ಆಗಷ್ಟೇ ದೇವೇಗೌಡ ಪ್ರಧಾನಿ ಪೋಸ್ಟ್ಂದ ಕೆಳಗೆ ಇಳ್ದಿದ್ದೊ. ಡೆಲ್ಲಿಂದ ವಾಪಸ್ ಬಂದ್ ಒಂದೆರಡು ತಿಂಗ ಆಗಿರೋಕೇನೋ... ಮಟ ಮಟ ಮಧ್ಯಾಹ್ನ ಮಡಿಕೇರಿಗೆ ಬಂದ್ಬಿಟ್ಟಿದ್ದೋ. ಮಾಜಿ ಪ್ರಧಾನಿ ಅಂದ್ರೆ ಕೇಳೋಕ, ಜೊತೇಲಿ ಎಕೆ 47 ಹಿಡ್ಕಂಡ ಬ್ಲ್ಯಾಕ್ ಕ್ಯಾಟ್ ಕಮಾಂಡೋಗ ಇದ್ದೊ. ಸುದರ್ಶನ ಗೆಸ್ಟ್ಹೌಸ್ಲಿ ಪ್ರೆಸ್ಮೀಟ್ಗೆ ಎಲ್ಲಾ ವ್ಯವಸ್ಥೆ ಆಗಿತ್ತ್. ಮಾಜಿ ಪ್ರಧಾನಿಗ ಏನು ಹೇಳುವಪ್ಪಾ ತ ಪತ್ರಕರ್ತರಿಗೆಲ್ಲಾ ಕುತೂಹಲ. ಆದ್ರೆ ಒಬ್ಬ ಪತ್ರಕರ್ತಂಗೆ ಮಾತ್ರ ಹೊಟ್ಟೆ ಹಸಿದ್ ತಾಳ ಹಾಕ್ತಿತ್ತ್. ಅದ್ಕೆ ಸರಿಯಾಗಿ ಗೆಸ್ಟ್ ಹೌಸ್ಲಿ ರೆಡಿ ಮಾಡ್ದ ಊಟ ಘಮ ಘಮತಾ ಹೇಳ್ತಿತ್ತ್... ಈ ಪತ್ರಕರ್ತ ಊಟಕ್ಕೆ ಫೇಮಸ್. ಅಂವ ಏನು ಬೇಕಾರ್ ತಡ್ಕಂಬೊದು. ಹೊಟ್ಟೆ ಹಸಿವಾದ್ರೆ ಮಾತ್ರ ಮನುಷ್ಯನೇ ಆಗಿರ್ದುಲ್ಲೆ... ಇದು ಬೇರೆ ಪತ್ರಕರ್ತರಿಗೂ ಗೊತ್ತಿರೋ ವಿಷ್ಯನೇ... ದೇವೇಗೌಡರ ಪ್ರೆಸ್ಮೀಟ್ ಶುರುವಾಗಿತ್ತ್. ದೇವೇಗೌಡ ಮಾತಾಡ್ದು ಗೊತ್ತಲ್ಲಾ... ಒಂದೊಂದು ಲೈನ್ ಹೇಳೋಕಾದ್ರೂ ಗಂಟೆಗಟ್ಲೆ ಟೈಂ ಬೇಕು ಅವ್ಕೆ. ನಮ್ಮ ಈ ಹೊಟ್ಟೆಬಾಕ ಪತ್ರಕರ್ತಂಗೆ ಮಾತ್ರ ತಡ್ಕಂಬಕೆ ಆಗ್ತಿಲ್ಲೆ... ಎದ್ದ್ ಆಚೀಚೆ ಓಡಾಡಿಕೆ ಸ್ಟಾಟರ್್ ಮಾಡ್ತ್... 10 ನಿಮಿಷ ಆಚೆಈಚೆ ಓಡಾಡ್ತ ಇದ್ದ ಆ ಮನುಷ್ಯ ಸ್ವಲ್ಪ ಹೊತ್ತು ಕಳ್ದು ನೋಡಿರೇ ನಾಪತ್ತೆ ! `ಓ ಇಂವ ಊಟಕ್ಕೆ ಹೋಗಿರೋಕೇನೋ' ತೇಳಿ ಬೇರೆ ಪತ್ರಕರ್ತರೆಲ್ಲಾ ಪ್ರೆಸ್ಮೀಟ್ಲಿ ಬ್ಯುಸಿ ಆದೋ... ಕೊನೆಗೊಮ್ಮೆ ದೇವೇಗೌಡ ಪ್ರೆಸ್ಮೀಟ್ ಮುಗ್ದ್, ಎಲ್ಲವ್ಕೆ ಭರ್ಜರಿ ಊಟನೂ ಕೊಡ್ಸಿದೊ. ಆದ್ರೂ ಆ ಪತ್ರಕರ್ತ ಮಾತ್ರ ಎಲ್ಲಿ ಹೋತ್ತೇಳಿ ಯಾರಿಗೂ ಗೊತ್ತಾತ್ಲೇ. ಇನ್ನ್ ದೇವೇಗೌಡ ಸುದರ್ಶನ ಗೆಸ್ಟ್ಹೌಸ್ಂದ ಹೊರಡೋ ಟೈಂ ಆತ್, ಊಹುಂ... ಆ ಪತ್ರಕರ್ತ ಮಾತ್ರ ಕಾಂಬದೇ ಇಲ್ಲೆ!
ಹೊರಗಡೆ ಬ್ಲ್ಯಾಕ್ಕ್ಯಾಟ್ ಕಮಾಂಡೋಗಳ್ದ್ ಬೊಬ್ಬೆನೋ ಬೊಬ್ಬೆ. ಹಿಂದಿಲಿ ಏನೇನೋ ಜೋರಾಗಿ ಬಾಯಿಬಡಿತ್ತೊಳೊ... ಅವ್ರ ಮಧ್ಯೆಲಿ ಯಾರೋ ಒಬ್ಬ ಕುದ್ದುಕ್ಕೊಂಡುಟ್ಟು. ಹತ್ರ ಹೋಗಿ ನೋಡಿರೇ ಆ ನಮ್ಮ ಪತ್ರಕರ್ತ! ಅಂವ ಒಳ್ಳೆ ಕಳ್ಳರ ಹಂಗೆ ಆಚೀಚೆ ಓಡಾಡ್ದುನ ನೋಡ್ದ ಕಮಾಂಡೋಗ ಅನುಮಾನದ ಮೇಲೆ ತಮ್ಮ ವಶಕ್ಕೆ ತೆಗ್ದ್ಕೊಂಡ್ಬಿಟ್ಟಿದ್ದೊ. ಅವ್ಕೆ ಕನ್ನಡ ಗೊತ್ಲೆ. ಇವಂಗೆ ಹಿಂದಿ ಬಾದುಲ್ಲೆ. ಕೊನೆಗೆ ದೇವೇಗೌಡ್ರ ಜೊತೇಲಿದ್ದ ಎಂ ಸಿ ನಾಣಯ್ಯ ಹೇಳ್ದ ಮೇಲೆ ಕಮಾಂಡೋಗ ಈ ಪತ್ರಕರ್ತನ ಬಿಟ್ಟೊ. ಪಾಪ... ಅವಂಗೆ ಊಟನೂ ಇಲ್ಲೆ... ಕೊನೆಗೆ ದೇವೇಗೌಡರ ಪ್ರೆಸ್ಮೀಟ್ನೂ ಸಿಕ್ತ್ಲೆ...
- `ಸುಮಾ'
ನೀವೂ ಬರೆಯನಿ...
arebhase@gmail.com
No comments:
Post a Comment