ಎಷ್ಟು ಅಂದದ ಕೊಡಗ್
ಕರ್ನಾಟಕ ಕಾಶ್ಮೀರ ಖ್ಯಾತಿಯ ಕೊಡಗ್
ಹಚ್ಚ ಹಸ್ರ್ ದಟ್ಟಮರಗಳ ಕೊಡಗ್
ತೊರೆ ಕಣಿವೆ ಬೆಟ್ಟಗಳ ಪೋರ್ಲುನ ಕೊಡಗ್
ಸುಗಂಧ ಹೂಗಳ ಪೋರ್ಲುನ ಕೊಡಗ್
ಎಷ್ಟು ಪೋರ್ಲುನ ಕೊಡಗ್
ಎಷ್ಟು ಅಂದದ ಕೊಡಗ್
ಪರ ಪರ ಮಳೆ ಬರುವ ಕೊಡಗ್
ಕಾರ್ಮೋಡಗಳ ಹೊದಿಯುವ ಕೊಡಗ್
ಉರಿಯುವ ಮನಸಿಗೆ ತಂಪ್ನ ಸೂಸುವ ಕೊಡಗ್
ಪ್ರವಾಸಿಗರ ಮನಸ್ನ ಸೆಳೆಯುವ ಕೊಡಗ್
ಎಷ್ಟು ಪೋರ್ಲುನ ಕೊಡಗ್
ಎಷ್ಟು ಅಂದದ ಕೊಡಗ್
ನಿನ್ನ ಮಡಿಲೊಳಗೆ ಬೆಳೆಯುವ ಮಕ್ಕ ನಾವು
ಹಸಿರ ಭೂಸಿರಿಯ ತೊಟ್ಟ ಕೊಡಗ್
ತಂಪ ಕಂಪ ಭೀಕರ ಗಾಳಿಯ ಬೀಸುವ ಕೊಡಗ್
ಜುಳು ಜುಳು ಮಂಜುಳ ಸ್ವರಗಳ ನಾದದಿ
ಹರಿಯುವ ಕಾವೇರಿ ಮಾತೆಯ ಕ್ಷೇತ್ರದಿ
ಸುಂದರ ಪೋರ್ಲುನ ಕೊಡಗ್
ಅಂದದ ಕೊಡಗ್
ಕುಲ್ಲಚನ ತಾರಾರವಿ,
ಕುಂಬಳದಾಳು
arebhase@gmail.com
No comments:
Post a Comment