Tuesday, 10 July 2012

ಚಾಂಪಂಗೆ ಕಲ್ಲಾಯುಷ್ಯ !


ಮೇಲೆ ಮನೆ ಚಾಂಪ ರೋಡ್ ಸೈಡ್ ಇರ್ವ ತೋಟಲಿ ಸಂಜೆ ಹೊತ್ತು ವಾಕಿಂಗ್ ಮಾಡ್ತಿತ್. ನಡ್ಕಂಡ್ ಹೋಗ್ತಿದ್ದ್ರೂ ಕಣ್ಣೆಲ್ಲಾ ಮರಗಳ ಮೇಲೆನೇ ಇತ್ತ್. ಒಮ್ಮೆ ಬೇಲಿಲಿರುವ ಸಿಲ್ವರ್ ಮರ ನೋಡಿರೆ ಮತ್ತೊಮ್ಮೆ, ಕಾಫಿ ಗಿಡಗಳ ಮಧ್ಯೆ ಇರ್ವ ಕಾಡು ಮರಗಳ್ನ ನೋಡ್ತಿತ್ತ್. ಅಷ್ಟೊತ್ತಿಗೆ ಅದೇ ದಾರೀಲಿ ಬರ್ತಿದ್ದ ಚೋಮುಣಿ, ಹಂಗೆನೇ ಸುಮ್ನೆ ಚಾಂಪನ ಮಾತಾಡಿಸೋಕಲ್ಲಾತಾ `ಏನ್ ತಾತ ಹೆಂಗೊಳರಿ? ಈಗಲೇ ಮರಗಳ್ನ ಲೆಕ್ಕ ಹಾಕ್ತೊಳರಿ...ನಿಮಿಗೆ ಯಾವ ಮರ ಸೆಟ್ ಆದುತನಾ..?'ತಾ ತಮಾಷೆ ಮಾಡ್ತ್. ಚೋಮುಣಿ ಪಾಲಿಗೆ ಆ ಮಾತ್ ತಮಾಷೆತಾ ಆದ್ರೂ ಚಾಂಪನ ಮನಸ್ಸು ಮೇಲೆ ತುಂಬಾ ಪರಿಣಾಮ ಆತ್. `ಹೌದಲ್ಲಾ... ನಂಗೆ ವಯಸ್ಸು ಹತ್ರ ಹತ್ರ 85 ಆತ್. ಇನ್ನ್ ನನ್ನ ಆಯುಷ್ಯ ಎಷ್ಟುಟ್ಟೋ ಏನೋ...ಒಂದು ವೇಳೆ ನಾ ಈಗ್ಗಿಂದೀಗಲೇ ಸತ್ತರೆ ಏನು ಗತಿ?' ಹಿಂಗೆನೇ ಯೋಚನೆ ಮಾಡಿಕಂಡ್ ಮನೆಗೆ ಹೋದ ಚಾಂಪ ಊಟ ಕೂಡ ಮಾಡದೆ ಮಲಕ್ಕಂಡ್ಬಿಡ್ತ್. 
ಬೆಳಗ್ಗೆ ಕೋಳಿಕೂಗಿಕೆ ಮೊದ್ಲೇ ಎದ್ದ್ ತೋಟಲಿ ಬಿದ್ದ ವೀಳ್ಯದ ಎಲೆಗಳ್ನ ಹೆರ್ಕಿಕಂಡ್ ಬರ್ತಿದ್ದ ಚಾಂಪ, ಅಂದ್ 8 ಗಂಟೆ ಆದ್ರೂ ಎದ್ದಿತ್ತ್ಲೆ. ಇಷ್ಟೊತ್ತಿಗೆಲ್ಲಾ ಅವರದ್ದ್ ರೊಟ್ಟಿ ತಿಂದ್ ಎರಡು ಗ್ಲಾಸ್ ಕಾಫಿ ಕುಡ್ದ್ ಆಗಿರ್ತಿತ್ತ್. ಕಿರಿಸೊಸೆಗೆ ಯಾಕೋ ಹೆದ್ರಿಕೆ ಶುರುವಾತ್. ಚಾಂಪನ ಕೋಂಬರೆಗೆ ಹೋಗಿ ನೋಡಿರೆ, ಅವಿನ್ನೂ ಕಂಬಳಿ ಗುಡಿಹೊದ್ದು ಮಲಗಿದ್ದೊ. ಇವ್ಳು ಎರ್ಡು ಸಲ `ಮಾವ...ಮಾವ..' ತಾ ಕರ್ತ್. ಚಾಂಪನ ಕಡೇಂದ ಉತ್ತರನೇ ಇಲ್ಲೆ. ನಿನ್ನೆ ಸಾಯಂಕಾಲ ವರೆಗೆ ಲಾಯ್ಕ ಇದ್ದವ್ಕೆ ಬೆಳಗ್ಗೆನೇ ಏನಾತಪ್ಪತಾ, ಹತ್ತಿರ ಹೋಗಿ ಮತ್ತೆ ಎರಡು ಸಲ `ಮಾವ...ಮಾವ..'ತಾ ಕರ್ತ್. ಆಗ ಚಾಂಪ ಹೊದ್ದಿದ್ದ ಕಂಬಳಿನಾ ಮೆಲ್ಲೆ ತೆಗ್ದ್, `ಗಂಟೆ ಎಷ್ಟಾತ್ನೇ...ಆ ದರಿದ್ರ ಕೋಳಿ ಇಂದ್ ಕೂಗಿತ್ಲೆ ನೋಡ್...'ತಾ ಮಲಗಿದ್ದಲ್ಲಿಂದ ಎದ್ದೇಳಿಕೆ ನೋಡ್ದೊ. ಊಹುಂ..ಚಾಂಪಂಗೆ ಎದ್ದೇಳಿಕೆ ಆಗ್ತಿಲ್ಲೆ ! ಅವ್ಕೇ ಗೊತ್ತಿಲ್ಲದಂಗೆ ಸೊಂಟಂದ ಕೆಳಕ್ಕೆ ಸ್ಟ್ರೋಕ್ ಆಗಿಬಿಟ್ಟಿತ್ತ್ ! 
ಚೋಮುಣಿ ತಮಾಷೆಗೆ ಹೇಳ್ದ ಒಂದೇ ಮಾತ್, 85 ವರ್ಷದ ಚಾಂಪನ ಹಾಸಿಗೆ ಹಿಡಿಯುವಂಗೆ ಮಾಡಿಬಿಟ್ಟಿತ್ತ್. ಅಲ್ಲೀವರೆಗೆ ಅವು ಒಂದು ದಿನನೂ ಹುಷಾರಿಲ್ಲೆತಾ ಆಸ್ಪತ್ರೆಗೆ ಹೋದವಲ್ಲ. ಅವ್ಕೆ ಲಾಯ್ಕ ನೆನಪುಟ್ಟು...ಆಳುಗಳ ಜೊತೆ ಸೇರ್ಕಂಡ್ ಕಾಫಿ ಕೊಯ್ದದ್ ನಿನ್ನೆ ಮೊನ್ನೆತೇಳುವಂಗೆ ಕಣ್ಣುಮುಂದೆ ಬರ್ತುಟ್ಟು. ಆದ್ರೆ ವಯಸ್ಸು ಮಾತ್ರ ಚಾಂಪಂಗೆ ಗೊತ್ತಿಲ್ಲದಂಗೆನೇ ಜಾಸ್ತಿ ಆಗ್ತಾ ಬಂದಿತ್ತ್. ನಂಗೆ ವಯಸ್ಸಾಗುಟ್ಟುತಾ ಅವ್ಕೆ ಒಂದು ದಿನನೂ ಅನ್ನಿಸಿತ್ಲೆ. ಬಹುಶಃ ಮೂರು ವರ್ಷದ ಹಿಂದೆ ಇರೋಕೇನೋ...ಎಲ್ಲವೂ ಸೇರಿ ಕಾವೇರಿಗೆ ಹೋಗಿರ್ಕಾಕಕನ ಪಿಳ್ಳಿಗಳ ಜೊತೆ ಚಾಂಪ ಬ್ರಹ್ಮಗಿರಿ ಹತ್ತಿದ್ದೊ. ಒಂದು ಚೂರೂ ಸುಸ್ತು ಆಗಿತ್ತ್ಲೆ. ಅದೇ ಜೋಡಿ ಕಾಲುಗ ಇಂದ್ ಬಲ ಕಳ್ಕಂಡ್ ಕಂಬಳಿ ಒಳಗೆ ಅಡಗಿ ಕುದ್ದಿದ್ದೋ. ಅಷ್ಟೇ ಏಕೆ, ಮೊನ್ನೆ ಮೊನ್ನೆ ಭತ್ತ ಬಡಿಯಕಾಕನ ಒಂದು ಆಳು ಕಡಿಮೆ ಆಗಿಬಿಟ್ಟೊತೇಳಿ ಚಾಂಪನೇ ಮುಂದೆ ನಿಂತ್ಕಂಡ್ ಭತ್ತ ಬಡ್ದಿತ್ತ್. ಕೂಲಿಗೆ ಬಂದಿದ್ದ ಕರಿಯಾ ಚಾಂಪನ ತಾಕತ್ತ್ ನೋಡಿ, ಬಾಯಿಗೆ ಇಟ್ಟ್ಕಂಡಿದ್ದ ಬೀಡಿಗೇ ಬೆಂಕಿ ಕೊಡಿಕೆ ಮರ್ತ್ಬಿಟ್ಟಿತ್ತ್.
ಚಾಂಪ ಮಲಗಿದ್ದಲ್ಲಿಂದನೇ ಒಂದು ಫ್ಲಾಸ್ ಬ್ಯಾಕ್ ಗೆ ಹೋತ್. ಭಾಗಮಂಡಲ ಕಡೆ ಮಳೆ ಜೋರುತಾ ಅಲ್ಲಿದ್ದ ಜಾಗನ ಮಾರಿ ಈ ಅಳುವಾರಕ್ಕೆ ಬಾಕಾಕನ ಚಾಂಪಂಗೆ ಹತ್ತೋ, ಹನ್ನೆರಡೋ ವರ್ಷ. ಒಂದು ಎಕರೆ ಜಾಗ ತಕ್ಕಂಡ್ ಅದ್ಕೆ ಸುತ್ತಮುತ್ತ ಇದ್ದ ಪೈಸಾರಿ ಎಲ್ಲಾ ಸೇರಿ 10 ಎಕರೆ ಮಾಡುವಲ್ಲಿ ಅಪ್ಪನ ಜೊತೆ ಚಾಂಪನೂ ಬೆವರು ಜೊತೆ ರಕ್ತ ಸುರಿಸಿತ್ತ್. ಜೇನುಕಲ್ಲು ಬೆಟ್ಟಂದ ದೊಡ್ಡ ದೊಡ್ಡ ಬಂಡೆಗ ಉರುಳಿ ಬರುವಂಗೆ ಇವ್ರ ತೋಟಕ್ಕೆ ಆಗ ಬರ್ತಿದ್ದ  ಆನೆಗಳ ಹಿಂಡ್ ಯೋಚನೆ ಮಾಡಿಕಂಡರೆ ಈಗ್ಲೂ ಮೈಲಿ ಬೆವರು ಬಿಚ್ಚಿದೆ. ಹಂಗೆ ಇರ್ಕಾಕನ  ಬಾವಿಂದ ನೀರ್  ಎಳ್ದ್ ತರಕಾರಿ ಬೆಳ್ಸಿ ಕುಶಾಲನಗರ ಸಂತೆಗೆ ತಕ್ಕಂಡ್ ಹೋಗಿ ಮಾರಿದ್ದನ್ನ ಕೂಡ ಚಾಂಪ ಮರ್ತತ್ಲೆ. 20 ವರ್ಷ  ಆಕಾಕನನೇ ಮದೆನಾಡ್ ಲಿ ಗೂಡೆ ನೋಡಿ ಅಪ್ಪ ಮದುವೆ ಮಾಡ್ದ್... ಮಕ್ಕ  ಆದ್... ಅವು ಬೆಳ್ದ್ ದೊಡ್ಡವು ಆದ್... ಅವ್ಕೆ ಮದುವೆ ಮಾಡ್ದ್...ಪಿಳ್ಳಿಗ ಹುಟ್ಟಿದ್...ಹಿಂಗೆ ಬೆಳಗ್ಗೆಂದ ಸಂಜೆವರೆಗೆ ಎಲ್ಲಾ ಒಂದರ ಹಿಂದೆ ಒಂದು ಕಣ್ಮುಂದೆ ಬಾತ್. ದೊಡ್ಡ ಮಂಙ ಕಣಿವೆಗೆ ಹೋಗಿ ಎಣ್ಣೆ ಮತ್ತೆ ಪಾರಿವಾಳದ ಮದ್ದು ತಂದು ಅಪ್ಪಂಗೆ ಕೊಟ್ಟ್ ಮಲಗಿಸಿತ್.
      ಆಶ್ಚರ್ಯ...! ಚಾಂಪ ಬೆಳಗ್ಗೆ ಕೋಳಿ ಕೂಗಿಕಾಕನನೇ ಎದ್ದ್   ವೀಳ್ಯದ ಎಲೆ ಹೆರ್ಕಿಕೆ ಹೋಗಿದ್ದೊ. ಅಷ್ಟೊತ್ತಿಗೆ ಅಲ್ಲೊಂದು ಜೀಪ್ ಹೋತ್ ಅದ್ರೊಳಗೆ ಚೋಮುಣಿನ ಅಡ್ಡಕ್ಕೆ ಮಲಗಿಸಿದ್ದೊ. ಎರಡು ಪರೆ ಬೀಜದ ಭತ್ತ  ಎತ್ತಿಕಾಕನ ಸೊಂಟ ಉಳುಕಿತ್ತ್ ಗಡ ...!


- ಸುನಿಲ್ ಪೊನ್ನೇಟಿ


No comments:

Post a Comment