Friday, 13 July 2012

ಸುಂದರಿ ಸೃಷ್ಟಿಗೆ ಬ್ರಹ್ಮನ ಕಷ್ಟ !


ಬ್ರಹ್ಮ ಹಂಗೆಲ್ಲಾ ಫ್ರೀ ಇರ್ದುಲ್ಲೆ !
ಯಾವಾಗ್ಲೂ ಅಂವ ಬ್ಯುಸಿ
ಎಷ್ಟಾದ್ರೂ ಸೃಷ್ಟಿಕರ್ತ ತಾನೇ ?
ಹಂಗೂ ಸ್ವಲ್ಪ ರೆಸ್ಟ್ ಸಿಕ್ಕಿರೆ...
ಊಹುಂ, ಸರಸ್ವತಿ ಬಿಡುಲ್ಲೆ ! 
ಅವಳಿಗೆ ಹೊಟ್ಟೆಕಿಚ್ಚು !
ಮತ್ತೊಬ್ಬ ಸುಂದರಿ ಹುಟ್ಟಿಬಿಟ್ಟದೆ !
ಪಾಪ...ಸರಸ್ವತಿ
ಅವಳಿಗಿನ್ನೂ ನಿನ್ನ ವಿಷಯ ಗೊತ್ಲೆ
ಅದ್ಯಾವ ಮಾಯಲಿ 
ಬ್ರಹ್ಮ ನಿನ್ನ ಸೃಷ್ಟಿ ಮಾಡ್ತೋ..?
ಆ ಪುಣ್ಯಾತ್ಮಂಗೆ 
ಅದೆಂಗೆ ಪುರುಷೊತ್ತು ಆತೋ ?
ಅದೆಷ್ಟು ಕಷ್ಟಪಟ್ಟುಟ್ಟೋ ಏನೋ !
ಕೋಟಿ ಕೋಟಿ ಸೃಷ್ಟಿ ಕಾರ್ಯದ
ಮಧ್ಯಲಿ..
ಸರಸ್ವತಿ ಕಣ್ಣು ತಪ್ಪಿಸಿ 
ನಿಂಗೆ ಪೊರ್ಲುನ ತುಂಬಿಸಿಕೆ
ಬ್ರಹ್ಮ ನಿಜಕ್ಕೂ 
ತುಂಬಾ ಬೆವರು ಸುರಿಸಿಟ್ಟು
ಅದಕ್ಕೆ ಸಮುದ್ರದ ನೀರು
ಉಪ್ಪುಪ್ಪು !

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment