Tuesday 3 July 2012

ಕಣ್ಣು ಕೊಟ್ಟ ಕ್ಯಾಮ...ಕೈ ಕೊಟ್ಟ ಗುರಿ !


ಢಂ..ಢಮಾರ್....! ಮಧ್ಯರಾತ್ರಿ ಚೇರಂಗಾಲದ ಆ ಮೂಲೆಲಿ ಕೇಳ್ದ ಶಬ್ದ, ನಿಶಾನೆಮೊಟ್ಟೆಗೆ ಮುಟ್ಟಿ ನಾಲ್ಕು ಸಲ ಪ್ರತಿಧ್ವನಿಸ್ತ್. ಹೌದು, ಸಂಶಯನೇ ಬೇಡ. ಅದ್ ಡಬಲ್ಬ್ಯಾರಲ್ ಕೋವಿಂದ ಹಾರ್ದ ಗುಂಡಿನ ಶಬ್ದ. ವಾರಲಿ ನಾಲ್ಕು ದಿನ ರಾತ್ರಿ ಹೊತ್ತು ಇಂಥ ಶಬ್ದಗ ಕೇಳ್ತನೇ ಇದ್ದವೆ. ಏಕೆತೇಳಿರೆ ಅದ್ ಕಾಡು ಮೂಲೆ. ಫಾರೆಸ್ಟ್ನವು ಇತ್ತ ತಲೆನೂ ಹಾಕಿ ಮಲಗುಲ್ಲೆ. ಹಂಗಾಗಿ ಇಲ್ಲಿ ಯಾವ್ದೆ ಹೆದರಿಕೆ ಇಲ್ಲದೆ ಬೇಟೆ ಮಾಡಕಾಗಿತ್ತ್. ಅದೃಷ್ಟ ಇದ್ದರೆ ಕಡವೆ, ಜಿಂಕೆ, ಕ್ಯಾಮ ಹಿಂಗೆ ದೊಡ್ಡ `ಜಾತಿ'ನೇ ಸಿಗ್ತಿತ್ತ್. ಎಂಥದ್ದೂ ಇಲ್ಲೆತೇಳಿರೆ ಕಾಡುಕೋಳಿನ್ನಾದ್ರೂ ಹೊಡ್ಕಂಡ್ ಬರಕ್ಕಾಗಿತ್. ಆದ್ರೆ ಮಧ್ಯರಾತ್ರಿ ಕೇಳ್ದ ಆ ಗುಂಡು ಮಾತ್ರ ಯಾಕೋ ಹೆದರಿಕೆ ಹುಟ್ಟಿಸುವಂಗೆ ಇತ್ತ್. ಅದ್ ಪ್ರಾಣಿ ಬೇಟೆಗೆ ಹಾರಿಸಿದ ಗುಂಡಿನ ಶಬ್ದ ಥರ ಇತ್ಲೆ...!
ಮಾರನೆ ದಿನ ಊರಲ್ಲೆಲ್ಲಾ ಬಿಸಿಬಿಸಿ ಸುದ್ದಿ. ಕಾಳು ಮತ್ತೆ ಅಣ್ಣಿ ನಾಪತ್ತೆ ಆಗಿದ್ದೊ. ರಾತ್ರೋ ರಾತ್ರಿ ಇಬ್ಬರು ಕಾಣೆಯಾಗೊಳೊತೇಳಿರೆ, 40-50 ಮನೆಗಳಿರ್ವ ಊರುಲಿ ಅದ್ ದೊಡ್ಡ ಸುದ್ದಿಯೇ...ಮಧ್ಯರಾತ್ರಿ ಕೇಳ್ದ ಗುಂಡಿನ ಶಬ್ದ, ನಿಶಾನೆ ಮೊಟ್ಟೆ ಪಾರೆಕಲ್ಲು ಹತ್ರ ಕಂಡುಬಂದ ರಕ್ತ..ಇದ್ನೆಲ್ಲಾ ನೋಡಿಕಾಕನ ಏನೋ ದೊಡ್ಡ ಅನಾಹುತ ನಡ್ದುಟ್ಟೇನೋತಾ ಎಲ್ಲವ್ಕೆ ಅನ್ನಿಸಿಕೆ ಶುರುವಾತ್. ಊರವೆಲ್ಲಾ ಸೇರಿಕಂಡ್ ಮೂರು ದಿವ್ಸ ಕಾಡೆಲ್ಲಾ ಹುಡುಕಿದೊ. ಹೂಂ... ಅಣ್ಣಿ ತಕ್ಕಂಡೋಗಿದ್ದ ಜಯಂತ ಕ್ಲಾತ್ ಸೆಂಟರ್ತೇಳಿ ಬರ್ದಿದ್ದ ಬ್ಯಾಗ್ ಮತ್ತೆ ಆ ಬ್ಯಾಗ್ ಬಿದ್ದಿದ್ದಲ್ಲಿ ಎರಡು ಖಾಲಿ ತೋಟಗ ಬಿಟ್ರೆ ಎಂತದ್ದೂ ಕಾಂಬಕೆ ಸಿಕ್ಕಿತ್ಲೆ. ಹಂಗಾರೆ ಇಬ್ಬರು ಏನಾದೋ ?
ಅಣ್ಣಿ ಮತ್ತೆ ಕಾಳುನ ಮನೆಯವು ಭಾಗಮಂಡಲ ಪೊಲೀಸ್ ಸ್ಟೇಷನ್ಲಿ ಒಂದು ಕಂಪ್ಲೇಂಟ್ ಕೊಟ್ಟೊ. `ದನ ಹುಡುಕಿಕೆತಾ ಕಾಡೊಳಕ್ಕೆ ಹೋದವು ಒಂದು ವಾರ ಆದ್ರೂ ವಾಪಸ್ ಮನೆಗೆ ಬಾತ್ಲೆ. ದಯವಿಟ್ಟು ನಮ್ಮ ಮನೆಯವ್ರನ್ನ ಹುಡುಕಿಕೊಡಿ'ತಾ ಕಂಪ್ಲೇಂಟ್ ಬರ್ದೊ... ಆದ್ರೆ ಅವಿಬ್ಬರು ಹೋಗಿದ್ದದ್ ಬೇಟೆಗೆ. ಹಂಗೆತೇಳಿ ಕಂಪ್ಲೇಟ್ಲಿ ಏನಾರೂ ಬರ್ದರೆ, ಕಂಪ್ಲೇಂಟ್ ಕೊಟ್ಟವ್ರನ್ನೇ ಪೊಲೀಸ್ರು ಹಿಡ್ದು ಒಳಕ್ಕೆ ಹಾಕ್ತಿದ್ದೋ ಏನೋ....ಆ ಭಾಗಮಂಡಲ ಪೊಲೀಸ್ ಸ್ಟೇಷನ್ಲಿ ಇದ್ದದ್ದೇ ನಾಲ್ಕು ಜನ. ಒಬ್ಬ ರೈಟ. ಅಂವ ಸ್ಟೇಷನ್ ಬಿಟ್ರೆ ಹೋಗ್ತಿದ್ದದ್ ಅವನ ಮನೆಗೆ ಮಾತ್ರ. ಇನ್ನೊಬ್ಬ ಸೆಂಟ್ರಿ. ಅವಂಗೆ ಸ್ಟೇಷನ್ ಕಾಯುವ ಕೆಲ್ಸ. ಮತ್ತೆ ಇಬ್ಬರಲ್ಲಿ ಒಬ್ಬಂಗೆ ಕೋಟರ್್ ಡ್ಯೂಟಿ. ಮತ್ತೊಬ್ಬ ಸಮನ್ಸ್ ಕೊಡಿಕೆತಾ ಊರೂರು ತಿರುಗಾಡ್ತಿತ್ತ್. ಹಿಂಗಿರ್ಕಾಕನನ ನಾಪತ್ತೆ ಆಗಿರ್ವ ಅಣ್ಣಿ ಮತ್ತೆ ಕಾಳುನ ಹುಡುಕುವವು ಯಾರು ? ಹಂಗೆನೇ ವಯರ್ಲೆಸ್ಲಿ ಒಂದು ಮೆಸೆಜ್ ಪಾಸ್ ಮಾಡಿ, ಸ್ಟೇಷನ್ನಲ್ಲಿ ಇದ್ದ ಇಬ್ಬರು ಇಸ್ಪೀಟ್ ಆಡಿಕೆ ಕುದ್ದುಕೊಂಡೊ.
ಚೇರಂಗಾಲಕ್ಕೆ ಕೇರಳ ಹತ್ರ ಆದೆ. ನಿಶಾನೆ ಮೊಟ್ಟೆ ದಾಟಿರೆ ಆಚೆ ಸಿಕ್ಕುದು, ಕೇರಳದ ಮುಂಡ್ರೋಟು. ತುಂಬಾ ಜನ ನಡ್ಕಂಡೇ ಅಲ್ಲಿಗೆ ಹೋಗಿ ಬಂದ್ಬಿಡ್ತಿದ್ದೊ. ಅಲ್ಲೂ ಒಂದು ಪೊಲೀಸ್ ಸ್ಟೇಷನ್ ಉಟ್ಟು. ಭಾಗಮಂಡಲ ಸ್ಟೇಷನ್ಂದ ಬಂದ ವಯರ್ಲೆಸ್ ಮೆಸೆಜ್, ಈ ಮುಂಡ್ರೋಟು ಸ್ಟೇಷನ್ಲಿ ಇದ್ದ ಒಬ್ಬ ಪೊಲೀಸ್ಗೆ ಗೊತ್ತಾಗ್ತಿದ್ದಂಗೆ ಅವನ ಕಿವಿ ನೆಟ್ಟಂಗೆ ಆತ್. ವಾರದ ಹಿಂದೆ ಒಂದು ಜೀಪುಲಿ ಇಬ್ಬರನ್ನ ಕರ್ಕಂಡ್ ಹೋಗ್ತಿದ್ದನ್ನ ಇಂವ ನೋಡಿತ್ತ್. ಈ ವಿಷಯನ ಅಲ್ಲಿದ್ದ ಎಸ್ಐಗೆ ಹೇಳ್ತ್. ಎಸ್ಐ ಭಾಗಮಂಡಲ ಸ್ಟೇಷನ್ಗೆ ಫೋನ್ ಮಾಡಿ, ವಿಷಯನ ತಿಳ್ಸಿತ್. ಭಾಗಮಂಡಲ ಪೊಲೀಸ್ಗ ಅಣ್ಣಿ ಮತ್ತೆ ಕಾಳುನ ಮನೆಯವ್ಕೆ ವಿಷಯ ತಿಳ್ಸಿ ಮತ್ತೆ ಇಸ್ಪೀಟ್ ಕುಟ್ಟುತಾ ಕುದ್ದಕಂಡೊ. 
ಚೇರಂಗಾಲದ ನಾಲ್ಕು ಜನ ಮುಕ್ರಿಗ ಮುಂಡ್ರೋಟು ಪೊಲೀಸ್ ಸ್ಟೇಷನ್ಗೆ ಹೋದೊ. ಅಲ್ಲಿನ ಪೊಲೀಸ್ರನ್ನ ಹಿಡ್ಕಂಡ್ ಊರಲ್ಲಿ ಕೆಲವ್ರನ್ನ ವಿಚಾರಿಸಿ ಆಕಾಕನ ಅಲ್ಪಸ್ವಲ್ಪ ವಿಷಯಗ ಗೊತ್ತಾತ್. ಇಬ್ಬರ ಪೈಕಿ ಒಬ್ಬಂಗೆ ಗುಂಡೇಟು ಬಿದ್ದಿತ್ತ್. ಒಬ್ಬ ಚಾಟ ಅವ್ರಿಬ್ರನ್ನ ಕರ್ಕಂಡ್ ಕಾಂಞಂಗಾಡ್ ಆಸ್ಪತ್ರೆಗೆ ಸೇರ್ಸಿತ್ತ್....ಸರಿ ಎಲ್ಲಾ ಸೇರಿಕಂಡ್ ಕಾಂಞಂಗಾಡ್ ಆಸ್ಪತ್ರೆಗೆ ಹೋದೋ. ಅಲ್ಲಿ ಹೋಗಿ ನೋಡಿರೆ ಅಣ್ಣಿ ಮುಖಕೆಲ್ಲಾ ಬ್ಯಾಂಡೇಜ್ ಸುತ್ತಿಕಂಡ್ ಮಲಗಿತ್ತ್. ಕಾಳು ಅವನ ಪಕ್ಕಲಿ ಕುದ್ದ್ಕಂಡ್ ಕಿತ್ತಳೆ ಸಿಪ್ಪೆ ಸುಲೀತಿತ್ತ್. ನಡ್ಡ ಕಥೆ ಕೇಳಿರೆ ಅಣ್ಣಿ ಬದುಕಿದ್ದೇ ಪವಾಡ.
ನಿಶಾನೆಮೊಟ್ಟೆ ಪಾರೆಕಲ್ಲು ಹತ್ರ ಅಣ್ಣಿ ಮತ್ತೆ ಕಾಳು ಹೋಕಾಕನ, ಕ್ಯಾಮ ಮರ್ಡುದು ಕೇಳ್ತ್. ಇವಿಬ್ಬರೂ ಆ ಸ್ವರ ಕೇಳ್ದ ಜಾಗಕ್ಕೆ ಹೋಗ್ತಿದ್ದಂಗೆ, ಅದ್ ಅಲ್ಲಿಂದ ಮಾಯ ಆಗಿಬಿಡ್ತಿತ್ತ್. ಹಂಗಾಗಿ ಇಬ್ಬರೂ ಬೇರೆ ಬೇರೆ ಕಡೆಂದ ಕಾಡೊಳಕ್ಕೆ ನುಗ್ಗಿಕೆ ಪ್ಲ್ಯಾನ್ ಮಾಡ್ದೊ. ಕ್ಯಾಮ ಮಾತ್ರ ಆಗಾಗ್ಗ ಮರ್ಡುತ್ತನೇ ಇತ್ತ್. ಸ್ವಲ್ಪ ಹೊತ್ತು ಕಳ್ದ ಮೇಲೆ ಕಾಳುಗೆ ದೂರಲೆಲ್ಲೋ ಕ್ಯಾಮ ಕಣ್ಣು ಕೊಟ್ಟಂಗೆ ಆತ್. ಹಿಂದೆ ಮುಂದೆ ನೋಡದೆ, ಕೋವಿದ್ ಕುದುರೆನಾ ಎಳ್ದೇ ಬಿಡ್ತ್. ಆದ್ರೆ ಆ ಗುಂಡು ಹೋಗಿ ತಾಗಿದ್ ಮಾತ್ರ ಅಣ್ಣಿಗೆ. ಗುಂಡು ತಾಗಿ ಅಣ್ಣಿ ಕಿರ್ಚಿಕಾ ಕನ ಕಾಳು ಹೆದ್ರಿಕೆಲಿ ಮತ್ತೊಂದು ಕುದುರೆ ಎಳ್ದ್ಬಿಡ್ತ್. ಅದೃಷ್ಟ ಲಾಯ್ಕ ಇತ್, ಅದೆಂಗೋ ಆ ಗುಂಡು ಆಕಾಶ ಕಡೆಗೆ ಹಾರ್ತ್... ಅಲ್ಲೇ ಹೊಳೇಂದ ಆಚೆ ಮರ ಕಡಿಯಕ್ಕೆ ಬಂದಿದ್ದ ಚಾಟಗಳಿಗೆ ಈ ಬೊಬ್ಬೆ ಕೇಳಿ ಓಡಿ ಬಂದಿದ್ದೊ. ನಿಶಾನೆಮೊಟ್ಟೆಂದ ಮುಂಡ್ರೋಟು ವರೆಗೆ ಹೊತ್ತುಕಂಡ್ ಹೋಗಿ, ಅಲ್ಲಿಂದ ಜೀಪ್ ಮಾಡಿಕಂಡ್ ಕಾಂಞಂಗಾಡ್ ಆಸ್ಪತ್ರೆ ಸೇರ್ಸಿದ್ದೊ. ಅಣ್ಣಿ ಬದುಕಿಕಂಡಿತ್ತ್. ಆದ್ರೆ ಕಾಳುಗೆ ಕ್ಯಾಮದ ಕಣ್ಣು ಥರ ಕಂಡಿದ್ದ ಅಣ್ಣಿದ್ ಬಲಕಣ್ಣು ಢಮಾರ್ ಆಗಿತ್ತ್...

- ಸುನಿಲ್ ಪೊನ್ನೇಟಿ

No comments:

Post a Comment