Friday 18 November 2011

ಮದುವೆ ಆಲ್ಬಂ !


ಬಹುಶ: ನಾವು ಇದ್ನ ಪಿಚ್ಚರ್ಲಿ ಮಾತ್ರ ನೋಡಿಕೆ ಸಾಧ್ಯ.. ಅಂವ ಹುಟ್ಟಿ ಆಗ ಬರೀ 3 ತಿಂಗ ಆಗಿತ್ತಷ್ಟೆ. ಎಲ್ಲಾ ಮನೆಗಳ್ಲಿ ಆಗುವಂಗೆ ಆ ಕೂಸು ಇದ್ದ ಮನೇಲೂ ದಿನಾ ಅತ್ತೆ ಸೊಸೆ ಜಗಳ, ಆದ್ರೆ ಅತ್ತೆದೇ ಮೇಲುಗೈ. ನಾದಿನಿಯರ ಕಿರುಕಳ ಏನೂ ಕಮ್ಮಿ ಇತ್ಲೆ. ಆದ್ರೆ ಗಂಡಂತೇಳಿಕೊಂಡಿದ್ದ ಪ್ರಾಣಿ ಮಾತ್ರ ಇದ್ಕೂ ನಂಗೂ ಸಂಬಂಧ ಇಲ್ಲೆತೇಳಿ ಇದ್ದ್ಬಿಟ್ಟಿತ್ತ್. ಅವಂಗೆ ಹೆಣ್ಣ್ನ ಯೋಚ್ನೆ ಬರ್ತಿದ್ದದ್ ರಾತ್ರಿ ಮಲಗಿಕಾಕನ ಮಾತ್ರ! ಕೂಸುನ ಅಮ್ಮಂಗೆ ಈ ಎಲ್ಲಾ ಹಿಂಸೆಗಳ್ನ ಸಹಿಸಿಕೊಂಡ್ ಸಾಕಾಗಿತ್ತ್... ಅದೊಂದ್ ದಿನ ಅವ್ಳು ಸೂರ್ಯ ಹುಟ್ಟಿಕೆ ಮುಂಚೆ ಯಾರಿಗೆ ಗೊತ್ತಿಲ್ಲದೆ ಕೂಸುನ ಜೊತೆ ಗಂಡನ ಮನೆ ಬಿಟ್ ಹೋದೆ. ತವರುಮನೆವ್ಕೂ ಎಲ್ಲಾ ವಿಷಯ ಗೊತ್ತಿದ್ದ್ರಿಂದ ಅವ್ಳಿಗೆ ಏನೂ ಹೇಳದೆ ಲಾಯ್ಕ ನೋಡಿಕೊಂಡವೆ. ಕೂಸ್ಗೆ ಕೂಡ ಅಪ್ಪನ ನೆನಪು ಬಾರದಂಗೆ ಸಾಂಕಿವೆ. ಅಂವ ಹಂಗೆ ಬೆಳ್ದು ದೊಡ್ಡಂವ ಆದೆ.
ಈಗ ಆ ಹೈದಂಗೆ 25 ವರ್ಷ. ಅವ್ನ ಫ್ರೆಂಡ್ಸೆಲ್ಲಾ ಅವ್ರವ್ರ ಅಪ್ಪನ ವಿಷಯ ಹೇಳ್ಕಾಕನ ಇವಂಗೂ ತನ್ನ ಅಪ್ಪನ ಬಗ್ಗೆ ಕುತೂಹಲ ಹುಟ್ಟಿದೆ. ಅಮ್ಮನ ಹತ್ರ ಕೇಳಿರೆ ಕುತಿಗೇಲಿರ್ವ ತಾಳಿಚೈನ್ ತೋರ್ಸುದಲ್ಲದೆ ಬೇರೆ ಉತ್ತರ ಸಿಕ್ಕುಲ್ಲೆ. ಒಂದು ಗೂಡೆನ ಬೇರೆ ನೋಡ್ಕೊಂಡುಟ್ಟು. ಮದುವೆಗೆ ಅವ್ಳ ಮನೆವೂ ಒಪ್ಪಿಯೊಳೊ... ಅಪ್ಪನ ಕರ್ಕಂಬಾ ಅಂತ ಅವು ಹೇಳಿರೆ ಇಂವ ಮಾಡ್ದಾದ್ರೂ ಏನ್ ? ಕೊನೆಗೆ ಹೆಂಗೋ ತಾತನ ಪುಸಲಾಯಿಸಿ ಅವ್ನ ಅಪ್ಪನ ಬಗ್ಗೆ ತಿಳ್ಕೊಂಡದೆ. ಇಷ್ಟು ವರ್ಷ ಅಮ್ಮನ ಕಷ್ಟಕ್ಕೆ ಕಾರಣ ಆದ ಅಪ್ಪನ ನೋಡಿಕೆ ಇಂವ ಇಷ್ಟಪಡ್ದುಲ್ಲೆ. ಅಮ್ಮಂಗೆ ಹಿಂಸೆ ಕೊಟ್ಟಿದ್ದ ಅತ್ತೆ ಅಂದ್ರೆ, ಇಂವನ ಅಜ್ಜಿನ ಭೇಟಿ ಮಾಡೋಕುಂತೇಳಿ ಹೊರಟದೆ...
ಆ ಅಜ್ಜಿ ಈಗ ಹಿಂದಿನಂಗೆ ಇಲ್ಲೆ. ಆ ಸೊಕ್ಕೆಲ್ಲಾ ಇಳ್ದುಟ್ಟು... ಹಳೇದೆಲ್ಲಾ ನೆನಪಾಗಿ `ಅಯ್ಯೋ ನಾ ಎಂಥ ತಪ್ಪು ಮಾಡ್ದೆ' ಅನ್ನೋ ಪಶ್ಚಾತಾಪ ಕಾಡ್ತಿದ್ದದ್ದೆ. ಪಿಳ್ಳಿನ ನೋಡೋಕುತೇಳೋ ಆಸೆನೂ ಹೆಚ್ಚಾಗಿದ್ದದೆ. ಇದ್ನೆಲ್ಲಾ ನೆಂಟರಿಷ್ಟರ ಹತ್ರ ಹೇಳ್ಕಂಡ್ ಬರ್ತಿರ್ಕಾಕನ, ಆ ಪಿಳ್ಳಿ ಒಂದು ದಿನ್ನ ಅಜ್ಜಿನ ಹುಡ್ಕಂಡ್ ಬಂದೇ ಬಿಟ್ಟದೆ. 3 ತಿಂಗ ಇರ್ಕಾಕನ ನೋಡ್ದ ಕೂಸುಗೆ ಈಗ 25 ವರ್ಷ... ಪಿಳ್ಳಿನ ನೋಡ್ದ ಅಜ್ಜಿ ಕಣ್ಣ್ ತುಂಬಾ ನೀರ್.. `ಇದೇ ಅಜ್ಜಿನಾ ಅಮ್ಮನ ಕಷ್ಟಕ್ಕೆ ಕಾರಣ ಆದ್' ಅಂತ ಒಮ್ಮೆ ಯೋಚ್ನೆ ಮಾಡ್ದ ನಮ್ಮ ಕಥೆ ಹೀರೋ ಹಳೇದನ್ನೆಲ್ಲಾ ಮರ್ತ್ ಅಜ್ಜಿ ಕಾಲಿಡ್ದದೆ....
ಈಗ ಅಂವನ ಮದುವೆ ಆಲ್ಬಂಲಿ ಫಸ್ಟೇ ಒಂದು ಫೋಟೋ ನೋಡಿಕೆ ಸಿಕ್ಕಿದೆ. ಅಂವ, ಹೆಣ್ಣ್, ಅಮ್ಮ ಮತ್ತೆ ಕುಚರ್ಿಲಿ ಕುದ್ದಿರೋ ಅಜ್ಜಿ ! ಆದ್ರೆ ಆ ಫೋಟೋಲಿ ಏನೋ ಒಂದು ಕೊರತೆ ಕಾಣ್ತುಟ್ಟು... ಹೌದು, ಅಲ್ಲಿ ಅಂವನ ಅಪ್ಪ ಇಲ್ಲೆ !

`ಸುಮಾ'
ನೀವೂ ಬರೆಯನಿ
arebhase@gmail.com

No comments:

Post a Comment