Wednesday, 30 November 2011

ಬಸ್ ಗೂ ಉಟ್ಟು ವ್ಯಕ್ತಿತ್ವ !


ಹಿಂದೆ ಒಂದ್ ಕಾಲ ಇತ್... ಹಂಗೆತೇಳಿರೆ ತುಂಬಾ ಹಿಂದೆತೇನೂ ಅಲ್ಲ... ಒಂದ್ ಹತ್ತ್ ಅಥ್ವಾ ಹದಿನೈದ್ ವರ್ಷ ಮೊದ್ಲು ಅಷ್ಟೆ... ಭಾಗಮಂಡಲಂದ ಮಡಿಕೇರಿಗೆ ಹೋಕುತೇಳಿರೆ ಇದ್ದದ್ದ್ ಮೂರೋ ನಾಲ್ಕೋ, ಗವರ್ನಮೆಂಟ್ ಬಸ್ಗ. ಆಗ ಏನಿದ್ದ್ರೂ ಪ್ರೈವೆಟ್ ಬಸ್ಗಳದ್ದೇ ದಬರ್ಾರ್. ಅದ್ರಲ್ಲೂ ನಮ್ಗೆಲ್ಲಾ ಗೊತ್ತಿದ್ದದ್ ವಿಜಯಲಕ್ಷ್ಮೀ ಮತ್ತೆ ರಾಮಾ ಬಸ್ ಮಾತ್ರ. ವಿಜಯಲಕ್ಷ್ಮೀ ಬಸ್ತೇಳಿರೆ ಸಿಲ್ವರ್ ಬಣ್ಣ ಅದ್ರ ಮೇಲೆ ಕೆಂಪು ಪಟ್ಟಿ... ಮಧ್ಯಲಿ `ವಿಎಮ್ಎಸ್' ಲೋಗೋ ಕಣ್ಮುಂದೆ ಬರ್ತಿತ್. ಇನ್ನ್ ರಾಮಾ ಬಸ್ ಅಂದ್ರೂ ಅಷ್ಟೆ, ಬಸ್ ಪೂತರ್ಿ ಸಿಲ್ವರ್ ಬಣ್ಣ..ಅದ್ರ ಮೇಲೆ ನೀಲಿ ಪಟ್ಟಿ ಮಧ್ಯಲಿ `ಎಸ್ಆರ್ಎಂಎಸ್' ಲೋಗೋ. ಆಗ ಸುಮಾರ್ ಹತ್ತತ್ತ್ ಬಸ್ಗ ಇದ್ದೋ ಕಂಡದೆ. ಈ ಬಣ್ಣಗಳಿಂದನೇ ಇದ್ ಇಂಥ ಬಸ್ತಾ ಕಂಡ್ ಹಿಡಿಯಕ್ಕಾಗಿತ್ತ್ ! ಆದ್ರೆ ಈಗ ವಿಜಯಲಕ್ಷ್ಮೀ ಮತ್ತೆ ರಾಮಾ ಬಸ್ ಬೇರೆ ಬೇರೆ ಕಲರ್ ಬಳ್ಕಂಡ್ ಓಡಾಡ್ತುಟ್ಟು. ಮೊದ್ಲ್ ಇದ್ದ `ಯೂನಿಫಾರಂ' ಕಲರ್ ಕಾಣ್ತಿಲ್ಲೆ.
ಆಯುಧ ಪೂಜೆ ದಿನ ಅಷ್ಟೂ ವಿಜಯಲಕ್ಷ್ಮೀ ಬಸ್ಗಳಿಗೆ ಭಾಗಮಂಡಲಲೇ ಪೂಜೆ ಆಗ್ತಿತ್ತ್.. ಬಸ್ ಓನರ್ ಹೊಸೂರು ಜೋಯಪ್ಪ ತಾತನೇ ಎಲ್ಲವ್ಕೆ ಪ್ರಸಾದ ಹಂಚ್ತಿದ್ದೊ. ಇದಾದ್ಮೇಲೆ ಚೆಟ್ಟಿಮಾನಿವರೆಗೆ ಮಕ್ಕಳಿಗೆಲ್ಲಾ ಒಂದ್ ಜಾಲಿ ಟ್ರಿಪ್. ಮೊದ್ಲೆಲ್ಲಾ ಜೋಯಪ್ಪ ತಾತನೇ ಬಸ್ ಡ್ರೈವ್ ಮಾಡ್ಕಂಡ್ ಹೋಗ್ತಿದ್ದೊ... ಮಕ್ಕಳಿಗೋ ಸಕ್ಕತ್ ಖುಷಿ. `ಲೇ ಲೇ ಲೈಸಾ ಐಸಾ' ತ ಬಸ್ ಒಳಗೆ ಬೊಬ್ಬೆನೋ ಬೊಬ್ಬೆ... ಚೆಟ್ಟಿಮಾನಿಂದ ವಾಪಸ್ ಬಾಕಾಕನ ಕಿರುಚಿ ಕಿರುಚಿ ಸ್ವರನೆ ಇರ್ತಿತ್ಲೆ... 
ಇನ್ ವಿಜಯಲಕ್ಷ್ಮೀ ಹೊಸ ಬಸ್ ಬಾತ್ತೇಳಿರೆ, ನಮ್ಮ ಮನೆಗೇ ಹೊಸ ಬಸ್ ಬಂದಷ್ಟ್ ಖುಷಿ. ಹೊಸ ಬಸ್ಗೆ ಜೋಯಪ್ಪ ತಾತ ತಲಕಾವೇರೀಲಿ ಪೂಜೆ ಮಾಡಿಸ್ತಿದ್ದೊ. ಭಾಗಮಂಡಲದಲ್ಲಿ ಇರ್ವ ಎಲ್ಲವ್ಕೂ ಪೂಜೆಗೆ ಬರೋಕೂತೇಳಿ ಅವು ಕರೀತ್ತಿದ್ದೊ. ಆಗ ಅಪ್ಪ ಅಮ್ಮ ಕಳಿಸ್ತಿದ್ದದ್ ನಮ್ಮಂಥ ಮಕ್ಕಳ್ನೇ... ನಾವೋ ಕುಣ್ಕಂಡ್ ಕುಣ್ಕಂಡ್ ಬಸ್ ಹತ್ತಿ ತಲಕಾವೇರಿಗೆ ಹೋಗ್ತಿದ್ದೊ. ಅಲ್ಲಿ ಪೂಜೆ ಎಲ್ಲಾ ಮುಗ್ದಮೇಲೆ ಕೈಲಾಶ ಆಶ್ರಮಲಿ ಎಲ್ಲವ್ಕೆ ಊಟ ಇರ್ತಿತ್... ನಾವು ಊಟಕ್ಕಿಂತ ಇಷ್ಟ ಪಡ್ತಿದ್ದದ್ದ್, ಆಶ್ರಮ ಹತ್ರ ಇದ್ದ ಸೀಬೆಕಾಯಿ..
ಈ ವಿಜಯಲಕ್ಷ್ಮೀ ಬಸ್ಗಳ ಕಲರ್ ಎಲ್ಲಾ ಒಂದೇ ಥರ ಇರ್ತಿತ್ತಲ್ಲಾ... ಆದ್ಕೆ ಗುರ್ತ್ ಹಿಡಿಯಕ್ಕೆ ಬೇರೆ ಬೇರೆ ಹೆಸ್ರು ಇಟ್ಕೊಂಡಿದ್ದೊ. ಮನೆಗಳಲೆಲ್ಲಾ ಬಿಳಿ ದನಕ್ಕೆ ಬಿಳಿಯ, ಕರಿ ದನಕ್ಕೆ ಕರಿಯತೇಳಿ ಇಟ್ಟವೆಯಲ್ಲಾ ಹಂಗೆ. ಮತ್ತೆ, ನಮ್ಗೆ ಇಷ್ಟ ಆದವ್ರ ಹೆಸ್ರನ್ನ ಶಾಟರ್್ ಆಗಿ ಕರ್ದವಲ್ಲಾ ಆ ಥರ! ವಿಜಯಲಕ್ಷ್ಮೀ ಬರೀ `ವಿಜಯ', ಕೂಲಿಂಗ್ ಗ್ಲಾಸ್ ಇದ್ದ ಬಸ್ `ಕೂಲಿಂಗ್ ಗ್ಲಾಸ್ ವಿಜಯ', ಕರಿಕೆಗೆ ಹೋಗೋ ಬಸ್ `ಕರಿಕೆ ವಿಜಯ', ಬಸ್ನ ನಂಬರ್ `ಸಿಎನ್ಜಿ'ಯಿಂದ ಶುರುವಾದ್ರೆ, `ಸಿಎನ್ಜಿ ವಿಜಯ' ಹಿಂಗೆ ವಿಜಯಲಕ್ಷ್ಮೀ ಬಸ್ಗೆ `ಉಪ ಹೆಸು'್ರಗ ಹುಟ್ಟಿಕೊಂಡು ಬಿಡ್ತಿದ್ದೊ!
ಭಾಗಮಂಡಲ ದೇವಸ್ಥಾನ ಹತ್ರನೇ ವಿಜಯಲಕ್ಷ್ಮೀ ಬಸ್ ಆಫೀಸ್ ಇರ್ದು. ಇಲ್ಲೊಂದ್ ತುಂಬಾ ಹಳೇ ಬಸ್ ಇತ್. ಹಳೇದಂದ್ರೆ ತುಂಬಾ ಹಳೇದ್. ಅದ್ ಈಗಿನ ಮಿನಿ ಬಸ್ಗಳ ಸೈಜ್ಲಿ ಇತ್ತ್. ಜೋಯಪ್ಪ ತಾತಂಗೆ ಆ ಬಸ್ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ಬಸ್ಗೆ ವಯಸ್ಸಾತ್ತೇಲಿ ರಿಟೈರ್ಮೆಂಟ್ ಕೊಟ್ಟ್ಬಿಟ್ಟಿದ್ದೊ. ಆದ್ರೂ ಅದ್ನ ದಿನಾ ತೊಳ್ದ್ ಫಳ ಫಳ ಹೊಳೆಯುವಂಗೆ ಇಟ್ಕೊಂಡಿದ್ದೊ. ಯಾವಾಗಾದ್ರೂ ತಾತಂಗೆ ಮನಸ್ಸಾಕನ ಆ ಬಸ್ನ ಹೊರಗೆ ತೆಗ್ದ್ ಒಂದ್ ರೌಂಡ್ ಓಡ್ಸುದು ಕೂಡ ಇತ್... ತಿಂಗಳುಗಟ್ಟಲೆ ನಿಲ್ಲಿಸಿಯೇ ಇರ್ತಿತ್ತಲ್ಲಾ, ಆಗ ಆ ಬಸ್ ಒಮ್ಮೆಗೆ ಸ್ಟಾಟರ್್ ಆಗ್ತಿತ್ಲೆ. ಅಕ್ಕ ಪಕ್ಕದ ಮನೇವು ಹೋಗಿ ಆ ಬಸ್ನ ದೂಡಿ ಸ್ಟಾಟರ್್ ಮಾಡ್ತಿದ್ದೊ. ಅದೆಂತಾತೋ, ಒಂದಿನ ಆ ಹಳೇ ಬಸ್ನ ಜೋಯಪ್ಪ ತಾತಾ ಮಂಗಳೂರಿನ ಗುಜರಿಯವ್ಕೆ ಮಾರಿಬಿಟ್ಟೊ.
ಒಂದ್ ಹತ್ತಡಿ ತಳ್ಳಿದ ಕೂಡ್ಲೇ ಸ್ಟಾಟರ್್ ಆಗಿಬಿಡ್ತಿದ್ದ ಆ ಬಸ್, ಏನು ಮಾಡಿರೂ ಗುಜರಿಯವ್ಕೆ ಸ್ಟಾಟರ್್ ಮಾಡಿಕೆ ಆತ್ಲೆ. ಹಂಗೆನೇ ಮಂಗಳೂರಿಗೆ ತಕ್ಕೊಂಡು ಹೋಕೆ ಯೋಚ್ನೆ ಮಾಡಿದ್ದ ಗುಜರಿಯವು, ಕೊನೆಗೆ ಬಸ್ನ ಭಾಗಗಳ್ನೆಲ್ಲಾ ಬಿಚ್ಚಿ ತಕ್ಕೊಂಡ್ ಹೋಕೆ ನಿಧರ್ಾರ ಮಾಡ್ದೊ. ಇದ್ಕೆ ಮೊದ್ಲು ಜೋಯಪ್ಪ ತಾತ ಒಪ್ಪಿತ್ಲೆ. `ನನ್ನ ಎದುರು ಬಸ್ ಒಡೆಯೋದು ಬೇಡ' ತ ಹಠ ಹಿಡ್ದೊ. ಕೊನೆಗೆ ತಾತನ ಒಪ್ಸಿದ ಗುಜರಿಯವು, `ಚೌಂಡಿಕಳ' ವರೆಗೆ ಬಸ್ನ ತಳ್ಳಿಕೊಂಡು ಹೋಗಿ ಅಲ್ಲಿ ತಮ್ಮ ಕೆಲ್ಸ ಶುರು ಮಾಡ್ದೊ. ಮೊದ್ಲ ದಿನ ಬಸ್ `ಬಾಡಿ' ಬಿಚ್ಚಿದೊ. ಎರಡನೇ ದಿನ ಸೀಟ್, ಮೂರನೇ ದಿನ ಎಂಜಿನ್ ಹಿಂಗೆ ದಿನಕ್ಕೊಂದು ಭಾಗಗಳ್ನ ಬಿಚ್ಚಿ, ಎರಡು ಲಾರಿಗೆ ತುಂಬಿಸಿಬಿಟ್ಟೊ. ನಾಲ್ಕನೇ ದಿನ ಬಸ್ನ ಅವಶೇಷ ಇಲ್ಲದಂಗೆ ಮಾಡಿಯಾಗಿತ್ತ್. ಆಗ `ಚೌಂಡಿಕಳ'ಕ್ಕೆ ಬಂದ ಜೋಯಪ್ಪ ತಾತನ ಕಣ್ಣ್ಲಿ ನೀರಿನ ಪಸೆ ! ಅದ್ ಒಬ್ಬ ಸಂಗಾತಿನ ಕಳ್ಕಂಡ ನೋವು...
ಹೋದ ತಿಂಗ ಭಾಗಮಂಡಲಲಿ ವಿಜಯಲಕ್ಷ್ಮೀ ಬಸ್ ನೋಡಿಕಾಕನ ಹಿಂಗೆ ಹಳೇದೆಲ್ಲಾ ಯೋಚ್ನೆ ಆತ್... ಇನ್ ಹೊಸೂರು ಜೋಯಪ್ಪ ತಾತನ ಬಗ್ಗೆ ಹೇಳ್ದಾದ್ರೆ ಅದೊಂದ್ ದೊಡ್ಡ ಕಥೆ. ಒಂದ್ ಲಾರಿ ಕ್ಲೀನರ್ ಆಗಿದ್ದವು 10 ಬಸ್ಗಳ ಓನರ್ ಆಗಿ ಬೆಳ್ದದ್ ನಿಜಕ್ಕೂ ಮಾದರಿ. ಅದ್ನ ಇನ್ನೊಮ್ಮೆ ಹೇಳ್ನೆ....

- ಪೊನ್ನೇಟಿ ಬಿ. ಸುನಿಲ್

ನೀವೂ ಬರೆಯನಿ...
arebhase@gmail.com

Tuesday, 29 November 2011

ಬಿದಿರು


ಬಿದಿರುಗೂ ಮನುಷ್ಯಂಗೂ ಉಟ್ಟು
ನಂಟು
ತಾತ-ಮುತ್ತಾತನ ಕಾಲದಿಂದ ಬಂದ
ಗಂಟು
ಈಗ ಬಿದಿರಿಗೆ ಬರ್ತುಟ್ಟು
ಕಟ್ಟೆ
ಮನುಷ್ಯನ ಚಟ್ಟಕ್ಕೆ ಬರ್ತುಟ್ಟು
ಬರ
ಎಲ್ಲಾ `ಬಿದಿರಮ್ಮ' ಮಹಿಮೆ

- ತಳೂರು ಡಿಂಪಿತಾ 


ನೀವೂ ಬರೆಯನಿ...  arebhase@gmail.com

ಗಂಡ ಮತ್ತು ಹೆಂಡತಿ


ಮದುವೆಯಾದ ಮೇಲೆ ಬೆಳೆಯುವ
ಪ್ರೀತಿ ಹೆಚ್ಚು ಗಟ್ಟಿ ಗಟ್ಟಿ......
ಮದುವೆಯಾಕೆ ಮುಂಚೆ ಬೆಳೆಯುವ
ಪ್ರೀತಿ ಬರೀ ಜೊಳ್ಳು ಜೊಳ್ಳು......
ಗಂಡ ಹೆಂಡಿರ ವಯಸ್ಸು 35ಕ್ಕೆ
ಇರುವ ಬಂಧ ಕಾಮ......!
ಮತ್ತೆ ಐವತ್ತು ವರ್ಷಕ್ಕೆ ಬೆಳೆದದೆ
ನಿಜ ಪ್ರೀತಿ.......!
ನಂತರ ಹೇಗೋ ಉಟ್ಟೆ ಉಟ್ಟು ಸಾವು
ಜೀವನವೆಲ್ಲ ಬರೀ ಬರೀ ರೀ ರೀ.....!
ಮುಪ್ಪಿನ ಆನಿವಾರ್ಯ
ಅವಲಂಬನೆ ಅವಲಂಬನೆ !

ಕಣಿವೆ ಎಸ್. ಮಹೇಶ್,
ಕುಶಾಲನಗರ

ನೀವೂ ಬರೆಯನಿ...
arebhase@gmail.com

`ಸದಾ' ಪಾರದರ್ಶಕ


`ಸದಾ' ಪಾರದರ್ಶಕ
ನಮ್ಮ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಒಂದೊಳ್ಳೆ ಕೆಲ್ಸ ಮಾಡ್ತೊಳೊ. ಇನ್ಮುಂದೆ ವಿಧಾನ ಸೌಧಲಿರೋ ಮುಖ್ಯಮಂತ್ರಿ ಆಫೀಸ್ ಮತ್ತೆ ಅವ್ರ ಗೃಹಕಚೇರಿ ಕೃಷ್ಣಾದಲ್ಲಿ ಏನೇನು ನಡ್ದದೆತೇಳ್ದುನಾ ನೇರಪ್ರಸಾರಲಿ ನೋಡಕ್. ಅಂದ್ರೆ ಅವ್ರ ಮೀಟಿಂಗ್ಗ, ಮುಖ್ಯಮಂತ್ರಿ ಅವ್ರನ್ನ ಯಾರ್ಯಾರು ಮೀಟ್ ಮಾಡಿವೆ ಇಂಥದ್ದನ್ನೆಲ್ಲಾ ಯಾರ್ ಬೇಕಾರೂ ವೆಬ್ ಸೈಟ್ಲಿ ನೋಡಕ್. ಇಂದ್ಂದ ಈ ವ್ಯವಸ್ಥೆ ಜಾರಿಗೆ ಆಗುಟ್ಟು. ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಬಿಟ್ರೆ ಇಂಥ ವ್ಯವಸ್ಥೆ ಮಾಡಿರವು ನಮ್ಮ ದೇಶಲಿ ದೇವರಗುಂಡ ಸದಾನಂದ ಗೌಡ ಮಾತ್ರ. `ನಾನ್ ಎಂಥ ಮಾಡಿರೂ ಅದು ಎಲ್ಲವ್ಕೂ ಗೊತ್ತಾಕು. ಕನರ್ಾಟಕದ ಎಲ್ಲಾ ಜನ ನನ್ನ ಆಫಿಸ್ನಲ್ಲಿ ಏನೇನು ಆಗ್ತುಟ್ಟುತ ನೋಡೋಕು. ಎಲ್ಲಾ ಟೈಂಲಿ ಅದ್ ಜನಕ್ಕೆ ಸಿಗೋಕು. ಅದಕ್ಕೆ ಈ ವ್ಯವಸ್ಥೆ' ಇದ್ ಸದಾನಂದ ಗೌಡರ ಮಾತ್...
ಇಲ್ಲಿ ಕ್ಲಿಕ್ ಮಾಡಿದ್ರೆ, ಮುಖ್ಯಮಂತ್ರಿ ಆಫೀಸ್ಲಿ ಏನೇನ್ ನಡೀತುಟ್ಟೂತ ನೋಡಕ್... 
- - `ಅರೆಭಾಷೆ'


ನೀವೂ ಬರೆಯನಿ.. 
arebhase@gmail.com

Monday, 28 November 2011

ಫೇಸ್ ಬುಕ್ ಲವ್ !


ಪ್ರೊಫೈಲ್ಲಿ ಇತ್ತ್ ರಮ್ಯಾ ಫೋಟೋ
ಹಂಗೆ ಸುಮ್ಮನೆ ಕಳ್ಸಿದೆ ಒಂದ್ ರಿಕ್ವೆಸ್ಟ್
ಅವ್ಳೂ ಒಪ್ಪಿಯೇ ಬಿಡೋಕಾ...
ಮೊದ್ಲ ದಿನ...
  ಬರೀ ಹಾಯ್ !
ಆ ಕಡೆಂದನೂ ಬಾತ್ ಹಾಯ್ !
ನಂಗೋ ಫುಲ್ ಖುಷಿಯೋ ಖುಷಿ
ಎರಡನೇ ದಿನ...
ಸಿಸ್ಟಮ್ ಮುಂದೆ ಕುದ್ದದೇ ಬಾತ್
ಅವ್ಳು ಮಾತ್ರ ಆನ್ಲೈನ್ಲಿ ನಾಪತ್ತೆ !
ಸಿಕ್ಕಿದ್ ಸೈಬರ್ ಶಾಫ್ನ ದೊಡ್ಡ ಬಿಲ್ !
ಮೂರನೇ ದಿನ..
ಇಂದ್ ಅದೇನೋ ಆಸೆ.. ಅವ್ಳು ಸಿಕ್ಕುದೇನೋ
ಆನ್ಲೈನ್ಲಿತ್ತ್ ರಮ್ಯಾ ಫೋಟೋದ ಗೂಡೆ
ಅವ್ಳಿಂದ್ಲೆ ಅಂದ್ ಮೊದ್ಲ ಮೆಸೆಜ್.. `ಸ್ಸಾರಿ...'
ನಾಲ್ಕನೇ ದಿನ...
ನಿನ್ನ ಹೆಸ್ರೆಂತ? ನನ್ನ ಪ್ರಶ್ನೆ
`ರಮ್ಯಾ'.. ಟಪ್ ಅಂತ ಬಾತ್ ಆಕಡೆಂದ
ನಾನ್ `ಚೋಮುಣಿ' ಇಲ್ಲಿಂದ ಹೋತ್ ಉತ್ರ !
ಐದನೇ ದಿನ...
ಅವ್ಳಿಂದ್ಲೇ ಪ್ರೊಪೋಸ್ `ಐ ಲವ್ ಯೂ'
ನಾನೂ ಕಳ್ಸಿದೆ `ಐ ಲವ್ ಯೂ ಟೂ'
ನಿದ್ದೆಲ್ಲೆಲ್ಲಾ ರಮ್ಯಾ ಜೊತೆ ಡ್ಯೂಯೆಟ್ !
ಆರನೆ ದಿನ...
`ನಾವು ಮೀಟ್ ಆಕೊಲ್ಲಾ...' ನನ್ನ ಮೆಸೆಜ್
`ಖಂಡಿತ... ನಾಳೆ ಬನ್ನಿ, ಕಾಫಿಡೇಗೆ' ಅವ್ಳ ಉತ್ರ
ನಂಗಂತೂ ಸ್ವರ್ಗನೇ ಸಿಕ್ಕಿದ ಅನುಭವ
ಏಳನೇ ದಿನ...
ಕೋರಮಂಗಲದ ಕಾಫೀಡೇಲಿ ನಾನಿದ್ದೆ...
ಅವ್ಳೂ ಬಂದಿತ್ತ್.... ನಾ ಹೊಂಡಕ್ಕೆ ಬಿದ್ದಾಗಿತ್ತ್ !
  ಚೂಡಿದಾರ ಹಾಕಿದ್ದ `ಸಾಧುಕೋಕಿಲ' ಅಲ್ಲಿ ಕುದ್ದಿತ್ತ್ !

`ಸುಮಾ'

ನೀವೂ ಬರೆಯನಿ..
arebhase@gmail.com

ಮಡಿಕೇರಿ ಮತ್ತೆ ವಿರಾಜಪೇಟೇಲಿ ಯಮಹ ಬೈಕ್ ಕಾರ್ನರ್

ಯಮಹ ಬೈಕ್ ಕಂಪೆನಿ ಕೊಡಗ್ನ ಮಡಿಕೇರಿ ಮತ್ತೆ ವಿರಾಜಪೇಟೇಲಿ ಯಮಹ ಬೈಕ್ ಕಾರ್ನರ್ ( YBC) ಓಪನ್ ಮಾಡಿಕೆ ಯೋಚನೆ ಮಾಡ್ಯಟ್ಟು. ಅಟೋಮೊಬೈಲ್ ಕ್ಷೇತ್ರಲಿ ಆಸಕ್ತಿ ಇರೋವು ಪ್ರೊಫೈಲ್ ಇಮೇಲ್ ಮಾಡಕ್.

Email :- ao-blr@yamaha-motor-india.com

ಪ್ರವೀಣ್ ನಡುಮನೆ

Sunday, 27 November 2011

ಮುಖ್ಯಮಂತ್ರಿಗೆ `ನಮ್ಮವರ' ಸನ್ಮಾನ


ಬೆಂಗಳೂರ್ಲಿ ಅದೊಂದು ವಿಶೇಷ ಕಾರ್ಯಕ್ರಮ. `ಮನೆ'ಯವನೇ ಅಲ್ಲಿ ನೆಂಟ. ಹೌದು...ದಕ್ಷಿಣಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ
ಭಾನುವಾರ ಬೆಂಗಳೂರ್ಲಿ ಬಲಿಂದ್ರ ಹಬ್ಬ ಕಾರ್ಯಕ್ರಮ ಏಪರ್ಾಡ್ ಮಾಡಿತ್ತ್. ಬಲಿಂದ್ರ ಹಬ್ಬತೇಳಿರೆ ದೀಪಾವಳಿ ಥರದ ಹಬ್ಬ. ನಮ್ಮವರೇ ಆದ ರಾಜ್ಯದ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಈ ಕಾರ್ಯಕ್ರಮಕ್ಕೆ ಮುಖ್ಯ ನೆಂಟರಾಗಿ ಬಂದಿದ್ದೋ. ಸದಾನಂದ ಗೌಡ ಅವ್ಕೆ ಇಲ್ಲಿ ಸನ್ಮಾನ ಕಾರ್ಯಕ್ರಮನೂ ಇತ್ತ್. ಇದಾದ್ಮೇಲೆ ಮಾತಾಡ್ದ ಸದಾನಂದ ಗೌಡ, `ರಾಜಕೀಯ ಆತಂಕತೇಳ್ದು ನನ್ನ ಶಬ್ಧಕೋಶಲೇ ಇಲ್ಲೆ' ಅಂತ ಹೇಳ್ದೋ... ಇನ್ನ್ ಎಸ್ಎಸ್ಎಲ್ಸಿ ಮತ್ತೆ ಪಿಯುಸಿಲಿ ಜಾಸ್ತಿ ಮಾಕ್ಸರ್್ ತೆಗೆದವ್ಕೆನೂ ಇಲ್ಲಿ ಪುರಸ್ಕಾರ ಕೊಟ್ಟೊ. ನಮ್ಮ ಜನಾಂಗದ ಪ್ರಮುಖರಾದ ಕೆಎಂ ಮನಮೋಹನ್, ಬಿ. ನಳೀನಾಕ್ಷಿ ಗೌಡ, ಪಿ. ಮುದ್ದಪ್ಪ ಗೌಡ, ಕೆ ಆರ್ ಚಾಮಯ್ಯ, ಪ್ರೊ. ಕೆ ಎಂ ಶಿವರಾಂ ಸೇರ್ದಂಗೆ ತುಂಬಾ ಜನ ಬಲಿಂದ್ರ ಹಬ್ಬಕ್ಕೆ ಬಂದಿದ್ದೊ...

- `ಅರೆಭಾಷೆ' 

ನಿಮ್ಮಲ್ಲಿ ಗೌಡುಗಳಿಗೆ ಸಂಬಂಧಪಟ್ಟಂಗೆ ಏನಾದ್ರೂ ಕಾರ್ಯಕ್ರಮ ನಡ್ದರೆ ಬರ್ದ್ ಇಮೇಲ್ ಮಾಡಿ. ಜೊತೇಲಿ ಒಂದೆರಡು ಫೋಟೋ ಇದ್ದರೆ ಒಳ್ಳೇದ್....
arebhase@gmail.com

ಮಕ್ಕಂದೂರ್ಲಿ ಬಹುಭಾಷಾ ಸಾಹಿತ್ಯ-ಸಾಂಸ್ಕೃತಿಕ ಸಂಗಮ













ಕೊಡಗ್ ಹಲವು ಸಂಸ್ಕೃತಿಗಳ ನಾಡ್. ಈ ಹಿನ್ನೆಲೇಲಿ ನವೆಂಬರ್ 25ಕ್ಕೆ ಮಕ್ಕಂದೂರ್ಲಿ ಬಹುಭಾಷಾ ಸಾಹಿತ್ಯ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ನಡ್ತ್. ಕನರ್ಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಮಕ್ಕಂದೂರು ಗ್ರಾಮ ಪಂಚಾಯತ್, ಗೌಡ ಸಮಾಜ, ಕೊಡವ ಸಮಾಜ, ಮತ್ತೆ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದ ವತಿಯಿಂದ ಈ ಕಾರ್ಯಕ್ರಮ ಏಪರ್ಾಡು ಮಾಡಿದ್ದೊ. ಸಾಹಿತಿ ನಾಗೇಶ್ ಕಾಲೂರು ಸೇರ್ದಂಗೆ ತುಂಬಾ ಜನ ಕಾರ್ಯಕ್ರಮಕ್ಕೆ ಬಂದಿದ್ದೊ. ಸಾಂಸ್ಕೃತಿಕ ಕಾರ್ಯಕ್ರಮಗ ಲಾಯ್ಕ ಇತ್ತ್ 


- 10 ಕುಟುಂಬ 18 ಗೋತ್ರ ಅರೆ ಭಾಷಾ ಸಾಕ್ಷ್ಯಚಿತ್ರ ಟೀ0

Friday, 25 November 2011

ನನ್ನೂರು !


ಭಾರತಾಂಬೆಯ ಹೆಮ್ಮೆ
ಕನ್ನಡಮ್ಮನ ಕೊನೆ ಕೂಸು
ಇದ್ ನಮ್ಮ ಕೊಡಗ್...
ಕಾವೇರಿಯ ತವರುಮನೆ
ಕಿತ್ತಳೆಯ ಕಂಪಿನ ನಾಡ್
ಏಲಕ್ಕಿಯ ಘಮ ಘಮ...
ಇದ್ ನಮ್ಮ ಊರು..
ಅದೆಂಥ ರುಚಿಯ ಜೇನ್ !
ಭಾರಕ್ಕೆ ಬಾಗಿನಿಂತ ಭತ್ತದ ತೆನೆ
ಮಲ್ಲಿಗೆ ಚೆಲ್ಲಿದಂಗೆ ಕಾಫಿ ಹೂ..
ಆ ಕಡೆ ಬ್ರಹ್ಮಗಿರಿ...ಎದ್ರುಲಿ ಪುಷ್ಪಗಿರಿ
ನಾಲ್ಕ್ನಾಡ್ ಪಕ್ಕಲೇ ತಡಿಯಂಡಮೋಳ್
ದೊಡ್ಡ ಕಲ್ಲ್ ಹೊತ್ತು ನಿಂತುಟ್ಟು ಕೋಟೆ ಬೆಟ್ಟ
ಮಂಜಿನೊಳಗೆ ಮಾಯವಾದ ಮಡಿಕೇರಿ
ಸೋಮವಾರ ಸಂತೆಗೊಂದು ಪೇಟೆ
ವೀರರಾಜೇಂದ್ರಂಗೂ ಒಂದೂರು !
ಅಲ್ಲುಟ್ಟು ನನ್ನ ಮನೆ..
ನನ್ನ ಭಾಗಮಂಡಲ...
ಆಹಾ ! ಎಂಥ ಊರದ್...
ಅದೇ ನಂಗೆ ಸ್ವರ್ಗ...
ಅದ್ ನನ್ನ ಭಾಗಮಂಡಲ !

- `ಸುಮಾ'

ನೀವೂ ಬರೆಯನಿ...
arebhase@gmail.com

ನಿಮ್ಮ ಮನೆ ಹೆಸ್ರು ಬಗ್ಗೆ ನಿಮ್ಗೆಷ್ಟ್ ಗೊತ್ತು ?

ಗೌಡುಗಳ ಒಂದು ವಿಶೇಷತೇಳಿರೆ ನಮ್ಮ ಮನೆ ಹೆಸ್ರುಗ. ಈ ಮನೆ ಹೆಸ್ರುಗ ನಮ್ಮನ್ನ ಪರಿಚಯ ಮಾಡಿಕೊಳ್ಳಿಕೆ ಅನುಕೂಲ ಆದೆ. ನಿಮ್ಮ ಮನೆ ಹೆಸ್ರು ಬಗ್ಗೆ ನಿಮ್ಗೆ ಎಷ್ಟ್ ಗೊತ್ತುಟ್ಟು ? ಒಂದೊಂದು ಮನೆ ಹೆಸ್ರು ಹಿಂದೆನೂ ಒಂದೊಂದೊಂದು ಕುತೂಹಲದ ವಿಷಯ ಇದ್ದದೆ. ಅದ್ ನಿಮ್ಗೆ ಗೊತ್ತಿದ್ದ್ರೆ, `ಅರೆಭಾಷೆ' ಬ್ಲಾಗ್ಗೆ ಬರೆಯನಿ.. ನಮ್ಮ ಮನೆತನ ನಮ್ಮ ಹೆಮ್ಮೆ. ಅದ್ನ ಎಲ್ಲರ ಜೊತೆ ಹೇಳಿಕೊಳ್ದು ಒಂದು ಖುಷಿ ವಿಷಯ ತಾನೇ....  

ನಾಳೆ ಹುತ್ತರಿ ....



ನಾಳೆ ಹುತ್ತರಿ  ಹಬ್ಬ.. ರಾತ್ರಿ 8.05ಕ್ಕೆ ನೆರೆ ಕಟ್ಟುದು, 9.05ಕ್ಕೆ ಕದಿರು ತೆಗೆಯುದು ಮತ್ತೆ 10.05ಕ್ಕೆ ಊಟ ಮಾಡಕ್ ತ  ಅಮ್ಮಂಗೇರಿಯ ಜ್ಯೋತಿಷಿಗ ತಿಳಿಸಿಯೊಳೊ...


ಎಲ್ಲವ್ಕೂ ಹುತ್ತರಿ ಹಬ್ಬದ ಶುಭಾಶಯಗ..

Wednesday, 23 November 2011

ಗೋಸುಂಬೆ...


ಚುನಾವಣೆ ಬಾತ್ತೇಳಿರೆ
ಮನೆಮನೆಗೆ ರಾಜಕಾರಣಿಗಳ ಜಾತ್ರೆ
ಎಲ್ಲಾ ಕಡೆ ಬಿರುಸಿನ ಪ್ರಚಾರ
ಅಣ್ಣ-ಅಕ್ಕ ನಿಮ್ಮ ಮತ ನಂಗೆ
ಕಾಲೂ ಹಿಡ್ದವೆ...ಕಾಲೂ ಎಳ್ದವೆ
ಕಾಣದ ದೇವರ ದರ್ಶನಕ್ಕೆ
ಜೇಬು ತುಂಬ ಹಣ, ಹೊಟ್ಟೆ ತಂಬಾ ಹೆಂಡ
ಬಣ್ಣ- ಬಣ್ಣದ ಮಾತ್ಗ..
ಕೇಳಿರೆ ಇನ್ನೇನ್ ಸ್ವರ್ಗನೇ ಕೈಗೆ ಸಿಕ್ಕಿಬಿಟ್ಟಿದೆ !
ಅಂತೂ ಜನರ ಮನಸ್ಸ್ಗೆದ್ದವೆ
ತಕೊಂಡವೇ ಮತ!
ಗೆದ್ದ ನಂತರ...
ಮುಂದಿನ ಚುನಾವಣೇಲೇ ಅವ್ರ ಮುಖ ದರ್ಶನ!

ತಳೂರು ಡಿಂಪಿತಾ, ಕುಶಾಲನಗರ

ನೀವೂ ಬರೆಯನಿ...
arebhase@gmail.com



ನೆನಪಾದೆ ಆ ದಿನಗ...


ಎಂದ್ನಂಗೆ ಇಂದ್ ಕೂಡ ನಾನ್ ಸರಿಯಾಗೇ 9-00 ಗಂಟೆಗೆ ಆಫೀಸ್ಗೆ ಹೊರಟೆ. ದಾರೀಲಿ ಯಾರೊಬ್ಬರೂ ಇಲ್ಲೆ ನಾನೊಬ್ಬನೆ ತೇಳಿ, ಹಂಗೆ ನಡ್ಕಂಡ್ ಹೊಗ್ತಾ ಇದ್ದೆ. ಸೂರ್ಯನ ಎಳೆ ಬಿಸಿಲ್ ನನ್ನ ಮೇಲೆ ಬಿದ್ದರೂ ಚೂರು ಚಳೀಲಿ ನಡಕ ಹತ್ತ್ತಾ ಇತ್ತ್. ಹಂಗೆ ಸ್ವಲ್ಪ ದೂರ ಹೋಕನ ಮುಂದೆನಾ ತಿರ್ಗಾಸ್ಲಿ ಐದಾರ್ ಮಕ್ಕ ಕಾಂಬೊತ್ತಿದ್ದೊ. ಹೆಂಗಾರಾಗ್ಲಿ ಎರಡ್ ಮೈಲ್ವರೆಗೆ ಇವು ಒಳೊ ಬೇಜಾರ್ ಕಳೆಯಕ್ಕ್ತಾ, ಅಲ್ಲಿಂದಾ ಹೆಂಗಾರ್ ಹೇಂಟಿಕಂಡ್ ಹೊಗಿಬುಡಕ್ತಾ ಯೊಚ್ನೆ ಮಾಡಿ ಅವರ್ನ ಹಿಡಿಯಕ್ಕೆ ಎರಡ್ ಹೆಜ್ಜೆ ಹೆಚ್ಚ್ ಹಾಕಿ ಹೊಗ್ತಾ ಇದ್ದೆ. ದೂರಂದ ಅವರ ಎರಡ್ ಕೈ ಮತ್ತೆ ಬೆನ್ನಲೀ ಏನೋ ನೇತಾಡ್ಸಿಕಂಡ್ ಹೋದರ ಕಂಡ್ ಹತ್ತಿರ ಹೋಗಿ ಏನ್ರಾ ಅದ್ ಬಿಸಿಯೂಟಕ್ಕೆ ಸೊಪ್ಪು ತರಕಾರಿನಾ ತ ಕೇಳ್ದೆ. ಹಳ್ಳೀಲಿ ಹಂಗೆ ತಮ್ಮ ತಮ್ಮ ಮನೇಲಿ ಬೆಳ್ದದರ ಹತ್ರ ಪತ್ರ ಕೊಟ್ಕಂಡವೆ. ಹಿತ್ಲಲ್ಲಿ ಬೆಳ್ದದರ ಮಕ್ಕ ಶಾಲೆಗೆ ತಂದೊಳೊತಾ ತಿಳ್ಕಂಡ್ ಕೇಳ್ರೆ ಅವು, `ಇದ್ ತರಕಾರಿ ಅಲ್ಲ' ತೇಳಿ ಜೋರಾಗಿ ನಗಾಡ್ದೊ. ಮಕ್ಕ ಹಂಗೇನೆ ಸಣ್ಣ ಪುಟ್ಟದಕ್ಕೆ ಗೊಳ್ಳ್ತೇಳಿ ನಗಾಡಿಬುಟ್ಟವೆ ಅದನ್ನ ನೋಡಿಕೆ ಖುಷಿ. `ಇದ್ ನಮಿಗೆ ಛದ್ಮವೇಷ ಹಾಕಿಕೆ, ನಾವು ಟೀಚರ್ಗಳೆಲ್ಲಾ ಇಂದ್ ಮಡಿಕೇರಿಗೆ ಹೋದವೆ, ಇದನ್ನ ನಾವು ಮೈಪೂರ ಕಟ್ಟಿಕಂಡ್ ಕಾಡ್ ಮನ್ಷನಂಗೆ ಡ್ಯಾನ್ಸ ಮಾಡಿವೆ.' ತಾ ಹೇಳ್ದೊ. ನಾನ್ ಪುನ ಅವರ್ನ `ಮತ್ತೆ ಏನೆಲ್ಲಾ ಮಾಡ್ಸಿವೆ' ತಾ ಕೇಳ್ದೆ `ಮತ್ತೆ ಏನ್ ಇಲ್ಲೆ ಹಾಡ್ ಹಾಡ್ವೆ ಅಷ್ಟೆ' ತಾ ಹೇಳಿ ನಗಾಡಿಕಂಡ್ ಅವರ ಶಾಲೆಗೆ ಹೋದೊ. ನಾನ್ ನನ್ನ ದಾರಿ ಹಿಡ್ದೆ. ಹಿಂಗೆ ಆಫೀಸ್ಗೆ ಬಾಕನ ನನ್ನ ಬಾಲ್ಯದ ಆ ದಿನಗ ಯೋಚ್ನೆ ಆತ್ ನಾವೂ ಕೂಡ ಹಿಂಗೆ ನಾಲ್ಕ್ ಐದ್ ಜನ ಸೇರಿ ಶಾಲೆಗೆ ಹೋದು, ಮಾತಾಡಿಕಂಡ್ ನಗಾಡಿಕಂಡ್ ಆಟಾಡಿಕಂಡ್... ನಾನ್ ಹಿಂಗೆ ಒಂದು ಸಲ ಛದ್ಮ್ಮವೇಷ ಹಾಕಿದ್ದೆ. ಆದರೆ ಸೊಪ್ಪು ಕೊನೆಗಳ್ನ ಕಟ್ಟಿತ್ಲೆ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ವಿವೇಕಾನಂದ ಇವರ ವೇಷಗಳ್ನ ಹಾಕಿದ್ದೆ. ಗಾಂಧೀಜಿದ್ ಕನ್ನಡಕಕ್ಕೆ ನನ್ನ ಅವ್ವಂದ್ ಕನ್ನಡಕ, ಅವ್ವಂದ್ ಬಿಳಿ ಶಾಲ್, ಬೋಳು ತಲೆಗೆ ಚಪಾತಿ ತಟ್ಟಿ ಕೊಟ್ಟದ್ದ್ ಅಮ್ಮ. ಮತ್ತೆ ಒಂದು ದೊಣ್ಣೆ ಊರಿಕೆ.. ಅದ್ ಕೆಳಗೆ ಮನೆ ತಾತಂದ್. ಆಗನೇ ಒಂಥರಾ ಲಾಯಕ್ಕಿತ್. ಈಗನ ಮಕ್ಕಳಿಗೆ ಅಂಥ ಯಾವ ಆದರ್ಶ ವ್ಯಕ್ತಿಗಳ ವೇಷಾನ ಹಾಕದೆ ಕಾಡ್ ಮನ್ಷರಂಗೆ ಸೊಪ್ಪು ತೊಗಟೆನ ಕಟ್ಟಿಕಂಡ್ ಕೊಣಿಯೊದು ಲಾಯಕ್ಕಿಲ್ಲೆ. ಯಾಕೆತೇಳ್ರೆ ಸಮಾಜ, ದೇಶ ಮುಂದುವರ್ದಂಗೆ ನಮ್ಮ ವ್ಯಕ್ತಿತ್ವನೂ ಬದಲಾಗ್ತಾ ಹೋಕು. ನಾಗರಿಕರಾಗ್ತಾ ಹೋದರೂನು ಅನಾಗರಿಕರಂಗೆ ವರ್ತನೆ ಮಾಡ್ದು ಸರಿಯಿಲ್ಲೆ. ಮಕ್ಕಳ್ದ್ ತಪ್ಪಿಲ್ಲೆ ಬುಡಿ ಶಾಲೆಲಿ ಹೇಳಿಕೊಡೋಕು. ಇಲ್ಲೆತೇಳಿರೆ ಅಪ್ಪ ಅಮ್ಮ ಹೇಳೋಕು. ಮಕ್ಕ ಮಾಡ್ದೆ ಸರಿತೆಳೊ ಅಪ್ಪ ಅಮ್ಮಂದರ್ ಮಕ್ಕಳ್ನ ತಾವಾಗೇ ಅಜ್ಞಾನದ ಕೂಪಕ್ಕೆ ತಳ್ಳಿವೆ. ಮಕ್ಕ ಕೂಡ ಹಂಗೆ ಕಲ್ತವೆ. ತೊಂದರೆ ಇಲೆ...ಮಕ್ಕಳಿಗೆ ಯಾವುದು ತಪ್ಪು ಯಾವುದು ಸರಿ ತಾ ನಿಧರ್ಾರ ಮಾಡಿಕೆ ಆದ ಮೇಲೆ ಸರಿಯಾದವೆತಾ ನಾನ್ ಯೋಚ್ನೆ ಮಾಡ್ದೆ. ಅಷ್ಟೊತ್ತಿಗೆ ನನ್ನ ಆಫೀಸ್ ಬಾತ್ ತೇಳಿ ನನ್ನ ಯೋಚ್ನೆನಾ ನಿಲ್ಸಿ ಒಳಗೆ ಹೋದೆ.....


- ದರ್ಶನ್ ಕಾಸ್ಪಾಡಿ, ಮಡಿಕೇರಿ

ನೀವೂ ಬರೆಯನಿ...
arebhase@gmail.com

Tuesday, 22 November 2011

ಹೊಸೂರ್ ರೋಡ್ನ ಚೆಲುವೆ


ಆ ಕಡೆ ಬಿಗ್ಬಜಾರ್
ಈಕಡೆ ಪೋರಂ
ಎದ್ರ್ಲಿ ಎಟ್ಹೋಂ !
ಹೊಸೂರ್ ರೋಡ್ಲಿ ಹೋಗ್ತಿತ್ತ್
ನನ್ನ ಗೂಡೆ...
ಕೊಡುಗ್ನ ಗೂಡೆ
ಗೌಡುತಿ ಗೂಡೆ
ಅವ್ಳೇ.... ನನ್ನ ಗೂಡೆ !
ಟೈಟ್ ಜೀನ್ಸ್, ಮೇಲೊಂದ್ ಟೀ ಷಟರ್್
ಬೇಕಿತ್ತಾ ನಿಂಗೆ ಈ ಡ್ರೆಸ್ ?
ಶಾಟರ್್ ಟಾಪ್ ಪಿಂಕ್ ಪ್ಯಾಂಟ್
ಓ ಗೋಡೆ ಚೂಡಿನೇ ನಿಂಗೆ ಲಾಯ್ಕುಟ್ಟು !
ಅಲ್ಲಿ ಸಿಕ್ಕಿದೆ ಹೈದ್ರಾಬಾದ್ ಬಿರಿಯಾನಿ
ಆಹಾ ಏನ್ ರುಚಿ...
ನಿನ್ನ ಮುಂದೆ ಅದೂ ಲೆಕ್ಕಕ್ಕಿಲ್ಲೆ !
ಕಾಫಿಡೇಯ ಕ್ರೀಮ್ ಕಾಫಿ
ಹೂಂ...ನೀನಿದ್ದರೆ ಅದ್ಯಾಕೆ?
ಆ ಹೊಗೆ, ಆ ಟ್ರಾಫಿಕ್...
ಒಂದೂ ಬೇಡ.. ಬಾನೆ ಗೂಡೆ
ಕೊಡಗಿಗೆ ಪೋಯಿ...
ಬೆಲ್ಲದ ಕಾಫಿ
ಹಳ್ಸಿನ ಬೀಜದ ಚಟ್ನಿ
ಜೊತೆಲಿ ನೀ ಇದ್ದರೆ ಸಾಕ್...

- `ಸುಮಾ'

ನೀವೂ ಬರೆಯನಿ.. 
arebhase@gmail.com

Monday, 21 November 2011

ಕೊಡುಗ್ಲಿ `ಬಿರುಗಾಳಿ'!


ಕೊಡಗ್ಲಿ `ಬಿರುಗಾಳಿ' ಬೀಸಿಕೆ ಸಿದ್ಧತೆ ನಡ್ದುಟ್ಟು. ಹೌದ್.. ಇದ್ ಅಂತಿಂಥ ಬಿರುಗಾಳಿ ಅಲ್ಲ. ದೇಶ ವಿದೇಶಲಿ ಹೆಸ್ರು ಮಾಡಿರೋ ಸ್ಟಾಮರ್್ ಫೆಸ್ಟಿವಲ್ ! ಬರುವ ವರ್ಷ ಅಂದ್ರೆ 2012 ಜನವರಿ 20ರ ಬೆಳಗ್ಗೆ 11ರಿಂದ 21ರ ಬೆಳಗ್ಗೆ 11ಗಂಟೆ ವರೆಗೆ ಒಟ್ಟು 48 ಗಂಟೆ ಈ `ಬಿರುಗಾಳಿ' ಇದ್ದದೆ. ಸ್ಟಾಮರ್್ ಫೆಸ್ಟಿವಲ್  ಅಂದ್ರೆ ಬ್ಯಾಂಡ್ ಮತ್ತೆ ಡಿಜೆ ಅಬ್ಬರ ಇರ್ವ ಸಂಗೀತ ಉತ್ಸವ. ಕೊಡುಗ್ಲಿ ಇದೇ ಮೊದ್ಲ ಸಲ ಈ ಸಂಗೀತ ಉತ್ಸವ ನಡೀಟ್ಟುಟ್ಟು. ಬೇತು ಗ್ರಾಮ ಹತ್ರ ಕಾವೇರಿ ಹೊಳೆ ಸೈಡ್ಲಿ ಇದ್ಕೆಂತೇಳಿ 22 ಎಕರೆ ಜಾಗ ಗುತರ್ು ಮಾಡ್ಯೊಳೊ. 18 ವರ್ಷ ದಾಟಿದವ್ಕೆ ಮಾತ್ರ ಇಲ್ಲಿ ಪ್ರವೇಶ. ಒಮ್ಮೆ ಒಳಗೆ ಸೇರಿಕೊಂಡವು ಕಾರ್ಯಕ್ರಮ ಮುಗಿಯದೆ ಹೊರಗೆ ಬರ್ವಂಗಿಲ್ಲೆ. ಹೊರಗೆ ಬಂದ್ರೆ ಒಳಗೆ ಮತ್ತೆ ಪ್ರವೇಶ ಕೊಡ್ದುಲ್ಲೆ. ಟಿಕೆಟ್ ರೇಟ್ ಒಬ್ಬರಿಗೆ ಎರಡೂವರೆ ಸಾವಿರ ರೂಪಾಯಿ ! ದೇಶ ವಿದೇಶದ ಡಿಜೆಗ ಇದ್ರಲ್ಲಿ ಪಾಲ್ಗೊಂಡವೆ.
ಆದ್ರೆ ಪ್ರಶ್ನೆ ಅದಲ್ಲ. ಕೊಡಗುನಂಥ ನಿಶ್ಯಬ್ಧ ಪ್ರದೇಶದಲ್ಲಿ ಇಂಥ ಅಬ್ಬರದ ಕಾರ್ಯಕ್ರಮ ಬೇಕಾ? ನಮ್ಮ ಶ್ರೀಮಂತ ಸಂಸ್ಕೃತಿನ ಬೇರೆಯವು ಅನುಸರಿಸಿಕೆ ನೋಡ್ತಿರ್ಕಾಕನ, ಬೇರೆ ದೇಶದ ಸಂಸ್ಕೃತಿಯ ಅಬ್ಬರ ಎಷ್ಟು ಸರಿ? `ಬಿರುಗಾಳಿ' ಬೀಸಿಕೆ ಇನ್ನು ಸುಮಾರು 2 ತಿಂಗ ಉಟ್ಟು... ಅದ್ ನಮ್ಗೆ ಯೋಚನೆ ಮಾಡಿಕೆ ಇರೋ ಟೈಂ...

ನೀವೂ ಬರೆಯನಿ...  
arebhase@gmail.com

ಅರೆಭಾಷೆ ವಾರ್ತೆ


 ಮಡಿಕೇರಿ ಆಕಾಶವಾಣೀಲಿ ಪ್ರಸಾರ ಆದ ಅರೆಭಾಷೆ ವಾರ್ತೆ

ಹೈದನ ನೆನಪು...


ನಾ ನೋಡಿದ ಮೊದಲ ದಿನ
ನನ್ನ ಹೈದನ ನೆನಪಲಿ
ಕನಸುಗಳ ಗೋಪುರ ಕಟ್ಟಿದೆ
ಭವಿಷ್ಯ ಯೋಚಿಸಿ ಖುಷಿಯಾದೆ
ಅದ್ ನನಸು ಆಕೆ ಮುಂಚೆ
ಬಿದ್ದ್ ಹೋತು ಗೋಪುರ
ನಂಗೆ ಎಲ್ಲಾ ಗೊತ್ತಾತ್..
ಇದ್ ಎಂಥ ಮೋಸ !

- ತಳೂರು ಡಿಂಪಿತಾ
ನೀವೂ ಬರೆಯನಿ..
arebhase@gmail.com

ಮತ್ತೆ ಬರ್ಲಿ ಆ ದಿನಗ...

 ಹಿಂದೆ...ಹಿಂದೆ ತುಂಬಾ ಹಿಂದೆ
ಅದ್ ನನ್ನ ಬಾಲ್ಯ...
ಎಂಥ ಪೋರ್ಲ್  ಆ ದಿನಗ
ಬರೀ ಸಂತೋಷ-ನಲಿವು
ದುಃಖಗಳೇ ಇಲ್ಲದ ಭಾವನೆಗಳ ಸಾಗರ
ಸುಖ ನಿದ್ದೆಯ ಸಿಹಿ ಕನಸುಗಳ
ಕಂತೆ ಕಂತೆ ಅನುಭವ
ಇನ್ನೊಮ್ಮೆ ಸಿಕ್ಕಿಕ್ಕಿಲ್ಲೇ
ಆ.... ನನ್ನ ಬಾಲ್ಯ
ಈಗ ನೆನಪುಗ ಮಾತ್ರ
ನನ್ನ
ಜೀವನೋತ್ಸಾಹ !

- ತಳೂರು ಡಿಂಪಿತಾ

ನೀವೂ ಬರೆಯನಿ..
arebhase@gmail.com

Sunday, 20 November 2011

`ನಿನ್ನ ಹುಲಿ ಹೊರ...'


ರಾತ್ರಿ ಒಂದು ಗಂಟೆ ಆಗಿರೊಕೇನೋ... ದಾಸ ನಾಯಿ ಒಂದೇ ಸಮನೆ ಮರಡ್ತಿತ್. `ಥೂ ದಾಸ ಸುಮ್ನೆ ಮಲ್ಕನೇ...ನಿನ್ನ ಹುಲಿ ಹೊರ' ತ ಚಾಂಪ ಮಲಗಿದಲ್ಲಿಂದನೇ ಜೋರು ಮಾಡ್ದೊ... ಸ್ವಲ್ಪ ಹೊತ್ತು ದಾಸ ಸುಮ್ನೆ ಇತ್ತಷ್ಟೆ. ಮತ್ತೆ ಮರಡಿಕೆ ಶುರುಮಾಡ್ತ್. ಈಗ ಚಾಮವ್ವನ ಸರದಿ `ದಾಸಾ... ಸುಮ್ನೆ ಮಲ್ಗಿಯಾ ಇಲ್ಲ ದೊಣ್ಣೆ ತರೊಕಾ ?' ಪುನ: ಮೌನ...
`ಏ ದಾಸಂಗೆ ಏನೋ ಆಗಿಟ್ಟುನೇ...ಇಲ್ಲರೆ ಸುಮ್ನೆ ಮರ್ಡಿಕ್ಕಿಲ್ಲೆ' ಚಾಂಪ, ಚಾಮವ್ವನ ಕಿವಿ ಹತ್ರ ಮೆಲ್ಲನೆ ಹೇಳ್ದೊ...
`ಅದ್ಕೆ ಎಂಥ ರೋಗ..ಈಗ ಚೆಟ್ಟಿ ತುಂಬಾ ಅನ್ನ ತಿಂದುಟ್ಟು' ಕಿವಿ ಕೇಳದ ಚಾಂಪಂಗೆ ಚಾಮವ್ವ ಸ್ವಲ್ಪ ಜೋರಾಗೇ ಹೇಳ್ತ್.
ಅಷ್ಟೊತ್ತಿಗೆ ದಾಸ ಮತ್ತೆ ಜೋರಾಗಿ ಮರ್ಟತ್... ಈಗ ಚಾಂಪ ಮತ್ತೆ ಚಾಮವ್ವ ಇಬ್ಬರೂ ಸೇರ್ಕಂಡ್ ದಾಸಂಗೆ ಬಾಯಿಗೆ ಬಂದಂಗೆ ಬಯ್ದೊ... ಅಷ್ಟೆ ಮತ್ತೆ ದಾಸನ ಮರಡಾಟ ಆಗ್ಲಿ ಬೊಗ್ಳುದಾಗ್ಲಿ ಒಂದೂ ಕೇಳ್ತ್ಲೆ. ಚಾಂಪ, ಚಾಮವ್ವ ಇಬ್ರೂ ಲಾಯ್ಕ ನಿದ್ದೆ ಮಾಡ್ದೊ...ಇಬ್ಬರ ಗೊರಕೆ ಸದ್ದ್ ಮಾತ್ರ ಜೋರಾಗಿ ಕೇಳ್ತಿತ್ತ್.
ಬೆಳಿಗ್ಗೆ 7 ಗಂಟೆ. ಚಾಮವ್ವ ಹಾಸಿದ್ದ ಇನ್ನೂ ಒಂದು ಕಂಬಳಿ ಹೊದ್ಕಂಡ್ ಚಾಂಪ ಮಲಗಿಯೇ ಇದ್ದೊ... ಅಷ್ಟುಹೊತ್ತಿಗೆ ಕೊಟ್ಟಿಗೆಗೆ ಹಾಲು ಕರಿಯಕ್ಕೆ ಹೋಗಿದ್ದ ಚಾಮವ್ವ ಕಿರ್ಚುದು ಕೇಳ್ತ್..
`ಏ...ಇಲ್ಲಿ ಬನ್ನಿ...'
ಕೊಟ್ಟಿಗೆಗೆ ಹೋಗಿ ನೋಡಿರೆ ಅಲ್ಲಿ ಒಂದ್ ಯುದ್ಧ ಆದ ಎಲ್ಲಾ ಲಕ್ಷಣಗ ಕಾಣ್ತಿತ್ತ್. ಹಸ್ನ ಮೈ ಮೇಲೆ ದೊಡ್ಡ ಪರ್ಚಿದ ಗಾಯ... ಕರು ಹತ್ರನೇ ಬಿದ್ದಿದ್ದ ಅದ್ರ ತುಂಡಾದ ಬಾಲ... ಎಲ್ಲಿ ನೋಡಿರೂ ರಕ್ತ ! ದಾಸನ ಕಟ್ಟಿ ಹಾಕಿದಲ್ಲಿ ಸರಪಳಿ ಬಿಟ್ರೆ ಬೇರೆಂತ ಕಾಣ್ತಿಲ್ಲೆ.... ದಾಸಾ ರಾತ್ರಿ ಯಾಕೆ ಹಂಗೆ ಮರಡ್ತಿತ್ತ್ತಾ ಚಾಂಪ, ಚಾಮವ್ವಂಗೆ ಈಗ ಗೊತ್ತಾತ್. `ಯಾವ ಬಾಯ್ಲಿ ನಾ ದಾಸನ ಹುಲಿ ಹೊರ್ಲಿತಾ ಹೇಳಿಬಿಟ್ಟೆ.. ಹಂಗೆನೇ ಆಗಿಬಿಡ್ತಲ್ಲಾ'ತ ಚಾಂಪಂಗೆ ತುಂಬಾ ನೋವಾತ್... ಹಸು ಮತ್ತೆ ಕರುನ ಹುಲಿಂದ ರಕ್ಷಣೆ ಮಾಡಿಕೆ ಹೋಗಿ ದಾಸನೇ ಬಲಿಯಾಗಿಬಿಟ್ಟಿತ್ತ್.
ದಾಸನ ಕಟ್ಟಿಹಾಕ್ತಿದ್ದ ಜಾಗಲಿ ಈಗ ಒಂದು ದೊಡ್ಡ ತೆಂಗಿನ ಮರ ಉಟ್ಟು..... ಅದ್ರ ಎರಡೂ ಕಡೆ ಒಂದೊಂದು ಗೋರಿ.. ಒಂದ್ರಲ್ಲಿ ಚಾಂಪ, ಮತ್ತೊಂದ್ರಲ್ಲಿ ಚಾಮವ್ವ.. ಆಗಾಗ ಅಲ್ಲಿ ದಾಸ ಮರ್ಡುದು ಸನಾ ಕೇಳ್ತಿದ್ದದೆ !

-`ಸುಮಾ'

ನೀವೂ ಬರೆಯನಿ
 arebhase@gmail.com

ನಿನ್ನ ನೆನಪಾದೆ ಗೂಡೆ...


ಮಾಗಿ ಮಾಸದ ಚಳಿ ಶುರುವಾಗಿಟ್ಟು
ನನ್ನ ಗೂಡೆ ನೆನಪಾದೆ...
ಚಂದಮಾಮನ ಪ್ರೀತಿಯ ಕೂಸು ಎಲ್ಲಿ ಒಳನೆ ?
ಬೆಳದಿಂಗ ಚೆಲ್ಲಿದಂಗೆ ನನ್ನವಳ ಬಣ್ಣ
ಕಾವೇರಿಯಂಗೆ ಹರಿದುಟ್ಟು ಅವಳ ಕೂದಲು
ಸಮುದ್ರದಾಳದ ಮುತ್ತಿನ ಮಿಂಚಿನಂಗೆ ದಂತ ಸಾಲು
ಎಲ್ಲಿ ಮಾಯವಾಗಿಯೊಳನೇ ನನ್ನ ಚೆಲುವೆ ?
ಚೆಟ್ಟಳ್ಳಿ ಫಾರಂ ತೋಟದ ಕಿತ್ತಳೆ
ಅಪ್ಪಂಗಳ ಲ್ಯಾಬ್ನ ಏಲಕ್ಕಿ
ತಲಕಾವೇರಿ ಮಾದಪ್ಪನ ಜೇನ್
ಇದೆಲ್ಲರ ಸಂಗಮ ನನ್ನ ಗೂಡೆ !
ಕೆನ್ನೆ ಕರಮಂಜಿ ಹಣ್ಣ್
ಕೊರಳ್ ಬೆಟ್ಟದ ಮೇಲಿನ ಗೊಟ್ಟೆ
ಕಣ್ಣ್ ತಾವೂರು ತೋಟದ ನೇರಳೆ
ಕೂಡಿಗೆ ಡೈರಿಯ ಬೆಣ್ಣೆಯಷ್ಟೇ ಮೆದು ನನ್ನ ಗೂಡೆ!
ಹಾರಂಗೀಲಿ ನೀರು ಖಾಲಿ ಆದು
ನನ್ನವಳ ಪೊರ್ಲು ಹಂಗೆನೇ ಇದ್ದದೆ !
ತಡಿಯಂಡಮೋಳು ತಲೆಕೆಳಗಾದು
ನನ್ನ ಗೂಡೆ ನನ್ನ ಮರೆಯಲ್ಲೆ !
ಎಲ್ಲಿ ಒಳನೇ ಬಾ ಬೇಗ....
ಕೋಟ ಗಾಳಿ ಬಾಕಾಕನ
ನಿನ್ನ ಗ್ಯಾನ ಆದೆ !

- `ಸುಮಾ'

ನೀವೂ ಬರೆಯನಿ..

arebhase@gmail.com

Saturday, 19 November 2011

ಪತ್ರಕರ್ತನ ತಮಾಷೆ ಪ್ರಸಂಗ


ಆಗಷ್ಟೇ ದೇವೇಗೌಡ ಪ್ರಧಾನಿ ಪೋಸ್ಟ್ಂದ ಕೆಳಗೆ ಇಳ್ದಿದ್ದೊ. ಡೆಲ್ಲಿಂದ ವಾಪಸ್ ಬಂದ್ ಒಂದೆರಡು ತಿಂಗ ಆಗಿರೋಕೇನೋ... ಮಟ ಮಟ ಮಧ್ಯಾಹ್ನ ಮಡಿಕೇರಿಗೆ ಬಂದ್ಬಿಟ್ಟಿದ್ದೋ. ಮಾಜಿ ಪ್ರಧಾನಿ ಅಂದ್ರೆ ಕೇಳೋಕ, ಜೊತೇಲಿ ಎಕೆ 47 ಹಿಡ್ಕಂಡ ಬ್ಲ್ಯಾಕ್ ಕ್ಯಾಟ್ ಕಮಾಂಡೋಗ ಇದ್ದೊ. ಸುದರ್ಶನ ಗೆಸ್ಟ್ಹೌಸ್ಲಿ ಪ್ರೆಸ್ಮೀಟ್ಗೆ ಎಲ್ಲಾ ವ್ಯವಸ್ಥೆ ಆಗಿತ್ತ್. ಮಾಜಿ ಪ್ರಧಾನಿಗ ಏನು ಹೇಳುವಪ್ಪಾ ತ ಪತ್ರಕರ್ತರಿಗೆಲ್ಲಾ ಕುತೂಹಲ. ಆದ್ರೆ ಒಬ್ಬ ಪತ್ರಕರ್ತಂಗೆ ಮಾತ್ರ ಹೊಟ್ಟೆ ಹಸಿದ್ ತಾಳ ಹಾಕ್ತಿತ್ತ್. ಅದ್ಕೆ ಸರಿಯಾಗಿ ಗೆಸ್ಟ್ ಹೌಸ್ಲಿ ರೆಡಿ ಮಾಡ್ದ ಊಟ ಘಮ ಘಮತಾ ಹೇಳ್ತಿತ್ತ್... ಈ ಪತ್ರಕರ್ತ ಊಟಕ್ಕೆ ಫೇಮಸ್. ಅಂವ ಏನು ಬೇಕಾರ್ ತಡ್ಕಂಬೊದು. ಹೊಟ್ಟೆ ಹಸಿವಾದ್ರೆ ಮಾತ್ರ ಮನುಷ್ಯನೇ ಆಗಿರ್ದುಲ್ಲೆ... ಇದು ಬೇರೆ ಪತ್ರಕರ್ತರಿಗೂ ಗೊತ್ತಿರೋ ವಿಷ್ಯನೇ... ದೇವೇಗೌಡರ ಪ್ರೆಸ್ಮೀಟ್ ಶುರುವಾಗಿತ್ತ್. ದೇವೇಗೌಡ ಮಾತಾಡ್ದು ಗೊತ್ತಲ್ಲಾ... ಒಂದೊಂದು ಲೈನ್ ಹೇಳೋಕಾದ್ರೂ ಗಂಟೆಗಟ್ಲೆ ಟೈಂ ಬೇಕು ಅವ್ಕೆ. ನಮ್ಮ ಈ ಹೊಟ್ಟೆಬಾಕ ಪತ್ರಕರ್ತಂಗೆ ಮಾತ್ರ ತಡ್ಕಂಬಕೆ ಆಗ್ತಿಲ್ಲೆ... ಎದ್ದ್ ಆಚೀಚೆ ಓಡಾಡಿಕೆ ಸ್ಟಾಟರ್್ ಮಾಡ್ತ್... 10 ನಿಮಿಷ ಆಚೆಈಚೆ ಓಡಾಡ್ತ ಇದ್ದ ಆ ಮನುಷ್ಯ ಸ್ವಲ್ಪ ಹೊತ್ತು ಕಳ್ದು ನೋಡಿರೇ ನಾಪತ್ತೆ ! `ಓ ಇಂವ ಊಟಕ್ಕೆ ಹೋಗಿರೋಕೇನೋ' ತೇಳಿ ಬೇರೆ ಪತ್ರಕರ್ತರೆಲ್ಲಾ ಪ್ರೆಸ್ಮೀಟ್ಲಿ ಬ್ಯುಸಿ ಆದೋ... ಕೊನೆಗೊಮ್ಮೆ ದೇವೇಗೌಡ ಪ್ರೆಸ್ಮೀಟ್ ಮುಗ್ದ್, ಎಲ್ಲವ್ಕೆ ಭರ್ಜರಿ ಊಟನೂ ಕೊಡ್ಸಿದೊ. ಆದ್ರೂ ಆ ಪತ್ರಕರ್ತ ಮಾತ್ರ ಎಲ್ಲಿ ಹೋತ್ತೇಳಿ ಯಾರಿಗೂ ಗೊತ್ತಾತ್ಲೇ. ಇನ್ನ್ ದೇವೇಗೌಡ ಸುದರ್ಶನ ಗೆಸ್ಟ್ಹೌಸ್ಂದ ಹೊರಡೋ ಟೈಂ ಆತ್, ಊಹುಂ... ಆ ಪತ್ರಕರ್ತ ಮಾತ್ರ ಕಾಂಬದೇ ಇಲ್ಲೆ!
ಹೊರಗಡೆ ಬ್ಲ್ಯಾಕ್ಕ್ಯಾಟ್ ಕಮಾಂಡೋಗಳ್ದ್ ಬೊಬ್ಬೆನೋ ಬೊಬ್ಬೆ. ಹಿಂದಿಲಿ ಏನೇನೋ ಜೋರಾಗಿ ಬಾಯಿಬಡಿತ್ತೊಳೊ... ಅವ್ರ ಮಧ್ಯೆಲಿ ಯಾರೋ ಒಬ್ಬ ಕುದ್ದುಕ್ಕೊಂಡುಟ್ಟು. ಹತ್ರ ಹೋಗಿ ನೋಡಿರೇ ಆ ನಮ್ಮ ಪತ್ರಕರ್ತ! ಅಂವ ಒಳ್ಳೆ ಕಳ್ಳರ ಹಂಗೆ ಆಚೀಚೆ ಓಡಾಡ್ದುನ ನೋಡ್ದ ಕಮಾಂಡೋಗ ಅನುಮಾನದ ಮೇಲೆ ತಮ್ಮ ವಶಕ್ಕೆ ತೆಗ್ದ್ಕೊಂಡ್ಬಿಟ್ಟಿದ್ದೊ. ಅವ್ಕೆ ಕನ್ನಡ ಗೊತ್ಲೆ. ಇವಂಗೆ ಹಿಂದಿ ಬಾದುಲ್ಲೆ. ಕೊನೆಗೆ ದೇವೇಗೌಡ್ರ ಜೊತೇಲಿದ್ದ ಎಂ ಸಿ ನಾಣಯ್ಯ ಹೇಳ್ದ ಮೇಲೆ ಕಮಾಂಡೋಗ ಈ ಪತ್ರಕರ್ತನ ಬಿಟ್ಟೊ. ಪಾಪ... ಅವಂಗೆ ಊಟನೂ ಇಲ್ಲೆ... ಕೊನೆಗೆ ದೇವೇಗೌಡರ ಪ್ರೆಸ್ಮೀಟ್ನೂ ಸಿಕ್ತ್ಲೆ...

- `ಸುಮಾ'

ನೀವೂ ಬರೆಯನಿ...
arebhase@gmail.com
 

Friday, 18 November 2011

ಮದುವೆ ಆಲ್ಬಂ !


ಬಹುಶ: ನಾವು ಇದ್ನ ಪಿಚ್ಚರ್ಲಿ ಮಾತ್ರ ನೋಡಿಕೆ ಸಾಧ್ಯ.. ಅಂವ ಹುಟ್ಟಿ ಆಗ ಬರೀ 3 ತಿಂಗ ಆಗಿತ್ತಷ್ಟೆ. ಎಲ್ಲಾ ಮನೆಗಳ್ಲಿ ಆಗುವಂಗೆ ಆ ಕೂಸು ಇದ್ದ ಮನೇಲೂ ದಿನಾ ಅತ್ತೆ ಸೊಸೆ ಜಗಳ, ಆದ್ರೆ ಅತ್ತೆದೇ ಮೇಲುಗೈ. ನಾದಿನಿಯರ ಕಿರುಕಳ ಏನೂ ಕಮ್ಮಿ ಇತ್ಲೆ. ಆದ್ರೆ ಗಂಡಂತೇಳಿಕೊಂಡಿದ್ದ ಪ್ರಾಣಿ ಮಾತ್ರ ಇದ್ಕೂ ನಂಗೂ ಸಂಬಂಧ ಇಲ್ಲೆತೇಳಿ ಇದ್ದ್ಬಿಟ್ಟಿತ್ತ್. ಅವಂಗೆ ಹೆಣ್ಣ್ನ ಯೋಚ್ನೆ ಬರ್ತಿದ್ದದ್ ರಾತ್ರಿ ಮಲಗಿಕಾಕನ ಮಾತ್ರ! ಕೂಸುನ ಅಮ್ಮಂಗೆ ಈ ಎಲ್ಲಾ ಹಿಂಸೆಗಳ್ನ ಸಹಿಸಿಕೊಂಡ್ ಸಾಕಾಗಿತ್ತ್... ಅದೊಂದ್ ದಿನ ಅವ್ಳು ಸೂರ್ಯ ಹುಟ್ಟಿಕೆ ಮುಂಚೆ ಯಾರಿಗೆ ಗೊತ್ತಿಲ್ಲದೆ ಕೂಸುನ ಜೊತೆ ಗಂಡನ ಮನೆ ಬಿಟ್ ಹೋದೆ. ತವರುಮನೆವ್ಕೂ ಎಲ್ಲಾ ವಿಷಯ ಗೊತ್ತಿದ್ದ್ರಿಂದ ಅವ್ಳಿಗೆ ಏನೂ ಹೇಳದೆ ಲಾಯ್ಕ ನೋಡಿಕೊಂಡವೆ. ಕೂಸ್ಗೆ ಕೂಡ ಅಪ್ಪನ ನೆನಪು ಬಾರದಂಗೆ ಸಾಂಕಿವೆ. ಅಂವ ಹಂಗೆ ಬೆಳ್ದು ದೊಡ್ಡಂವ ಆದೆ.
ಈಗ ಆ ಹೈದಂಗೆ 25 ವರ್ಷ. ಅವ್ನ ಫ್ರೆಂಡ್ಸೆಲ್ಲಾ ಅವ್ರವ್ರ ಅಪ್ಪನ ವಿಷಯ ಹೇಳ್ಕಾಕನ ಇವಂಗೂ ತನ್ನ ಅಪ್ಪನ ಬಗ್ಗೆ ಕುತೂಹಲ ಹುಟ್ಟಿದೆ. ಅಮ್ಮನ ಹತ್ರ ಕೇಳಿರೆ ಕುತಿಗೇಲಿರ್ವ ತಾಳಿಚೈನ್ ತೋರ್ಸುದಲ್ಲದೆ ಬೇರೆ ಉತ್ತರ ಸಿಕ್ಕುಲ್ಲೆ. ಒಂದು ಗೂಡೆನ ಬೇರೆ ನೋಡ್ಕೊಂಡುಟ್ಟು. ಮದುವೆಗೆ ಅವ್ಳ ಮನೆವೂ ಒಪ್ಪಿಯೊಳೊ... ಅಪ್ಪನ ಕರ್ಕಂಬಾ ಅಂತ ಅವು ಹೇಳಿರೆ ಇಂವ ಮಾಡ್ದಾದ್ರೂ ಏನ್ ? ಕೊನೆಗೆ ಹೆಂಗೋ ತಾತನ ಪುಸಲಾಯಿಸಿ ಅವ್ನ ಅಪ್ಪನ ಬಗ್ಗೆ ತಿಳ್ಕೊಂಡದೆ. ಇಷ್ಟು ವರ್ಷ ಅಮ್ಮನ ಕಷ್ಟಕ್ಕೆ ಕಾರಣ ಆದ ಅಪ್ಪನ ನೋಡಿಕೆ ಇಂವ ಇಷ್ಟಪಡ್ದುಲ್ಲೆ. ಅಮ್ಮಂಗೆ ಹಿಂಸೆ ಕೊಟ್ಟಿದ್ದ ಅತ್ತೆ ಅಂದ್ರೆ, ಇಂವನ ಅಜ್ಜಿನ ಭೇಟಿ ಮಾಡೋಕುಂತೇಳಿ ಹೊರಟದೆ...
ಆ ಅಜ್ಜಿ ಈಗ ಹಿಂದಿನಂಗೆ ಇಲ್ಲೆ. ಆ ಸೊಕ್ಕೆಲ್ಲಾ ಇಳ್ದುಟ್ಟು... ಹಳೇದೆಲ್ಲಾ ನೆನಪಾಗಿ `ಅಯ್ಯೋ ನಾ ಎಂಥ ತಪ್ಪು ಮಾಡ್ದೆ' ಅನ್ನೋ ಪಶ್ಚಾತಾಪ ಕಾಡ್ತಿದ್ದದ್ದೆ. ಪಿಳ್ಳಿನ ನೋಡೋಕುತೇಳೋ ಆಸೆನೂ ಹೆಚ್ಚಾಗಿದ್ದದೆ. ಇದ್ನೆಲ್ಲಾ ನೆಂಟರಿಷ್ಟರ ಹತ್ರ ಹೇಳ್ಕಂಡ್ ಬರ್ತಿರ್ಕಾಕನ, ಆ ಪಿಳ್ಳಿ ಒಂದು ದಿನ್ನ ಅಜ್ಜಿನ ಹುಡ್ಕಂಡ್ ಬಂದೇ ಬಿಟ್ಟದೆ. 3 ತಿಂಗ ಇರ್ಕಾಕನ ನೋಡ್ದ ಕೂಸುಗೆ ಈಗ 25 ವರ್ಷ... ಪಿಳ್ಳಿನ ನೋಡ್ದ ಅಜ್ಜಿ ಕಣ್ಣ್ ತುಂಬಾ ನೀರ್.. `ಇದೇ ಅಜ್ಜಿನಾ ಅಮ್ಮನ ಕಷ್ಟಕ್ಕೆ ಕಾರಣ ಆದ್' ಅಂತ ಒಮ್ಮೆ ಯೋಚ್ನೆ ಮಾಡ್ದ ನಮ್ಮ ಕಥೆ ಹೀರೋ ಹಳೇದನ್ನೆಲ್ಲಾ ಮರ್ತ್ ಅಜ್ಜಿ ಕಾಲಿಡ್ದದೆ....
ಈಗ ಅಂವನ ಮದುವೆ ಆಲ್ಬಂಲಿ ಫಸ್ಟೇ ಒಂದು ಫೋಟೋ ನೋಡಿಕೆ ಸಿಕ್ಕಿದೆ. ಅಂವ, ಹೆಣ್ಣ್, ಅಮ್ಮ ಮತ್ತೆ ಕುಚರ್ಿಲಿ ಕುದ್ದಿರೋ ಅಜ್ಜಿ ! ಆದ್ರೆ ಆ ಫೋಟೋಲಿ ಏನೋ ಒಂದು ಕೊರತೆ ಕಾಣ್ತುಟ್ಟು... ಹೌದು, ಅಲ್ಲಿ ಅಂವನ ಅಪ್ಪ ಇಲ್ಲೆ !

`ಸುಮಾ'
ನೀವೂ ಬರೆಯನಿ
arebhase@gmail.com

ಪ್ರೀತಿ...


ಪ್ರೀತಿ ನೀ ಎಂಥ ಪೊಲರ್ುನೇ...
ನಿನ್ನ ಬಲೆಗೆ ಬೀಳದವು ಯಾರೊಳನೇ
ಆದೆಂಥ ಮೋಡಿ ಮಾಡಿಯನೇ
ಹೆತ್ತ ಅಪ್ಪ-ಅಮ್ಮನ  ಮರೆಸಿ
ಜನ್ಮಜನ್ಮಾಂತರದ ಸಂಬಂಧನ
ಗಾಳಿಗೆ ತೂರಿ
ಕನಸಿನ ಗೋಪುರ ಕಟ್ಟಿಸಿ
ಹೆಣ್ಣಿನ ಕಣ್ಣಲ್ಲಿ
ಕಣ್ಣಿರ ಇಟ್ಟು ಮಾಯವಾದಿಯ...
ನೀ ಎಂಥ ಮಾಯಗಾತಿನೆ...

ತಳೂರು ಡಿಂಪಿತಾ, ಕುಶಾಲನಗರ

ನೀವೂ ಬರೆಯನಿ.. 


arebhase@gmail.com

Wednesday, 16 November 2011

ಬರ್ತುಟ್ಟು ನ್ಯಾನೋ ಡೀಸೆಲ್ ಕಾರ್




1 ಲಕ್ಷ ರೂಪಾಯಿಗೆ ಕಾರ್ ಕೊಟ್ಟನೆತಾ ರತನ್ ಟಾಟಾ ಹೇಳಿಕಾಕನ ಯಾರೂ ನಂಬಿತ್ಲೆ... ಆದ್ರೆ 2009ರಲ್ಲಿ 1 ಲಕ್ಷ ರೂಪಾಯಿನ ಕಾರ್ ರೋಡ್ಗೆ ಇಳ್ದೇ ಬಿಟ್ಟಿತ್ತ್. ಈಗ ಹತ್ರ ಹತ್ರ ಒಂದೂವರೆ ಲಕ್ಷ ರೂಪಾಯಿಗೆ ಟಾಟಾ ನ್ಯಾನೋ ಕಾರ್ ಸಿಕ್ಕಿದೆ. ಪ್ರಪಂಚಲೇ ಕಡ್ಮೆ ರೇಟ್ನ ಕಾರ್ ಈ ಟಾಟಾ ನ್ಯಾನೋ... ಆದ್ರೂ ಜನಕೆ ಏಕೋ ನ್ಯಾನೋ ಕಾರ್ ಅಷ್ಟೊಂದು ಖುಷಿ ಆತ್ಲೆ. ಅದ್ಕೆ ಟಾಟಾ ಕಂಪೆನಿ ನ್ಯಾನೋ ಕಾರ್ ಮೇಲೆ ಪ್ರಯೋಗ ಮಾಡಿಕೆ ಹೊರಟುಟ್ಟು. ದಿನಕಳ್ದಂಗೆ ಈಗ ಪೆಟ್ರೋಲ್ಗೆ ರೇಟ್ ಜಾಸ್ತಿ ಆಗ್ತುಟ್ಟಲ್ಲಾ, ಅದ್ಕೆ ಡೀಸೆಲ್ ಕಾರ್ಗೆ ತುಂಬಾ ಡಿಮ್ಯಾಂಡ್. ಇದ್ನ ನೋಡಿರೋ ಟಾಟಾ ಕಂಪೆನಿ, ಡೀಸೆಲ್ ನ್ಯಾನೋ ಕಾರ್ನ ಮಾರ್ಕೆಟ್ಗೆ ಬಿಡೋಕೂಂತೇಲಿ ಯೋಚ್ನೆ ಮಾಡ್ತುಟ್ಟು. ಹಂಗಾಗಿ ಜನವರೀಲಿ ಡೆಲ್ಲೀಲಿ ನಡೀತ್ತಿರೋ ಆಟೋ ಎಕ್ಸ್ಪೋದಲ್ಲಿ ಈ ಡೀಸೆಲ್ ನ್ಯಾನೋ ಕಾರ್ನ ಪ್ರದರ್ಶನಕ್ಕೆ ಇಟ್ಟದೆ. ಈ ಕಾರ್ 30ರಿಂದ40 ಕಿಲೋಮೀಟರ್ ಮೈಲೇಜ್ ಕೊಟ್ಟದೆ ಗಡ. ಪೆಟ್ರೋಲ್ ನ್ಯಾನೋಕ್ಕಿಂತ ಡೀಸೆಲ್ ನ್ಯಾನೋ ರೇಟ್ ತುಂಬಾ ಜಾಸ್ತಿನೇ ಇದ್ದದೆ... ಇನ್ನು ಎಲೆಕ್ಟ್ರಿಕ್ ನ್ಯಾನೋ ಕಾರ್ ಕೂಡ ಮಾಕರ್ೆಟ್ಗೆ ಬಿಡಿಕೆ ಟಾಟಾ ಕಂಪೆನಿ ಯೋಚನೆ ಮಾಡ್ಯಟ್ಟು... ನೋಡೋಕು ಈ ಕಾರ್ಗೆಲ್ಲಾ ಹೆಂಗಿದ್ದತೆತಾ...

ನೀವೂ ಬರೆಯನಿ... 

arebhase@gmail.com

ನನ್ನ ಗೂಡೆ...


ಒಮ್ಮೆಮ್ಮೆ ಕಂಡದೆ ನನ್ನ ಗೂಡೆ
ಬೆಡಗು ಬಿನ್ನಾಣದ ವಯ್ಯಾರದಂಗೆ
ಒಮ್ಮೆಮ್ಮೆ ಕಂಡದೆ ನನ್ನ ಗೂಡೆ
ಎಣ್ಣೆ ಬಾನಲೆಯಲ್ಲಿ ಉಬ್ಬಿದ ಹಪ್ಪಳದಂಗೆ
ಒಮ್ಮೆಮ್ಮೆ ಕಂಡದೆ ನನ್ನ ಗೂಡೆ
ಗಾಳಿ ಬಂದ ಕಡೆ ತೂರುವ ತರಗಲೆನಂಗೆ
ಒಮ್ಮೆಮ್ಮೆ ಕಂಡದೆ ನನ್ನ ಗೂಡೆ
ಮಳೆಗಾಲದಲ್ಲಿ ತುಂಬಿ ಹರಿಯುವ ನೀರಂಗೆ
ಒಮ್ಮೆಮ್ಮೆ ಕಂಡದೆ ನನ್ನ ಗೂಡೆ
ಬೇಸಿಗೆಯ ಬಿರು ಬಿಸಿಲಿನಂಗೆ
ಓ ನನ್ನ ಗೂಡೆ ಇದೆಂಥದ್ದ್ ನಿನ್ನ ಅವತಾರ!

- ತಳೂರು ಡಿಂಪಿತಾ, ಕುಶಾಲನಗರ

ನೀವೂ ಬರೆಯನಿ..
arebhase@gmail.com

Tuesday, 15 November 2011

ಸ್ವಪ್ನ ಗೂಡೆ !



ಕಾಲೇಜ್ ರೋಡ್ಲಿ ಪೊರ್ಲುನ ಗೂಡೆ
ಮುಖ ಮುಚ್ಚಿಟ್ಟು ಚುಕ್ಕಿ ಚುಕ್ಕಿ ಕೊಡೆ
ಹೆಜ್ಜೆ ಮೇಲೆ ಹೆಜ್ಜೆ.. ಆಹಾ ಅದೆಂಥ ನಡೆ !
ನಿಂಗಾಗೇ ಕಾಯ್ತೊಳೆ ನೋಡ್ನೇ ಈ ಕಡೆ
ನಾಚಿಕೆ ನೋಡ್...ಛೀ ಕಳ್ಳಿ !
ಕೊಡೆನ ಹಂಗೆನೇ ಒಂಚೂರು ಮೇಲೆತ್ತಿ
ಪುಟ್ಟ ಪುಟಾಣಿ ಕಣ್ಣಲ್ಲೇ ಅತ್ತಿತ್ತ ನೋಡಿ
ಮುಖ ತಿರುಗಿಸದೆ ಮಾಡಿಬಿಟ್ಟದೆ ಮೋಡಿ
ಅದೃಷ್ಟ ಕಳ್ಕೊಂಡುಟ್ಟು ಪುಸ್ಕಕ
ಇರ್ಲಿ, ಬೆನ್ನಿನ ಬ್ಯಾಗ್ಲಾದ್ರೂ ಸಿಕ್ಕುಟ್ಟಲ್ಲ ಜಾಗ
ಬುಕ್ ಇರೋ ಕೈಲಿ ಮೊಬೈಲ್ ಬಂದುಟ್ಟೀಗ
ಓ.. ಕ್ಲಾಸ್ಗೆ ಲೇಟಾತ್, ನಡೀನೇ ಬೇಗ
ಅದ್ಯಾವ ಪುಣ್ಯಾತ್ಮ ಕಂಡಿತ್ತೋ ಸ್ವಪ್ನ
ಬೆಟ್ಟದ ಮೇಲೊಂದ್ ಕಾಲೇಜ್....
ಹಸಿರಲ್ಲದ ಜಾಗಲಿ ಕಲರ್ ಕಲರ್ ಹೂಗ
ಹಾಂ... ಅಲ್ಲೇ ಓದ್ತುಟ್ಟು ನನ್ನ ಸ್ವಪ್ನ
ಅಯ್ಯೋ.. ಇದೂ ನನ್ನ `ಸ್ವಪ್ನ'!

`ಸುಮಾ'

ನೀವೂ ಬರೆಯನಿ... 
arebhase@gmail.com

ಕೆ ಎ ಎಸ್ ಪರೀಕ್ಷೆ....

ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಕೆಪಿಎಸ್ಸಿ ಅಜರ್ಿ ಕರ್ದುಟ್ಟು. ಎಸಿ, ಡಿವೈಎಸ್ಪಿ, ತಹಶೀಲ್ದಾರ್ ಸೇರ್ದಂಗೆ 352 ಹುದ್ದೆಗಳಿಗೆ ನೇಮಕ ಮಾಡಿಕೊಂಡವೆ. ಅಜರ್ಿ ಹಾಕಿಕೆ ಕೊನೆ ದಿನ ಡಿಸೆಂಬರ್ 2. ಪ್ರಿಲಿಮಿನರಿ ಪರೀಕ್ಷೆ , 2012 ಫೆಬ್ರವರಿ ತಿಂಗಳಲ್ಲಿ ನಡ್ದದೆ.ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

Monday, 14 November 2011

ಬುರು ಬುರು ರಾಮಾ !


ಇದೇನಪ್ಪಾ ಕಪ್ಪು ಮೋಡ...
ಮಳೆ ಬಂದದೆಯೇನೋ
ಗುಡುಗಿನ ಶಬ್ಧ ಇಲ್ಲೆ...
ಮತ್ತೆಂತ ಅದ್ ಬುರುಬುರು
ಓ ತಲಕಾವೇರಿ ರಾಮ !
ರಾಮಾ ರಾಮಾ ಅದೆಂಥ ಹೊಗೆ !
`ಭೂಮಿ ತಬ್ಬಿದ್ಮೋಡ ಇದ್ದಂಗೆ'
ಕಪ್ಪು ರಸ್ತೆ ಮೇಲೆ ಮಸಿ ಹರಡಿದಂಗೆ
ಭೂಮಿ ಮೇಲೆ ಅಮವಾಸ್ಯೆ ಆಕಾಶ ಬಿದ್ದಂಗೆ !
ರಾಮಾ ರಾಮಾ ಅದೇನ್ ಫಾಸ್ಟ್..
ಮಡಿಕೇರಿ ತಲುಪಿಕೆ 3 ಗಂಟೆ !
ಅಣ್ಣಿ ಹೈದ ನಡ್ದೇ ಮುಟ್ಟಿದೆ
ಬಸವನ ಹುಳಕ್ಕೇ ನಾಚಿಕೆ ಆದೆ
ರಾಮಾ ರಾಮಾ ಪುಟ್ಟ ಪುಟಾಣಿ ಬಸ್!
ಅದಕ್ಕೆರಡ್ ಕಣ್ಣ್.. ಮಿಣ ಮಿಣ ಮಿಂಚಿದೆ
ಕನ್ನಡಕ ಹಾಕೋಕೇನೋ !
ಚಾಂಪನ ದೃಷ್ಟಿನೇ ಎಷ್ಟೋ ಲಾಯ್ಕುಟ್ಟು
ರಾಮಾ ರಾಮಾ ಏನ್ ಲುಕ್ಕು !
ನಮ್ ರೋಡ್ಲಿ ನೀ ಬಾದೇ ನಮ್ಮ ಲಕ್ಕ್ !
ಸಾಕಪ್ಪಾ ಸಾಕ್ ನಿನ್ ಸಹವಾಸ
ಡ್ರೈವರ್ದಾತ್, ನಿಂದ್ ಯಾಗ ರಿಟೈರ್ಮೆಂಟ್ ?

`ಸುಮ'

ನೀವೂ ಬರೆಯನಿ...
arebhase@gmail.com

ಕುಶಾಲನಗರಲಿ ಜಾತ್ರೆಯ ಗೌಜಿ


ಕೊಡಗಿನ ಹೆಬ್ಬಾಗಿಲು ಕುಶಾಲನಗರ. ಗಣೇಶ ಇಲ್ಲಿನ ಪ್ರಸಿದ್ಧ ದೇವ್ರು. ಇಲ್ಲಿ ನಿನ್ನೆ ರಥೋತ್ಸವ ನಡ್ತ್. ಎಲ್ಲಾ ಕಡೆಗಳಿಂದ   ತುಂಬಾ ಜನ ಬಂದಿದ್ದೊ. ರಥಬೀದಿ ಉದ್ದಕ್ಕೂ ಈಡುಕಾಯಿ ಒಡೆಯುದು ಇಲ್ಲಿನ ವಿಶೇಷ. ಅಲ್ಲದೆ ಸಂತೆ ಮೈದಾನದಲ್ಲಿ ನಡೀತ್ತಿದ್ದ ಜಾತ್ರೆನ ಈಸಲ ನೆಹರು ಬಡವಾಣೆಗೆ ಸ್ಥಳಾಂತರ ಮಾಡ್ಯೊಳೊ. ಇನ್ನೊಂದು ತಿಂಗ ಇಲ್ಲಿ ಜಾತ್ರೆ ಸಂಭ್ರಮ ಇದ್ದದೆ.

- ತಳೂರು ಡಿಂಪಿತಾ
ನೀವೂ ಬರೆಯನಿ..
arebhase@gmail.com

Sunday, 13 November 2011

ಲಿಪ್ಸ್ಟಿಕ್ ಲಿಲ್ಲಿ..


ಲಕ್ಕವಳ್ಳಿಯ ಲಕ್ಕಿ ಗೂಡೆ 
ಲಿಪ್ ಸ್ಟಿಕ್ ಲಿಲ್ಲಿ
ಅದೆಂಥ ಸ್ಟೈಲು, ಅದೆಂಥ ಸ್ಮೈಲೂ
ಹೊಂಡ ಬೈಕ್ನ ಅಣ್ಣಿ ಹೈದನೇ
ಹೊಂಡಕ್ಕೆ ಬಿತ್ತ್!
ಬಟ್ಲರ್ ಇಂಗ್ಲಿಷ್, ಹೈ ಹೀಲ್ಡ್ ಚಪ್ಪಲ್
ಕೈಲಿ ಮೊಬೈಲ್, ಕಿವೀಲಿ ಹೆಡ್ಫೋನ್
ಟೈಟ್ ಜೀನ್ಸ್, ಜಂಬದ ಚೀಲ
ಲಿಪ್ಸ್ಟಿಕ್ ಲಿಲ್ಲಿದ್ ಸ್ಟೈಲೋ ಸ್ಟೈಲು
ಓದಿದ್ ಡಿಗ್ರಿ, ಬೆಂಗ್ಳೂರ್ಲಿ ಕೆಲ್ಸ
ಹೈದ ಬೇಕ್ಗಡ ಲಿಪ್ಸ್ಟಿಕ್ ಲಿಲ್ಲಿಗೆ !
ಲಾಯ್ಕ ಕಲ್ತಿರೋಕು, ಸಕರ್ಾರಿ ಚಾಕರಿ ಇರೋಕು
ಅಪ್ಪ, ಅಮ್ಮಂಗೆ ಒಬ್ಬನೇ ಮಂಞ ಆಗಿರೋಕು !
ಪಾಪ ಅಣ್ಣಿ, ಕಾಳ್ ಹಾಕಿದ್ದೇ ಬಾತ್
ಲಿಪ್ಸ್ಟಿಕ್ ಲಿಲ್ಲಿ ಕೈಕೊಟ್ಟೇ ಬಿಡ್ತ್ !
ಲಕ್ಕವಳ್ಳಿಲಿ ಈಗ `ಮುಂಗಾರು ಮಳೆ'
ಅಣ್ಣಿನೇ `ಗಣೇಶ'.. ಲಿಲ್ಲಿ...?

- `ಸುಮ'


ನೀವೂ ಬರೆಯನಿ...
ಎಂಥ ಬೇಕಾರೂ ಬರೆಯಕ್. ಆದ್ರೆ ಅರೆಭಾಷೇಲಿರೋಕು

Friday, 11 November 2011

ಮೊದಲ ಟಿವಿ ಕಥೆ


ಮಳೆಂತೇಳಿರೇ ಕಣ್ಮುಂದೆ ಬಾದು ಭಾಗಮಂಡಲ. ಒಂದ್ಸಲ ಮಳೆ ಶುರುವಾತುಂತೇಳಿರೆ ಜಾತ್ರೆ ವರೆಗೆ ಬಿಡದೇ ಸುರೀತ್ತಿದ್ದದೆ. ಸರಿಯಾಗಿ ಬಿಸಿಲು ಇರ್ದು 6 ತಿಂಗ ಮಾತ್ರ. ಇನ್ನು ಅಲ್ಲಿ ಸುತ್ತ ಮುತ್ತ ಇರ್ವ ಹಳ್ಳಿಗಳಲ್ಲಿ ಇರವ್ರ ಪಾಡಂತೂ ದೇವ್ರಿಗೇ ಪ್ರೀತಿ. ಇದು ಈಗನ ಕಥೆ ಅಲ್ಲ... 30-40 ವರ್ಷ ಹಿಂಗೆ ಇತ್. ಈಗ ಬುಡಿ ಮಳೆ ಬಾಕೆ ಅಲ್ಲಿ ಕಾಡು ಇದ್ದ್ರೆ ತಾನೆ. ಕಾಡೆಲ್ಲಾ ಹೋಗಿ ತೋಟಗ ಬಂದೊಳೊ. ಮಳೆ ಬಂದ್ರೂ ಆಗ ಬರ್ತಿದ್ದಂಗೆ ಜೋರಾಗಿ ಬಾದುಲೆ.
ಅದು 1985-86 ಇರೋಕು ಕಂಡದೆ. ಭಾಗಮಂಡಲದಂಥ ಮಳೆ ಊರಿಗೆ ಮೊದ್ಲ ಸಲ ಟಿವಿ ಬಾತ್. ಅದ್ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ. ರೇಡಿಯೋ ರಿಪೇರಿ ಮಾಡೋ ರಮೇಶ ಈ ಟಿವಿ ತಂದಿತ್ತ್. ಎಲ್ಲೋ ದೂರಲಿ ನಡ್ದದ್ನ ಈ ಟಿವಿ ತೋರ್ಸಿದೆ ಗಡ ಅಂತ ಹೇಳ್ದು ಆಗಿನ ಕಾಲಕ್ಕೆ ದೊಡ್ಡ ವಿಶೇಷ ! ಎಲ್ಲವೂ ರಮೇಶನ ಅಂಗಡಿ ಮುಂದೆ ಸೇರಿದ್ದೊ...ಟಿವಿ ನೋಡಿಕೆ. ಅದಿಕ್ಕೆ ರೇಡಿಯೋಕ್ಕೆ ಇದ್ದಂಗೆ ಒಂದು ಏರಿಯಲ್ ಇತ್... ಅದ್ನ ಮೇಲಕ್ಕೆ ಎಳ್ದ್ ರಮೇಶ ಟಿವಿ ಆನ್ ಮಾಡ್ತ್. ಎಲ್ಲವೂ ಬಿಟ್ಟ ಕಣ್ ಬಿಟ್ಟಹಂಗೆ ನೋಡ್ತಿದ್ದೋ...ಊಹುಂ, ಟಿವಿ ಒಳಗೆ ಬಿಳಿ ಬಿಳಿ ಚುಕ್ಕಿ ಬಿಟ್ರೆ ಬೇರೆಂತನೂ ಕಾಣ್ತಿಲ್ಲೆ! ಎಲ್ಲವ್ಕೆ ರಮೇಶನ ಮೇಲೆ ಸಿಟ್ಟ್ ಬಾತ್. ಇಂವ ಸುಮ್ನೆ ನಮ್ಮನ್ನ ಮಂಗ ಮಾಡಿಕೆ ಹಿಂಗೆಲ್ಲಾ ಮಾಡ್ತುಟ್ಟುತ ಅವ್ನೊಟ್ಟಿಗೆ ಜಗಳಕ್ಕೆ ನಿಂತೊ...`ಭಾಗಮಂಡಲ ಎತ್ತರಲಿ ಉಟ್ಟು. ಸುತ್ತ ಕಾಡ್ ಬೇರೆ. ಅದ್ಕೆ ಸಿಗ್ನಲ್ ಸಿಕ್ಕುಲೆ...ನಾಳೆ ಬನ್ನಿ, ಆ್ಯಂಟೆನಾ ಕಟ್ಟಿ ನಿಮ್ಗೆ ಪಿಚ್ಚರ್ ತೋರ್ಸಿನೆ' ಅಂತ ಹೇಳೆ ಎಲ್ಲರನ್ನ ವಾಪಸ್ ಕಳ್ಸಿತ್ತ್.
ಅಂತೂ ಆ ನಾಳೆ ಬಂದೇಬಿಡ್ತ್. ಬೆಳಗ್ಗೆನೇ ಎಲ್ಲವೂ ರಮೇಶನ ಅಂಗ್ಡಿ ಹತ್ರ ಬಂದೋ... ನೋಡಿರೇ ಅಂಗಡಿಗೆ ದೊಡ್ಡ ಬೀಗ ! ರಮೇಶನ ಮೇಲೆ ಎಲ್ಲವ್ಕೂ ಏನೋ ಅನುಮಾನ. `ಇಂವ ನಮ್ಗೆ ನಿನ್ನೆ ಸರಿಯಾಗಿ ಟೊಪ್ಪಿ ಹಾಕಿತ್ರಾ..' ಅಂತ ಹೇಳ್ಕಂಡ್ ಎಲ್ಲಾ ಜಾಗ ಖಾಲಿ ಮಾಡ್ದೊ... ಸಾಯಂಕಾಲ 3 ಗಂಟೆ ಇರ್ದು... ರಮೇಶನ ಅಂಗಡಿ ತೆಗ್ದಿತ್ತ್ ! ಕಬ್ಬಿಣದ ಉದ್ದ ರಾಡ್ಗೆ ಅದೆಂಥದ್ದೋ ಚಿಕ್ಕ ಚಿಕ್ಕ ಅಲ್ಯೂಮೀನಿಯಂ ಕಡ್ಡಿಗಳ್ನ ಫಿಟ್ ಮಾಡ್ತಿತ್ತ್... ಇದ್ ಪುಟ್ಟುನ ಕಣ್ಣಿಗೆ ಬಿತ್... ಈ ವಿಷಯನ ಊರು ಪೂತರ್ಿ ಟಾಂ ಟಾಂ ಮಾಡ್ತ್. ಮತ್ತೆ ನಿನ್ನೆನಂಗೆನೇ ಇಂದೂ ರಮೇಶನ ಅಂಗಡಿ ಮುಂದೆ ತುಂಬಾ ಜನ ಸೇರ್ದೊ. ಬೆಳಗ್ಗೆ ಅಂವ ಆ್ಯಂಟೆನಾ ತಕ್ಕೊಂಡು ಬಾಕೆ ಮಡಿಕೇರಿಗೆ ಹೋಗಿತ್ತ್. ಅದ್ನೇ ಈಗ ಫಿಟ್ ಮಾಡ್ತಿತ್ತ್... ಬುದ್ಧ ಆಗ್ಲೇ ಮಾಡಿ ಮೇಲೆ ಹತ್ತಿ ಕೂತಿತ್ತ್. ಅಂಗಡೀಲಿ ಟೇಬಲ್ ಮೇಲಿದ್ದ ಟಿವಿ ನಿನ್ನೆ ತರನೇ ಬಿಳಿ ಬಿಳಿ ಚುಕ್ಕಿಗಳ್ನ ತೋರ್ಸ್ತ್ತಿತ್ತ್.. ಸ್ವಲ್ಪ ವ್ಯತ್ಯಾಸ ಅಂದ್ರೆ, ಆ್ಯಂಟೆನಾ ಸ್ವಲ್ಪ ಅಲ್ಲಾಡಿರೂ ಕಪ್ಪು ಅಡ್ಡಡ್ಡ ಗೆರೆ ಕಾಣಿಸ್ತಿತ್ತ್. ಬುದ್ಧ ಮೇಲೆ ನಿಂತ್ಕಂಡ್ ಆ್ಯಂಟೆನಾ ಎತ್ತಿದಂಗೆ ಟಿವಿಲಿ ಏನೋ ಬರೆ ಬರೆ ಕಂಡಂಗೆ ಆಗ್ತಿತ್ತ್. `ಓ ಬುದ್ಧ ಟಿವಿಲಿ ಬರ್ತುಟ್ಟು' ತಾ ಅಲ್ಲಿ ಸೇರಿದ್ದವೆಲ್ಲಾ ಹೇಳಿಕೆ ಶುರು ಮಾಡ್ದೊ...
ಕೊನೆಗೆ ಸಾಯಂಕಾಲ ಆಗ್ತಿದ್ದಂಗೆ ರಮೇಶನ ಅಂಗಡಿ ಮಾಡಿ ಮೇಲೆ ಟಿವಿ ಆ್ಯಂಟೆನಾ ಫಿಟ್ ಮಾಡಿ ಆತ್... ಆದ್ರೆ ಟಿವಿಲಿ ಮಾತ್ರ ಅಡ್ಡ ಕಪ್ಪುಗೆರೆ ಬಿಟ್ರೆ ಬೇರೆಂಥ ಕಾಣ್ತಿತ್ಲೆ. ಮೇಲೆ ಕೂತಿದ್ದ ಬುದ್ಧಂಗೆ ಆ್ಯಂಟೆನಾ ತಿರುಗ್ಸೋ ಕೆಲ್ಸ. ಕೆಳ್ಗೆ ಕುದ್ದಿದ್ದ ರಮೇಶ `ಏ ಬುದ್ಧ... ಲೆಫ್ಟ್ಗೆ ತಿರುಗ್ಸ್ರಾ...ರೈಟ್ಗೆ ತಿರುಗ್ಸ್ರಾ' ಹೇಳ್ತನೇ ಇತ್ತ್... ಅಷ್ಟೊತ್ತಿಗೆ ಟಿವಿಲಿ ಮಲೆಯಾಳಂ ವಾಯ್ಸ್ ಕೇಳಿಕೆ ಶುರುವಾತು... ಬುದ್ಧ ಆ್ಯಂಟೆನನಾ ಇನ್ನುಂಚೂರು ತಿರುಗ್ಸಿಕಾಕನ ಏನೋ ಗೊಂಬೆಗ ಕಂಡ ಹಂಗೆ ಆತ್...`ನಿಲ್ಸ್...ನಿಲ್ಸ್' ರಮೇಶನ ಬೊಬ್ಬೆ... ಅಂವ ಮತ್ತೆ ಟಿವಿ ಹತ್ರ ಬಂದ್ ಮತ್ತೆ ಯಾವುದೋ ಬಟನ್ಗಳ್ನೆಲ್ಲಾ ಒತ್ತಿ ಏನೇನೋ ಮಾಡ್ತ್.... ಆಶ್ಚರ್ಯ...ಮಲೆಯಾಳಂ ಪಿಚ್ಚರ್ ಬರ್ತಿತ್ತ್... ರಮೇಶ ಹೇಳ್ತ್ `ಅದ್ ತಿರುವನಂತಪುರಂ ಸ್ಟೇಷನ್' ಆ ದಿನ ಭಾಗಮಂಡಲದವ್ಕೆ ರಮೇಶ ದೊಡ್ಡ ಹೀರೋ....ಟಿವಿಂಥೇಳಿರೆ ಏನೂತಾ ಮೊದ್ಲ ಸಲ ಆ ಊರಿಗೆ ಅಂವ ಹೇಳಿಕೊಟ್ಟಿತ್ತ್ !


- ಸುನಿಲ್ ಪೊನ್ನೇಟಿ,
ಭಾಗಮಂಡಲ

ವರದಕ್ಷಿಣೆ


 ಅಮ್ಮ ಹೆತ್ತು ಹೊತ್ತು
      ತನ್ನ ಬೆಲೆನೇ ತೆತ್ತು
      ಹೆಣ್ಣು ಸಮಾಜದ ಕಣ್ಣು
      ಹೊರಗಡೆ ಜನಗಳೊಟ್ಟಿಗೆ
      ಸಲಿಗೇಲಿ ಮಾತಾಡಬೇಡ,
      ಜನಗಳ ಕೆಟ್ಟ ಕಣ್ಣಿಗೆ ಬಿದ್ದೀಯ
      ಅಮ್ಮನ ಸಿಹಿಮುತ್ತನಂಥ ಬುದ್ಧಿಮಾತು
      ಹೇಳಿಕೊಂಡು ಕಣ್ಣಲ್ಲಿ ಕಣ್ಣಿಟ್ಟ್
      ಮಗಳ್ನ ಹೂವಂಗೆ ಸಾಂಕಿದೆ
      ಕೊನೆಗೊಂದು ದಿನ
      ಅಮ್ಮಂಗೆ ತಿಳಿಯದೆ
      ವಿಧಿ ಕಾಣದೆ ಮಗಳ ಕೈಸೇರಿಯೋದೆ
      ಅಂದು ಹೂವಂಗೆ ಇದ್ದ ಮಗಳನ್ನ ಮುಳ್ಳಾಗಿಸಿದೆ
      ವಿಧಿಯಾಟ ಮನೆಯೆಂಬ ಲಕ್ಷ್ಮಣರೇಖೆನಾ ಮೀರಿಸಿದೆ
      ಆ ಘಟನೆ
      ಧಾರುಣ ಕಥೆ
      ಅಮಾನುಷ ಕಥೆ
      ಆಗೋದೇ ಒಂದು ದಿನ
      ಇಲ್ಲೆ ಇಲ್ಲೆ ಅದು ಸತ್ಯ ಸತ್ಯ
      ನಿಜ ಘಟನೆತಾ ಸಾವಿನ ಅಂತ್ಯದಲ್ಲಿ
      ಪ್ರಪಂಚಕ್ಕೆ ಗೊತ್ತಾದೆ!

- ತಳೂರು ಡಿಂಪಿತಾ, ರಂಗಸಮುದ್ರ

Thursday, 10 November 2011

ಹುತ್ತರಿ ಹಬ್ಬ...


ಹುತ್ತರಿ ಬಾತ್ ಹುತ್ತರಿ.. ಪೊಯ್ಲೇ ಪೊಯ್ಲೇ
ಕೋಲಾಟ ಆಡಿಕೆ ಪೋಯಿ ಬನ್ನಿ ಸ್ನೇಹಿತರೇ...
ಮಳೆಗಾಲ ಹೋತ್ ಚಳಿಗಾಲ ಶುರುವಾಗ್ಯುಟ್ಟು
ಹೊತಾರೆ ನೋಡಿರೆ ಎಲ್ಲೆಲ್ಲೂ ಮಂಜು ಬಿದ್ದುಟ್ಟು
ಕಂಬಳಿ ಮೇಲೆ ಕಂಬಳಿ ಹೊದ್ರೂ ಚಳಿಯೋ ಚಳಿ
ಹೊರಗೆ ಕಾಲಿಟ್ರೆ ಮೈ ಕೊರ್ದದೆ ಕೋಟ ಗಾಳಿ
ಭೂಮಿ ತಾಯಿಗೆ ಹಸಿರ ಸಿಂಗಾರ..
ಗದ್ದೆಲೆಲ್ಲಾ ಕಾಣ್ತುಟ್ಟು ಭತ್ತ ಬಂಗಾರ
ಕೋಲಾಟ ಬಾಣೇಲಿ ಕಾಡು ಬೆಳ್ದುಟ್ಟು
ಸಫಾಯಿ ಮಾಡಿಕೆ ಅಣ್ಣಿ ಹೈದ ಕಾಯ್ತುಟ್ಟು
ಬನ್ನಿ ಗೆಳೆಯರೇ ಕೋಲಾಟ ಕಲಿಯನಾ..
ದೇವ್ರ ಹೆಸರೇಳ್ಕಂಡ್ ಕುಣಿಯನಾ
ಹುತ್ತರಿ ಬಾತ್ ಹುತ್ತರಿ ಪೊಯ್ಲೇ..ಪೊಯ್ಲೇ...

- `ಸುಮ' ಮಡಿಕೇರಿ

Wednesday, 9 November 2011

ಅರೆಭಾಷೆ ಡಾಕ್ಯುಮೆಂಟರಿ

ನಮ್ಮವ್ರ ಬಗ್ಗೆ ಒಂದು ಡಾಕ್ಯುಮೆಂಟರಿ ಬರ್ತುಟ್ಟು... ಚೀಯಂಡೀರ ತೇಜಶ್ ಪಾಪಯ್ಯ ಮತ್ತೆ ಮಂಜು ಹೊನ್ನುಕೋಟಿ ಈ ಡಾಕ್ಯುಮೆಂಟರಿ ರೆಡಿ ಮಾಡ್ತೊಳೊ. ಈಗಾಗ್ಲೆ ಇದ್ರ ಪ್ರೊಮೋ ಬಿಡುಗಡೆ ಆಗ್ಯುಟ್ಟು... 

ಇಲ್ಲಿ ಕ್ಲಿಕ್ ಮಾಡಿ   ಅರೆಭಾಷೆ ಡಾಕ್ಯುಮೆಂಟರಿ


Saturday, 5 November 2011

ಬನ್ನಿ ಬೇಟೆಗೆ ಪೋಯಿ...


ಬೇಟೆಗೆ ಪೋಯಿ ಬನ್ನಿ...
ಏ ನೀ ಕೋವಿ ತಕ್ಕಾ.. ಅಂವ ತೋಟ ತರ್ಲಿ
ನಾ ಜೂಲನ ಕರ್ಕಂಡನೆ, ಬೇಟೆಗೆ ಪೋಯಿ...
ಅಲ್ಲಿ ಗುಡ್ಡಲಿ ನಿನ್ನೆ ಕ್ಯಾಮ ಕೂಗ್ತಿತ್ತ್ !
ತ್ಯಾಂಪನ ಏಲಕ್ಕಿ ತೋಟಲಿ ಕಡವೆ ಉಟ್ಟುಗಡ
ಕಾವೇರಿ ಹೊಳೇಲಿ ನೀರು ಕುಡಿಯಕ್ಕೆ ಕಾಟಿ ಬಂದಿತ್ತ್
ಬನ್ನಿ ಬೇಟೆಗೆ ಪೋಯಿ....
ಮಲೆ ಕೊಲ್ಲೀಲಿ ತುಂಬಾ ಮೀನುಗ ಒಳೋ
ನೀಲಿ ಮರ ಕೊಡೀಲಿ ದೊಡ್ಡಜೇನ್ ಕಾಣ್ತುಟ್ಟು..
ಬೈನೆ ಮರಲಿ ಮುಚ್ಚ ಕಣ್ಣ್ ಕೊಡ್ತಿತ್
ಬನ್ನಿ ಬೇಟೆಗೆ ಪೋಯಿ
ಗಣಿ ನೀ ಗಣೇಶ ಬೀಡಿ ಹಿಡ್ಕ, ಧಮ್ ಗೆ ಬೇಕಾದೆ
ಮಣಿ ನೀ ಮೆಕ್ಡೋಲ್ ಹಿಡ್ಕ, ಚಳಿಗೆ ಒಳ್ಳೇದ್
ಅಣ್ಣಿ ನೀ ಹಂದಿಸಾರ್ ಮಾಡ್ಕಂಡ್ ಬಾರಾ...
ಎಲ್ಲಾ ಬನ್ನಿ ಬೇಟೆಗೆ ಪೋಯಿ...
ಎಷ್ಟ್ ಲಾಯ್ಕ ಇತ್ತಲ್ಲಾ, ಆ ಕಾಲ !
ಮನಸ್ಸ್ ಬಂದಾಗ ಕಾಡಿಗೆ ಹೋದು, ಢಂ...
ಅಂದ್ ಮನೇಲಿ ಮಾಂಸದೂಟ !
ಇಂದ್ ಹಂಗೆ ಮಾಡಿರೆ ಜೈಲೂಟ !

- `ಸುಮ' ಮಡಿಕೇರಿ

ನೀವೂ ಬರೆಯನಿ. ..

ದರ್ಶನ್ ಪತ್ರ...

ಅರೆ ಭಾಷೆಯ ಬ್ಲಾಗ್ ಶುರಾದ್ದಕ್ಕೆ ಮೊದ್ಲು ನಾನು ಧನ್ಯವಾದಂಗ ತಾ ಹೇಳ್ನೆ . ಮತ್ತೆ ನಮ್ಮ ಭಾಷೆ ನಿಜಕ್ಕೂ ಪೊರ್ಲಾದ ಭಾಷೆ ಅದ್ಕೆ ಸಾವುತೇಳ್ದೇ ಇಲ್ಲೆ. ಪೊಪ್ಪ  ಅಮ್ಮ ಮತ್ತೆ ಅವ್ವ ತಾತಂಗ ಕಲ್ಸಿದ ಈ ಭಾಷೇನಾ ನಾವು ಖಂಡಿತ ನೀರು ಹೊಯ್ದ್ ಬೆಳೆಸೊಕು. 
ಇಂದ್ ನಾ ದಿನಾಲಿ ಕೊಡಗ್ ಬುಟ್ಟು ಹೊರಗೆಲ್ಲೊ ಗೊತ್ತಿಲ್ದಾ ಭಾಷೆನಾ ಮಾತಾಡಿಕಂಡ್  ಕೈಲ್ ಪೊಳ್ದ್ ಗೊ ಹುತ್ತರಿಗೊ ಒಮ್ಮೆ ಮನೆ ಕಡೆ ಬಂದ್ ಮುಖ ತೋರ್ಸಿ ಹೊಗವೇ ಜಾಸ್ತಿ ಅಂಥವು ಅವರ ಮಕ್ಕಳಿಗೆ ಹೆಂಗೆ ಅರೆಭಾಷೆ ಕಲ್ಸಿವೆ. 
ಕೊಡಗ್ ನಾ ಗೌಡ ಬಾಂಧವ್ ಗ ನಮ್ಮ ಭಾಷೆ ಮಣ್ಣ್ ನ ಬುಟ್ಟು ಕೊಡಕಾಗದ್ ಮತ್ತೆ ನಾವು ನಮ್ಮ ಹಬ್ಬ ಹರಿದಿನಗಳ್ನ ಕೂಡ ಲಾಯಾಕ್ಕಾಗಿ ಮಾಡ್ತಾ ಬರೊಕು 
ವೆಂಕಟ್ರಮಣ ಗುಳಿಗ ಪಾಷಣ ಮೂರ್ತಿ ನಮ್ಮ ಮನೆನಾ ಮತ್ತೆ ಅಕ್ಕ ತಂಗೆಕಳ್ನ ಈ ಮಣ್ಣ್ ನ ಲಾಯಕ್ಕ ಇಟ್ಟಿರ್ಲಿ ತಾ ಕೇಳಿ ಕಂಡವೆ.

- ದರ್ಶನ್  ಕಾಸ್ಪಾಡಿ
ಧನ್ಯವಾದಗ ದರ್ಶನ್, ನಿಮ್ಮಿನ್ದನೂ ಲೇಖನಗ ಬರೋಕು - ಸಂ.   

Thursday, 3 November 2011

ಗೂಡೆನ ಸ್ವಪ್ನ !


ಅಂವ ನನ್ನ ಹೈದ.. ಹೀರೋಹೊಂಡ ಬೈಕ್ನ ಹೈದ...
ಕಾಲೇಜು ರೋಡ್ಲಿ ಸಿಕ್ಕಿದ ಹೈದ, ಪೊರ್ಲುನ ಹೈದ
ಮರಗೋಡ್ಲಿ ಕಾಫಿ ತೋಟ ಉಟ್ಟುಗಡ
ಅವನಪ್ಪ ಟಯೋಟ ಕಾರ್ ಓನರ್ಗಡ
ಮಾತಾಡೋಕು...ನನ್ನ ಹೈದನ ಜೊತೆ..
ಜೀನ್ಸ್ ಪ್ಯಾಂಟ್.. ಊಹುಂ, ಅವಂಗೆ ಲಾಯ್ಕ ಇಲ್ಲೆ
ಟೀ ಷಟರ್್... ಪರ್ವಾಗಿಲ್ಲೆ ಅಡ್ಜಸ್ಟ್ ಆದೆ..
ಹೇಳೋಕು... ಇದ್ನೆಲ್ಲಾ ನನ್ನ ಹೈದಂಗೆ...
ಹೇರ್ಸ್ಟೈಲ್ ಓಕೆ...ನಗೆ ಸೂಪರ್..
ಮೀಸೆ... ಬೇಡಪ್ಪಾ, ಇದ್ದರೆ ಚುಚ್ಚುದು ನಂಗೇನೇ...
ಫೋನ್ಲೇ ಹೇಳೊಕು... ನನ್ನ ಹೈದಂಗೆ
ಓ...ಅಮ್ಮಾ ಕರೀತುಟ್ಟು.. ಕೋಳಿ ಕೂಗ್ತುಟ್ಟು
ಆಂದ್ರೆ, ಎಲ್ಲಾ ಕನ್ಸ್...
ಇರ್ಲಿ.. ಇಂದಾದ್ರ್ ಸಿಕ್ಕಿದೇನೋ ನನ್ನ ಹೈದ !

- `ಸುಮ'
ಮಡಿಕೇರಿ

ನೀವೂ ಬರೆಯನಿ...


ಅಡ್ವಾಣಿ ಕೊಡಗಿಗೆ ಬಂದಿದ್ದಾಗ...

ಫೋಟೋ: ತೊರೆನೂರು ಪ್ರೇ0

Wednesday, 2 November 2011

ಕನ್ನಡ ಶಾಲೆಗಳಿಗೆ ಬೀಗ !



ಕಳ್ದ 15-20 ದಿನಂದ ಎಲ್ಲಾ ಕಡೆ ಹರಿದಾಡ್ತಿರೋ ಸುದ್ದಿತೇಳಿರೆ, ಕನ್ನಡ ಸ್ಕೂಲ್ಗಳ್ನ ಮುಚ್ಚಿವೆ ಗಡ ! ಹೌದು, ನಮ್ಮ ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗಡೆ ಕಾಗೇರಿನೇ ಇದನ್ನ ಹೇಳಿಯೊಳೊ. ಎಲ್ಲಿ 5ಕ್ಕಿಂತ ಕಡಿಮೆ ಮಕ್ಕ ಒಳನೋ ಆ ಸಕರ್ಾರಿ ಕನ್ನಡ ಸ್ಕೂಲ್ಗಳ್ನೆಲ್ಲಾ ಮುಚ್ಚಿಕೆ ಸಕರ್ಾರ ಆದೇಶ ಮಾಡ್ಯುಟ್ಟು. ಇದಕ್ಕೆ ಸಂಬಂಧಿಸಿದಂಗೆ ಕೆಲ್ಸನೂ ಶುರು ಆಗುಟ್ಟು. ಆದ್ರೆ ಇದ್ಕೆ ಕನ್ನಡಕ್ಕಾಗಿ ಹೋರಾಟ ಮಾಡೋವು ವಿರೋಧ ಮಾಡ್ಯೊಳೊ. ಹಿಂಗೆ ವಿರೋಧ ಬರ್ತಿದ್ದಂಗೆ, ಸಕರ್ಾರ ಮಾತ್ ಬದಲಿಸ್ಯುಟ್ಟು. ಶಾಲೆನ ಮುಚ್ಚುಲ್ಲೆ, ವಿಲೀನ ಮಾಡಿವೆ ಅಂತ ಮುಖ್ಯಮಂತ್ರಿ ಸದಾನಂದಗೌಡ ಮತ್ತೆ ಶಿಕ್ಷಣ ಮಂತ್ರಿ ಕಾಗೇರಿ ಹೇಳಿಯೊಳೊ. ಒಂದು ವೇಳೆ ಸಕರ್ಾರ ಹೇಳ್ತಿರೋ ಹಂಗೆ ಆತ್ತ ಆದ್ರೆ, ನಾವು, ನೀವು ಓದಿದ ಆ ಕನ್ನಡ ಶಾಲೆಗಳಿಗೆ ಬೀಗ ಬಿಳ್ದು ಗ್ಯಾರಂಟಿ.
ನಮ್ಮ ಕೊಡಗ್ಲಿ ಹಳ್ಳಿ ಹಳ್ಳೀಲಿ ಕನ್ನಡ ಶಾಲೆ ಉಟ್ಟು. ಹಂಗೆನೆ ಈಗ ಎಲ್ಲಾ ಕಡೆ ಕಾನ್ವೆಂಟ್ಗ ಕೂಡ ಶುರುವಾಗ್ಯೊಳೊ....ಇದ್ರಿಂದ ಕನ್ನಡ ಶಾಲೆಗಳಿಗೆ ಈಗ ಮಕ್ಕ ಹೋದು ಕಮ್ಮಿ. ಒಂದು ಸ್ಕೂಲ್ಲಿ 10 ಮಕ್ಕ ಇದ್ರೆ ಅದೇ ಜಾಸ್ತಿ. ಭಾಗಮಂಡಲ ಮಿಡ್ಲ್ ಸ್ಕೂಲ್ಲಿ ನಾವು ಓದುಕಾಕನ ಸುಮಾರು ನಾನೂರು ಮಕ್ಕ ಇದ್ದೊ. ಆಗ ಒಂದೊಂದು ಕ್ಲಾಸ್ಲೇ 60ರಿಂದ 70 ಮಕ್ಕ ಓದ್ತಿದ್ದೊ... ಈಗ ಅದೇ ಶಾಲೇಲಿ ಎಲ್ಲಾ ಮಕ್ಕ ಸೇರಿರೂ ಇಷ್ಟು ಸಂಖ್ಯೆ ಆಕಿಲ್ಲೆ. ಕೋರಂಗಾಲ, ಚೆಟ್ಟಿಮಾನಿ, ಚೇರಂಬಾಣೆ, ಬೆಟಗೇರಿ, ನಾಪೋಕ್ಲುಲಿ ಕಾನ್ವೆಂಟ್ಗ ಒಳೊ. ಅವ್ರದೇ ವ್ಯಾನ್ಲಿ ಬಂದ್ ಮಕ್ಕಳ್ನ ಕರ್ಕೊಂಡು ಹೋದವೆ. ಇನ್ನು ಅಪ್ಪ ಅಮ್ಮಂಗಂತೂ ನಮ್ಮ ಮಕ್ಕ ಇಂಗ್ಲಿಷ್ಲಿ ಓದಿರೇ ಮಾತ್ರ ಉದ್ಧಾರ ಆದು ಅನ್ನೋ ಹಂಗೆ ಆಗ್ಯುಟ್ಟು. ಇದ್ರಿಂದಾಗಿ ಭಾಗಮಂಡಲದಂಥ ಊರ್ಲಿ ಕನ್ನಡ ಶಾಲೆಗೆ ಮಕ್ಕ ಕಮ್ಮಿ ಆಗ್ತುಟ್ಟು. ಪರಿಸ್ಥಿತಿ ಹಿಂಗೆನೇ ಇದ್ರೆ, ಇನ್ನೊಂದು 2 ವರ್ಷಲಿ ಭಾಗಮಂಡಲ ಮಿಡ್ಲ್ ಸ್ಕೂಲ್ ಬಾಗ್ಲ್ಲಿ ಬೀಗ ನೋಡಿಕಾದು.
ಇನ್ನ್ ಮಡಿಕೇರಿ ಹತ್ರ ಮುಕ್ಕೋಡ್ಲು ತ ಒಂದು ಗ್ರಾಮ ಉಟ್ಟು. ನನ್ನ ಅಮ್ಮ, ಮಾವಂದಿರು, ಮಾವನ ಮಕ್ಕ ಎಲ್ಲಾ ಇಲ್ಲಿನ ಕನ್ನಡ ಸ್ಕೂಲ್ಲಿ ಓದಿದವು. ಆದ್ರೆ ಈಗ ಅಲ್ಲಿ ಒಂದು ಶಾಲೆ ಇತ್ತೇಳುವ ಯಾವುದೇ ಗುತರ್ು ಇಲ್ಲೆ. 10 ವರ್ಷ ಹಿಂದೆನೇ ಆ ಶಾಲೆ ಮುಚ್ಚಿಬಿಟ್ಟೊಳೊ. ಇದ್ ಸಕರ್ಾರ ಮುಚ್ಚಿದ್ ಅಲ್ಲ. ಆ ಊರವು ಮಕ್ಳನ್ನ ಮಡಿಕೇರಿ, ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ... ಹಿಂಗೆ ದೂರದ ಊರಿನ ಕಾನ್ವೆಂಟ್ಗಳಿಗೆ ಕಳಿಸಿಕೆ ಶುರುಮಾಡ್ದೊ... ಮುಕ್ಕೋಡ್ಲು ಸ್ಕೂಲ್ಗೆ ಒಬ್ಬ ಕೂಡ ಬರದಂಗೆ ಆತ್.. ಮಾಸ್ಟ್ರ್ ಒಂದೆರಡು ತಿಂಗ ನೋಡ್ದೊ.. ಹಿಂಗಾರೆ ಬೆಂಚ್ಗಳಿಗೆ ಪಾಠ ಮಾಡಿಕೆ ಆದುತೇಳಿ ಸ್ಕೂಲ್ ಮುಚ್ಚಿ ಬೇರೆ ಕಡೆಗೆ ಟ್ರಾನ್ಸ್ಫರ್ ತಕ್ಕಣ್ತ್. ಈಗ ಅಲ್ಲಿ ಕಷ್ಟ ಆಗಿರ್ದು ಬಡವ್ಕೆ. ದುಡ್ಡಿದ್ದವು ಸ್ಕೂಲ್ ವ್ಯಾಲ್ ಹತ್ತಿಸಿ ತಮ್ಮ ಮಕ್ಕಳನ್ನ ಕಳ್ಸಿವೆ. ಪಾಪ ದುಡ್ಡಿಲ್ದವ್ರ ಮಕ್ಕ ಮಣಬಾರದ ಬ್ಯಾಗ್ ಹಿಡ್ಕಂಡ್ 6 ಕಿಲೋಮೀಟರ್ ದೂರದ ಹಟ್ಟಿಹೊಳೆ ಸ್ಕೂಲ್ಗೆ ನಡ್ದವೆ.
ಸ್ಕೂಲ್ ಮಚ್ಚೋ ತೀಮರ್ಾನನ ಸಕರ್ಾರ ಸುಮ್ನೆ ತಕ್ಕಂಡಿರಿಕಿಲ್ಲೆ... ಸಕರ್ಾರದ ತೀಮರ್ಾನ ಹಿಂದೆ ನಮ್ಮ ಬೇಜವಾಬ್ದಾರಿನೂ ಉಟ್ಟು. ತುಂಬಾ ಮಕ್ಕ ಸಕರ್ಾರಿ ಶಾಲೆಗೆ ಹೋಗ್ತಿದ್ರೆ ಸಕರ್ಾರ ಶಾಲೆನ ಏಕೆ ಮುಚ್ಚಿದೆ ? ಹಂಗೆತ ಸಕರ್ಾರದ ನಿಧರ್ಾರ ಸರಿ ಅಂತ ನಾ ಹೇಳ್ದುಲೆ. ಸಕರ್ಾರಿ ಶಾಲೆಗಳ ಕಡೆ ಮಕ್ಕ ಮತ್ತೆ ಅಪ್ಪ ಅಮ್ಮ ಆಕಷರ್ಿತ ಆಗೋ ಹಂಗೆ ಮಾಡೋ ಕೆಲ್ಸ ಸಕರ್ಾರದ್ದ್. ಅದ್ಬಿಟ್ ಮುಚ್ಚೋ ನಿಧರ್ಾರ ಸರಿ ಅಲ್ಲ. ಇದ್ರಿಂದ ಕಷ್ಟ ಆದು ಬಡವರ ಮಕ್ಕಳಿಗೆ...ಕೊಡಗಿನಂತ ಬೆಟ್ಟಗುಡ್ಡ ಪ್ರದೇಶದಲ್ಲಿ ಇರೋವ್ಕೆ...
ಸಕರ್ಾರದ ನಿಧರ್ಾರಕ್ಕೆ ಈಗ ಬರ್ತಿರೋ ವಿರೋಧ ನೋಡಿರೆ ಶಾಲೆಗಳ್ನ ಮುಚ್ಚಿಕ್ಕಿಲ್ಲೆ ಅಂತ ಕಂಡದೆ. ಆದ್ರೆ ಸಕರ್ಾರ ಹಠ ಮುಂದುವರೆಸಿರೆ ಅದ್ ನಮ್ಮ ದುರಾದೃಷ್ಟ. ಅಲ್ಲಿ ಕನ್ನಡಕ್ಕೆ ಮಾತ್ರ ಅಪಾಯ ಅಲ್ಲ. ಅರೆಭಾಷೆ, ಕೊಡವದಂತ ಸಣ್ಣ ಸಣ್ಣ ಭಾಷೆಗಳ ಮೇಲೂ ಎಫೆಕ್ಟ್ ಆದೆ.

- ಪೊನ್ನೇಟಿ ಬಿ. ಸುನಿಲ್
ಭಾಗಮಂಡಲ

ನೀವೂ ಬರೆಯನಿ....          

ಕುಡೆಕಲ್ ಸಂತೋಷ್ಗೆ ಪ್ರಶಸ್ತಿ


ಕುಡೆಕಲ್ ಸಂತೋಷ್ ಅವ್ಕೆ ಈ ಸಲದ ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕುಟ್ಟು. ಪತ್ರಿಕೋದ್ಯಮದಲ್ಲಿ ಅವ್ರ ಈ ಸೇವೆನೆ ಗುತರ್ಿಸಿ ಕೊಡಗು ಜಿಲ್ಲಾಡಳಿತ ಈ ಪ್ರಶಸ್ತಿಗೆ ಅವ್ರನ್ನ ಆಯ್ಕೆ ಮಾಡ್ಯುಟ್ಟು. ಮೊನ್ನೆ 1ನೇ ತಾರೀಕಿಗೆ ಮಡಿಕೇರೀಲಿ ನಡ್ದ ರಾಜ್ಯೋತ್ಸವ ಸಮಾರಂಭದಲ್ಲಿ ಸಂತೋಷ್ಗೆ ಪ್ರಶಸ್ತಿ ಕೊಟ್ಟೊ. ಕಾಮರ್ಿಕ ಮಂತ್ರಿ ಬಚ್ಚೇಗೌಡ, ಸಂತೋಷ್ಗೆ ಸಾಲು ಹೊದ್ಸಿ, ಫಲ ತಾಂಬೂಲ ಕೊಟ್ಟು ಗೌರವಿಸಿದೊ...ಕುಡೇಕಲ್ ಸಂತೋಷ್ ಕೊಡಗಿನ `ಶಕ್ತಿ' ಪೇಪರ್ಲಿ ಉಪಸಂಪಾದಕರಾಗಿ ಕೆಲ್ಸ ಮಾಡ್ತೊಳೊ. ಒಳ್ಳೇ ಬರಹಗಾರ. ಈ ಹಿಂದೆನೂ ಇವ್ಕೆ ತುಂಬಾ ಪ್ರಶಸ್ತಿಗ ಬಂದುಟ್ಟು....
ಕುಡೆಕಲ್ ಸಂತೋಷ್ಗೆ `ಅರೆಭಾಷೆ' ಅಭಿನಂದನೆ...
ಸಂತೋಷ್ ನಂಬರ್ -  9845807710

ನೀವೂ ಬರೆಯನಿ...

ಅಣ್ಣಿ ಹೈದನೂ... ಅಮ್ಮಿ ಗೂಡೆನೂ !


ಅಣ್ಣಿ ಹೈದಂಗೆ ಅಮ್ಮಿ ಗೂಡೆ ಮೇಲೆ ಕಣ್ಣ್ಬಿತ್ತ್
ಅವನೋ ಎಸ್ಎಸ್ಎಲ್ಸಿ ಫೇಲ್... ಗದ್ದೆ ಹೂಡೀಕೆ ಹೊರಟುಟ್ಟು
ಅವ್ಳೀಗ ಬಿಎ ಓದ್ತುಟ್ಟು... ಲಾಯರ್ ಆಗೋ ಕನಸುಟ್ಟು !
ಅಣ್ಣಿ ಹೈದಂಗೆ ಅಮ್ಮಿ ಗೂಡೆ ಮೇಲೆ ಮನಸಾತ್
ಲಾಯ್ಕ ಕಾಫಿ ತೋಟ ಮಾಡ್ಯುಟ್ಟು.. ಬೈಕ್ನೂ ತಗೊಂಡುಟ್ಟು !
ಅಮ್ಮಿ ಈಗ ಲಾಯರ್...! ಮೈಮೇಲೆ ಕರಿಕೋಟು ಹಾಕಿಟ್ಟು
ಅಣ್ಣಿ ಹೈದ ಅಮ್ಮಿ ಗೂಡೆನ ಮದುವೆ ಆಗೋಕೆ ಹೊರಟುಟ್ಟು
ಕಾಫಿಗೆ ಒಳ್ಳೇ ರೇಟ್ ಬಂದುಟ್ಟು... ಬೋಡರ್ಿಂಗ್ ಬುಕ್ ಮಾಡ್ಯುಟ್ಟು
ಅಮ್ಮಿ ಬೆಂಗಳೂರು ಬಸ್ ಹತ್ತಿತ್... ಅವ್ಳ ಕ್ಲಾಸ್ಮೆಟ್ ಕರೀತಿತ್ತ್...
ಪಾಪ ಅಣ್ಣಿ ಹೈದ ! ಅಮ್ಮಿಗೆ ಇನ್ನೂ ಕಾಯ್ತುಟ್ಟು...
ಆದ್ರೆ....
`ನೀವು ಕರೆ ಮಾಡಿದ ಚಂದದಾರರು ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ'
   
- `ಸುಮಾ'

ನೀವೂ ಬರೆಯನಿ...