ಲಾಲ್ ಬಾಗ್ ದೊಡ್ಡ ಆಲದ ಮರ. ಅದ್ರ ಕೆಳಗೆ ನಾನು ನನ್ನ ಗೂಡೆ ಇಬ್ಬರೇ...ಕೈ ಕೈ ಹಿಡ್ಕಂಡ್ ಭವಿಷ್ಯದ ಬಗ್ಗೆ ಮಾತಾಡ್ತಿದ್ದೊ. ಎಷ್ಟು ಮಕ್ಕ ಬೇಕು... ಹೆಣ್ಣಿರೋಕಾ ಇಲ್ಲ, ಗಂಡು ಆಗಿರೋಕಾ? ಎಲ್ಲಿ ಸ್ಕೂಲ್ಗೆ ಸೇರ್ಸುದು..ಹಿಂಗೆ ನಮ್ಮದೇ ಲೋಕರೂಢಿ ಮಾತುಗ. ನಾ ನಂಗೆ ಹೆಣ್ಣುಕೂಸು ಬೇಕುತೇಳಿರೆ, ಅವ್ಳು ಮಾತ್ರ ಗಂಡು ಕೂಸೇ ಬೇಕೂತಾ ಹಠ ಮಾಡ್ತಿತ್. ಕೊನೆಗೆ ಜಗಳ ಬೇಡಾತ ನಾವಿಬ್ಬರೂ ಒಂದು ಒಪ್ಪಂದಕ್ಕೆ ಬಂದೋ...ಅದು, ಅವಳಿ ಬಾಳೆಹಣ್ಣು ತಿಂಬದು. ಅವಳಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕ ಆದವೆ ಗಡ ! ಮುಂದೆ ಮಕ್ಕಳ್ನ ಎಲ್ಲಿ ಸ್ಕೂಲ್ಗೆ ಸೇರ್ಸುದು? ಏಕಂದ್ರೆ ನಾವಿಬ್ರೂ ಕೆಲ್ಸಕ್ಕೆ ಹೋದವೆ. ಆಗ ಮಕ್ಕಳ್ನ ನೋಡಿಕಣಿಕೆ ಆಕು ಅಲಾ... ನಾನ್ ನಮ್ಮ ಅಪ್ಪ, ಅಮ್ಮನ ಹತ್ರ ಮಕ್ಕಳ್ನ ಬಿಡ್ನೋ ತೇಳಿರೆ, ಅವ್ಳು ಅವ್ಳ ಅಪ್ಪ-ಅಮ್ಮನ ಹತ್ರ ನಮ್ಮ ಮಕ್ಕಳ್ನ ಬಿಡ್ನೋತಾ ಹೇಳ್ತಿತ್...ಕೊನೆಗೆ ಯಾವುದೂ ಬೇಡ, ಒಳ್ಳೆ ಹಾಸ್ಟೆಲ್ಗೆ ಸೇರ್ಸುದುತಾ ತೀರ್ಮಾನ ಆತ್. ಇಷ್ಟೆಲ್ಲಾ ಮಾತಾಡಿ ಆದ್ಮೇಲೆ, ನಮ್ಮ ಮಾತು ಇನ್ನು ಸ್ವಲ್ಪ ಹಿಂದಕ್ಕೆ ಬಂದ್ ಮದುವೆ ದಿನ ಯಾವ ಕಲರ್ನ ಬಟ್ಟೆ ಹಾಕುದೂತಾ ಚರ್ಚೆ ಶುರುವಾತ್. ನನ್ನವಳಿಗೆ ಗುಲಾಬಿ ಬಣ್ಣ ಇಷ್ಟ. ನಾನೋ ಆಕಾಶ ನೀಲಿ ಬಣ್ಣನ ಇಷ್ಟ ಪಡಂವ ! ಕೊನೆಗೂ ಅಲ್ಲೂ ರಾಜೀ ತೀರ್ಮಾನ ! ಅವ್ಳು ನಿಲಿ ಮತ್ತೆ ಗುಲಾಬಿ ಮಿಶ್ರ ಬಣ್ಣದ ಸೀರೆ ಉಟ್ಟರೆ, ನಾ ಅಂಥದ್ದೇ ಬಣ್ಣದ ಕುರ್ತಾ ಹಾಕುದೂತಾ ಒಪ್ಪಚಾರ ಆತ್. ಮುಂದಿನ ಮಾತುಕತೆ ಫಸ್ಟ್ ನೈಟ್ ಬಗ್ಗೆ ! ಯಾರು ಮೊದ್ಲು ಕಿಸ್ ಕೊಡ್ದುತಾ ನಮ್ಮಿಬ್ಬರ ಮಧ್ಯೆ ಮತ್ತೆ ಬಿಸಿ ಬಸಿ ವಾಗ್ಯುದ್ಧ ! ಅವ್ಳು ನೀನೇ ಕೊಡೋಕೂತಾ ಹೇಳಿರೆ, ನೀನೇ ಮೊದ್ಲು ಕಿಸ್ ಕೊಡೋಕೂತ ನನ್ನ ಹಠ. ಹಿಂಗೆ ಮಾತಾಡ್ತ... ಮಾತಾಡ್ತ... ವಾತಾವರಣ ತುಂಬಾ ರೊಮ್ಯಾಂಟಿಕ್ ಆದಂಗೆ ಅನ್ನಿಸ್ತ್. ಮೆಲ್ಲೆ ನನ್ನ ಗೂಡೆನ ತಬ್ಬಿ ಹಿಡ್ಕಂಡ್ ಇನ್ನೆನು ಅವ್ಳ ತುಟಿಗೊಂದು ಸಿಹಿಮುತ್ತು ಕೊಡೋಕು...ಅಷ್ಟೊತ್ತಿಗೆ `ಕೀಂ...ಕೀಂ....ಕೀಂ...' ದರಿದ್ರದ್ದ್ ಅಲ್ರಾಂ ಹೊಡ್ಕಣಿಕೆ ಶುರುಮಾಡೋಕಾ!!! ಇದ್ಯಾವ ಜನ್ಮಲಿ ನನ್ನ ಶತ್ರು ಆಗಿತ್ತೋ ಏನೋ...?
- `ಸುಮಾ'
arebhase@gmail.com
No comments:
Post a Comment