ಆಫೀಸ್ ಮುಗ್ಸಿ ಮನೆಗೆ ಹೊರಟಿದ್ದೆ. ಫೋರಂಮಾಲ್ನ ಆ ಪಾನಿಪೂರಿ ಬುಟ್ಟಿ ಎದ್ರು ಒಂದು ಪರಿಚಯದ ಮುಖ ಕಂಡ ಹಾಗೆ ಆತ್. ಜೊತೆಲೊಂದು ಪಾಪು. ಅದ್ಕೆ ನಾಲ್ಕೋ ಐದೋ ವರ್ಷ ಇರೋಕೇನೋ. ಎಡಕೈಲಿ ಪಾನಿಪೂರಿ ತಟ್ಟೆ ಹಿಡ್ಕಂಡೇ ಆ ಪಾಪು, ಅಲ್ಲೇ ಪಕ್ಕಲಿ ಉಪ್ಪು-ಮೆಣಸು ಪೂಜಿ ಮಾರ್ತಿದ್ದ ಗಿಳಿ ಮಾವಿನಕಾಯಿ ಕಡೆಗೆ ಕೈ ತೋರ್ಸ್ತಿತ್ತ್. ಆ ನನ್ನ ಪರಿಚಯದ ಮುಖ ಪಾಪುನ ಸಮಾಧಾನ ಮಾಡಿಕಂಡ್ ಪಾನಿಪೂರಿ ತಿನ್ನಿಸಿಕೆ ಟ್ರೈ ಮಾಡ್ತಿತ್ತ್. ಅದ್ ನಂಗೆ ಗೊತ್ತಿರ್ವ ಪಾರ್ಟಿ ಹೌದೋ, ಅಲ್ವೋತಾ ನೋಡಿಯೇ ಬಿಡೋಕೂತಾ ಮನಸ್ಸಾತ್. ಆದ್ರೆ ಸಣ್ಣ ಹೆದ್ರಿಕೆ. ಹೋಗಿ ಮಾತಾಡಿಸಿಕಾಕನ ನನ್ನ ಊಹೆ ತಪ್ಪಾಗಿಬಿಟ್ಟಿದ್ದರೆ... ಸ್ವಲ್ಪ ಹೊತ್ತು ದೂರಲೇ ನಿಂತ್ ನೋಡ್ನೋತೇಳಿ, ಗಿಳಿಮಾವಿನಕಾಯಿ ಮಾರ್ತಿದ್ದ ಸೈಕಲ್ ಪಕ್ಕನೇ ಇದ್ದ ಅಂಗಡೀಂದ ಎಳೆನೀರ್ ತಕ್ಕಂಡ್ ನಿಧಾನಕ್ಕೆ ಕುಡಿಯಕ್ಕೆ ಶುರುಮಾಡ್ದೆ. ಅಷ್ಟೊತ್ತಿಗೆ ಮಾವಿನಕಾಯಿ ಬೇಕೂತಾ ಆ ಪಾಪು ಮರಡಿಕೆ ಶುರುಮಾಡಿತ್ತ್. ನಾನು ಯಾರ್ನ ಗುರುತುಹಿಡಿಯೊಕೂತಾ ನಿಂತಿದ್ದೆನೋ ಆ ಮುಖ ಪಾಪುನ ಕರ್ಕಂಡ್ ಸೀದಾ ಮಾವಿನಕಾಯಿ ಮಾರುವಲ್ಲಿಗೇ ಬಂದ್ಬಿಡ್ತ್. ನನ್ನ ಊಹೆ ಸರಿಯಾಗಿತ್ತ್. ಪಾಪು ಜೊತೆ ಇದ್ದವ್ಳು ಸುಮ !
ಅದೊಂದು ಸುಂದರ ನೆನಪು. ಕಾಲೇಜು ದಿನಗಳ ಆ ಸಿಹಿ ಸಿಹಿ ನೆನಪುಗಳನ್ನೆಲ್ಲಾ ದೊಡ್ಡ ಗಂಟುಕಟ್ಟಿ, ಅದಕ್ಕೊಂದು ಚಿನ್ನದ ಫ್ರೇಂ ಹಾಕಿ, ದಪ್ಪ ಗಾಜುನ ಹಿಂದೆ ಅಡಗಿಸಿಟ್ಟ್, ಪುಟ್ಟ ಹೃದಯದೊಳಗೆ ಮಡಗಿಕ್ಕಂಡಿದ್ದೆ. ಯಾವಾಗಲಾದ್ರೊಮ್ಮೆ ಗ್ಯಾನ ಬಾಕಾಕನ, ಆ ಸಿಹಿ ನೆನಪುಗಳ ಗಂಟಿದ್ದ ಫ್ರೇಂನ ಕೈಲಿ ಹಿಡ್ಕಂಡ್ ಹಿಂದಿನ ದಿನಗಳಿಗೆ ಓಡಿ ಹೋಗ್ತಿದ್ದೆ. ಆಗ ಕಣ್ಣ್ಂದ ಸುರೀತ್ತಿದ್ದ ಎರಡು ಹನಿ ನೀರ್ಂದ ಆ ಗಾಜುನ ಉಜ್ಜಿ ಫಳ ಫಳತಾ ಮಾಡಿ ಮತ್ತೆ ಹೃದಯದೊಳಗೆ ಸೇರಿಸಿಕಣ್ತಿದ್ದೆ. ಇದ್ ನಂಗೆ ಸುಮಾ ಕೊಟ್ಟಿದ್ದ ಗಿಫ್ಟ್ !
ಅದ್ ಡಿಗ್ರಿ ಫೈನಲ್ ಇಯರ್. ನಾವು ಫ್ರೆಂಡ್ಸೆಲ್ಲಾ ಸೇರಕಂಡ್ ಚಿಕ್ಕ ಒಂದು ಟೂರ್ ಮಾಡಿದ್ದೊ. ನಮ್ಜೊತೆ ಸೆಕೆಂಡ್ ಇಯರ್ನ ಫ್ರೆಂಡ್ಸ್ಗ ಕೂಡ ಬಂದಿದ್ದೊ. ಆ ಗುಂಪ್ಲಿ ಸುಮನೂ ಇತ್ತ್. ಎರಡು ವರ್ಷಂದ ನಾ ಗಮನಿಸಿದ್ದ ಹಂಗೆ ತುಂಬಾ ಒಳ್ಳೇ ಗೂಡೆ. ಅಂಥ ಕಲರ್ ಏನೂ ಇತ್ಲೆ. ಆದ್ರೆ ಲಕ್ಷಣವಾಗಿ ಇತ್ತ್. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸು ಲಾಯ್ಕ ಇತ್ತ್. ನಾ ಕಾಲೇಜು ಕಲ್ಚರಲ್ ಸೆಕ್ರೆಟರಿ ಆಗಿದ್ದರಿಂದ ಎಲ್ಲಾ ಮಕ್ಕಳ ಜೊತೆ ಒಡನಾಟ ಇಟ್ಕಂಡಿದ್ದೆ. ಹಂಗಾಗಿ ಯಾರ್ಯಾರು ಹೆಂಗೆತೇಳುವ ಸಣ್ಣಮಟ್ಟಿಗಿನ ಜ್ಞಾನ ನಂಗಿತ್ತ್. ಸುಮಾ ಎಲ್ಲಾ ಸ್ಪರ್ಧೆಗಳಲ್ಲಿ ಕಾಣ್ಸಿಕಳ್ತಿದ್ರಿಂದ, ಅವ್ಳ ಬಗ್ಗೆ ನಾ ತಿಳ್ಕಂಡಿದ್ದೆ.
ನಮ್ಮ ಟೂರ್ ಉಡುಪಿ ತಲುಪಿಕಾಕನ ಸಾಯಂಕಾಲ ಆಗಿಬಿಟ್ಟಿತ್ತ್. ನಾವು ಸೀದಾ ಮಲ್ಪೆ ಬೀಚ್ಗೆ ಹೋದೊ. ಆಗಷ್ಟೇ ಸೂರ್ಯ ಮುಳುಗಿಕೆ ಶುರುವಾಗಿತ್ತ್. ಎಲ್ಲವೂ ಸಮುದ್ರಕ್ಕೆ ಇಳ್ದ್ ಆಟ ಆಡ್ತಿದ್ದರೆ, ನಾ ಅಲ್ಲೇ ಕಲ್ಲುಬೆಂಚು ಮೇಲೆ ಕುದ್ದ್ಕಂಡ್ ಸೂರ್ಯ ಮುಳುಗುದನ್ನೇ ನೋಡ್ತಿದ್ದೆ. ಆಕಾಶ ಮತ್ತೆ ಸಮುದ್ರ ಮುಟ್ಟುವಂಗೆ ಕಾಣುವ ದೊಡ್ಡ ಚಂದ್ರ ಬರೀ ಅರ್ಧ ಗಂಟೆಲಿ ಸಮುದ್ರದೊಳಕ್ಕೆ ಇಳ್ದ್ಬಿಟ್ಟಿತ್ತ್. ಅಷ್ಟೂ ಹೊತ್ತು ನಂಗೆ ಗೊತ್ತಿಲ್ಲದೆ ಸುಮ ನನ್ನ ಪಕ್ಕದಲ್ಲೇ ಕುದ್ದ್ಕಂಡ್ ನನ್ನಂಗೆ ಸೂರ್ಯಾಸ್ತಮಾನ ನೋಡಿತ್ತ್. `ಪ್ರಕೃತಿ ಆಟ ಎಷ್ಟು ಲಾಯ್ಕ ಅಲಾ... ಸೂರ್ಯ ಮುಳುಗಿಕಾಕನ ಆಕಾಶಲಿ ಹರಡುವ ಬಣ್ಣದ ಓಕುಳಿನ ಯಾವ ಕಲಾವಿದ ಬಿಡಿಸಿಕೆ ಆದೆ...?'ತಾ ಅವ್ಳು ನನ್ನ ಕಿವಿ ಹತ್ರ ಹೇಳಿಕಾಕನನೇ, ನನ್ನ ಪಕ್ಕಲೇ ಸುಮ ಅಷ್ಟೊತ್ತು ಕುದ್ದಿತ್ತ್ತಾ ಗೊತ್ತಾದ್.
ಮಾರನೇ ಉಡುಪಿ, ಕೊಲ್ಲೂರು ದೇವಸ್ಥಾನಗಳಿಗೆ ಸುತ್ತಾಡಿ ಸಂಜೆ ಹೊತ್ತು ಆಗುಂಬೆ ಸೇರಿಕೊಂಡೊ. ಅಲ್ಲೂ ಅದೇ ಸೂರ್ಯಾಸ್ತಮಾನ ನೋಡುವ ಅವಕಾಶ. ಜೊತೇಲಿ ಮತ್ತೆ ಸುಮ ! ಯಾಕೋ ನಂಗೆ `ಆಗುಂಬೆಯಾ... ಪ್ರೇಮಸಂಜೆಯಾ... ಮರೆಯಲಾರೆ ನಾನು...' ಹಾಡು ನೆನಪಾತ್. ಸುಮಾ ಕೂಡ ಅದೇ ಹಾಡ್ನ ನಂಗಷ್ಟೇ ಕೇಳುವಂಗೆ ಹೇಳ್ತಿತ್ತ್ ! ಬಹುಶಃ ನಮ್ಮ ಲವ್ ಅಂದೇ ಶುರುವಾತ್ ಕಂಡದೆ ! ನಾವಿದ್ದ ಬಸ್ ಆಗುಂಬೆಂದ ಶೃಂಗೇರಿ ಕಡೆ ಹೊರಡಿಕಾಕನ ಸುಮಾ ಬಂದ್ ನನ್ನ ಪಕ್ಕದಲ್ಲೇ ಕುದ್ದ್ಕಣ್ತ್. ಅಲ್ಲಿ ಹಿಡ್ಕಂಡ ನನ್ನ ಕೈನ ಅವ್ಳು ಬಿಟ್ಟದ್ ಶೃಂಗೇರಿ ತಲುಪಿದ ಮೇಲೆನೇ...ಇಬ್ಬರಲ್ಲೂ ಮಾತಿಲ್ಲೆ, ಕಥೆಯಿಲ್ಲೆ.
ಟೂರ್ ಮುಗ್ಸಿ ಬಂದ ಮೇಲೆ ನಮ್ಮಿಬ್ಬರಲ್ಲಿ ಏನೋ ಒಂಥರ ಖುಷಿಯ ಬದಲಾವಣೆ. ಒಂದು ದಿನನೂ ಬಾಯಿಬಿಟ್ಟು `ಐ ಲವ್ ಯೂ' ತಾ ಹೇಳಿಕಣದಿದ್ದರೂ, ನಾವಿಬ್ಬರು ಜನುಮದ ಜೋಡಿಗತೇಳುವ ಫೀಲಿಂಗ್. ಒಂದು ದಿನ ಮಾತಾಡ್ತ್ಲೆತೇಳಿರೆ ಏನೋ ಕಳ್ಕಂಡಂಗೆ ನೋವು. ಭಾನುವಾರ ಬಂದರೆ ಇಬ್ಬರಿಗೂ ಬೇಜಾರ್. ಅಷ್ಟೊತ್ತಿಗೆ ಕಾಲೇಜು ತುಂಬಾ ನಮ್ಮ ವಿಷಯ ಹರಡಿಬಿಟ್ಟಿತ್ತ್. ಲೆಕ್ಚರರ್ಗಳಿಗೂ ವಿಷಯ ಗೊತ್ತಾತ್. ಪಾಠಲಿ ನಾವಿಬ್ಬರೂ ಹುಷಾರ್ ಇದ್ದದ್ದರಿಂದ `ಫ್ಯೂಚರ್ ಕಡೆ ಗಮನ ಕೊಡಿ'ತಾ ಮಾತ್ರ ಹೇಳಿ ಸುಮ್ಮನೆ ಆದೋ. ಇನ್ನ್ ನಮ್ಮನ್ನ ಹಿಡಿಯವು ಯಾರೂ ಇತ್ಲೆ. ಸದ್ಯ... ನಮ್ಮ ಮನೆ ವರೆಗೆ ಈ ವಿಷಯ ತಲುಪಿತ್ಲೆ.
ಅಂತೂ ಎಕ್ಸಾಂ ಬಾತ್. ನಾನ್ ಪಾಸ್ ಮಾಡಿಕಂಡ್ ಎಂಕಾಂ ಮಾಡಿಕೆ ಮೈಸೂರು ಬಸ್ ಹತ್ತಿದೆ. ಸುಮಾ ಅದೇ ಕಾಲೇಜ್ಲಿ ಫೈನಲ್ ಇಯರ್. ಹಳೆ ನೆನಪುಗಳ್ನ ಹಸಿರಾಗಿ ಇಟ್ಕಂಡ್ ಇಬ್ಬರೂ ಲಾಯ್ಕ ಓದ್ತಿದ್ದೊ. ದಿನಾ ಫೋನ್ ಕಾಂಟ್ಯಾಕ್ಟ್ ಇತ್ತ್. ಅದೊಂದು ದಿನ ನಾ ಸುಮಾಂಗೆ ಕಾಲ್ ಮಾಡಿರೆ ಇದ್ದಕ್ಕಿದ್ದಂಗೆ ಸ್ವಿಚ್ ಆಫ್ ! ಅವ್ಳು ಓದುತ್ತಿರ್ದೇನೋತಾ ಗ್ಯಾನ ಮಾಡಿಕಂಡ್ ನಾ ಸುಮ್ಮನಾದೆ. ಅಂದ್ ಅವಳಿಂದನೂ ಕಾಲ್ ಬಾತ್ಲೆ. ಮಾರನೆ ದಿನ ಮತ್ತೆ ನಾ ಟ್ರೈ ಮಾಡ್ದೆ. ಆಗಲೂ ಸ್ವಿಚ್ ಆಫ್. ಮಧ್ಯಾಹ್ನ ಹೊತ್ತಿಗೆ ಫ್ರೆಂಡ್ ಕಾಲ್ ಮಾಡಿ ಹೇಳ್ತ್...`ಸುಮಾಂಗೆ ಎಂಗೇಜ್ಮೆಂಟ್ ಆಯ್ತು. ಹುಡುಗ ಬೆಂಗಳೂರಿನಲ್ಲಿ ಇರೋದು. ಎಂಜಿನೀಯರ್ ಅಂತೆ...' ನಂಗೆ ಆಕಾಶ ತಲೆಮೇಲೆ ಬಿದ್ದಂಗೆ ಆತ್. ಸೀದಾ ಸುಮಾ ಮನೆಗೆ ಹೋಗಿ `ಎಂಥಕ್ಕೆ ಹೀಗೆ ಮಾಡ್ದಾ' ತಾ ಕೇಳುನಾತಾ ಯೋಚನೆ ಮಾಡ್ದೆ. ಆದ್ರೆ ಯಾಕೋ ನಂಗೆ ಅದ್ ಸರಿಕಾಣ್ತ್ಲೆ. ಅಂದ್ ಕ್ಲಾಸ್ಲಿ ಕೂರಿಕೆ ಮನಸ್ಸಾಗದೆ ಕುಕ್ಕರಹಳ್ಳಿ ಕೆರೆ ಕಡೆ ಹೊರಟೆ. ಆ ಕೆರೆ ಏರಿ ಮೇಲೆ ಎಷ್ಟು ದೂರ ನಡ್ದೊಳೆತಾನೇ ನಂಗೆ ಗೊತ್ತಾತ್ಲೆ. ಸುಸ್ತಾಗಿ ಒಂದು ಕಡೆ ಬಿದ್ದುಬಿಟ್ಟಿದ್ದೆ. ಬೆಳಗ್ಗೆ ನೋಡಿಕಾಕನ ಆಸ್ಪತ್ರೇಲಿ ಇದ್ದೆ.
ಸುಮಾ ನಂಗೆ ಮೋಸ ಮಾಡ್ತಾ....? ಗೊತ್ಲೆ... ಸಿಹಿ ಸಿಹಿ ನೆನಪುಗಳನ್ನಂತೂ ಕೊಟ್ಟಿತ್ತ್. ಅದನ್ನೇ ನಾ ನನ್ನ ಎದೇಲಿ ಬೆಚ್ಚನೆ ಇಟ್ಟ್ಕಂಡಿದ್ದದ್. ಅದೆಲ್ಲಾ ಆಗಿ ಸುಮಾರು ಆರು ವರ್ಷ ಕಳ್ದಿರ್ದು. ಈಗ ನನ್ನ ಮುಂದೆ ಮತ್ತೆ ಸುಮಾ... ಜೊತೆಲೊಂದು ಪಾಪು! ನಾ ಅವಳ್ನ ಮಾತಾಡಿಸೋಕಾ ?
- ಸುನಿಲ್ ಪೊನ್ನೇಟಿ
arebhase@gmail.com
`ಏ ಭಾವ...ನನ್ನ ಹಂದಿ ಹೊಡಿಯೊಕುತಾ ಒಳೆರಾ...'
`ಇನ್ನೊಂದ್ ತಿಂಗ ಇಟ್ಟ್ಕ ಮಾರಾಯ. ಕೈಲ್ಮುಹೂರ್ತ ಬರ್ತುಟ್ಟಲ್ಲಾ.'
`ಇಲ್ಲೆರಾ ಭಾವ ಆದ್ ತುಂಬಾ ಉರಿ ಬಂದದೆ. ಗೂಡುನೆಲ್ಲಾ ಹಾಳುಮಾಡಿಬಿಟ್ಟುಟ್ಟು. ಹೊರಗೆ ಬಿಟ್ಟರೆ ಅಂಗಳನ ಚುಕ್ಕಿಹಾಕಿದೆ. ಅದ್ಕೆ ಅದ್ನ ತೆಗ್ದುಬಿಡ್ನೋತಾ...'
`ಹಂಗಾರೆ ನಂಗೊಂದು ಮೂರು ಕೆಜಿ ಇರ್ಲಿ ಆತಾ...ನಿನ್ನ ಹಂದಿ ಎಷ್ಟಾದು ?'
`ಅಂದಾಜ್ ಮಾಡಿಕೆ ಆಲೆರಾ...ನಿಂತ್ಕಂಡರೆ ನೂರು ಕೆಜಿ ದಾಟಿದೆತಾ ಅನ್ಸಿದೆ. ಮಲಗಿರೆ ಒಂದು 120 ಕೆಜಿ ಆದುಕಂಡದೆತಾ ಹೇಳಕ್...ನೀ ಒಮ್ಮೆ ಬಂದ್ ನೋಡಿಯಾ...'
`ಆತ್.. ಪೋಯಿ ನಡಿ...ಹೋಗಿ ನೋಡಿಯೇ ಬಿಡ್ನೊ..'
`ನೋಡ್... ಆ ಮಾವಿನಮರ ಬುಡನ ಹೆಂಗೆ ಚುಕ್ಕಿಹಾಕ್ಯುಟ್ಟುತಾ...ಈಗ ತಳಿ ಕುಡ್ದದ್ ಆಷ್ಟೇ. ಹೊಟ್ಟೆ ಸ್ವಲ್ಪ ದೊಡ್ಡದ್ ಕಾಣ್ತುಟ್ಟು. ನಿನ್ನ ಅಂದಾಜ್ಲಿ ಎಷ್ಟು ಆದುರಾ?'
`ಯಾಕೋ ನೋಡಿರೆ ಚರ್ಬಿ ಜಾಸ್ತಿ ಇದ್ದಂಗೆ ಕಾಣ್ತುಟ್ಟು. ನಿನ್ನ ಹಂದಿ 80 ಕೆಜಿ ದಾಟುಲೆರಾ...'
`ಎಂಥ ಮಾತಾಡಿಯಾ ಭಾವ ನೀ...ಕಳ್ದ ವರ್ಷ ಕೈಲ್ಪೊದುಲಿ ತಂದು ಬಿಟ್ಟೊಳೆ. ದಿನಾ ಒಳ್ಳೆ ತೀನಿ ಕೊಟ್ಟೊಳೆ. ಶೆಟ್ಟಿ ಅಂಗಡೀಂದ ಫೀಡ್ ಸನಾ ತಂದು ಹಾಕ್ಯೊಳೆ. ನೀ ನೋಡಿರೆ 80 ಕೆಜಿ ದಾಟುಲೆತಾ ಹೇಳಿಯಾ...'
`ನೋಡಿಕನ ಗೊತ್ತಾಲೆನಾ...ಈ ಹಂದಿಲಿ ನಿಂಗೆ 80 ಕೆಜಿಗಿಂತ ಒಂದು ತುಂಡು ಜಾಸ್ತಿ ಮಾಂಸ ಸಿಕ್ಕುಲೆ...ಬೇಕಾರೆ ಬರ್ದು ಕೊಟ್ಟನೆ..'
`ನಿನ್ನ ಕರ್ಕಂಡ್ ಬಂದ್ ಹಂದಿನ ನಿಂಗೆ ತೋರಿಸಕ್ಕಾಗದಿತ್ತ್....ಹಂಗಾರೆ 80 ಕೆಜಿ ಮಾತ್ರ ಆದುತಾ ಹೇಳಿಯಾ...?'
`ಹುಂ...ಅದಕ್ಕಿಂತ ಜಾಸ್ತಿ ನಿಂಗೆ ಒಂದು ಪೀಸ್ ಕೂಡ ಸಿಕ್ಕುಲೆ....ಹೋಗ್ಲಿ, ಮಾಂಸಕ್ಕೆ ಜನ ಮಾಡ್ಯೊಳಾ..?'
`ಹೌದುರಾ ಭಾವ. ಎಲ್ಲಾ ಲೆಕ್ಕ ಹಾಕಿರೆ, 115 ಕೆಜಿ ಮಾಂಸಕ್ಕೆ ಜನ ಆಗ್ಯೊಳೊ. ಎಲ್ಲವ್ಕೆ ಹೇಳ್ತ್ಲೆ. ಹೇಳಿರೆ, ತುಂಡಿಗೆ ಒಂದು ಜನ ಆಗಿಬಿಟ್ಟವೆ.... ಅಲ್ಲರ, ನನ್ನ ಹಂದಿ ಬರೀ 80 ಕೆಜಿ ಆದ್ರೆ ಉಳ್ದವ್ಕೆ ಎಂಥ ಮಾಡ್ದುರಾ?'
`ಎಂಥ ಮಾಡಿಯಾ...? ಹುಂ ಒಂದು ಐಡಿಯಾ....'
`ಎಂಥ ಭಾವ?'
`ನಾ ಈಗ ನಿಂಗೆ ಎಷ್ಟು ಕೆಜಿ ಮಾಂಸ ಬೇಕೂತ ಹೇಳ್ಯೊಳೆ?'
`3 ಕೆಜಿ...'
`ಹಂಗಾರೆ ನಂಗೆ ಬರೀ 2 ಕೆಜಿ ಕೊಡ್. ಹಂಗೆನೇ 5 ಕೆಜಿ ಹೇಳ್ದವ್ಕೆ 3 ಕೆಜಿ, 2 ಕೆಜಿ ಹೇಳ್ದವ್ಕೆ 1 ಕೆಜಿ ಕೊಡ್ ಎಲ್ಲಾ ಸರಿ ಆದೆ.'
`ಮತ್ತೆ ಸಾಕಿದಂವ ನಂಗೆ ಎಂಥ ಉಳ್ದದೆ..?'
`ಕೈ, ಕಾಲು, ತಲೆ, ಬೋಟಿ....ಸಾಕಲ್ಲಾ ನಿಂಗೆ....ಏ ನನ್ನ ಹೆಣ್ಣ್ ಫೋನ್ ಮಾಡ್ತುಟ್ಟು. ಮತ್ತೆ ಸಿಕ್ಕಿನರಾ ಬನ್ನೆ...ನಂಗೆ ಎರಡು ಕೆಜಿ ಮರೀಬೇಡಾ...ಕ್ಲೀನ್ ಮಾಡಿಕೆ ನಾನೂ ಬನ್ನೆ. ಅದ್ರ ಪಾಲೂ ಕೊಡಕು..'
`ಇಲ್ಲೆ ಭಾವ ನಾ ಹಂದಿ ಹೊಡೆಯಲ್ಲೆ...ಅದು 150 ಕೆಜಿ ಆಗುವ ವರೆಗೆ ಸಾಕಿನೆ...ಹುತ್ತರಿ ಊರೊರ್ಮೆಗೆನೆ ಅದ್ಕೆ ನಾ ಗುಂಡು ಹೊಡೆಯುದು...ಎಲ್ಲವ್ಕೆ ಹೇಳಿಬಿಡು....
ನೀ ಬಾ ಮೊಣ್ಣ, ಇನ್ನ್ 9 ತಿಂಗಳ್ಲಿ ನೀ ಒಂದೂವರೆ ಕ್ವಿಂಟಾಲ್ ಆಕು. ಈಸಲ ನಿಂಗೆ ಸಂತೋಷ್ ಹೊಟೇಲ್ಂದನೇ ತಳಿ ತಂದ್ ಕುಡಿಸಿನೆ...ಯಾಕೆ ತೂಕ ಬಾದುಲೆತಾ ನೋಡಿನೆ. ನಂಗೆ ಕೈ, ಕಾಲು, ತಲೆ, ಬೋಟಿ ಮಾತ್ರ ಉಳ್ಸಿವೆ ಗಡ ಇವು... ದೊಡ್ಡ ಉಪಕಾರಿಗ... ಥೂ ಮೊಣ್ಣ.. ನಿನ್ನ ದೊಂಡೆಕಟ್ಟಿಕೆ ಮತ್ತೆ ಎಲ್ಲಾ ಕಡೆ ಚುಕ್ತೊಳಲಾ...ಚೂ ಚೂ...'
- ಸುನಿಲ್ ಪೊನ್ನೇಟಿ
arebhase@gmail.com
ಕಂಡಕ್ಟರ್ಗ ನೇತುಹಾಕ್ಕಂಡವೆಯಲ್ಲಾ ಪರ್ಸ್, ಹಂಗೆನೇ ರೇಡಿಯೋ ಥರ ಇರ್ವ ಒಂದು ಬ್ಯಾಗ್. ಅದ್ರೊಳ್ಗೆ 8-10 ಬ್ಯಾಟರಿಗ. ಆ ಬ್ಯಾಟರಿಗಳಿಗೆಲ್ಲಾ ಕನೆಕ್ಟ್ ಆಗಿರ್ವ ಸುರುಳಿ ಸುರುಳಿ ವಯರ್. ಆ ವಯರ್ ತುದೀಲಿ ಕ್ಯಾಮರ. ಆದ್ನ ಹಿಡ್ಕಳ್ವ ನರಪೇತಲ ನಾರಾಯಣನ ಹೆಸ್ರು ಸ್ಟುಡಿಯೋ ಅಶೋಕ ! ಊರಿಗೊಂದೇ ಸ್ಟುಡಿಯೋ. ಸ್ಟುಡಿಯೋಕ್ಕೆ ಒಬ್ಬನೇ ಅಶೋಕ.
ಆಗ ಈಗಿನಂಗೆ ಮೋಬೈಲ್, ಮೊಬೈಲ್ಲಿ ಕ್ಯಾಮರಾ, ಅಲ್ಲೇ ಡ್ರಾ ಅಲ್ಲೇ ಬಹುಮಾನತಾ ಹೇಳುವಂಗೆ ಅಲ್ಲೇ ಫೋಟೋ ತೆಗ್ದು, ಅಲ್ಲೇ ನೋಡ್ವ ಡಿಜಿಟಲ್ ಕೆಮರಾ ಯಾವುದೂ ಇತ್ಲೆ. ಇದ್ದದ್ದ್ ರೀಲ್ ಹಾಕಿ ವೈಟ್ ಆ್ಯಂಡ್ಬ್ಲ್ಯಾಕ್ ಪೋಟೋ ತೆಗೆಯುವ ಕಪ್ಪು ಕಲರ್ನ ದೊಡ್ಡ ಕ್ಯಾಮರ. ಅದ್ರಲ್ಲಿ ಫೋಟೋ ತೆಗೆದ್ರೂ ಸಿಕ್ತಿದ್ದದ್ ಒಂದು ವಾರ ಕಳ್ದ ಮೇಲೆ. ಯಾರಾದ್ರೂ ದುಡ್ಡಿದ್ದವ್ರ ಮನೆ ಮದುವೆ ಇದ್ರೆ, ಈ ಅಶೋಕ ಕಲರ್ ಫೋಟೋ ತೆಗೆಯುವ ಕ್ಯಾಮರನಾ ಕೇರಳದಿಂದ ಬಾಡಿಗೆಗೆ ತರ್ಸ್ತ್ತಿತ್. ಇನ್ನ್ ಅಲ್ಲಿ ತೆಗ್ದ ಫೋಟೋ ಸಿಗಕ್ಕಾಗಿದ್ದರೆ, ಆರು ತಿಂಗನೋ ಒಂದು ವರ್ಷನೋ ಆಗಿಬಿಡ್ತಿತ್ತ್. ಅಷ್ಟೊತ್ತಿಗೆ ಆ ಮದುವೆ ಆಗಿದ್ದವ್ಕೆ ಮಕ್ಕ ಕೂಡಿ ಆಗಿ ಬಿಡ್ತಿದ್ದದ್ ಉಟ್ಟು ! ಹಂಗಾಗಿ ಅಂದ್ ಫೋಟೋಗ, ಕ್ಯಾಮರಾ, ಫೋಟೋಗ್ರಾಫರ್ ಎಲ್ಲಾ ಒಂಥರ ವಿಚಿತ್ರವಾಗಿ ಕಾಣ್ತಿದ್ದೊ.
ಇನ್ನ್ ಸ್ಟುಡಿಯೋ ಅಶೋಕನ ಅವತಾರನೂ ಹಂಗೆನೇ ಇತ್ತ್. ಲಾಚಾರ್ ದೇಹ... ದೊಗಳೆ ಪ್ಯಾಂಟ್, ದೊಗಳೆ ಷರ್ಟ್ ಹಾಕ್ಕಂಡ್ ನಡ್ಕಂಡ್ ಬರ್ತಿದ್ದರೆ, ಶುಂಟಿ ಗದ್ದೆಲಿ ನಿಲ್ಸಿದ್ದ ಬೆರ್ಚಪ್ಪ ಎದ್ದ್ ಬಂದಂಗೆ ಕಾಣ್ತಿತ್ತ್. ಇನ್ನ್ ಅವ್ನ ವೇಷನೂ ವಿಚಿತ್ರ...ಮುಖದ ತುಂಬಾ ಗಡ್ಡ. ಆ ಗಡ್ಡದೊಳಗೆ ಸಿಗರೇಟ್ ಸೇದಿ ಸೇದಿ ಕಪ್ಪಾಗಿದ್ದ ತುಟಿ. ಸರಿಯಾಗಿ ನೋಡಿರೆ ಮಾತ್ರ ಅವಂಗೆ ತುಟಿ ಉಟ್ಟುತಾ ಗೊತ್ತಾಗ್ತಿತ್ತ್ ! ಇದ್ರ ಜೊತೆ ಅರ್ಧ ಮುಖ ಮುಚ್ಚುವಂಗೆ ದೊಡ್ಡ ಕೂಲಿಂಗ್ ಗ್ಲಾಸ್. ಅಂವ ತೆಗೆಯುವ ಫೋಟೋಗಳಂಗೆ ಅಶೋಕನೂ ಎಲ್ಲವ್ಕೆ ಆಶ್ಚರ್ಯದ ವಿಷಯ ಆಗಿಬಿಟ್ಟಿತ್ತ್.
ಶಾಲೆಗಳಲ್ಲಿ ವರ್ಷಕೊಮ್ಮೆ ಗ್ರೂಪ್ ಫೋಟೋ ತೆಗೆಸಿವೆಯಲ್ಲಾ...ಆಗ ತಿಮ್ಮಯ್ಯ ಮಾಷ್ಟ್ರು ನಾಲ್ಕು ಹುಡುಗರನ್ನ ಕಳ್ಸಿ, ಈ ಅಶೋಕನ ಕರ್ಕೊಂಡ್ ಬಾಕೆ ಹೇಳ್ತಿದ್ದೊ. ಅಶೋಕ ಕ್ಯಾಮರ ಮಾತ್ರ ಯಾರ ಕೈಗೂ ಕೊಡ್ತಿತ್ಲೆ. ಅದ್ರ ಸ್ಟ್ಯಾಂಡ್, ಬ್ಯಾಟರಿ ಡಬ್ಬ, ಒಂದು ಸ್ಟೂಲ್ನ ಹುಡುಗರ ಕೈಗೆ ಕೊಟ್ಟ್ ಅವ್ರನ್ನ ಮುಂದೆ ಕಳಿಸ್ತಿತ್ತ್. ಇಂವ ಮಾತ್ರ ಕ್ಯಾಮರನಾ ಬಟ್ಟೆಯೊಳಗೆ ಸುತ್ತಿಕಂಡ್ ಕೂಸ್ ಹಿಡ್ಕಂಡ್ ಬರ್ವಂಗೆ ಜಾಗರೂಕತೆಲಿ ಎತ್ತಿಕಂಡ್ ಬರ್ತಿತ್ತ್.
ಗ್ರೂಪ್ ಫೋಟೋ ತೆಗೆಯುದುತೇಳಿರೆ ಶಾಲೆಲಿ ಆದಿನ ಒಂಥರ ಹಬ್ಬ. ಸ್ವಲ್ಪ ಸಣ್ಣ ಇರ್ವ ಮಕ್ಕ ಕೂರಿಕೆ ನೆಲಕ್ಕೆ ಚಾಪೆ. ಅವ್ಕಿಂತ ಸ್ವಲ್ಪ ದೊಡ್ಡ ಮಕ್ಕ ಕೂರಿಕೆ ಆ ಚಾಪೆ ಹಿಂದೆ ಸಣ್ಣಬೆಂಚು. ಈ ಸಣ್ಣ ಬೆಂಚ್ ಹಿಂದೆ ಟೀಚರ್ಗ ಕೂರಿಕೆ ಕುರ್ಚಿಗ....ಅದ್ರ ಮಧ್ಯಲಿ ಹೆಡ್ಮಾಷ್ಟ್ರು ಕೂರಿಕೆ ಸ್ವಲ್ಪ ದೊಡ್ಡ ಕುರ್ಚಿ. ಈ ಕುರ್ಚಿ ಸಾಲಿನ ಹಿಂದೆ ದೊಡ್ಡಮಕ್ಕ ನಿಂತ್ಕಂಬಕೆ ಮತ್ತೊಂದು ಸಾಲು ಬೆಂಚು. ಇದನ್ನೆಲ್ಲಾ ಮಕ್ಕಳೇ ವ್ಯವಸ್ಥೆ ಮಾಡ್ತಿದ್ದೊ. ಆದ್ರೆ ಅಶೋಕ ಬಂದಮೇಲೆ ಈ ವ್ಯವಸ್ಥೆಲಿ ಸ್ವಲ್ಪ ಬದಲಾವಣೆ ಆಗ್ತಿತ್ತ್. ಅವಂಗೆ ಬೇಕಾದಂಗೆ ಮತ್ತೆ ಬೆಂಚ್ ಕುರ್ಗಚಿಳ್ನ ಜೋಡಿಸಿಕಣ್ತಿತ್. ಅಷ್ಟೊತ್ತಿಗೆ ಮಧ್ಯಾಹ್ನ ಆಗಿ ಟೀಚರ್ಗೆಲ್ಲಾ ಇನ್ನೊಂದ್ ರೌಂಡ್ ಮೇಕಪ್ಗೆ ಕುದ್ದುಬಿಡ್ತಿದ್ದೊ.
ಹಿಂಗೆ ಎಲ್ಲಾ ಆಗಿ ಫೋಟೋ ತೆಗೆಯಕಾಕನನೂ ದೊಡ್ಡ ಸರ್ಕಸ್ ನಡ್ದ್ ಹೋಗ್ತಿತ್ತ್. ಮಕ್ಕ ಹೆಂಗೆ ಫೋಸ್ ಕೊಟ್ರು ಅಶೋಕಂಗೆ ಸರಿ ಆಗ್ತಿತ್ಲೆ. ಕ್ಯಾಮರದೋಳಗೆ ಮುಖ ಹಾಕ್ಕಿಕಂಡ್ ಅಂವ `ಸ್ವಲ್ಪ ಎಡಕ್ಕೆ ಬಾ...ಸ್ವಲ್ಪ ಬಲಕ್ಕೆ ಬಾ...ಏಯ್ ನೀ ಮುಖ ಮೇಲೆ ಎತ್ತೋ...ಟೀಚರ್ ನೀವು ಸ್ವಲ್ಪ ನಗಾಡಿ...ಸ್ಮೈಲ್ ಪ್ಲೀಸ್..' ತಾ ಹೇಳಿ ಕ್ಲಿಕ್ ಮಾಡಿಬಿಡ್ತಿತ್ತ್. ಅಂತೂ ಫೋಟೋ ಸೆಷನ್ ಮುಗಿಯಕಾಕನ ಸಂಜೆ ಆಗಿಬಿಡ್ತಿತ್ತ್. ಇನ್ನ್ ಎಲ್ಲವ್ಕೆ ಒಂದೇ ಕುತೂಹಲ...ಫೋಟೋ ಹೆಂಗೆ ಬಂದಿರ್ದುತಾ...
ತಿಂಗಳೋ, ಎರಡು ತಿಂಗಳೋ ಕಳ್ದ ಮೇಲೆ ಫೋಟೋ ಸಿಗ್ತಿತ್ತ್. ಫೋಟೋಲಿ ಲಾಯ್ಕ ಬಿದ್ದಿರುವೊ ಎನೋತಾ ನೋಡಿರೆ, ಅಲ್ಲಿ ಏನಾದ್ರೊಂದು ಎಡವಟ್ಟು ಆಗಿರ್ತಿತ್ತ್. ಒಬ್ಬನ ಕಣ್ಣು ಮುಚ್ಚಿ ಹೋಗಿದ್ದರೆ, ಮತ್ತೊಬ್ಬ ಮೂಗೊಳಗೆ ಕೈ ಹಾಕ್ತಿದ್ದದ್ ಹಂಗೆನೇ ಕಾಣ್ತಿತ್ತ್. ಒಬ್ಬ ಗೂಡೆ ಕೂದಲು ಸರಿಮಾಡಿಕೆತಾ ಎತ್ತಿದ ಕೈ ಟೀಚರ್ ತಲೆ ಮೇಲೆ ಬಂದ್ ಕೊಂಬು ಇಟ್ಟಂಗೆ ಆಗಿರ್ತಿತ್ತ್. ಕೊನೆಗೆ ಎಲ್ಲವೂ ಬಯ್ತಿದ್ದದ್ ಈ ಸ್ಟುಡಿಯೋ ಅಶೋಕಂಗೆನೇ `ಥೂ... ಅವನ ಮುಖದ ಗಡ್ಡಕ್ಕೆ ಇಷ್ಟು ಬೆಂಕಿ ಹಾಕ...ಸರಿಯಾಗಿ ಫೋಟೋನೇ ತೆಗೆಯಕ್ಕೆ ಬಾಲೆ...'
ಈಗ ಬಿಡಿ ಆ ಕಷ್ಟ ಎಲ್ಲಾ ಇಲ್ಲೆ. ಡಿಜಿಟಲ್ ಕ್ಯಾಮರಾ ಉಟ್ಟಲ್ಲಾ.. ಕಣ್ಣು ಮುಚ್ಚಿಹೋದರೆ, ಮತ್ತೊಂದ್ ಫೋಟೋ ತೆಗೆಯಕ್.. ಏನ್ ಹೇಳಿಯರಿ?
- ಸುನಿಲ್ ಪೊನ್ನೇಟಿ
arebhase@gmail.com
ಅದ್ ಡಿಸೆಂಬರ್ ತಿಂಗ. ಭತ್ತ ಬೆಳೆ ಕದ್ರು ಹೋಗಿ ಭೂಮಿ ಕಡೆ ಬಗ್ಗಿ ನಿಂತಿತ್ತ್. ಕುಯ್ಲು ಕೆಲ್ಸ ಶುರುಮಾಡ್ನೊತೇಳಿರೆ, ಪಿರಿಪಿರಿ ಮಳೆ. ಬೆಳೆ ಕೊಯ್ದು ಹಾಕಿರೆ ಅಲ್ಲೇ ಹುಟ್ಟಿಬಾದೇನೋತಾ ಹೇಳುವಂಗೆ ಹಸಿಹಸಿ ಮಣ್ಣು. ಎಂಥ ಮಾಡ್ದು ? ಮಳೆ ಕಡಿಮೆ ಆದ್ಮೇಲೆ ಬೆಳೆ ಕೊಯ್ದರೆ ಆತ್ತೇಳಿ ಹೆಚ್ಚಿನವು ಕಾಫಿತೋಟ ಕೆಲ್ಸದ ಕಡೆ ಗಮನ ಕೊಟ್ಟೊ. ಮತ್ತೆ ಕೆಲವು ಜೇನುಬೇಟೆ, ಅದ್ಇದ್ತೇಳಿಕಂಡ್ ಬ್ಯುಸಿ ಆದೋ... ಜನ ಯಾಗ ಗದ್ದೆ ಕಡೆ ಬಾದುನ ನಿಲ್ಲಿಸಿದೊನಾ, ಆಗ ಬೇರೊಂದು ಸಮಸ್ಯೆ ಹುಟ್ಟಿಕಣ್ತ್. ಅದ್ ಕಾಡು ಹಂದಿಗಳ ದಾಳಿ !
ಒಂದುಕಡೆ ತಾವೂರುಬೆಟ್ಟ.. ಆಚೆ ಇಳ್ದರೆ ದೊಡ್ಡ ಕಾಡು. ಈ ಕಡೆ ಬೆಟ್ಟಂದ ಕೆಳಗೆ ಕಾಫಿ ತೋಟ. ಈ ಕಾಡುಹಂದಿಗಳಿಗೆ ತಿಂಬಕೆ ಕಾಡ್ಲಿ ಏನೂ ಸಿಕ್ಕಿತ್ಲೆತೇಳಿರೆ ಆ ಕಾಫಿ ತೋಟಗಳ್ನ ದಾಟಿ ಸೀದಾ ಬಾದು ಗದ್ದೆಗೆನೆ. ಈ ವರ್ಷನೂ ಹಂಗೆ ಆತ್. ಹಿಂಡ್ ಹಿಂಡ್ ಕಾಡ್ಹಂದಿಗ ಗದ್ದೆಗೆ ಬಂದ್ ಉರಿ ಬರ್ತಿದ್ದೊ. ಹೂಡಿ ಹಾಕಿದಂಗೆ ಚುಕ್ಕಿ, ಇದ್ದ ಬದ್ದ ಭತ್ತನೆಲ್ಲಾ ತಿಂದ್ ತೇಗಿ ಬಂದ ದಾರಿಲೇ ಹಂಗೆನೇ ಹೊರ್ಟು ಹೋಗಿಬಿಡ್ತಿದ್ದೊ. ಒಂದು ವಾರ ಕಳ್ದ ಮೇಲೆನೇ ಊರವ್ಕೆ ಗೊತ್ತಾದ್. ಅಷ್ಟೊತ್ತಿಗೆ ಅರ್ಧ ಬೆಳೆ ಕಾಡುಹಂದಿಗಳ ಹೊಟ್ಟೆ ಸೇರಿತ್ತ್. ಇನ್ನ್ ಉಳ್ದಿರ್ವ ಬೆಳೆನಾದ್ರೂ ಕಾಪಾಡಿಕೊಳಕಲ್ಲಾ, ಅದ್ಕೆ ಉಪಾಯ ಹುಡಿಕೆಕೆ ಊರವೆಲ್ಲಾ ಧವಸಭಂಡಾರದ ಆಫೀಸ್ಲಿ ಸಭೆ ಸೇರ್ದೊ.
ಸಾಯಂಕಾಲದ ಹೊತ್ತು. ಸೂರ್ಯ ಇನ್ನೇನು ಮುಳುಗಿದೆತೇಳುವ ಟೈಂ. ಡಿಸೆಂಬರ್ ಚಳಿ ಬೇರೆ. ಮೀಟಿಂಗ್ಗೆ ಬಂದವು ಹೆಚ್ಚಿನವು ನೈಂಟಿ, ಸಿಕ್ಸ್ಟಿ ಏರ್ಸಿಕಂಡೇ ಬಂದಿದ್ದೊ. ಮತ್ತೆ ಕೆಲವು ಮೀಟಿಂಗ್ ಮುಗ್ದ ಮೇಲೆ ಹಾಕ್ಕಣಿಕೆ ಆದೆತೇಳಿ ಜೋಬುಲಿ ಕ್ವಾಟರ್ ಬಾಟಲ್ಗಳ್ನ ಇಟ್ಕಂಡಿದ್ದೊ. ಮೇಲೆ ಮನೆ ಚಾಂಪ ಅಂತೂ ಹೆಗಲಲಿ ತೂಗುಹಾಕ್ಕಂಡಿದ್ದ ಬ್ಯಾಗ್ಲಿ ಮಂಙ ಕೊಟ್ಟಿದ್ದ ಅರ್ಧ ಬಾಟಲಿ ಮಿಲಿಟರಿ ರಮ್ ಇಟ್ಕಂಡಿತ್. ಜೊತೆಗೆ ಉಪ್ಪು, ಮೆಣಸು, ಹುಳಿ ಹಾಕಿ ಹುರ್ದಿದ್ದ ಹಂದಿ ಸೆಳ್ಳಿಬೇರೆ ! ಒಬ್ಬೊಬ್ಬರೇ ಬಂದ್ ಸೇರ್ತಿದ್ದಂಗೆ ಮೀಟಿಂಗ್ ಶುರುವಾತ್. ಕಾಡುಹಂದಿ ಕಾಟನ ಹೆಂಗೆ ತಡೆಯುದುತಾ ಹೇಳುದರ ಬಗ್ಗೆ ಎಲ್ಲವೂ ಒಂದೊಂದು ಸಲಹೆ ಕೊಟ್ಟೊ. ಮಡಿಕೇರಿಲಿ ಲಾಯರ್ ಆಗಿರ್ವ ಚೋಮುಣಿ ಅಂತೂ ಕೋವಿ ಜೊತೆನೇ ಬಂದಿತ್. `ಇಂದ್ ರಾತ್ರಿಂದನೇ ನಾವೆಲ್ಲಾ ಪಾರ ಕೂರುನೋ'ತಾ ಅಂವ ಸಲಹೆ ಕೊಟ್ಟತ್. ಆದ್ರೆ ಇದಕ್ಕೆ ಎಲ್ಲವೂ ಒಪ್ಪಿತ್ಲೆ. ಒಬ್ಬಂಗೆ ರಾತ್ರಿ ಮನೇಲಿ ಹೆಣ್ಣ್ ಒಬ್ಬಳೇ ಆಗಿಬಿಟ್ಟದೆತಾ ಹೆದ್ರಿಕೆ. ಮತ್ತೊಬ್ಬಳ ಮಗಳಿಗೆ ಹುಷಾರಿಲ್ಲೆ. ಇನ್ನೊಬ್ಬಂಗೆ ಅವನ ಕ್ರಾಸ್ಗೆ ಬಂದ ಹಸ್ ಕೊಟ್ಟಿಗೆಂದ ಹಗ್ಗ ತುಂಡ್ ಮಾಡಿಕಂಡ್ ಹೋಗಿಬಿಟ್ಟರೆ...ತಾ ಭಯ. ಅಷ್ಟೊತ್ತಿಗೆ, ಅಪ್ಪ ಟೈಟ್ ಆಗದಂಗೆ ನೋಡಿಕಣಿಕೆ ಅಮ್ಮ ಕಳ್ಸಿದ್ದ ಗಣಿ ಮೆಲ್ಲೆ ಬಾಯಿಬಿಟ್ಟತ್, `ಹುತ್ತರಿದ್ ಪಟಾಕಿ ಉಳ್ದುಟ್ಟಲ್ಲಾ...ಅದ್ನ ರಾತ್ರಿ ಹೊಡ್ಸುನೊ... ಹಂದಿಗ ಓಡಿಹೋದವೆ..' ಇವನ ಮಾತುನ ಯಾರೂ ಕಿವಿಗೆ ಹಾಕಿಕಣ್ತ್ಲೆ. ಮತ್ತೆ ಚರ್ಚೆ ಮುಂದುವರ್ಸಿದೊ....ಮಾತುನ ಭರಲಿ ಕತ್ತಲಾದೇ ಗೊತ್ತಾತ್ಲೆ. ಜೋಬುಲಿ ಇಟ್ಟಂಡಿದ್ದವು, ಬ್ಯಾಗ್ಲಿ ತಂದಿದ್ದವು, ಹನಿ ಹನಿನೇ ರುಚಿ ನೋಡ್ತಿದ್ದೊ...ನೆಣ್ಚಿಕಣಿಕೆ ಚಾಂಪ ತಂದಿದ್ದ ಹುರ್ದ ಸೆಳ್ಳಿ, ಪಳಂಗು ತಂದಿದ್ದ ಅಮ್ಟೆಕಾಯಿ ಉಪ್ಪಿನಕಾಯಿ, ದಾಮು ಅಂಗಡಿ ಚಕ್ಕುಲಿ ಎಲ್ಲಾ ಇತ್ತ್. ಆದ್ರೆ ಕಾಡುಹಂದಿ ಓಡಿಸಿಕೆ ಪರಿಹಾರ ಮಾತ್ರ ಸಿಕ್ಕಿತ್ಲೆ. ಹಿಂಗೆ ಊರವೆಲ್ಲಾ ಇಲ್ಲಿ ಕುದ್ದಕಂಡ್ ಮೀಟಿಂಗ್ ಮಾಡ್ತಿದ್ದರೆ, ಧವಸ ಭಂಡಾರ ಹಿಂದೆನೇ ಒಂದ್ ಹಿಂಡ್ ಕಾಡುಹಂದಿಗ ಸಮಾ ಬೆಳೆ ತಿನ್ತಿದ್ದೊ....
- ಸುನಿಲ್ ಪೊನ್ನೇಟಿ
arebhase@gmail.com
ಮಳೆಗಾಲದ ರಜೆ. ನಾವೆಲ್ಲಾ ಕಳ್ಳ-ಪೊಲೀಸ್ ಆಟ ಆಡ್ತಿದ್ದೊ. ಹೆಚ್ಚುಕಮ್ಮಿ ಎಲ್ಲವೂ ಹೈಸ್ಕೂಲ್ ಮಕ್ಕ. ಗಂಡು, ಹೆಣ್ಣುತೇಳುವ ವ್ಯತ್ಯಾಸ ಇತ್ಲೆ. ನಾ ಮತ್ತೆ `ಅವ್ಳು' ಇಬ್ಬರೂ ಕಳ್ಳರ ಟೀಮ್ಲಿ ಇದ್ದೊ. ಏಣಿದ್ ಹಿಂದೆ ಕತ್ತಲೆ ಜಾಗಲಿ ಅಡಗಿಕಂಡಿದ್ದೊ. ನಾವು ಇಬ್ಬರೂ ಅಲ್ಲಿ ಅಡಗಿ ಕುದ್ದೊಳೊತೇಳುದು ಪೊಲೀಸ್ ಟೀಮ್ಗೆ ಗೊತ್ತೇ ಆತ್ಲೆ. ನಮ್ಮನ್ನ ಹುಡುಕಿಕಂಡ್ ಅದೇ ಏಣಿ ಮೆಟ್ಟಿಲು ಹತ್ತಿ ಅಟ್ಟ ಸೇರಿಕಂಡೊ. `ಅವ್ಳು' ಮೆಲ್ಲೆ ನನ್ನ ಕಿವಿ ಹತ್ರ ಬಂದ್ ಹೇಳ್ತ್, `ಪೆದ್ದುಗ...ನಾವಿಲ್ಲಿ ಕುದ್ದಿರ್ದು ಗೊತ್ತೇ ಆತ್ಲೆ...' ನಾ ಅವ್ಳ ಬಾಯಿಗೆ ಅಡ್ಡ ಕೈ ಇಟ್ಟ್ ಹೇಳ್ದೆ, `ಶ್...ಮೆಲ್ಲೆ ಮಾತಾಡ್ನೇ ಬಜಾರಿ, ಅವ್ಕೆ ಕೇಳಿಬಿಟ್ಟರೆ ನಾವು ಸಿಕ್ಕಿಬಿದ್ದವೆ...' ನಾ ಬಜಾರಿತಾ ಹೇಳ್ದ್ ಅವ್ಳಿಗೆ ಸಿಟ್ಟು ಬಾತ್. ಅವ್ಳ ಬಾಯಿಗೆ ಅಡ್ಡ ಇಟ್ಟಿದ್ದ ನನ್ನ ಕೈನ ಕಿತ್ತು ಹಾಕಿ ಜೋರಾಗಿ ಕಿರುಚಿಕೆ ಶುರು ಮಾಡ್ತ್, `ನಿನ್ನ ಅಜ್ಜಿ ಬಜಾರಿ. ನಂಗೆನೇ ಬಜಾರಿತಾ ಹೇಳಿಯಾ...ಮಾಡ್ನೆ ಇರ್ ನಿಂಗೆ'ತಾ ಹೇಳಿಕಂಡ್, ನಾಯಿ ಓಡಿಸಿಕೆತಾ ಅವಳಮ್ಮ ಅಲ್ಲಿಟ್ಟಿದ್ದ ದೊಣ್ಣೆ ಹಿಡ್ಕಂಡ್ ಓಡಿಸಿಕಂಡ್ ಬಾತ್... ಅವ್ಳ ಕೈಗೆ ಸಿಕ್ಕದೆ ನಾ ಓಡಿದರೂ, ಪೊಲೀಸ್ ಟೀಂ ಕೈಗೆ ನಾವಿಬ್ರೂ ನಾವಾಗೇ ಸಿಕ್ಕಿಹಾಕ್ಕೊಂಡೊ. ಮತ್ತೆ ನಮ್ಮ ನಮ್ಮಲ್ಲೇ ಜಗಳ. `ನಿನ್ನಿಂದಾಗೇ ಸಿಕ್ಕಿ ಹಾಕ್ಕಂಡದ್... ನಿನ್ನಿಂದಾಗೇ ಸಿಕ್ಕಿ ಹಾಕ್ಕಂಡದ್...'
`ಅವ್ಳು' ಮತ್ತೆ ನಾನ್ ಒಂದೇ ಕ್ಲಾಸ್. ಬಹುಶಃ ನಾಲ್ಕನೇ ಕ್ಲಾಸ್ಲಿ ಇರ್ಕಾಕನ ಕಂಡದೆ, ಅವಳಪ್ಪ ಟ್ರಾನ್ಸ್ಫರ್ ಆಗಿ ನಮ್ಮೂರಿಗೆ ಬಂದಿತ್ತ್. ನಮ್ಮ ಮನೆ ಹಿಂದೆನೇ ಅವೂ ಮನೆ ಮಾಡಿದ್ದೊ. ಲಾರಿಂದ ಸಾಮಾನು ಇಳಿಸಿಕಾಕನ ನಾ ನಮ್ಮ ಮನೆ ಕಾಂಪೌಂಡ್ ಮೇಲೆ ಕುದ್ದ್ಕಂಡ್ ನೋಡ್ತಿದ್ದೆ. ಸ್ವಲ್ಪ ಹೊತ್ಲೇ ಅವ್ಳ ಅಮ್ಮ, ಅಕ್ಕ ಇನ್ಯಾರ್ಯಾರೋ ಒಂದು ಜೀಪ್ಲಿ ಬಂದೊ. `ಅವ್ಳು' ನನ್ನ ಕ್ಲಾಸ್ತಾ ಆಗ ನಂಗೆ ಗೊತ್ತಿತ್ಲೆ. ಆದ್ರೆ ಮಾರನೇ ದಿನನೇ ಅವ್ಳನ್ನ ನನ್ನ ಸ್ಕೂಲಿಗೇ ಸೇರ್ಸಿದೋ. ಆಗ ಶಾಲೆ ಶುರುವಾಗಿ ತುಂಬಾ ದಿನ ಆಗಿತ್ತ್. ಎಲ್ಲಾ ಸಬ್ಜೆಕ್ಟ್ನ ಎರಡೆರಡು, ಮೂರು ಮೂರು ಪಾಠಗ ಮುಗ್ದಿದ್ದೊ. ಹಂಗೆತೇಳಿ ಹೊಸ ಸ್ಟುಡೆಂಟ್ಗೆ ಮತ್ತೆ ಪಾಠ ಮಾಡಿಕೆ ಆಲೆಲ.. ಅದ್ಕೆ ಕ್ಲಾಸ್ಲಿ ತುಂಬಾ ಹುಷಾರ್ನ ಹೈದ ಆಗಿದ್ದ ನನ್ನ ಹತ್ರನೇ ಅವ್ಳನ್ನ, ಕಾಮಿನಿ ಟೀಚರ್ ಕೂರ್ಸಿದೊ. ಅಂದ್ನ ವರೆಗೆ ಆಗಿದ್ದ ಪಾಠಗಳ್ನೆಲ್ಲಾ ಅವ್ಳಿಗೆ ಹೇಳಿಕೊಡ್ದು ನನ್ನ ಜವಾಬ್ದಾರಿ ಆಗಿತ್ತ್. ಹಂಗೆ ನನ್ನ ಮತ್ತೆ `ಅವ್ಳ' ಫ್ರೆಂಡ್ಶಿಪ್ ಶುರುವಾತ್. ಅವ್ಳ ಮನೆಗೆ ನಾನು ಹೋದು, ನನ್ನ ಮನೆಗೆ ಅವ್ಳು ಬಾದು ಇದೆಲ್ಲಾ ಅಂದ್ಂದನೇ ಶುರುವಾತ್.
ಫ್ರೆಂಡ್ಶಿಪ್ ಶುರುವಾದ ದಿನಂದನೇ ನಮ್ಮ ಮಧ್ಯೆ ಜಗಳನೂ ನಡೀತಿತ್ತ್. ಆದ್ರೆ ಅದೆಲ್ಲಾ ಸ್ವಲ್ಪ ಹೊತ್ತು ಮಾತ್ರ. ಹೈಸ್ಕೂಲ್ ಮೆಟ್ಟಿಲು ಹತ್ತಿರೂ ನಮ್ಮಿಬ್ರ ಫ್ರೆಂಡ್ಶಿಪ್ ಹಂಗೆನೇ ಇತ್ತ್. ಸ್ಕೂಲ್ ಇದ್ದದ್ ನಮ್ಮ ಮನೇಂದ ಮೂರು ಕಿಲೋಮೀಟರ್ ದೂರಲಿ. ನಾವಿಬ್ಬರೂ ಒಟ್ಟಿಗೆ ನಡ್ಕಂಡೇ ಹೋಗಿ ಬರ್ತಿದ್ದೊ. ನಮ್ಮಿಬ್ಬರ ಬುತ್ತಿ ಹಂಚಿಕಂಡ್ ತಿಂತಿದ್ದೊ. ಒಟ್ಟಿಗೆ ಕುದ್ದ್ಕಂಡ್ ಓದ್ತಿದ್ದೊ. ಹಿಂಗಿರ್ಕಾಕನ ಯಾರೋ ಒಬ್ಬ ಪುಣ್ಯಾತ್ಮ ಒಂದು ದಿನ ಕ್ಲಾಸ್ನ ಬೋರ್ಡ್ ಮೇಲೆ ಅವಳ ಮತ್ತೆ ನನ್ನ ಹೆಸ್ರು ಬರ್ದು ಮಧ್ಯಲಿ ಲವ್ಸಿಂಬಲ್ ಹಾಕಿಬಿಟ್ಟಿತ್ತ್. ಅದ್ನ ನೋಡಿ `ಅವ್ಳು' ನಗಾಡಿಕಂಡ್ ಸುಮ್ಮನಾಗಿಬಿಟ್ಟತ್. ಆದ್ರೆ ನಂಗೆ ಹೆದ್ರಿಕೆ.. ಮನೇಲಿ ಗೊತ್ತಾದ್ರೆ ಏನಪ್ಪಾ ಕಥೆ ? ಹೇಳಿ ಕೇಳಿ ಅವಳಪ್ಪ ಪೊಲೀಸ್. ನಾ ಯಾವತ್ತೂ ಲವ್ ಬಗ್ಗೆ ಯೋಚಿಸದಿದ್ದರೂ, ಬೋರ್ಡ್ ಮೇಲೆ ನಮ್ಮ ಹೆಸ್ರು ಕೆತ್ತಿದವನ ಮೇಲೆ ಸಿಟ್ಟು ಬಾತ್. ಅಂವ ಕೈಗೆ ಸಿಕ್ಕಿದ್ದರೆ, ದೊಡ್ಡ ಲಡಾಯಿ ಆಗಿಬಿಡ್ತಿತ್ತೋ ಏನೋ...
ಆ ಘಟನೆ ನಡ್ದ ಅಂದ್ ಕೂಡ ನಾವಿಬ್ಬರು ಒಟ್ಟಿಗೆ ಮನೆ ಕಡೆ ಹೊರಟಿದ್ದೊ. ಸ್ವಲ್ಪ ದೂರ ಇಬ್ಬರೂ ಮಾತಾಡ್ತ್ಲೆ. ಐಬಿ ಹತ್ರ ಹೋಕಾಕನ ಅವಳೇ ಮೆಲ್ಲೆ ಶುರುಮಾಡ್ತ್... `ಹಂಗೆ ಇದ್ದರೆ ಎಷ್ಟು ಲಾಯ್ಕ ಅಲಾ...' ನಾ ಕೇಳ್ದೆ, `ಹೆಂಗೆ...?' ಅದಕ್ಕವ್ಳು... `ಅದೇ, ಬೋರ್ಡ್ ಮೇಲೆ ಯಾವನೋ ಒಬ್ಬ ಬರ್ದಿತ್ತಲ್ಲಾ ಹಂಗೆ...' `ಅವ್ಳು' ಹೇಳಿದ್ನ ಕೇಳಿ ನಂಗೆ ಏನು ಹೇಳೊಕೂತಾ ಗೊತ್ತಾತ್ಲೆ. ನಗಾಡಿಕಂಡ್ ಸುಮ್ನೆ ಆಗಿಬಿಟ್ಟೆ. ಆದ್ರೆ ಅಂದ್ಂದ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಇನ್ನೂ ಜಾಸ್ತಿ ಆತ್. ತುಂಬಾ ಪರ್ಸನಲ್ತೇಳುವಾ ವಿಷಯಗಳ್ನೂ ಹಂಚಿಕೊಳ್ತಿದ್ದೊ. ಆದ್ರೆ ಈ ಎಲ್ಲಾ ಖುಷಿ ಹೆಚ್ಚು ದಿನ ಇತ್ಲೆ. ಒಂದು ಭಾನುವಾರ `ಅವ್ಳು ' ಶಕ್ತಿಪೇಪರ್ ತಂದ್ ನನ್ನ ಮುಂದೆ ಹಿಡ್ತ್.
`ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಭಾರೀ ವಗರ್ಾವಣೆ' ತಾ ಇದ್ದ ಹೆಡ್ಡಿಂಗ್ ಕೆಳಗೆ ಅವಳಪ್ಪಂಗೆ ಟ್ರಾನ್ಸ್ಫರ್ ಆದ ವಿಷಯನೂ ಇತ್ತ್. ನೋಡ್ತಿದ್ದಂಗೆ ನನ್ನ ಕಣ್ಣಲ್ಲಿ ನೀರು ಬಂದ್ ಅಕ್ಷರಗಳೇ ಕಾಣದಂಗೆ ಆತ್...ಹಂಗಾಗಿ ಎಲ್ಲಿಗೆ ಟ್ರಾನ್ಸ್ಫರ್ ಆಗ್ಯುಟ್ಟುತಾ ಕೂಡ ಗೊತ್ತಾತ್ಲೆ. ತಲೆ ಎತ್ತಿ ನೋಡಿರೆ ಅವಳ ಕಣ್ಣಲ್ಲೂ ನೀರು. ಏನೂ ಮಾತಾಡ್ತ್ಲೇ. ಗಟ್ಟಿಯಾಗಿ ನನ್ನ ಕೈನ ಹಿಡ್ಕಂಡ್ ಅವಳ ಕಣ್ಣಿಗೆ ಒತ್ತಿಕಂಡತ್... ಮತ್ತೆ ತಿರುಗಿನೂ ನೋಡದೆ ಹೊರಟೋತ್. ನನ್ನ ಮುಂಗೈ ಮೇಲೆ ಇದ್ದ ಅವ್ಳ ಕಣ್ಣೀರ ಹನಿನಾ ಎಷ್ಟು ಹೊತ್ತು ಹಂಗೆನೇ ಹಿಡ್ಕಂಡ್ ನೋಡ್ತಿದ್ದೆತಾ ನಂಗೆನೇ ಗೊತ್ತಾತ್ಲೆ. ಅವ್ಳ ಹೆಸ್ರೂ `ಹನೀ...'
- ಸುನಿಲ್ ಪೊನ್ನೇಟಿ
arebhase@gmail.com
ಚಾಂಪ ಮತ್ತೆ ಚಾಮವ್ವ ಸತ್ತು ಸ್ವರ್ಗ ಸೇರಿದ್ದೊ. ಸೇರಿದ್ದೋತಾ ಹೇಳಿಕ್ಕಿಂತ ಊರವೇ ಸೇರಿಸಿದ್ದೋತಾ ಹೇಳಕ್. ಯಾಕೆತೇಳಿರೆ, ಆ ಊರುಲಿ ಯಾರು ಸತ್ತರೂ, ಸ್ವರ್ಗ ಸೇರಿಸ್ವ ಕೆಲ್ಸ ಮೇಲೆಮನೆ ಚೋಮುಣಿದ್. ಅವನ ಬಾಯಿಂದ ಒಂದೊಂದು ಡೈಲಾಗ್ಗ ಉದುರ್ತಿದ್ದ್ರೆ, ಸಾವಿಗೆ ಬಂದವು ಎಂಥ ಕಟುಕ ಮನಸ್ಸಿನವರಾಗಿದ್ದರೂ ಒಂದೆರಡು ಹನಿ ಕಣ್ಣೀರು ಹಾಕ್ತಿದ್ದೋ. ಚಾಂಪ ಮತ್ತೆ ಚಾಮವ್ವನ ಸ್ವರ್ಗ ಸೇರ್ಸಿದ್ದ್ ಕೂಡ, ಇದೇ ಮೇಲೆ ಮನೆ ಚೋಮುಣಿ. ಇಲ್ಲಿ ಇನ್ನೊಂದು ವಿಶೇಷತೇಳಿರೆ, ಚಾಂಪನೂ ಚಾಮವ್ವನೂ ಒಂದೇ ದಿನ ತೀರ್ಕೊಂಡುಬಿಟ್ಟಿದ್ದೊ.
ಚಾಂಪಂಗೆ ಧಮ್ಮು... ಬೀಡಿ ಸೇದ್ಬೇಡಿತಾ ಚಾಮವ್ವ ಎಷ್ಟು ಹೇಳಿರೂ ಕೇಳ್ತಿತ್ಲೆ. ಸಂತೆಗೆ ಹೋಗಿ ಬಾಕಾಕನ ಚಾಂಪ ಬಂಡಲುಗಟ್ಟಲೆ ಸಾಧು ಬೀಡಿ ತರ್ತಿತ್ತ್. ಒಲೆ ಮುಂದೆ ಕುದ್ದುಕಂಡ್ ಸೇದ್ತಿದ್ದ್ರೆ, ಸೌದೆಂದ ಬರ್ತಿರ್ವ ಹೊಗೆ ಯಾವುದು, ಚಾಂಪನ ಬಾಯಿಂದ ಬರ್ತಿರ್ವ ಹೊಗೆ ಯಾವುದುತಾ ಗೊತ್ತಾಗ್ತಿತ್ಲೆ. ಹಂಗೆ ಬುಸು ಬುಸುತಾ ಹೊಗೆ ಬಿಟ್ಟ್ಕಂಡ್ ಕುದ್ದಿರ್ತಿತ್. ಹಂಗೆ ಒಂದು ದಿನ ಒಲೆ ಬುಡಲಿ ಚಾಂಪ ಸಾಧುಬೀಡಿ ಸೆದಿಕಂಡ್ ಕುದ್ದಿಕರ್ಾಕನ, `ನಿಮ್ಮ ದೊಂಡೆ ಕಟ್ಟಿ ಹೋಗಾ...ಎಷ್ಟು ಸಾವು ಬೀಡಿ ಸೇದಿಯರಿ..' ತಾ ಬಯ್ಕಂಡ್ ಬಯ್ಕಂಡೇ ಚಾಮವ್ವ ಕಾಫಿ ಮಾಡಿ ಕೊಟ್ಟಿತ್ತ್. ಆ ಬಿಸಿ ಬಿಸಿ ಕಾಫಿ ಕುಡಿಯಕಾಕನ ಚಾಂಪಂಗೆ ಸೆರೆಹತ್ತಿಬಿಡ್ತ್. ಆಗ ಶುರುವಾತು ನೋಡಿ ಕೆಮ್ಮು...ಮೊದಲೇ ಧಮ್ಮು ಬೇರೆ. ಉಸಿರಾಡಿಕೆ ಅವಕಾಶ ಇಲ್ಲದಂಗೆ ಚಾಂಪ ಕೆಮ್ಮಿಕೆ ಶುರು ಮಾಡ್ತ್...ಚಾಮವ್ವ ಒಮ್ಮೆ ಮೆಲ್ಲೆ ಚಾಂಪನ ತಲೆಗೆ ತಟ್ಟಿತ್. ಊಹುಂ, ಕೆಮ್ಮು ನಿಂತತ್ಲೆ. ಎರಡನೇ ಸಲ ಸ್ವಲ್ಪ ನೀರ್ನ ತಲೆ ಮೇಲೆ ಹಾಕಿ ಜೋರಾಗಿ ತಟ್ಟಿತ್...ಕೆಮ್ಮು ಮಾತ್ರ ನಿಂತತ್ಲೆ. `ಇದೆಂಥ ದೊಡ್ಡ ರೋಗ ನಿಮಿಗೆ...ನಿಮ್ಮ ಕೆಮ್ಮು ನಿಲ್ಲುದೇ ಇಲ್ಲೆ...ನಿಮ್ಮ ಬಾಯಿಗೆ ಮಣ್ಣ್ ಹಾಕಾ...'ತಾ ಹೇಳಿಕಂಡೇ ಚಾಮವ್ವ ಚಾಂಪನ ಕರ್ಕಂಡ್ ಹೋಗಿ ಮಲಗಿಸಿತ್ತ್. ಬೆಳಗ್ಗೆ ಕೋಳಿ ಕೂಗಿಕಾಕನ ಚಾಂಪನ ಕೆಮ್ಮು ನಿಂತಿತ್ತ್. ಜೊತೆಗೆ ಉಸಿರು ಕೂಡ !
ಸಾವಿನ ಸುದ್ದಿ ಬೆಂಗಳೂರುಲಿ ಇದ್ದ ಮಂಙಂದಿರಿಗೆ ಮುಟ್ಟಿತ್. ಇಬ್ಬರು ಗಂಡು ಮಕ್ಕ ಹೆಣ್ಣ್ಗಳ ಜೊತೆ ಬಂದೊ. ಇಬ್ಬರು ಹೆಣ್ಣು ಮಕ್ಕ ಗಂಡಂದಿರ ಜೊತೆ ಬಂದೊ. ಚರಂಡೇಟಿಂದ ಬಂದ ವಾಲಗದವು ಜೋರಾಗಿ ಬಾರಿಸ್ತಿದ್ರೆ, ಗುಂಡು ಹೊಡೆಯುವವು ಗುಂಡು ಹೊಡ್ಕಂಡ್, ಕೆಲವು ಗರ್ನಲ್ ಹೊಟ್ಟಿಸಿಕಂಡ್ ಚಾಮವ್ವನ ತವರು ಮನೆಯವ್ಕೆ ಕಾಯ್ತಿದ್ದೊ. ಚಾಮವ್ವ ಮಾತ್ರ ಚಾಂಪನ ತಲೆ ಹತ್ರ ಕುದ್ದ್ಕಂಡ್ ಎಂಥದ್ದೋ ಮಣಮಣತಾ ಹೇಳ್ತಿತ್ತ್. ಎಲ್ಲರ ಮರ್ಡಾಟ, ಪಟಾಕಿ, ಗುಂಡಿನ ಶಬ್ದಲಿ ಚಾಮವ್ವ ಎಂಥ ಹೇಳ್ತುಟ್ಟತಾ ಮಾತ್ರ ಯಾರಿಗೂ ಗೊತ್ತಾತ್ಲೆ. ಇದ್ನ ನೋಡ್ದ ಒಬ್ಬ ಪಿಳ್ಳಿ ಹತ್ರ ಬಂದ್, ಚಾಮವ್ವ ಹೇಳ್ದುನೇ ಕಿವಿಕೊಟ್ಟ್ ಕೇಳ್ತಿತ್ತ್. `ನಾ ನಿನ್ನೆ ಇವ್ಕೆ ನಿಮ್ಮ ದೊಂಡೆ ಕಟ್ಟಿ ಹೋಗ, ಬಾಯಿಗೆ ಮಣ್ಣು ಹಾಕಾತಾ ಹೇಳಿದ್ದೆ...ನಾ ಹಂಗೆ ಹೇಳ್ದಕ್ಕೆ ಇಂದ್ ನನ್ನನ್ನ ಬಿಟ್ಟು ಹೋಗೋಳೊ...ಇಲ್ಲಿ ಇದ್ದ್ ನಾ ಎಂಥ ಮಾಡ್ದು, ನನ್ನನ್ನೂ ಕರ್ಕಂಡ್ ಹೋಗಿ'ತಾ ಚಾಮವ್ವ ಹೇಳ್ತಿತ್ತ್.
ಮಧ್ಯಾಹ್ನ ಆಕಾಕನ ಚಾಮವ್ವನ ತವರು ಮನೆಯವು ಬಂದೊ. ಇನ್ನೇನು ಚಾಂಪನ ಹೆಣನ ಸುಡುಕುಳಿಗೆ ತಕ್ಕಂಡ್ ಹೋಕು, ಅಷ್ಟೊತ್ತಿಗೆ ಚಾಮವ್ವಂಗೂ ಕೆಮ್ಮು ಶುರುವಾತ್. ಕೆಮ್ಮಿ, ಕೆಮ್ಮಿ ಹಂಗೆನೇ ಚಾಂಪನ ಹೆಣದ ಮೇಲೆ ಬಿದ್ದ್ಬಿಡ್ತ್. ಯಾರೆಷ್ಟೇ ಆರೈಕೆ ಮಾಡ್ರೂ ಚಾಮವ್ವ ಬದುಕಿತ್ಲೆ. ಇನ್ನೆಂಥ ಮಾಡ್ದು? ಇಬ್ಬರನ್ನೂ ಒಟ್ಟಿಗೆ ಸೇರ್ಸಿ ದಫನ ಮಡ್ದೊ. ಸುಮಾರು 50 ವರ್ಷ ಒಟ್ಟಿಗೆ ಬದುಕಿದ್ದ ಚಾಂಪ, ಚಾಮವ್ವ ಹಂಗೆ ಒಟ್ಟಿಗೆ ಸ್ವರ್ಗ ಸೇರಿಕಂಡ್ಬಿಟ್ಟಿದ್ದೊ. ಆದ್ರೆ, ಅಲ್ಲೂ ಜಗಳನೇ...
- ಸುನಿಲ್ ಪೊನ್ನೇಟಿ
arebhase@gmail.com
ಬ್ರಹ್ಮ ಹಂಗೆಲ್ಲಾ ಫ್ರೀ ಇರ್ದುಲ್ಲೆ !
ಯಾವಾಗ್ಲೂ ಅಂವ ಬ್ಯುಸಿ
ಎಷ್ಟಾದ್ರೂ ಸೃಷ್ಟಿಕರ್ತ ತಾನೇ ?
ಹಂಗೂ ಸ್ವಲ್ಪ ರೆಸ್ಟ್ ಸಿಕ್ಕಿರೆ...
ಊಹುಂ, ಸರಸ್ವತಿ ಬಿಡುಲ್ಲೆ !
ಅವಳಿಗೆ ಹೊಟ್ಟೆಕಿಚ್ಚು !
ಮತ್ತೊಬ್ಬ ಸುಂದರಿ ಹುಟ್ಟಿಬಿಟ್ಟದೆ !
ಪಾಪ...ಸರಸ್ವತಿ
ಅವಳಿಗಿನ್ನೂ ನಿನ್ನ ವಿಷಯ ಗೊತ್ಲೆ
ಅದ್ಯಾವ ಮಾಯಲಿ
ಬ್ರಹ್ಮ ನಿನ್ನ ಸೃಷ್ಟಿ ಮಾಡ್ತೋ..?
ಆ ಪುಣ್ಯಾತ್ಮಂಗೆ
ಅದೆಂಗೆ ಪುರುಷೊತ್ತು ಆತೋ ?
ಅದೆಷ್ಟು ಕಷ್ಟಪಟ್ಟುಟ್ಟೋ ಏನೋ !
ಕೋಟಿ ಕೋಟಿ ಸೃಷ್ಟಿ ಕಾರ್ಯದ
ಮಧ್ಯಲಿ..
ಸರಸ್ವತಿ ಕಣ್ಣು ತಪ್ಪಿಸಿ
ನಿಂಗೆ ಪೊರ್ಲುನ ತುಂಬಿಸಿಕೆ
ಬ್ರಹ್ಮ ನಿಜಕ್ಕೂ
ತುಂಬಾ ಬೆವರು ಸುರಿಸಿಟ್ಟು
ಅದಕ್ಕೆ ಸಮುದ್ರದ ನೀರು
ಉಪ್ಪುಪ್ಪು !
- ಸುನಿಲ್ ಪೊನ್ನೇಟಿ
arebhase@gmail.com
ಮೇಲೆ ಮನೆ ಚಾಂಪ ರೋಡ್ ಸೈಡ್ ಇರ್ವ ತೋಟಲಿ ಸಂಜೆ ಹೊತ್ತು ವಾಕಿಂಗ್ ಮಾಡ್ತಿತ್. ನಡ್ಕಂಡ್ ಹೋಗ್ತಿದ್ದ್ರೂ ಕಣ್ಣೆಲ್ಲಾ ಮರಗಳ ಮೇಲೆನೇ ಇತ್ತ್. ಒಮ್ಮೆ ಬೇಲಿಲಿರುವ ಸಿಲ್ವರ್ ಮರ ನೋಡಿರೆ ಮತ್ತೊಮ್ಮೆ, ಕಾಫಿ ಗಿಡಗಳ ಮಧ್ಯೆ ಇರ್ವ ಕಾಡು ಮರಗಳ್ನ ನೋಡ್ತಿತ್ತ್. ಅಷ್ಟೊತ್ತಿಗೆ ಅದೇ ದಾರೀಲಿ ಬರ್ತಿದ್ದ ಚೋಮುಣಿ, ಹಂಗೆನೇ ಸುಮ್ನೆ ಚಾಂಪನ ಮಾತಾಡಿಸೋಕಲ್ಲಾತಾ `ಏನ್ ತಾತ ಹೆಂಗೊಳರಿ? ಈಗಲೇ ಮರಗಳ್ನ ಲೆಕ್ಕ ಹಾಕ್ತೊಳರಿ...ನಿಮಿಗೆ ಯಾವ ಮರ ಸೆಟ್ ಆದುತನಾ..?'ತಾ ತಮಾಷೆ ಮಾಡ್ತ್. ಚೋಮುಣಿ ಪಾಲಿಗೆ ಆ ಮಾತ್ ತಮಾಷೆತಾ ಆದ್ರೂ ಚಾಂಪನ ಮನಸ್ಸು ಮೇಲೆ ತುಂಬಾ ಪರಿಣಾಮ ಆತ್. `ಹೌದಲ್ಲಾ... ನಂಗೆ ವಯಸ್ಸು ಹತ್ರ ಹತ್ರ 85 ಆತ್. ಇನ್ನ್ ನನ್ನ ಆಯುಷ್ಯ ಎಷ್ಟುಟ್ಟೋ ಏನೋ...ಒಂದು ವೇಳೆ ನಾ ಈಗ್ಗಿಂದೀಗಲೇ ಸತ್ತರೆ ಏನು ಗತಿ?' ಹಿಂಗೆನೇ ಯೋಚನೆ ಮಾಡಿಕಂಡ್ ಮನೆಗೆ ಹೋದ ಚಾಂಪ ಊಟ ಕೂಡ ಮಾಡದೆ ಮಲಕ್ಕಂಡ್ಬಿಡ್ತ್.
ಬೆಳಗ್ಗೆ ಕೋಳಿಕೂಗಿಕೆ ಮೊದ್ಲೇ ಎದ್ದ್ ತೋಟಲಿ ಬಿದ್ದ ವೀಳ್ಯದ ಎಲೆಗಳ್ನ ಹೆರ್ಕಿಕಂಡ್ ಬರ್ತಿದ್ದ ಚಾಂಪ, ಅಂದ್ 8 ಗಂಟೆ ಆದ್ರೂ ಎದ್ದಿತ್ತ್ಲೆ. ಇಷ್ಟೊತ್ತಿಗೆಲ್ಲಾ ಅವರದ್ದ್ ರೊಟ್ಟಿ ತಿಂದ್ ಎರಡು ಗ್ಲಾಸ್ ಕಾಫಿ ಕುಡ್ದ್ ಆಗಿರ್ತಿತ್ತ್. ಕಿರಿಸೊಸೆಗೆ ಯಾಕೋ ಹೆದ್ರಿಕೆ ಶುರುವಾತ್. ಚಾಂಪನ ಕೋಂಬರೆಗೆ ಹೋಗಿ ನೋಡಿರೆ, ಅವಿನ್ನೂ ಕಂಬಳಿ ಗುಡಿಹೊದ್ದು ಮಲಗಿದ್ದೊ. ಇವ್ಳು ಎರ್ಡು ಸಲ `ಮಾವ...ಮಾವ..' ತಾ ಕರ್ತ್. ಚಾಂಪನ ಕಡೇಂದ ಉತ್ತರನೇ ಇಲ್ಲೆ. ನಿನ್ನೆ ಸಾಯಂಕಾಲ ವರೆಗೆ ಲಾಯ್ಕ ಇದ್ದವ್ಕೆ ಬೆಳಗ್ಗೆನೇ ಏನಾತಪ್ಪತಾ, ಹತ್ತಿರ ಹೋಗಿ ಮತ್ತೆ ಎರಡು ಸಲ `ಮಾವ...ಮಾವ..'ತಾ ಕರ್ತ್. ಆಗ ಚಾಂಪ ಹೊದ್ದಿದ್ದ ಕಂಬಳಿನಾ ಮೆಲ್ಲೆ ತೆಗ್ದ್, `ಗಂಟೆ ಎಷ್ಟಾತ್ನೇ...ಆ ದರಿದ್ರ ಕೋಳಿ ಇಂದ್ ಕೂಗಿತ್ಲೆ ನೋಡ್...'ತಾ ಮಲಗಿದ್ದಲ್ಲಿಂದ ಎದ್ದೇಳಿಕೆ ನೋಡ್ದೊ. ಊಹುಂ..ಚಾಂಪಂಗೆ ಎದ್ದೇಳಿಕೆ ಆಗ್ತಿಲ್ಲೆ ! ಅವ್ಕೇ ಗೊತ್ತಿಲ್ಲದಂಗೆ ಸೊಂಟಂದ ಕೆಳಕ್ಕೆ ಸ್ಟ್ರೋಕ್ ಆಗಿಬಿಟ್ಟಿತ್ತ್ !
ಚೋಮುಣಿ ತಮಾಷೆಗೆ ಹೇಳ್ದ ಒಂದೇ ಮಾತ್, 85 ವರ್ಷದ ಚಾಂಪನ ಹಾಸಿಗೆ ಹಿಡಿಯುವಂಗೆ ಮಾಡಿಬಿಟ್ಟಿತ್ತ್. ಅಲ್ಲೀವರೆಗೆ ಅವು ಒಂದು ದಿನನೂ ಹುಷಾರಿಲ್ಲೆತಾ ಆಸ್ಪತ್ರೆಗೆ ಹೋದವಲ್ಲ. ಅವ್ಕೆ ಲಾಯ್ಕ ನೆನಪುಟ್ಟು...ಆಳುಗಳ ಜೊತೆ ಸೇರ್ಕಂಡ್ ಕಾಫಿ ಕೊಯ್ದದ್ ನಿನ್ನೆ ಮೊನ್ನೆತೇಳುವಂಗೆ ಕಣ್ಣುಮುಂದೆ ಬರ್ತುಟ್ಟು. ಆದ್ರೆ ವಯಸ್ಸು ಮಾತ್ರ ಚಾಂಪಂಗೆ ಗೊತ್ತಿಲ್ಲದಂಗೆನೇ ಜಾಸ್ತಿ ಆಗ್ತಾ ಬಂದಿತ್ತ್. ನಂಗೆ ವಯಸ್ಸಾಗುಟ್ಟುತಾ ಅವ್ಕೆ ಒಂದು ದಿನನೂ ಅನ್ನಿಸಿತ್ಲೆ. ಬಹುಶಃ ಮೂರು ವರ್ಷದ ಹಿಂದೆ ಇರೋಕೇನೋ...ಎಲ್ಲವೂ ಸೇರಿ ಕಾವೇರಿಗೆ ಹೋಗಿರ್ಕಾಕಕನ ಪಿಳ್ಳಿಗಳ ಜೊತೆ ಚಾಂಪ ಬ್ರಹ್ಮಗಿರಿ ಹತ್ತಿದ್ದೊ. ಒಂದು ಚೂರೂ ಸುಸ್ತು ಆಗಿತ್ತ್ಲೆ. ಅದೇ ಜೋಡಿ ಕಾಲುಗ ಇಂದ್ ಬಲ ಕಳ್ಕಂಡ್ ಕಂಬಳಿ ಒಳಗೆ ಅಡಗಿ ಕುದ್ದಿದ್ದೋ. ಅಷ್ಟೇ ಏಕೆ, ಮೊನ್ನೆ ಮೊನ್ನೆ ಭತ್ತ ಬಡಿಯಕಾಕನ ಒಂದು ಆಳು ಕಡಿಮೆ ಆಗಿಬಿಟ್ಟೊತೇಳಿ ಚಾಂಪನೇ ಮುಂದೆ ನಿಂತ್ಕಂಡ್ ಭತ್ತ ಬಡ್ದಿತ್ತ್. ಕೂಲಿಗೆ ಬಂದಿದ್ದ ಕರಿಯಾ ಚಾಂಪನ ತಾಕತ್ತ್ ನೋಡಿ, ಬಾಯಿಗೆ ಇಟ್ಟ್ಕಂಡಿದ್ದ ಬೀಡಿಗೇ ಬೆಂಕಿ ಕೊಡಿಕೆ ಮರ್ತ್ಬಿಟ್ಟಿತ್ತ್.
ಚಾಂಪ ಮಲಗಿದ್ದಲ್ಲಿಂದನೇ ಒಂದು ಫ್ಲಾಸ್ ಬ್ಯಾಕ್ ಗೆ ಹೋತ್. ಭಾಗಮಂಡಲ ಕಡೆ ಮಳೆ ಜೋರುತಾ ಅಲ್ಲಿದ್ದ ಜಾಗನ ಮಾರಿ ಈ ಅಳುವಾರಕ್ಕೆ ಬಾಕಾಕನ ಚಾಂಪಂಗೆ ಹತ್ತೋ, ಹನ್ನೆರಡೋ ವರ್ಷ. ಒಂದು ಎಕರೆ ಜಾಗ ತಕ್ಕಂಡ್ ಅದ್ಕೆ ಸುತ್ತಮುತ್ತ ಇದ್ದ ಪೈಸಾರಿ ಎಲ್ಲಾ ಸೇರಿ 10 ಎಕರೆ ಮಾಡುವಲ್ಲಿ ಅಪ್ಪನ ಜೊತೆ ಚಾಂಪನೂ ಬೆವರು ಜೊತೆ ರಕ್ತ ಸುರಿಸಿತ್ತ್. ಜೇನುಕಲ್ಲು ಬೆಟ್ಟಂದ ದೊಡ್ಡ ದೊಡ್ಡ ಬಂಡೆಗ ಉರುಳಿ ಬರುವಂಗೆ ಇವ್ರ ತೋಟಕ್ಕೆ ಆಗ ಬರ್ತಿದ್ದ ಆನೆಗಳ ಹಿಂಡ್ ಯೋಚನೆ ಮಾಡಿಕಂಡರೆ ಈಗ್ಲೂ ಮೈಲಿ ಬೆವರು ಬಿಚ್ಚಿದೆ. ಹಂಗೆ ಇರ್ಕಾಕನ ಬಾವಿಂದ ನೀರ್ ಎಳ್ದ್ ತರಕಾರಿ ಬೆಳ್ಸಿ ಕುಶಾಲನಗರ ಸಂತೆಗೆ ತಕ್ಕಂಡ್ ಹೋಗಿ ಮಾರಿದ್ದನ್ನ ಕೂಡ ಚಾಂಪ ಮರ್ತತ್ಲೆ. 20 ವರ್ಷ ಆಕಾಕನನೇ ಮದೆನಾಡ್ ಲಿ ಗೂಡೆ ನೋಡಿ ಅಪ್ಪ ಮದುವೆ ಮಾಡ್ದ್... ಮಕ್ಕ ಆದ್... ಅವು ಬೆಳ್ದ್ ದೊಡ್ಡವು ಆದ್... ಅವ್ಕೆ ಮದುವೆ ಮಾಡ್ದ್...ಪಿಳ್ಳಿಗ ಹುಟ್ಟಿದ್...ಹಿಂಗೆ ಬೆಳಗ್ಗೆಂದ ಸಂಜೆವರೆಗೆ ಎಲ್ಲಾ ಒಂದರ ಹಿಂದೆ ಒಂದು ಕಣ್ಮುಂದೆ ಬಾತ್. ದೊಡ್ಡ ಮಂಙ ಕಣಿವೆಗೆ ಹೋಗಿ ಎಣ್ಣೆ ಮತ್ತೆ ಪಾರಿವಾಳದ ಮದ್ದು ತಂದು ಅಪ್ಪಂಗೆ ಕೊಟ್ಟ್ ಮಲಗಿಸಿತ್.
ಆಶ್ಚರ್ಯ...! ಚಾಂಪ ಬೆಳಗ್ಗೆ ಕೋಳಿ ಕೂಗಿಕಾಕನನೇ ಎದ್ದ್ ವೀಳ್ಯದ ಎಲೆ ಹೆರ್ಕಿಕೆ ಹೋಗಿದ್ದೊ. ಅಷ್ಟೊತ್ತಿಗೆ ಅಲ್ಲೊಂದು ಜೀಪ್ ಹೋತ್ ಅದ್ರೊಳಗೆ ಚೋಮುಣಿನ ಅಡ್ಡಕ್ಕೆ ಮಲಗಿಸಿದ್ದೊ. ಎರಡು ಪರೆ ಬೀಜದ ಭತ್ತ ಎತ್ತಿಕಾಕನ ಸೊಂಟ ಉಳುಕಿತ್ತ್ ಗಡ ...!
- ಸುನಿಲ್ ಪೊನ್ನೇಟಿ
ಪುಟ್ಟ ಪುಟ್ಟ ಹೆಜ್ಜೆಯ
ಚೆಲುವ ಕೃಷ್ಣ !
ಕಾಲ್ಲಿ ಕಿರುಗೆಜ್ಜೆ
ಘಲ್ ಘಲ್ ಶಬ್ದ..
ಹರಿಯುತ್ತಿದ್ದಂವ ಎದ್ದು
ನಿಂತುಟ್ಟು
ಅವಂಗೀಗ ನಡೆಯುವ ಖುಷಿ !
ಎರಡೂ ಕೈಲಿ ಗಟ್ಟಿಯಾಗಿ
ಹಿಡ್ಕಂಡ ಅಮ್ಮನ ಕಿರುಬೆರಳು
ದೂರಲಿ ಕುದ್ದ್ಕಂಡ ಅಪ್ಪನ
ಚಪ್ಪಾಳೆ...
ಈಗಷ್ಟೇ ಹೆಜ್ಜೆ ಮೇಲೆ ಹೆಜ್ಜೆ ಇಡ್ತಿರ್ವ
ಪುಟ್ಟ ಕೂಸಿಗೆ..
ಮನೆ ತುಂಬಾ ಓಡಾಡ್ವ ದೊಡ್ಡ ಆಸೆ !
ಅಮ್ಮನ ಕೈಬಿಟ್ಟ್, ಗೋಡಗೆ ಕೈಕೊಟ್ಟ್
ತಾನಿ ತಾನಿ ಹೆಜ್ಜೆ ಹಾಕ್ತುಟ್ಟು !
ಒಂದೇ ದಿನಲೀ ಎಲ್ಲಾ ಕಲ್ತುಬಿಡ್ವ
ಉತ್ಸಾಹ !
ಹೊರಗಿನ ಅಂಗಳ..
ಅದರಾಚೆ ದೊಡ್ಡ ಗೇಟ್..
ಬುರ್ರ್ತಾ ಓಡುವ ಬಸ್ಸು, ಕಾರು
ಕೂಸುನ ಕರೀತುಟ್ಟು !
ಬಾ...ಬಾ...
- ಸುನಿಲ್ ಪೊನ್ನೇಟಿ
arebhase@gmail.com
ಢಂ..ಢಮಾರ್....! ಮಧ್ಯರಾತ್ರಿ ಚೇರಂಗಾಲದ ಆ ಮೂಲೆಲಿ ಕೇಳ್ದ ಶಬ್ದ, ನಿಶಾನೆಮೊಟ್ಟೆಗೆ ಮುಟ್ಟಿ ನಾಲ್ಕು ಸಲ ಪ್ರತಿಧ್ವನಿಸ್ತ್. ಹೌದು, ಸಂಶಯನೇ ಬೇಡ. ಅದ್ ಡಬಲ್ಬ್ಯಾರಲ್ ಕೋವಿಂದ ಹಾರ್ದ ಗುಂಡಿನ ಶಬ್ದ. ವಾರಲಿ ನಾಲ್ಕು ದಿನ ರಾತ್ರಿ ಹೊತ್ತು ಇಂಥ ಶಬ್ದಗ ಕೇಳ್ತನೇ ಇದ್ದವೆ. ಏಕೆತೇಳಿರೆ ಅದ್ ಕಾಡು ಮೂಲೆ. ಫಾರೆಸ್ಟ್ನವು ಇತ್ತ ತಲೆನೂ ಹಾಕಿ ಮಲಗುಲ್ಲೆ. ಹಂಗಾಗಿ ಇಲ್ಲಿ ಯಾವ್ದೆ ಹೆದರಿಕೆ ಇಲ್ಲದೆ ಬೇಟೆ ಮಾಡಕಾಗಿತ್ತ್. ಅದೃಷ್ಟ ಇದ್ದರೆ ಕಡವೆ, ಜಿಂಕೆ, ಕ್ಯಾಮ ಹಿಂಗೆ ದೊಡ್ಡ `ಜಾತಿ'ನೇ ಸಿಗ್ತಿತ್ತ್. ಎಂಥದ್ದೂ ಇಲ್ಲೆತೇಳಿರೆ ಕಾಡುಕೋಳಿನ್ನಾದ್ರೂ ಹೊಡ್ಕಂಡ್ ಬರಕ್ಕಾಗಿತ್. ಆದ್ರೆ ಮಧ್ಯರಾತ್ರಿ ಕೇಳ್ದ ಆ ಗುಂಡು ಮಾತ್ರ ಯಾಕೋ ಹೆದರಿಕೆ ಹುಟ್ಟಿಸುವಂಗೆ ಇತ್ತ್. ಅದ್ ಪ್ರಾಣಿ ಬೇಟೆಗೆ ಹಾರಿಸಿದ ಗುಂಡಿನ ಶಬ್ದ ಥರ ಇತ್ಲೆ...!
ಮಾರನೆ ದಿನ ಊರಲ್ಲೆಲ್ಲಾ ಬಿಸಿಬಿಸಿ ಸುದ್ದಿ. ಕಾಳು ಮತ್ತೆ ಅಣ್ಣಿ ನಾಪತ್ತೆ ಆಗಿದ್ದೊ. ರಾತ್ರೋ ರಾತ್ರಿ ಇಬ್ಬರು ಕಾಣೆಯಾಗೊಳೊತೇಳಿರೆ, 40-50 ಮನೆಗಳಿರ್ವ ಊರುಲಿ ಅದ್ ದೊಡ್ಡ ಸುದ್ದಿಯೇ...ಮಧ್ಯರಾತ್ರಿ ಕೇಳ್ದ ಗುಂಡಿನ ಶಬ್ದ, ನಿಶಾನೆ ಮೊಟ್ಟೆ ಪಾರೆಕಲ್ಲು ಹತ್ರ ಕಂಡುಬಂದ ರಕ್ತ..ಇದ್ನೆಲ್ಲಾ ನೋಡಿಕಾಕನ ಏನೋ ದೊಡ್ಡ ಅನಾಹುತ ನಡ್ದುಟ್ಟೇನೋತಾ ಎಲ್ಲವ್ಕೆ ಅನ್ನಿಸಿಕೆ ಶುರುವಾತ್. ಊರವೆಲ್ಲಾ ಸೇರಿಕಂಡ್ ಮೂರು ದಿವ್ಸ ಕಾಡೆಲ್ಲಾ ಹುಡುಕಿದೊ. ಹೂಂ... ಅಣ್ಣಿ ತಕ್ಕಂಡೋಗಿದ್ದ ಜಯಂತ ಕ್ಲಾತ್ ಸೆಂಟರ್ತೇಳಿ ಬರ್ದಿದ್ದ ಬ್ಯಾಗ್ ಮತ್ತೆ ಆ ಬ್ಯಾಗ್ ಬಿದ್ದಿದ್ದಲ್ಲಿ ಎರಡು ಖಾಲಿ ತೋಟಗ ಬಿಟ್ರೆ ಎಂತದ್ದೂ ಕಾಂಬಕೆ ಸಿಕ್ಕಿತ್ಲೆ. ಹಂಗಾರೆ ಇಬ್ಬರು ಏನಾದೋ ?
ಅಣ್ಣಿ ಮತ್ತೆ ಕಾಳುನ ಮನೆಯವು ಭಾಗಮಂಡಲ ಪೊಲೀಸ್ ಸ್ಟೇಷನ್ಲಿ ಒಂದು ಕಂಪ್ಲೇಂಟ್ ಕೊಟ್ಟೊ. `ದನ ಹುಡುಕಿಕೆತಾ ಕಾಡೊಳಕ್ಕೆ ಹೋದವು ಒಂದು ವಾರ ಆದ್ರೂ ವಾಪಸ್ ಮನೆಗೆ ಬಾತ್ಲೆ. ದಯವಿಟ್ಟು ನಮ್ಮ ಮನೆಯವ್ರನ್ನ ಹುಡುಕಿಕೊಡಿ'ತಾ ಕಂಪ್ಲೇಂಟ್ ಬರ್ದೊ... ಆದ್ರೆ ಅವಿಬ್ಬರು ಹೋಗಿದ್ದದ್ ಬೇಟೆಗೆ. ಹಂಗೆತೇಳಿ ಕಂಪ್ಲೇಟ್ಲಿ ಏನಾರೂ ಬರ್ದರೆ, ಕಂಪ್ಲೇಂಟ್ ಕೊಟ್ಟವ್ರನ್ನೇ ಪೊಲೀಸ್ರು ಹಿಡ್ದು ಒಳಕ್ಕೆ ಹಾಕ್ತಿದ್ದೋ ಏನೋ....ಆ ಭಾಗಮಂಡಲ ಪೊಲೀಸ್ ಸ್ಟೇಷನ್ಲಿ ಇದ್ದದ್ದೇ ನಾಲ್ಕು ಜನ. ಒಬ್ಬ ರೈಟ. ಅಂವ ಸ್ಟೇಷನ್ ಬಿಟ್ರೆ ಹೋಗ್ತಿದ್ದದ್ ಅವನ ಮನೆಗೆ ಮಾತ್ರ. ಇನ್ನೊಬ್ಬ ಸೆಂಟ್ರಿ. ಅವಂಗೆ ಸ್ಟೇಷನ್ ಕಾಯುವ ಕೆಲ್ಸ. ಮತ್ತೆ ಇಬ್ಬರಲ್ಲಿ ಒಬ್ಬಂಗೆ ಕೋಟರ್್ ಡ್ಯೂಟಿ. ಮತ್ತೊಬ್ಬ ಸಮನ್ಸ್ ಕೊಡಿಕೆತಾ ಊರೂರು ತಿರುಗಾಡ್ತಿತ್ತ್. ಹಿಂಗಿರ್ಕಾಕನನ ನಾಪತ್ತೆ ಆಗಿರ್ವ ಅಣ್ಣಿ ಮತ್ತೆ ಕಾಳುನ ಹುಡುಕುವವು ಯಾರು ? ಹಂಗೆನೇ ವಯರ್ಲೆಸ್ಲಿ ಒಂದು ಮೆಸೆಜ್ ಪಾಸ್ ಮಾಡಿ, ಸ್ಟೇಷನ್ನಲ್ಲಿ ಇದ್ದ ಇಬ್ಬರು ಇಸ್ಪೀಟ್ ಆಡಿಕೆ ಕುದ್ದುಕೊಂಡೊ.
ಚೇರಂಗಾಲಕ್ಕೆ ಕೇರಳ ಹತ್ರ ಆದೆ. ನಿಶಾನೆ ಮೊಟ್ಟೆ ದಾಟಿರೆ ಆಚೆ ಸಿಕ್ಕುದು, ಕೇರಳದ ಮುಂಡ್ರೋಟು. ತುಂಬಾ ಜನ ನಡ್ಕಂಡೇ ಅಲ್ಲಿಗೆ ಹೋಗಿ ಬಂದ್ಬಿಡ್ತಿದ್ದೊ. ಅಲ್ಲೂ ಒಂದು ಪೊಲೀಸ್ ಸ್ಟೇಷನ್ ಉಟ್ಟು. ಭಾಗಮಂಡಲ ಸ್ಟೇಷನ್ಂದ ಬಂದ ವಯರ್ಲೆಸ್ ಮೆಸೆಜ್, ಈ ಮುಂಡ್ರೋಟು ಸ್ಟೇಷನ್ಲಿ ಇದ್ದ ಒಬ್ಬ ಪೊಲೀಸ್ಗೆ ಗೊತ್ತಾಗ್ತಿದ್ದಂಗೆ ಅವನ ಕಿವಿ ನೆಟ್ಟಂಗೆ ಆತ್. ವಾರದ ಹಿಂದೆ ಒಂದು ಜೀಪುಲಿ ಇಬ್ಬರನ್ನ ಕರ್ಕಂಡ್ ಹೋಗ್ತಿದ್ದನ್ನ ಇಂವ ನೋಡಿತ್ತ್. ಈ ವಿಷಯನ ಅಲ್ಲಿದ್ದ ಎಸ್ಐಗೆ ಹೇಳ್ತ್. ಎಸ್ಐ ಭಾಗಮಂಡಲ ಸ್ಟೇಷನ್ಗೆ ಫೋನ್ ಮಾಡಿ, ವಿಷಯನ ತಿಳ್ಸಿತ್. ಭಾಗಮಂಡಲ ಪೊಲೀಸ್ಗ ಅಣ್ಣಿ ಮತ್ತೆ ಕಾಳುನ ಮನೆಯವ್ಕೆ ವಿಷಯ ತಿಳ್ಸಿ ಮತ್ತೆ ಇಸ್ಪೀಟ್ ಕುಟ್ಟುತಾ ಕುದ್ದಕಂಡೊ.
ಚೇರಂಗಾಲದ ನಾಲ್ಕು ಜನ ಮುಕ್ರಿಗ ಮುಂಡ್ರೋಟು ಪೊಲೀಸ್ ಸ್ಟೇಷನ್ಗೆ ಹೋದೊ. ಅಲ್ಲಿನ ಪೊಲೀಸ್ರನ್ನ ಹಿಡ್ಕಂಡ್ ಊರಲ್ಲಿ ಕೆಲವ್ರನ್ನ ವಿಚಾರಿಸಿ ಆಕಾಕನ ಅಲ್ಪಸ್ವಲ್ಪ ವಿಷಯಗ ಗೊತ್ತಾತ್. ಇಬ್ಬರ ಪೈಕಿ ಒಬ್ಬಂಗೆ ಗುಂಡೇಟು ಬಿದ್ದಿತ್ತ್. ಒಬ್ಬ ಚಾಟ ಅವ್ರಿಬ್ರನ್ನ ಕರ್ಕಂಡ್ ಕಾಂಞಂಗಾಡ್ ಆಸ್ಪತ್ರೆಗೆ ಸೇರ್ಸಿತ್ತ್....ಸರಿ ಎಲ್ಲಾ ಸೇರಿಕಂಡ್ ಕಾಂಞಂಗಾಡ್ ಆಸ್ಪತ್ರೆಗೆ ಹೋದೋ. ಅಲ್ಲಿ ಹೋಗಿ ನೋಡಿರೆ ಅಣ್ಣಿ ಮುಖಕೆಲ್ಲಾ ಬ್ಯಾಂಡೇಜ್ ಸುತ್ತಿಕಂಡ್ ಮಲಗಿತ್ತ್. ಕಾಳು ಅವನ ಪಕ್ಕಲಿ ಕುದ್ದ್ಕಂಡ್ ಕಿತ್ತಳೆ ಸಿಪ್ಪೆ ಸುಲೀತಿತ್ತ್. ನಡ್ಡ ಕಥೆ ಕೇಳಿರೆ ಅಣ್ಣಿ ಬದುಕಿದ್ದೇ ಪವಾಡ.
ನಿಶಾನೆಮೊಟ್ಟೆ ಪಾರೆಕಲ್ಲು ಹತ್ರ ಅಣ್ಣಿ ಮತ್ತೆ ಕಾಳು ಹೋಕಾಕನ, ಕ್ಯಾಮ ಮರ್ಡುದು ಕೇಳ್ತ್. ಇವಿಬ್ಬರೂ ಆ ಸ್ವರ ಕೇಳ್ದ ಜಾಗಕ್ಕೆ ಹೋಗ್ತಿದ್ದಂಗೆ, ಅದ್ ಅಲ್ಲಿಂದ ಮಾಯ ಆಗಿಬಿಡ್ತಿತ್ತ್. ಹಂಗಾಗಿ ಇಬ್ಬರೂ ಬೇರೆ ಬೇರೆ ಕಡೆಂದ ಕಾಡೊಳಕ್ಕೆ ನುಗ್ಗಿಕೆ ಪ್ಲ್ಯಾನ್ ಮಾಡ್ದೊ. ಕ್ಯಾಮ ಮಾತ್ರ ಆಗಾಗ್ಗ ಮರ್ಡುತ್ತನೇ ಇತ್ತ್. ಸ್ವಲ್ಪ ಹೊತ್ತು ಕಳ್ದ ಮೇಲೆ ಕಾಳುಗೆ ದೂರಲೆಲ್ಲೋ ಕ್ಯಾಮ ಕಣ್ಣು ಕೊಟ್ಟಂಗೆ ಆತ್. ಹಿಂದೆ ಮುಂದೆ ನೋಡದೆ, ಕೋವಿದ್ ಕುದುರೆನಾ ಎಳ್ದೇ ಬಿಡ್ತ್. ಆದ್ರೆ ಆ ಗುಂಡು ಹೋಗಿ ತಾಗಿದ್ ಮಾತ್ರ ಅಣ್ಣಿಗೆ. ಗುಂಡು ತಾಗಿ ಅಣ್ಣಿ ಕಿರ್ಚಿಕಾ ಕನ ಕಾಳು ಹೆದ್ರಿಕೆಲಿ ಮತ್ತೊಂದು ಕುದುರೆ ಎಳ್ದ್ಬಿಡ್ತ್. ಅದೃಷ್ಟ ಲಾಯ್ಕ ಇತ್, ಅದೆಂಗೋ ಆ ಗುಂಡು ಆಕಾಶ ಕಡೆಗೆ ಹಾರ್ತ್... ಅಲ್ಲೇ ಹೊಳೇಂದ ಆಚೆ ಮರ ಕಡಿಯಕ್ಕೆ ಬಂದಿದ್ದ ಚಾಟಗಳಿಗೆ ಈ ಬೊಬ್ಬೆ ಕೇಳಿ ಓಡಿ ಬಂದಿದ್ದೊ. ನಿಶಾನೆಮೊಟ್ಟೆಂದ ಮುಂಡ್ರೋಟು ವರೆಗೆ ಹೊತ್ತುಕಂಡ್ ಹೋಗಿ, ಅಲ್ಲಿಂದ ಜೀಪ್ ಮಾಡಿಕಂಡ್ ಕಾಂಞಂಗಾಡ್ ಆಸ್ಪತ್ರೆ ಸೇರ್ಸಿದ್ದೊ. ಅಣ್ಣಿ ಬದುಕಿಕಂಡಿತ್ತ್. ಆದ್ರೆ ಕಾಳುಗೆ ಕ್ಯಾಮದ ಕಣ್ಣು ಥರ ಕಂಡಿದ್ದ ಅಣ್ಣಿದ್ ಬಲಕಣ್ಣು ಢಮಾರ್ ಆಗಿತ್ತ್...
- ಸುನಿಲ್ ಪೊನ್ನೇಟಿ