Wednesday, 4 July 2012

ಪುಟ್ಟ ಹೆಜ್ಜೆಯ ಮುದ್ದು ಕೃಷ್ಣ


ಪುಟ್ಟ ಪುಟ್ಟ ಹೆಜ್ಜೆಯ
ಚೆಲುವ ಕೃಷ್ಣ !
ಕಾಲ್ಲಿ ಕಿರುಗೆಜ್ಜೆ
ಘಲ್ ಘಲ್ ಶಬ್ದ..
ಹರಿಯುತ್ತಿದ್ದಂವ ಎದ್ದು 
ನಿಂತುಟ್ಟು
ಅವಂಗೀಗ ನಡೆಯುವ ಖುಷಿ !
ಎರಡೂ ಕೈಲಿ ಗಟ್ಟಿಯಾಗಿ
ಹಿಡ್ಕಂಡ ಅಮ್ಮನ ಕಿರುಬೆರಳು
ದೂರಲಿ ಕುದ್ದ್ಕಂಡ ಅಪ್ಪನ
ಚಪ್ಪಾಳೆ...
ಈಗಷ್ಟೇ ಹೆಜ್ಜೆ ಮೇಲೆ ಹೆಜ್ಜೆ ಇಡ್ತಿರ್ವ
ಪುಟ್ಟ ಕೂಸಿಗೆ..
ಮನೆ ತುಂಬಾ ಓಡಾಡ್ವ ದೊಡ್ಡ ಆಸೆ !
ಅಮ್ಮನ ಕೈಬಿಟ್ಟ್, ಗೋಡಗೆ ಕೈಕೊಟ್ಟ್
ತಾನಿ ತಾನಿ ಹೆಜ್ಜೆ ಹಾಕ್ತುಟ್ಟು !
ಒಂದೇ ದಿನಲೀ ಎಲ್ಲಾ ಕಲ್ತುಬಿಡ್ವ
ಉತ್ಸಾಹ !  
ಹೊರಗಿನ ಅಂಗಳ.. 
ಅದರಾಚೆ ದೊಡ್ಡ ಗೇಟ್..
ಬುರ್ರ್ತಾ ಓಡುವ ಬಸ್ಸು, ಕಾರು 
ಕೂಸುನ ಕರೀತುಟ್ಟು !
ಬಾ...ಬಾ... 

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment