Sunday 20 November 2011

`ನಿನ್ನ ಹುಲಿ ಹೊರ...'


ರಾತ್ರಿ ಒಂದು ಗಂಟೆ ಆಗಿರೊಕೇನೋ... ದಾಸ ನಾಯಿ ಒಂದೇ ಸಮನೆ ಮರಡ್ತಿತ್. `ಥೂ ದಾಸ ಸುಮ್ನೆ ಮಲ್ಕನೇ...ನಿನ್ನ ಹುಲಿ ಹೊರ' ತ ಚಾಂಪ ಮಲಗಿದಲ್ಲಿಂದನೇ ಜೋರು ಮಾಡ್ದೊ... ಸ್ವಲ್ಪ ಹೊತ್ತು ದಾಸ ಸುಮ್ನೆ ಇತ್ತಷ್ಟೆ. ಮತ್ತೆ ಮರಡಿಕೆ ಶುರುಮಾಡ್ತ್. ಈಗ ಚಾಮವ್ವನ ಸರದಿ `ದಾಸಾ... ಸುಮ್ನೆ ಮಲ್ಗಿಯಾ ಇಲ್ಲ ದೊಣ್ಣೆ ತರೊಕಾ ?' ಪುನ: ಮೌನ...
`ಏ ದಾಸಂಗೆ ಏನೋ ಆಗಿಟ್ಟುನೇ...ಇಲ್ಲರೆ ಸುಮ್ನೆ ಮರ್ಡಿಕ್ಕಿಲ್ಲೆ' ಚಾಂಪ, ಚಾಮವ್ವನ ಕಿವಿ ಹತ್ರ ಮೆಲ್ಲನೆ ಹೇಳ್ದೊ...
`ಅದ್ಕೆ ಎಂಥ ರೋಗ..ಈಗ ಚೆಟ್ಟಿ ತುಂಬಾ ಅನ್ನ ತಿಂದುಟ್ಟು' ಕಿವಿ ಕೇಳದ ಚಾಂಪಂಗೆ ಚಾಮವ್ವ ಸ್ವಲ್ಪ ಜೋರಾಗೇ ಹೇಳ್ತ್.
ಅಷ್ಟೊತ್ತಿಗೆ ದಾಸ ಮತ್ತೆ ಜೋರಾಗಿ ಮರ್ಟತ್... ಈಗ ಚಾಂಪ ಮತ್ತೆ ಚಾಮವ್ವ ಇಬ್ಬರೂ ಸೇರ್ಕಂಡ್ ದಾಸಂಗೆ ಬಾಯಿಗೆ ಬಂದಂಗೆ ಬಯ್ದೊ... ಅಷ್ಟೆ ಮತ್ತೆ ದಾಸನ ಮರಡಾಟ ಆಗ್ಲಿ ಬೊಗ್ಳುದಾಗ್ಲಿ ಒಂದೂ ಕೇಳ್ತ್ಲೆ. ಚಾಂಪ, ಚಾಮವ್ವ ಇಬ್ರೂ ಲಾಯ್ಕ ನಿದ್ದೆ ಮಾಡ್ದೊ...ಇಬ್ಬರ ಗೊರಕೆ ಸದ್ದ್ ಮಾತ್ರ ಜೋರಾಗಿ ಕೇಳ್ತಿತ್ತ್.
ಬೆಳಿಗ್ಗೆ 7 ಗಂಟೆ. ಚಾಮವ್ವ ಹಾಸಿದ್ದ ಇನ್ನೂ ಒಂದು ಕಂಬಳಿ ಹೊದ್ಕಂಡ್ ಚಾಂಪ ಮಲಗಿಯೇ ಇದ್ದೊ... ಅಷ್ಟುಹೊತ್ತಿಗೆ ಕೊಟ್ಟಿಗೆಗೆ ಹಾಲು ಕರಿಯಕ್ಕೆ ಹೋಗಿದ್ದ ಚಾಮವ್ವ ಕಿರ್ಚುದು ಕೇಳ್ತ್..
`ಏ...ಇಲ್ಲಿ ಬನ್ನಿ...'
ಕೊಟ್ಟಿಗೆಗೆ ಹೋಗಿ ನೋಡಿರೆ ಅಲ್ಲಿ ಒಂದ್ ಯುದ್ಧ ಆದ ಎಲ್ಲಾ ಲಕ್ಷಣಗ ಕಾಣ್ತಿತ್ತ್. ಹಸ್ನ ಮೈ ಮೇಲೆ ದೊಡ್ಡ ಪರ್ಚಿದ ಗಾಯ... ಕರು ಹತ್ರನೇ ಬಿದ್ದಿದ್ದ ಅದ್ರ ತುಂಡಾದ ಬಾಲ... ಎಲ್ಲಿ ನೋಡಿರೂ ರಕ್ತ ! ದಾಸನ ಕಟ್ಟಿ ಹಾಕಿದಲ್ಲಿ ಸರಪಳಿ ಬಿಟ್ರೆ ಬೇರೆಂತ ಕಾಣ್ತಿಲ್ಲೆ.... ದಾಸಾ ರಾತ್ರಿ ಯಾಕೆ ಹಂಗೆ ಮರಡ್ತಿತ್ತ್ತಾ ಚಾಂಪ, ಚಾಮವ್ವಂಗೆ ಈಗ ಗೊತ್ತಾತ್. `ಯಾವ ಬಾಯ್ಲಿ ನಾ ದಾಸನ ಹುಲಿ ಹೊರ್ಲಿತಾ ಹೇಳಿಬಿಟ್ಟೆ.. ಹಂಗೆನೇ ಆಗಿಬಿಡ್ತಲ್ಲಾ'ತ ಚಾಂಪಂಗೆ ತುಂಬಾ ನೋವಾತ್... ಹಸು ಮತ್ತೆ ಕರುನ ಹುಲಿಂದ ರಕ್ಷಣೆ ಮಾಡಿಕೆ ಹೋಗಿ ದಾಸನೇ ಬಲಿಯಾಗಿಬಿಟ್ಟಿತ್ತ್.
ದಾಸನ ಕಟ್ಟಿಹಾಕ್ತಿದ್ದ ಜಾಗಲಿ ಈಗ ಒಂದು ದೊಡ್ಡ ತೆಂಗಿನ ಮರ ಉಟ್ಟು..... ಅದ್ರ ಎರಡೂ ಕಡೆ ಒಂದೊಂದು ಗೋರಿ.. ಒಂದ್ರಲ್ಲಿ ಚಾಂಪ, ಮತ್ತೊಂದ್ರಲ್ಲಿ ಚಾಮವ್ವ.. ಆಗಾಗ ಅಲ್ಲಿ ದಾಸ ಮರ್ಡುದು ಸನಾ ಕೇಳ್ತಿದ್ದದೆ !

-`ಸುಮಾ'

ನೀವೂ ಬರೆಯನಿ
 arebhase@gmail.com

1 comment: