Wednesday, 13 June 2012

ರಾಜಯೋಗ...!


`ಡಬ..ಡಬ..ಡಬ...' ಇನ್ನು ಸ್ವಲ್ಪ ಹೊತ್ತು ಬಿಟ್ಟರೆ ಬಾಗಿಲೇ ಮುರ್ದು ಹೋಗುದೇನೋತೇಳುವ ಹಂಗೆ ಯಾರೋ ಹೊರಗಿಂದ ಬಡಿತ್ತಿದ್ದೊ. ಮಲಗಿದ್ದ ಜೋಯಪ್ಪಂಗೆ ಒಮ್ಮೆಲೇ ಎಚ್ಚರ ಆತ್. ಅವನ ಹೆಣ್ಣ್ಗೆ ಒಳ್ಳೇ ನಿದ್ದೆ. ಇನ್ನೊಂದು ಕಡೆ ಮುಖ ಹಾಕಿ ಮಲಗಿತ್ತ್. ಚಾಪೆಲಿ ಮಲಗಿದ್ದ ಮಂಞ ನಂದ ಉರುಳಾಡಿ ಉರುಳಾಡಿ ಕಟ್ಲಡಿಗೆ ಸೇರಿಕಂಡ್ಬಿಟ್ಟಿತ್ತ್. ಪುನಃ `ಡಬ..ಡಬ..ಡಬ...' ಶಬ್ದ. 2 ಜೊತೆ ಕೈಗ ಒಟ್ಟೊಟ್ಟಿಗೆ ಬಾಗಿಲು ಬಡೀತ್ತಿದ್ದೊ. ಜೋಯಪ್ಪ ಎದ್ದು ಹೋಗಿ ಬಾಗಿಲು ತೆಗ್ತ್. ಹೊರಗೆ ನೋಡಿರೆ ರಾಜಭಟರು ! 
`ನೀ ಈಗಲೇ ಅರಮನೆಗೆ ಬರೋಕು ಗಡ...ಮಹಾರಾಜರ ಅಪ್ಪಣೆ ಆಗ್ಯುಟ್ಟು...' ಬಂದಿದ್ದವರಲ್ಲಿ ಒಬ್ಬ ಜೋರಾಗಿ ಹೇಳ್ತ್. ಜೋಯಪ್ಪಂಗೆ ಗಡಗಡ ನಡುಗಾಟ ಶುರುವಾತ್. ಬೆಟ್ಟತ್ತೂರು ಬೆಟ್ಟದ ಮೇಲೆ ನೆಮ್ಮದಿಯಾಗಿ ಕೃಷಿ ಮಾಡಿಕಂಡ್ ಬದುಕುತ್ತೊಳೆ... ಮಹಾರಾಜ ನನ್ನನ್ಯಾಕೆ ಕರೆಸಿರ್ದುತಾ ಜೋಯಪ್ಪಂಗೆ ಯೋಚನೆ ಶುರುವಾತ್. ಅಷ್ಟುಹೊತ್ತಿಗೆ ಇನ್ನೊಬ್ಬ ರಾಜಭಟ, `ನೀ ಈಗ ಯೋಚನೆ ಮಾಡಿಕಂಡ್ ನಿಲ್ಬೇಡ, ಕೂಡ್ಲೇ ಹೊರ್ಡು, ಬಾ ಕುದುರೆ ಹತ್ತ್' ತಾ ಹೇಳ್ತ್. ಅದ್ಕೆ ಜೋಯಪ್ಪ, `ಇರಿ...ನಾ ಒಂಚೂರು ಮುಖ ತೊಳ್ಕಂಡನೆ. ನನ್ನ ಹೆಣ್ಣ್ ಈಗ ಎದ್ದದೆ. ಒಂದೊಂದು ಗ್ಲಾಸ್ ಕಾಫಿ ಕುಡ್ಕಂಡ್ ಪೋಯಿ..'ತಾ ಹೇಳ್ತ್. ಅದ್ಕೆ ಒಪ್ಕಂಡ್, ರಾಜಭಟರು ಅಲ್ಲೇ ಹೊರಗೆ ಮನೆ ಜಗುಲಿ ಮೇಲೆ ಕುದ್ದುಕೊಂಡೊ.
`ಏಯ್...ಎದ್ದೇಳ್ನೆ. ಇಲ್ಲಿ ಊರು ಮುಳುಗಿಹೋಗ್ತುಟ್ಟು. ನೀ ನೋಡಿರೆ ಹಂದಿನಂಗೆ ಬಿದ್ಕೊಂಡೊಳಾ...ಸಾಕ್ ಏಳ್..' ಒಳಗೆ ಹೋಗಿ ಜೋಯಪ್ಪ ಹೆಣ್ಣ್ನ ಎದ್ದೇಳಿಸಿಕೆ ನೋಡ್ತ್. ಅವ್ಳಿಗಿನ್ನೂ ನಿದ್ದೆ ಬಿಡುವಂಗೆನೇ ಕಾಣ್ತಿತ್ಲೆ. `ನನ್ನ ಮಹಾರಾಜ ಬಾಕೆ ಹೇಳಿಯೊಳೊ..' ತಾ ಜೋಯಪ್ಪ ಹೇಳ್ತಿದ್ದಂಗೆ, ಅವಳಿಗೆ ಶಾಕ್ ಹೊಡ್ದಂಗೆ ಆತ್. `ಯಾಕೆ...ಏನಾತ್...ಯಾರ್ ಹೇಳ್ದ್ ?' ತಾ ಕೇಳಿಕಾಕನ, ಆ ಚಳಿಲೂ ಅವ್ಳ ಹಣೆಲಿ ಸಾಲು ಸಾಲು ಬೆವರು. `ನಂಗೂ ಗೊತ್ಲೆ. ರಾಜಭಟರು ಬಂದೊಳೊ. ಹೊರಗೆ ಕುದ್ದೊಳೊ ನೋಡು. ಬೇಗ ಬೆಂಕಿ ಮಾಡಿ ಕಾಫಿ ಕಾಯ್ಸು. ನಾ ಹೋಗಿ ಮುಖ ತೊಳ್ಕಂಡ್ ಬನ್ನೆ...' ತಾ ಹೇಳ್ಕಂಡ್ ಜೋಯಪ್ಪ ಗುಡ್ಡದ ಕಡೆಗೆ ಹೋತ್.
ಈ ಎಲ್ಲಾ ಬೊಬ್ಬೆಗೆ ನಂದಂಗೆ ಎಚ್ಚರ ಆತ್. ಕಣ್ಣು ಬಿಟ್ಟು ನೋಡಿರೆ, ಕೈಗೆ ಸಿಕ್ಕುವಷ್ಟೇ ಎತ್ತರಲ್ಲಿ ಅಟ್ಟ ! ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಲೆನ ತಿರುಗಿಸಿ ನೋಡ್ತ್... ಆಗ ಗೊತ್ತಾತ್, ನಾ ಇರುದು ಕಟ್ಲ್ ಕೆಳಗೆತಾ..ಅಲ್ಲಿಂದಲೇ ಕಿರುಚಿತ್, `ಅಮ್ಮಾ ಕಾಫಿ...' `ನಿನ್ನ ದೊಂಡೆ ಕಟ್ಟಿಕೆ...ಮೊದ್ಲು ಎದ್ದು ಬಾ. ಹೋಗಿ ಮುಖ ತೊಳಿ. ಮತ್ತೆ ನಿಂಗೆ ಕಾಫಿ' ತಾ ಅಡುಗೆಮನೆಂದ ನಂದನ ಅಮ್ಮ ಹೇಳ್ತ್... ನಂದ ಕಷ್ಟಪಟ್ಟ್ಕಂಡೇ ಕಣ್ಣ್ಉಜ್ಜಿಕಂಡ್ ಒಲೆಬುಡಕ್ಕೆ ಬಂದ್ ಕುಕ್ಕರುಗಾಲಲ್ಲಿ ಕುದ್ದ್ಕಂಡತ್. ಆಗ ಹೊರಗೆಂದ ಯಾರೋ ಮಾತಾಡ್ತಿರ್ದು ಕೇಳಿ, ಅಂವ ಅಲ್ಲಿ ಹೋಗಿ ನೋಡಿರೆ ರಾಜಭಟರು. ತಲೆ ಮೇಲೆ ಕಬ್ಬಿಣದ ಟೊಪ್ಪಿ, ಕೈಲಿ ಉದ್ದದ ಕತ್ತಿ, ಹಲಸಿನ ಮರಕ್ಕೆ ಕಟ್ಟಿಹಾಕಿದ ಎರಡು ಕುದುರೆಗ...ಇದ್ನೆಲ್ಲಾ ನೋಡಿ ನಂದಂಗೆ ಹೆದ್ರಿಕೆ ಆತ್. ಅಂವ ವಾಪಸ್ ಹೋಗಿ ಮತ್ತೆ ಕಟ್ಲ್ ಅಡಿ ಸೇರಿಕಂಡ್ ಬಿಟ್ಟತ್.
ಜೋಯಪ್ಪ ಮುಖ ತೊಳ್ದ್ ಬಾತ್. ಅವನ ಹೆಣ್ಣ್ ಮಾಡಿದ್ದ ಕಾಫಿನ ತಕ್ಕೊಂಡೋಗಿ ರಾಜಭಟರಿಗೆ ಕೊಟ್ಟತ್. ಇವನೂ ಒಂದು ಗ್ಲಾಸ್ ಕುಡ್ದತ್. ಕಾಫಿ ಕುಡ್ದು ಆದ್ಮೇಲೆ ಮೂರೂ ಜನನೂ ಹೊರಟೊ. ಸ್ವಲ್ಪ ದೊಡ್ಡ ಕುದುರೆ ತಂದ್ದಿದ್ದಂವ ಜೋಯಪ್ಪನ ಹಿಂದೆ ಕೂರ್ಸಿಕಂಡತ್. ಬೆಳಗ್ಗಿನ ಹೊತ್ತು. ಚಳಿ ಬೇರೆ. ಎಂಟೂವರೆಗೆಲ್ಲಾ ಜೋಯಪ್ಪ ಮಡಿಕೇರಿ ತಲುಪಿಬಿಟ್ಟಿತ್ತ್. ಅಲ್ಲಿಗೆ ತಲುಪಿಕಾಕನ ಅವನ ಮೈಯೆಲ್ಲಾ ಮರಕಟ್ಟಿದ್ದಂಗೆ ಆಗಿ ಹೋಗಿತ್ತ್. ಜೊತೆಗೆ ನಡುಗಾಟ ಬೇರೆ... ಆ ನಡುಗಾಟ ಚಳಿಗೋ, ಇಲ್ಲ ಮಹಾರಾಜ ಕರೆಸಿದ್ದಕ್ಕೋ, ಗೊತ್ತಾತ್ಲೆ... 
ಹತ್ತೂವರೆಗೆ ಮಹಾರಾಜ ದರ್ಬಾರ್ ಶುರುವಾತ್. ಜೋಯಪ್ಪ ಮಹಾರಾಜನ ನೋಡ್ದು ಇದೇ ಮೊದ್ಲು. ಅವರ ಗತ್ತಿನ ಹೆಜ್ಜೆ, ತಲೆ ಮೇಲೆ ಚಿನ್ನದ ಕಿರೀಟ, ಫಳ ಫಳ ಹೊಳೆಯ್ವ ಬಟ್ಟೆ, ಸೊಂಟಲಿ ಎಡಗಡೆ ನೇತಾಡ್ತಿರ್ವ ಉದ್ದದ ಕತ್ತಿ... ಜೋಯಪ್ಪ ಬಿಟ್ಟಕಣ್ಣ್ ಬಿಟ್ಟ ಹಂಗೆನೇ ನೋಡಿಕಂಡ್ ನಿಂತ್ಬಿಟ್ಟತ್. ಮಂತ್ರಿಗಳ ಜೊತೆ ಮಾತುಕತೆ ಎಲ್ಲಾ ಮುಗ್ದ ಮೇಲೆ ರಾಜನ ದರ್ಬಾರ್ ಶುರುವಾತ್. ಯಾರೋ ಒಬ್ಬ ಎತ್ತು ಕದ್ದ್ ಸಿಕ್ಕಿಹಾಕಿಕಂಡಿತ್ತ್. ಅವನ ಕೈನೇ ಕತ್ತರಿಸಿಕೆ ರಾಜ ಆಜ್ಞೆ ಮಾಡ್ತ್. ಇನ್ನೊಬ್ಬ ಆಸ್ತಿ ಆಸೆಗೆ ಅಣ್ಣಂಗೆ ವಿಷ ಹಾಕಿ ಕೊಂದಂವ. ಅವ್ನ ರಾಜಾಸೀಟ್ಂದ ಕೆಳಕ್ಕೆ ನೂಕಿ ಕೊಲ್ಲಿಕೆ ರಾಜ ಆಜ್ಞೆ ಮಾಡ್ತ್. ಮತ್ತೊಬ್ಬ, ಹೆಣ್ಣ್ ಲಾಯ್ಕ ಹಂದಿಸಾರ್ ಮಾಡ್ತ್ಲೇತಾ ಸಿಟ್ಟ್ಲಿ ಅವಳ ತಲೆನೇ ಕಡ್ದ್ ಬಿಟ್ಟಿತ್ತ್. ಆನೆದ್ ಕಾಲ್ಕೆಳಗೆ ಇವ್ನ ತಲೆ ಇಡಿಕೆ ರಾಜ ಭಟರಿಗೆ ಸೂಚನೆ ಕೊಟ್ಟತ್. ಇದ್ನೆಲ್ಲಾ ನೋಡಿ ಜೋಯಪ್ಪಂಗೆ ಹೆದ್ರಕೆ ಜಾಸ್ತಿ ಆತ್. ನನ್ನ ಯಾವ ತಪ್ಪಿಗೆ ಇವು ಇಲ್ಲಿ ಕರ್ಕೊಂಡು ಬಂದೊಳಪ್ಪತಾ ಕಣ್ಣಲ್ಲಿ ನೀರು ಬಾತ್.
`ಜೋಯಪ್ಪ...ಜೋಯಪ್ಪ...ಜೋಯಪ್ಪ...' ರಾಜನ ಪಕ್ಕಲಿ ನಿಂತಿದ್ದಂವ ಕರೀತ್ತಿದ್ದಂಗೆ, ಇಂವ ಹೋಗಿ ರಾಜನ ಮುಂದೆ ಕೈ ಕಟ್ಟಿ, ತಲೆ ತಗ್ಗಿಸಿ ನಿಂತತ್. ಆಗ ಜೋಯಪ್ಪನ ನೋಡಿದ ಮಂತ್ರಿ, `ಮಹಾರಾಜರೇ ನಮ್ಮ ರಾಜಭಟರು ಎಂಥದ್ದೋ ಎಡವಟ್ಟು ಮಾಡ್ಯೊಳೊ. ನಾ ಹೇಳ್ದ ಜೋಯಪ್ಪ ಇಂವ ಅಲ್ಲ. ಅವನೇ ಬೇರೆ ಜೋಯಪ್ಪ.' ತಾ ಹೇಳ್ತ್. ಮಹಾರಾಜಂಗೆ ಸಿಟ್ಟ್ಬಾತ್. `ಯಾರಲ್ಲಿ...ಇಂವನ ಕರ್ಕಂಡ್ ಬಂದ ಆ ಭಟರಿಗೆ ನೂರು ನೂರು ಛಡಿಯೇಟು ಕೊಡ್ಸಿ'ತಾ ಆಜ್ಞೆ ಮಾಡ್ತ್. ಜೋಯಪ್ಪನ ಕಡೆ ನೋಡಿ...`ನೋಡಪ್ಪ, ನಮ್ಮವು ಗೊತ್ತಿಲ್ಲದೆ ಏನೋ ತಪ್ಪು ಮಾಡ್ಯೋಳೊ. ಇಂದ್ ಅರಮನೇಲಿ ಇದ್ದ್ ನಾಳೆ ಬೆಳಗ್ಗೆ ನೀ ವಾಪಸ್ ಹೋಗು'ತಾ ಹೇಳ್ತ್. ಮಂತ್ರಿಗೆ ಕಡೆ ತಿರುಗಿ, ಜೋಯಪ್ಪಂಗೆ ಒಂದು ಆಳುನ ವ್ಯವಸ್ಥೆ ಮಾಡ್ತ್.
ಜೋಯಪ್ಪ ದಿನದ ಮಟ್ಟಿಗೆ ಸಣ್ಣಥರಲಿ ಮಹಾರಾಜನೇ ಆಗಿತ್ತ್. ಆ ಆಳು ಅರಮನೆ ಒಳಗೆ ಕರ್ಕಂಡ್ ಹೋಗಿ ಊಟ ಕೊಡ್ಸಿತ್. ಜೋಯಪ್ಪ ಅಂಥ ಊಟನ ಊರು ಪಟೇಲನ ಮಂಞನ ಮದುವೆಲೂ ಮಾಡಿತ್ಲೆ. ಊಟ ಆದ್ಮೇಲೆ ಆ ಆಳು ಇಡೀ ಅರಮನೆನಾ ತೋರಿಸಿಕಂಡ್ ಬಾತ್. ಅಲ್ಲೇ ಒಂದು ಕಡೆ ಇದ್ದ ಕಲ್ಲುನ ಆಮೆ ನೋಡಿ ಜೋಯಪ್ಪ ಖುಷಿಪಟ್ಟತ್. ಇನ್ನು ಹೊರಗೆ ಬಂದರೆ ಎರಡು ದೊಡ್ಡ ಆನೆಗ....! `ಹೆದ್ರ್ಬೇಡ...ಅದ್ ನಿಜವಾದ ಆನೆ ಅಲ್ಲ. ಬಾ ಹತ್ತಿರ ಪೋಯಿತಾ' ಆಳು ಆನೆಗಳ ಹತ್ರ ಕರ್ಕಂಡ್ ಹೋತ್. ಜೋಯಪ್ಪಂಗೆ ಅದನ್ನೆಲ್ಲಾ ನೋಡಿ ಜನ್ಮ ಸಾರ್ಥಕ ಆದಂಗೆ ಆತ್. ಹಂಗೆ ವಾಪಸ್ ಅರಮನೆ ಒಳಕ್ಕೆ ಹೋಕೆ ಮುಂಚೆ, ರಾಜಭಟರು ಇದ್ದ ಮನೆಗಳ ಕಡೆಂದ ಯಾರೋ `ಅಯ್ಯೋ... ಹುಯ್ಯೋ...'ತಾ ಹೇಳ್ತಿದ್ದೊ. ಹತ್ತಿರ ಹೋಗಿ ನೋಡಿರೆ, ಬೆಳಗ್ಗೆ ಇಂವನ ಕರ್ಕಂಡ್ ಬಂದಿದ್ದ ರಾಜಭಟರು. ನೂರು ನೂರು ಛಡಿ ಏಟು ತಿಂದಿದ್ದ ಅವ್ಕೆ, ಅವ್ರ ಹೆಣ್ಣ್ಗ ಎಣ್ಣೆ ಉಜ್ಜಿ ಉಜ್ಜಿ ಮಸಾಜ್ ಮಾಡ್ತಿದ್ದೊ.....


`ಸುಮ'
arebhase@gmail.com


No comments:

Post a Comment