Monday, 23 July 2012

ಮೊಣ್ಣ ಬದುಕಿಕಣ್ತ್ !


`ಏ ಭಾವ...ನನ್ನ ಹಂದಿ ಹೊಡಿಯೊಕುತಾ ಒಳೆರಾ...'


`ಇನ್ನೊಂದ್ ತಿಂಗ ಇಟ್ಟ್ಕ ಮಾರಾಯ. ಕೈಲ್ಮುಹೂರ್ತ ಬರ್ತುಟ್ಟಲ್ಲಾ.'


`ಇಲ್ಲೆರಾ ಭಾವ ಆದ್ ತುಂಬಾ ಉರಿ ಬಂದದೆ. ಗೂಡುನೆಲ್ಲಾ ಹಾಳುಮಾಡಿಬಿಟ್ಟುಟ್ಟು. ಹೊರಗೆ ಬಿಟ್ಟರೆ ಅಂಗಳನ ಚುಕ್ಕಿಹಾಕಿದೆ. ಅದ್ಕೆ ಅದ್ನ ತೆಗ್ದುಬಿಡ್ನೋತಾ...'


`ಹಂಗಾರೆ ನಂಗೊಂದು ಮೂರು ಕೆಜಿ ಇರ್ಲಿ ಆತಾ...ನಿನ್ನ ಹಂದಿ ಎಷ್ಟಾದು ?'


`ಅಂದಾಜ್ ಮಾಡಿಕೆ ಆಲೆರಾ...ನಿಂತ್ಕಂಡರೆ ನೂರು ಕೆಜಿ ದಾಟಿದೆತಾ ಅನ್ಸಿದೆ. ಮಲಗಿರೆ ಒಂದು 120 ಕೆಜಿ ಆದುಕಂಡದೆತಾ ಹೇಳಕ್...ನೀ ಒಮ್ಮೆ ಬಂದ್ ನೋಡಿಯಾ...'


`ಆತ್.. ಪೋಯಿ ನಡಿ...ಹೋಗಿ ನೋಡಿಯೇ ಬಿಡ್ನೊ..'


`ನೋಡ್... ಆ ಮಾವಿನಮರ ಬುಡನ ಹೆಂಗೆ ಚುಕ್ಕಿಹಾಕ್ಯುಟ್ಟುತಾ...ಈಗ ತಳಿ ಕುಡ್ದದ್ ಆಷ್ಟೇ. ಹೊಟ್ಟೆ ಸ್ವಲ್ಪ ದೊಡ್ಡದ್ ಕಾಣ್ತುಟ್ಟು. ನಿನ್ನ ಅಂದಾಜ್ಲಿ ಎಷ್ಟು ಆದುರಾ?'


`ಯಾಕೋ ನೋಡಿರೆ ಚರ್ಬಿ ಜಾಸ್ತಿ ಇದ್ದಂಗೆ ಕಾಣ್ತುಟ್ಟು. ನಿನ್ನ ಹಂದಿ 80 ಕೆಜಿ ದಾಟುಲೆರಾ...'


`ಎಂಥ ಮಾತಾಡಿಯಾ ಭಾವ ನೀ...ಕಳ್ದ ವರ್ಷ ಕೈಲ್ಪೊದುಲಿ ತಂದು ಬಿಟ್ಟೊಳೆ. ದಿನಾ ಒಳ್ಳೆ ತೀನಿ ಕೊಟ್ಟೊಳೆ. ಶೆಟ್ಟಿ ಅಂಗಡೀಂದ ಫೀಡ್ ಸನಾ ತಂದು ಹಾಕ್ಯೊಳೆ. ನೀ ನೋಡಿರೆ 80 ಕೆಜಿ ದಾಟುಲೆತಾ ಹೇಳಿಯಾ...'


`ನೋಡಿಕನ ಗೊತ್ತಾಲೆನಾ...ಈ ಹಂದಿಲಿ ನಿಂಗೆ 80 ಕೆಜಿಗಿಂತ ಒಂದು ತುಂಡು ಜಾಸ್ತಿ ಮಾಂಸ ಸಿಕ್ಕುಲೆ...ಬೇಕಾರೆ ಬರ್ದು ಕೊಟ್ಟನೆ..'


`ನಿನ್ನ ಕರ್ಕಂಡ್ ಬಂದ್ ಹಂದಿನ ನಿಂಗೆ ತೋರಿಸಕ್ಕಾಗದಿತ್ತ್....ಹಂಗಾರೆ 80 ಕೆಜಿ ಮಾತ್ರ ಆದುತಾ ಹೇಳಿಯಾ...?'


`ಹುಂ...ಅದಕ್ಕಿಂತ ಜಾಸ್ತಿ ನಿಂಗೆ ಒಂದು ಪೀಸ್ ಕೂಡ ಸಿಕ್ಕುಲೆ....ಹೋಗ್ಲಿ, ಮಾಂಸಕ್ಕೆ ಜನ ಮಾಡ್ಯೊಳಾ..?'


`ಹೌದುರಾ ಭಾವ. ಎಲ್ಲಾ ಲೆಕ್ಕ ಹಾಕಿರೆ, 115 ಕೆಜಿ ಮಾಂಸಕ್ಕೆ ಜನ ಆಗ್ಯೊಳೊ. ಎಲ್ಲವ್ಕೆ ಹೇಳ್ತ್ಲೆ. ಹೇಳಿರೆ, ತುಂಡಿಗೆ ಒಂದು ಜನ ಆಗಿಬಿಟ್ಟವೆ.... ಅಲ್ಲರ, ನನ್ನ ಹಂದಿ ಬರೀ 80 ಕೆಜಿ ಆದ್ರೆ ಉಳ್ದವ್ಕೆ ಎಂಥ ಮಾಡ್ದುರಾ?'


`ಎಂಥ ಮಾಡಿಯಾ...? ಹುಂ ಒಂದು ಐಡಿಯಾ....'


`ಎಂಥ ಭಾವ?'


`ನಾ ಈಗ ನಿಂಗೆ ಎಷ್ಟು ಕೆಜಿ ಮಾಂಸ ಬೇಕೂತ ಹೇಳ್ಯೊಳೆ?'


`3 ಕೆಜಿ...'


`ಹಂಗಾರೆ ನಂಗೆ ಬರೀ 2 ಕೆಜಿ ಕೊಡ್. ಹಂಗೆನೇ 5 ಕೆಜಿ ಹೇಳ್ದವ್ಕೆ 3 ಕೆಜಿ, 2 ಕೆಜಿ ಹೇಳ್ದವ್ಕೆ 1 ಕೆಜಿ ಕೊಡ್ ಎಲ್ಲಾ ಸರಿ ಆದೆ.'


`ಮತ್ತೆ ಸಾಕಿದಂವ ನಂಗೆ ಎಂಥ ಉಳ್ದದೆ..?'


`ಕೈ, ಕಾಲು, ತಲೆ, ಬೋಟಿ....ಸಾಕಲ್ಲಾ ನಿಂಗೆ....ಏ ನನ್ನ ಹೆಣ್ಣ್ ಫೋನ್ ಮಾಡ್ತುಟ್ಟು. ಮತ್ತೆ ಸಿಕ್ಕಿನರಾ ಬನ್ನೆ...ನಂಗೆ ಎರಡು ಕೆಜಿ ಮರೀಬೇಡಾ...ಕ್ಲೀನ್ ಮಾಡಿಕೆ ನಾನೂ ಬನ್ನೆ. ಅದ್ರ ಪಾಲೂ ಕೊಡಕು..'


`ಇಲ್ಲೆ ಭಾವ ನಾ ಹಂದಿ ಹೊಡೆಯಲ್ಲೆ...ಅದು 150 ಕೆಜಿ ಆಗುವ ವರೆಗೆ ಸಾಕಿನೆ...ಹುತ್ತರಿ ಊರೊರ್ಮೆಗೆನೆ ಅದ್ಕೆ ನಾ ಗುಂಡು ಹೊಡೆಯುದು...ಎಲ್ಲವ್ಕೆ ಹೇಳಿಬಿಡು....
ನೀ ಬಾ ಮೊಣ್ಣ, ಇನ್ನ್ 9 ತಿಂಗಳ್ಲಿ ನೀ ಒಂದೂವರೆ ಕ್ವಿಂಟಾಲ್ ಆಕು. ಈಸಲ ನಿಂಗೆ ಸಂತೋಷ್ ಹೊಟೇಲ್ಂದನೇ ತಳಿ ತಂದ್ ಕುಡಿಸಿನೆ...ಯಾಕೆ ತೂಕ ಬಾದುಲೆತಾ ನೋಡಿನೆ. ನಂಗೆ ಕೈ, ಕಾಲು, ತಲೆ, ಬೋಟಿ ಮಾತ್ರ ಉಳ್ಸಿವೆ ಗಡ ಇವು... ದೊಡ್ಡ ಉಪಕಾರಿಗ... ಥೂ ಮೊಣ್ಣ.. ನಿನ್ನ ದೊಂಡೆಕಟ್ಟಿಕೆ ಮತ್ತೆ ಎಲ್ಲಾ ಕಡೆ ಚುಕ್ತೊಳಲಾ...ಚೂ ಚೂ...'

- ಸುನಿಲ್ ಪೊನ್ನೇಟಿ
arebhase@gmail.com

1 comment:

  1. ಲಾಯಿಕ ಉಟ್ಟು. ಓದಿ ಖುಷಿ ಆತ್

    ReplyDelete