Sunday, 22 July 2012

ಫೋಟೋ ಫ್ಲ್ಯಾಶ್ ಬ್ಯಾಕ್


ಕಂಡಕ್ಟರ್ಗ ನೇತುಹಾಕ್ಕಂಡವೆಯಲ್ಲಾ ಪರ್ಸ್, ಹಂಗೆನೇ ರೇಡಿಯೋ ಥರ ಇರ್ವ ಒಂದು ಬ್ಯಾಗ್. ಅದ್ರೊಳ್ಗೆ 8-10 ಬ್ಯಾಟರಿಗ. ಆ ಬ್ಯಾಟರಿಗಳಿಗೆಲ್ಲಾ ಕನೆಕ್ಟ್ ಆಗಿರ್ವ ಸುರುಳಿ ಸುರುಳಿ ವಯರ್. ಆ ವಯರ್ ತುದೀಲಿ ಕ್ಯಾಮರ. ಆದ್ನ ಹಿಡ್ಕಳ್ವ ನರಪೇತಲ ನಾರಾಯಣನ ಹೆಸ್ರು ಸ್ಟುಡಿಯೋ ಅಶೋಕ ! ಊರಿಗೊಂದೇ ಸ್ಟುಡಿಯೋ. ಸ್ಟುಡಿಯೋಕ್ಕೆ ಒಬ್ಬನೇ ಅಶೋಕ.
ಆಗ ಈಗಿನಂಗೆ ಮೋಬೈಲ್, ಮೊಬೈಲ್ಲಿ ಕ್ಯಾಮರಾ, ಅಲ್ಲೇ ಡ್ರಾ ಅಲ್ಲೇ ಬಹುಮಾನತಾ ಹೇಳುವಂಗೆ ಅಲ್ಲೇ ಫೋಟೋ ತೆಗ್ದು, ಅಲ್ಲೇ ನೋಡ್ವ ಡಿಜಿಟಲ್ ಕೆಮರಾ ಯಾವುದೂ ಇತ್ಲೆ. ಇದ್ದದ್ದ್ ರೀಲ್ ಹಾಕಿ ವೈಟ್ ಆ್ಯಂಡ್ಬ್ಲ್ಯಾಕ್ ಪೋಟೋ ತೆಗೆಯುವ ಕಪ್ಪು ಕಲರ್ನ ದೊಡ್ಡ ಕ್ಯಾಮರ. ಅದ್ರಲ್ಲಿ ಫೋಟೋ ತೆಗೆದ್ರೂ ಸಿಕ್ತಿದ್ದದ್ ಒಂದು ವಾರ ಕಳ್ದ ಮೇಲೆ. ಯಾರಾದ್ರೂ ದುಡ್ಡಿದ್ದವ್ರ ಮನೆ ಮದುವೆ ಇದ್ರೆ, ಈ ಅಶೋಕ ಕಲರ್ ಫೋಟೋ ತೆಗೆಯುವ ಕ್ಯಾಮರನಾ ಕೇರಳದಿಂದ ಬಾಡಿಗೆಗೆ ತರ್ಸ್ತ್ತಿತ್. ಇನ್ನ್ ಅಲ್ಲಿ ತೆಗ್ದ ಫೋಟೋ ಸಿಗಕ್ಕಾಗಿದ್ದರೆ, ಆರು ತಿಂಗನೋ ಒಂದು ವರ್ಷನೋ ಆಗಿಬಿಡ್ತಿತ್ತ್. ಅಷ್ಟೊತ್ತಿಗೆ ಆ ಮದುವೆ ಆಗಿದ್ದವ್ಕೆ ಮಕ್ಕ ಕೂಡಿ ಆಗಿ ಬಿಡ್ತಿದ್ದದ್ ಉಟ್ಟು ! ಹಂಗಾಗಿ ಅಂದ್ ಫೋಟೋಗ, ಕ್ಯಾಮರಾ, ಫೋಟೋಗ್ರಾಫರ್ ಎಲ್ಲಾ ಒಂಥರ ವಿಚಿತ್ರವಾಗಿ ಕಾಣ್ತಿದ್ದೊ.
ಇನ್ನ್ ಸ್ಟುಡಿಯೋ ಅಶೋಕನ ಅವತಾರನೂ ಹಂಗೆನೇ ಇತ್ತ್. ಲಾಚಾರ್ ದೇಹ... ದೊಗಳೆ ಪ್ಯಾಂಟ್, ದೊಗಳೆ ಷರ್ಟ್ ಹಾಕ್ಕಂಡ್ ನಡ್ಕಂಡ್ ಬರ್ತಿದ್ದರೆ, ಶುಂಟಿ ಗದ್ದೆಲಿ ನಿಲ್ಸಿದ್ದ ಬೆರ್ಚಪ್ಪ ಎದ್ದ್ ಬಂದಂಗೆ ಕಾಣ್ತಿತ್ತ್. ಇನ್ನ್ ಅವ್ನ ವೇಷನೂ ವಿಚಿತ್ರ...ಮುಖದ ತುಂಬಾ ಗಡ್ಡ. ಆ ಗಡ್ಡದೊಳಗೆ ಸಿಗರೇಟ್ ಸೇದಿ ಸೇದಿ ಕಪ್ಪಾಗಿದ್ದ ತುಟಿ. ಸರಿಯಾಗಿ ನೋಡಿರೆ ಮಾತ್ರ ಅವಂಗೆ ತುಟಿ ಉಟ್ಟುತಾ ಗೊತ್ತಾಗ್ತಿತ್ತ್ ! ಇದ್ರ ಜೊತೆ ಅರ್ಧ ಮುಖ ಮುಚ್ಚುವಂಗೆ ದೊಡ್ಡ ಕೂಲಿಂಗ್ ಗ್ಲಾಸ್. ಅಂವ ತೆಗೆಯುವ ಫೋಟೋಗಳಂಗೆ ಅಶೋಕನೂ ಎಲ್ಲವ್ಕೆ ಆಶ್ಚರ್ಯದ ವಿಷಯ ಆಗಿಬಿಟ್ಟಿತ್ತ್.
ಶಾಲೆಗಳಲ್ಲಿ ವರ್ಷಕೊಮ್ಮೆ ಗ್ರೂಪ್ ಫೋಟೋ ತೆಗೆಸಿವೆಯಲ್ಲಾ...ಆಗ ತಿಮ್ಮಯ್ಯ ಮಾಷ್ಟ್ರು ನಾಲ್ಕು ಹುಡುಗರನ್ನ ಕಳ್ಸಿ, ಈ ಅಶೋಕನ ಕರ್ಕೊಂಡ್ ಬಾಕೆ ಹೇಳ್ತಿದ್ದೊ. ಅಶೋಕ ಕ್ಯಾಮರ ಮಾತ್ರ ಯಾರ ಕೈಗೂ ಕೊಡ್ತಿತ್ಲೆ. ಅದ್ರ ಸ್ಟ್ಯಾಂಡ್, ಬ್ಯಾಟರಿ ಡಬ್ಬ, ಒಂದು ಸ್ಟೂಲ್ನ ಹುಡುಗರ ಕೈಗೆ ಕೊಟ್ಟ್ ಅವ್ರನ್ನ ಮುಂದೆ ಕಳಿಸ್ತಿತ್ತ್. ಇಂವ ಮಾತ್ರ ಕ್ಯಾಮರನಾ ಬಟ್ಟೆಯೊಳಗೆ ಸುತ್ತಿಕಂಡ್ ಕೂಸ್ ಹಿಡ್ಕಂಡ್ ಬರ್ವಂಗೆ ಜಾಗರೂಕತೆಲಿ ಎತ್ತಿಕಂಡ್ ಬರ್ತಿತ್ತ್. 
ಗ್ರೂಪ್ ಫೋಟೋ ತೆಗೆಯುದುತೇಳಿರೆ ಶಾಲೆಲಿ ಆದಿನ ಒಂಥರ ಹಬ್ಬ. ಸ್ವಲ್ಪ ಸಣ್ಣ ಇರ್ವ ಮಕ್ಕ ಕೂರಿಕೆ ನೆಲಕ್ಕೆ ಚಾಪೆ. ಅವ್ಕಿಂತ ಸ್ವಲ್ಪ ದೊಡ್ಡ ಮಕ್ಕ ಕೂರಿಕೆ ಆ ಚಾಪೆ ಹಿಂದೆ ಸಣ್ಣಬೆಂಚು. ಈ ಸಣ್ಣ ಬೆಂಚ್ ಹಿಂದೆ ಟೀಚರ್ಗ ಕೂರಿಕೆ ಕುರ್ಚಿಗ....ಅದ್ರ ಮಧ್ಯಲಿ ಹೆಡ್ಮಾಷ್ಟ್ರು ಕೂರಿಕೆ ಸ್ವಲ್ಪ ದೊಡ್ಡ ಕುರ್ಚಿ. ಈ ಕುರ್ಚಿ ಸಾಲಿನ ಹಿಂದೆ ದೊಡ್ಡಮಕ್ಕ ನಿಂತ್ಕಂಬಕೆ ಮತ್ತೊಂದು ಸಾಲು ಬೆಂಚು. ಇದನ್ನೆಲ್ಲಾ ಮಕ್ಕಳೇ ವ್ಯವಸ್ಥೆ ಮಾಡ್ತಿದ್ದೊ. ಆದ್ರೆ ಅಶೋಕ ಬಂದಮೇಲೆ ಈ ವ್ಯವಸ್ಥೆಲಿ ಸ್ವಲ್ಪ ಬದಲಾವಣೆ ಆಗ್ತಿತ್ತ್. ಅವಂಗೆ ಬೇಕಾದಂಗೆ ಮತ್ತೆ ಬೆಂಚ್ ಕುರ್ಗಚಿಳ್ನ ಜೋಡಿಸಿಕಣ್ತಿತ್. ಅಷ್ಟೊತ್ತಿಗೆ ಮಧ್ಯಾಹ್ನ ಆಗಿ ಟೀಚರ್ಗೆಲ್ಲಾ ಇನ್ನೊಂದ್ ರೌಂಡ್ ಮೇಕಪ್ಗೆ ಕುದ್ದುಬಿಡ್ತಿದ್ದೊ.
ಹಿಂಗೆ ಎಲ್ಲಾ ಆಗಿ ಫೋಟೋ ತೆಗೆಯಕಾಕನನೂ ದೊಡ್ಡ ಸರ್ಕಸ್ ನಡ್ದ್ ಹೋಗ್ತಿತ್ತ್. ಮಕ್ಕ ಹೆಂಗೆ ಫೋಸ್ ಕೊಟ್ರು ಅಶೋಕಂಗೆ ಸರಿ ಆಗ್ತಿತ್ಲೆ. ಕ್ಯಾಮರದೋಳಗೆ ಮುಖ ಹಾಕ್ಕಿಕಂಡ್ ಅಂವ `ಸ್ವಲ್ಪ ಎಡಕ್ಕೆ ಬಾ...ಸ್ವಲ್ಪ ಬಲಕ್ಕೆ ಬಾ...ಏಯ್ ನೀ ಮುಖ ಮೇಲೆ ಎತ್ತೋ...ಟೀಚರ್ ನೀವು ಸ್ವಲ್ಪ ನಗಾಡಿ...ಸ್ಮೈಲ್ ಪ್ಲೀಸ್..' ತಾ ಹೇಳಿ ಕ್ಲಿಕ್ ಮಾಡಿಬಿಡ್ತಿತ್ತ್. ಅಂತೂ ಫೋಟೋ ಸೆಷನ್ ಮುಗಿಯಕಾಕನ ಸಂಜೆ ಆಗಿಬಿಡ್ತಿತ್ತ್. ಇನ್ನ್ ಎಲ್ಲವ್ಕೆ ಒಂದೇ ಕುತೂಹಲ...ಫೋಟೋ ಹೆಂಗೆ ಬಂದಿರ್ದುತಾ...
ತಿಂಗಳೋ, ಎರಡು ತಿಂಗಳೋ ಕಳ್ದ ಮೇಲೆ ಫೋಟೋ ಸಿಗ್ತಿತ್ತ್. ಫೋಟೋಲಿ ಲಾಯ್ಕ ಬಿದ್ದಿರುವೊ ಎನೋತಾ ನೋಡಿರೆ, ಅಲ್ಲಿ ಏನಾದ್ರೊಂದು ಎಡವಟ್ಟು ಆಗಿರ್ತಿತ್ತ್. ಒಬ್ಬನ ಕಣ್ಣು ಮುಚ್ಚಿ ಹೋಗಿದ್ದರೆ, ಮತ್ತೊಬ್ಬ ಮೂಗೊಳಗೆ ಕೈ ಹಾಕ್ತಿದ್ದದ್ ಹಂಗೆನೇ ಕಾಣ್ತಿತ್ತ್. ಒಬ್ಬ ಗೂಡೆ ಕೂದಲು ಸರಿಮಾಡಿಕೆತಾ ಎತ್ತಿದ ಕೈ ಟೀಚರ್ ತಲೆ ಮೇಲೆ ಬಂದ್ ಕೊಂಬು ಇಟ್ಟಂಗೆ ಆಗಿರ್ತಿತ್ತ್. ಕೊನೆಗೆ ಎಲ್ಲವೂ ಬಯ್ತಿದ್ದದ್ ಈ ಸ್ಟುಡಿಯೋ ಅಶೋಕಂಗೆನೇ `ಥೂ... ಅವನ ಮುಖದ ಗಡ್ಡಕ್ಕೆ ಇಷ್ಟು ಬೆಂಕಿ ಹಾಕ...ಸರಿಯಾಗಿ ಫೋಟೋನೇ ತೆಗೆಯಕ್ಕೆ ಬಾಲೆ...'
ಈಗ ಬಿಡಿ ಆ ಕಷ್ಟ ಎಲ್ಲಾ ಇಲ್ಲೆ. ಡಿಜಿಟಲ್ ಕ್ಯಾಮರಾ ಉಟ್ಟಲ್ಲಾ.. ಕಣ್ಣು ಮುಚ್ಚಿಹೋದರೆ, ಮತ್ತೊಂದ್ ಫೋಟೋ ತೆಗೆಯಕ್.. ಏನ್ ಹೇಳಿಯರಿ?

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment