ಹಿಂದೆ ಒಂದ್ ಕಾಲ ಇತ್... ಹಂಗೆತೇಳಿರೆ ತುಂಬಾ ಹಿಂದೆತೇನೂ ಅಲ್ಲ... ಒಂದ್ ಹತ್ತ್ ಅಥ್ವಾ ಹದಿನೈದ್ ವರ್ಷ ಮೊದ್ಲು ಅಷ್ಟೆ... ಭಾಗಮಂಡಲಂದ ಮಡಿಕೇರಿಗೆ ಹೋಕುತೇಳಿರೆ ಇದ್ದದ್ದ್ ಮೂರೋ ನಾಲ್ಕೋ, ಗವರ್ನಮೆಂಟ್ ಬಸ್ಗ. ಆಗ ಏನಿದ್ದ್ರೂ ಪ್ರೈವೆಟ್ ಬಸ್ಗಳದ್ದೇ ದಬರ್ಾರ್. ಅದ್ರಲ್ಲೂ ನಮ್ಗೆಲ್ಲಾ ಗೊತ್ತಿದ್ದದ್ ವಿಜಯಲಕ್ಷ್ಮೀ ಮತ್ತೆ ರಾಮಾ ಬಸ್ ಮಾತ್ರ. ವಿಜಯಲಕ್ಷ್ಮೀ ಬಸ್ತೇಳಿರೆ ಸಿಲ್ವರ್ ಬಣ್ಣ ಅದ್ರ ಮೇಲೆ ಕೆಂಪು ಪಟ್ಟಿ... ಮಧ್ಯಲಿ `ವಿಎಮ್ಎಸ್' ಲೋಗೋ ಕಣ್ಮುಂದೆ ಬರ್ತಿತ್. ಇನ್ನ್ ರಾಮಾ ಬಸ್ ಅಂದ್ರೂ ಅಷ್ಟೆ, ಬಸ್ ಪೂತರ್ಿ ಸಿಲ್ವರ್ ಬಣ್ಣ..ಅದ್ರ ಮೇಲೆ ನೀಲಿ ಪಟ್ಟಿ ಮಧ್ಯಲಿ `ಎಸ್ಆರ್ಎಂಎಸ್' ಲೋಗೋ. ಆಗ ಸುಮಾರ್ ಹತ್ತತ್ತ್ ಬಸ್ಗ ಇದ್ದೋ ಕಂಡದೆ. ಈ ಬಣ್ಣಗಳಿಂದನೇ ಇದ್ ಇಂಥ ಬಸ್ತಾ ಕಂಡ್ ಹಿಡಿಯಕ್ಕಾಗಿತ್ತ್ ! ಆದ್ರೆ ಈಗ ವಿಜಯಲಕ್ಷ್ಮೀ ಮತ್ತೆ ರಾಮಾ ಬಸ್ ಬೇರೆ ಬೇರೆ ಕಲರ್ ಬಳ್ಕಂಡ್ ಓಡಾಡ್ತುಟ್ಟು. ಮೊದ್ಲ್ ಇದ್ದ `ಯೂನಿಫಾರಂ' ಕಲರ್ ಕಾಣ್ತಿಲ್ಲೆ.
ಆಯುಧ ಪೂಜೆ ದಿನ ಅಷ್ಟೂ ವಿಜಯಲಕ್ಷ್ಮೀ ಬಸ್ಗಳಿಗೆ ಭಾಗಮಂಡಲಲೇ ಪೂಜೆ ಆಗ್ತಿತ್ತ್.. ಬಸ್ ಓನರ್ ಹೊಸೂರು ಜೋಯಪ್ಪ ತಾತನೇ ಎಲ್ಲವ್ಕೆ ಪ್ರಸಾದ ಹಂಚ್ತಿದ್ದೊ. ಇದಾದ್ಮೇಲೆ ಚೆಟ್ಟಿಮಾನಿವರೆಗೆ ಮಕ್ಕಳಿಗೆಲ್ಲಾ ಒಂದ್ ಜಾಲಿ ಟ್ರಿಪ್. ಮೊದ್ಲೆಲ್ಲಾ ಜೋಯಪ್ಪ ತಾತನೇ ಬಸ್ ಡ್ರೈವ್ ಮಾಡ್ಕಂಡ್ ಹೋಗ್ತಿದ್ದೊ... ಮಕ್ಕಳಿಗೋ ಸಕ್ಕತ್ ಖುಷಿ. `ಲೇ ಲೇ ಲೈಸಾ ಐಸಾ' ತ ಬಸ್ ಒಳಗೆ ಬೊಬ್ಬೆನೋ ಬೊಬ್ಬೆ... ಚೆಟ್ಟಿಮಾನಿಂದ ವಾಪಸ್ ಬಾಕಾಕನ ಕಿರುಚಿ ಕಿರುಚಿ ಸ್ವರನೆ ಇರ್ತಿತ್ಲೆ...
ಇನ್ ವಿಜಯಲಕ್ಷ್ಮೀ ಹೊಸ ಬಸ್ ಬಾತ್ತೇಳಿರೆ, ನಮ್ಮ ಮನೆಗೇ ಹೊಸ ಬಸ್ ಬಂದಷ್ಟ್ ಖುಷಿ. ಹೊಸ ಬಸ್ಗೆ ಜೋಯಪ್ಪ ತಾತ ತಲಕಾವೇರೀಲಿ ಪೂಜೆ ಮಾಡಿಸ್ತಿದ್ದೊ. ಭಾಗಮಂಡಲದಲ್ಲಿ ಇರ್ವ ಎಲ್ಲವ್ಕೂ ಪೂಜೆಗೆ ಬರೋಕೂತೇಳಿ ಅವು ಕರೀತ್ತಿದ್ದೊ. ಆಗ ಅಪ್ಪ ಅಮ್ಮ ಕಳಿಸ್ತಿದ್ದದ್ ನಮ್ಮಂಥ ಮಕ್ಕಳ್ನೇ... ನಾವೋ ಕುಣ್ಕಂಡ್ ಕುಣ್ಕಂಡ್ ಬಸ್ ಹತ್ತಿ ತಲಕಾವೇರಿಗೆ ಹೋಗ್ತಿದ್ದೊ. ಅಲ್ಲಿ ಪೂಜೆ ಎಲ್ಲಾ ಮುಗ್ದಮೇಲೆ ಕೈಲಾಶ ಆಶ್ರಮಲಿ ಎಲ್ಲವ್ಕೆ ಊಟ ಇರ್ತಿತ್... ನಾವು ಊಟಕ್ಕಿಂತ ಇಷ್ಟ ಪಡ್ತಿದ್ದದ್ದ್, ಆಶ್ರಮ ಹತ್ರ ಇದ್ದ ಸೀಬೆಕಾಯಿ..
ಈ ವಿಜಯಲಕ್ಷ್ಮೀ ಬಸ್ಗಳ ಕಲರ್ ಎಲ್ಲಾ ಒಂದೇ ಥರ ಇರ್ತಿತ್ತಲ್ಲಾ... ಆದ್ಕೆ ಗುರ್ತ್ ಹಿಡಿಯಕ್ಕೆ ಬೇರೆ ಬೇರೆ ಹೆಸ್ರು ಇಟ್ಕೊಂಡಿದ್ದೊ. ಮನೆಗಳಲೆಲ್ಲಾ ಬಿಳಿ ದನಕ್ಕೆ ಬಿಳಿಯ, ಕರಿ ದನಕ್ಕೆ ಕರಿಯತೇಳಿ ಇಟ್ಟವೆಯಲ್ಲಾ ಹಂಗೆ. ಮತ್ತೆ, ನಮ್ಗೆ ಇಷ್ಟ ಆದವ್ರ ಹೆಸ್ರನ್ನ ಶಾಟರ್್ ಆಗಿ ಕರ್ದವಲ್ಲಾ ಆ ಥರ! ವಿಜಯಲಕ್ಷ್ಮೀ ಬರೀ `ವಿಜಯ', ಕೂಲಿಂಗ್ ಗ್ಲಾಸ್ ಇದ್ದ ಬಸ್ `ಕೂಲಿಂಗ್ ಗ್ಲಾಸ್ ವಿಜಯ', ಕರಿಕೆಗೆ ಹೋಗೋ ಬಸ್ `ಕರಿಕೆ ವಿಜಯ', ಬಸ್ನ ನಂಬರ್ `ಸಿಎನ್ಜಿ'ಯಿಂದ ಶುರುವಾದ್ರೆ, `ಸಿಎನ್ಜಿ ವಿಜಯ' ಹಿಂಗೆ ವಿಜಯಲಕ್ಷ್ಮೀ ಬಸ್ಗೆ `ಉಪ ಹೆಸು'್ರಗ ಹುಟ್ಟಿಕೊಂಡು ಬಿಡ್ತಿದ್ದೊ!
ಭಾಗಮಂಡಲ ದೇವಸ್ಥಾನ ಹತ್ರನೇ ವಿಜಯಲಕ್ಷ್ಮೀ ಬಸ್ ಆಫೀಸ್ ಇರ್ದು. ಇಲ್ಲೊಂದ್ ತುಂಬಾ ಹಳೇ ಬಸ್ ಇತ್. ಹಳೇದಂದ್ರೆ ತುಂಬಾ ಹಳೇದ್. ಅದ್ ಈಗಿನ ಮಿನಿ ಬಸ್ಗಳ ಸೈಜ್ಲಿ ಇತ್ತ್. ಜೋಯಪ್ಪ ತಾತಂಗೆ ಆ ಬಸ್ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ಬಸ್ಗೆ ವಯಸ್ಸಾತ್ತೇಲಿ ರಿಟೈರ್ಮೆಂಟ್ ಕೊಟ್ಟ್ಬಿಟ್ಟಿದ್ದೊ. ಆದ್ರೂ ಅದ್ನ ದಿನಾ ತೊಳ್ದ್ ಫಳ ಫಳ ಹೊಳೆಯುವಂಗೆ ಇಟ್ಕೊಂಡಿದ್ದೊ. ಯಾವಾಗಾದ್ರೂ ತಾತಂಗೆ ಮನಸ್ಸಾಕನ ಆ ಬಸ್ನ ಹೊರಗೆ ತೆಗ್ದ್ ಒಂದ್ ರೌಂಡ್ ಓಡ್ಸುದು ಕೂಡ ಇತ್... ತಿಂಗಳುಗಟ್ಟಲೆ ನಿಲ್ಲಿಸಿಯೇ ಇರ್ತಿತ್ತಲ್ಲಾ, ಆಗ ಆ ಬಸ್ ಒಮ್ಮೆಗೆ ಸ್ಟಾಟರ್್ ಆಗ್ತಿತ್ಲೆ. ಅಕ್ಕ ಪಕ್ಕದ ಮನೇವು ಹೋಗಿ ಆ ಬಸ್ನ ದೂಡಿ ಸ್ಟಾಟರ್್ ಮಾಡ್ತಿದ್ದೊ. ಅದೆಂತಾತೋ, ಒಂದಿನ ಆ ಹಳೇ ಬಸ್ನ ಜೋಯಪ್ಪ ತಾತಾ ಮಂಗಳೂರಿನ ಗುಜರಿಯವ್ಕೆ ಮಾರಿಬಿಟ್ಟೊ.
ಒಂದ್ ಹತ್ತಡಿ ತಳ್ಳಿದ ಕೂಡ್ಲೇ ಸ್ಟಾಟರ್್ ಆಗಿಬಿಡ್ತಿದ್ದ ಆ ಬಸ್, ಏನು ಮಾಡಿರೂ ಗುಜರಿಯವ್ಕೆ ಸ್ಟಾಟರ್್ ಮಾಡಿಕೆ ಆತ್ಲೆ. ಹಂಗೆನೇ ಮಂಗಳೂರಿಗೆ ತಕ್ಕೊಂಡು ಹೋಕೆ ಯೋಚ್ನೆ ಮಾಡಿದ್ದ ಗುಜರಿಯವು, ಕೊನೆಗೆ ಬಸ್ನ ಭಾಗಗಳ್ನೆಲ್ಲಾ ಬಿಚ್ಚಿ ತಕ್ಕೊಂಡ್ ಹೋಕೆ ನಿಧರ್ಾರ ಮಾಡ್ದೊ. ಇದ್ಕೆ ಮೊದ್ಲು ಜೋಯಪ್ಪ ತಾತ ಒಪ್ಪಿತ್ಲೆ. `ನನ್ನ ಎದುರು ಬಸ್ ಒಡೆಯೋದು ಬೇಡ' ತ ಹಠ ಹಿಡ್ದೊ. ಕೊನೆಗೆ ತಾತನ ಒಪ್ಸಿದ ಗುಜರಿಯವು, `ಚೌಂಡಿಕಳ' ವರೆಗೆ ಬಸ್ನ ತಳ್ಳಿಕೊಂಡು ಹೋಗಿ ಅಲ್ಲಿ ತಮ್ಮ ಕೆಲ್ಸ ಶುರು ಮಾಡ್ದೊ. ಮೊದ್ಲ ದಿನ ಬಸ್ `ಬಾಡಿ' ಬಿಚ್ಚಿದೊ. ಎರಡನೇ ದಿನ ಸೀಟ್, ಮೂರನೇ ದಿನ ಎಂಜಿನ್ ಹಿಂಗೆ ದಿನಕ್ಕೊಂದು ಭಾಗಗಳ್ನ ಬಿಚ್ಚಿ, ಎರಡು ಲಾರಿಗೆ ತುಂಬಿಸಿಬಿಟ್ಟೊ. ನಾಲ್ಕನೇ ದಿನ ಬಸ್ನ ಅವಶೇಷ ಇಲ್ಲದಂಗೆ ಮಾಡಿಯಾಗಿತ್ತ್. ಆಗ `ಚೌಂಡಿಕಳ'ಕ್ಕೆ ಬಂದ ಜೋಯಪ್ಪ ತಾತನ ಕಣ್ಣ್ಲಿ ನೀರಿನ ಪಸೆ ! ಅದ್ ಒಬ್ಬ ಸಂಗಾತಿನ ಕಳ್ಕಂಡ ನೋವು...
ಹೋದ ತಿಂಗ ಭಾಗಮಂಡಲಲಿ ವಿಜಯಲಕ್ಷ್ಮೀ ಬಸ್ ನೋಡಿಕಾಕನ ಹಿಂಗೆ ಹಳೇದೆಲ್ಲಾ ಯೋಚ್ನೆ ಆತ್... ಇನ್ ಹೊಸೂರು ಜೋಯಪ್ಪ ತಾತನ ಬಗ್ಗೆ ಹೇಳ್ದಾದ್ರೆ ಅದೊಂದ್ ದೊಡ್ಡ ಕಥೆ. ಒಂದ್ ಲಾರಿ ಕ್ಲೀನರ್ ಆಗಿದ್ದವು 10 ಬಸ್ಗಳ ಓನರ್ ಆಗಿ ಬೆಳ್ದದ್ ನಿಜಕ್ಕೂ ಮಾದರಿ. ಅದ್ನ ಇನ್ನೊಮ್ಮೆ ಹೇಳ್ನೆ....
- ಪೊನ್ನೇಟಿ ಬಿ. ಸುನಿಲ್
ನೀವೂ ಬರೆಯನಿ...
arebhase@gmail.com
No comments:
Post a Comment