Saturday 21 July 2012

ಕಾಡು ಹಂದಿಗಳ ಹಬ್ಬ !


ಅದ್ ಡಿಸೆಂಬರ್ ತಿಂಗ. ಭತ್ತ ಬೆಳೆ ಕದ್ರು ಹೋಗಿ ಭೂಮಿ ಕಡೆ ಬಗ್ಗಿ ನಿಂತಿತ್ತ್. ಕುಯ್ಲು ಕೆಲ್ಸ ಶುರುಮಾಡ್ನೊತೇಳಿರೆ, ಪಿರಿಪಿರಿ ಮಳೆ. ಬೆಳೆ ಕೊಯ್ದು ಹಾಕಿರೆ ಅಲ್ಲೇ ಹುಟ್ಟಿಬಾದೇನೋತಾ ಹೇಳುವಂಗೆ ಹಸಿಹಸಿ ಮಣ್ಣು. ಎಂಥ ಮಾಡ್ದು ? ಮಳೆ ಕಡಿಮೆ ಆದ್ಮೇಲೆ ಬೆಳೆ ಕೊಯ್ದರೆ ಆತ್ತೇಳಿ ಹೆಚ್ಚಿನವು ಕಾಫಿತೋಟ ಕೆಲ್ಸದ ಕಡೆ ಗಮನ ಕೊಟ್ಟೊ. ಮತ್ತೆ ಕೆಲವು ಜೇನುಬೇಟೆ, ಅದ್ಇದ್ತೇಳಿಕಂಡ್ ಬ್ಯುಸಿ ಆದೋ... ಜನ ಯಾಗ ಗದ್ದೆ ಕಡೆ ಬಾದುನ ನಿಲ್ಲಿಸಿದೊನಾ, ಆಗ ಬೇರೊಂದು ಸಮಸ್ಯೆ ಹುಟ್ಟಿಕಣ್ತ್. ಅದ್ ಕಾಡು ಹಂದಿಗಳ ದಾಳಿ !  
ಒಂದುಕಡೆ ತಾವೂರುಬೆಟ್ಟ.. ಆಚೆ ಇಳ್ದರೆ ದೊಡ್ಡ ಕಾಡು. ಈ ಕಡೆ ಬೆಟ್ಟಂದ ಕೆಳಗೆ ಕಾಫಿ ತೋಟ. ಈ ಕಾಡುಹಂದಿಗಳಿಗೆ ತಿಂಬಕೆ ಕಾಡ್ಲಿ ಏನೂ ಸಿಕ್ಕಿತ್ಲೆತೇಳಿರೆ ಆ ಕಾಫಿ ತೋಟಗಳ್ನ ದಾಟಿ ಸೀದಾ ಬಾದು ಗದ್ದೆಗೆನೆ. ಈ ವರ್ಷನೂ ಹಂಗೆ ಆತ್. ಹಿಂಡ್ ಹಿಂಡ್ ಕಾಡ್ಹಂದಿಗ ಗದ್ದೆಗೆ ಬಂದ್ ಉರಿ ಬರ್ತಿದ್ದೊ. ಹೂಡಿ ಹಾಕಿದಂಗೆ ಚುಕ್ಕಿ, ಇದ್ದ ಬದ್ದ ಭತ್ತನೆಲ್ಲಾ ತಿಂದ್ ತೇಗಿ ಬಂದ ದಾರಿಲೇ ಹಂಗೆನೇ ಹೊರ್ಟು ಹೋಗಿಬಿಡ್ತಿದ್ದೊ. ಒಂದು ವಾರ ಕಳ್ದ ಮೇಲೆನೇ ಊರವ್ಕೆ ಗೊತ್ತಾದ್. ಅಷ್ಟೊತ್ತಿಗೆ ಅರ್ಧ ಬೆಳೆ ಕಾಡುಹಂದಿಗಳ ಹೊಟ್ಟೆ ಸೇರಿತ್ತ್. ಇನ್ನ್ ಉಳ್ದಿರ್ವ ಬೆಳೆನಾದ್ರೂ ಕಾಪಾಡಿಕೊಳಕಲ್ಲಾ, ಅದ್ಕೆ ಉಪಾಯ ಹುಡಿಕೆಕೆ ಊರವೆಲ್ಲಾ ಧವಸಭಂಡಾರದ ಆಫೀಸ್ಲಿ ಸಭೆ ಸೇರ್ದೊ.
ಸಾಯಂಕಾಲದ ಹೊತ್ತು. ಸೂರ್ಯ ಇನ್ನೇನು ಮುಳುಗಿದೆತೇಳುವ ಟೈಂ. ಡಿಸೆಂಬರ್ ಚಳಿ ಬೇರೆ. ಮೀಟಿಂಗ್ಗೆ ಬಂದವು ಹೆಚ್ಚಿನವು ನೈಂಟಿ, ಸಿಕ್ಸ್ಟಿ ಏರ್ಸಿಕಂಡೇ ಬಂದಿದ್ದೊ. ಮತ್ತೆ ಕೆಲವು ಮೀಟಿಂಗ್ ಮುಗ್ದ ಮೇಲೆ ಹಾಕ್ಕಣಿಕೆ ಆದೆತೇಳಿ ಜೋಬುಲಿ ಕ್ವಾಟರ್ ಬಾಟಲ್ಗಳ್ನ ಇಟ್ಕಂಡಿದ್ದೊ. ಮೇಲೆ ಮನೆ ಚಾಂಪ ಅಂತೂ ಹೆಗಲಲಿ ತೂಗುಹಾಕ್ಕಂಡಿದ್ದ ಬ್ಯಾಗ್ಲಿ ಮಂಙ ಕೊಟ್ಟಿದ್ದ ಅರ್ಧ ಬಾಟಲಿ ಮಿಲಿಟರಿ ರಮ್ ಇಟ್ಕಂಡಿತ್. ಜೊತೆಗೆ ಉಪ್ಪು, ಮೆಣಸು, ಹುಳಿ ಹಾಕಿ ಹುರ್ದಿದ್ದ ಹಂದಿ ಸೆಳ್ಳಿಬೇರೆ ! ಒಬ್ಬೊಬ್ಬರೇ ಬಂದ್ ಸೇರ್ತಿದ್ದಂಗೆ ಮೀಟಿಂಗ್ ಶುರುವಾತ್. ಕಾಡುಹಂದಿ ಕಾಟನ ಹೆಂಗೆ ತಡೆಯುದುತಾ ಹೇಳುದರ ಬಗ್ಗೆ ಎಲ್ಲವೂ ಒಂದೊಂದು ಸಲಹೆ ಕೊಟ್ಟೊ. ಮಡಿಕೇರಿಲಿ ಲಾಯರ್ ಆಗಿರ್ವ ಚೋಮುಣಿ ಅಂತೂ ಕೋವಿ ಜೊತೆನೇ ಬಂದಿತ್. `ಇಂದ್ ರಾತ್ರಿಂದನೇ ನಾವೆಲ್ಲಾ ಪಾರ ಕೂರುನೋ'ತಾ ಅಂವ ಸಲಹೆ ಕೊಟ್ಟತ್. ಆದ್ರೆ ಇದಕ್ಕೆ ಎಲ್ಲವೂ ಒಪ್ಪಿತ್ಲೆ. ಒಬ್ಬಂಗೆ ರಾತ್ರಿ ಮನೇಲಿ ಹೆಣ್ಣ್ ಒಬ್ಬಳೇ ಆಗಿಬಿಟ್ಟದೆತಾ ಹೆದ್ರಿಕೆ. ಮತ್ತೊಬ್ಬಳ ಮಗಳಿಗೆ ಹುಷಾರಿಲ್ಲೆ. ಇನ್ನೊಬ್ಬಂಗೆ ಅವನ ಕ್ರಾಸ್ಗೆ ಬಂದ ಹಸ್ ಕೊಟ್ಟಿಗೆಂದ ಹಗ್ಗ ತುಂಡ್ ಮಾಡಿಕಂಡ್ ಹೋಗಿಬಿಟ್ಟರೆ...ತಾ ಭಯ. ಅಷ್ಟೊತ್ತಿಗೆ, ಅಪ್ಪ ಟೈಟ್ ಆಗದಂಗೆ ನೋಡಿಕಣಿಕೆ ಅಮ್ಮ ಕಳ್ಸಿದ್ದ ಗಣಿ ಮೆಲ್ಲೆ ಬಾಯಿಬಿಟ್ಟತ್,  `ಹುತ್ತರಿದ್ ಪಟಾಕಿ ಉಳ್ದುಟ್ಟಲ್ಲಾ...ಅದ್ನ ರಾತ್ರಿ ಹೊಡ್ಸುನೊ... ಹಂದಿಗ ಓಡಿಹೋದವೆ..' ಇವನ ಮಾತುನ ಯಾರೂ ಕಿವಿಗೆ ಹಾಕಿಕಣ್ತ್ಲೆ. ಮತ್ತೆ ಚರ್ಚೆ ಮುಂದುವರ್ಸಿದೊ....ಮಾತುನ ಭರಲಿ ಕತ್ತಲಾದೇ ಗೊತ್ತಾತ್ಲೆ. ಜೋಬುಲಿ ಇಟ್ಟಂಡಿದ್ದವು, ಬ್ಯಾಗ್ಲಿ ತಂದಿದ್ದವು, ಹನಿ ಹನಿನೇ ರುಚಿ ನೋಡ್ತಿದ್ದೊ...ನೆಣ್ಚಿಕಣಿಕೆ ಚಾಂಪ ತಂದಿದ್ದ ಹುರ್ದ ಸೆಳ್ಳಿ, ಪಳಂಗು ತಂದಿದ್ದ ಅಮ್ಟೆಕಾಯಿ ಉಪ್ಪಿನಕಾಯಿ, ದಾಮು ಅಂಗಡಿ ಚಕ್ಕುಲಿ ಎಲ್ಲಾ ಇತ್ತ್. ಆದ್ರೆ ಕಾಡುಹಂದಿ ಓಡಿಸಿಕೆ ಪರಿಹಾರ ಮಾತ್ರ ಸಿಕ್ಕಿತ್ಲೆ. ಹಿಂಗೆ ಊರವೆಲ್ಲಾ ಇಲ್ಲಿ ಕುದ್ದಕಂಡ್ ಮೀಟಿಂಗ್ ಮಾಡ್ತಿದ್ದರೆ, ಧವಸ ಭಂಡಾರ ಹಿಂದೆನೇ ಒಂದ್ ಹಿಂಡ್ ಕಾಡುಹಂದಿಗ ಸಮಾ ಬೆಳೆ ತಿನ್ತಿದ್ದೊ....

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment