ಕಳ್ದ ಮಂಗಳವಾರ ನಮ್ಮೂರ್ಲಿ ಜೋರು ಮಳೆ. ಮಳೆಗಾಲಲಿ ಹಾರಂಗಿ ನೀರು ಬಿಟ್ರೆ ಮಾತ್ರ ತುಂಬ್ವ ಕೆರೆ, ಮೊನ್ನೆನ ಆ ಮಳೆಗೆನೇ ಭತರ್ಿ ಆಗಿಬಿಟ್ಟಿತ್ ! ರೋಡ್ ಮೇಲೆ ಹಾಕಿದ್ದ ಮಣ್ಣೆಲ್ಲಾ ಕೊಚ್ಚಿ ಹೋಗಿ ಬರೀ ಕಲ್ಲುಗ ಮಾತ್ರ ಉಳ್ಕೊಂಡಿದ್ದೊ. ಅದ್ ಈ ವರ್ಷದ ಮೊದ್ಲ ದೊಡ್ಡ ಮಳೆ. ಕೊಲ್ಲಿಲಿ ಎಸೆಂಡ್ ಹತ್ತಿಕೆ ಇದಕ್ಕಿಂತ ಒಳ್ಳೆ ಕಾಲ ಯಾವ್ದು ಇದ್ದದೆ ಹೇಳಿ...
ನನ್ನ ಅದೃಷ್ಟಕ್ಕೆ ನಂಗೆ ಎರಡು ದಿನ ಒಟ್ಟೊಟ್ಟಿಗೆ ರಜೆ ಸಿಕ್ಕಿಬಿಡ್ತ್. ಸೀದಾ ಊರಿ ಹಾರಿದೆ. ಬಸ್ಲಿ ಕಿಟಕಿ ಸೈಡ್ ಕುದ್ದುಕಂಡ್ ಕಣ್ಣುಮುಚ್ಚಿರೇ ಕನಸ್ಲಿ ಕೂಡ ಬರ್ತಿದ್ದದ್, ಎಸೆಂಡ್ನ ಸುಟ್ಟ ದೊಡ್ಡಕೊಂಬು ! ಊರು ತಲುಪಿಕಾಕನ ಸರಿಯಾಗಿ ಮೂಡುಬಿದಿರೆಯಿಂದ ನನ್ನ ಅತ್ತೆ ಬಂದಿದ್ದೊ. ಮುಕ್ಕೋಡ್ಲುಂದ ಮಾವನ ಮಂಙ ಮಂಜು ಬಂದಿತ್. ಎಲ್ಲವೂ ಎಸೆಂಡ್ ಗುರುಗಳೇ. ವಿಶೇಷತೇಳಿರೆ ನಮ್ಮ ಮೂರೂ ಜನಕ್ಕೂ ಎಸೆಂಡ್ ಹಿಡಿಯಕ್ಕೆ ಬಾಲೆ. ಯಾರಾರೂ ಹಿಡ್ದ್ ಸುಟ್ಟುಕೊಟ್ಟರೆ, ಬಾಯಿ ಚಪ್ಪರಿಸಿಕಂಡ್ ತಿಂದವೆ. ಆದ್ರೂ ಒಬ್ಬೊಬ್ಬರೂ ಒಂದೊಂದು ಕತ್ತಿ ಹಿಡ್ಕಂಡ್ ಕೊಲ್ಲಿ ಕಡೆ ನಡ್ಡೊ...
ಅದೊಂದು ಸಣ್ಣ ಕೊಲ್ಲಿ. ನಮ್ಮ ಜಾಗಲಿ ಸುಮಾರು ಅರ್ಧ ಕಿಲೋಮೀಟರ್ ಹೋಗಿ, ಅಲ್ಲಿರ್ವ ದೊಡ್ಡ ಕೆರೆ ಸೇರಿದೆ. ಒಂದು ಮಳೆ ಬಂದರೆ ಸಾಕ್, ಸಾಲು ಸಾಲು ಎಸೆಂಡ್ಗ ಕೊಂಬುಗಳ್ನ ಒಳ್ಳೇ ಕಟ್ಟಿಂಗ್ಪ್ಲೇಯರ್ನಂಗೆ ಮಾಡಿಕಂಡ್ ಆ ಕೊಲ್ಲಿಲಿ ಹತ್ತಿಕಂಡ್ ಬಂದವೆ. ಎಲ್ಲಾ ದೊಡ್ಡ ದೊಡ್ಡ ಎಸೆಂಡ್ಗ. ಅದೇ ಆಸೇಲಿ ನಾವು ಕತ್ತಿ ಹಿಡ್ಕಂಡ್ ಕೊಲ್ಲಿ ಕಡೆ ಹೋದ್. ನಮ್ಮ ಗ್ರಹಚಾರಕ್ಕೆ ಒಂದೇ ಒಂದು ಎಸೆಂಡ್ ನಮ್ಮ ಕಣ್ಣಿಗೆ ಬಿದ್ದತ್ಲೆ... ಹಂಗೆನೇ ಮುಖ ಚಪ್ಪೆ ಮಾಡಿಕಂಡ್ ಮನೆಗೆ ವಾಪಸ್ ಬಂದೋ.
ಎಲ್ಲೋ ಹೊರಗೆ ಹೋಗಿದ್ದ ನನ್ನ ಅಪ್ಪ ಆಗಷ್ಟೇ ಮನೆಗೆ ಬಂದಿದ್ದೋ...ನಮ್ಮ ಕಥೆ ಕೇಳಿ ಅವ್ಕೆ ಜೋರು ನಗು. ಎಸೆಂಡ್ ಹಿಡಿಯಕ್ಕೆ ಅವು ಎಕ್ಸ್ಪಪರ್ಟ್. `ಕೊಲ್ಲೀಲಿ ಅಷ್ಟು ನೀರು ಹೋಗ್ತುಟ್ಟು...ಅಲ್ಲಿ ಎಸೆಂಡ್ ಇದ್ದರೆ, ಅದೆಂಗೆ ಕಣ್ಣಿಗೆ ಬಿದ್ದದೆ... ಕೊಲ್ಲಿ ಒಳಗೆ ಇಳಿಯೊಕು. ಆಗ ಎಸೆಂಡ್ ಸಿಕ್ಕಿದೆ' ತಾ ಹೇಳಿ ಮತ್ತೆ ನಮ್ಮನ್ನ ಕರ್ಕಂಡ್ ಕೊಲ್ಲಿ ಕಡೆ ಹೊರಟೊ..
ಅವು ಹೇಳಿದ್ದ್ ನಿಜ ಆಗಿತ್. ನಾವು ಕೊಲ್ಲಿ ಕರೇಲಿ ಓಡಾಡಿ ವಾಪಸ್ ಬಂದಿದ್ದೊ. ಅದ್ಕೆ ಎಲ್ಲೂ ನಮ್ಮ ಕಣ್ಣಿಗೆ ಎಸೆಂಡ್ ಬಿದ್ದಿತ್ಲೆ. ಆದ್ರೆ ಈಗ ನನ್ನ ಅಪ್ಪ ಸೀದಾ ಕೊಲ್ಲಿಗೆ ಇಳ್ದೊ. ನೀರೊಳಗೆ ಅವು ಕಾಲು ಆಡಿಸ್ತಿದ್ದಂಗೆ, ಎಸೆಂಡ್ಗಳ ಕೊಂಬು ಕಾಂಬಕೆ ಶುರುವಾತ್... ಹಂಗೆ ಕೊಲ್ಲಿಯುದ್ದಕ್ಕೂ ಎಸೆಂಡ್ ಬೇಟೆ ಶುರುವಾತ್. ಬರೀ ಅರ್ಧ ಗಂಟೆಲೇ ಸುಮಾರು ಎಸೆಂಡ್ಗ ಸಿಕ್ಕಿದೊ. ಒಂದಕ್ಕಿಂತ ಒಂದ್ ದೊಡ್ಡದ್. ಇದ್ದದ್ರಲ್ಲಿಯೇ ದೊಡ್ಡ ಕೊಂಬು ತಕ್ಕಂಡ್ ನಾ ಮನೆಗೆ ಓಡಿದೆ. ಗುಡ್ಡದ ಒಲೇಲಿ ಒಳ್ಳೆ ಕೆಂಡ ಇತ್. ಲಾಯ್ಕ ಸುಟ್ಟ್, ಅದ್ಕೆ ಸ್ವಲ್ಪ ಉಪ್ಪು, ಮೆಣಸು ನಿಂಬೆ ಹುಳಿ ಹಾಕಿ ತುಂಬಾ ಟೈಂ ನಂತರ ಎಸೆಂಡ್ ಕೊಂಬುದು ಟೇಸ್ಟ್ ನೋಡ್ದೆ. ಮತ್ತೆ ರಾತ್ರಿಗೂ ಅದೇ ಎಸೆಂಡ್ ಸಾರ್.. ನಮ್ಮ ಮೂಡುಬಿದರೆ ಅತ್ತೆ ತುಂಬಾ ರುಚಿ ರುಚಿಯಾಗಿ ಗೈಪು ಮಾಡಿದ್ದೊ....
ಯಾರೋ ನನ್ನ ಕೇಳ್ತಿದ್ದೊ, ಮಳೆ ಅಂದ್ರೆ ನಿಂಗೆ ಯಾಕೆ ಅಷ್ಟೊಂದು ಇಷ್ಟತಾ... ಮಳೆ ಬಂದ್ರೆ ತಾನೇ ಎಸೆಂಡ್ ಸಿಕ್ಕುದು ! ಅಣಬೆ ಏಳುದು ! ಕಣಿಲೆ ಕಾಣ್ಸಿಕಂಬದು ! ಜಡಿ ಮಳೇಲಿ ಇಂಥ ತಿನಿಸುಗಳ್ನ ತಿಂಬೋದನ್ನ ತಪ್ಪಿಸಿಕಣಿಕೆ ಯಾರಿಗೆ ಮನಸ್ಸಾದೆ ? ಅದ್ಕೆ ನಂಗೆ ಮಳೆ ಇಷ್ಟ. ಈಗಿನ್ನೂ ಮೇ ತಿಂಗ... ಇನ್ನೊಂದು ತಿಂಗಳ್ಲಿ ಮಳೆ ಶುರುವಾದೆ... ನನ್ನ ರಜೆಗಳ್ನೆಲ್ಲಾ ಹಂಗೇ ಉಳ್ಸಿಕಂಡೊಳೆ, ನನ್ನೂರಿನ ಮಳೆಗಾಲನ ಅನುಭವಿಸಿಕೆ...
- `ಸುಮಾ'
No comments:
Post a Comment