ಶುಭ್ರ ಆಕಾಶ...ಯಾರೋ ನೀರು ಹಾಕಿ ಉಜ್ಜಿ ಉಜ್ಜಿ ತೊಳ್ದಹಂಗೆ ನಕ್ಷತ್ರಗೆಲ್ಲಾ ಫಳ ಫಳ ಹೊಳೀತ್ತಿದ್ದೊ. ನಿನ್ನೆಯಷ್ಟೆ ಹುಣ್ಣಿಮೆ ಕಳ್ದದ್ರಿಂದ ಚಂದ್ರನೂ ತುಂಬಾ ದೊಡ್ಡದಾಗಿ ಅಲ್ಲಿಂದನೇ ಕಣ್ಣು ಹೊಡ್ದಂಗೆ ಕಾಣ್ತಿತ್ ! ಟೆರೇಸ್ಲಿ ಕುದ್ದಕಂಡ್, ಸಿ ಅಶ್ವತ್ಥ್ ಸ್ವರಲಿ `ಆಕಾಶದ ನೀಲಿಯಲಿ...ಚಂದ್ರ ಚುಕ್ಕಿ...' ತೇಳುವ ಭಾವಗೀತೆ ಕೇಳಿಕಂಡ್ ಎಷ್ಟು ಹೊತ್ತ್ ಬೇಕಾರೂ ನಾ ಇಂಥ ಆಕಾಶನ ನೋಡಿಕಂಡ್ ಕುದ್ದನೆ. ನಾ ಅಲ್ಲಿಂದ ಏಳೊಕುತಾದ್ರೆ ಒಂದೋ ಮೋಡದ ಒಳಗೆ ಚಂದ್ರ ಮಾಯ ಆಕು, ಇಲ್ಲಾಂದ್ರೆ ನಂಗೆ ನಿದ್ದೆ ಬರೋಕು !
ಹಂಗೇ ಕುದ್ದಕಂಡ್ ಪೂರ್ಣ ಚಂದ್ರನನ್ನೇ ನೋಡ್ತಿದ್ದೆ. ಯಾಕೋ ಅಂವ ಕರ್ದಂಗೆ ಆತ್... ಹಾಡ್ ನಿಲ್ಲಿಸಿ, ಕಿವೀಂದ ಇಯರ್ಫೋನ್ ತೆಗ್ದೆ. ಮತ್ತೊಮ್ಮೆ ನನ್ನ ಹೆಸ್ರು ಹಿಡ್ದ್ ಕರ್ದಂಗೆ ಕೇಳ್ತ್....ಹೌದು, ಆ ಚಂದಮಾಮನೇ ನನ್ನ ಕರೀತಿರ್ದು ! ಸಣ್ಣದರಿಂದನೇ ನಂಗೂ ಚಂದಿರಂಗೂ ಒಂಥರ ನೆಂಟಸ್ತನ. ಸಾಯಂಕಾಲ ನಾ ಊಟ ಮಾಡುಲೇತಾ ಹಠ ಮಾಡಿರೆ, ನನ್ನಮ್ಮ ಹೊರಗೆ ಕರ್ಕಂಡ್ಬಂದ್ ಚಂದ್ರನ ತೋರಿಸಿಕಂಡ್ ಬಾಯಿಗೆ ಅನ್ನ ಕೊಡ್ತಿತ್. ಇದೇ ಚಂದಿರ ಆಗಲೂ ಅಲ್ಲಿಂದನೇ ಬೊಚ್ಚುಬಾಯಿ ಬಿಟ್ಕಂಡ್, ನಾ ಊಟ ಮಾಡುದನ್ನೇ ನೋಡ್ತಿತ್. ಪ್ರತಿ ದಿನ ಚಂದಿರ ತೋರಿಸ್ತಿದ್ದ ಅಮ್ಮ, ಗಣೇಶಚೌತಿ ದಿನ ಮಾತ್ರ ನಾ ಎಷ್ಟು ಹಠ ಮಾಡಿರೂ ಹೊರಗೆ ಕರ್ಕಂಡ್ ಹೋಗ್ತಿತ್ಲೆ. ಆಗ ಅಮ್ಮ, ಚಂದ್ರಂಗೆ ಗಣೇಶ ಕೊಟ್ಟ ಶಾಪದ ಕಥೆ ಹೇಳಿ ನನ್ನ ಸಮಧಾನ ಮಾಡ್ತಿತ್ತ್. ಅಲ್ಲಾ, ಈ ಗಣಪತಿಗೆ ಯಾರು ಹೇಳ್ದೊತಾ...ಹೊಟ್ಟೆ ತುಂಬಾ ತಿಂಬಕೆ. ಮೊದಲೇ ಅಂವ ದಢೂತಿ. ಅವನ ವಾಹನ ನೋಡಿರೆ ಇಲಿ. ಈ ಗಣಪತಿ ಹೊಟ್ಟೆ ಒಡ್ದು ಹೋಗುವಂಗೆ ತಿಂದರೆ ಪಾಪದ ಇಲಿ ಹೊತ್ತ್ಕಂಡ್ ಹೋದಾದ್ರೂ ಹೆಂಗೆ ? ಅಂವ ಬಿದ್ದ್ ಹೊಟ್ಟೆ ಢಮಾರ್ ಆತಲಾ, ಹಂಗೆ ಆಕು... ಇದ್ನ ನೋಡಿ ಚಂದ್ರ ನಗಾಡಿರೆ ತಪ್ಪೇನು? ಅದ್ಕೆ ಗಣಪತಿ ಶಾಪ ಕೊಡೋಕಾ? ನನ್ನ ಸಪೋರ್ಟ್ ಏನಿದ್ರೂ ಚಂದ್ರಂಗೆನೇ, ಯಾವಗ್ಲಾದ್ರೂ ಅಂವ ಮಾತಾಡಿಕೆ ಸಿಕ್ಕಿರೆ ಕೇಳೋಕು, `ನಿಂಗೆ ಇನ್ನೂ ಜೋರಾಗಿ ನಗಾಡಿಕೆ ಏನಾಗಿತ್ತ್' ?ತಾ ಗಣಪತಿ ಶಾಪ ಕೊಡಿಕಾಕನ ಚಂದ್ರನೂ ತಿರುಗಿ ಶಾಪ ಕೊಡಕಾಗಿತ್ತ್...`ನಿಂಗೆ ಹೊಟ್ಟೆಗೆ ಕಟ್ಟಿಕಣಿಕೆ ಹಾವು ಸಿಕ್ಕುದೇ ಬೇಡಾ'ತಾ.... ಹಿಂಗೆಲ್ಲಾ ನಾನ್ ಸಣ್ಣವ ಆಗಿರ್ಕಾಕ ಯೋಚನೆ ಮಾಡಿದ್ದೆ... ಈಗ ನೋಡಿರೆ ಚಂದಿರನೇ ಕರೀತ್ತುಟ್ಟು.. !
`ನಾ ನಿನ್ನ ಹತ್ರ ಅಷ್ಟು ದೂರ ಬಾಕೆ ಆಲೆ..ನನ್ನ ಮೊಬೈಲ್ ನಂಬರ್ ಕೊಟ್ಟನೆ, ನೀನೇ ಮಾತಾಡ್' ನಾ ಇಲ್ಲಿ ಕುದ್ದಲ್ಲಿಂದನೇ ಹೇಳ್ದೆ. ಚಂದ್ರ ಅಲ್ಲಿಂದನೇ ಏನೋ ಹೇಳಿಕಂಡ್ ಕೈಭಾಷೆ ಮಾಡ್ತ್. ನಾ ನನ್ನ ಮೊಬೈಲ್ಲಿ ನನ್ನ ನಂಬರ್ ಟೈಪ್ ಮಾಡಿ ಅವನ ಕಡೆಗೆ ಹಿಡಿದೆ. ಭೂಮಿಲಿ ಗಣಪತಿ ಬಿದ್ದದ್ನ ಅಲ್ಲಿಂದನೇ ನೋಡ್ದಂವ ಅಲಾ ಅಂವ.... ಹಂಗಾಗಿ ಚಂದಿರನ ಕಣ್ಣು ತುಂಬಾ ಶಾರ್ಪ್ ಇರೋಕುಕಾ ನನ್ನ ಗ್ಯಾನ. ನಾ ಯೋಚಿಸಿದ್ದ್ ಸರಿಯಾಗಿಯೇ ಇತ್ ಚಂದ್ರಂಗೆ ನನ್ನ ನಂಬರ್ ಕಾಣ್ತ್ತಾ ಕಂಡದೆ, ಕೂಡ್ಲೆ ಅಂವ ನನ್ನ ನಂಬರ್ಗೆ ಕಾಲ್ ಮಾಡ್ತ್. `ಅಲ್ಲರಾ...ಇಷ್ಟು ವರ್ಷ ಆತ್ ನಿಂಗೆ ಗಣಪತಿ ಶಾಪ ಕೊಟ್ಟ್, ನಿಂಗೆ ಇನ್ನೂ ಅದ್ರಿಂದ ವಿಮೋಚನೆ ಆತ್ಲೆನಾ' ತಾ ನಾ ಕೇಳ್ದೆ, ಅದ್ಕೆ ಅಂವ, `ಎಂಥ ಹೇಳ್ದುರಾ, ಎಲ್ಲಾ ನನ್ನ ಹಣೆಬರಹ...ಆ ಶಾಪ ಈಗ ಇಲ್ಲೆ. ಆದ್ರೆ ನಿಮ್ಮ ಜನಗ ತಪ್ಪು ತಿಳ್ಕೊಂಡಳೊ... ಚೌತಿ ದಿನ ನನ್ನ ನೋಡಿಕೆನೇ ಹೆದರಿಕಂಡವೆ' ತಾ ಹೇಳಿಕಂಡ್ ಕಣ್ಣೀರು ಸುರ್ಸಿತ್....ನನ್ನ ಮೈಮೇಲೆಲ್ಲಾ ಮಳೆ ಹನಿ ಬಿದ್ದಂಗೆ ಆತ್. `ನೀ ಪಾಪ ಅಲಾ...ಮರ್ಡುಬೇಡಾ. ಆ ಗಣಪತಿಗೆ ಎಷ್ಟು ಅಹಂಕಾರ ನೋಡು, ನಿಂಗೆ ಶಾಪ ಕೊಟ್ಟ ಕಥೆನಾ ಎಲ್ಲವ್ಕೆ ಟಾಂ ಟಾಂ ಮಾಡಿಕಂಡ್ ಬಂದುಟ್ಟು, ಆದ್ರೆ ಶಾಪ ವಿಮೋಚನೆ ಆಗ್ಯುಟ್ಟುತಾ ಯಾರಿಗೂ ಹೇಳ್ತ್ಲೇ, ಅಂವ ಅಂದ್ ಬಿದ್ ಹೊಟ್ಟೆ ಒಡ್ಕಂಡತಲಾ, ಆಗ ನೀ ಇನ್ನೂ ಜೋರಾಗಿ ನಗಾಡಕ್ಕಾಯ್ತ್...' ನಾ ಚಂದ್ರನ ಸಪೋರ್ಟ್ ಮಾಡಿ ಮಾತಾಡಿದೆ. ಅದಕ್ಕೆ ಅಂವ...`ಹುಂ...ಅಂದ್ ನಂಗೆ ನಗು ತಡ್ಕಣಿಕೆ ಆತ್ಲೆ...ಆದ್ರೆ ಎಂಥ ಮಾಡ್ದು, ಚೌತಿತೇಳಿ ನಾನೂ ಸಮಾ ಪಂಚಕಜ್ಜಾಯ ತಿಂದುಬಿಟ್ಟಿದ್ದೆ. ಹಂಗಾಗಿ ನಂಗೆ ಹಲ್ಲುನೋವು ಬಂದ್ಬಿಟ್ಟಿತ್...ಜೋರಾಗಿ ನಗಾಡಿಕೆ ಆಗ್ತಿತ್ಲೆ...' ತಾ ಚಂದ್ರ ಹೇಳ್ತಿದ್ದಂಗೆ ಫೋನ್ ಕಟ್ಟಾತ್... ಜೊತೇಲೇ ಅದೇ ರೆಕಾರ್ಡೆಡ್ ವಾಯ್ಸ್..`ನೀವು ಕರೆ ಮಾಡಿದ ಚಂದದಾರರು ವ್ಯಾಪ್ತಿ ಪ್ರದೇಶದಿಂದ ಹೊರಗೆ ಇದ್ದಾರೆ...' ಈಗ್ಲೂ ನಾ ಚಂದಿರ ನಂಬರ್ಗೆ ಟ್ರೈ ಮಾಡ್ತನೇ ಒಳೆ...ಊಹುಂ.... ಲೈನ್ ಸಿಕ್ತಿಲ್ಲೆ. ನೀವೂ ಟ್ರೈ ಮಾಡಿ ನೋಡಿ... ಸಿಕ್ಕಿರೆ ಮಾತಾಡಿ. ಚಂದಿರ ತುಂಬಾ ಬೇಸರಲಿ ಉಟ್ಟು !
- `ಸುಮ'
arebhase@gmail.com
No comments:
Post a Comment