Friday, 13 July 2012

ಸ್ವರ್ಗಲೂ ಜಗಳ !


ಚಾಂಪ ಮತ್ತೆ ಚಾಮವ್ವ ಸತ್ತು ಸ್ವರ್ಗ ಸೇರಿದ್ದೊ. ಸೇರಿದ್ದೋತಾ ಹೇಳಿಕ್ಕಿಂತ ಊರವೇ ಸೇರಿಸಿದ್ದೋತಾ ಹೇಳಕ್. ಯಾಕೆತೇಳಿರೆ, ಆ ಊರುಲಿ ಯಾರು ಸತ್ತರೂ, ಸ್ವರ್ಗ ಸೇರಿಸ್ವ ಕೆಲ್ಸ ಮೇಲೆಮನೆ ಚೋಮುಣಿದ್. ಅವನ ಬಾಯಿಂದ ಒಂದೊಂದು ಡೈಲಾಗ್ಗ ಉದುರ್ತಿದ್ದ್ರೆ, ಸಾವಿಗೆ ಬಂದವು ಎಂಥ ಕಟುಕ ಮನಸ್ಸಿನವರಾಗಿದ್ದರೂ ಒಂದೆರಡು ಹನಿ ಕಣ್ಣೀರು ಹಾಕ್ತಿದ್ದೋ. ಚಾಂಪ ಮತ್ತೆ ಚಾಮವ್ವನ ಸ್ವರ್ಗ ಸೇರ್ಸಿದ್ದ್ ಕೂಡ, ಇದೇ ಮೇಲೆ ಮನೆ ಚೋಮುಣಿ. ಇಲ್ಲಿ ಇನ್ನೊಂದು ವಿಶೇಷತೇಳಿರೆ, ಚಾಂಪನೂ ಚಾಮವ್ವನೂ ಒಂದೇ ದಿನ ತೀರ್ಕೊಂಡುಬಿಟ್ಟಿದ್ದೊ. 
ಚಾಂಪಂಗೆ ಧಮ್ಮು... ಬೀಡಿ ಸೇದ್ಬೇಡಿತಾ ಚಾಮವ್ವ ಎಷ್ಟು ಹೇಳಿರೂ ಕೇಳ್ತಿತ್ಲೆ. ಸಂತೆಗೆ ಹೋಗಿ ಬಾಕಾಕನ ಚಾಂಪ ಬಂಡಲುಗಟ್ಟಲೆ ಸಾಧು ಬೀಡಿ ತರ್ತಿತ್ತ್. ಒಲೆ ಮುಂದೆ ಕುದ್ದುಕಂಡ್ ಸೇದ್ತಿದ್ದ್ರೆ, ಸೌದೆಂದ ಬರ್ತಿರ್ವ ಹೊಗೆ ಯಾವುದು, ಚಾಂಪನ ಬಾಯಿಂದ ಬರ್ತಿರ್ವ ಹೊಗೆ ಯಾವುದುತಾ ಗೊತ್ತಾಗ್ತಿತ್ಲೆ. ಹಂಗೆ ಬುಸು ಬುಸುತಾ ಹೊಗೆ ಬಿಟ್ಟ್ಕಂಡ್ ಕುದ್ದಿರ್ತಿತ್. ಹಂಗೆ ಒಂದು ದಿನ ಒಲೆ ಬುಡಲಿ ಚಾಂಪ ಸಾಧುಬೀಡಿ ಸೆದಿಕಂಡ್ ಕುದ್ದಿಕರ್ಾಕನ, `ನಿಮ್ಮ ದೊಂಡೆ ಕಟ್ಟಿ ಹೋಗಾ...ಎಷ್ಟು ಸಾವು ಬೀಡಿ ಸೇದಿಯರಿ..' ತಾ ಬಯ್ಕಂಡ್ ಬಯ್ಕಂಡೇ ಚಾಮವ್ವ ಕಾಫಿ ಮಾಡಿ ಕೊಟ್ಟಿತ್ತ್. ಆ ಬಿಸಿ ಬಿಸಿ ಕಾಫಿ ಕುಡಿಯಕಾಕನ ಚಾಂಪಂಗೆ ಸೆರೆಹತ್ತಿಬಿಡ್ತ್. ಆಗ ಶುರುವಾತು ನೋಡಿ ಕೆಮ್ಮು...ಮೊದಲೇ ಧಮ್ಮು ಬೇರೆ. ಉಸಿರಾಡಿಕೆ ಅವಕಾಶ ಇಲ್ಲದಂಗೆ ಚಾಂಪ ಕೆಮ್ಮಿಕೆ ಶುರು ಮಾಡ್ತ್...ಚಾಮವ್ವ ಒಮ್ಮೆ ಮೆಲ್ಲೆ ಚಾಂಪನ ತಲೆಗೆ ತಟ್ಟಿತ್. ಊಹುಂ, ಕೆಮ್ಮು ನಿಂತತ್ಲೆ. ಎರಡನೇ ಸಲ ಸ್ವಲ್ಪ ನೀರ್ನ ತಲೆ ಮೇಲೆ ಹಾಕಿ ಜೋರಾಗಿ ತಟ್ಟಿತ್...ಕೆಮ್ಮು ಮಾತ್ರ ನಿಂತತ್ಲೆ. `ಇದೆಂಥ ದೊಡ್ಡ ರೋಗ ನಿಮಿಗೆ...ನಿಮ್ಮ ಕೆಮ್ಮು ನಿಲ್ಲುದೇ ಇಲ್ಲೆ...ನಿಮ್ಮ ಬಾಯಿಗೆ ಮಣ್ಣ್ ಹಾಕಾ...'ತಾ ಹೇಳಿಕಂಡೇ ಚಾಮವ್ವ ಚಾಂಪನ ಕರ್ಕಂಡ್ ಹೋಗಿ ಮಲಗಿಸಿತ್ತ್. ಬೆಳಗ್ಗೆ ಕೋಳಿ ಕೂಗಿಕಾಕನ ಚಾಂಪನ ಕೆಮ್ಮು ನಿಂತಿತ್ತ್. ಜೊತೆಗೆ ಉಸಿರು ಕೂಡ !
ಸಾವಿನ ಸುದ್ದಿ ಬೆಂಗಳೂರುಲಿ ಇದ್ದ ಮಂಙಂದಿರಿಗೆ ಮುಟ್ಟಿತ್. ಇಬ್ಬರು ಗಂಡು ಮಕ್ಕ ಹೆಣ್ಣ್ಗಳ ಜೊತೆ ಬಂದೊ. ಇಬ್ಬರು ಹೆಣ್ಣು ಮಕ್ಕ ಗಂಡಂದಿರ ಜೊತೆ ಬಂದೊ. ಚರಂಡೇಟಿಂದ ಬಂದ ವಾಲಗದವು ಜೋರಾಗಿ ಬಾರಿಸ್ತಿದ್ರೆ, ಗುಂಡು ಹೊಡೆಯುವವು ಗುಂಡು ಹೊಡ್ಕಂಡ್, ಕೆಲವು ಗರ್ನಲ್ ಹೊಟ್ಟಿಸಿಕಂಡ್ ಚಾಮವ್ವನ ತವರು ಮನೆಯವ್ಕೆ ಕಾಯ್ತಿದ್ದೊ. ಚಾಮವ್ವ ಮಾತ್ರ ಚಾಂಪನ ತಲೆ ಹತ್ರ ಕುದ್ದ್ಕಂಡ್ ಎಂಥದ್ದೋ ಮಣಮಣತಾ ಹೇಳ್ತಿತ್ತ್. ಎಲ್ಲರ ಮರ್ಡಾಟ, ಪಟಾಕಿ, ಗುಂಡಿನ ಶಬ್ದಲಿ ಚಾಮವ್ವ ಎಂಥ ಹೇಳ್ತುಟ್ಟತಾ ಮಾತ್ರ ಯಾರಿಗೂ ಗೊತ್ತಾತ್ಲೆ. ಇದ್ನ ನೋಡ್ದ ಒಬ್ಬ ಪಿಳ್ಳಿ ಹತ್ರ ಬಂದ್, ಚಾಮವ್ವ ಹೇಳ್ದುನೇ ಕಿವಿಕೊಟ್ಟ್ ಕೇಳ್ತಿತ್ತ್. `ನಾ ನಿನ್ನೆ ಇವ್ಕೆ ನಿಮ್ಮ ದೊಂಡೆ ಕಟ್ಟಿ ಹೋಗ, ಬಾಯಿಗೆ ಮಣ್ಣು ಹಾಕಾತಾ ಹೇಳಿದ್ದೆ...ನಾ ಹಂಗೆ ಹೇಳ್ದಕ್ಕೆ ಇಂದ್ ನನ್ನನ್ನ ಬಿಟ್ಟು ಹೋಗೋಳೊ...ಇಲ್ಲಿ ಇದ್ದ್ ನಾ ಎಂಥ ಮಾಡ್ದು, ನನ್ನನ್ನೂ ಕರ್ಕಂಡ್ ಹೋಗಿ'ತಾ ಚಾಮವ್ವ ಹೇಳ್ತಿತ್ತ್.
ಮಧ್ಯಾಹ್ನ ಆಕಾಕನ ಚಾಮವ್ವನ ತವರು ಮನೆಯವು ಬಂದೊ. ಇನ್ನೇನು ಚಾಂಪನ ಹೆಣನ ಸುಡುಕುಳಿಗೆ ತಕ್ಕಂಡ್ ಹೋಕು, ಅಷ್ಟೊತ್ತಿಗೆ ಚಾಮವ್ವಂಗೂ ಕೆಮ್ಮು ಶುರುವಾತ್. ಕೆಮ್ಮಿ, ಕೆಮ್ಮಿ ಹಂಗೆನೇ ಚಾಂಪನ ಹೆಣದ ಮೇಲೆ ಬಿದ್ದ್ಬಿಡ್ತ್. ಯಾರೆಷ್ಟೇ ಆರೈಕೆ ಮಾಡ್ರೂ ಚಾಮವ್ವ ಬದುಕಿತ್ಲೆ. ಇನ್ನೆಂಥ ಮಾಡ್ದು? ಇಬ್ಬರನ್ನೂ ಒಟ್ಟಿಗೆ ಸೇರ್ಸಿ ದಫನ ಮಡ್ದೊ. ಸುಮಾರು 50 ವರ್ಷ ಒಟ್ಟಿಗೆ ಬದುಕಿದ್ದ ಚಾಂಪ, ಚಾಮವ್ವ ಹಂಗೆ ಒಟ್ಟಿಗೆ ಸ್ವರ್ಗ ಸೇರಿಕಂಡ್ಬಿಟ್ಟಿದ್ದೊ. ಆದ್ರೆ, ಅಲ್ಲೂ ಜಗಳನೇ...

- ಸುನಿಲ್ ಪೊನ್ನೇಟಿ    
arebhase@gmail.com

No comments:

Post a Comment