ನಾ ಮಾಡುವ ಕೆಲಸಲಿ ಭಾವನೆಗಳಿಗೆ ಜಾಗ ಇಲ್ಲೆ. ಒಂದು ಆ್ಯಕ್ಸಿಡೆಂಟ್ ಆದ್ರೆ ಅಲ್ಲಿ ಎಷ್ಟುಜನ ಸತ್ತೊಳೋತೇಳುದ್ರ ಮೇಲೆ ಆ ಸುದ್ದಿಗೆ ಬೆಲೆ ಕಟ್ಟುವ ಕಟುಕ ಮನಸ್ಸಿನ ಪ್ರಾಣಿಗ ನಾವು. ಟಿಆರ್ಪಿ ತೇಳುವ ಪ್ರಿಯತಮೆನ ಮೆಚ್ಚಿಸಿಕೆ ಇಂಥದ್ದೆಲ್ಲಾ ಅನಿವಾರ್ಯ. ಸ್ವಂತ ಅಕ್ಕನ ಗಂಡ ಆ್ಯಕ್ಸಿಡೆಂಟ್ಲಿ ಸತ್ತದ್ ಗೊತ್ತಾದ್ರೂ, ಆ ಸುದ್ದಿನ ಓದಿ ಮುಗಿಸುವವರೆಗೆ ದು:ಖ ಹಿಡಿದಿಟ್ಟುಕೊಳ್ವ ವೃತ್ತಿಪರ ಆ್ಯಂಕರ್ಗ ನಮ್ಮಲ್ಲಿ ಒಳೋ....ಅಂಥದ್ರಲ್ಲಿ ನಿನ್ನೆಯ ಒಂದು ನ್ಯೂಸ್ ನನ್ನ ಕಣ್ಣಲ್ಲಿ ನೀರು ಬರುವಂಗೆ ಮಾಡಿಬಿಟ್ಟತ್ !
ನನ್ನ ಅರ್ಧ ಗಂಟೆ ನ್ಯೂಸ್ಗೆ ಏನು ಬೇಕೋ ಅದ್ನ ಸೆಲೆಕ್ಟ್ ಮಾಡಿಕಣ್ದು ಆಫೀಸ್ಗೆ ಹೋದ ಕೂಡ್ಲೆ ನಾ ಮಾಡುವ ಮೊದಲ ಕೆಲಸ. ನಿತ್ಯಾನಂದನ ಕಿರಿಕಿರಿ ಅರ್ಧ ನ್ಯೂಸ್ ತುಂಬಿಸುವಷ್ಟು ಸಿಕ್ಕಿದೆತಾ ಗೊತ್ತಿತ್ತ್. ಇನ್ನರ್ಧ ಭಾಗಕ್ಕೆ ಸುದ್ದಿ ಬೇಕಲ್ಲ... ಹಂಗೆ ನಮ್ಮ ಜಿಲ್ಲಾ ವರದಿಗಾರರು ಕಳ್ಸಿದ ಸುದ್ದಿಗಳ್ನ ನೋಡಿಕಾನ ಕಣ್ಣಿಗೆ ಬಿದ್ದದ್ ಶಿವಮೊಗ್ಗದ ನ್ಯೂಸ್...ಸ್ಕ್ರಿಪ್ಟ್ ನೋಡ್ದೆ...ಅಂಥ ಇಂಟ್ರೆಸ್ಟ್ ಹುಟ್ಟಿಸುವಂಗೇನೂ ಇತ್ಲೆ... ವೀಡಿಯೋ ಕ್ಲಿಪ್ಪಿಂಗ್ಸ್ ನೋಡಿಕಾಕನ ಮಾತ್ರ ಏಕೋ ಒಂದ್ಸಲ ಹೃದಯ ಹಿಂಡಿದಂಗೆ ಆತ್. ಸಾಮಾನ್ಯವಾಗಿ ನ್ಯೂಸ್ಗಳ್ನ ನಾ ಸೆಲೆಕ್ಟ್ ಮಾಡಿಕಂಡ್ ಅದನ್ನ ಬರಿಯಕ್ಕೆ ಜೂನಿಯರ್ಗಳಿಗೆ ಒಪ್ಪಿಸಿನೆ. ಆದ್ರೆ ಈ ಸುದ್ದಿಗೆ ನಾನೇ ಸ್ಕ್ರಿಪ್ಟ್ ಬರೆಯೋಕೂತ ಡಿಸೈಡ್ ಮಾಡ್ದೆ.
ಅದೊಂದು ಹೆಣ್ಣು ಕೂಸು. ಹುಟ್ಟಿ ಒಂದು ವಾರ ಆಗಿರುದೇನೋ...ಆದ್ರೆ ಪಾಪಿ ಅಮ್ಮಂಗೆ ಆ ಕೂಸು ಬೇಕಾಗಿತ್ಲೆ. ಅದ್ಕೆ ಶಿವಮೊಗ್ಗ ಹತ್ರ ಒಂದು ಕಾಡ್ಲಿ ಬಿಟ್ಟ್ಹೋಗಿತ್ತ್. ಪಾಪ ಇದ್ಯಾವ್ದೂ ಗೊತ್ತಿಲ್ಲದ ಕೂಸು ಸ್ವಲ್ಪ ಹೊತ್ತು ಸುಮ್ಮನಿದ್ದಿರ್ದು. ಆದ್ರೆ ಹಸಿವಾದಂಗೆ ಮರ್ಡಿಕೆ ಶುರುಮಾಡ್ಯುಟ್ಟು. ಆದ್ರೆ ಆ ಕಾಡ್ಲಿ ಮರ್ಟರೆ ಯಾರಿಗೆ ಕೇಳಿದೆ? ನಿಜವಾಗಿಯೂ ಆ ಕೂಸುನ ಗೋಳು `ಅರಣ್ಯರೋದನ' ಆಗಿತ್ತ್. ಇರುವೆಗ, ಮತ್ತಿನ್ಯಾವುದೋ ಚಿಕ್ಕಪುಟ್ಟ ಪ್ರಾಣಿಗ ಆ ಪುಟ್ಟ ಕೂಸನ ದೇಹಕ್ಕೆ ಬಾಯಿ ಹಾಕಿದ್ದೊ... ಇಷ್ಟು ಆಕಾಕನ ಅದ್ರ ಮರ್ಡುವ ಶಕ್ತಿಯೇ ಹೊರಟು ಹೋಗಿತ್ತ್. ಯಾರೋ ಪುಣ್ಯಾತ್ಮ ಸೌದೆ ಕಡಿಯಕ್ಕೆ ಬಂದಂವ ಇಲ್ಲಿ ಕೂಸುನ ಕಂಡ್ ಪೊಲೀಸ್ರಿಗೆ ತಿಳಿಸಿತ್.
ಆ ಪಾಪಿ ಅಮ್ಮ ಕೂಸು ಹುಟ್ಟಿದಲ್ಲಿಂದ ಹಾಲೇ ಕೊಟ್ಟಿತ್ಲೆಯೇನೋ... ಪೊಲೀಸ್ನವು ಆಸ್ಪತ್ರೆಗೆ ಸೇರಿಸಿಕಾಕನ ಆ ಮಗುನ ಸ್ಥಿತಿ ಹಂಗೆ ಇತ್. ಮೂಳೆಗಳ ಮೇಲೆ ಚರ್ಮದ ಬಟ್ಟೆ ಹೋಸಿರೆ ಹೆಂಗೆ ಕಂಡದೆಯೋ, ಕೂಸು ಕೂಡ ಹಂಗೆನೇ ಇತ್. ಅದ್ಕೆ ಈಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೇಲಿ ಟ್ರೀಟ್ಮೆಂಟ್ ಕೊಡ್ತೊಳೊ. ಕೂಸು ಬದುಕುದು ಡೌಟ್ತಾ ಡಾಕ್ಟರ್ಗಳ ಮಾತು...ನೋಡೊಕು ಏನಾದೇತಾ....`ದೇವ್ರೇ ಆ ಪಾಪುನ ಬದುಕಿಸಪ್ಪಾ...'
- `ಸುಮ'
arebhase@gmail.com
No comments:
Post a Comment