Saturday, 2 June 2012

ಪ್ರೀತಿಯ ಗೊಂಬೆ..


ಅದ್ ಅವ್ಳ ಮೊದ್ಲ ಹುಟ್ಟಿದ ಹಬ್ಬಕ್ಕೆ ಅಪ್ಪ ಕೊಟ್ಟ ಗಿಫ್ಟ್...ಗೊಂಬೆ ! ಗೊಂಬೆತೇಳಿರೆ ಏನೂತಾ ಗೊತ್ತಿಲ್ಲದ ವಯಸ್ಸದ್. ಆದ್ರೂ ಜೊತೇಲಿ ಅವಳಷ್ಟೇ ಎತ್ತರ, ದಪ್ಪ, ಅವಳದ್ದೇ ಕಲರ್ನ, ಅವಳಂಗೇ ಬಟ್ಟೆ ಹಾಕಿದ್ದ ಗೊಂಬೆ ನೋಡಿ ಆ 1 ವರ್ಷದ ಪಾಪು ಖುಷಿಯಾಗಿತ್ತ್. ಬಹುಶ: ಇದೂ ಕೂಡ ನನ್ನ ಹಂಗೆ ಒಂದು ಪಾಪು ಇರೋಕೇನೋತೇಳಿ ಆ ಕೂಸು ನಂಬಿಕಂಡಿತ್ತ್. ಗೊಂಬೆ ಜೊತೆ ಅವ್ಳು ಎಷ್ಟು ಹೊಂದಿಕಂಡ್ಬಿಡ್ತ್ತೇಳಿರೆ, ಆ ಗೊಂಬೆ ಕಣ್ಣಿಗೆ ಬೀಳದಿದ್ದರೆ ಜೋರಾಗಿ ಕಿರುಚಿ ಕಿರುಚಿ ಮರ್ಡ್ತಿತ್. ಮಲಗಿಕಾಕನನೂ ಗೊಂಬೆ ಜೊತೇಲಿ ಬೇಕಿತ್....
ಅವ್ಳು ಅಂಗನವಾಡಿಗೆ ಹೋಗುಷ್ಟು ದೊಡ್ಡವಳಾತ್. ಆಗ್ಲೂ ಅಪ್ಪ ಕೊಟ್ಟ ಗೊಂಬೆ ಜೊತೇಲಿತ್ತ್. ಇವಳಿಗೆ ಹೊಸ ಬಟ್ಟೆ ತಂದರೆ, ಆ ಗೊಂಬೆಗೂ ಅಂಥದ್ದೇ ಹೊಸ ಬಟ್ಟೆ ತರಕ್ಕಾಗಿತ್ತ್. ಇಲ್ಲಾಂದ್ರೆ, ಆಕಾಶ-ಭೂಮಿ ಒಂದಾಗುವ ಹಂಗೆ ಹಠ ಹಿಡೀತ್ತಿತ್ತ್. ಮೊದ್ಲು ಒಂದೆರಡು ದಿನ ಅಂಗನವಾಡಿಗೆ ಆ ಗೊಂಬೆನ ತಕ್ಕಂಡ್ ಹೋಗಿತ್ತ್. ಆದ್ರೆ ಅಲ್ಲಿ ಎಲ್ಲಾ ಮಕ್ಕ ಆ ಗೊಂಬೆ ಜೊತೆ ಆಟ ಆಡಿಕೆ ಶುರುಮಾಡ್ದೊ. ಇದ್ರಿಂದ ಅದೆಲ್ಲಿ ಹಾಳಾಗಿಬಿಡುದೇನೋತಾ ಹೇಳುವ ಭಯ ಇವಳಿಗೆ. ಹಂಗಾಗಿ ನಂತ್ರ ಇವ್ಳು ಅಂಗನವಾಡಿಗೆ ಹೋಕಾಕನ ಆ ಗೊಂಬೆನ ತೊಟ್ಟಿಲಲ್ಲಿ ಮಲಗಿಸಿ, ಮುಖ ಮಾತ್ರ ಕಾಣುವಂಗೆ ಕಂಬಳಿ ಹೊದಿಸಿ ಹೋಗ್ತಿತ್ತ್. ಮಧ್ಯಾಹ್ನ ವಾಪಸ್ ಬಂದಂಗೆ, ಮತ್ತೆ ತೊಟ್ಟಿಲಿಂದ ಗೊಂಬೆನ ಎದ್ದೇಳಿಸಿ ದಿನ ಪೂತರ್ಿ ಅದ್ರ ಜೊತೆನೇ ಕಾಲ ಕಳೀತಿತ್ತ್ !
ಹಂಗೆ ಒಂದು ದಿನ ಅವ್ಳು ಅಂಗನವಾಡಿಂದ ವಾಪಸ್ ಬಂದ್ ತೊಟ್ಟಿಲು ನೋಡಿರೆ ಅಲ್ಲಿ ಗೊಂಬೆ ನಾಪತ್ತೆ ! ಅವ್ಳು ಹೊದಿಸಿಟ್ಟಿದ್ದ ಪುಟ್ಟ ಕಂಬಳಿ ಚೆಲ್ಲಾಪಿಲ್ಲಿ ಆಗಿತ್ತ್... ಪುಟ್ಟ ಮನಸ್ಸಿಗೆ ದೊಡ್ಡ ಶಾಕ್ ! ಮರ್ಟ್ ಕಂಡ್  ಅಮ್ಮನ ಹತ್ರ ಓಡಿ ಬಾತ್ ಗೂಡೆ. ಅವಳ ಅಮ್ಮನೂ ಅಂದ್ ಗೊಂಬೆನ ನೋಡಿತ್ತ್ಲೆ.. `ನಂಗೆ ನನ್ನ ಗೊಂಬೆ ಬೇಕೂ.....'ತಾ ಅವ್ಳು ಜೋರಾಗಿ  ಮರ್ಡಿಕೆ  ಶುರು ಮಾಡ್ತ್. ಅಪ್ಪ, ಅಮ್ಮ ಎಲ್ಲವೂ ಸೇರಿಕಂಡ್ ಗೊಂಬೆನ ಹುಡಿಕಿಕೆ ಶುರುಮಾಡ್ದೊ. ಊಹುಂ... ಎಲ್ಲಿ ನೋಡಿರೂ ಗೊಂಬೆ ಕಾಣ್ತಿಲ್ಲೆ ! ರಾತ್ರಿ ವರೆಗೆ ಹುಡುಕಾಟ ನಡ್ತ್... ಏನೂ ಪ್ರಯೋಜನ ಆತ್ಲೆ. ಆ ಪಾಪುಗೆ ಮರ್ಟ್ ಮರ್ಟ್ ಜ್ವರ ಬಂದ್ಬಿಡ್ತ್... ಕೂಡ್ಲೇ ಆಸ್ಪತ್ರೆಗೆ ಸೇರಿಸಿದೋ...ಆಗ್ಲೂ ಅವ್ಳು `ನಂಗೆ ನನ್ನ ಗೊಂಬೆ ಬೇಕೂ.....'ತಾ ಕನವರಿಸ್ತನೇ ಇತ್ತ್.
ಹಂಗಾರೆ ತೊಟ್ಟಿಲಲ್ಲಿ ಇದ್ದ ಗೊಂಬೆ ಎಲ್ಲಿ ಹೋತ್ ? ಅವಳ ಅಮ್ಮನೇ ಅಡಗಿಸಿ ಇಟ್ಟ್ಬಿಟ್ಟಿತ್ ! ಹೌದು, ಗೊಂಬೆ ಜೊತೆ ಮಗಳು ಇರುದನ್ನ ನೋಡಿ, ಹಿಂಗಾರೆ ಇವ್ಳು ಅಕ್ಷರ ಕಲಿಯಲ್ಲೆತಾ ಹೆದ್ರಿ ಆ ಗೊಂಬೆನ ತಕ್ಕಂಡ್ಹೋಗಿ ಅಟ್ಟಕ್ಕೆ ಬಿಸಾಡಿಬಿಟ್ಟಿತ್ತ್. ಈಗ ಮಗಳ ಸ್ಥಿತಿ ನೋಡಿ ಆ ಅಮ್ಮಂಗೆ ನಿಜಕ್ಕೂ ಹೆದರಿಕೆ ಶುರುವಾತ್. ತಾನು ಮಾಡ್ದ ಕೆಲ್ಸನ ಗಂಡನ ಕಿವೀಲಿ ಮೆಲ್ಲೆ ಹೇಳ್ತ್. ಅವಂಗೆ ಸಿಟ್ಟು ಎಲ್ಲಿತ್ತೋ ಏನೋ, ಹೆಣ್ಣ್ನ ಕೆನ್ನೆಗೆ ಫಟಾರ್ತಾ ಹೊಡ್ದ್, ಸೀದಾ ಮನೆಗೆ ಹೋಗಿ ಗೊಂಬೆನ ತಂದ್ ಮಗಳ ಪಕ್ಕಲಿ ಇಟ್ಟತ್. ಆ ಪುಟಾಣಿಗೆ ಈಗ ಖುಷಿಯೋ ಖುಷಿ...! ಜ್ವರ ಮಂಗಮಾಯ.. !
 - `ಸುಮ'
arebhase@gmail.com

No comments:

Post a Comment