Thursday, 28 June 2012

ಹರಿಸೇವೆ


ತೋಟದಲ್ಲಿದ್ದ ಬಳ್ವ ಹಲಸು ಜೋರು ಮಳೆಗೆ ಹಣ್ಣಾಗಿ ಕರಗಿ ಹೋಗಿತ್ತ್. ತೋಟದ ತುಂಬಾ ಅದೇ ವಾಸನೆ. ಒಂಥರ ಹಣ್ಣು ಹಣ್ಣು ವಾಸನೆ. ಮರದ ಬುಡಲಿ ಆನೆ ಲದ್ದಿ. ಹಣ್ಣು ತಿಂಬಕೆ ಬಹಶಃ ಆನೆಗ ರಾತ್ರಿ ಬಂದಿದ್ದೊ ಕಂಡದೆ. ಹತ್ತು ಹನ್ನೆರಡು ವರ್ಷಗಳಿಂದ ತೋಟನ ಹಂಗೆ ಬಿಟ್ಟಿದ್ದರಿಂದ ಕಾಡು ಕೂಡಿ ಹೋಗಿತ್ತ್. ಕಾಫಿಗಿಡಗಳೆಲ್ಲಾ ಎಲ್ಲೆಲ್ಲೂ ಕೊಂಬೆ ಹರಡಿಕಂಡ್, ತಿಂಗಳು ಗಟ್ಟಲೆ ಕೂದಲು ಕತ್ತರಿಸದ ಮನುಷ್ಯನಂಗೆ ಕಾಣ್ತಿತ್ತ್. ಒಳ್ಳೇಮೆಣಸು ಬಳ್ಳಿ ಸಿಕ್ಕಸಿಕ್ಕಲ್ಲಿ ಹರಡಿಕಂಡಿತ್ತ್. ಇನ್ನ್ ಗುಂಡಿ ತೋಟಲ್ಲಿದ್ದ ಏಲಕ್ಕಿ ಗಿಡಗಳ್ನ ನೋಡುವಂಗೆನೇ ಇತ್ಲೆ....ಬೇಲಿನೂ ಅಷ್ಟೇ, ಹೆಸರಿಗೆ ಮಾತ್ರತೇಳುವಂಗೆ ಕಾಣ್ತಿತ್. ಅಕ್ಕಪಕ್ಕದ ಮನೆಗಳವು ದನಗಳ್ನ ಈ ತೋಟಕ್ಕೆ ಹೊಡ್ದು ಕಳಿಸ್ತಿದ್ದೊ. ಒಟ್ಟಾರೆ ಈಗಿರುವ ತೋಟನ ಸರಿಮಾಡುದಕ್ಕಿಂತ ಹೊಸ ತೋಟ ಮಾಡುದೇ ಉತ್ತಮತೇಳುವ ಪರಿಸ್ಥಿತಿ ಇತ್ತ್.   
ಕಾಳಪ್ಪಂಗೆ ಬೆಂಗಳೂರು ಜೀವನ ಸಾಕಾಗಿತ್ತ್. ಸುಮಾರು 15 ವರ್ಷ ಸಿಕ್ಕಸಿಕ್ಕಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲ್ಸ ಮಾಡ್ತ್. ಹಂಗೆತೇಳಿ ಅವಂಗೆ ಬೆಂಗಳೂರ್ಲಿ ಸೆಟ್ಲ್ ಆಕುತೇಳುವ ಆಸೆಯೇನೂ ಇತ್ಲೆ. ಆರ್ಮಿಂದ  ಬಂದ ಕೂಡ್ಲೇ, ತೋಟ ನೋಡ್ಕಂಡ್ ಮನೇಲೇ ಇರ್ವ ಯೋಚನೆ ಇತ್ತ್. ಹೆಣ್ಣ್ ಹೆಂಗಿದ್ದರೂ ಮಡಿಕೇರಿಲಿ ಟೀಚರ್. ಮಕ್ಕ ಅವಳ ಜೊತೆನೇ ಇದ್ಕಂಡ್ ಸ್ಕೂಲ್ಗೆ ಹೋದರೆ, ನಾ ತೋಟ ನೋಡಿಕಂಡ್ ಇರಕ್ ತೇಳುವ ಯೋಚನೆ ಕಾಳಪ್ಪಂದ್. ಆದ್ರೆ ಎಲ್ಲಾ ನಾವು ಯೋಚನೆ ಮಾಡಿಕಂಡಂಗೆ ಎಲ್ಲಿ ಆದೆ? ಕಾಳಪ್ಪ ಆರ್ಮಿಲಿ ಇರ್ವ ವರೆಗೆ ಎಲ್ಲವೂ ಲಾಯ್ಕ ಇತ್. ತಮ್ಮ ಚೋಮುಣಿಗೆ ಅಣ್ಣತೇಳಿರೆ ಪಂಚಪ್ರಾಣ. ಆರ್ಮಿಂದ ಬಾಕಾಕನ ಬೆಂಗಳೂರಿಗೇ ಜೀಪ್ ಮಾಡಿಕಂಡ್ ಹೋಗಿ ಕರ್ಕಂಡ್ ಬರ್ತಿತ್. ವಾಪಸ್ ಹೋಕಾಕನನೂ ಅಷ್ಟೇ ಜೀಪ್ ಮಾಡಿಕಂಡ್ ಬೆಂಗಳೂರಿಗೆ ಹೋಗಿ ಕಳ್ಸಿ ಬರ್ತಿತ್ತ್. ಇದೆಲ್ಲಾ ಕಾಳಪ್ಪ ಮಿಲಿಟರಿಂದ ರಿಟೈರ್ಡ್  ಆಗಿ ಬರ್ವ ವರೆಗೆ ಮಾತ್ರ.
15 ವರ್ಷ ಸರ್ವೀಸ್ ಮಾಡಿ ಕಾಳಪ್ಪ ರಿಟೈರ್ಡ್ ಆಗಿ ಮನೆಗೆ ಬಾತ್. ಅಲ್ಲೀವರೆಗೆ ಕಾಳಪ್ಪನ ಪಾಲಿಗೆ ಬಂದ ಜಾಗನ ಚೋಮುಣಿನೇ ನೋಡ್ಕಣ್ತಿತ್. ಇನ್ನು ಮುಂದೆ ನನ್ನ ಜಾಗನ ನಾನೇ ಮಾಡಿನೆತಾ ಕಾಳಪ್ಪ ಅವನ ತೋಟದ ಜವಾಬ್ದಾರಿ ತಕ್ಕಂಡತ್. ಎರಡು-ಮೂರು ತಿಂಗ ಎಲ್ಲಾ ಸರಿ ಇತ್ತ್. ಅಣ್ಣ, ತಮ್ಮ ಇಬ್ಬರು ಸೇರಿಕಂಡ್ ರಾತ್ರಿ ಹೊತ್ತ್ ದಿನಾ ಒಂದು ಬಾಟಲಿ ಮಿಲಿಟರಿ ರಮ್ ಖಾಲಿ ಮಾಡ್ತಿದ್ದೊ. ಊರುಲಿ ಎಲ್ಲಿ ಹಂದಿ ಹೊಡೆದ್ರೂ ಇಬ್ರೂ ತಂದ್ ಸಮಾ ತಿನ್ತಿದ್ದೊ. ಒಂದು ದಿನ ಚೋಮುಣಿನ ಕೋಳಿಗ ಕಾಳಪ್ಪ ಆಗಷ್ಟೇ ನೆಟ್ಟಿದ್ದ ಒಳ್ಳೆಮೆಣಸು ಬಳ್ಳಿನೆಲ್ಲಾ ಕೇರಿ ಹಾಕಿಬಿಟ್ಟೊ. `ಸ್ವಲ್ಪ ದಿನ ನಿನ್ನ ಕೋಳಿಗಳ್ನ ನನ್ನ ತೋಟ ಕಡೆ ಬಿಡ್ಬೇಡರಾ...'ತಾ ಕಾಳಪ್ಪ ಚೋಮುಣಿಗೆ ಹೇಳ್ದೇ ತಪ್ಪಾಗಿಬಿಡ್ತ್. ಚೋಮುಣಿ ಜಗಳಕ್ಕೆ ನಿಂತತ್. ಅಲ್ಲಿಂದ ಕಾಳಪ್ಪ ತಮ್ಮನ ಜೊತೆ ಮಾತಾಡುದುನ ಕೂಡ ನಿಲ್ಲಿಸಿಬಿಡ್ತ್. ಆದ್ರೆ ಚೋಮುಣಿ ಸುಮ್ಮನಾತ್ಲೆ. ದಿನಾ ಕುಡ್ದು ಬಂದ್ ಸಣ್ಣ ಸಣ್ಣ ವಿಷಯಗಳಿಗೂ ಜಗಳ ಆಡಿಕೆ ಶುರು ಮಾಡ್ತ್. ಒಂದು ದಿನ ಅಂತೂ ಕೋವಿ ತಕ್ಕಂಡ್ ಬಂದ್ ಗುಂಡು ಹೊಡ್ದೇಬಿಡ್ತ್. ಆದ್ರೆ ಚೋಮುಣಿ ಟ್ರಿಗರ್ ಅಮುಕ್ತಿದ್ದಂಗೆ ಅವನ ಹೆಣ್ಣ್ ಬಂದ್ ಕೋವಿನ ಮೇಲೆಕ್ಕೆ ನೂಕಿದ್ರಿಂದ ಗುಂಡು ಆಕಾಶ ಕಡೆ ಹೋತ್. ಇಲ್ಲದಿದ್ದರೆ ಅಂದ್ ಕಾಳಪ್ಪ ಹೆಣ ಆಗಿರ್ತಿತ್ತ್, ಚೋಮುಣಿ ಜೈಲು ಸೇರಿಕಣ್ತಿತ್.
ಈ ಗುಂಡು ಹೊಡೆದ ಘಟನೆ ಆದ್ಮೇಲೆ ಕಾಳಪ್ಪ ಮನೆ ಬಿಟ್ಟು ಬೆಂಗಳೂರು ಸೇರಿಕಣ್ತ್. ಸೆಕ್ಯೂರಿಟಿ ಏಜೆನ್ಸೀಲಿ ಕೆಲ್ಸ. ಏಜನ್ಸಿಯವು ಡ್ಯೂಟಿಗೆ ಹಾಕಿದ ಕಡೆ ಇಂವ ಕೆಲಸ ಮಾಡೊಕು. ಬ್ಯಾಂಕ್, ಫ್ಯಾಕ್ಟರಿ, ಸ್ಕೂಲ್, ಕಾಲೇಜು..ಹಿಂಗೆ ಸುಮಾರು ಕಡೆ ಕಾಳಪ್ಪ ಸೆಕ್ಯುರಿಟಿ ಆಗಿ ಕೆಲ್ಸ ಮಾಡ್ತ್. ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಮಡಿಕೇರಿಗೆ ಹೆಣ್ಣ್ ಹತ್ರ ಹೋಗಿ ಬರ್ತಿತ್ತ್. ಆದ್ರೆ ತೋಟದ ಕಡೆ ತಲೆ ಹಾಕಿತ್ತ್ಲೆ. ಹಿಂಗಿರ್ಕಾಕನ ಒಂದು ದಿನ ಎಟಿಎಂಗೆ ದುಡ್ಡು ತಕ್ಕಂಡ್ ಹೋಗುವ ವ್ಯಾನ್ಗೆ ಕಾಳಪ್ಪನ ಸೆಕ್ಯುರಿಟಿಯಾಗಿ ಅವನ ಏಜನ್ಸಿಯವು ಕಳಿಸಿದ್ದೊ. ಕೋರಮಂಗಲದ ಹತ್ರ ಇರ್ವ ಎಟಿಎಂ ಅದ್. ಅಷ್ಟಾಗಿ ಜನ ಓಡಾಡುದುಲ್ಲೆ ಅಲ್ಲಿ. ಇನ್ನೇನು ದುಡ್ಡು ತುಂಬಿದ ಪೆಟ್ಟಿಗೆನ ವ್ಯಾನ್ಂದ ಇಳ್ಸೊಕು, ಅಷ್ಟೊತ್ತಿಗೆ ಮೂರು ಜನ ಡಕಾಯಿತರು ನುಗ್ಗಿಬಂದೊ. ಅವ್ರ ಕೈಲಿ ಲಾಂಗ್ ಬಿಟ್ಟರೆ ಬೇರೆಂಥದ್ದೂ ಇತ್ಲೆ. ವ್ಯಾನ್ಲಿ ಕೂಡ ಇದ್ದದ್ ಮೂರೇ ಜನ. ಡ್ರೈವರ್, ಬ್ಯಾಂಕಿನಂವ ಮತ್ತೆ ಕಾಳಪ್ಪ. ಇನ್ನೇನು ಒಬ್ಬ ಡಕಾಯಿತ ಡ್ರೈವರ್ ಮೇಲೆ ಲಾಂಗ್ ಬೀಸೊಕು, ಕಾಳಪ್ಪ ಆ ಡಕಾಯಿತನ ಕಾಲಿಗೆ ಗುಂಡು ಹೊಡ್ತ್. ಅಷ್ಟೊತ್ತಿಗೆ ಹಿಂದೆಂದ ಇನ್ನೊಬ್ಬ ಡಕಾಯಿತ ಕಾಳಪ್ಪನ ಕುತ್ತಿಗೆಗೆ ಲಾಂಗ್ ಬೀಸಿಕೆ ನೋಡ್ತ್. ಆದ್ರೆ ಆಗ ಕಾಳಪ್ಪ ಕೈ ಅಡ್ಡ ಹಿಡ್ದದ್ರಿಂದ ಆ ಪೆಟ್ಟು ಕೈಗೆ ಬಿತ್ತ್. ಇಷ್ಟೆಲ್ಲಾ ಆಗ್ತಿದ್ದಂಗೆ ಜನ ಸೇರಿಕೆ ಶುರುವಾತ್. ಇಬ್ಬರು ಡಕಾಯಿತರು ಕಾಲಿಗೆ ಗುಂಡು ಬಿದ್ದವನನ್ನ ಅಲ್ಲಿಯೇ ಬಿಟ್ಟು ಪರಾರಿ ಆದೊ. ಕಾಳಪ್ಪನ ಸಾಹಸಂದ ಅಂವ ಕೆಲಸ ಮಾಡ್ತಿದ್ದ ಏಜೆನ್ಸಿ ಓನರ್ಗೆ ತುಂಬಾ ಖುಷಿ ಆತ್. ಪ್ರಮೋಶನ್ ಕೊಟ್ಟು ಕಾಳಪ್ಪನ ಆಫೀಸ್ಲೇ ಇಟ್ಟ್ಕಣ್ತ್.
ಅಂದ್ ಮಡಿಕೇರಿ ಗೌಡ ಸಮಾಜಲಿ ಕಾಳಪ್ಪನ ಅಕ್ಕನ ಮಗನ ಮದುವೆ. ಎಲ್ಲಾ ನೆಂಟರಿಷ್ಟರು ಬಂದಿದ್ದೊ. ಕಾಳಪ್ಪನೂ ಹೋಗಿತ್ತ್. ಚೋಮುಣಿನೂ ಬಂದಿತ್ತ್. ಸುಮಾರು ಹತ್ತು ವರ್ಷಂದ ಅವು ಇಬ್ಬರೂ ಒಬ್ಬರನ್ನೊಬ್ಬರು ನೋಡಿತ್ಲೆ. ಈಗ ಕಾಳಪ್ಪನ ನೋಡಿಕಾಕನ ಚೋಮುಣಿ ಕಣ್ಣಲಿ ನೀರು ಬಾತ್. ಸೀದಾ ಬಂದವನೇ ಕಾಳಪ್ಪನ ಕಾಲ್ ಹಿಡ್ಕಂಡತ್. `ನಾ ತಪ್ಪು ಮಾಡಿಬಿಟ್ಟೆ...ಇನ್ನು ನಿನ್ ಜೊತೆ ಜಗಳ ಆಡುಲೆ... ಮನೆಗೆ ಬಾ...ಪ್ಲೀಸ್...' ಅಣ್ಣನ ಮುಂದೆ ಮರ್ಟ್ಕಂಡ್ ಚೋಮುಣಿ ಹೇಳ್ತಿದ್ದರೆ, ಕಾಳಪ್ಪನ ಕಣ್ಣ್ಲಿ ಕೂಡ ನೀರು...ಅಷ್ಟೊತ್ತಿಗೆ ಕಾಳಪ್ಪಂಗೂ ಬೆಂಗಳೂರು ಸಾಕಾಗಿ ಹೋಗಿತ್ತ್. ವಾಪಸ್ ತೋಟಕ್ಕೆ ಬಾಕೆ ಮನಸ್ಸು ಮಾಡ್ತ್.
ಕಾಳಪ್ಪ ಹೊಸದಾಗಿ ತೋಟ ಮಾಡಿಕೆ ಇಳ್ತ್. ಚೋಮುಣಿ ಹಳೇದೆಲ್ಲಾ ಮರ್ತು ಅಣ್ಣನ ಸಹಾಯಕೆ ಬಾತ್. ಐದೇ ವರ್ಷಲಿ ಕಾಳಪ್ಪನ ಹೊಸ ತೋಟ ರೆಡಿ ಆತ್. ಅಣ್ಣ, ತಮ್ಮ ಇಬ್ಬರೂ ಸೇರಿಕಂಡ್ ಒಂದು ದೊಡ್ಡ ಮನೆನೂ ಕಟ್ಟಿದೋ. ಕಾಳಪ್ಪನ ಹೆಣ್ಣ್ಗೂ ರಿಟೈರ್ ಆಗುಟ್ಟು. ಅಣ್ಣ ಮತ್ತೆ ತಮ್ಮ ಇಬ್ಬರ ಮಕ್ಕಳೂ ಬೆಂಗಳೂರುಲಿ ಕೆಲಸಕ್ಕೆ ಸೆರಿಕೊಂಡೊಳೊ...ಈಗ ಹರಿಸೇವೆ ಮಾಡಿವೆ ಗಡ !
 - `ಸುಮಾ'

Tuesday, 26 June 2012

ಮೂಗುಬೊಟ್ಟಿನ ಚೆಲುವೆ... !


ಹೊರಗೆ ಓಲಗದ ಶಬ್ದ.. ಅಲ್ಲೇ ಸ್ವಲ್ಪ ದೂರಲಿ ಹಾಕಿರುವ ದೊಡ್ಡ ಒಲೆ ಮೇಲೆ ಕಡಾಯಿಲಿ, ಎಣ್ಣೆಬಿಟ್ಟ್ಕಂಡ್ ಬೇಯ್ತಿರ್ವ ಹಂದಿಮಾಂಸ. ಮನೆ ಒಳಗೆ ಗಿಜಿಗಿಜಿ...ಇಂದ್ ನಂದಂದ್ ಚಪ್ಪರ. ಸೋದರ ಮಾವ ಕಾಸ್ತಾಳಿ ಕಟ್ಟಿ, ಎಣ್ಣೆ ಅರಸಿನ ಶಾಸ್ತ್ರಕ್ಕೆ ನಂದನ ದೇವರ ಫೋಟೋದ ಕೆಳಗೆ ಕೂರಿಸಿದ್ದೊ. ಅದ್ ದೊಡ್ಡಮನೆ. ತುಂಬಾ ಹಳೇ ಮನೆ. ಒಳಗೆ ಸರಿಯಾಗಿ ಬೆಳಕು ಬಾದುಲೆ. ವೀಡಿಯೋಗ್ರಾಫರ್ ಹಾಕ್ಕಂಡಿದ್ದ ಲೈಟ್ ಮಾತ್ರ ಇಡೀ ರೂಂನ ಬೆಳ್ಳಂಗೆ ಮಾಡಿಬಿಟ್ಟಿತ್ತ್. ಒಮ್ಮೊಮ್ಮೆ ಅಂವ ಲೈಟ್ ಆಫ್ ಮಾಡಿಕಾಕನ ಹಗಲಲ್ಲೂ ಅಮವಾಸ್ಯೆ ರಾತ್ರಿ ಇದ್ದಂಗೆ ಅನ್ನಿಸಿಬಿಡ್ತಿತ್. ಆ ಕತ್ತಲಲ್ಲೂ ಗೂಡೆಗಳ ಗುಂಪುಲಿ ಒಂದು ನಕ್ಷತ್ರ ಫಳ ಫಳ ಹೋಳೀತಿತ್ತ್ !  
ನಂದಂಗೆ ನಾ ಅಡೋಳಿ. ಎಣ್ಣೆಅರಸಿನ ಶಾಸ್ತ್ರ ನಡೆಯಕಾಕನ ಅವನ ಪಕ್ಕಲೇ ನಾ ನಿಂತ್ಕಂಡಿದ್ದೆ. ವೀಡಿಯೋ ಕೆಮರಾದ ಲೈಟ್ ನೋಡಿ ನೋಡಿ, ಎದುರಿಗೆ ಇದ್ದೆಲ್ಲಾ ಕಾಣದ ಸ್ಥಿತಿ...ಗೂಡೆಗಳ ಗುಂಪುಲಿ ಹೊಳೀತ್ತಿದ್ದ ನಕ್ಷತ್ರ ಬಿಟ್ಟ್..! ಅದೊಂದು ಮಾತ್ರ ನಂಗೆ ತುಂಬಾ ಲಾಯ್ಕ ಕಾಣ್ತಿತ್. ಅಲ್ಲಿ ನಂಗೆ ಕಾಣ್ತಿದ್ದದ್ ಮೂಗುಬೊಟ್ಟು. ಆ ಮೂಗುಬೊಟ್ಟೇ ಇಷ್ಟ್ ಪೊರ್ಲು ಇದ್ದರೆ, ಇನ್ನ್ ಅದನ್ನ ಹಾಕ್ಕಂಡಿರ್ವ ಗೂಡೆ ಹೆಂಗಿರ್ದು....ನಾ ನನ್ನದೇ ಲೋಕದಲ್ಲಿದ್ದೆ. `ಹೈದನ ಕಣ್ಣಿಗೆಲ್ಲಾ ಎಣ್ಣೆ ಬರ್ತುಟ್ಟು...ಅಡೋಳಿ ಎಂಥ ಮಾಡ್ದೆ...ಒಂದು ಬಟ್ಟೆ ತಕ್ಕಂಡ್ ಉಜ್ಜಿಕೆ ಆಲೆನಾ...' ಯಾರೋ ಹಿಂದೆಂದ ಕಿರ್ಚಿಕನ ನಾ ಎಚ್ಚರ ಆದೆ. ಆ ಗಡಿಬಿಡಿಲಿ ಎಷ್ಟು ಹೆಣ್ಣ್ಜನ ಶಾಸ್ತ್ರ ಮಾಡ್ದೊತೇಳುದ್ನ ಲೆಕ್ಕ ಹಾಕಿಕಂಬಕೆ ನಾ ಮರ್ತುಬಿಟ್ಟಿದ್ದೆ. ಮೇಲೆ ಮನೆ ಆಂಟಿ ಕೇಳಿಕಾಕನ ನಾ ಸುಮ್ನೆ `8 ಜನ ಆದೋ..' ತಾ ಹೇಳ್ದೆ. `ಹಂಗಾರೆ ಇನ್ನೊಬ್ಬರ್ ಇಲ್ಲಿ ಮಾಡ್ಲಿ. ಉಳ್ದವೆಲ್ಲಾ ಚಪ್ಪರ ಕೆಳಗೆ ಮಾಡ್ಲಿ..'ತಾ ಹೇಳ್ತಿದ್ದಂಗೆ, ಸೋದರಮಾವ ನಂದನ ಚಪ್ಪರದ ಕೆಳಗೆ ಕರ್ಕೊಂಡ್ ಹೋದೋ...
ಚಪ್ಪರದ ಕೆಳಗೆ ಒಬ್ಬೊಬ್ಬರೇ ಬಂದ್ ಎಣ್ಣೆ ಅರಸಿನ ಶಾಸ್ತ್ರ ಮಾಡ್ತಿದ್ದೊ... ನಾ ಮಾತ್ರ ಆ ಪೊರ್ಲುನ ಮೂಗುಬೊಟ್ಟುನ ಹುಡುಕಿಕೆ ಶುರುಮಾಡ್ದೆ. ಹೊರಗೆ ಜಾಸ್ತಿ ಬೆಳಕು ಇದ್ದಕ್ಕೆ ಕಂಡದೆ, ನಂಗೆ ಮತ್ತೆ ಮೂಗುಬೊಟ್ಟು ಕಾಂಬಕೆ ಸಿಕ್ತ್ಲೆ...ಇಲ್ಲೂ ಎಣ್ಣೆ ಅರಸಿನ ಶಾಸ್ತ್ರ ಮುಗ್ತ್. ನಂದನ ಸ್ನಾನ ಮಾಡ್ಸಿ ಆತ್. ಎಲ್ಲಾ ಮುಗ್ಸಿ ಬಾಕಾಕನ ಹಸೆನೂ ಬರ್ದ್ ಆಗಿತ್ತ್. ಮದರಂಗಿ ಶಾಸ್ತ್ರಕ್ಕೆ ನಂದನ ಹಸೆಮಣೆ ಎದ್ರು ಕೂರ್ಸಿದೊ. ಮತ್ತೆ ಅದೇ ಕತ್ತಲೆ ಜಾಗ...ವೀಡಿಯೋಗ್ರಾಫರ್ ಲೈಟ್...ಗೂಡೆಗಳ ಗುಂಪು ಕಡೆ ನೋಡಿರೆ.. ಈಗ ಅಲ್ಲಿ ಆ ಮೂಗುಬೊಟ್ಟು ಹೊಳೀತ್ತುಟ್ಟು ! ನಂದನ ಕೈಗೆ ಯಾರೋ ಇಬ್ಬರು ಮದರಂಗಿ ಮೆತ್ತ್ತಿದ್ದೊ. ಇನ್ಯಾರೋ ನನ್ನ ಕೈ ಹಿಡ್ದೆಳ್ದ್, ಮದರಂಗಿ ಹಾಕಿಕೆ ಶುರುಮಾಡ್ದೊ. ಕೈಯೆಲ್ಲಾ ಕೋಟ ಕೋಟ ಆಗ್ತಿತ್ತ್. ಆದ್ರೂ ನನ್ನ ಕಣ್ಣ್ ಮಾತ್ರ ಆ ಮೂಗುಬೊಟ್ಟ್ನ ಸುಂದರಿಗಾಗಿ ಹುಡುಕಾಡ್ತಿತ್ತ್. ಆದ್ರೆ ಅಲ್ಲಿ ಕಾಣ್ತಿದ್ದದ್ ಬರೀ ಮೂಗುಬೊಟ್ಟು... ಆದನ್ನ ಹಾಕ್ಕಂಡಿರ್ವ ಗೂಡೆ ಮಾತ್ರ ಕಾಣ್ತಿಲ್ಲೆ !
ಮಡಿಕೇರಿ ಗೌಡ ಸಮಾಜಲಿ ಮದುವೆ. ಹೆಸರಿಗಷ್ಟೇ ನಾ ಅಡೋಳಿ ಆಗಿದ್ದೆ. ಅಡೋಳಿ ಮಾಡಕ್ಕಾಗಿದ್ದ ಕೆಲ್ಸನ್ನೆಲ್ಲಾ ದಿಬ್ಬಣ ಮುಖ್ಯಸ್ಥ ಹೇಳ್ತಿತ್ತ್. ಅಂವ ಏನು ಹೇಳ್ತಿತ್ತೊ, ಅದ್ನ ನಾ ಮಾಡ್ತಿದ್ದೆ. ಆದ್ರೆ ಮನಸ್ಸು ಮಾತ್ರ ಆ ಫಳ ಫಳ ಮೂಗುಬಟ್ಟುನ ಹುಡುಕಾಡ್ತಿತ್ತ್. ಹೂಂ...ಮದುವೆ ಮುಗ್ದು ನಂದನ ಗೂಡೆನ ಮನೆ ಹತ್ತಿಸಿ ಆದ್ರೂ, ನಂಗೆ ಮೋಡಿ ಮಾಡಿದ ಆ ಮೂಗುಬಟ್ಟುನ ಗೂಡೆ ಯಾರುತಾ ಕಂಡು ಹಿಡಿಯಕ್ಕೆ ಆತ್ಲೆ. ಮದುವೆ ಕಳ್ದ್ ಒಂದು ವಾರ ಆದ್ಮೇಲೆ, ಫೋಟೋಗಳಲ್ಲಿ ಹುಡುಕಿದೆ.. ವೀಡಿಯೋ ಹಾಕಿ ಎರಡೆರಡು ಸಲ ನೋಡ್ದೆ... ಅಲ್ಲಿ ಬರೀ ಮೂಗುಬೊಟ್ಟುನ ಹೊಳಪು ಮಾತ್ರ ಕಾಣ್ತಿತ್ತ್... ಆದ್ರೆ ಆ ಸುಂದರಿ ಮುಖ ಕತ್ತಲೆಯಲ್ಲಿ ಮುಳುಗಿ ಹೋಗಿತ್ತ್. ಈಗಲೂ ಹುಡುಕ್ಕುತ್ತೊಳೆ ಆ ಮೂಗುಬೊಟ್ಟು ಸುಂದರಿನ.... ನಿಮಿಗೆ ಕಂಡರೆ ಪ್ಲೀಸ್ ನಂಗೆ ತಿಳ್ಸಿ...

- `ಸುಮ'
arebhase@gmail.com

Saturday, 23 June 2012

ಎಂತೆಂಥಾ ಆಸೆಗಳಪ್ಪಾ...!


`ಕೊಡೆ ರಿಪೇರಿ...ಬಕೆಟ್ ರಿಪೇರಿ...' ನನ್ನ ಮನೆ ಹತ್ರ ಒಬ್ಬ ಜೋರಾಗಿ ಕೂಗಿಕಂಡ್ ಹೋಗ್ತಿತ್. ಇದ್ನ ಕೇಳ್ತಿದ್ದಂಗೆ ನಂಗೆ ನಾ ಎರಡನೇ ಕ್ಲಾಸ್ಲಿ ಇರ್ಕಾಕನ ನಡ್ದ ಒಂದು ಘಟನೆ ನೆನಪಿಗೆ ಬಾತ್. ಮುಖಲಿ ಸಣ್ಣ ನಗು ಕೂಡ ಕಾಣಿಸಿಕಂಡತ್. ಚಿಕ್ಕವು ಇರಿಕಾಕನ ನಮ್ಮ ಯೋಚನೆಗ ಹೆಂಗೆ ಇದ್ದವೆ? ಆ ಯೋಚನೆಗಳ ಮೇಲೆ ಸುತ್ತಲಿನ ಪರಿಸರ ಹೆಂಗೆ ಪರಿಣಾಮ ಬೀರಿದೆ... ನಾವು ಮುಂದೆ ಏನು ಆಕುತೇಳಿ ಯೋಚನೆ ಮಾಡಿದ್ದವೆನೋ, ಅದ್ ಬೆಳಿತಾ ಇದ್ದ ಹಂಗೆ ಎಷ್ಟೆಲ್ಲಾ ಬದಲಾವಣೆಗ ಆದವೆ....ಕೊನೆಗೆ ನಮ್ಮ ಹಣೇಲಿ ಏನು ಬರ್ದಿದ್ದದೆನೋ ಅದೇ ನಮ್ಮಪಾಲಿಗೆ ಸಿಕ್ಕುದಂತೂ ನಿಜ.
ಆಗಷ್ಟೇ ನಾವೆಲ್ಲಾ ಒಂದನೇ ಕ್ಲಾಸ್ನ ಆ ಸಣ್ಣಬೆಂಚ್ಗಳ್ನ ಬಿಟ್ಟ್, ಎರಡನೇ ಕ್ಲಾಸ್ನ ಸ್ವಲ್ಪ ದೊಡ್ಡ ಬೆಂಚ್ಗೆ ಬಂದಿದ್ದೊ. ವೇದಾವತಿ ಟೀಚರ್ ನಮಿಗೆ ಕ್ಲಾಸ್ ಟೀಚರ್. ಅವ್ಕೆ ಸಿಟ್ಟು ಜಾಸ್ತಿ. ಕೈಲಿ ಬೆತ್ತ ಹಿಡ್ಕಂಡೇ ಕ್ಲಾಸ್ಗೆ ಬರ್ತಿದ್ದೊ. ಯಾರಿಗಾದ್ರೂ ಒಬ್ಬರಿಗೆ ಪೆಟ್ಟು ಬಿದ್ದೇ ಬೀಳ್ತಿದ್ದದಂತೂ ಗ್ಯಾರಂಟಿ. ನಾ ಸ್ವಲ್ಪ ಕೀಟಲೆ ಜಾಸ್ತಿ ಮಾಡ್ತಿದ್ದರಿಂದ, ಎರಡು ದಿನಕ್ಕೆ ಒಮ್ಮೆಯಾದ್ರೂ ಅವ್ರಿಂದ ಪೆಟ್ಟು ತಿನ್ತಿದ್ದೆ. ಶುರುಲೆಲ್ಲಾ ಅವು ಹೊಡೆಯಕಾಕನ ಮರ್ಟುಬಿಡ್ತಿದ್ದೆ. ಆದ್ರೆ ಬರ್ತಾ ಬರ್ತಾ ಅಭ್ಯಾಸ ಆಗಿಹೋತ್.. ಹೊಡೆದ್ರೂ ಹೊಡೆಸಿಕಂಡ್ ಸುಮ್ಮನಾಗಿಬಿಡ್ತಿದ್ದೆ. ಆಮೇಲೆ ಯಥಾ ಪ್ರಕಾರ ಕೀಟಲೆ...
ಅದೊಂದು ಜೋರು ಮಳೆಗಾಲದ ದಿನ. ಪಾಠ ಮಾಡಿ ಮಾಡಿ ವೇದಾವತಿ ಟೀಚರ್ಗೆ ಬೋರ್ ಆಗಿತ್ತೇನೋ...ಮಕ್ಕಳನ್ನೆಲ್ಲಾ ಮುಂದೆ ನೀವು ಎಂಥ ಆಕುತಾ ಒಳರಿತಾ ಒಬ್ಬೊಬ್ಬರನ್ನೇ ಕೇಳಿಕೆ ಶುರುಮಾಡ್ದೊ. ನಾ ಮೂರನೇ ಬೆಂಚ್ಲಿ ಕೂತಿದ್ದೆ. ಒಬ್ಬೊಬ್ಬರದ್ ಒಂದೊಂದು ಆಸೆ. ಗೂಡೆಗಳಲ್ಲಿ ಹೆಚ್ಚಿನವು `ನಾನು ಟೀಚರ್ ಆಗ್ತೀನಿ'ತಾ ಹೇಳ್ದೊ. ಹೈದಂಗಳಿಗೆ ಮಿಲಿಟರಿಗೆ ಹೋಗುವ ಆಸೆ. ಪ್ರವೀಣ ಮಾತ್ರ, `ನಾನು ಎಂಜೀಯರ್ ಆಗ್ತೀನಿ ಟೀಚರ್...'ತಾ ಹೇಳಿತ್ತ್. ಆಶ್ಚರ್ಯ ತೇಳಿರೆ ಈಗ ಅಂವ ಎಂಜಿನೀಯರ್ ಆಗುಟ್ಟು ! ನನ್ನ ಸರದಿ ಬಾತ್...`ಟೀಚರ್ ನಾನು ದೊಡ್ಡವನಾದ ಮೇಲೆ ಕೊಡೆ ರಿಪೇರಿ, ಪ್ಲಾಸ್ಟಿಕ್ ಬಕೆಟ್ ರಿಪೇರಿ ಮಾಡುವವನು ಆಗ್ತೀನಿ..'ತಾ ಹೇಳ್ದೆ. ಯಾವಗ್ಲೂ ಗಂಟುಮುಖ ಹಾಕ್ಕೊಂಡಿರ್ವ ವೇದಾವತಿ ಟೀಚರ್ಗೆ ನನ್ನ ಮಾತು ಕೇಳಿ ತಡ್ಕಂಬಕೆ ಆತ್ಲೆ...ಜೋರಾಗಿ ನಗಾಡಿಬಿಟ್ಟೊ. ಇದ್ನ ನೋಡಿ ಕ್ಲಾಸ್ಲಿ ಇದ್ದ ಮಕ್ಕ ಕೂಡ ನಗಾಡಿಕೆ ಶುರು ಮಾಡ್ದೊ...ಅದ್ನ ಯೋಚನೆ ಮಾಡಿರೆ ನಂಗೆ ಈಗಲೂ ನಗುಬಂದದೆ. ಅಂದ್ ನಾ ಯಾಕೆ ಹಂಗೆ ಹೇಳಿದ್ದೆನೋ...
- `ಸುಮ'
arebhase@gmail.com

Thursday, 21 June 2012

ಬೆಕ್ಕಿನ ಸಂಸಾರ...


ಯಾವ ಮನೆಯ ಮಗಳೋ ನೀ ?
ಇದೇ ಜಾಗ ಬೇಕಿತ್ತಾ ನಿಂಗೆ ?
ಹೊರಗೆ ಜಡಿಮಳೆ !
ಗೋಡೇಲಿ ಜಿನುಗುತ್ತಿರ್ವ ನೀರು
ಮುರಿದ ಬಾಗಿಲಿಂದ 
ನುಗ್ಗುತ್ತಿರ್ವ ಚಳಿಗಾಳಿ !
ಇಲ್ಲೇ ಹೆತ್ತೊಳಲ್ಲಾ
ಮೂರು ಮುದ್ದು ಮಕ್ಕಳಾ...!
ಅದೆಷ್ಟು ಲಾಯ್ಕ...
ನಿನ್ನ ಕಂದಮ್ಮಗ !
ಒಂದಕ್ಕಿಂತ ಒಂದು ಚೆಂದ !
ಆದ್ರೆ ಪಾಪ...
ಆ ಕೋಟನ ಹೇಂಗೆ ತಡ್ಕಂಡವೆ ?
ಬರೀ ನಿನ್ನ ಬೆಚ್ಚನೆ ಅಪ್ಪುಗೆ ಸಾಕಾ ?
ನೀ ಕೊಡ್ವ ಮೊಲೆಹಾಲಿಗೆ
ಅಷ್ಟೊಂದು ಶಕ್ತಿ ಉಟ್ಟಾ ?
ನನ್ನದೊಂದು ಹಳೇ ಕಂಬಳಿ
ಕೊಡ್ನೋತೇಳಿರೆ....
ದುರುಗುಟ್ಟಿಕಂಡ್ ನೋಡಿಯಾ...
ಬಿಸಿ ಬಿಸಿ ಹಾಲು ತಂದರೆ
ದೊಡ್ಡಕಣ್ಣು ಬಿಟ್ಟು ಹೆದರಿಸಿಯಾ...
ನೀ ಅಷ್ಟೊಂದು ಸ್ವಾಭಿಮಾನಿಯಾ ?
ಸಾಕ್ ನಿನ್ನ ಜಂಭ..
ನೋಡಲ್ಲಿ ನಿನ್ನ ಮಕ್ಕ 
ಮೀಯಾಂವ್... ಮಿಯಾಂವ್....ಹೇಳ್ತೊಳೊ !
ಹೋಗಿ ಹಾಲು ಕೊಡು... 

`ಸುಮ'
arebhase@gmail.com

Tuesday, 19 June 2012

ಮಳೆಗಾಲದ ಮಧುರ ನೆನಪು


ಮಳೆತೇಳಿರೆ ನೆನಪಾದು ಭಾಗಮಂಡಲ. ಮುಂಗಾರು ಹನಿ ನೆತ್ತಿ ಮೇಲೆ ಬೀಳಿಕಾನ, ಎಲ್ಲೇ ಇದ್ದರೂ ಭಾಗಮಂಡಲದ ಸವಿ ಸವಿ ನೆನಪಿನ ಬುತ್ತಿ ಬಿಚ್ಚಿಕಂಡದೆ. ಸಾಮಾನ್ಯವಾಗಿ ಅಲ್ಲಿ ಮೇ ಕೊನೆಗೆ ಸಣ್ಣಗೆ ಮಳೆ ಬೀಳಿಕೆ ಶುರುವಾದೆ. ಬೇಸಿಗೆ ರಜೆ ಕಳ್ದ್ ಶಾಲೆಯ ಬಾಗಿಲು ತೆಗೆಯಕಾಕನ ಮಳೆನೂ ಸ್ವಲ್ಪ ಸ್ವಲ್ಪನೇ ಜೋರಾಗ್ತಾ ಬಂದದೆ. ಜೂನ್ ಎರಡನೇ ವಾರದ ನಂತರ ಅಂತೂ ಬರೀ ಮಳೆಯದ್ದೇ ಅಬ್ಬರ....ಭಾಗಮಂಡಲ - ಮಡಿಕೇರಿ, ಭಾಗಮಂಡಲ - ನಾಪೋಕ್ಲು ರೋಡ್ ಮೇಲೆ ಎಷ್ಟು ಸಲ ನೀರು ಬಂದದೆತ ಹೇಳಿಕೆ ಆಲೆ. ಆಗಲ್ಲೇ ಮಕ್ಕಳಿಗೆ ತುಂಬಾ ಖುಷಿ... ಶಾಲೆಗೆ ರಜೆ ಸಿಕ್ಕಿದೆಯೆಲ್ಲಾ...
ಹೊರಗೆ ಜೋರು ಮಳೆ ಬರ್ತಿದ್ದರೆ, ಮನೆ ಒಳಗೆ ಒಲೆ ಬುಡಲಿ ಬೆಂಕಿ ಕಾಯಿಸುವ ಮಜಾನೇ ಬೇರೆ. ಅಟ್ಟಲಿ ಒಣಗಿಸಿಟ್ಟ ಹಲಸಿನ ಬೀಜನ ಓಡುಲಿ ಹುರ್ದ್ ಒಂದೊಂದೇ ಕಟುಂ, ಕುಟುಂತಾ ಅಗಿತಾ ಇದ್ದರೆ, ಚಳಿ ಎಲ್ಲಾ ಮಾಯ. ಇನ್ನು ಮಳೆತೇಳಿ ಶಾಲೆಗೆ ರಜೆ ಕೊಟ್ಟಿರ್ಕಾಕನ ನಾವು ಮಕ್ಕ ಎಲ್ಲಾ ಸೇರ್ತಿದ್ದದ್ ರಾಜಣ್ಣನ ಅಂಗಡೀಲಿ. ಮಳೆ ಇದ್ದರೆ ಅವ್ಕೂ ವ್ಯಾಪಾರ ಇರ್ದುಲ್ಲೆ. ನಂ ಜೊತೆ ಸೇರ್ಕಂಡ್ ರಮ್ಮಿ ಆಡ್ತಿದ್ದೊ... ಆಟ ಆಡಿ ಆಡಿ ಬೋರ್ ಆದ್ರೆ ಅಲ್ಲೊಂದು ಲಾಟರಿ ಯೋಜನೆ ! ನಾವು ಎಷ್ಟು ಜನ ಇದ್ದವೆನೋ, ಅಷ್ಟೂ ಸಂಖ್ಯೆಲಿ ಚೀಟಿ ಹಾಕ್ತಿದ್ದೊ. ಆ ಚೀಟಿಲಿ 1 ರಿಂದ 20ರ ವರೆಗೆ ಅಂಕಿ ಬರ್ದಿಡ್ತಿದ್ದೊ. ಲಾಟರಿ ತೆಗೆಯಕಾಕನ ಯಾರಿಗೆ ಯಾವ ಸಂಖ್ಯೆ ಬಂದದೆನೋ ಅವು ಅಷ್ಟು ದುಡ್ಡು ಹಾಕಕ್ಕಾಗಿತ್ತ್. ಅಂದ್ರೆ, 1 ತಾ ಬಂದಿದ್ದರೆ 1 ರೂಪಾಯಿ, 10 ತಾ ಬಂದಿದ್ದರೆ 10 ರೂಪಾಯಿ... ಹಿಂಗೆ ಎಲ್ಲರ ಕೈಯಿಂದ ದುಡ್ಡು ಕಲೆಕ್ಟ್ ಮಾಡಿಕ್ಕಂಡ್, ಸಂತೋಷ್ ಹೊಟೇಲ್ಂದ ಬಿಸಿ ಬಿಸಿ ಕಾಫಿ ಮತ್ತೆ ಪಕೋಡ ತರ್ಸಿಕಂಡ್ ಮೈ, ಮನಸ್ಸು ಎಲ್ಲಾ ಬಿಸಿ ಮಾಡಿಕಣ್ತಿದ್ದೊ....ಇಲ್ಲಿಂದ ಶುರುವಾಗ್ತಿತ್ತ್ ನಮ್ಮ ಕಟ್ಟೆಪುಣಿ ಯಾತ್ರೆ ! 
ಕಟ್ಟೆಪುಣಿತೇಳಿರೆ ಕಾವೇರಿ ಹೊಳೆಬದೀಲಿ ಎತ್ತರಲಿ ಕಟ್ಟಿರ್ವ ದೊಟ್ಟ ಕಟ್ಟೆ. ಈ ಕಟ್ಟೆದ್ ಒಂದು ಸೈಡ್ಲಿ ನಾರಾಯಾಣಾಚಾರ್ ಅವ್ರ ಗದ್ದೆ ಮತ್ತೊಂದು ಬದೀಲಿ ಸಿರಕಜೆ ಮನೆಯವ್ರ ಗದ್ದೆ ಉಟ್ಟು. ಮಳೆಗಾಲಲಿ ಈ ಎರಡೂ ಗದ್ದೆಗಳ ತುಂಬಾ ನೀರು ತುಂಬಿಕೊಂಡ್, ದೊಡ್ಡ ಕೆರೆನಂಗೆ ಕಂಡದೆ. ಆಗ ಈ ಕಟ್ಟೆಪುಣಿ, ಕೆರೆಗೆ ಹಾಕಿದ ಪಾಲದಂಗೆ ಇದ್ದದೆ. ಜೋರಾಗಿ ಗಾಳಿ ಬೀಸಿಕಾಕನ ಕಟ್ಟೆಪುಣಿಗೆ ಎರಡೂ ಕಡೆಂದ ನೀರು ಬಂದು ಹೊಡ್ದದೆ. ಅಲ್ಲಿ ನಿಂತ್ಕಂಡ್ ಇದ್ನ ನೋಡುದುತೇಳಿರೇ ಅದೊಂಥರ ಖುಷಿ. ಹಂಗೆತೇಳಿ ಸ್ವಲ್ಪ ಎಚ್ಚರ ತಪ್ಪಿರೂ ನೀರಿಗೆ ಬಿದ್ದುಬಿಡ್ವ ಅಪಾಯನೂ ಉಟ್ಟು. ಹಂಗಾಗಿ ನಾವು ಇಲ್ಲಿಗೆ ಬರ್ವ ವಿಷಯನ ಮನೇಲಿ ಹೇಳ್ತಿತ್ಲೆ. ಗೊತ್ತಾದ್ರೆ, ಅಪ್ಪ-ಅಮ್ಮ ಕಳಿಸ್ತಿತ್ಲೆ.
ಮಳೆಗಾಲಲಿ ಕರ್ಮಂಜಿತೇಳಿ ಒಂದು ಹಣ್ಣು ಸಿಕ್ಕಿದೆ. ಮುಳ್ಳು ಬಳ್ಳಿಲಿ ಆಗುವ ಕೆಂಪು ಕೆಂಪು ಹಣ್ಣು, ತಿಂಬಕೆ ತುಂಬಾ ಲಾಯ್ಕ. ಸ್ವಲ್ಪ ಹುಳಿ, ಸ್ವಲ್ಪ ಸಿಹಿ....ಯೋಚನೆ ಮಾಡಿರೆ ಬಾಯಿಲಿ ನೀರು ಬಂದದೆ. ಇದ್ರ ಕಾಯಿನ ಉಪ್ಪಿನಕಾಯಿ ಹಾಕಿವೆ. ಅದೆಂಥ ಮಳೆನೇ ಇರ್ಲಿ, ಈ ಕರ್ಮಂಜಿ ಹಣ್ಣುನ ಮಾತ್ರ ನಾವು ಕಳ್ಕಂತಿತ್ಲೆ. ಒಂದು ಕಡೆ ಕಾಲಿಗೆ ಜಿಗಣೆ ಕಚ್ಚಿ ರಕ್ತ, ಮತ್ತೊಂದು ಕಡೆ ಮೈ ಕೈಗೆ ಮುಳ್ಳು ಚುಚ್ಚಿ ಅಲ್ಲೂ ರಕ್ತ ! ಆದ್ರೂ ಕರ್ಮಂಜಿ ಹಣ್ಣುನ ರುಚಿ ಮುಂದೆ ಅದೆಂಥದ್ದೂ ಲೆಕ್ಕಕ್ಕೆ ಬಾತಿತ್ಲೆ.
ಭಾಗಮಂಡಲಲಿ ಈ ವರ್ಷದ ಮಳೆಗಾಲ ಶುರುವಾಗ್ಯುಟ್ಟು. ರಾಜಣ್ಣನ ಅಂಗಡಿ, ಕಟ್ಟೆಪುಣಿ, ಕರ್ಮಂಜಿ ಹಣ್ಣು ನೆನಪಗ್ತುಟ್ಟು...ರಜೆ ಸಿಕ್ಕಿದ ಕೂಡಲೇ ಭಾಗಮಂಡಲ ಕಡೆ ನನ್ನ ಪಯಣ...
 - `ಸುಮ'
arebhase@gmail.com

Monday, 18 June 2012

ಅರೆಭಾಷೆ ಅಕಾಡೆಮಿಗೆ ವಿನೋದ್ ಚಂದ್ರ ರಿಜಿಸ್ಟ್ರಾರ್



ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿಯ ರಿಜಿಸ್ಟ್ರಾರ್ ಆಗಿ ಕೊಡಗು ಜಿಲ್ಲಾ ವಾರ್ತಾ ಇಲಾಖೆ
ಸಹಾಯಕ ನಿರ್ದೇಶಕ ವಿನೋದ್ ಚಂದ್ರ ನೇಮಕ ಆಗ್ಯೊಳೊ. ಈ ಸಂಬಂಧ ಅವ್ಕೆ ಹೆಚ್ಚುವರಿ ಪ್ರಭಾರ ವಹಿಸಿ ಸರ್ಕಾರ ಆದೇಶ ಹೊರಡಿಸ್ಯುಟ್ಟು

Thursday, 14 June 2012

ಯಾಕೀ ಕೋಪ ವರುಣ ?


ಎಲ್ಲಿ ಹೋತ್ ವರುಣ ?
ಭೂರಮೆಯ ಮೇಲೆ ಕೋಪನಾ ?
ಸೂರ್ಯ ಮರೆಯಾಗುವಂಗೆ 
ಮೋಡದ ರಾಶಿ..
ಇನ್ನೇನು ಮಳೆ ಬಿದ್ದೇಬಿಟ್ಟದೆ...
ಅಷ್ಟು ಹೊತ್ತಿಗೆ ಜೋರು ಗಾಳಿ !
ಬರ್ವ ಮಳೆಯೂ ಕಾಣದಂಗೆ ಮಾಯ !
ಡಯಟ್ ಮಾಡ್ದ ಗೂಡೆಯಂಗೆ
ಗಾತ್ರ ಇಳಿಸಿಕೊಂಡುಟ್ಟು ಕಾವೇರಿ
ಕನ್ನಿಕೆಯೂ ಲಾಚಾರ್ !
ಬಿಸಿಲ ಹೊಡೆತಕ್ಕೆ ಬೆವರುತ್ತುಟ್ಟು
ಬ್ರಹ್ಮಗಿರಿ !
ಬರಿದಾಗುಟ್ಟು ಅರಸೀಕೆರೆಯ ಒಡಲು
ಭತ್ತ ಬೆಳೆಯ್ವ ಗದ್ದೆ ಬಾಣೆಯಂಗೆ ಗಟ್ಟಿ !
ಹೂಡಿಕೆ ಹೋದರೆ ನೇಗಿಲೇ ಕಚ್ಚುಲ್ಲೆ ! 
ನೊಗಕ್ಕೆ ಹೆಗಲು ಕೊಡ್ವ 
ಬಸವಂಗೆ ಹಸಿರು ಹುಲ್ಲಿಲ್ಲೆ 
ಹಾಲು ಕೊಡ್ವ ಗಂಗೆಗೇ ಬಾಯರಿಕೆ...!
ಮಳೆಹುಳಕ್ಕೆ ಸ್ವರನೇ ಹೊರಡುಲ್ಲೆ ! 
ನಮ್ಮನಾಳುವವರ ಬಾಯೀಲಿ ಹೊಸ ರಾಗ
ಮೋಡಭಿತ್ತನೆ !
ಬರಗಾಲದ ಹೆಸರಲ್ಲಿ ಸಮೃದ್ಧ ಸಂಪಾದನೆ
ಮಳೆ ಬಂದರೂ, ಬಾರದಿದ್ದರೂ...
ಲಾಭ ರಾಜಕಾರಣಿಗಳಿಗೆ !
ರೈತ ಬದುಕೋಕು...
ಬಾ....ಮಳೆಯೇ ಬಾ...
 - `ಸುಮ'

Wednesday, 13 June 2012

ರಾಜಯೋಗ...!


`ಡಬ..ಡಬ..ಡಬ...' ಇನ್ನು ಸ್ವಲ್ಪ ಹೊತ್ತು ಬಿಟ್ಟರೆ ಬಾಗಿಲೇ ಮುರ್ದು ಹೋಗುದೇನೋತೇಳುವ ಹಂಗೆ ಯಾರೋ ಹೊರಗಿಂದ ಬಡಿತ್ತಿದ್ದೊ. ಮಲಗಿದ್ದ ಜೋಯಪ್ಪಂಗೆ ಒಮ್ಮೆಲೇ ಎಚ್ಚರ ಆತ್. ಅವನ ಹೆಣ್ಣ್ಗೆ ಒಳ್ಳೇ ನಿದ್ದೆ. ಇನ್ನೊಂದು ಕಡೆ ಮುಖ ಹಾಕಿ ಮಲಗಿತ್ತ್. ಚಾಪೆಲಿ ಮಲಗಿದ್ದ ಮಂಞ ನಂದ ಉರುಳಾಡಿ ಉರುಳಾಡಿ ಕಟ್ಲಡಿಗೆ ಸೇರಿಕಂಡ್ಬಿಟ್ಟಿತ್ತ್. ಪುನಃ `ಡಬ..ಡಬ..ಡಬ...' ಶಬ್ದ. 2 ಜೊತೆ ಕೈಗ ಒಟ್ಟೊಟ್ಟಿಗೆ ಬಾಗಿಲು ಬಡೀತ್ತಿದ್ದೊ. ಜೋಯಪ್ಪ ಎದ್ದು ಹೋಗಿ ಬಾಗಿಲು ತೆಗ್ತ್. ಹೊರಗೆ ನೋಡಿರೆ ರಾಜಭಟರು ! 
`ನೀ ಈಗಲೇ ಅರಮನೆಗೆ ಬರೋಕು ಗಡ...ಮಹಾರಾಜರ ಅಪ್ಪಣೆ ಆಗ್ಯುಟ್ಟು...' ಬಂದಿದ್ದವರಲ್ಲಿ ಒಬ್ಬ ಜೋರಾಗಿ ಹೇಳ್ತ್. ಜೋಯಪ್ಪಂಗೆ ಗಡಗಡ ನಡುಗಾಟ ಶುರುವಾತ್. ಬೆಟ್ಟತ್ತೂರು ಬೆಟ್ಟದ ಮೇಲೆ ನೆಮ್ಮದಿಯಾಗಿ ಕೃಷಿ ಮಾಡಿಕಂಡ್ ಬದುಕುತ್ತೊಳೆ... ಮಹಾರಾಜ ನನ್ನನ್ಯಾಕೆ ಕರೆಸಿರ್ದುತಾ ಜೋಯಪ್ಪಂಗೆ ಯೋಚನೆ ಶುರುವಾತ್. ಅಷ್ಟುಹೊತ್ತಿಗೆ ಇನ್ನೊಬ್ಬ ರಾಜಭಟ, `ನೀ ಈಗ ಯೋಚನೆ ಮಾಡಿಕಂಡ್ ನಿಲ್ಬೇಡ, ಕೂಡ್ಲೇ ಹೊರ್ಡು, ಬಾ ಕುದುರೆ ಹತ್ತ್' ತಾ ಹೇಳ್ತ್. ಅದ್ಕೆ ಜೋಯಪ್ಪ, `ಇರಿ...ನಾ ಒಂಚೂರು ಮುಖ ತೊಳ್ಕಂಡನೆ. ನನ್ನ ಹೆಣ್ಣ್ ಈಗ ಎದ್ದದೆ. ಒಂದೊಂದು ಗ್ಲಾಸ್ ಕಾಫಿ ಕುಡ್ಕಂಡ್ ಪೋಯಿ..'ತಾ ಹೇಳ್ತ್. ಅದ್ಕೆ ಒಪ್ಕಂಡ್, ರಾಜಭಟರು ಅಲ್ಲೇ ಹೊರಗೆ ಮನೆ ಜಗುಲಿ ಮೇಲೆ ಕುದ್ದುಕೊಂಡೊ.
`ಏಯ್...ಎದ್ದೇಳ್ನೆ. ಇಲ್ಲಿ ಊರು ಮುಳುಗಿಹೋಗ್ತುಟ್ಟು. ನೀ ನೋಡಿರೆ ಹಂದಿನಂಗೆ ಬಿದ್ಕೊಂಡೊಳಾ...ಸಾಕ್ ಏಳ್..' ಒಳಗೆ ಹೋಗಿ ಜೋಯಪ್ಪ ಹೆಣ್ಣ್ನ ಎದ್ದೇಳಿಸಿಕೆ ನೋಡ್ತ್. ಅವ್ಳಿಗಿನ್ನೂ ನಿದ್ದೆ ಬಿಡುವಂಗೆನೇ ಕಾಣ್ತಿತ್ಲೆ. `ನನ್ನ ಮಹಾರಾಜ ಬಾಕೆ ಹೇಳಿಯೊಳೊ..' ತಾ ಜೋಯಪ್ಪ ಹೇಳ್ತಿದ್ದಂಗೆ, ಅವಳಿಗೆ ಶಾಕ್ ಹೊಡ್ದಂಗೆ ಆತ್. `ಯಾಕೆ...ಏನಾತ್...ಯಾರ್ ಹೇಳ್ದ್ ?' ತಾ ಕೇಳಿಕಾಕನ, ಆ ಚಳಿಲೂ ಅವ್ಳ ಹಣೆಲಿ ಸಾಲು ಸಾಲು ಬೆವರು. `ನಂಗೂ ಗೊತ್ಲೆ. ರಾಜಭಟರು ಬಂದೊಳೊ. ಹೊರಗೆ ಕುದ್ದೊಳೊ ನೋಡು. ಬೇಗ ಬೆಂಕಿ ಮಾಡಿ ಕಾಫಿ ಕಾಯ್ಸು. ನಾ ಹೋಗಿ ಮುಖ ತೊಳ್ಕಂಡ್ ಬನ್ನೆ...' ತಾ ಹೇಳ್ಕಂಡ್ ಜೋಯಪ್ಪ ಗುಡ್ಡದ ಕಡೆಗೆ ಹೋತ್.
ಈ ಎಲ್ಲಾ ಬೊಬ್ಬೆಗೆ ನಂದಂಗೆ ಎಚ್ಚರ ಆತ್. ಕಣ್ಣು ಬಿಟ್ಟು ನೋಡಿರೆ, ಕೈಗೆ ಸಿಕ್ಕುವಷ್ಟೇ ಎತ್ತರಲ್ಲಿ ಅಟ್ಟ ! ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಲೆನ ತಿರುಗಿಸಿ ನೋಡ್ತ್... ಆಗ ಗೊತ್ತಾತ್, ನಾ ಇರುದು ಕಟ್ಲ್ ಕೆಳಗೆತಾ..ಅಲ್ಲಿಂದಲೇ ಕಿರುಚಿತ್, `ಅಮ್ಮಾ ಕಾಫಿ...' `ನಿನ್ನ ದೊಂಡೆ ಕಟ್ಟಿಕೆ...ಮೊದ್ಲು ಎದ್ದು ಬಾ. ಹೋಗಿ ಮುಖ ತೊಳಿ. ಮತ್ತೆ ನಿಂಗೆ ಕಾಫಿ' ತಾ ಅಡುಗೆಮನೆಂದ ನಂದನ ಅಮ್ಮ ಹೇಳ್ತ್... ನಂದ ಕಷ್ಟಪಟ್ಟ್ಕಂಡೇ ಕಣ್ಣ್ಉಜ್ಜಿಕಂಡ್ ಒಲೆಬುಡಕ್ಕೆ ಬಂದ್ ಕುಕ್ಕರುಗಾಲಲ್ಲಿ ಕುದ್ದ್ಕಂಡತ್. ಆಗ ಹೊರಗೆಂದ ಯಾರೋ ಮಾತಾಡ್ತಿರ್ದು ಕೇಳಿ, ಅಂವ ಅಲ್ಲಿ ಹೋಗಿ ನೋಡಿರೆ ರಾಜಭಟರು. ತಲೆ ಮೇಲೆ ಕಬ್ಬಿಣದ ಟೊಪ್ಪಿ, ಕೈಲಿ ಉದ್ದದ ಕತ್ತಿ, ಹಲಸಿನ ಮರಕ್ಕೆ ಕಟ್ಟಿಹಾಕಿದ ಎರಡು ಕುದುರೆಗ...ಇದ್ನೆಲ್ಲಾ ನೋಡಿ ನಂದಂಗೆ ಹೆದ್ರಿಕೆ ಆತ್. ಅಂವ ವಾಪಸ್ ಹೋಗಿ ಮತ್ತೆ ಕಟ್ಲ್ ಅಡಿ ಸೇರಿಕಂಡ್ ಬಿಟ್ಟತ್.
ಜೋಯಪ್ಪ ಮುಖ ತೊಳ್ದ್ ಬಾತ್. ಅವನ ಹೆಣ್ಣ್ ಮಾಡಿದ್ದ ಕಾಫಿನ ತಕ್ಕೊಂಡೋಗಿ ರಾಜಭಟರಿಗೆ ಕೊಟ್ಟತ್. ಇವನೂ ಒಂದು ಗ್ಲಾಸ್ ಕುಡ್ದತ್. ಕಾಫಿ ಕುಡ್ದು ಆದ್ಮೇಲೆ ಮೂರೂ ಜನನೂ ಹೊರಟೊ. ಸ್ವಲ್ಪ ದೊಡ್ಡ ಕುದುರೆ ತಂದ್ದಿದ್ದಂವ ಜೋಯಪ್ಪನ ಹಿಂದೆ ಕೂರ್ಸಿಕಂಡತ್. ಬೆಳಗ್ಗಿನ ಹೊತ್ತು. ಚಳಿ ಬೇರೆ. ಎಂಟೂವರೆಗೆಲ್ಲಾ ಜೋಯಪ್ಪ ಮಡಿಕೇರಿ ತಲುಪಿಬಿಟ್ಟಿತ್ತ್. ಅಲ್ಲಿಗೆ ತಲುಪಿಕಾಕನ ಅವನ ಮೈಯೆಲ್ಲಾ ಮರಕಟ್ಟಿದ್ದಂಗೆ ಆಗಿ ಹೋಗಿತ್ತ್. ಜೊತೆಗೆ ನಡುಗಾಟ ಬೇರೆ... ಆ ನಡುಗಾಟ ಚಳಿಗೋ, ಇಲ್ಲ ಮಹಾರಾಜ ಕರೆಸಿದ್ದಕ್ಕೋ, ಗೊತ್ತಾತ್ಲೆ... 
ಹತ್ತೂವರೆಗೆ ಮಹಾರಾಜ ದರ್ಬಾರ್ ಶುರುವಾತ್. ಜೋಯಪ್ಪ ಮಹಾರಾಜನ ನೋಡ್ದು ಇದೇ ಮೊದ್ಲು. ಅವರ ಗತ್ತಿನ ಹೆಜ್ಜೆ, ತಲೆ ಮೇಲೆ ಚಿನ್ನದ ಕಿರೀಟ, ಫಳ ಫಳ ಹೊಳೆಯ್ವ ಬಟ್ಟೆ, ಸೊಂಟಲಿ ಎಡಗಡೆ ನೇತಾಡ್ತಿರ್ವ ಉದ್ದದ ಕತ್ತಿ... ಜೋಯಪ್ಪ ಬಿಟ್ಟಕಣ್ಣ್ ಬಿಟ್ಟ ಹಂಗೆನೇ ನೋಡಿಕಂಡ್ ನಿಂತ್ಬಿಟ್ಟತ್. ಮಂತ್ರಿಗಳ ಜೊತೆ ಮಾತುಕತೆ ಎಲ್ಲಾ ಮುಗ್ದ ಮೇಲೆ ರಾಜನ ದರ್ಬಾರ್ ಶುರುವಾತ್. ಯಾರೋ ಒಬ್ಬ ಎತ್ತು ಕದ್ದ್ ಸಿಕ್ಕಿಹಾಕಿಕಂಡಿತ್ತ್. ಅವನ ಕೈನೇ ಕತ್ತರಿಸಿಕೆ ರಾಜ ಆಜ್ಞೆ ಮಾಡ್ತ್. ಇನ್ನೊಬ್ಬ ಆಸ್ತಿ ಆಸೆಗೆ ಅಣ್ಣಂಗೆ ವಿಷ ಹಾಕಿ ಕೊಂದಂವ. ಅವ್ನ ರಾಜಾಸೀಟ್ಂದ ಕೆಳಕ್ಕೆ ನೂಕಿ ಕೊಲ್ಲಿಕೆ ರಾಜ ಆಜ್ಞೆ ಮಾಡ್ತ್. ಮತ್ತೊಬ್ಬ, ಹೆಣ್ಣ್ ಲಾಯ್ಕ ಹಂದಿಸಾರ್ ಮಾಡ್ತ್ಲೇತಾ ಸಿಟ್ಟ್ಲಿ ಅವಳ ತಲೆನೇ ಕಡ್ದ್ ಬಿಟ್ಟಿತ್ತ್. ಆನೆದ್ ಕಾಲ್ಕೆಳಗೆ ಇವ್ನ ತಲೆ ಇಡಿಕೆ ರಾಜ ಭಟರಿಗೆ ಸೂಚನೆ ಕೊಟ್ಟತ್. ಇದ್ನೆಲ್ಲಾ ನೋಡಿ ಜೋಯಪ್ಪಂಗೆ ಹೆದ್ರಕೆ ಜಾಸ್ತಿ ಆತ್. ನನ್ನ ಯಾವ ತಪ್ಪಿಗೆ ಇವು ಇಲ್ಲಿ ಕರ್ಕೊಂಡು ಬಂದೊಳಪ್ಪತಾ ಕಣ್ಣಲ್ಲಿ ನೀರು ಬಾತ್.
`ಜೋಯಪ್ಪ...ಜೋಯಪ್ಪ...ಜೋಯಪ್ಪ...' ರಾಜನ ಪಕ್ಕಲಿ ನಿಂತಿದ್ದಂವ ಕರೀತ್ತಿದ್ದಂಗೆ, ಇಂವ ಹೋಗಿ ರಾಜನ ಮುಂದೆ ಕೈ ಕಟ್ಟಿ, ತಲೆ ತಗ್ಗಿಸಿ ನಿಂತತ್. ಆಗ ಜೋಯಪ್ಪನ ನೋಡಿದ ಮಂತ್ರಿ, `ಮಹಾರಾಜರೇ ನಮ್ಮ ರಾಜಭಟರು ಎಂಥದ್ದೋ ಎಡವಟ್ಟು ಮಾಡ್ಯೊಳೊ. ನಾ ಹೇಳ್ದ ಜೋಯಪ್ಪ ಇಂವ ಅಲ್ಲ. ಅವನೇ ಬೇರೆ ಜೋಯಪ್ಪ.' ತಾ ಹೇಳ್ತ್. ಮಹಾರಾಜಂಗೆ ಸಿಟ್ಟ್ಬಾತ್. `ಯಾರಲ್ಲಿ...ಇಂವನ ಕರ್ಕಂಡ್ ಬಂದ ಆ ಭಟರಿಗೆ ನೂರು ನೂರು ಛಡಿಯೇಟು ಕೊಡ್ಸಿ'ತಾ ಆಜ್ಞೆ ಮಾಡ್ತ್. ಜೋಯಪ್ಪನ ಕಡೆ ನೋಡಿ...`ನೋಡಪ್ಪ, ನಮ್ಮವು ಗೊತ್ತಿಲ್ಲದೆ ಏನೋ ತಪ್ಪು ಮಾಡ್ಯೋಳೊ. ಇಂದ್ ಅರಮನೇಲಿ ಇದ್ದ್ ನಾಳೆ ಬೆಳಗ್ಗೆ ನೀ ವಾಪಸ್ ಹೋಗು'ತಾ ಹೇಳ್ತ್. ಮಂತ್ರಿಗೆ ಕಡೆ ತಿರುಗಿ, ಜೋಯಪ್ಪಂಗೆ ಒಂದು ಆಳುನ ವ್ಯವಸ್ಥೆ ಮಾಡ್ತ್.
ಜೋಯಪ್ಪ ದಿನದ ಮಟ್ಟಿಗೆ ಸಣ್ಣಥರಲಿ ಮಹಾರಾಜನೇ ಆಗಿತ್ತ್. ಆ ಆಳು ಅರಮನೆ ಒಳಗೆ ಕರ್ಕಂಡ್ ಹೋಗಿ ಊಟ ಕೊಡ್ಸಿತ್. ಜೋಯಪ್ಪ ಅಂಥ ಊಟನ ಊರು ಪಟೇಲನ ಮಂಞನ ಮದುವೆಲೂ ಮಾಡಿತ್ಲೆ. ಊಟ ಆದ್ಮೇಲೆ ಆ ಆಳು ಇಡೀ ಅರಮನೆನಾ ತೋರಿಸಿಕಂಡ್ ಬಾತ್. ಅಲ್ಲೇ ಒಂದು ಕಡೆ ಇದ್ದ ಕಲ್ಲುನ ಆಮೆ ನೋಡಿ ಜೋಯಪ್ಪ ಖುಷಿಪಟ್ಟತ್. ಇನ್ನು ಹೊರಗೆ ಬಂದರೆ ಎರಡು ದೊಡ್ಡ ಆನೆಗ....! `ಹೆದ್ರ್ಬೇಡ...ಅದ್ ನಿಜವಾದ ಆನೆ ಅಲ್ಲ. ಬಾ ಹತ್ತಿರ ಪೋಯಿತಾ' ಆಳು ಆನೆಗಳ ಹತ್ರ ಕರ್ಕಂಡ್ ಹೋತ್. ಜೋಯಪ್ಪಂಗೆ ಅದನ್ನೆಲ್ಲಾ ನೋಡಿ ಜನ್ಮ ಸಾರ್ಥಕ ಆದಂಗೆ ಆತ್. ಹಂಗೆ ವಾಪಸ್ ಅರಮನೆ ಒಳಕ್ಕೆ ಹೋಕೆ ಮುಂಚೆ, ರಾಜಭಟರು ಇದ್ದ ಮನೆಗಳ ಕಡೆಂದ ಯಾರೋ `ಅಯ್ಯೋ... ಹುಯ್ಯೋ...'ತಾ ಹೇಳ್ತಿದ್ದೊ. ಹತ್ತಿರ ಹೋಗಿ ನೋಡಿರೆ, ಬೆಳಗ್ಗೆ ಇಂವನ ಕರ್ಕಂಡ್ ಬಂದಿದ್ದ ರಾಜಭಟರು. ನೂರು ನೂರು ಛಡಿ ಏಟು ತಿಂದಿದ್ದ ಅವ್ಕೆ, ಅವ್ರ ಹೆಣ್ಣ್ಗ ಎಣ್ಣೆ ಉಜ್ಜಿ ಉಜ್ಜಿ ಮಸಾಜ್ ಮಾಡ್ತಿದ್ದೊ.....


`ಸುಮ'
arebhase@gmail.com


Sunday, 10 June 2012

ಕಾಯುವ ಸುಖ... !?


ನಡುಗುವ ಕೈಲಿ ಟ್ರೇ...
ಅದರೊಳಗೆ ಒಂದಕ್ಕೊಂದು ತಾಗಿ
ಠಣ ಠಣ ಸದ್ದು ಮಾಡುವ ಲೋಟಗ
ಲೋಟದೊಳಗೆ ಗ್ಯಾಸ್ ತುಂಬಿರ್ವ ಜ್ಯೂಸ್ !
ಕೆಂಪು ಬಣ್ಣದ ಗುಳಿ ಕೆನ್ನೆಯ ಗೂಡೆ
ನಾಚಿಕೆಲೆ ಮತ್ತಷ್ಟು ಕೆಂಪುಕೆಂಪಾಗಿತ್ತ್ !
ಪಾಪ...ಸೀರೆ ಉಟ್ಟು ಗೊತ್ಲೆಯೇನೋ..
ನಡೆಯಕಾಕನ ಎಡಗಿ ಎಡಗಿ ಹೋಗ್ತಿತ್ !
ನಾನೇನು ಹುಲಿಯಾ, ಸಿಂಹನಾ ?
ಅದ್ಯಾಕೆ ಅಷ್ಟೊಂದು ಭಯ ?
ನಾ ಬಂದದ್ ಗೂಡೆ ನೋಡಿಕೆ !
ಕಣ್ಣಲ್ಲಿ ಕಣ್ಣಿಟ್ಟು ನೋಡುಣೋತೇಳಿರೆ....
ಅವ್ಳು ಬಗ್ಗಿಸಿದ ತಲೆ ಎತ್ತುದೇ ಇಲ್ಲೆ !
ನಂಗೆ ಮೊದಲ ಪರೀಕ್ಷೆ...
ಅವಳಿಗದು ಎಷ್ಟನೆಯದ್ದೋ ಗೊತ್ಲೆ
ಒಂದಂತೂ ನಿಜ....
ಇಂಥ ಪರೇಡ್ ಅವಳಿಗೆ ಸಾಕಾಗಿತ್ತ್ ! 
ಬಾಗಿಲ ಮರೆಯಿಂದ ಇಣುಕುತ್ತಿದ್ದ
ಅವ್ಳ ಮುಖನೇ ಇದನ್ನೆಲ್ಲಾ ಹೇಳ್ತಿತ್ !
ನನ್ನ ಪರೀಕ್ಷೇಲಿ ಅವ್ಳು ಗೆದ್ದುಟ್ಟು !
ಅವ್ಳ ಪರೀಕ್ಷೇಲಿ ನಾ....?
ಫಲಿತಾಂಶಕ್ಕೆ ಕಾಯ್ತೊಳೆ !

- `ಸುಮ'
arebhase@gmail.com

Friday, 8 June 2012

'ದೇವ್ರೇ ಆ ಪಾಪುನ ಬದುಕಿಸಪ್ಪಾ...'


ನಾ ಮಾಡುವ ಕೆಲಸಲಿ ಭಾವನೆಗಳಿಗೆ ಜಾಗ ಇಲ್ಲೆ. ಒಂದು ಆ್ಯಕ್ಸಿಡೆಂಟ್ ಆದ್ರೆ ಅಲ್ಲಿ ಎಷ್ಟುಜನ ಸತ್ತೊಳೋತೇಳುದ್ರ ಮೇಲೆ ಆ ಸುದ್ದಿಗೆ ಬೆಲೆ ಕಟ್ಟುವ ಕಟುಕ ಮನಸ್ಸಿನ ಪ್ರಾಣಿಗ ನಾವು. ಟಿಆರ್ಪಿ ತೇಳುವ ಪ್ರಿಯತಮೆನ ಮೆಚ್ಚಿಸಿಕೆ ಇಂಥದ್ದೆಲ್ಲಾ ಅನಿವಾರ್ಯ. ಸ್ವಂತ ಅಕ್ಕನ ಗಂಡ ಆ್ಯಕ್ಸಿಡೆಂಟ್ಲಿ ಸತ್ತದ್ ಗೊತ್ತಾದ್ರೂ, ಆ ಸುದ್ದಿನ ಓದಿ ಮುಗಿಸುವವರೆಗೆ ದು:ಖ ಹಿಡಿದಿಟ್ಟುಕೊಳ್ವ ವೃತ್ತಿಪರ ಆ್ಯಂಕರ್ಗ ನಮ್ಮಲ್ಲಿ ಒಳೋ....ಅಂಥದ್ರಲ್ಲಿ ನಿನ್ನೆಯ ಒಂದು ನ್ಯೂಸ್ ನನ್ನ ಕಣ್ಣಲ್ಲಿ ನೀರು ಬರುವಂಗೆ ಮಾಡಿಬಿಟ್ಟತ್ !
ನನ್ನ ಅರ್ಧ ಗಂಟೆ ನ್ಯೂಸ್ಗೆ ಏನು ಬೇಕೋ ಅದ್ನ ಸೆಲೆಕ್ಟ್ ಮಾಡಿಕಣ್ದು ಆಫೀಸ್ಗೆ ಹೋದ ಕೂಡ್ಲೆ ನಾ ಮಾಡುವ ಮೊದಲ ಕೆಲಸ. ನಿತ್ಯಾನಂದನ ಕಿರಿಕಿರಿ ಅರ್ಧ ನ್ಯೂಸ್ ತುಂಬಿಸುವಷ್ಟು ಸಿಕ್ಕಿದೆತಾ ಗೊತ್ತಿತ್ತ್. ಇನ್ನರ್ಧ ಭಾಗಕ್ಕೆ ಸುದ್ದಿ ಬೇಕಲ್ಲ... ಹಂಗೆ ನಮ್ಮ ಜಿಲ್ಲಾ ವರದಿಗಾರರು ಕಳ್ಸಿದ ಸುದ್ದಿಗಳ್ನ ನೋಡಿಕಾನ ಕಣ್ಣಿಗೆ ಬಿದ್ದದ್ ಶಿವಮೊಗ್ಗದ ನ್ಯೂಸ್...ಸ್ಕ್ರಿಪ್ಟ್ ನೋಡ್ದೆ...ಅಂಥ ಇಂಟ್ರೆಸ್ಟ್ ಹುಟ್ಟಿಸುವಂಗೇನೂ ಇತ್ಲೆ... ವೀಡಿಯೋ ಕ್ಲಿಪ್ಪಿಂಗ್ಸ್ ನೋಡಿಕಾಕನ ಮಾತ್ರ ಏಕೋ ಒಂದ್ಸಲ ಹೃದಯ ಹಿಂಡಿದಂಗೆ ಆತ್. ಸಾಮಾನ್ಯವಾಗಿ ನ್ಯೂಸ್ಗಳ್ನ ನಾ ಸೆಲೆಕ್ಟ್ ಮಾಡಿಕಂಡ್ ಅದನ್ನ ಬರಿಯಕ್ಕೆ ಜೂನಿಯರ್ಗಳಿಗೆ ಒಪ್ಪಿಸಿನೆ. ಆದ್ರೆ ಈ ಸುದ್ದಿಗೆ ನಾನೇ ಸ್ಕ್ರಿಪ್ಟ್ ಬರೆಯೋಕೂತ ಡಿಸೈಡ್ ಮಾಡ್ದೆ.
ಅದೊಂದು ಹೆಣ್ಣು ಕೂಸು. ಹುಟ್ಟಿ ಒಂದು ವಾರ ಆಗಿರುದೇನೋ...ಆದ್ರೆ ಪಾಪಿ ಅಮ್ಮಂಗೆ ಆ ಕೂಸು ಬೇಕಾಗಿತ್ಲೆ. ಅದ್ಕೆ ಶಿವಮೊಗ್ಗ ಹತ್ರ ಒಂದು ಕಾಡ್ಲಿ ಬಿಟ್ಟ್ಹೋಗಿತ್ತ್. ಪಾಪ ಇದ್ಯಾವ್ದೂ ಗೊತ್ತಿಲ್ಲದ ಕೂಸು ಸ್ವಲ್ಪ ಹೊತ್ತು ಸುಮ್ಮನಿದ್ದಿರ್ದು. ಆದ್ರೆ ಹಸಿವಾದಂಗೆ ಮರ್ಡಿಕೆ ಶುರುಮಾಡ್ಯುಟ್ಟು. ಆದ್ರೆ ಆ ಕಾಡ್ಲಿ ಮರ್ಟರೆ ಯಾರಿಗೆ ಕೇಳಿದೆ? ನಿಜವಾಗಿಯೂ ಆ ಕೂಸುನ ಗೋಳು `ಅರಣ್ಯರೋದನ' ಆಗಿತ್ತ್. ಇರುವೆಗ, ಮತ್ತಿನ್ಯಾವುದೋ ಚಿಕ್ಕಪುಟ್ಟ ಪ್ರಾಣಿಗ ಆ ಪುಟ್ಟ ಕೂಸನ ದೇಹಕ್ಕೆ ಬಾಯಿ ಹಾಕಿದ್ದೊ... ಇಷ್ಟು ಆಕಾಕನ ಅದ್ರ ಮರ್ಡುವ ಶಕ್ತಿಯೇ ಹೊರಟು ಹೋಗಿತ್ತ್. ಯಾರೋ ಪುಣ್ಯಾತ್ಮ ಸೌದೆ ಕಡಿಯಕ್ಕೆ ಬಂದಂವ ಇಲ್ಲಿ ಕೂಸುನ ಕಂಡ್ ಪೊಲೀಸ್ರಿಗೆ ತಿಳಿಸಿತ್.
ಆ ಪಾಪಿ ಅಮ್ಮ ಕೂಸು ಹುಟ್ಟಿದಲ್ಲಿಂದ ಹಾಲೇ ಕೊಟ್ಟಿತ್ಲೆಯೇನೋ... ಪೊಲೀಸ್ನವು ಆಸ್ಪತ್ರೆಗೆ ಸೇರಿಸಿಕಾಕನ ಆ ಮಗುನ ಸ್ಥಿತಿ ಹಂಗೆ ಇತ್. ಮೂಳೆಗಳ ಮೇಲೆ ಚರ್ಮದ ಬಟ್ಟೆ ಹೋಸಿರೆ ಹೆಂಗೆ ಕಂಡದೆಯೋ, ಕೂಸು ಕೂಡ ಹಂಗೆನೇ ಇತ್. ಅದ್ಕೆ ಈಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೇಲಿ ಟ್ರೀಟ್ಮೆಂಟ್ ಕೊಡ್ತೊಳೊ. ಕೂಸು ಬದುಕುದು ಡೌಟ್ತಾ ಡಾಕ್ಟರ್ಗಳ ಮಾತು...ನೋಡೊಕು ಏನಾದೇತಾ....`ದೇವ್ರೇ ಆ ಪಾಪುನ ಬದುಕಿಸಪ್ಪಾ...'

- `ಸುಮ'
arebhase@gmail.com

Thursday, 7 June 2012

ಹಳೇ ರೇಡಿಯೋದ ಹೊಸ ನೆನಪು...


ನನ್ನ ತಾತಮನೇಲಿ ಒಂದು ರೇಡಿಯೋ ಇತ್. ತುಂಬಾ ಪಂಡ್ಕಾಲದ ರೇಡಿಯೋ ಅದ್. ಹೆಚ್ಚು ಕಡಿಮೆ ಈಗಿನ 21 ಇಂಚ್ನ ಟೀವಿಯಷ್ಟೇ ದೊಡ್ಡದಿತ್ತ್ ! ಬೆಳಗ್ಗೆ ಧಾರವಾಡ, ಮಧ್ಯಾಹ್ನ ಸಿಲೋನ್, ರಾತ್ರಿ ಬೆಂಗಳೂರು ಸ್ಟೇಷನ್ನ ಪ್ರೋಗ್ರಾಂಗಳ್ನ ತುಂಬಾ ಲಾಯ್ಕ ಕೇಳಕ್ಕಾಗಿತ್ತ್. ಆ ರೇಡಿಯೋ ಇದ್ದದ್ ಬಾಡೆಲಿ. ಎದುರಂದ ನುಗ್ಗಿದ ಕೂಡ್ಲೇ ಆ ಬಾಡೆನ ಬಲಭಾಗಲಿ ನನ್ನ ತಾತನ ರೂಂ. ಎಡಭಾಗಲಿ ತಾತನ ತಮ್ಮನ ರೂಮ್. ಬಾಡೆಲಿ ದೇವರ ಫೋಟೋ ಇಡಿಕೆ ಒಂದು ಸ್ಟ್ಯಾಂಡ್. ಅದ್ರ ಪಕ್ಕಲೇ ಈ ರೇಡಿಯೋ ಇಡಿಕೂ ಒಂದು ಸ್ಟ್ಯಾಂಡ್. ಮಕ್ಕಳ ಕೈಗೆ ಸಿಕ್ಕದಂಗೆ ಅಟ್ಟಕ್ಕೆ ತಾಗಿಸಿ ರೇಡಿಯೋ ಸ್ಟ್ಯಾಂಡ್ ಮಾಡಿಸಿದ್ದೊ. ಅದ್ರ ಒಳಗೆ ಒಳ್ಳೆ ಚಿನ್ನ ಇಡುವಂಗೆ ರೇಡಿಯೋನ ತುಂಬಾ ಜಾಗರೂಕತೆಲಿ ಇಟ್ಕೊಂಡಿದ್ದೊ.
ಆ ರೇಡಿಯೋ ನೋಡಿಕೆ ತುಂಬಾ ಲಾಯ್ಕ ಇತ್ತ್. ಸ್ಟೇಷನ್ಗಳ್ನ ಅಡ್ಜೆಸ್ಟ್ ಮಾಡಿವೆಯಲ್ಲಾ ಆ ಮೀಟರ್ ಪಟ್ಟಿ, ಅದ್ರಲ್ಲಿ ಕಲರ್ ಕಲರ್ ಲೈಟ್ಗ ಬರ್ತಿದ್ದೊ. ತಾತ ಕುರ್ಚಿ ಮೇಲೆ ಹತ್ತಿಕಂಡ್ ಸ್ಟೆಷನ್ಗಳ್ನ ಚೇಂಜ್ ಮಾಡ್ತಿದ್ರೆ, ಆ ಲೈಟ್ಗ ಫಳ ಫಳ ಮಿಂಚ್ತಿದ್ದೊ....ನಾವು ಸಣ್ಣ ಮಕ್ಕ ಅದನ್ನೇ ಪಿಳಿ ಪಿಳಿ ಕಣ್ಣು ಬಿಡ್ಕಂಡ್ ನೋಡ್ತಿತಿದ್ದೊ.. ಆ ರೇಡಿಯೋನಾ ಆ ಇಬ್ಬರು ತಾತಂದಿರ್ ಮಾತ್ರ ಆಪರೇಟ್ ಮಾಡ್ತಿದ್ದೊ. ನನ್ನ ಮಾವಂದಿರಿಗೂ ಮುಟ್ಟಿಕೆ ಬಿಡ್ತಿತ್ಲೆ. `ಕರಿಯೆತ್ತು ಕಾಳಿಂಗ...' ತೇಳುವ ಹಾಡ್ಂದ ಶುರುವಾಗ್ತಿದ್ದ ಕೃಷಿರಂಗ, ಪ್ರದೇಶಸಮಾಚಾರ, ವಾರ್ತೆಗಳ್ನ ಅವು ಯಾವತ್ತೂ ಮಿಸ್ ಮಾಡಿಕಣ್ತಿತ್ಲೆ....ಶುಕ್ರವಾರ ಬಾತ್ ತ್ತೇಳಿರೆ ನನ್ನ ಮಾವಂದಿರಿಗೆ ತುಂಬಾ ಖುಷಿ...
ಶುಕ್ರವಾರ ಮಡಿಕೇರಿ ಸಂತೆ ಅಲಾ... ನನ್ನ ಇಬ್ಬರು ತಾತಂದಿರೂ ಸಂತೆಗೆ ಹೋಗಿಬಿಡ್ತಿದ್ದೊ. ಅವು ಬೆಳಗ್ಗೆ ಹೋದ್ರೆ, ಬರ್ತಿದ್ದದ್ ಸೂರ್ಯ ಮುಳುಗಿದ ಮೇಲೆನೇ...ಹಂಗಾಗಿ ಮಧ್ಯಾಹ್ನ ಹೊತ್ತು ಮಾವಂದಿರ್  ಕುರ್ಚಿ ಹತ್ತಿ ಸರ್ಕಸ್ ಮಾಡಿಕಂಡ್ ರೇಡಿಯೋಲಿ ಸಿಲೋನ್ ಸ್ಟೇಷನ್ ಹಾಕ್ತಿದ್ದೊ... ಅದ್ಯಾವ್ದೋ ಹೆಂಗಸ್ನ ತಮಿಳು ಮಿಶ್ರದ ಕನ್ನಡ, ಕನ್ನಡ ಚಿತ್ರಗೀತೆಗಳ್ನ ಕೇಳಿಕೆ ತುಂಬಾ ಲಾಯ್ಕ ಇರ್ತಿತ್ತ್. ಇನ್ನೇನು ತಾತಂದಿರು ಬರ್ವ ಟೈಂ ಆತ್ತೇಳಿಕಾಕನ ಬೆಂಗಳೂರು ಸ್ಟೇಷನ್ಗೆ ತಿರುಗಿಸಿ, ಏನೂ ಗೊತ್ತಿಲ್ಲದಂಗೆ ಸುಮ್ಮನೆ ಕುದ್ದುಬಿಡ್ತಿದ್ದೊ. ಅದ್ರಲ್ಲೂ ಆ ತಾತಂದಿರಿಗೆ ಒಮ್ಮೊಮ್ಮೆ ಡೌಟ್ ಬಂದ್ಬಿಡ್ತಿತ್. `ನಾ ಬೆಳಿಗ್ಗೆ ಧಾರವಾಡ ಸ್ಟೇಷನ್ ಇಟ್ಟಿದ್ದೆ...ಈಗ ನೋಡಿರೆ ಬೆಂಗಳೂರ್ಲಿ ಉಟ್ಟಲಾ'ತಾ ಅವವೇ ಮಾತಾಡಿಕೊಳ್ತಿದ್ದೊ. ಆಗೆಲ್ಲಾ ನಮಿಗೆ ಒಳಗೊಳಗೆ ನಗು.
ನಾ ತಾತ ಮನೆಗೆ ಹೋದ್ರೆ, ಇಬ್ಬರೂ ತಾತಂದಿರೂ ನನ್ನ ಮೇಲೆ ಒಂದು ಕಣ್ಣು ಇಟ್ಟಿರ್ತಿದ್ದೊ. ನಾ ಆಗ ದೊಡ್ಡ `ಮೆಕ್ಯಾನಿಕ್'ತಾ ಹೆಸರುವಾಸಿ ಆಗಿದ್ದೆ. ನನ್ನ ಕೈಗೆ ಎಂಥ ಸಿಕ್ಕಿರೂ ಒಂದ್ಸಲ ಅದ್ನ ಬಿಚ್ಚಿ ನೋಡುದು ನಂಗೆ ಅಭ್ಯಾಸ ಆಗಿಬಿಟ್ಟಿತ್ತ್. ಆದ್ರೆ ಅದ್ನ ಮತ್ತೆ ಜೋಡಿಸಿಕೆ ಗೊತ್ತಾಗ್ತಿತ್ಲೆ. ನಮ್ಮ ಮನೆ ರೇಡಿಯೋ, ವಾಚ್ ಎಲ್ಲಾ ನನ್ನ ಈ ಮೆಕ್ಯಾನಿಕ್ ಬುದ್ಧಿಗೆ ಸಿಕ್ಕಿ ಹಾಳಾಗಿತ್ತ್. ಇದ್ ನಮ್ಮ ತಾತಂದಿರಿಗೂ ಗೊತ್ತಿತ್ತ್. ಯಾವತ್ತೂ ಕೂಡ ನನ್ನನ್ನ ಒಬ್ನೇ ರೇಡಿಯೋದ ಹತ್ರ ಬಿಡ್ತಿತ್ಲೆ. ಒಂದೋ ಆ ಇಬ್ಬರು ತಾತಂದಿರು ಇರ್ತಿದ್ದೊ. ಇಲ್ಲದಿದ್ದರೆ ಮಾವಂದಿರ್ನ ಪಾರಕ್ಕೆ ಬಿಡ್ತಿದ್ದೊ. ನಂಗೂ ಆಸೆ ಇತ್, ರೇಡಿಯೋಲಿ ಆ ಫಳ ಫಳ ಹೊಳ್ದದೆ ಅಲಾ ಲೈಟ್, ಅದ್ನ ಬಿಚ್ಚಿ ನೋಡೊಕೂತಾ..! ಆದ್ರೆ ಅವಕಾಶನೇ ಸಿಕ್ಕಿತ್ಲೆ.
ಈಗ ನನ್ನ ಆ ಇಬ್ಬರು ತಾತಂದಿರೂ ಇಲ್ಲೆ. ದೊಡ್ಡ ರೇಡಿಯೋನ ಯಾವಾಗ್ಲೋ ಗುಜರಿಯವ್ಕೆ ಕೊಟ್ಟುಬಿಟ್ಟಿದ್ದೊ. ರೇಡಿಯೋ ಬದಲಿಗೆ ಆ ಬಾಡೆಗೆ ಎಲ್ಸಿಡಿ ಟೀವಿ ಬಂದುಟ್ಟು. ರೇಡಿಯೋ ಇಡ್ತಿದ್ದ ಪೆಟ್ಟಿಗೆ ಖಾಲಿ ಖಾಲಿತಾ ಅನ್ನಿಸಿದೆ... ಆದ್ರೆ ಅದ್ರ ತುಂಬಾ ಹಳೇ ನೆನಪುಗ ಒಳೋ....

- `ಸುಮ'
arebhase@gmail.com

Wednesday, 6 June 2012

ಮೂಗೊಳಗೆ ಚಾಂಪನ ಕಾಟ !


ಚೋಮುಣಿಗೆ ಕಳ್ದ ಮೂರು ದಿನಂದ ಸಕ್ಕತ್ ಮೂಗು ನೋವು....ಒಳಗೆ ಎಂಥದ್ದೋ ಕಟ್ಟಿಕೊಂಡಂಗೆ ಆಗ್ತುಟ್ಟು. ಎಷ್ಟು ಸೊರ ಸೊರ ಮಾಡಿರೂ ಒಳಗಿಂದ ಎಂಥದ್ದೂ ಹೊರಗ್ಗೆ ಬಾತ್ಲೆ. ಒಂದ್ಸಲ ಎಲ್ಲಾ ಕ್ಲೀನಾತ್ತಾ ಅನ್ಸಿರೂ ಮತ್ತೆ ಅದೇ ಹಳೇ ಕಥೆ... ಗೊಣ್ಣೆ ತೆಗೆದ್ರೆ ಒಟ್ಟಿಗೆ ರಕ್ತ ಕೂಡ ಬಾಕೆ ಶುರುವಾತ್...ಯಾರೋ ಹೇಳ್ದೋ ಮೂಗೊಳೊಗೆ ಒಂದುಹನಿ ಹುಳಿನೀರ್ ಹಾಕ್ ಸರಿಹೋದೆತಾ... ಚೋಮುಣಿ ಹಂಗೆನೇ ಮಾಡ್ತ್.... ಒಂದರ್ಧ ಗಂಟೆ ತಡೆಯಕ್ಕಾಗದಷ್ಟು ಉರಿ ಉರಿ... ಸ್ವಲ್ಪ ಹೊತ್ತಿಗೆ ಉರಿ ಕಡಿಮೆ ಆತ್. ಮೂಗು ಕೂಡ ಕ್ಲೀನ್ ಆದಂಗೆ ಅನ್ಸಿ, ರಾತ್ರಿ ನೆಮ್ಮದೀಲಿ ನಿದ್ದೆ ಮಾಡ್ತ್.
ಬೆಳಗ್ಗೆ ಎದ್ದರೆ ಮತ್ತೆ ಅದೇ ಹಳೇ ಕಥೆ. ಮೂಗುನೋವು ತಲೆವರೆಗೆ ಹರಡಿತ್ತ್. ಅಷ್ಟೊತ್ತಿಗೆ ಮೇಲೆ ಮನೆ ನಂದ ಒಂದು ಐಡಿಯಾ ಕೊಟ್ಟತ್.`ಒಂದೆರಡು ಹನಿ ಆರ್ಮಿ  ರಮ್ ಮೂಗೊಳಗೆ ಹಾಕಿಕ್ಕ. ಮತ್ತೊಂದು ಸಿಕ್ಸ್ಟಿ ಹೊಡ್ದ್ ಮಲಗಿಬಿಡ್ ಎಲ್ಲಾ ಸರಿ ಹೋದೆ...' ಚೋಮುಣಿ ನಂದ ಹೇಳ್ದಂಗೆನೇ ಮಾಡ್ತ್. ಆದ್ರೆ ಸಿಕ್ಸ್ಟಿ ಬದಲಿಗೆ ನೈನ್ಟಿ ಸುರ್ಕಂಡ್ ಕಂಬಳಿ ಒಳಗೆ ಸೇರಿಕಂಡತ್. ಹಿಂಗೆ ಮಧ್ಯಾಹ್ನ ಮಲಗಿದಂವ ಎದ್ದದ್ ಸಾಯಂಕಾಲ 6 ಗಂಟೆಗೆ. ರಾತ್ರಿ ಇನ್ನೊಂದು ಪೆಗ್ ಏರಿಸೋಕುತಾ ಅನ್ನಿಸಿದ್ ಬಿಟ್ಟರೆ, ನಂದ ಕೊಟ್ಟ ಐಡಿಯಾಂದ ಯಾವುದೇ ಪ್ರಯೋಜನ ಆತ್ಲೆ.
ದಿನ ಕಳ್ದಂಗೆ ಚೋಮುಣಿಗೆ ನೋವು ಜಾಸ್ತಿ ಆಗ್ತಿತ್ತೇ ಹೊರತೂ ಕಡಿಮೆ ಆತ್ಲೆ. ಕೊನೆಗೆ ಚೋಮುಣಿ ನಾಡ್ಮದ್ದು ಕೊಡ್ವ ಚೆನಿಯಪ್ಪಜ್ಜನ ಹತ್ರ ಹೋತ್.... ಅವು ಚೋಮುಣಿದ್ ನಾಡಿ ಹಿಡ್ದ್ ನೋಡ್ದೊ...ಮೂಗು ಹತ್ರ ಕೈ ಬೆರಳು ಹಿಡ್ದು ನೋಡ್ದೊ...ತಲೆಗೆ ಹಿಂದುಗಡೇಂದ ಎರಡೇಟು ಕೊಟ್ಟೊ... ಹಿಂಗೆ ಪೆಟ್ಟು ಬೀಳಿಕಾಕನ ಚೋಮುಣಿಗೆ ಮೂಗೊಳೊಗೆ ಕಟ್ಟಿಕಂಡಿದ್ದದ್ ಬಿಟ್ಟ ಹಂಗೆ ಆತ್... ಅದ್ನೇ ಇಂವ ಚೆನಿಯಪ್ಪಜ್ಜಂಗೂ ಹೇಳ್ತ್...ಅದ್ಕೆ ಚೆನಿಯಪ್ಪಜ್ಜ, `ವಾರದ ಹಿಂದೆ ನೀ ಸುಡುಕುಳಿಗೆ ಹೋಗಿದ್ದಾ ?' ತಾ ಕೇಳ್ತ್. ಚೋಮುಣಿ ಕಾಫಿತೋಟ ಕಪಾತ್ ಮಾಡಿಕಂಡ್ ಗೊಟ್ಟೆಹಣ್ಣು ತಿಂದು ಬರ್ನೋತೇಳಿ ಸುಡುಕುಳಿ ಹತ್ರ ಹೋಗಿತ್ತ್.... ಹಂಗಾಗಿ ಚೆನಿಯಪ್ಪಜ್ಜನ ಪ್ರಶ್ನೆಗೆ `ಹುಂ..'ತಾ ಉತ್ತರ ಕೊಟ್ಟತ್. `ಹಂಗಾರೆ ಇದ್ ನಿನ್ನ ಚಾಂಪಂದೇ ಕಿತಾಪತಿ...ಅಂವ ಬಾಯಿಗೆ ನೀರಲ್ಲದೆ ಸತ್ತದ್ ನೋಡ್...' ತಾ ಹೇಳ್ದ ಚೆನಿಯಪ್ಪಜ್ಜ, ಸ್ವಲ್ಪ ಭಸ್ಮ ತೆಗ್ದ್ ಬಾಯಿಲಿ ಮಣಮಣತಾ ಮಂತ್ರ ಹೇಳಿ ಮೂರು ಸಲ ಅದ್ಕೆ ಸೂ..ಸೂ..ಸೂ..ತಾ ಉರುಗಿ ಚೋಮುಣಿನ ಹಣೆಗೆ ಹಚ್ಚಿತ್....`ರಾತ್ರಿ ಮಲಗಿಕಾಕನ ಈ ಭಸ್ಮನ ಮೂಗೊಳೊಗೆ ಹಾಕ್ಕಂಡ್ ಮಲಗ್. ಬೆಳಗ್ಗೆ ನಿನ್ನ ಮೂಗೊಳಗೆಂದ ಚಾಂಪ ಎದ್ದು ಓಡಿ ಹೋಗಿದ್ದದೆ....'ತಾ ಹೇಳ್ತ್. ಚೆನಿಯಪ್ಪಜ್ಜಂಗೆ ಎಲೆ, ಅಡಿಕೆ ಮತ್ತೆ 11 ರೂಪಾಯಿ ಕೊಟ್ಟು ಚೋಮುಣಿ ವಾಪಸ್ ಬಾತ್. ಚೆನಿಯಪ್ಪಜ್ಜ ಹೇಳಿದಂಗೇ ಮಾಡಿ ಮಲಗಿತ್ !
ಏನೂ ಪ್ರಯೋಜನ ಆತ್ಲೆ. ಎಡಮೂಗುಲಿ ಉಸಿರಾಡಿಕೆನೇ ಕಷ್ಟ ಆಗ್ತಿತ್. ವಿಪರೀತ ತಲೆನೋವು. ಮೂಗುಂದ ರಕ್ತ ಬೇರೆ ಬಾಕೆ ಶುರುವಾತ್. ಇದ್ನ ನೋಡಿ ಒಬ್ಬ, ಕ್ಯಾನ್ಸರ್ ಇರೋಕೇನೋತಾ ಹೇಳ್ತ್. ಮತ್ತೊಬ್ಬ, ಏಡ್ಸ್ ಇದ್ದರೆ ಹಿಂಗೆ ಆದೆ ಗಡ. ಮೂಗುಲಿ ರಕ್ತ ಸೋರಿ ಸೋರಿಯೇ ಸತ್ತುಹೋದವೆಗಡತಾ ಹೆದರಿಸ್ತ್. ಚೋಮುಣಿಗೆ ತಲೆನೇ ಕೆಟ್ಟೊತ್. ಯಾರಿಗೂ ಹೇಳದೆ ಕೇಳದೆ ಮಡಿಕೇರಿ ಬಸ್ ಹತ್ತಿತ್. ಟೋಲ್ಗೇಟ್ಲಿ ಇಳ್ದವನೆ ಸೀದಾ ಮೂಗು ಡಾಕ್ಟರ್ ಹತ್ರ ಹೋತ್. ಇಂವ ಹೇಳಿದ್ದನ್ನೆಲ್ಲಾ ಕೇಳಿ ಡಾಕ್ಟರ್ಗೆ ಸಮಸ್ಯೆ ಎಂಥದ್ತಾ ಗೊತ್ತಾತ್. ಅವು ಇಂಥ ಸುಮಾರು ಕೇಸ್ಗಳ್ನ ನೋಡಿದ್ದೊ...ಒಂದ್ ಟಾರ್ಚ್ಂದ ಅವನ ಮೂಗೊಳಗೆ ಬೆಳಕ್ ಬಿಟ್ಟ್, ಅಲ್ಲಿ ಸಣ್ಣ ಇಕ್ಕಳ ಹಾಕಿದೊ... ಒಂದೈದು ನಿಮಿಷ ಹಂಗೆನೇ ಸರ್ಕಸ್ ಮಾಡಿ, ಇಕ್ಕಳ ತೆಗ್ದೊ....ಇಕ್ಕಳ ತುದೀಲಿ ಚೋಮುಣಿದ್ ಮಧ್ಯಬೆರಳಷ್ಟು ದಪ್ಪದ ಜಿಗಣೆ !
ವಾರದ ಹಿಂದೆ ತೋಡಲಿ ನೀರು ಕುಡಿಯಕಾಕನ ಇವಂಗೆ ಗೊತ್ತಿಲ್ಲದೆ ಮೂಗೊಳಗೆ ಸೇರಿಕಂಡಿತ್ತ್. ರಕ್ತ ಕುಡ್ದು ಕುಡ್ದು, ದೊಡ್ಡದಾಗಿ ಬೆಳ್ದ್ ಇವಂಗೆ ಉಪದ್ರ ಕೊಡಿಕೆ ಶುರುಮಾಡಿತ್ತ್...ಜೊತೆಗೆ ಹುಳಿನೀರು, ಮಿಲ್ಟ್ರಿ ರಮ್, ಚೆನಿಯಪ್ಪಜ್ಜ ಕೊಟ್ಟ ಭಸ್ಮ ಬೇರೆ... !
 - `ಸುಮ'
arebhase@gmail.com

Monday, 4 June 2012

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಎನ್ ಎಸ್ ದೇವಿಪ್ರಸಾದ್

ಅರೆಭಾಷೆ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸಂಪಾಜೆಯ ಎನ್ಎಸ್ ದೇವಿಪ್ರಸಾದ್ ನೇಮಕ ಆಗ್ಯೊಳೊ. ದೇವಿಪ್ರಸಾದ್, ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡಿರವು... ಗುಡ್ಡದ ಭೂತ ಧಾರಾವಾಹಿಲಿ ಕೂಡ ಇವು ಕಾಣಿಸಿಕೊಂಡಿದ್ದೊ. ಇನ್ನು  ತಳೂರು ಕಿಶೋರ್ ಕುಮಾರ್, ಬೈತಡ್ಕ ಜಾನಕಿ ಬೆಳ್ಯಪ್ಪ, ಚೆರಿಯಮನೆ ಚಂದ್ರಶೇಖರ್, ತುಂತಜೆ ಗಣೇಶ್, ಕೆ. ಶಿವರಾಮೇಗೌಡ, ಪದ್ಮಾ ಕೋಲ್ಜಾರ್, ಲೋಕಯ್ಯ ಗೌಡ, ಇಡ್ಯಡ್ಕ ಮೋಹನ್ ಗೌಡ ಸದಸ್ಯರಾಗಿ ನೇಮಕ ಆಗ್ಯೊಳೋ... ಇವ್ಕೆಲ್ಲಾ `ಅರೆಭಾಷೆ ಬ್ಲಾಗ್' ವತಿಯಿಂದ ಶುಭಾಶಯಗ...ಇವರ ಅವಧೀಲಿ ಒಳ್ಳೆ ಕೆಲ್ಸ ಆಗಲಿತೇಳುವ ನಿರೀಕ್ಷೆ ನಮ್ಮದ್.. 

Saturday, 2 June 2012

ಪ್ರೀತಿಯ ಗೊಂಬೆ..


ಅದ್ ಅವ್ಳ ಮೊದ್ಲ ಹುಟ್ಟಿದ ಹಬ್ಬಕ್ಕೆ ಅಪ್ಪ ಕೊಟ್ಟ ಗಿಫ್ಟ್...ಗೊಂಬೆ ! ಗೊಂಬೆತೇಳಿರೆ ಏನೂತಾ ಗೊತ್ತಿಲ್ಲದ ವಯಸ್ಸದ್. ಆದ್ರೂ ಜೊತೇಲಿ ಅವಳಷ್ಟೇ ಎತ್ತರ, ದಪ್ಪ, ಅವಳದ್ದೇ ಕಲರ್ನ, ಅವಳಂಗೇ ಬಟ್ಟೆ ಹಾಕಿದ್ದ ಗೊಂಬೆ ನೋಡಿ ಆ 1 ವರ್ಷದ ಪಾಪು ಖುಷಿಯಾಗಿತ್ತ್. ಬಹುಶ: ಇದೂ ಕೂಡ ನನ್ನ ಹಂಗೆ ಒಂದು ಪಾಪು ಇರೋಕೇನೋತೇಳಿ ಆ ಕೂಸು ನಂಬಿಕಂಡಿತ್ತ್. ಗೊಂಬೆ ಜೊತೆ ಅವ್ಳು ಎಷ್ಟು ಹೊಂದಿಕಂಡ್ಬಿಡ್ತ್ತೇಳಿರೆ, ಆ ಗೊಂಬೆ ಕಣ್ಣಿಗೆ ಬೀಳದಿದ್ದರೆ ಜೋರಾಗಿ ಕಿರುಚಿ ಕಿರುಚಿ ಮರ್ಡ್ತಿತ್. ಮಲಗಿಕಾಕನನೂ ಗೊಂಬೆ ಜೊತೇಲಿ ಬೇಕಿತ್....
ಅವ್ಳು ಅಂಗನವಾಡಿಗೆ ಹೋಗುಷ್ಟು ದೊಡ್ಡವಳಾತ್. ಆಗ್ಲೂ ಅಪ್ಪ ಕೊಟ್ಟ ಗೊಂಬೆ ಜೊತೇಲಿತ್ತ್. ಇವಳಿಗೆ ಹೊಸ ಬಟ್ಟೆ ತಂದರೆ, ಆ ಗೊಂಬೆಗೂ ಅಂಥದ್ದೇ ಹೊಸ ಬಟ್ಟೆ ತರಕ್ಕಾಗಿತ್ತ್. ಇಲ್ಲಾಂದ್ರೆ, ಆಕಾಶ-ಭೂಮಿ ಒಂದಾಗುವ ಹಂಗೆ ಹಠ ಹಿಡೀತ್ತಿತ್ತ್. ಮೊದ್ಲು ಒಂದೆರಡು ದಿನ ಅಂಗನವಾಡಿಗೆ ಆ ಗೊಂಬೆನ ತಕ್ಕಂಡ್ ಹೋಗಿತ್ತ್. ಆದ್ರೆ ಅಲ್ಲಿ ಎಲ್ಲಾ ಮಕ್ಕ ಆ ಗೊಂಬೆ ಜೊತೆ ಆಟ ಆಡಿಕೆ ಶುರುಮಾಡ್ದೊ. ಇದ್ರಿಂದ ಅದೆಲ್ಲಿ ಹಾಳಾಗಿಬಿಡುದೇನೋತಾ ಹೇಳುವ ಭಯ ಇವಳಿಗೆ. ಹಂಗಾಗಿ ನಂತ್ರ ಇವ್ಳು ಅಂಗನವಾಡಿಗೆ ಹೋಕಾಕನ ಆ ಗೊಂಬೆನ ತೊಟ್ಟಿಲಲ್ಲಿ ಮಲಗಿಸಿ, ಮುಖ ಮಾತ್ರ ಕಾಣುವಂಗೆ ಕಂಬಳಿ ಹೊದಿಸಿ ಹೋಗ್ತಿತ್ತ್. ಮಧ್ಯಾಹ್ನ ವಾಪಸ್ ಬಂದಂಗೆ, ಮತ್ತೆ ತೊಟ್ಟಿಲಿಂದ ಗೊಂಬೆನ ಎದ್ದೇಳಿಸಿ ದಿನ ಪೂತರ್ಿ ಅದ್ರ ಜೊತೆನೇ ಕಾಲ ಕಳೀತಿತ್ತ್ !
ಹಂಗೆ ಒಂದು ದಿನ ಅವ್ಳು ಅಂಗನವಾಡಿಂದ ವಾಪಸ್ ಬಂದ್ ತೊಟ್ಟಿಲು ನೋಡಿರೆ ಅಲ್ಲಿ ಗೊಂಬೆ ನಾಪತ್ತೆ ! ಅವ್ಳು ಹೊದಿಸಿಟ್ಟಿದ್ದ ಪುಟ್ಟ ಕಂಬಳಿ ಚೆಲ್ಲಾಪಿಲ್ಲಿ ಆಗಿತ್ತ್... ಪುಟ್ಟ ಮನಸ್ಸಿಗೆ ದೊಡ್ಡ ಶಾಕ್ ! ಮರ್ಟ್ ಕಂಡ್  ಅಮ್ಮನ ಹತ್ರ ಓಡಿ ಬಾತ್ ಗೂಡೆ. ಅವಳ ಅಮ್ಮನೂ ಅಂದ್ ಗೊಂಬೆನ ನೋಡಿತ್ತ್ಲೆ.. `ನಂಗೆ ನನ್ನ ಗೊಂಬೆ ಬೇಕೂ.....'ತಾ ಅವ್ಳು ಜೋರಾಗಿ  ಮರ್ಡಿಕೆ  ಶುರು ಮಾಡ್ತ್. ಅಪ್ಪ, ಅಮ್ಮ ಎಲ್ಲವೂ ಸೇರಿಕಂಡ್ ಗೊಂಬೆನ ಹುಡಿಕಿಕೆ ಶುರುಮಾಡ್ದೊ. ಊಹುಂ... ಎಲ್ಲಿ ನೋಡಿರೂ ಗೊಂಬೆ ಕಾಣ್ತಿಲ್ಲೆ ! ರಾತ್ರಿ ವರೆಗೆ ಹುಡುಕಾಟ ನಡ್ತ್... ಏನೂ ಪ್ರಯೋಜನ ಆತ್ಲೆ. ಆ ಪಾಪುಗೆ ಮರ್ಟ್ ಮರ್ಟ್ ಜ್ವರ ಬಂದ್ಬಿಡ್ತ್... ಕೂಡ್ಲೇ ಆಸ್ಪತ್ರೆಗೆ ಸೇರಿಸಿದೋ...ಆಗ್ಲೂ ಅವ್ಳು `ನಂಗೆ ನನ್ನ ಗೊಂಬೆ ಬೇಕೂ.....'ತಾ ಕನವರಿಸ್ತನೇ ಇತ್ತ್.
ಹಂಗಾರೆ ತೊಟ್ಟಿಲಲ್ಲಿ ಇದ್ದ ಗೊಂಬೆ ಎಲ್ಲಿ ಹೋತ್ ? ಅವಳ ಅಮ್ಮನೇ ಅಡಗಿಸಿ ಇಟ್ಟ್ಬಿಟ್ಟಿತ್ ! ಹೌದು, ಗೊಂಬೆ ಜೊತೆ ಮಗಳು ಇರುದನ್ನ ನೋಡಿ, ಹಿಂಗಾರೆ ಇವ್ಳು ಅಕ್ಷರ ಕಲಿಯಲ್ಲೆತಾ ಹೆದ್ರಿ ಆ ಗೊಂಬೆನ ತಕ್ಕಂಡ್ಹೋಗಿ ಅಟ್ಟಕ್ಕೆ ಬಿಸಾಡಿಬಿಟ್ಟಿತ್ತ್. ಈಗ ಮಗಳ ಸ್ಥಿತಿ ನೋಡಿ ಆ ಅಮ್ಮಂಗೆ ನಿಜಕ್ಕೂ ಹೆದರಿಕೆ ಶುರುವಾತ್. ತಾನು ಮಾಡ್ದ ಕೆಲ್ಸನ ಗಂಡನ ಕಿವೀಲಿ ಮೆಲ್ಲೆ ಹೇಳ್ತ್. ಅವಂಗೆ ಸಿಟ್ಟು ಎಲ್ಲಿತ್ತೋ ಏನೋ, ಹೆಣ್ಣ್ನ ಕೆನ್ನೆಗೆ ಫಟಾರ್ತಾ ಹೊಡ್ದ್, ಸೀದಾ ಮನೆಗೆ ಹೋಗಿ ಗೊಂಬೆನ ತಂದ್ ಮಗಳ ಪಕ್ಕಲಿ ಇಟ್ಟತ್. ಆ ಪುಟಾಣಿಗೆ ಈಗ ಖುಷಿಯೋ ಖುಷಿ...! ಜ್ವರ ಮಂಗಮಾಯ.. !
 - `ಸುಮ'
arebhase@gmail.com

ಚಂದಿರಂಗೆ ಕಾಲ್ ಮಾಡಿ... !


ಶುಭ್ರ ಆಕಾಶ...ಯಾರೋ ನೀರು ಹಾಕಿ ಉಜ್ಜಿ ಉಜ್ಜಿ ತೊಳ್ದಹಂಗೆ ನಕ್ಷತ್ರಗೆಲ್ಲಾ ಫಳ ಫಳ ಹೊಳೀತ್ತಿದ್ದೊ. ನಿನ್ನೆಯಷ್ಟೆ ಹುಣ್ಣಿಮೆ ಕಳ್ದದ್ರಿಂದ ಚಂದ್ರನೂ ತುಂಬಾ ದೊಡ್ಡದಾಗಿ ಅಲ್ಲಿಂದನೇ ಕಣ್ಣು ಹೊಡ್ದಂಗೆ ಕಾಣ್ತಿತ್ ! ಟೆರೇಸ್ಲಿ ಕುದ್ದಕಂಡ್, ಸಿ ಅಶ್ವತ್ಥ್ ಸ್ವರಲಿ `ಆಕಾಶದ ನೀಲಿಯಲಿ...ಚಂದ್ರ ಚುಕ್ಕಿ...' ತೇಳುವ ಭಾವಗೀತೆ ಕೇಳಿಕಂಡ್ ಎಷ್ಟು ಹೊತ್ತ್ ಬೇಕಾರೂ ನಾ ಇಂಥ ಆಕಾಶನ ನೋಡಿಕಂಡ್ ಕುದ್ದನೆ. ನಾ ಅಲ್ಲಿಂದ ಏಳೊಕುತಾದ್ರೆ ಒಂದೋ ಮೋಡದ ಒಳಗೆ ಚಂದ್ರ ಮಾಯ ಆಕು, ಇಲ್ಲಾಂದ್ರೆ ನಂಗೆ ನಿದ್ದೆ ಬರೋಕು !
ಹಂಗೇ ಕುದ್ದಕಂಡ್ ಪೂರ್ಣ ಚಂದ್ರನನ್ನೇ ನೋಡ್ತಿದ್ದೆ. ಯಾಕೋ ಅಂವ ಕರ್ದಂಗೆ ಆತ್... ಹಾಡ್ ನಿಲ್ಲಿಸಿ, ಕಿವೀಂದ ಇಯರ್ಫೋನ್ ತೆಗ್ದೆ. ಮತ್ತೊಮ್ಮೆ ನನ್ನ ಹೆಸ್ರು ಹಿಡ್ದ್ ಕರ್ದಂಗೆ ಕೇಳ್ತ್....ಹೌದು, ಆ ಚಂದಮಾಮನೇ ನನ್ನ ಕರೀತಿರ್ದು ! ಸಣ್ಣದರಿಂದನೇ ನಂಗೂ ಚಂದಿರಂಗೂ ಒಂಥರ ನೆಂಟಸ್ತನ. ಸಾಯಂಕಾಲ ನಾ ಊಟ ಮಾಡುಲೇತಾ ಹಠ ಮಾಡಿರೆ, ನನ್ನಮ್ಮ ಹೊರಗೆ ಕರ್ಕಂಡ್ಬಂದ್ ಚಂದ್ರನ ತೋರಿಸಿಕಂಡ್ ಬಾಯಿಗೆ ಅನ್ನ ಕೊಡ್ತಿತ್. ಇದೇ ಚಂದಿರ ಆಗಲೂ ಅಲ್ಲಿಂದನೇ ಬೊಚ್ಚುಬಾಯಿ ಬಿಟ್ಕಂಡ್, ನಾ ಊಟ ಮಾಡುದನ್ನೇ ನೋಡ್ತಿತ್. ಪ್ರತಿ ದಿನ ಚಂದಿರ ತೋರಿಸ್ತಿದ್ದ ಅಮ್ಮ, ಗಣೇಶಚೌತಿ ದಿನ ಮಾತ್ರ ನಾ ಎಷ್ಟು ಹಠ ಮಾಡಿರೂ ಹೊರಗೆ ಕರ್ಕಂಡ್ ಹೋಗ್ತಿತ್ಲೆ. ಆಗ ಅಮ್ಮ, ಚಂದ್ರಂಗೆ ಗಣೇಶ ಕೊಟ್ಟ ಶಾಪದ ಕಥೆ ಹೇಳಿ ನನ್ನ ಸಮಧಾನ ಮಾಡ್ತಿತ್ತ್. ಅಲ್ಲಾ, ಈ ಗಣಪತಿಗೆ ಯಾರು ಹೇಳ್ದೊತಾ...ಹೊಟ್ಟೆ ತುಂಬಾ ತಿಂಬಕೆ. ಮೊದಲೇ ಅಂವ ದಢೂತಿ. ಅವನ ವಾಹನ ನೋಡಿರೆ ಇಲಿ. ಈ ಗಣಪತಿ ಹೊಟ್ಟೆ ಒಡ್ದು ಹೋಗುವಂಗೆ ತಿಂದರೆ ಪಾಪದ ಇಲಿ ಹೊತ್ತ್ಕಂಡ್ ಹೋದಾದ್ರೂ ಹೆಂಗೆ ? ಅಂವ ಬಿದ್ದ್ ಹೊಟ್ಟೆ ಢಮಾರ್ ಆತಲಾ, ಹಂಗೆ ಆಕು... ಇದ್ನ ನೋಡಿ ಚಂದ್ರ ನಗಾಡಿರೆ ತಪ್ಪೇನು? ಅದ್ಕೆ ಗಣಪತಿ ಶಾಪ ಕೊಡೋಕಾ? ನನ್ನ ಸಪೋರ್ಟ್ ಏನಿದ್ರೂ ಚಂದ್ರಂಗೆನೇ, ಯಾವಗ್ಲಾದ್ರೂ ಅಂವ ಮಾತಾಡಿಕೆ ಸಿಕ್ಕಿರೆ ಕೇಳೋಕು, `ನಿಂಗೆ ಇನ್ನೂ ಜೋರಾಗಿ ನಗಾಡಿಕೆ ಏನಾಗಿತ್ತ್' ?ತಾ  ಗಣಪತಿ ಶಾಪ ಕೊಡಿಕಾಕನ ಚಂದ್ರನೂ ತಿರುಗಿ ಶಾಪ ಕೊಡಕಾಗಿತ್ತ್...`ನಿಂಗೆ ಹೊಟ್ಟೆಗೆ ಕಟ್ಟಿಕಣಿಕೆ ಹಾವು ಸಿಕ್ಕುದೇ ಬೇಡಾ'ತಾ.... ಹಿಂಗೆಲ್ಲಾ ನಾನ್ ಸಣ್ಣವ ಆಗಿರ್ಕಾಕ ಯೋಚನೆ ಮಾಡಿದ್ದೆ... ಈಗ ನೋಡಿರೆ ಚಂದಿರನೇ ಕರೀತ್ತುಟ್ಟು.. !
`ನಾ ನಿನ್ನ ಹತ್ರ ಅಷ್ಟು ದೂರ ಬಾಕೆ ಆಲೆ..ನನ್ನ ಮೊಬೈಲ್ ನಂಬರ್ ಕೊಟ್ಟನೆ, ನೀನೇ ಮಾತಾಡ್' ನಾ ಇಲ್ಲಿ ಕುದ್ದಲ್ಲಿಂದನೇ ಹೇಳ್ದೆ. ಚಂದ್ರ ಅಲ್ಲಿಂದನೇ ಏನೋ ಹೇಳಿಕಂಡ್ ಕೈಭಾಷೆ ಮಾಡ್ತ್. ನಾ ನನ್ನ ಮೊಬೈಲ್ಲಿ ನನ್ನ ನಂಬರ್ ಟೈಪ್ ಮಾಡಿ ಅವನ ಕಡೆಗೆ ಹಿಡಿದೆ. ಭೂಮಿಲಿ ಗಣಪತಿ ಬಿದ್ದದ್ನ ಅಲ್ಲಿಂದನೇ ನೋಡ್ದಂವ ಅಲಾ ಅಂವ.... ಹಂಗಾಗಿ ಚಂದಿರನ ಕಣ್ಣು ತುಂಬಾ ಶಾರ್ಪ್ ಇರೋಕುಕಾ ನನ್ನ ಗ್ಯಾನ. ನಾ ಯೋಚಿಸಿದ್ದ್ ಸರಿಯಾಗಿಯೇ ಇತ್ ಚಂದ್ರಂಗೆ ನನ್ನ ನಂಬರ್ ಕಾಣ್ತ್ತಾ ಕಂಡದೆ, ಕೂಡ್ಲೆ ಅಂವ ನನ್ನ ನಂಬರ್ಗೆ ಕಾಲ್ ಮಾಡ್ತ್. `ಅಲ್ಲರಾ...ಇಷ್ಟು ವರ್ಷ ಆತ್ ನಿಂಗೆ ಗಣಪತಿ ಶಾಪ ಕೊಟ್ಟ್, ನಿಂಗೆ ಇನ್ನೂ ಅದ್ರಿಂದ ವಿಮೋಚನೆ ಆತ್ಲೆನಾ' ತಾ ನಾ ಕೇಳ್ದೆ, ಅದ್ಕೆ ಅಂವ, `ಎಂಥ ಹೇಳ್ದುರಾ, ಎಲ್ಲಾ ನನ್ನ ಹಣೆಬರಹ...ಆ ಶಾಪ ಈಗ ಇಲ್ಲೆ. ಆದ್ರೆ ನಿಮ್ಮ ಜನಗ ತಪ್ಪು ತಿಳ್ಕೊಂಡಳೊ... ಚೌತಿ ದಿನ ನನ್ನ ನೋಡಿಕೆನೇ ಹೆದರಿಕಂಡವೆ' ತಾ ಹೇಳಿಕಂಡ್ ಕಣ್ಣೀರು ಸುರ್ಸಿತ್....ನನ್ನ ಮೈಮೇಲೆಲ್ಲಾ ಮಳೆ ಹನಿ ಬಿದ್ದಂಗೆ ಆತ್. `ನೀ ಪಾಪ ಅಲಾ...ಮರ್ಡುಬೇಡಾ. ಆ ಗಣಪತಿಗೆ ಎಷ್ಟು ಅಹಂಕಾರ ನೋಡು, ನಿಂಗೆ ಶಾಪ ಕೊಟ್ಟ ಕಥೆನಾ ಎಲ್ಲವ್ಕೆ ಟಾಂ ಟಾಂ ಮಾಡಿಕಂಡ್ ಬಂದುಟ್ಟು, ಆದ್ರೆ ಶಾಪ ವಿಮೋಚನೆ ಆಗ್ಯುಟ್ಟುತಾ ಯಾರಿಗೂ ಹೇಳ್ತ್ಲೇ, ಅಂವ ಅಂದ್ ಬಿದ್ ಹೊಟ್ಟೆ ಒಡ್ಕಂಡತಲಾ, ಆಗ ನೀ ಇನ್ನೂ ಜೋರಾಗಿ ನಗಾಡಕ್ಕಾಯ್ತ್...' ನಾ ಚಂದ್ರನ ಸಪೋರ್ಟ್ ಮಾಡಿ ಮಾತಾಡಿದೆ. ಅದಕ್ಕೆ ಅಂವ...`ಹುಂ...ಅಂದ್ ನಂಗೆ ನಗು ತಡ್ಕಣಿಕೆ ಆತ್ಲೆ...ಆದ್ರೆ ಎಂಥ ಮಾಡ್ದು, ಚೌತಿತೇಳಿ ನಾನೂ ಸಮಾ ಪಂಚಕಜ್ಜಾಯ ತಿಂದುಬಿಟ್ಟಿದ್ದೆ. ಹಂಗಾಗಿ ನಂಗೆ ಹಲ್ಲುನೋವು ಬಂದ್ಬಿಟ್ಟಿತ್...ಜೋರಾಗಿ ನಗಾಡಿಕೆ ಆಗ್ತಿತ್ಲೆ...' ತಾ ಚಂದ್ರ ಹೇಳ್ತಿದ್ದಂಗೆ ಫೋನ್ ಕಟ್ಟಾತ್... ಜೊತೇಲೇ ಅದೇ ರೆಕಾರ್ಡೆಡ್ ವಾಯ್ಸ್..`ನೀವು ಕರೆ ಮಾಡಿದ ಚಂದದಾರರು ವ್ಯಾಪ್ತಿ ಪ್ರದೇಶದಿಂದ ಹೊರಗೆ ಇದ್ದಾರೆ...' ಈಗ್ಲೂ ನಾ ಚಂದಿರ ನಂಬರ್ಗೆ ಟ್ರೈ ಮಾಡ್ತನೇ ಒಳೆ...ಊಹುಂ.... ಲೈನ್ ಸಿಕ್ತಿಲ್ಲೆ. ನೀವೂ ಟ್ರೈ ಮಾಡಿ ನೋಡಿ... ಸಿಕ್ಕಿರೆ ಮಾತಾಡಿ. ಚಂದಿರ ತುಂಬಾ ಬೇಸರಲಿ ಉಟ್ಟು !
 - `ಸುಮ'
arebhase@gmail.com