`ಕೊಡೆ ರಿಪೇರಿ...ಬಕೆಟ್ ರಿಪೇರಿ...' ನನ್ನ ಮನೆ ಹತ್ರ ಒಬ್ಬ ಜೋರಾಗಿ ಕೂಗಿಕಂಡ್ ಹೋಗ್ತಿತ್. ಇದ್ನ ಕೇಳ್ತಿದ್ದಂಗೆ ನಂಗೆ ನಾ ಎರಡನೇ ಕ್ಲಾಸ್ಲಿ ಇರ್ಕಾಕನ ನಡ್ದ ಒಂದು ಘಟನೆ ನೆನಪಿಗೆ ಬಾತ್. ಮುಖಲಿ ಸಣ್ಣ ನಗು ಕೂಡ ಕಾಣಿಸಿಕಂಡತ್. ಚಿಕ್ಕವು ಇರಿಕಾಕನ ನಮ್ಮ ಯೋಚನೆಗ ಹೆಂಗೆ ಇದ್ದವೆ? ಆ ಯೋಚನೆಗಳ ಮೇಲೆ ಸುತ್ತಲಿನ ಪರಿಸರ ಹೆಂಗೆ ಪರಿಣಾಮ ಬೀರಿದೆ... ನಾವು ಮುಂದೆ ಏನು ಆಕುತೇಳಿ ಯೋಚನೆ ಮಾಡಿದ್ದವೆನೋ, ಅದ್ ಬೆಳಿತಾ ಇದ್ದ ಹಂಗೆ ಎಷ್ಟೆಲ್ಲಾ ಬದಲಾವಣೆಗ ಆದವೆ....ಕೊನೆಗೆ ನಮ್ಮ ಹಣೇಲಿ ಏನು ಬರ್ದಿದ್ದದೆನೋ ಅದೇ ನಮ್ಮಪಾಲಿಗೆ ಸಿಕ್ಕುದಂತೂ ನಿಜ.
ಆಗಷ್ಟೇ ನಾವೆಲ್ಲಾ ಒಂದನೇ ಕ್ಲಾಸ್ನ ಆ ಸಣ್ಣಬೆಂಚ್ಗಳ್ನ ಬಿಟ್ಟ್, ಎರಡನೇ ಕ್ಲಾಸ್ನ ಸ್ವಲ್ಪ ದೊಡ್ಡ ಬೆಂಚ್ಗೆ ಬಂದಿದ್ದೊ. ವೇದಾವತಿ ಟೀಚರ್ ನಮಿಗೆ ಕ್ಲಾಸ್ ಟೀಚರ್. ಅವ್ಕೆ ಸಿಟ್ಟು ಜಾಸ್ತಿ. ಕೈಲಿ ಬೆತ್ತ ಹಿಡ್ಕಂಡೇ ಕ್ಲಾಸ್ಗೆ ಬರ್ತಿದ್ದೊ. ಯಾರಿಗಾದ್ರೂ ಒಬ್ಬರಿಗೆ ಪೆಟ್ಟು ಬಿದ್ದೇ ಬೀಳ್ತಿದ್ದದಂತೂ ಗ್ಯಾರಂಟಿ. ನಾ ಸ್ವಲ್ಪ ಕೀಟಲೆ ಜಾಸ್ತಿ ಮಾಡ್ತಿದ್ದರಿಂದ, ಎರಡು ದಿನಕ್ಕೆ ಒಮ್ಮೆಯಾದ್ರೂ ಅವ್ರಿಂದ ಪೆಟ್ಟು ತಿನ್ತಿದ್ದೆ. ಶುರುಲೆಲ್ಲಾ ಅವು ಹೊಡೆಯಕಾಕನ ಮರ್ಟುಬಿಡ್ತಿದ್ದೆ. ಆದ್ರೆ ಬರ್ತಾ ಬರ್ತಾ ಅಭ್ಯಾಸ ಆಗಿಹೋತ್.. ಹೊಡೆದ್ರೂ ಹೊಡೆಸಿಕಂಡ್ ಸುಮ್ಮನಾಗಿಬಿಡ್ತಿದ್ದೆ. ಆಮೇಲೆ ಯಥಾ ಪ್ರಕಾರ ಕೀಟಲೆ...
ಅದೊಂದು ಜೋರು ಮಳೆಗಾಲದ ದಿನ. ಪಾಠ ಮಾಡಿ ಮಾಡಿ ವೇದಾವತಿ ಟೀಚರ್ಗೆ ಬೋರ್ ಆಗಿತ್ತೇನೋ...ಮಕ್ಕಳನ್ನೆಲ್ಲಾ ಮುಂದೆ ನೀವು ಎಂಥ ಆಕುತಾ ಒಳರಿತಾ ಒಬ್ಬೊಬ್ಬರನ್ನೇ ಕೇಳಿಕೆ ಶುರುಮಾಡ್ದೊ. ನಾ ಮೂರನೇ ಬೆಂಚ್ಲಿ ಕೂತಿದ್ದೆ. ಒಬ್ಬೊಬ್ಬರದ್ ಒಂದೊಂದು ಆಸೆ. ಗೂಡೆಗಳಲ್ಲಿ ಹೆಚ್ಚಿನವು `ನಾನು ಟೀಚರ್ ಆಗ್ತೀನಿ'ತಾ ಹೇಳ್ದೊ. ಹೈದಂಗಳಿಗೆ ಮಿಲಿಟರಿಗೆ ಹೋಗುವ ಆಸೆ. ಪ್ರವೀಣ ಮಾತ್ರ, `ನಾನು ಎಂಜೀಯರ್ ಆಗ್ತೀನಿ ಟೀಚರ್...'ತಾ ಹೇಳಿತ್ತ್. ಆಶ್ಚರ್ಯ ತೇಳಿರೆ ಈಗ ಅಂವ ಎಂಜಿನೀಯರ್ ಆಗುಟ್ಟು ! ನನ್ನ ಸರದಿ ಬಾತ್...`ಟೀಚರ್ ನಾನು ದೊಡ್ಡವನಾದ ಮೇಲೆ ಕೊಡೆ ರಿಪೇರಿ, ಪ್ಲಾಸ್ಟಿಕ್ ಬಕೆಟ್ ರಿಪೇರಿ ಮಾಡುವವನು ಆಗ್ತೀನಿ..'ತಾ ಹೇಳ್ದೆ. ಯಾವಗ್ಲೂ ಗಂಟುಮುಖ ಹಾಕ್ಕೊಂಡಿರ್ವ ವೇದಾವತಿ ಟೀಚರ್ಗೆ ನನ್ನ ಮಾತು ಕೇಳಿ ತಡ್ಕಂಬಕೆ ಆತ್ಲೆ...ಜೋರಾಗಿ ನಗಾಡಿಬಿಟ್ಟೊ. ಇದ್ನ ನೋಡಿ ಕ್ಲಾಸ್ಲಿ ಇದ್ದ ಮಕ್ಕ ಕೂಡ ನಗಾಡಿಕೆ ಶುರು ಮಾಡ್ದೊ...ಅದ್ನ ಯೋಚನೆ ಮಾಡಿರೆ ನಂಗೆ ಈಗಲೂ ನಗುಬಂದದೆ. ಅಂದ್ ನಾ ಯಾಕೆ ಹಂಗೆ ಹೇಳಿದ್ದೆನೋ...
- `ಸುಮ'
arebhase@gmail.com
No comments:
Post a Comment