ತುಂಬಾ ದಿನ ಕಳ್ದ ಮೆಲೆ ಇಂದ್ ನಾ ಬೆಳಗ್ಗಿನ ಸೂರ್ಯನ ನೋಡ್ದೆ ! ಥ್ಯಾಂಕ್ಸ್ ಟೂ ಸೀನ.... ನನ್ನ ಶಿಫ್ಟ್ ಇರ್ದು ಮಧ್ಯಾಹ್ನ 3ರಿಂದ ರಾತ್ರಿ 12. ರಾತ್ರಿ 11 ರಿಂದ ಬೆಳಗ್ಗೆ 7ರ ವರೆ ಸೀನ ಬಾಕಾಗಿತ್ತ್. ಆದ್ರೆ ಹುಷಾರಿಲ್ಲೆತೆ ಕೊನೇ ಕ್ಷಣದಲ್ಲಿ ಅಂವ ಕೈ ಕೊಟ್ಟ್ಬಿಟ್ಟಿತ್ತ್. ಹಂಗಾಗಿ ನಿನ್ನೆ ನಂಗೆ ಡಬ್ಬಲ್ ಶಿಫ್ಟ್. ಇದ್ದ ನ್ಯೂಸ್ಗಳನ್ನೆಲ್ಲಾ ನಾನೇ ರಾತ್ರಿ 8 ಮತ್ತೆ 11.30 ನ್ಯೂಸ್ಗಳಲ್ಲಿ ಮುಗಿಸಿಬಿಟ್ಟಿದ್ದೆ. ಇನ್ನು ಬೆಳಗ್ಗೆ 6 ಮತ್ತು 7 ಗಂಟೆಗೆ ಎಂಥ ಕೊಡ್ದುತೇಳಿ, ಬೇರೆ ಬೇರೆ ಜಿಲ್ಲೆಗಳಿಂದ ಬಂದ ಸುದ್ದಿಗಳನ್ನ ಬೆದಕ್ತಾ ಎರಡು ಬುಲೆಟಿನ್ಗಳಿಗೆ ಬೇಕಾಗುವಷ್ಟು ಸ್ಟೋರಿಗಳನ್ನ ಮಾಡಿಸಿ ಪೇಪರ್ ಓದಿಕಂಡ್ ಕುದ್ದಿದ್ದೆ.
ಬೆಳಗ್ಗೆ 4 ಗಂಟೆ ಆಗಿತ್. ನಂ ರಿಪೋರ್ಟರ್ ಸನತ್ ಕಣ್ಣುಜ್ಜಿಕಂಡ್ ಬಂದ್...`ಒಂದ್ ಟಿಕ್ಕರ್ ಇದೆ ಹಾಕ್ಕೊಳ್ಳಿ' ತಾ ಬೆಂಗಳೂರು ಶಿವಾಜಿನಗರದ ರಸೆಲ್ ಮಾರ್ಕೆಟ್ಗೆ ಬೆಂಕಿ ಬಿದ್ದ ಸುದ್ದಿನ ಕೊಟ್ಟ್, ಕ್ಯಾಮರಾ ಡಿಪಾರ್ಟ್ಮೆಂಟ್ ಕಡೆ ಓಡ್ತ್. ನಮ್ಮ ಮೀಡಿಯಾಗಳಲ್ಲಿ ಸುದ್ದಿಯ ಪ್ರಾಮುಖ್ಯತೆ ಲೆಕ್ಕಾಹಾಕಿಕೆ ಕೆಲವೊಂದು ಮಾನದಂಡಗ ಒಳೊ... ಒಂದು ಆ್ಯಕ್ಸಿಡೆಂಟ್ ಆಗಿ, ಅಲ್ಲಿ ಸತ್ತಿರುವವರ ಸಂಖ್ಯೆ ಜಾಸ್ತಿ ಆಗಿದ್ದಷ್ಟೂ ಆ ನ್ಯೂಸ್ನ `ಭಾರ' ಜಾಸ್ತಿ ಆಗ್ತಾ ಹೋದೆ ! ಎಲ್ಲಾರು ಬೆಂಕಿ ಹೊತ್ತಿಕೊಂಡಾಗ ಕೂಡ, ಅಲ್ಲಿರುವ ಫೈರ್ ಎಂಜಿನ್ಗಳ ಮೇಲೆ ಆ ಸುದ್ದಿಯ ಹಣೆ ಬರಹ ನಿಧರ್ಾರ ಆದೆ ! ಹಂಗೆ, ರಸೆಲ್ ಮಾಕರ್ೆಟ್ಗೆ ಬೆಂಕಿ ಆರಿಸಿಕೆ 12 ಫೈರ್ ಎಂಜಿನ್ಗ ಹೋಗಿಯುಟ್ಟುತಾ ಸನತ್ ಹೇಳಿತ್ತ್. ಹಂಗಾಗಿ ನಾ ಬೆಂಕಿ ಬಿದ್ದ ಸುದ್ದಿನ `ಟಿಕ್ಕರ್' ಬದಲಿಗೆ `ಬ್ರೇಕಿಂಗ್'ಗೆ ಹಾಕಿದೆ. ಇಷ್ಟು ಆಕಾಕನ ಬೆಳಗ್ಗೆ 4.20. ಈ ಸುದ್ದಿ ಮೊದ್ಲು ಕಾಣಿಸಿಕಂಡದ್ ನಮ್ಮ ಟೀವಿಲಿ !
ನಂಗೆ ಇನ್ನು ನ್ಯೂಸ್ ಇದ್ದದ್ 6 ಗಂಟೆಗೆ. ಹಂಗಾಗಿ ಅಷ್ಟೂ ಹೊತ್ತು ಎಲ್ಲಾ ಬೆಳವಣಿಗೆಗಳ್ನ ಬ್ರೇಕಿಂಗ್ ಕೊಡ್ತಾ ಬಂದೆ. ಸಂದೇಶ್, ವಂದನಾ ಮತ್ತೆ ಗಣಿ ನನ್ನ ಜೊತೆ ಇದ್ದೊ. ಒಂದು ಕಡೆ ಬ್ರೇಕಿಂಗ್ ಕೊಡ್ತಾ, ಮತ್ತೊಂದು ಕಡೆ 6 ಗಂಟೆ ನ್ಯೂಸ್ಗೆ ರೆಡಿಯಾಗ್ತಿರ್ಕಾಕನ ಟೈಂ ಹೋದ್ದೇ ಗೊತ್ತಾತ್ಲೆ...5.30ರ ಹೊತ್ತಿಗೆ ನಮ್ಗೆ ವಿಷ್ಯುವಲ್ ಸಿಕ್ತ್. ಸನತ್ ಜೊತೆ ಹೋಗಿದ್ದ ಡ್ರೈವರ್ ಕ್ಯಾಸೆಟ್ ತಂದ್ ಕೊಟ್ಟಿತ್ತ್. ಸುಮಾರು 10 ನಿಮಿಷದ ವಿಷ್ಯುವಲ್ ಇತ್. ಆ ವಿಷ್ಯುವಲ್ ನೋಡ್ದ ಕೂಡ್ಲೇ, ಬೆಂಕಿ ಎಷ್ಟು ಜೋರಾಗಿ ಹೊತ್ತಿಕೊಂಡುಟ್ಟುತಾ ಗೊತ್ತಾತ್. ಕೂಡ್ಲೇ ನನ್ನ ಸೀನಿಯರ್ ಗಮನಕ್ಕೆ ತಂದೆ. ಅವು ನಂಗೆ ಎಲ್ಲಾ ಸ್ವಾತಂತ್ರ್ಯ ಕೊಟ್ಟೊ. `ನೀವೇ ಡಿಸಿಶನ್ ತಗ್ಗೊಂಡು ಬುಲೆಟಿನ್ ಮಾಡಿ' ತಾ ಮನೇಂದನೇ ಹೇಳ್ದೊ. ಸರಿ, ನನ್ನ ಟೀಂನ ಅಲರ್ಟ್ ಮಾಡಿಕಂಡ್ 6 ಗಂಟೆ ನ್ಯೂಸ್ನ ಶುರು ಮಾಡಿಯೇ ಬಿಟ್ಟೆ. ರೋಹಿಣಿ ಆ್ಯಂಕರ್. ಅವ್ಕೆ ನಾ ಸ್ಕ್ರಿಪ್ಟ್ ಕೊಟ್ಟಿತ್ಲೆ. ಏನೇನು ಆಗಿಟ್ಟುತಾ ಬರೀ ಪಾಯಿಂಟ್ಗಳ್ನ ಮಾತ್ರ ಕೊಟ್ಟಿದ್ದೆ. ರೋಹಿಣಿ ಅದನ್ನೇ ಇಟ್ಟ್ಕಂಡ್ 6ರಿಂದ ಆರೂವರೆ ತನಕ ತುಂಬಾ ಲಾಯ್ಕ ಮ್ಯಾನೇಜ್ ಮಾಡ್ತ್. ಮತ್ತೆ 7ರಿಂದ ಏಳೂವರೆ ವರೆಗೆ ಇದ್ದ ನ್ಯೂಸ್ನಲ್ಲೂ ಬೆಂಗಳೂರು ಬೆಂಕಿ ವಿಷಯನೇ ತಕ್ಕಂಡಿದ್ದೆ. ಎರಡೂ ಬುಲೆಟಿನ್ ತುಂಬಾ ಲಾಯ್ಕ ಬಾತ್...ಇದರ ಕ್ರೆಡಿಟ್ ನಮ್ಮ ಟೀಂಗೆ...
- ಸುನಿಲ್ ಪೊನ್ನೇಟಿ
arebhase@gmail.com
No comments:
Post a Comment