Tuesday, 26 June 2012

ಮೂಗುಬೊಟ್ಟಿನ ಚೆಲುವೆ... !


ಹೊರಗೆ ಓಲಗದ ಶಬ್ದ.. ಅಲ್ಲೇ ಸ್ವಲ್ಪ ದೂರಲಿ ಹಾಕಿರುವ ದೊಡ್ಡ ಒಲೆ ಮೇಲೆ ಕಡಾಯಿಲಿ, ಎಣ್ಣೆಬಿಟ್ಟ್ಕಂಡ್ ಬೇಯ್ತಿರ್ವ ಹಂದಿಮಾಂಸ. ಮನೆ ಒಳಗೆ ಗಿಜಿಗಿಜಿ...ಇಂದ್ ನಂದಂದ್ ಚಪ್ಪರ. ಸೋದರ ಮಾವ ಕಾಸ್ತಾಳಿ ಕಟ್ಟಿ, ಎಣ್ಣೆ ಅರಸಿನ ಶಾಸ್ತ್ರಕ್ಕೆ ನಂದನ ದೇವರ ಫೋಟೋದ ಕೆಳಗೆ ಕೂರಿಸಿದ್ದೊ. ಅದ್ ದೊಡ್ಡಮನೆ. ತುಂಬಾ ಹಳೇ ಮನೆ. ಒಳಗೆ ಸರಿಯಾಗಿ ಬೆಳಕು ಬಾದುಲೆ. ವೀಡಿಯೋಗ್ರಾಫರ್ ಹಾಕ್ಕಂಡಿದ್ದ ಲೈಟ್ ಮಾತ್ರ ಇಡೀ ರೂಂನ ಬೆಳ್ಳಂಗೆ ಮಾಡಿಬಿಟ್ಟಿತ್ತ್. ಒಮ್ಮೊಮ್ಮೆ ಅಂವ ಲೈಟ್ ಆಫ್ ಮಾಡಿಕಾಕನ ಹಗಲಲ್ಲೂ ಅಮವಾಸ್ಯೆ ರಾತ್ರಿ ಇದ್ದಂಗೆ ಅನ್ನಿಸಿಬಿಡ್ತಿತ್. ಆ ಕತ್ತಲಲ್ಲೂ ಗೂಡೆಗಳ ಗುಂಪುಲಿ ಒಂದು ನಕ್ಷತ್ರ ಫಳ ಫಳ ಹೋಳೀತಿತ್ತ್ !  
ನಂದಂಗೆ ನಾ ಅಡೋಳಿ. ಎಣ್ಣೆಅರಸಿನ ಶಾಸ್ತ್ರ ನಡೆಯಕಾಕನ ಅವನ ಪಕ್ಕಲೇ ನಾ ನಿಂತ್ಕಂಡಿದ್ದೆ. ವೀಡಿಯೋ ಕೆಮರಾದ ಲೈಟ್ ನೋಡಿ ನೋಡಿ, ಎದುರಿಗೆ ಇದ್ದೆಲ್ಲಾ ಕಾಣದ ಸ್ಥಿತಿ...ಗೂಡೆಗಳ ಗುಂಪುಲಿ ಹೊಳೀತ್ತಿದ್ದ ನಕ್ಷತ್ರ ಬಿಟ್ಟ್..! ಅದೊಂದು ಮಾತ್ರ ನಂಗೆ ತುಂಬಾ ಲಾಯ್ಕ ಕಾಣ್ತಿತ್. ಅಲ್ಲಿ ನಂಗೆ ಕಾಣ್ತಿದ್ದದ್ ಮೂಗುಬೊಟ್ಟು. ಆ ಮೂಗುಬೊಟ್ಟೇ ಇಷ್ಟ್ ಪೊರ್ಲು ಇದ್ದರೆ, ಇನ್ನ್ ಅದನ್ನ ಹಾಕ್ಕಂಡಿರ್ವ ಗೂಡೆ ಹೆಂಗಿರ್ದು....ನಾ ನನ್ನದೇ ಲೋಕದಲ್ಲಿದ್ದೆ. `ಹೈದನ ಕಣ್ಣಿಗೆಲ್ಲಾ ಎಣ್ಣೆ ಬರ್ತುಟ್ಟು...ಅಡೋಳಿ ಎಂಥ ಮಾಡ್ದೆ...ಒಂದು ಬಟ್ಟೆ ತಕ್ಕಂಡ್ ಉಜ್ಜಿಕೆ ಆಲೆನಾ...' ಯಾರೋ ಹಿಂದೆಂದ ಕಿರ್ಚಿಕನ ನಾ ಎಚ್ಚರ ಆದೆ. ಆ ಗಡಿಬಿಡಿಲಿ ಎಷ್ಟು ಹೆಣ್ಣ್ಜನ ಶಾಸ್ತ್ರ ಮಾಡ್ದೊತೇಳುದ್ನ ಲೆಕ್ಕ ಹಾಕಿಕಂಬಕೆ ನಾ ಮರ್ತುಬಿಟ್ಟಿದ್ದೆ. ಮೇಲೆ ಮನೆ ಆಂಟಿ ಕೇಳಿಕಾಕನ ನಾ ಸುಮ್ನೆ `8 ಜನ ಆದೋ..' ತಾ ಹೇಳ್ದೆ. `ಹಂಗಾರೆ ಇನ್ನೊಬ್ಬರ್ ಇಲ್ಲಿ ಮಾಡ್ಲಿ. ಉಳ್ದವೆಲ್ಲಾ ಚಪ್ಪರ ಕೆಳಗೆ ಮಾಡ್ಲಿ..'ತಾ ಹೇಳ್ತಿದ್ದಂಗೆ, ಸೋದರಮಾವ ನಂದನ ಚಪ್ಪರದ ಕೆಳಗೆ ಕರ್ಕೊಂಡ್ ಹೋದೋ...
ಚಪ್ಪರದ ಕೆಳಗೆ ಒಬ್ಬೊಬ್ಬರೇ ಬಂದ್ ಎಣ್ಣೆ ಅರಸಿನ ಶಾಸ್ತ್ರ ಮಾಡ್ತಿದ್ದೊ... ನಾ ಮಾತ್ರ ಆ ಪೊರ್ಲುನ ಮೂಗುಬೊಟ್ಟುನ ಹುಡುಕಿಕೆ ಶುರುಮಾಡ್ದೆ. ಹೊರಗೆ ಜಾಸ್ತಿ ಬೆಳಕು ಇದ್ದಕ್ಕೆ ಕಂಡದೆ, ನಂಗೆ ಮತ್ತೆ ಮೂಗುಬೊಟ್ಟು ಕಾಂಬಕೆ ಸಿಕ್ತ್ಲೆ...ಇಲ್ಲೂ ಎಣ್ಣೆ ಅರಸಿನ ಶಾಸ್ತ್ರ ಮುಗ್ತ್. ನಂದನ ಸ್ನಾನ ಮಾಡ್ಸಿ ಆತ್. ಎಲ್ಲಾ ಮುಗ್ಸಿ ಬಾಕಾಕನ ಹಸೆನೂ ಬರ್ದ್ ಆಗಿತ್ತ್. ಮದರಂಗಿ ಶಾಸ್ತ್ರಕ್ಕೆ ನಂದನ ಹಸೆಮಣೆ ಎದ್ರು ಕೂರ್ಸಿದೊ. ಮತ್ತೆ ಅದೇ ಕತ್ತಲೆ ಜಾಗ...ವೀಡಿಯೋಗ್ರಾಫರ್ ಲೈಟ್...ಗೂಡೆಗಳ ಗುಂಪು ಕಡೆ ನೋಡಿರೆ.. ಈಗ ಅಲ್ಲಿ ಆ ಮೂಗುಬೊಟ್ಟು ಹೊಳೀತ್ತುಟ್ಟು ! ನಂದನ ಕೈಗೆ ಯಾರೋ ಇಬ್ಬರು ಮದರಂಗಿ ಮೆತ್ತ್ತಿದ್ದೊ. ಇನ್ಯಾರೋ ನನ್ನ ಕೈ ಹಿಡ್ದೆಳ್ದ್, ಮದರಂಗಿ ಹಾಕಿಕೆ ಶುರುಮಾಡ್ದೊ. ಕೈಯೆಲ್ಲಾ ಕೋಟ ಕೋಟ ಆಗ್ತಿತ್ತ್. ಆದ್ರೂ ನನ್ನ ಕಣ್ಣ್ ಮಾತ್ರ ಆ ಮೂಗುಬೊಟ್ಟ್ನ ಸುಂದರಿಗಾಗಿ ಹುಡುಕಾಡ್ತಿತ್ತ್. ಆದ್ರೆ ಅಲ್ಲಿ ಕಾಣ್ತಿದ್ದದ್ ಬರೀ ಮೂಗುಬೊಟ್ಟು... ಆದನ್ನ ಹಾಕ್ಕಂಡಿರ್ವ ಗೂಡೆ ಮಾತ್ರ ಕಾಣ್ತಿಲ್ಲೆ !
ಮಡಿಕೇರಿ ಗೌಡ ಸಮಾಜಲಿ ಮದುವೆ. ಹೆಸರಿಗಷ್ಟೇ ನಾ ಅಡೋಳಿ ಆಗಿದ್ದೆ. ಅಡೋಳಿ ಮಾಡಕ್ಕಾಗಿದ್ದ ಕೆಲ್ಸನ್ನೆಲ್ಲಾ ದಿಬ್ಬಣ ಮುಖ್ಯಸ್ಥ ಹೇಳ್ತಿತ್ತ್. ಅಂವ ಏನು ಹೇಳ್ತಿತ್ತೊ, ಅದ್ನ ನಾ ಮಾಡ್ತಿದ್ದೆ. ಆದ್ರೆ ಮನಸ್ಸು ಮಾತ್ರ ಆ ಫಳ ಫಳ ಮೂಗುಬಟ್ಟುನ ಹುಡುಕಾಡ್ತಿತ್ತ್. ಹೂಂ...ಮದುವೆ ಮುಗ್ದು ನಂದನ ಗೂಡೆನ ಮನೆ ಹತ್ತಿಸಿ ಆದ್ರೂ, ನಂಗೆ ಮೋಡಿ ಮಾಡಿದ ಆ ಮೂಗುಬಟ್ಟುನ ಗೂಡೆ ಯಾರುತಾ ಕಂಡು ಹಿಡಿಯಕ್ಕೆ ಆತ್ಲೆ. ಮದುವೆ ಕಳ್ದ್ ಒಂದು ವಾರ ಆದ್ಮೇಲೆ, ಫೋಟೋಗಳಲ್ಲಿ ಹುಡುಕಿದೆ.. ವೀಡಿಯೋ ಹಾಕಿ ಎರಡೆರಡು ಸಲ ನೋಡ್ದೆ... ಅಲ್ಲಿ ಬರೀ ಮೂಗುಬೊಟ್ಟುನ ಹೊಳಪು ಮಾತ್ರ ಕಾಣ್ತಿತ್ತ್... ಆದ್ರೆ ಆ ಸುಂದರಿ ಮುಖ ಕತ್ತಲೆಯಲ್ಲಿ ಮುಳುಗಿ ಹೋಗಿತ್ತ್. ಈಗಲೂ ಹುಡುಕ್ಕುತ್ತೊಳೆ ಆ ಮೂಗುಬೊಟ್ಟು ಸುಂದರಿನ.... ನಿಮಿಗೆ ಕಂಡರೆ ಪ್ಲೀಸ್ ನಂಗೆ ತಿಳ್ಸಿ...

- `ಸುಮ'
arebhase@gmail.com

No comments:

Post a Comment