`ಏ... ಯಾರಲ್ಲಿ, ಎಳ್ಕಂಡ್ಬನ್ನಿ ಅವ್ನ...' ಮೀಸೆ ತಿರಿಗಿಸಿಕಂಡ್ ತನ್ನ ಧೂತರಿಗೆ ಯಮ ಆರ್ಡರ್ ಮಾಡ್ತ್ ! ಪಾಪ ಚೋಮುಣಿ, ಧೂತರ ಮಧ್ಯೆ ನಡಗಿಕಂಡ್ ನಿಂತಿತ್ತ್. ಹಂಗೆನೇ ಅವ್ನ ಎಳ್ಕಂಡ್ಬಂದ ಯಮಧೂತಂಗ, ಯಮನ ಮುಂದೆ ನಿಲ್ಲಿಸಿದೋ...
ಚೋಮುಣಿನ ನೋಡ್ದ ಯಮ, ಚಿತ್ರಗುಪ್ತನ ಕೇಳ್ತ್, `ಚಿತ್ರಗುಪ್ತ, ಇಂವ ನೋಡಿಕೆ ಇನ್ನೂ ಹೈದನಂಗೆ ಉಟ್ಟು...ನಿಜವಾಗಿಯೂ ಇವ್ನ ಆಯುಷ್ಯ ಮುಗ್ದುಟ್ಟಾ?' ಅದ್ಕೆ ಚಿತ್ರಗುಪ್ತ, `ಮಹಾಪ್ರಭು, ನೀವು ಹೇಳ್ದು ಸರಿ. ಇವಂಗೆ ಇನ್ನೂ 24 ವರ್ಷ. ಆದ್ರೆ 74 ವರ್ಷದವು ಮಾಡುವ ಕೆಲ್ಸನೆಲ್ಲಾ ಮಾಡಿ ಮುಗ್ಸಿಟ್ಟು.' ಚಿತ್ರಗುಪ್ತನ ಮಾತು ಕೇಳಿ ಯಮಂಗೆ ಸ್ವಲ್ಪ ಸಿಟ್ಟು ಬಾತ್. `ಚಿತ್ರಗುಪ್ತ, ಏನೇ ಹೇಳಿ... 24 ವರ್ಷದ ಇವ್ನನ್ನ ಇಷ್ಟು ಬೇಗ ಇಲ್ಲಿಗೆ ಕರ್ಕಂಡ್ಬಂದದ್ ಸರಿ ಕಾಣ್ತಿಲ್ಲೆ...' ಅಷ್ಟು ಹೊತ್ತು ಹೆದ್ರಿಕಂಡ್ ನಿಂತಿದ್ದ ಚೋಮುಣಿಗೆ, ಯಮ ತನ್ನ ಪರ ಇರ್ದು ನೋಡಿ ಧೈರ್ಯ ಬಾತ್. ಯಮನ ಜೊತೆಗೆನೇ ಮಾತಿಗೆ ಇಳ್ತ್...`ಯಮ, ಈ ಚಿತ್ರಗುಪ್ತ ನಿಂಗೆ ಗೊತ್ತಿಲ್ಲದಂಗೆ ಏನೇನೋ ಫಿಟ್ಟಿಂಗ್ ಇಡ್ತುಟ್ಟು. ನಾನಿನ್ನು ಮದುವೆ ಆತ್ಲೆ... ಮದುವೆ ಆಗಿ ಏನೇನೋ ಸಾಧನೆ ಮಾಡೊಕೂತ ಉಟ್ಟು. ಅಷ್ಟರಲ್ಲೇ ಇಂವ ನನ್ನನ ಇಲ್ಲಿಗೆ ಕರ್ಸಿಕೊಂಡುಟ್ಟು ನೋಡು... ನಾನ್ ಲವ್ ಮಾಡ್ತಿರ್ವ ಗೂಡೆದ್ ಪರಿಸ್ಥಿತಿ ಏನಾಗ್ಬೇಡ....'ತಾ ಕೇಳ್ತ್. ಯಮಂಗೂ ಅವ್ನ ಯವ್ವನದ ದಿನಗ ಯೋಚನೆ ಆತ್, ಚೋಮುಣಿ ಹೇಳ್ದು ಸರಿಯಾಗಿಯೇ ಉಟ್ಟು... ಈ ಚಿತ್ರಗುಪ್ತನೇ ಎಂಥದ್ದೋ ತಪ್ಪು ಲೆಕ್ಕಾಚಾರ ಹಾಕಿಬಿಟ್ಟುಟ್ಟುತಾ ಧೂತರಿಗೆ ಆಜ್ಞೆ ಮಾಡ್ತ್, `ಎಲ್ಲಿಂದ ಕರ್ಕಂಡ್ ಬಂದದೋ ಅಲ್ಲಿಯೇ ಇವ್ನನ್ನ ಬಿಟ್ಟು ಬನ್ನಿ...' ಅಷ್ಟೊತ್ತಿಗೆ ಚಿತ್ರಗುಪ್ತಂಗೆ ಉರ್ದ್ಹೋತ್...`ಮಹಾಪ್ರಭು... ಅವ್ನನ್ನ ನೀವು ವಾಪಸ್ ಕಳ್ಸಿರೆ, ನಾನ್ ಇಲ್ಲಿ ನನ್ನ ಕೆಲ್ಸಕ್ಕೆ ರಾಜೀನಾಮೆ ಕೊಟ್ಟನೆ. ನೀವು ಮಾಡುದು ಮಾಡ್ಕಣಿ...'ತಾ ಹೇಳಿ ಕುದ್ದಲ್ಲಿಂದ ಎದ್ದ್ನಿಂತತ್. `ಸಮಧಾನ...ಸಮಧಾನ ಚಿತ್ರಗುಪ್ತ. ನೀನ್ ಸಿಟ್ಟು ಮಾಡಿಕಂಬೇಡ. ನೀ ರಾಜೀನಾಮೆ ಕೊಟ್ಟರೆ ಇಲ್ಲಿಗೆ ನಾ ಯಾರ್ನ ನೇಮಕ ಮಾಡ್ಲಿ?' ಚಿತ್ರಗುಪ್ತನ ಯಮ ಸಮಧಾನ ಮಾಡಿಕೆ ನೋಡ್ತ್. ಯಮ ಅಷ್ಟ್ ಹೇಳ್ದೇ ತಡ, ಚಿತ್ರಗುಪ್ತ ಮಾತ್ನ ಮುಂದುವರೆಸಿತ್....
`ಮಹಾಪ್ರಭು...ನಾ ಈ ಚೋಮುಣಿನ ಇಲ್ಲಿಗೆ ಕರ್ಸಿದ ಉದ್ದೇಶನ ಬೇರೆ'
`ಹೌದಾ... ಚಿತ್ರಗುಪ್ತ? ಎಂಥ ಅದ್ ?'
`ಮಹಾಪ್ರಭು, ಇಂವ ಉಟ್ಟಲ್ಲಾ ಚೋಮುಣಿ... ಸಾಫ್ಟ್ ವೇರ್ ಎಂಜಿನೀಯರ್...'
`ಹಂಗಂದ್ರೆ ಎಂಥ ಚಿತ್ರಗುಪ್ತ?'`ಅಂದ್ರೆ ಕಂಪ್ಯೂಟರ್ ನೆಲ್ಲಾ ಈ ಚೋಮುಣಿ ಅರ್ದು ಕುಡ್ದುಬಿಟ್ಟುಟ್ಟು ಮಹಾಪ್ರಭು...'
`ಚಿತ್ರಗುಪ್ತ.. ಕಂಪ್ಯೂಟರ್ ಅಂದ್ರೆ ಎಂಥ?'
`ಮಹಾಪ್ರಭು, ಹಂಗೆ ಬನ್ನಿ ವಿಷಯಕ್ಕೆ... ಇಲ್ಲಿ ಉಟ್ಟಲ್ಲ ಈ ದೊಡ್ಡ ದೊಡ್ಡ ಪುಸ್ತಕಗ.. ಇದ್ನೆಲ್ಲಾ ಒಂದೇ ಕಂಪ್ಯೂಟರ್ಲಿ ತುಂಬುಸಿ ಇಡಕ್. ಭೂಲೋಕದಲ್ಲಿರುವವರ ಹೆಸರನ್ನೆಲ್ಲಾ ಕಂಪ್ಯೂಟರ್ಲಿ ಸೇವ್ ಮಾಡಿಟ್ಟರೆ ತುಂಬಾ ಉಪಯೋಗ ಆದೆ. ಅವ್ರ ಪಾಪ, ಪುಣ್ಯ ಕೂಡ ಲೆಕ್ಕ ಹಾಕಿಕೆ ಇದ್ರಿಂದ ಒಳ್ಳೆದ್. ಯಾರಾದ್ರು ಒಬ್ಬನ ಹೆಸ್ರು ಟೈಪ್ ಮಾಡಿ ಸರ್ಚ್ ಕೊಟ್ಟರೆ, ಅವ್ನ ಪೂರ್ತಿ ಜಾತಕ ಅದ್ರಲ್ಲಿ ಸಿಕ್ಕಿಬಿಟ್ಟದೆ.'
`ಹಂಗೆನಾ ಚಿತ್ರಗುಪ್ತ ವಿಷಯ...ಕಂಪ್ಯೂಟರ್ಗೂ ಚೋಮುಣಿಗೂ ಏನು ಸಂಬಂಧ?'
`ಮಹಾಪ್ರಭು...ನಂಗೊಂದು ಕಂಪ್ಯೂಟರ್ ತೆಗ್ಸಿಕೊಡಿ...ಚೋಮುಣಿ ಕೈಲಿ ಅದ್ರ ಪಾಠ ಹೇಳಿಸಿಕಂಡನೆ.. ಮತ್ತೆ ಕೆಲ್ಸ ಸುಲಭ ಆದೆ.'
ಅಷ್ಟೊತ್ತಿಗೆ ಚೋಮುಣಿ ಮಧ್ಯೆ ಬಾಯಿ ಹಾಕಿತ್..
`ಹೌದು.. ಯಮ. ಕಂಪ್ಯೂಟರ್ ಇದ್ದರೆ ನಿಂಗೆ ಒಂದು ಕೈ ಹೆಚ್ಚಿಗೆ ಬಂದಂಗೆ ಇದ್ದದೆ. ಈ ಚಿತ್ರಗುಪ್ತ ಇಲ್ಲದಿದ್ದರೂ ನೀನೇ ಮ್ಯಾನೇಜ್ ಮಾಡಕ್' ಚಿತ್ರಗುಪ್ತ ಮೇಲಿದ್ದ ಸಿಟ್ಟ್ನ ಚೋಮುಣಿ ಹಿಂಗೆ ತೀರ್ಸಿಕಂಡತ್.
`ಹೌದಾ... ಹಂಗಾರೆ ನೀ ಈಗ್ಲೇ ಯಮಲೋಕಕ್ಕೆ ಒಂದು ಕಂಪ್ಯೂಟರ್ ತಂದ್ಕೊಡು...ನಂಗೂ ಈ ಚಿತ್ರಗುಪ್ತನ ಸಹವಾಸ ಸಾಕುಸಾಕಾಗ್ಯುಟ್ಟು. ಅವಂಗೆ ರಿಟೈರ್ಮೆಂಟ್ ಕೊಟ್ಟನೆ... ನಂಗೆ ಕಂಪ್ಯೂಟರ್ ಕಲ್ಸಿ ನೀ ಬೇಕಾರೆ ನಿನ್ನ ಗೂಡೆ ಹತ್ರ ಹೋಕ್...'ತಾ ಯಮ ಹೇಳ್ತ್....
ತನ್ನ ಬಾಣ ತನ್ನ ಕುರ್ಚಿಗೇ ಬಂದ್ ಚುಚ್ಚಿಕಂಡದನ್ನ ಕಂಡ್ ಚಿತ್ರಗುಪ್ತ ಕಣ್ಣೊರೆಸಿಕಂಡ್ ಮನೆ ಕಡೆ ನಡ್ತ್... ಚೋಮುಣಿ ಮುಖಲೊಂದು ಸಣ್ಣ ನಗು ಕಾಣ್ಸಿಕಂಡ್ ಮಾಯ ಆತ್ !
- 'ಸುಮಾ'
arebhase@gmail.com
No comments:
Post a Comment