ಹಾಯ್...ಹೆಂಗೊಳರಿ ? ಓ ನಾ ನನ್ನ ಪರಿಚಯನೇ ಮಾಡಿಕಂಡತ್ಲೆ ಅಲಾ, ನನ್ನ ಹೆಸ್ರು ಕುರ್ತಾ... ಮದುವೆ ಮತ್ತೆ ಏನಾದ್ರೂ ದೊಡ್ಡ ಜಂಬರಗ ಇದ್ದರೆ ನನ್ನ ನೆನಪಾದೆ. ಹೈದಂಗ ನನ್ನ ಹಾಕಂಡ್ ಮಿಂಚಿವೆ. ಗೂಡೆಗಳಿಗೆ ಲೈನ್ ಹೊಡ್ದವೆ. ಕೋರಮಂಗಲ ಫೋರಮ್ ಮಾಲ್ ಎದುರು ಇರ್ವ ಕುರ್ತಾ ಕಲೆಕ್ಸನ್ಸ್ನಲ್ಲಿ ತುಂಬಾ ನೆಮ್ಮದಿಯಾಗಿ ನನ್ನಿಷ್ಟಕ್ಕೆ ನಾನಿದ್ದೆ. ಬಿಳಿ ಬಣ್ಣದ ಗೊಂಬೆಗೆ ಆಕಾಶ ನೀಲಿ ಬಣ್ಣದ ನನ್ನನ್ನ ಹಾಕಿ ಶೋಕೇಸ್ ಒಳಗೆ ಇಟ್ಟಿದ್ದೊ. ಅವನ್ಯಾವನೋ ಪುಣ್ಯಾತ್ಮ ಫೋರಂಮಾಲ್ನ ಮೆಕ್ಡೊನಾಲ್ಡ್ಲಿ ಕುದ್ದಕಂಡ್ ಹೊಟ್ಟೆತುಂಬಿಸಿಕಾಕನ ನನ್ನ ದೂರಂದ ನೋಡಿಬಿಟ್ಟಿತ್. ಅಷ್ಟಕ್ಕೇ ಅಂವ ನಂಗೆ ಮರುಳಾಗಿಬಿಡ್ದಾ....ಸೀದಾ ನಾನಿದ್ದಲ್ಲಿಗೆ ಬಂದವನೇ ನನ್ನ ಓನರ್ ಹೇಳ್ದ ರೇಟ್ ಕೊಟ್ಟ್ ಮನೆಗೆ ತಕ್ಕಂಡ್ ಹೋಗಿಬಿಡ್ತ್. ಇನ್ನೆರಡ್ ತಿಂಗಳಲ್ಲಿ ಅವನ ಮದುವೆ. ಆದಿನ ರಿಸೆಪ್ಷನ್ ಹೊತ್ತಿಗೆ ಹಾಕಿಕೆ ಅಂವ ನನ್ನನ್ನ ತಕ್ಕಂಡಿತ್.
ಅಬ್ಬಾ ನಂಗೆ ಎಂಥಾ ಟ್ರೀಟ್ಮೆಂಟ್ ! ಅವನ ವಾರ್ಡ್ ರೋಬ್ನಲ್ಲಿ ನಂಗೆ ಬೇರೆಯದ್ದೇ ಕೋಣೆ. ಆಗ್ಲೇ ಅಲ್ಲಿದ್ದ ಟೀಷರ್ಟ್ ಫಾರ್ಮಲ್ ಷರ್ಟ್ ಗಳಿಗೆ ನನ್ನ ನೋಡಿ ಹೊಟ್ಟೆ ಉರಿ. ಅವು ಎಷ್ಟೋ ದಿನಂದ ನೀರು ಕಾಣದೆ, ಇಸ್ತ್ರಿ ಇಲ್ಲದೆ ವಾಸನೆ ಹೊಡೀತಾ ಅಲ್ಲಿ ಬಿದ್ದಿದ್ದೊ. ಆದ್ರೆ ನಂಗೆ ಮಾತ್ರ ಒಳ್ಳೇ ಪರ್ಫ್ಯೂಮ್ ಹಾಕಿ ಇಟ್ಟ್ ಲಾಯ್ಕ ನೋಡ್ಕಳ್ತಿತ್. ಮನೇಲಿ ಇರ್ಕಾಕನ ಗಂಟೆಗೆ ಒಂದ್ಸಲ ನನ್ನ ನೋಡಿತ್ಲೆತೇಳಿರೆ ಅವಂಗೆ ಸಮಧಾನನೇ ಇಲ್ಲೆ. ಮದುವೆ ದಿನ ನನ್ನ ಹಾಕ್ಕಂಡ್ರೆ ಹೆಂಗೆ ಕಾಣ್ದುತಾ ಹಂಗೆನೇ ಮಲಗಿಕಂಡ್ ಕನಸ್ ಕಾಣ್ತಿತ್. ನಂಗೋ ತುಂಬಾ ಖುಷಿ, ಅಲ್ಲಿ ಅಂಗಡಿಲಿ ಇರ್ಕಾಕನ ಆ ಹುಡುಗರು ದಿನಕ್ಕೆ ಒಂದು ಸಲ ನನ್ನ ಮೇಲಿದ್ದ ದೂಳು ತೆಗೆದ್ರೆ ಅದೇ ನನ್ನ ಪುಣ್ಯ. ಆದ್ರೆ ಈಗ ಇಲ್ಲಿ ಇವನ ಮನೇಲಿ ನಾನೇ ಮಹಾರಾಜ !
ಒಂದು ದಿನ ಇವನ ಅಪ್ಪನ ಕಾಲ್ ಬಾತ್. ಎಂಥ ಹೇಳ್ದೊ ನಂಗೊಂದೂ ಕೇಳಿತ್ಲೆ... ಬೈಕ್ ತಕ್ಕಂಡ್ ಬುರ್ರಾತಾ ಹೋಗಿಬಿಡ್ತ್. ವಾಪಸ್ ಬಾಕಾನ ಅವನ ಕೈಲಿ ಮಿರ ಮಿರ ಮಿಂಚುವ ಹೊಚ್ಚ ಹೊಸ ಪ್ಯಾಂಟ್, ಅದಕ್ಕೆ ಸರಿಯಾದ ಕಲರ್ನ ಷರ್ಟ್ ಟೈ... ಜೊತೆಗೊಂದು ಕೋಟ್. ಅದ್ ಅವನ ಅಪ್ಪ ಕೊಡ್ಸಿದ್. ರಿಸೆಪ್ಸನ್ಗೆ ಅದೇ ಹಾಕ್ಕಣೋಕುತಾ ಒತ್ತಾಯ ಬೇರೆ ಮಾಡಿದ್ದೊ ಗಡ. ಅಪ್ಪನ ಮಾತು ಮೀರುದು ಬೇಡಾತ ಅಂವ ಆ ಡ್ರೆಸ್ನ ಹಂಗೆ ತಂದಿತ್. ಈಗ ಅದ್ರ ಮೇಲೆನೇ ಅವನ ಇಂಟ್ರೆಸ್ಟ್. ವಾರ್ಡ್ ರೋಬ್ ಲಿ ನಾನಿದ್ದೆಯಲ್ಲಾ ಆ ಜಾಗಕ್ಕೆ ಆ ಹೊಸ ಡ್ರೆಸ್ ಬಾತ್. ನಂಗೆ ಆ ವಾಸನೆ ಹೊಡೆಯುವ ಷರ್ಟ್ ಗಳ ಜೊತೆ ಸ್ಥಾನ ! ಅಲಾ ಇವಂಗೆ ಒಂದು ಚೂರು ಸ್ವಂತ ಬುದ್ಧಿ ಬೇಡ... ನನ್ನನ್ನ ಇಷ್ಟಪಟ್ಟು ತಕ್ಕಂಡ್ಬಂದ್ ಹಿಂಗೆ ಮಾಡ್ತುಟ್ಟಲ್ಲಾ....ನನ್ನನ್ನ ಮದುವೆ ದಿನ ಹಾಕ್ಕಂಡ್ರೆ ಅವನ ಅಪ್ಪಂಗೆ ಬೇಜಾರು ಗಡ. ಹಂಗಾರೆ ನನ್ನ ನೋವು ಕೇಳ್ದು ಯಾರು? ಆ ಅಂಗಡಿಲಾದ್ರೂ ನೆಮ್ಮದೀಲಿ ಇದ್ದೆ. ಇಲ್ಲಿ ತಂದು ಹಿಂಗೆ ಹಾಕಿಬಿಟ್ಟುಟ್ಟಲ್ಲಾ.... ಈ ಮನುಷ್ಯರ ಮನಸ್ಸೇ ಹಂಗೆ...ಮಂಗನ ಥರ. ಒಂದು ಮರಂದ ಒಂದು ಮರಕ್ಕೆ ಹಾರುದೇ ಕೆಲ್ಸ ! ಯಾರಿಗೂ ಸ್ವಂತಿಕೆ ಇಲ್ಲೆ....
- `ಸುಮಾ'
arebhase@gmail.com
No comments:
Post a Comment