ಸಂಜೆ ಹೊತ್ತು. ಸಮುದ್ರದಲಿ ತುಂಬಾ ದೂರಲಿ ಸೂರ್ಯ ಮುಳುಗುವ ಸೂಚನೆ ಸಿಕ್ಕಿತ್ತ್. ಮಲ್ಪೆ ಬೀಚ್ನ ಕಲ್ಲು ಬೆಂಚ್ಲಿ ಕುದ್ದ್ಕಂಡ್ ನಾ ಅದ್ನೇ ನೋಡ್ತಿದ್ದೆ. ನಂಗೆ ಮೊದ್ಲಿಂದನೂ ಅಷ್ಟೇ, ಸಮುದ್ರ ಅಂದ್ರೆ ತುಂಬಾ ಹೆದ್ರಿಕೆ. ಆದ್ರೆ ಸೂರ್ಯ ಮುಳುಗುದನ್ನ ನೋಡುದುತೇಳಿರೆ ಎಲ್ಲಿಲ್ಲದ ಖುಷಿ. ನಾ ಉಡುಪಿಗೆ ಹೋದ್ರೆ ಸಂಜೆ ಹೊತ್ತು ಮಲ್ಪೆ ಬೀಚ್ಗೆ ಒಂದು ವಿಸಿಟ್ ಇದ್ದೇ ಇದ್ದದೆ. ಅಲ್ಲಿ ಹೋದರೂ ಸಮುದ್ರಕ್ಕೆ ಇಳಿಯಲ್ಲೆ...ದೂರಲಿ ರೋಡ್ಂದ ಆಚೆಬದಿ ಇರ್ವ ಕಲ್ಲುಬೆಂಚ್ಮೇಲೆ ಕುದ್ದ್ಕಂಡ್ ಸೂರ್ಯ ಮುಳುಗುದನ್ನ ಪ್ರತೀ ಸೆಕೆಂಡ್ ಕೂಡ ಅನುಭವಿಸಿನೆ.
ಇಂದ್ ಕೂಡ ಹಂಗೆನೇ...ಅದೇ ಸೂರ್ಯಾಸ್ತಮಾನ ಕಣ್ತುಂಬಿಸಿಕಣಿಕೆ ಕುದ್ದಿದ್ದೆ. ಸೂರ್ಯನ ಆಯುಷ್ಯ ಒಂದು ದಿನ ಮಾತ್ರ. ಅವಂಗೂ ನಮ್ಮಂಗೆ ಬಾಲ್ಯ, ಯವ್ವನ, ವೃದ್ಧಾಪ್ಯ ಉಟ್ಟು. ಆದ್ರೆ ಎಲ್ಲವನ್ನೂ ಒಂದೇ ದಿನಲಿ ಮುಗಿಸಿಬಿಟ್ಟದೆ. ನೋಡಿ...ಅಂವ ಬೆಳಗ್ಗೆ ಹುಟ್ಟಿಕಾಕನ ಹೆಂಗಿದ್ದದೆ? ಥೇಟ್ ಸಣ್ಣ ಕೂಸು ! ಅದ್ಕೆ ಅದನ್ನ ಪುರಾಣ ಕಥೆಗಳಲೆಲ್ಲಾ ಬಾಲಸೂರ್ಯತಾ ವರ್ಣಿಸಿ ರ್ದು. ಹನುಮಂತ ಸಣ್ಣವ ಆಗಿರ್ಕಾಕಕನ ಇದೇ ಬಾಲ ಸೂರ್ಯನ ಚೆಂಡ್ತಾ ತಿಳ್ಕಂಡ್ ಹಿಡಿಯಕ್ಕೆ ಹೋಗಿ, ಬಿದ್ದ್ ಮುಖಕ್ಕೆ ಪೆಟ್ಟು ಮಾಡಿಕಂಡಿತ್ತ್ಗಡ ! ಅದಲ್ಲಿ ಇರ್ಲಿ ಬುಡಿ....
ಹೊತ್ತುಕಳ್ದಂಗೆ ಸೂರ್ಯನ ರೂಪ ಕೂಡ ಬದಲಾಗ್ತಾ ಹೋದೆ. ಮಟ ಮಟ ಮಧ್ಯಾಹ್ನ ಸಮಯಲಿ ಅವಂಗೆ ತುಂಬು ಯವ್ವನ ! ಅದಕ್ಕೆ ಸೊಕ್ಕುಲಿ ಮೆರ್ದದೆ. ಎಷ್ಟು ಸಾಧ್ಯನೋ ಅಷ್ಟು ಕಿತಾಪತಿ ಮಾಡ್ದೆ. ಸಿಟ್ಟಾಗುವ ಜನ ಶಾಪ ಹಾಕಿವೆ. ಈ ಶಾಪ ಸೂರ್ಯಂಗೆ ತಟ್ಟಿತೋ ಏನೋತಾ ಹೇಳುವಂಗೆ ನಿಧಾನಕ್ಕೆ ಯವ್ವನದ ಮದ ಇಳ್ದದೆ. ನಾಲ್ಕು ಗಂಟೆ ಹೊತ್ತಿಗೆಲ್ಲಾ ಸೂರ್ಯಂಗೆ ವೃದ್ಧಾಪ್ಯ....ಕೋಪ, ತಾಪ ಎಲ್ಲಾ ಇಳ್ದಿದ್ದೆ. ಇನ್ನು ಸಮುದ್ರಲಿ ಮುಳುಗುವ ಹೊತ್ತಿಗಂತೂ ಗಂಭೀರ ಸ್ವರೂಪ. ಜೀವನದ ಎಲ್ಲಾ ಕಷ್ಟ, ಸುಖಗಳನ್ನ ಅನುಭವಿಸಿದ ಮುಖಭಾವ !
ಸೂರ್ಯಾಸ್ತಮಾನ ಒಬ್ಬೊಬ್ಬರಿಗೆ ಒಂದೊಂದು ರೀತಿಲಿ ಕಂಡದೆ. ಅದು ಅವರ ಮನಸ್ಥಿತಿ ಮೇಲೆ ನಿಂತುಟ್ಟು. ಆದ್ರೆ ನಂಗೆ ಮಾತ್ರ ಅಲ್ಲಿ ಜೀವನಾನುಭವ ಕಂಡದೆ. ಸಮುದ್ರದಲ್ಲಿ ಸೂರ್ಯ ಮಾಯ ಆಗಿ ಕತ್ತಲು ಆಗ್ತಿದ್ದಂಗೆ ನಾ ಹೊಸ ಮನುಷ್ಯ ಆಗಿದ್ದನೆ...
- `ಸುಮಾ'
arebhase@gmail.com
No comments:
Post a Comment