ಇನ್ನು ಮೂರು ದಿನಕ್ಕೆ ನನ್ನ ಮದುವೆ. ಮನೆಯವೆಲ್ಲವೂ ಸಂಭ್ರಮ ಸಡಗರಲಿ ಓಡಾಡ್ತ ಒಳೊ. ಊರವು ಚಪ್ಪರ ಹಾಕಿಕೆ ಪ್ಲ್ಯಾನ್ ಮಾಡ್ತ ಒಳೊ. ಮನೆಗೆ ಬಂದಿರುವ ನೆಂಟ್ರೆಲ್ಲಾ ನಂಗೆ ತಮಾಷೆ ಮಾಡಿಕಂಡ್ ಖುಷಿ ಪಡ್ತೊಳೊ. ಅಮ್ಮ ಮತ್ತೆ ಅತ್ತಿಗೆ ಮಾತ್ರ ಕೆಲಸಗಳ ಒತ್ತಡಗಳ ನಡುವೆಯೂ ನನ್ನ ಕಳ್ಸೊಕಲತಾ ದುಃಖಲಿದ್ದೊ. ಪೊಪ್ಪ ಮತ್ತೆ ಅಣ್ಣ ಕೈಗೆ ಸಿಗ್ತ ಇಲ್ಲೆ.
ಈ ಎಲ್ಲಾ ಸಂಭ್ರಮ ಸಡಗರಗಳ ಮಧ್ಯೆನೂ ಅಂವ ನಂಗೆ ಪದೆ ಪದೆ ಗ್ಯಾನ ಆಗ್ತ ಇತ್. ಮರೆಯಕೂತ ಪ್ರಯತ್ನಪಟ್ಟರೂ ಅವನ ನೆನಪು ಬೆನ್ನು ಬಿಡದಂಗೆ ಕಾಡ್ತಾ ಇತ್. ಮನ್ಸ್ ಐದು ವರ್ಷಗಳ ಹಿಂದೆ ಓಡ್ತಿತ್ತ್.
ಆಗ ನಾನಿನ್ನು ಪಿಯುಸಿ ಮುಗ್ಸಿ ಬಿಕಾಂ ಸೇರಿದ್ದೆ. ಮೈಸೂರ್ಲಿ ಕಾಲೇಜಿಗೆ ಸೇರ್ದರ್ಂದ, ಮೊದಲನೇ ಸಲ ಭಾಗಮಂಡಲ ಬುಟ್ಟು ಪಟ್ಟಣ ಸೇರಿದ್ದೆ. ಅಮ್ಮನ ಸೆರಗ್ನ ಹಿಡ್ಕಂಡ್ ಓಡಾಡ್ತಿದ್ದ ನಂಗೆ, ಮೈಸೂರಿಗೆ ಹೊಂದಿಕಣಿಕೆ ಕಷ್ಟ ಆಗ್ತಿತ್ತ್. ನನ್ನ ಹಾಸ್ಟೆಲ್ ರೂಮ್ಮೇಟ್ ಆಗಿ ಸಿಕ್ಕಿದವ್ಳು ಸಾನ್ವಿ. ಅವ್ಳು ತುಂಬಾ ಲವಲವಿಕೆಂದ ಇರ್ತಿತ್. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಕೆ ಜಾಸ್ತಿ ಟೈಮ್ ಬೇಕಾತ್ಲೆ. ಹೊಸ ಫ್ರೆಂಡ್ಸ್, ಹೊಸ ಕಾಲೇಜು, ಹೊಸ ಜೀವನಕ್ಕೆ ಮನ್ಸ್ತೇಳುವ ಹಕ್ಕಿ ರೆಕ್ಕೆನ ಮೆಲ್ಲಮೆಲ್ಲನೆ ಬಿಚ್ಚಿ ಹಾರಿಕೆ ಶುರು ಮಾಡಿತ್ತ್.
ಸಾನ್ವಿಯ ಅಣ್ಣ ವಿಕಾಸ್ ಬೆಂಗಳೂರ್ಲಿ ಇಂಜಿನಿಯರಿಂಗ್ ಮಾಡ್ತಿತ್ತ್. ಅವಂಗೆ ಸಾನ್ವಿತೇಳ್ರೆ ಜೀವ. ವಾರಕ್ಕೆ ಒಮ್ಮೆ ಅವಳ್ನ ನೋಡಿಕೆ ಮೈಸೂರ್ಲಿ ಪ್ರತ್ಯಕ್ಷ ಆಗ್ತಿತ್ತ್. ಅವಳ ಬೆಸ್ಟ್ ಫ್ರೆಂಡ್ ನಾನೇ ಆದ್ದರಿಂದ ಅವನ ಮೀಟ್ ಮಾಡಿಕೆ ಅವಳೊಟ್ಟಿಗೆ ನಾನ್ ಸಹ ಹೋದು ಮಮೂಲಿ ಆಗಿತ್ತ್. ಅವ್ಳಿಗೆ ಸಿಗ್ವ ಪಾನಿಪೂರಿಂದ ಹಿಡ್ದ್ ಐಸ್ಕ್ರೀಮ್ವರಗೆ ಎಲ್ಲಾ ಸಹ ನಂಗೂ ಸಿಗ್ತಿತ್ತ್. ದಿನ ಕಳ್ದಂಗೆ ವಿಕಾಸ್ ಮೇಲೆ ಪ್ರೀತಿ ಹುಟ್ಟಿಕೆ ಶುರುಆತ್. ಹೆಂಗೆ ಅವನ ಹತ್ರ ಹೇಳ್ದುತಾ ಗೊತ್ತಾಗದೆ ಮನಸ್ಲೇ ಮಂಡಿಗೆ ತಿನ್ತಿದ್ದೆ. ಒಂದ್ ದಿನ ಸಾನ್ವಿ ಮೊಬೈಲ್ ರಿಂಗ್ ಆಗ್ತಿತ್. ನಾನ್ ರಿಸೀವ್ ಮಾಡ್ಕಾಕಕನ ವಿಕಾಸ್ ಮಾತಾಡ್ತಿತ್. ಅಂವ "ನಂಗೆ ನೀನ್ತೇಳ್ರೆ ಇಷ್ಟ, ನಾನ್ ನಿನ್ನ ತುಂಬಾ ಪ್ರೀತ್ಸ್ತೊಳೆ"ತಾ ಹೇಳ್ತ್. ಇತ್ತ ಸಾನ್ವಿಗೆ ವಿಷ್ಯ ಗೊತ್ತಾಗಿ ಅವ್ಳು ಸಹ ಅತ್ತಿಗೆ ಅತ್ತಿಗೆತಾ ಕರ್ದ್ ತನ್ನ ಒಪ್ಪಿಗೆನ ಸೂಚಿಸಿತ್ತ್.
ಇನ್ನು ಓದುವ ವಿಷ್ಯಕ್ಕೆ ಬಂದರೆ ಸಾನ್ವಿ ಮತ್ತೆ ವಿಕಾಸ್ ಯಾಗೊಳೂ ಮುಂದೆ ಇದ್ದರೆ, ನಾನ್ ಸಾಮಾನ್ಯ ವಿದ್ಯಾಥರ್ಿನಿ. ಫಸ್ಟ್ರ್ಯಾಂಕ್ ಬಾರದಿದ್ದರೂ ಫೇಲ್ ಅಂತು ಆಗ್ತಿತ್ಲೆ. ನಮ್ಮ ಡಿಗ್ರಿ ಮುಗ್ಸೊ ಹೊತ್ತಿಗೆ ವಿಕಾಸ್ನ ಇಂಜಿನಿಯರಿಂಗ್ ಮುಗ್ದಿತ್ತ್. ಆದ್ರೆ ರಿಸೆಷನ್ನಿಂದಾಗಿ ಅವಂಗೆ ಒಳ್ಳೆ ಮಾರ್ಕ್ಸ್ ಇದ್ದರೂ ಕೆಲ್ಸ ಸಿಕ್ಕಿಕೆ ಕಷ್ಟ ಆತ್. ಅಂವ ಎಂ.ಟೆಕ್ ಮಾಡುವ ನಿರ್ಧಾರಕ್ಕೆ ಬಂದಿತ್ತ್. ಹಾಸನಲಿ ಕಾಲೇಜಿಗೆ ಸೇರಿಕಣ್ತ್. ಇತ್ತ ನಾನ್ ಎಂ.ಕಾಮ್ ಮಾಡಿಕೆ ಕೊಣಾಜೆಗೆ ಸೆರ್ರೆ, ಸಾನ್ವಿ ಮೈಸೂರ್ಲಿ ಕಾಲೇಜಿಗೆ ಸೇರಿಕಣ್ತ್. ಅಂವ ನನ್ನ ಆಗಾಗ ಬಂದ್ ನೋಡಿಕಂಡ್ ಹೋಗ್ತಿತ್ತ್. ಅಷ್ಟು ಹೊತ್ತ್ಗೆ ಅಂವನ ಮನೆಲಿ ವಿಷ್ಯ ಗೊತ್ತಾಗಿ ಅಮ್ಮ , ಎರ್ಡ್ ವರ್ಷ ಲಾಯ್ಕ ಓದಿಕಣಿ ಆಮೇಲೆ ನಿಮ್ಮ ಮದುವೆತಾ ಹೇಳ್ದೊ. ಅದೇ ಖುಷಿಲಿ ದಿನ ಕಳ್ದದ್ ಗೊತ್ತೇ ಆತ್ಲೆ.
ನನ್ನ ಎಮ್.ಕಾಮ್. ಮುಗ್ದ್ ಮೂರ್ತಿಂಗ ಆಗಿತ್ತ್. ಮನೆಲಿ ನಂಗೆ ಗಂಡ್ ಹುಡ್ಕಿಕೆ ಶುರು ಮಾಡಿದ್ದೊ. ಅಷ್ಟು ಹೊತ್ತಿಗೆ ನಾನ್ ಮಡಿಕೇರಿಲಿ ಲೆಕ್ಚರರ್ ಆಗಿ ಸೇರಿದ್ದೆ. ಅಂವ ಬೆಂಗಳೂರ್ ನಾನ್ ಮಡಿಕೇರಿ ಆದ ಮೇಲೆ ಕಾಂಟ್ಯಾಕ್ಟ್ ಕಮ್ಮಿ ಆಗಿತ್ತ್. ಮದುವೆ ವಿಷ್ಯ ಬಂದಾಗೆಲ್ಲಾ, ನಾನ್ ಮದ್ವೆ ಆದ್ ಎರ್ಡ್ ವರ್ಷ ಕಳ್ದ ಮೇಲೆನೆತಾ ಹೇಳ್ತಾ ಇತ್ತ್. ಇತ್ತ ಸಾನ್ವಿದ್ ಮದ್ವೆ ಆಗಿ ಗಂಡನ ಜೊತೆ ಫಾರಿನ್ಗೆ ಹಾರಿ ಹೋಗಿತ್ತ್.
ನಂಗೆ ಮನೇಲಿ ಹೈದ ನೋಡ್ದೊ. ಮನೆಲಿ ತುಂಬಾ ಹಠ ಮಾಡ್ತಿದ್ದೊ. ವಿಕಾಸ್ಗೆ ಫೋನ್ ಮಾಡ್ರೆ ನಾನ್ ನಿನ್ನ ಮದ್ವೆ ಆಕೆ ಆದುಲೆ ನಾನ್ ಪಿ.ಹೆಚ್.ಡಿ ಮಾಡಿಕೆ ಅಮೇರಿಕಕ್ಕೆ ಹೋಗ್ತೋಳೆತ ಬಾಂಬ್ ಸಿಡ್ಸಿತ್ತ್. ಬೇರೆ ದಾರಿ ಇಲ್ಲದೆ ಈ ಮದುವೆಗೆ ಒಪ್ಪಿಕೊಂಡೊಳೆ. ಒಡ್ದ ಮನ್ಸ್ನ ಚೂರ್ಗಳ್ನ ಜೋಡ್ಸಿಕಂಡ್ ಹೊಸ ಜೀವನಕ್ಕೆ ತಯಾರಾಗ್ತಾ ಒಳೆ....
- ಸ್ಪಂದನ ಗೌರಿ
arebhase@gmail.com
No comments:
Post a Comment