ಚೆಂದದ ಪ್ಲಾಸ್ಟಿಕ್ ಟ್ರೇ. ಅದ್ರೊಳಗೆ ತಣ್ಣನೆ ಕೋಕಾಕೋಲಾ ತುಂಬಿದ ಗ್ಲಾಸ್ಗ. ಬಹುಶಃ ಆಗಷ್ಟೇ ಕೋಕಾಕೋಲನ ಫ್ರಿಡ್ಜ್ಂದ ತೆಗ್ದ್ ಗ್ಲಾಸ್ಗೆ ಹಾಕಿದ್ದೊ ಕಂಡದೆ... ಆ ಕೋಟಕ್ಕೆ ನೀರಿನ ಪುಟ್ಟ ಹನಿಗ ಗ್ಲಾಸ್ಗೆ ಅಂಟಿಕೊಂಡಿದ್ದೊ. ಹಂಗೆ ಕೋಟ ಕೋಟ ಕೋಕಾಕೋಲ ಹಿಡ್ದದಕ್ಕೋ...ಇಲ್ಲ ಎದುರಿಗೆ ಹೈದ ಕುದ್ದಿದ್ದಕ್ಕೋ...ಅನನ್ಯಳ ಕೈ ನಡುಗ್ತಿತ್ತ್. ಅದ್ರ ಪರಿಣಾಮ ಅವ್ಳು ಹಿಡ್ದ ಟ್ರೇ ಮೇಲಾಗಿ ಆ ಟ್ರೇಲಿದ್ದ ಗ್ಲಾಸ್ಗ ಒಂದಕ್ಕೊಂದು ತಾಗಿ ಟಣ್ ಟಣ್ ಶಬ್ದ ಮಾಡ್ತಿದ್ದೊ. ಗೂಡೆಕ್ಕಿಂತ ಹೆಚ್ಚು ನಾಚಿಕೆಲಿ ತಲೆತಗ್ಗಿಸಿ ಕುದ್ದ್ಕಂಡಿತ್ ಚರಣ್ !
ಬ್ಯಾಂಕ್ಲಿ ಕೆಲ್ಸ ಮಾಡ್ತಿದ್ದ ಚರಣ್ಗೆ ಮದುವೆ ಮಾಡಿಕೆ ಗೂಡೆ ಹುಡುಕುತ್ತಿದ್ದೊ. ಇಂವ ಇದ್ದದ್ ಮೈಸೂರ್ಲಿ. ಹಂಗಾಗಿ ಅಲ್ಲೇ ಇರ್ವ ಗೂಡೆ ಸಿಕ್ಕಿರೆ ಒಳ್ಳೆದುತಾ ಚರಣ್ ಮನೆಯವ್ರ ಅಭಿಪ್ರಾಯ. ಅದ್ಕೆ ಸರಿಯಾಗಿ ಬ್ರೋಕರ್ ಬಸಪ್ಪ ಒಂದು ಸಂಬಂಧ ಹುಡುಕಿ ತಂದಿತ್ತ್. ಗೂಡೆನ ಕಡೆಯವು ಮೈಸೂರ್ಲೇ ಸೆಟ್ಲ್ ಆಗಿದ್ದೊ. ಅವ್ಳ ಹೆಸ್ರು ಅನನ್ಯ. ಮಹಾರಾಣಿ ಕಾಲೇಜ್ಲಿ ಕಾಮರ್ಸ್ ಲೆಕ್ಚರರ್. ಫೋಟೋ ನೋಡಿ ಚರಣ್ಗೆ ಗೂಡೆ ಹಿಡ್ಸಿತ್. ಒಂದು ಭಾನುವಾರ ಬೆಳಗ್ಗೆ ಬಸಪ್ಪ, ಚರಣ್ ಮತ್ತೆ ಚರಣ್ದ ಭಾವ ಗೂಡೆ ನೋಡಿಕೆ ಹೋಗಿದ್ದೊ. ಆಗನೇ ಅನನ್ಯ ಹಿಂಗೆ ನಡುಗುವ ಕೈಲಿ ಕೋಕಾಕೋಲಾ ಹಿಡ್ಕಂಡ್ ಬಂದದ್.
`ಚರಣ್ ಗೂಡೆನ ಸರಿಯಾಗಿ ನೋಡಿಕ...ಮತ್ತೆ ನನ್ನ ಅದ್ ಇದ್ತಾ ಕೇಳ್ಬೇಡಾ...' ತಲೆ ತಗ್ಗಿಸಿ ಕೂತಿದ್ದ ಚರಣ್ ಕಿವಿ ಹತ್ರ ಬಂದ್ ಬಸಪ್ಪ ಹೇಳ್ದೊ. ಕೋಕಾಕೋಲಾ ಕೊಟ್ಟಾದ್ಮೆಲೆ ಅನನ್ಯ ಹೋಗಿ ಅವಳ ಅಮ್ಮನ ಜೊತೆ ಕುದ್ದ್ಕಂಡಿತ್ತ್. ಚರಣ್ನ ಭಾವ ಮತ್ತೆ ಬಸಪ್ಪ, ಅನನ್ಯಳ ಅಪ್ಪ, ಅಮ್ಮನ ಜೊತೆ ಲೋಕರೂಢಿ ಮಾತಾಡ್ತಿದ್ದೊ. ಚರಣ್ ಒಮ್ಮೆ ತಲೆಎತ್ತಿ ಅನನ್ಯಳನ್ನ ನೋಡ್ತ್. ಗೂಡೆ ನೋಡಿಕೆ ಪರ್ವಾಗಿಲ್ಲೆ. ಒಳ್ಳೇ ಕಲರ್ ಉಟ್ಟು. ಯಾಕೋ ಸೀರೆ ಸರಿಯಾಗಿ ಉಡಿಕೆ ಬರ್ವಂಗೆ ಕಾಣ್ತಿಲ್ಲೆ. ಮೇಕಪ್ ಸ್ವಲ್ಪ ಜಾಸ್ತಿ ಆದಂಗೆ ಉಟ್ಟು. ಚಿನ್ನ ಉಟ್ಟುತಾ ತೋರಿಸಿಕಂಬಕೆ ಕುತ್ತಿಗೆ, ಕಿವಿ, ಕೈಲಿ ಅಗತ್ಯಕ್ಕಿಂತ ಜಾಸ್ತಿ ಕೋಸಿಕಂಡಂಗೆ ಕಾಣ್ತಿತ್ತ್...ಅವ್ಳೂ ಒಂದ್ಸಲ ಚರಣ್ನ ಓರೆಕಣ್ಲಿ ನೋಡಿ, ಅಮ್ಮನ ಸೆರಗ್ಲಿ ಆಟಾಡಿಕಂಡ್ ಕುದ್ದತ್.
`ಸರಿ ನಾವು ಮನೆಗೆ ಹೋಗಿ ಒಂದ್ಸಲ ಎಲ್ಲವೂ ಸೇರಿ ಮಾತಾಡಿ ಅಭಿಪ್ರಾಯ ತಿಳ್ಸಿವೆ...'ತಾ ಚರಣ್ನ ಭಾವ ಹೇಳಿದ್ಮೇಲೆ ಎಲ್ಲವೂ ಅನನ್ಯಳ ಮನೇಂದ ಹೊರಟೋ...ದಾರಿಲಿ ಹೋಗ್ತಾ ಚರಣ್ನ ಅವನ ಭಾವ ಕೇಳ್ತ್, `ಹೆಂಗೆ ಗೂಡೆ ? ಹಿಡ್ಸಿತಾ?' ಚರಣ್ ಸ್ವಲ್ಪ ದೂರ ಏನೂ ಮಾತಾಡ್ತ್ಲೆ. ಮತ್ತೆ ಮೆಲ್ಲೆ ಬಾಯಿ ಬಿಟ್ಟತ್...
`ಹುಂ ನಂಗೆ ಗೂಡೆ ಹಿಡ್ಸಿತ್...ಆದ್ರೆ ಅನನ್ಯ ಅಲ್ಲ...'
`ಅನನ್ಯ ಅಲ್ಲನಾ? ಮತ್ತೆ ಯಾರ್ ?'
`ಸುಕನ್ಯಾ...'
`ಸುಕನ್ಯಾ...? ಅದ್ಯಾರ್ ?'
`ಅನನ್ಯನ ತಂಗೆ...'
`ಓ ದೇವರೆ...ಅವಳ್ನ ನೀ ಎಲ್ಲಿ ನೋಡ್ದ್ ಮಾರಾಯ?'
`ಸುಕನ್ಯಾ ಫೇಸ್ಬುಕ್ಲಿ ನನ್ನ ಪ್ರೆಂಡ್...ಆದ್ರೆ ಅವ್ಳು ಅನನ್ಯಳಾ ತಂಗೆತಾ ಗೊತ್ತಿತ್ಲೆ...'
`ಮತ್ತೆ ಇಂದ್ ಹೆಂಗೆ ಗೊತ್ತಾತ್?'
`ಅಲ್ಲಿ ಅವ್ರ ಮನೆ ಗೋಡೆಲಿ ಫೋಟೋ ಇತ್ತಲ್ಲ...ಅನನ್ಯ ಮತ್ತೆ ಸುಕನ್ಯಾ ಒಟ್ಟಿಗೆ ಇದ್ದದ್. ಅದ್ನ ನೋಡಿಕಾಕನ ಗೊತ್ತಾತ್...'
`ಅಲ್ಲರಾ...ನಿನ್ನ ನಾ ಎಂಥದ್ದೊ ತಿಳ್ಕಂಡಿದ್ದೆ...ಅಕ್ಕನ ನೋಡಿಕೆ ಹೋಗಿ ತಂಗೆಗೆ ಕಾಳ್ ಹಾಕಿಬಿಟ್ಟೆ ಅಲಾ...'
ಇದೆಲ್ಲಾ ಕಳ್ದ್ ಈಗ ಎರಡು ವರ್ಷ. ಇಂದ್ ಚರಣ್ ಮತ್ತೆ ಸುಕನ್ಯಾ ಮದುವೆ. ಅನನ್ಯ ಕೈಲಿ ಒಂದು ಕೂಸಿತ್ತ್. ಪಕ್ಕಲಿ ಅವಳ ಗಂಡ. ಅಂವ ಚರಣ್ ತಮ್ಮ ಕಿರಣ್ ! ಇದೂ ಫೇಸ್ಬುಕ್ ಸಂಬಂಧ !
- ಸುನಿಲ್ ಪೊನ್ನೇಟಿ
arebhase@gmail.com
No comments:
Post a Comment