ಅದ್ ಬೆಳಗಿನ ಜಾವ ಮೂರು ಗಂಟೆ. ಮೈಸೂರ್ BUS STAND ಲಿ ಇಳ್ದ್, ನನ್ನೂರು ಕಡೆ ಹೋಗ್ವ ಬಸ್ನ ಹುಡ್ಕಂಡ್ ಪ್ಲಾಟ್ಫಾರಂನಿಂದ ಪ್ಲಾಟ್ಫಾರಂಗೆ ಅಲ್ದಾಡ್ತಿದ್ದೆ. ಮಡಿಕೇರಿ ಕಡೆ ಹೋಗ್ವ ಬಸ್ ದೂರಲಿ ನಿಂತಿರ್ದು ಕಾಣ್ತ್. ಬಸ್ ಬಾಗ್ಲ್ ಹತ್ರ ತುಂಬಾ ಜನ ನಿಂತ್ಕಂಡ್ ಮೈ ಕೈ ತೊರ್ಸಿಕಂಡ್ ಡ್ರೈವರ್ ಕಂಡೆಕ್ಟರ್ಗೆ ಬಾಯಿಗೆ ಬಂದಂಗೆ ಬೈತಿದ್ದೊ...ಹತ್ರ ಹೋಗಿ ನೋಡಿರೆ, ನಂಗೆ ಪರಿಚಯದ ಲವ, ಅವ್ನ ಹೆಣ್ ಮತ್ತೆ ಭಾಗಮಂಡಲದ ರಿತೇಶ್ ಆ ಗುಂಪುಲಿ ಇದ್ದೊ. `ನೀ ಮಾತ್ರ ಈ ಬಸ್ಗೆ ಹತ್ ಬೇಡ...' ಮೂರು ಜನನೂ ಒಂದೇ ಉಸುರುಲಿ ಹೇಳ್ದೊ...ಸಿಕ್ಕಿದ ಬಸ್ ಹತ್ತುದು ಬಿಟ್ಟು ಇವರದ್ದೆಂಥಪ್ಪ ಪಿರಿಪಿರಿತಾ ಕೇಳಿರೆ....
ಪುನ: ಮೈ ಕೈ ತೊರ್ಸಿಕಂಡ್ ಮೂರು ಜನನೂ ಒಬ್ಬರ ಹಿಂದೆ ಒಬ್ರು ನಡ್ದ ಕಥೆ ಹೇಳಿಕೆ ಶುರುಮಾಡ್ದೊ. ನಾ ಬಂದ ಬಸ್ಗಿಂತ ಮೊದ್ಲು ಅವ್ರಿದ್ದ ಬಸ್ ಬೆಂಗಳೂರು ಬಿಟ್ಟಿತ್ತ್. ನಾ ಲಾಯ್ಕ ನಿದ್ದೆ ಮಾಡ್ಕಂಡ್ ಮೈಸೂರು ತಲುಪಿದ್ದೆ. ಆದ್ರೆ ಅವು ಅಲ್ಲಿಂದ ಇಲ್ಲಿ ತನಕ ಕಣ್ಣು ಮುಚ್ಚಿತ್ಲೆ...ಬದ್ಲಿಗೆ ಮೈ ಕೈ ತೊರ್ಸಿಕಂಡ್ ಗಾಯ ಮಾಡಿಕಂಡ್ ಬಿಟ್ಟಿದ್ದೊ. ಕಾರಣ ಆ ಬಸ್ಲಿದ್ದ ತಿಗಣೆ ಸಂತಾನ ! ಬಸ್ ಲೈಟ್ ಆಫ್ ಮಾಡ್ದ ಕೂಡ್ಲೇ, ಸೆರೆಮರೆಲಿದ್ದ ಅಪ್ಪ ತಿಗಣೆ, ಅಮ್ಮ ತಿಗಣೆ, ಮಕ್ಕತಿಗಣೆ, ಅಜ್ಜ ತಿಗಣೆ, ಅಜ್ಜಿ ತಿಗಣೆ ಎಲ್ಲಾ ಸೇರ್ಕಂಡ್ ದಾಳಿ ಇಟ್ಟಿದ್ದೊ... ಆ ಬಸ್ನ ಕ್ಲೀನ್ ಮಾಡದೆ ಎಷ್ಟು ದಿನ ಆಗಿತ್ತೋ ಏನೋ...ಹಂಗೆ ತಿಗಣೆ ಕಚ್ಚಿಸಿಕಂಡವ್ರ ಸಿಟ್ಟು ಬಸ್ ಡ್ರೈವರ್ ಮತ್ತೆ ಕಂಡೆಕ್ಟರ್ ಕಡೆಗೆ ತಿರ್ಗಿತ್ತ್. ಮೈಸೂರು ತಲುಪಿದ ಕೂಡ್ಲೇ, ಬಸ್ಂದ ಇಳ್ದ್ ಜಗಳ ಶುರು ಮಾಡಿದ್ದೋ. ಏನೇ ಆದ್ರೂ ತಿಗಣೆ ಬಸ್ಲಿ ಬಾಲೆ. ನಮಗೆ ಬೇರೆ ಬಸ್ ಬೇಕುತಾ ಹಠ ಹಿಡ್ದಿದ್ದೊ.ಕೊನೆಗೆ ಮಡಿಕೇರಿಗೆ ಹೋಗವ್ಕೆ ಗೋಣಿಕೊಪ್ಪಕ್ಕಾಗಿ ಹೋಗುವ ಬಸ್ ಹತ್ತಿಸಿ, ಕಂಡಕ್ಟರ್ ಕೈ ತೊಳ್ಕಣ್ತ್. ಕುಶಾಲನಗರ ಕಡೆ ಹೋಗವು ಮತ್ತೆ ತಿಗಣೆ ಕಚ್ಚಿಸಿಕಂಡೇ ಅದೇ ಬಸ್ಲಿ ಪ್ರಯಾಣ ಮಾಡ್ದೊ. ಇದ್ನೆಲ್ಲಾ ನೋಡ್ತಿದ್ದ ನಾನ್ ಮಾತ್ರ ನಾಲ್ಕು ಗಂಟೆವರೆಗೆ ಕಾದ್ ಬೇರೆ ಬಸ್ ಹತ್ತಿದೆ.
ಈಗ ಒಂದು ತಿಂಗಳ ಹಿಂದೆ ಸಾರಿಗೆ ಮಂತ್ರಿ ಆರ್ ಅಶೋಕ್ ಡೆಲ್ಲಿಗೆ ಹೋಗಿ ಗರಿ ಗರಿ ಬಟ್ಟೆ ಹಾಕಂಡ್ ಒಂದ್ ಪ್ರಶಸ್ತಿ ತಕ್ಕಂಡಿದ್ದೊ. ಅದು ಅತ್ಯುತ್ತಮ ಸೇವೆಗಾಗಿ ಸೆಂಟ್ರಲ್ ಗೌರ್ನಮೆಂಟ್ ಕೊಡ್ವ ಪ್ರಶಸ್ತಿ. ಆ ಪ್ರಶಸ್ತಿ ಕೊಟ್ಟವ್ರನ್ನ ಒಮ್ಮೆ ಈ ತಿಗಣೆ ಬಸ್ಲಿ ಕೂರ್ಸೊಕು.... ಆಗ ಗೊತ್ತಾದೆ ನಮ್ಮ ಕೆಎಸ್ಆರ್ಟಿಸಿ `ಸೇವೆ'
- `ಸುಮ'
arebhase@gmail.com
No comments:
Post a Comment