Friday, 11 November 2011

ಮೊದಲ ಟಿವಿ ಕಥೆ


ಮಳೆಂತೇಳಿರೇ ಕಣ್ಮುಂದೆ ಬಾದು ಭಾಗಮಂಡಲ. ಒಂದ್ಸಲ ಮಳೆ ಶುರುವಾತುಂತೇಳಿರೆ ಜಾತ್ರೆ ವರೆಗೆ ಬಿಡದೇ ಸುರೀತ್ತಿದ್ದದೆ. ಸರಿಯಾಗಿ ಬಿಸಿಲು ಇರ್ದು 6 ತಿಂಗ ಮಾತ್ರ. ಇನ್ನು ಅಲ್ಲಿ ಸುತ್ತ ಮುತ್ತ ಇರ್ವ ಹಳ್ಳಿಗಳಲ್ಲಿ ಇರವ್ರ ಪಾಡಂತೂ ದೇವ್ರಿಗೇ ಪ್ರೀತಿ. ಇದು ಈಗನ ಕಥೆ ಅಲ್ಲ... 30-40 ವರ್ಷ ಹಿಂಗೆ ಇತ್. ಈಗ ಬುಡಿ ಮಳೆ ಬಾಕೆ ಅಲ್ಲಿ ಕಾಡು ಇದ್ದ್ರೆ ತಾನೆ. ಕಾಡೆಲ್ಲಾ ಹೋಗಿ ತೋಟಗ ಬಂದೊಳೊ. ಮಳೆ ಬಂದ್ರೂ ಆಗ ಬರ್ತಿದ್ದಂಗೆ ಜೋರಾಗಿ ಬಾದುಲೆ.
ಅದು 1985-86 ಇರೋಕು ಕಂಡದೆ. ಭಾಗಮಂಡಲದಂಥ ಮಳೆ ಊರಿಗೆ ಮೊದ್ಲ ಸಲ ಟಿವಿ ಬಾತ್. ಅದ್ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ. ರೇಡಿಯೋ ರಿಪೇರಿ ಮಾಡೋ ರಮೇಶ ಈ ಟಿವಿ ತಂದಿತ್ತ್. ಎಲ್ಲೋ ದೂರಲಿ ನಡ್ದದ್ನ ಈ ಟಿವಿ ತೋರ್ಸಿದೆ ಗಡ ಅಂತ ಹೇಳ್ದು ಆಗಿನ ಕಾಲಕ್ಕೆ ದೊಡ್ಡ ವಿಶೇಷ ! ಎಲ್ಲವೂ ರಮೇಶನ ಅಂಗಡಿ ಮುಂದೆ ಸೇರಿದ್ದೊ...ಟಿವಿ ನೋಡಿಕೆ. ಅದಿಕ್ಕೆ ರೇಡಿಯೋಕ್ಕೆ ಇದ್ದಂಗೆ ಒಂದು ಏರಿಯಲ್ ಇತ್... ಅದ್ನ ಮೇಲಕ್ಕೆ ಎಳ್ದ್ ರಮೇಶ ಟಿವಿ ಆನ್ ಮಾಡ್ತ್. ಎಲ್ಲವೂ ಬಿಟ್ಟ ಕಣ್ ಬಿಟ್ಟಹಂಗೆ ನೋಡ್ತಿದ್ದೋ...ಊಹುಂ, ಟಿವಿ ಒಳಗೆ ಬಿಳಿ ಬಿಳಿ ಚುಕ್ಕಿ ಬಿಟ್ರೆ ಬೇರೆಂತನೂ ಕಾಣ್ತಿಲ್ಲೆ! ಎಲ್ಲವ್ಕೆ ರಮೇಶನ ಮೇಲೆ ಸಿಟ್ಟ್ ಬಾತ್. ಇಂವ ಸುಮ್ನೆ ನಮ್ಮನ್ನ ಮಂಗ ಮಾಡಿಕೆ ಹಿಂಗೆಲ್ಲಾ ಮಾಡ್ತುಟ್ಟುತ ಅವ್ನೊಟ್ಟಿಗೆ ಜಗಳಕ್ಕೆ ನಿಂತೊ...`ಭಾಗಮಂಡಲ ಎತ್ತರಲಿ ಉಟ್ಟು. ಸುತ್ತ ಕಾಡ್ ಬೇರೆ. ಅದ್ಕೆ ಸಿಗ್ನಲ್ ಸಿಕ್ಕುಲೆ...ನಾಳೆ ಬನ್ನಿ, ಆ್ಯಂಟೆನಾ ಕಟ್ಟಿ ನಿಮ್ಗೆ ಪಿಚ್ಚರ್ ತೋರ್ಸಿನೆ' ಅಂತ ಹೇಳೆ ಎಲ್ಲರನ್ನ ವಾಪಸ್ ಕಳ್ಸಿತ್ತ್.
ಅಂತೂ ಆ ನಾಳೆ ಬಂದೇಬಿಡ್ತ್. ಬೆಳಗ್ಗೆನೇ ಎಲ್ಲವೂ ರಮೇಶನ ಅಂಗ್ಡಿ ಹತ್ರ ಬಂದೋ... ನೋಡಿರೇ ಅಂಗಡಿಗೆ ದೊಡ್ಡ ಬೀಗ ! ರಮೇಶನ ಮೇಲೆ ಎಲ್ಲವ್ಕೂ ಏನೋ ಅನುಮಾನ. `ಇಂವ ನಮ್ಗೆ ನಿನ್ನೆ ಸರಿಯಾಗಿ ಟೊಪ್ಪಿ ಹಾಕಿತ್ರಾ..' ಅಂತ ಹೇಳ್ಕಂಡ್ ಎಲ್ಲಾ ಜಾಗ ಖಾಲಿ ಮಾಡ್ದೊ... ಸಾಯಂಕಾಲ 3 ಗಂಟೆ ಇರ್ದು... ರಮೇಶನ ಅಂಗಡಿ ತೆಗ್ದಿತ್ತ್ ! ಕಬ್ಬಿಣದ ಉದ್ದ ರಾಡ್ಗೆ ಅದೆಂಥದ್ದೋ ಚಿಕ್ಕ ಚಿಕ್ಕ ಅಲ್ಯೂಮೀನಿಯಂ ಕಡ್ಡಿಗಳ್ನ ಫಿಟ್ ಮಾಡ್ತಿತ್ತ್... ಇದ್ ಪುಟ್ಟುನ ಕಣ್ಣಿಗೆ ಬಿತ್... ಈ ವಿಷಯನ ಊರು ಪೂತರ್ಿ ಟಾಂ ಟಾಂ ಮಾಡ್ತ್. ಮತ್ತೆ ನಿನ್ನೆನಂಗೆನೇ ಇಂದೂ ರಮೇಶನ ಅಂಗಡಿ ಮುಂದೆ ತುಂಬಾ ಜನ ಸೇರ್ದೊ. ಬೆಳಗ್ಗೆ ಅಂವ ಆ್ಯಂಟೆನಾ ತಕ್ಕೊಂಡು ಬಾಕೆ ಮಡಿಕೇರಿಗೆ ಹೋಗಿತ್ತ್. ಅದ್ನೇ ಈಗ ಫಿಟ್ ಮಾಡ್ತಿತ್ತ್... ಬುದ್ಧ ಆಗ್ಲೇ ಮಾಡಿ ಮೇಲೆ ಹತ್ತಿ ಕೂತಿತ್ತ್. ಅಂಗಡೀಲಿ ಟೇಬಲ್ ಮೇಲಿದ್ದ ಟಿವಿ ನಿನ್ನೆ ತರನೇ ಬಿಳಿ ಬಿಳಿ ಚುಕ್ಕಿಗಳ್ನ ತೋರ್ಸ್ತ್ತಿತ್ತ್.. ಸ್ವಲ್ಪ ವ್ಯತ್ಯಾಸ ಅಂದ್ರೆ, ಆ್ಯಂಟೆನಾ ಸ್ವಲ್ಪ ಅಲ್ಲಾಡಿರೂ ಕಪ್ಪು ಅಡ್ಡಡ್ಡ ಗೆರೆ ಕಾಣಿಸ್ತಿತ್ತ್. ಬುದ್ಧ ಮೇಲೆ ನಿಂತ್ಕಂಡ್ ಆ್ಯಂಟೆನಾ ಎತ್ತಿದಂಗೆ ಟಿವಿಲಿ ಏನೋ ಬರೆ ಬರೆ ಕಂಡಂಗೆ ಆಗ್ತಿತ್ತ್. `ಓ ಬುದ್ಧ ಟಿವಿಲಿ ಬರ್ತುಟ್ಟು' ತಾ ಅಲ್ಲಿ ಸೇರಿದ್ದವೆಲ್ಲಾ ಹೇಳಿಕೆ ಶುರು ಮಾಡ್ದೊ...
ಕೊನೆಗೆ ಸಾಯಂಕಾಲ ಆಗ್ತಿದ್ದಂಗೆ ರಮೇಶನ ಅಂಗಡಿ ಮಾಡಿ ಮೇಲೆ ಟಿವಿ ಆ್ಯಂಟೆನಾ ಫಿಟ್ ಮಾಡಿ ಆತ್... ಆದ್ರೆ ಟಿವಿಲಿ ಮಾತ್ರ ಅಡ್ಡ ಕಪ್ಪುಗೆರೆ ಬಿಟ್ರೆ ಬೇರೆಂಥ ಕಾಣ್ತಿತ್ಲೆ. ಮೇಲೆ ಕೂತಿದ್ದ ಬುದ್ಧಂಗೆ ಆ್ಯಂಟೆನಾ ತಿರುಗ್ಸೋ ಕೆಲ್ಸ. ಕೆಳ್ಗೆ ಕುದ್ದಿದ್ದ ರಮೇಶ `ಏ ಬುದ್ಧ... ಲೆಫ್ಟ್ಗೆ ತಿರುಗ್ಸ್ರಾ...ರೈಟ್ಗೆ ತಿರುಗ್ಸ್ರಾ' ಹೇಳ್ತನೇ ಇತ್ತ್... ಅಷ್ಟೊತ್ತಿಗೆ ಟಿವಿಲಿ ಮಲೆಯಾಳಂ ವಾಯ್ಸ್ ಕೇಳಿಕೆ ಶುರುವಾತು... ಬುದ್ಧ ಆ್ಯಂಟೆನನಾ ಇನ್ನುಂಚೂರು ತಿರುಗ್ಸಿಕಾಕನ ಏನೋ ಗೊಂಬೆಗ ಕಂಡ ಹಂಗೆ ಆತ್...`ನಿಲ್ಸ್...ನಿಲ್ಸ್' ರಮೇಶನ ಬೊಬ್ಬೆ... ಅಂವ ಮತ್ತೆ ಟಿವಿ ಹತ್ರ ಬಂದ್ ಮತ್ತೆ ಯಾವುದೋ ಬಟನ್ಗಳ್ನೆಲ್ಲಾ ಒತ್ತಿ ಏನೇನೋ ಮಾಡ್ತ್.... ಆಶ್ಚರ್ಯ...ಮಲೆಯಾಳಂ ಪಿಚ್ಚರ್ ಬರ್ತಿತ್ತ್... ರಮೇಶ ಹೇಳ್ತ್ `ಅದ್ ತಿರುವನಂತಪುರಂ ಸ್ಟೇಷನ್' ಆ ದಿನ ಭಾಗಮಂಡಲದವ್ಕೆ ರಮೇಶ ದೊಡ್ಡ ಹೀರೋ....ಟಿವಿಂಥೇಳಿರೆ ಏನೂತಾ ಮೊದ್ಲ ಸಲ ಆ ಊರಿಗೆ ಅಂವ ಹೇಳಿಕೊಟ್ಟಿತ್ತ್ !


- ಸುನಿಲ್ ಪೊನ್ನೇಟಿ,
ಭಾಗಮಂಡಲ

No comments:

Post a Comment