ಕಳ್ದ 15-20 ದಿನಂದ ಎಲ್ಲಾ ಕಡೆ ಹರಿದಾಡ್ತಿರೋ ಸುದ್ದಿತೇಳಿರೆ, ಕನ್ನಡ ಸ್ಕೂಲ್ಗಳ್ನ ಮುಚ್ಚಿವೆ ಗಡ ! ಹೌದು, ನಮ್ಮ ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗಡೆ ಕಾಗೇರಿನೇ ಇದನ್ನ ಹೇಳಿಯೊಳೊ. ಎಲ್ಲಿ 5ಕ್ಕಿಂತ ಕಡಿಮೆ ಮಕ್ಕ ಒಳನೋ ಆ ಸಕರ್ಾರಿ ಕನ್ನಡ ಸ್ಕೂಲ್ಗಳ್ನೆಲ್ಲಾ ಮುಚ್ಚಿಕೆ ಸಕರ್ಾರ ಆದೇಶ ಮಾಡ್ಯುಟ್ಟು. ಇದಕ್ಕೆ ಸಂಬಂಧಿಸಿದಂಗೆ ಕೆಲ್ಸನೂ ಶುರು ಆಗುಟ್ಟು. ಆದ್ರೆ ಇದ್ಕೆ ಕನ್ನಡಕ್ಕಾಗಿ ಹೋರಾಟ ಮಾಡೋವು ವಿರೋಧ ಮಾಡ್ಯೊಳೊ. ಹಿಂಗೆ ವಿರೋಧ ಬರ್ತಿದ್ದಂಗೆ, ಸಕರ್ಾರ ಮಾತ್ ಬದಲಿಸ್ಯುಟ್ಟು. ಶಾಲೆನ ಮುಚ್ಚುಲ್ಲೆ, ವಿಲೀನ ಮಾಡಿವೆ ಅಂತ ಮುಖ್ಯಮಂತ್ರಿ ಸದಾನಂದಗೌಡ ಮತ್ತೆ ಶಿಕ್ಷಣ ಮಂತ್ರಿ ಕಾಗೇರಿ ಹೇಳಿಯೊಳೊ. ಒಂದು ವೇಳೆ ಸಕರ್ಾರ ಹೇಳ್ತಿರೋ ಹಂಗೆ ಆತ್ತ ಆದ್ರೆ, ನಾವು, ನೀವು ಓದಿದ ಆ ಕನ್ನಡ ಶಾಲೆಗಳಿಗೆ ಬೀಗ ಬಿಳ್ದು ಗ್ಯಾರಂಟಿ.
ನಮ್ಮ ಕೊಡಗ್ಲಿ ಹಳ್ಳಿ ಹಳ್ಳೀಲಿ ಕನ್ನಡ ಶಾಲೆ ಉಟ್ಟು. ಹಂಗೆನೆ ಈಗ ಎಲ್ಲಾ ಕಡೆ ಕಾನ್ವೆಂಟ್ಗ ಕೂಡ ಶುರುವಾಗ್ಯೊಳೊ....ಇದ್ರಿಂದ ಕನ್ನಡ ಶಾಲೆಗಳಿಗೆ ಈಗ ಮಕ್ಕ ಹೋದು ಕಮ್ಮಿ. ಒಂದು ಸ್ಕೂಲ್ಲಿ 10 ಮಕ್ಕ ಇದ್ರೆ ಅದೇ ಜಾಸ್ತಿ. ಭಾಗಮಂಡಲ ಮಿಡ್ಲ್ ಸ್ಕೂಲ್ಲಿ ನಾವು ಓದುಕಾಕನ ಸುಮಾರು ನಾನೂರು ಮಕ್ಕ ಇದ್ದೊ. ಆಗ ಒಂದೊಂದು ಕ್ಲಾಸ್ಲೇ 60ರಿಂದ 70 ಮಕ್ಕ ಓದ್ತಿದ್ದೊ... ಈಗ ಅದೇ ಶಾಲೇಲಿ ಎಲ್ಲಾ ಮಕ್ಕ ಸೇರಿರೂ ಇಷ್ಟು ಸಂಖ್ಯೆ ಆಕಿಲ್ಲೆ. ಕೋರಂಗಾಲ, ಚೆಟ್ಟಿಮಾನಿ, ಚೇರಂಬಾಣೆ, ಬೆಟಗೇರಿ, ನಾಪೋಕ್ಲುಲಿ ಕಾನ್ವೆಂಟ್ಗ ಒಳೊ. ಅವ್ರದೇ ವ್ಯಾನ್ಲಿ ಬಂದ್ ಮಕ್ಕಳ್ನ ಕರ್ಕೊಂಡು ಹೋದವೆ. ಇನ್ನು ಅಪ್ಪ ಅಮ್ಮಂಗಂತೂ ನಮ್ಮ ಮಕ್ಕ ಇಂಗ್ಲಿಷ್ಲಿ ಓದಿರೇ ಮಾತ್ರ ಉದ್ಧಾರ ಆದು ಅನ್ನೋ ಹಂಗೆ ಆಗ್ಯುಟ್ಟು. ಇದ್ರಿಂದಾಗಿ ಭಾಗಮಂಡಲದಂಥ ಊರ್ಲಿ ಕನ್ನಡ ಶಾಲೆಗೆ ಮಕ್ಕ ಕಮ್ಮಿ ಆಗ್ತುಟ್ಟು. ಪರಿಸ್ಥಿತಿ ಹಿಂಗೆನೇ ಇದ್ರೆ, ಇನ್ನೊಂದು 2 ವರ್ಷಲಿ ಭಾಗಮಂಡಲ ಮಿಡ್ಲ್ ಸ್ಕೂಲ್ ಬಾಗ್ಲ್ಲಿ ಬೀಗ ನೋಡಿಕಾದು.
ಇನ್ನ್ ಮಡಿಕೇರಿ ಹತ್ರ ಮುಕ್ಕೋಡ್ಲು ತ ಒಂದು ಗ್ರಾಮ ಉಟ್ಟು. ನನ್ನ ಅಮ್ಮ, ಮಾವಂದಿರು, ಮಾವನ ಮಕ್ಕ ಎಲ್ಲಾ ಇಲ್ಲಿನ ಕನ್ನಡ ಸ್ಕೂಲ್ಲಿ ಓದಿದವು. ಆದ್ರೆ ಈಗ ಅಲ್ಲಿ ಒಂದು ಶಾಲೆ ಇತ್ತೇಳುವ ಯಾವುದೇ ಗುತರ್ು ಇಲ್ಲೆ. 10 ವರ್ಷ ಹಿಂದೆನೇ ಆ ಶಾಲೆ ಮುಚ್ಚಿಬಿಟ್ಟೊಳೊ. ಇದ್ ಸಕರ್ಾರ ಮುಚ್ಚಿದ್ ಅಲ್ಲ. ಆ ಊರವು ಮಕ್ಳನ್ನ ಮಡಿಕೇರಿ, ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ... ಹಿಂಗೆ ದೂರದ ಊರಿನ ಕಾನ್ವೆಂಟ್ಗಳಿಗೆ ಕಳಿಸಿಕೆ ಶುರುಮಾಡ್ದೊ... ಮುಕ್ಕೋಡ್ಲು ಸ್ಕೂಲ್ಗೆ ಒಬ್ಬ ಕೂಡ ಬರದಂಗೆ ಆತ್.. ಮಾಸ್ಟ್ರ್ ಒಂದೆರಡು ತಿಂಗ ನೋಡ್ದೊ.. ಹಿಂಗಾರೆ ಬೆಂಚ್ಗಳಿಗೆ ಪಾಠ ಮಾಡಿಕೆ ಆದುತೇಳಿ ಸ್ಕೂಲ್ ಮುಚ್ಚಿ ಬೇರೆ ಕಡೆಗೆ ಟ್ರಾನ್ಸ್ಫರ್ ತಕ್ಕಣ್ತ್. ಈಗ ಅಲ್ಲಿ ಕಷ್ಟ ಆಗಿರ್ದು ಬಡವ್ಕೆ. ದುಡ್ಡಿದ್ದವು ಸ್ಕೂಲ್ ವ್ಯಾಲ್ ಹತ್ತಿಸಿ ತಮ್ಮ ಮಕ್ಕಳನ್ನ ಕಳ್ಸಿವೆ. ಪಾಪ ದುಡ್ಡಿಲ್ದವ್ರ ಮಕ್ಕ ಮಣಬಾರದ ಬ್ಯಾಗ್ ಹಿಡ್ಕಂಡ್ 6 ಕಿಲೋಮೀಟರ್ ದೂರದ ಹಟ್ಟಿಹೊಳೆ ಸ್ಕೂಲ್ಗೆ ನಡ್ದವೆ.
ಸ್ಕೂಲ್ ಮಚ್ಚೋ ತೀಮರ್ಾನನ ಸಕರ್ಾರ ಸುಮ್ನೆ ತಕ್ಕಂಡಿರಿಕಿಲ್ಲೆ... ಸಕರ್ಾರದ ತೀಮರ್ಾನ ಹಿಂದೆ ನಮ್ಮ ಬೇಜವಾಬ್ದಾರಿನೂ ಉಟ್ಟು. ತುಂಬಾ ಮಕ್ಕ ಸಕರ್ಾರಿ ಶಾಲೆಗೆ ಹೋಗ್ತಿದ್ರೆ ಸಕರ್ಾರ ಶಾಲೆನ ಏಕೆ ಮುಚ್ಚಿದೆ ? ಹಂಗೆತ ಸಕರ್ಾರದ ನಿಧರ್ಾರ ಸರಿ ಅಂತ ನಾ ಹೇಳ್ದುಲೆ. ಸಕರ್ಾರಿ ಶಾಲೆಗಳ ಕಡೆ ಮಕ್ಕ ಮತ್ತೆ ಅಪ್ಪ ಅಮ್ಮ ಆಕಷರ್ಿತ ಆಗೋ ಹಂಗೆ ಮಾಡೋ ಕೆಲ್ಸ ಸಕರ್ಾರದ್ದ್. ಅದ್ಬಿಟ್ ಮುಚ್ಚೋ ನಿಧರ್ಾರ ಸರಿ ಅಲ್ಲ. ಇದ್ರಿಂದ ಕಷ್ಟ ಆದು ಬಡವರ ಮಕ್ಕಳಿಗೆ...ಕೊಡಗಿನಂತ ಬೆಟ್ಟಗುಡ್ಡ ಪ್ರದೇಶದಲ್ಲಿ ಇರೋವ್ಕೆ...
ಸಕರ್ಾರದ ನಿಧರ್ಾರಕ್ಕೆ ಈಗ ಬರ್ತಿರೋ ವಿರೋಧ ನೋಡಿರೆ ಶಾಲೆಗಳ್ನ ಮುಚ್ಚಿಕ್ಕಿಲ್ಲೆ ಅಂತ ಕಂಡದೆ. ಆದ್ರೆ ಸಕರ್ಾರ ಹಠ ಮುಂದುವರೆಸಿರೆ ಅದ್ ನಮ್ಮ ದುರಾದೃಷ್ಟ. ಅಲ್ಲಿ ಕನ್ನಡಕ್ಕೆ ಮಾತ್ರ ಅಪಾಯ ಅಲ್ಲ. ಅರೆಭಾಷೆ, ಕೊಡವದಂತ ಸಣ್ಣ ಸಣ್ಣ ಭಾಷೆಗಳ ಮೇಲೂ ಎಫೆಕ್ಟ್ ಆದೆ.
- ಪೊನ್ನೇಟಿ ಬಿ. ಸುನಿಲ್
ಭಾಗಮಂಡಲ
ನೀವೂ ಬರೆಯನಿ....
No comments:
Post a Comment