ಅಲ್ಲಿ ಎಲ್ಲೋ ನನ್ನ ಮೊಬೈಲ್ ರಿಂಗ್ ಆದಂಗೆ ಆಗ್ತಾ ಇತ್ತ್. ತಕ್ಷಣ ಎಚ್ಚರ ಆತ್ ..ಗಂಟೆ
ನೋಡ್ರೆ ಆರೂವರೆ ಆಗಿತ್..ಅಲ್ಲೇ ಹತ್ರ ಇದ್ದ ಮೊಬೈಲ್ ಕಡೆ ಕಣ್ಣಾಡಿಸಿದೆ.. ನಾಲ್ಕ್ ಮಿಸ್ಸ್ ಡ್ ಕಾಲ್ ಇತ್ತ್ ..ಅಯ್ಯೋ ಕನಸಲಿ ಅಲ್ಲ ನಿಜವಾಗಿ ಮೊಬೈಲ್ ರಿಂಗ್
ಆಗಿತ್ತ್ ..ನೋಡ್ರೆ ನನ್ನ ಫ್ರೆಂಡ್ ಕಾಲ್ ! ...ಯಾಕಪ್ಪ ಇವಳಿಗೆ ಎಂತಾತ್ ,...ಹೊತಾರೆ ಹೊತಾರೆ ನಾಲ್ಕ್ ಸಲ ಯಾಕೆ ಕಾಲ್ ಮಾಡಿಟ್ಟುತಾ ಗ್ಯಾನ ಮಾಡಿಕಂಡ್ ನಾನೇ ಫೋನ್ ಮಾಡ್ದೆ..ಅತ್ತಂದ ಅವ್ಳು ಹೇಳ್ತ್ , ಇಂದ್ ಕಾಲೇಜಿಗೆ ರಜೆ ಗಡ ಅಲ್ಲಿ ನ್ಯೂಸ್ ಚಾನೆಲ್ ಲಿ ಕೊಡ್ತಾ ಒಳೋ ನೋಡ್ ತಾ ..ನಾನ್ ಹಾಸಿಗೆಂದ ಎದ್ದವಳೇ ಹೋಗಿ ಟಿ.ವಿ. ಹಾಕಿದೆ..ಅದರಲಿ ನಮ್ಮ
ಕರ್ನಾಟಕ ರಾಜ್ಯ ಕಂಡ ಅತ್ಯಂತ ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ತೀರಿ
ಹೋದಕ್ಕೆ ಉಡುಪಿ ಮತ್ತೆ ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ರಜೆ ತಾ ..
ಅತ್ತಂದ,ಇತ್ತಂದ ಫೋನ್ ...ರಜೆ ಉಟ್ಟುತಾ ಟೆ.ವಿ. ಲಿ ..ಇಲ್ಲೆತಾ ಪೇಪರ್ಲಿ... ಕೊನೆಗೆ ಹಂಗೂ ಹಿಂಗೂ ಮಾಡಿ ಕ್ಲಾಸಿಗೆ ಹೋದುತಾ ನಿರ್ಧಾರ ಮಾಡಿ ಆಗಿತ್ತ್ ಅಷಟ್ ಹೊತ್ತಿಗಾಗಲೇ ಗಂಟೆ ಎಳ್ ಆಗಿತ್ ... ಅರ್ಧ ಗಂಟೇಲಿ ಎಲ್ಲಾ ಕೆಲಸ ಮುಗ್ಸಿ ಹೊಕಾರೆ ಸಾಕಾಗಿತ್...ಅಂತೂ ನನ್ನ ಬಸ್ ನನಗಾಗಿ ಕಾಯ್ತಾ ಇತ್..ಡ್ರೈವರ್ ಅಂಕಲ್ ಕೆಳ್ದೋ, ಇಂದ್ ರಜೆ ಇಲ್ಲೇನಾ ತಾ.. .ನಾ ಗೊತ್ಲೇತೇಳಿ ನನ್ನ ಪಾಡಿಗೆ ಹೋಗಿ ನನ್ನ ಮಾಮೂಲು ಸೀಟ್ಲಿ ಕುದ್ದೆ..ಯಾಕೋ ನಿದ್ದೆನೂ ಸರಿಯಾಗಿ ಬಿಟ್ಟಿತ್ಲೇ..ತಿಂಡಿನೂ ತಿಂದಿತ್ಲೇ ..ಜೋರಾಗಿ ಹಸಿವು ಬೇರೆ ಆಗ್ತಾ ಇತ್...ಸರಿ ಎಂತ ಮಾಡದು ,ಬಸ್ಸ್ ಲಿ ಒಂದ್
ಗಂಟೆ ಒಳ್ಳೆ ನಿದ್ರೆ ಮಾಡಿ, ಕ್ಯಾಂಟೀನ್ ಗೆ ಹೋಗಿ ತಿಂಡಿ ತಿಮ್ಬೋದು
ತಾ ಗ್ಯಾನ ಮಾಡಿ ಹಂಗೆ ಕುದ್ದಿದೆ...ಇಂದ್ ಯಾಕೋ ನಮ್ಮ ಕಂಡೆಕ್ಟರ್ ಅಣ್ಣ ಸ್ವಲ್ಪ ಲೇಟಾಗಿ ಟಿಕೆಟ್ ತೆಗಿಯೊಂಗೆ ಕಾಣ್ತಾ ಇತ್..ಸರಿ ಒಂದ್ಸಲ ಟಿಕೆಟ್ ತೆಗ್ದ ಮೇಲೆ ಮಲ್ಗೊನೋ ತಾ ಮನಸ್ ಲೇ ಯೋಚನೆ ಮಾಡ್ತಾ ಇದ್ದೆ...ಅಷ್ಟ್ಹೊತ್ತಿಗೆ ನಮ್ಮ ಬಸ್ ರೈಲ್ವೆ ಸ್ಟೇಷನ್ ಹತ್ರ ಬಂದ್
ತಲಪಿತ್...ಅಲ್ಲೇ ಸುಮಾರ್ ಜನ ಹತ್ತಿದೋ..ನೋಡ್ತಾ ಇದ್ದಂಗೆ ನಮ್ಮ ಬಸ್ ಫುಲ್
ಆಗುವಷಟ್ ಜನ ಬಂದ್ ಹತ್ತಿದೋ.. ಅವರಲ್ಲಿ ಒಂದ್ ಸಣ್ಣ ಸಂಸಾರ ಇತ್..ಗಂಡ, ಹೆಣ್ ಮತ್ತೆ 2 ಮಕ್ಕ...ಒಂದ್ ಕೂಸಿಗೆ ನಾಲ್ಕ್ ವರ್ಷ ಇರುದೇನೋ..ಮತ್ತೊಂದ್ ಕೂಸಿಗೆ ಒಂದೂವರೆ ವರ್ಷ ಆಗಿರದು..ಗಂಡ ನಾಲ್ಕ್ ಮಕ್ಕಳಿಗೆ ಸಮ ಆಗಿರೋ ಒಂದ್ ದೊಡ್ಡ
ಬ್ಯಾಗ್ ಹಿಡ್ಕಂಡ್ ಹಿಂದೆಂದ ಹತ್ತಿತ್..ಹೆಣ್ಣ್ ಆ ಎರಡ ಮಕ್ಕಳ ಹಿಡ್ಕಂಡ್ ಮುಂದೆಂದ ಹತ್ತಿತ್..ಒಳ್ಳೆ ಬ್ಯಾಗ್ ತಂದ್ ಕೊಡೋವರಂಗೆ ಆ ಸಣ್ಣ ಕೂಸನ ನನ್ನ ಕೈಲಿ ಕೊಟ್ಟು...ಇನ್ನೊಂದ್ ಕೂಸನ ತನ್ನ ಹತ್ರ ಆ ಆಂಟಿ ಕೂರ್ಸಿಕಂಡ್ತ್ ... ಅವಳ ಮುಖಲಿ ಸಣ್ಣ ನಗೆ ಬೇರೆ..
ಇತ್ತ ನನ್ನ ಒಂದ್ ಕೈಲಿ ಬ್ಯಾಗ್, ಇನ್ನೊಂದ್ ಕೈಲಿ ಬುಕ್ ... ಈಗ ಈ ಕೂಸ್ ಬೇರೆ,...ಇಂದ್ ಬಸ್ಲಿ ನಾನ್ ನಿದ್ರೆ ಮಾಡ್ದಂಗೆ ತಾ ಗ್ಯಾನ ಮಾಡಿಕಂಡೆ...ಆ ಆಂಟಿ ಮಕ್ಕಳೇ ನೀರ್ ಬೇಕಾ ..ಮಿಟಾಯಿ ಬೇಕಾ ..ರೀ ಟಿಕೆಟ್ ತೆಗಿಯನಿ ಅದ್ ಇದ್ ತ ಅತ್ತಂದ ಇತ್ತ, ಇತ್ತಂದ ಅತ್ತ ತಿರ್ಗಿಕಂಡ್ ಮಾತಾಡ್ತಾ ಇತ್..ವಿಚಿತ್ರ ಹೇಳ್ರೆ ಅವು ಮಾತಾಡ್ತಿದ್ದದ್ದ್ ಇಂಗ್ಲೀಷಿಲಿ !..ಓ ಈ ಆಂಟಿಗೆ ಕನ್ನಡ ಬಾಲೆ ಕಂಡದೆ ತಾ ಅನ್ಕಂಡೆ ..ಹಂಗೆ ಬಸ್ ಹೊರಟ್ ಒಂದ್ ೫ ನಿಮಿಷ
ಆಗಿರು ದು. ಒಂದ್ ಫೋನ್ ಬಾತ್..ಆಶ್ಚರ್ಯ ಹೇಳ್ರೆ ಆ ಗಂಡ ಹೆಣ್ಣು ಇಬ್ಬರೂ ಫೋನ್ ಲಿ ಕನ್ನಡಲೇ ಮಾತಾದ್ದೋ..ಪುಣ್ಯಾ ಈ ಆಂಟಿ ನನ್ನ ಹತ್ರ ಮಾತಾಡದಿದ್ದರೆ ಸಾಕ್ ತಾ ಅಂದ್ಕಂಡೆ. ಅಷ್ಟೋತ್ತಿಗೆ ಆ ಆಂಟಿ, 'ನೀ ಏನ್ ಮಾಡ್ತಾ ಒಳ' ತಾ ಪೀಠಿಕೆ ಹಾಕಿ ಮಾತಾಡಿಕೆ ಶುರು
ಮಾಡ್ತ್..ನಾನ್ ಸ ಬೇರೆ ದಾರಿ ಇಲ್ಲದೆ ಮಾತಾಡಿದೆ..ಹಂಗೆ ನಂಗೆ ಸ್ವಲ್ಪ ಕುತೂಹಲ ಜಾಸ್ತಿ ಆಗಿ, ನೀವೆಲ್ಲಿರ್ದು ತಾ ಕೇಳ್ದೆ...ಅಯ್ಯೋ ರಾಮ ಯಾಕೆ ಬೇಕಿತ್ ನಂಗೆ ಕೇಳುವ
ಕೆಲಸ..'ನಾನ್ ಇರ್ದು ಬೆಂಗಳೂರ್' ..ತಾ ಶುರು ಮಾದ್ದ ಆ ಆಂಟಿ ನಮ್ಮ ಯುನಿವರ್ಸಿಟಿ ಗೇಟ್ ಬಂದರೂ, ಅವರ ಹಿಸ್ಟೇರಿ ಹೇಳಿ ಮುಗಿಸಿತ್ಲೆ . ನನಗೋ ತಲೆ ಅಲ್ಲಾಡಿಸಿ
ಅಲ್ಲಾಡಿಸಿ ಸಾಕಾಗಿತ್..ನಾನ್ ಕ್ಲಾಸಿಲಿ ನಿದ್ದೆ ಸಾ ಹಂಗೆ ತೂಗುಲೇ...ಇನ್ನೇನು ನನ್ನ
ತಲೆ ವೈಬ್ರೇಶನ್ ಮೋಡ್ ಗೆ ಹೊದೊಂದೇ ಬಾಕಿ.. ಪುಣ್ಯಕ್ಕೆ ನನ್ನ ಸ್ಟಾಪ್
ಬಾತ್..ಬದುಕಿದೆಯಾ ಬಡ ಜೀವವೇ ತಾ ಆ ಆಂಟಿ ಕೈಗೆ ಕೂಸ್ ಕೊಟ್ಟೆ...ಆ ಇಂಗ್ಲೀಷ್ ಜೋಗುಳಕ್ಕೆ ಕೂಸ್ ನಿದ್ದೆ ಮಾಡಿತ್ ...ಅದನ್ನ ಅವರಮ್ಮನ ಕೈಗೆ ಕೊ ಟ್ಟು ಟಾಟಾ ಮಾಡಿ ಬಸ್ಸ್ ಇಳಿಯಕನ ನನ್ನ ನಿದ್ರೆ ಮಾಯಾ ಆಗಿ ಹೊಗಿತ್ತ್ ..ಈ ಆಂಟಿನ ಇಂಗ್ಲೀಷ್ ವ್ಯಾಮೋಹಕ್ಕೆ ನಗಾಡೋಕೋ ..ಇಲ್ಲೆ ಮರ್ಡೊಕೋ ತಾ ಗೊತ್ತಾತ್ಲೇ. ಇಲ್ಲಿ ನಮ್ಮ ಮುಖ್ಯಮಂತ್ರಿ ಚಂದ್ರು
..ಆ ರಕ್ಷಣಾ ವೇದಿಕೆವು..ಕನ್ನಡ ಉಳಿಸಿ ಬೆಳೆಸಿ..ಕನ್ನಡ ಶಾಲೆ ಮುಚ್ಚ ಕ್ಕಾದ್...ಕಡ್ಡಾಯ ಕನ್ನಡ ಕಲಿಕೆತೆಲ್ಲಾ ಮಾತಾಡುವೆ..ಆದರೆ ನಮ್ಮ ಕನ್ನಡದ ತಾಯಂದಿರೇ ಸ್ವಲ್ಪ ಕಂಗ್ಲೀಷ್ ಕಲ್ಸಿರಾದ್ರೂ ನಮ್ಮ ಕನ್ನಡ ಅಲ್ಪ ಸ್ವಲ್ಪ ಉಳಿಯೋದೇನೋ...ಈ ಆಂಟಿ ಥರ ಇಂಗ್ಲೀಷ್ ಕಲ್ಸಿರೆ, ಈಗ ನಾವು ಆ ಡೈನೋಸಾರ್ ನ ಪಳೆಯುಳಿಕೆ ತಾ ಕರ್ದವೆ ಅಲ, ಹಂಗೆ ಕನ್ನಡನೂ
ಪಳೆಯುಳಿಕೆ ತಾ ಕರೆಯೋ ಕಾಲ ದೂರ ಇಲ್ಲೇತಾ ಮನ್ನಸ್ಲೇ ಗ್ಯಾನ ಮಾಡಿಕಂಡ್ ಕ್ಯಾಂಟೀನ್ ಹತ್ರ ಹೊರಟೆ...

- ಪವಿತ್ರ ನರೆಯನ
ಕನ್ನಡ ಆಂಟಿಯ ಇಂಗ್ಲಿಷ್ ವ್ಯಾಮೋಹತ ಶೀರ್ಷಿಕೆ ಹಾಕಿ ನೀವು ಬೇರೆ ಏನೋ ಬರ್ದೊಳರಿ
ReplyDelete