಿಧಾನಕ್ಕೆ ಕರಗ್ತಾ ಇತ್ತ್... ಹತ್ರದ ನೆಂಟ್ರೆಲ್ಲಾ ಹೆಣ್ಣ್ ಇಳ್ಸುವ ಶಾಸ್ತ್ರಕ್ಕೆ ರೆಡಿ ಆಗ್ತಿದ್ದೊ.. ಮದ್ವೆ ಗೂಡೆ ಮರ್ಡಿಕೆ ರೆಡಿ ಆಗಿತ್ತ್ ( ಮನೆಯವು ಬೇಡತಾ ಹೇಳ್ರೂ ತಾವೇ ಇಷ್ಟಪಟ್ಟ್ ಲವ್ ಮ್ಯಾರೇಜ್ ಆಕಾಕನ ಗೂಡೆಗ ಮರ್ಡುದು ಎಂತಕೆತಾ ಹೇಳುದೇ ನನ್ನ ಪ್ರಶ್ನೆ)
ಪ್ರಿಯಾ ಮತ್ತೆ ಕಾಣೆ ಆಗಿತ್ತ್.. ಅ ಕಡೆ, ಈ ಕಡೆ, ಹಿಂದೆ ಮುಂದೆ ಎಲ್ಲಾ ನೊಡ್ದೆ.. ಎಲ್ಲೂ ಕಾಣ್ತಿಲ್ಲೆ ಅವ್ಳು... "ಒಂದೇ ಸಮನೆ ನಿಟ್ಟುಸಿರು, ಪಿಸುಗುಡುವ ನೀರವ ಮೌನ" ಮತ್ತೆ ಫೋನ್ ರಿಂಗ್ ಆತ್.. ಅಮ್ಮ ಕಾಲಿಂಗ್. ರಿಸೀವ್ ಮಾಡ್ದೆ..
ಅಮ್ಮ:-"ಎಲ್ಲಿ ಒಳ, ಒಮ್ಮೆ ಹಾಲ್ ಒಳಗೆ ಬಾ"
ನಾನ್:- ಎಂತಮ್ಮ ನಿಂದ್
ಬ್ಯುಸಿ ಇರ್ಕನ..
ಅಮ್ಮ:- ಒಮ್ಮೆ ಬಾ ಮರಾಯ..
ಒಂದು ಆಂಟಿನ ಪರಿಚಯ
ಮಾಡ್ಸಿನೆ, ಕೇಳ್ತಾ ಒಳೊ
ನಿನ್ನ, ಬೇಗ ಬಾ..
ಈ ಅಮ್ಮಂದ್ ಒಳ್ಳೆ ಕಥೆ, ಇನ್ನು ಹೋತ್ಲೆತಾ ಹೇಳಿರೆ ಸರಿ ಆದ್ಲೆ ತಾ ಹೇಳಿ ಒಳಗೆ ಹೋದೆ.. ಆ ಸೀನ್ ನೋಡಿ ಶಾಕ್ ಆದೆ!!
ಅಮ್ಮ ಪರಿಚಯ ಮಾಡ್ಸೊಕುತಾ ಇದ್ದ ಆಂಟಿ ಬೇರೆ ಯಾರೂ ಅಲ್ಲ.. ಪ್ರಿಯಾನ ಅಮ್ಮ.. ದೂರಂದ ಆ ಸೀನ್ ನೋಡಿಕಂಡ್ ಒಳಗೊಳಗೆ ಖುಷಿ ಪಟ್ಟ್ ಕಂಡೇ ಹೋದೆ.. ನನ್ನ ಅಮ್ಮ ಮತ್ತೆ ಅವ್ಳ ಅಮ್ಮ ಮಾತಾಡ್ತ ಇದ್ದೊ.. ಪಕ್ಕಲೇ ಪ್ರಿಯಾ ನಿಂತ್ಕಂಡ್ ಇತ್ತ್.. ನಾನ್ ಹತ್ರ ಹೋದೆ..
ಅಮ್ಮ:- ರಾಧಕ್ಕ.. ನನ್ನ
ಮಗ.. ವಿಕ್ಕಿ..
ನಾನ್:- ನಮಸ್ತೆ
ಆಂಟಿ..
ಪ್ರಿಯನ ಅಮ್ಮ:- ಇವನೇ
ನಮ್ಮನ ಕರ್ಕೊಂಡ್ ಬಂದದ್
ಹೇಮ.. ಗೊತ್ತೇ ಆತ್ಲೆ
ನೋಡು, ಸಣ್ಣದರ್ಲಿ ನೋಡ್ದ್
ಅಲ..
ಅಮ್ಮ:- ಹಾ.. ಮಕ್ಕ
ಬೆಳಿಯೊದೇ ಗೊತ್ತಾಲೆ..
ಪ್ರಿ.ಅಮ್ಮ:- ಹೌದೌದು..
ವಿಕ್ಕಿ ಎಂಥ ಮಾಡ್ತ
ಒಳ ಈಗ??
ನಾನ್:- ('ಸದ್ಯಕ್ಕೆ ನಿಮ್ಮ ಮಗಳ್ನ ನೋಡ್ತಾ ಒಳೆತಾ ಮನ್ಸ್ ಲಿ ಹೇಳಿಕಂಡೆ) ಹಾ... ಡಿಪ್ಲೊಮೊ ಮುಗ್ಸಿ ಜಾಬ್ ಗೆ ಟ್ರೈ ಮಾಡ್ತ ಒಳೆ ಆಂಟಿ..
ಪ್ರಿ.ಅಮ್ಮ:- ಹೌದಾ..
ಸರಿ ಸರಿ.. ಒಳ್ಳೆದಾಗಲಿ..
(ಪ್ರಿ.ಅಮ್ಮ ಅರ್ಜೆಂಟ್
ಲಿ ಇದ್ದೊ ಕಂಡದೆ)
ಸರಿ ಹೇಮ.. ನಾವು
ಹೊರ್ಟವೆ ಆಗ..
ಅಮ್ಮ:- ಸರಿ, ಸರಿ..ಅಕ್ಕ..
ಲೇಟ್ ಆತ್ ಅಲಾ..
(ಪ್ರಿಯನ ಅಮ್ಮ ಅವರ
ಬ್ಯಾಗ್ಂದ ಎಂತೊ ಹೊರಗೆ
ತೆಗ್ದೊ.. ನಾನ್ ಎಂತಪ್ಪ
ಅದ್ ತ ನೋಡ್ದೆ..ಕವರೊಳಗೆ
ಇತ್ತ್.. ನಂಗೆ ಗೊತ್ತಾತ್ಲೆ..)
ಪ್ರಿ. ಅಮ್ಮ:- ಹೇಮಾ,
ಮದ್ವೆ... ಮನೆಯವೆಲ್ಲಾ ಬರೊಕು,
ದಿನ ಮುಂಚಿತವಾಗಿ ಬರೊಕು..
ಆತಾ.. ಇನ್ನು ಸರಿ
15 ದಿನಕ್ಕೆ..
ನಾನ್:- ಯಾರ ಮದ್ವೆ
ಆಂಟಿ..
ಪ್ರಿಯನ ಅಮ್ಮ:- ಇವ್ಳ್ದೆ..
ನನ್ನ ಮಗ್ಳು.. ಪ್ರಿಯಂದ್...
(ಢಮಾರ್! ತಾ ಒಂದು
ಶಬ್ದ ಬಾತ್.. ಎಲ್ಲರ
ಪ್ರಕಾರ ಅದ್ ಅಡುಗೆ
ಮನೇಲಿ ದೊಡ್ಡ ಪಾತ್ರೆ
ಬಿದ್ದದ್.. ಆದ್ರೆ ನಂಗೆ
ಅದ್ ನನ್ನ ಹ್ರದಯ
ಬ್ಲಾಸ್ಟ್ ಆದ್..) ನನ್ನ
ಅವಸ್ಥೆ ನೊಡ್ದ
ಪ್ರಿಯನ ಮುಖಲಿ ಅದೇನೊ ಸಾಧನೆ ಮಾಡ್ದಂಗೆ, ನನ್ನ ಗೇಲಿ ಮಾಡ್ದಂಗೆ ಒಂದು ನಗೆ... (ಗೂಡೆಗಳಿಗೆ ಆಟ ಆಡಿಕೆ ಮನೇಲಿ ಕೇಳಿದೆಲ್ಲಾ ತೆಗ್ದ್ ಕೊಟ್ಟವೆ.. ಆದರೂ ಯಾಕೆ ಹೈದಗಳ ಭಾವನೆಗಳೊಟ್ಟಿಗೆ ಆಟ ಆಡುವೆ??)..
-ಲತನ್ ಅಯ್ಯೇಟಿ