ಮಳೆತೇಳಿರೆ ನೆನಪಾದು ಭಾಗಮಂಡಲ. ಮುಂಗಾರು ಹನಿ ನೆತ್ತಿ ಮೇಲೆ ಬೀಳಿಕಾನ, ಎಲ್ಲೇ ಇದ್ದರೂ ಭಾಗಮಂಡಲದ ಸವಿ ಸವಿ ನೆನಪಿನ ಬುತ್ತಿ ಬಿಚ್ಚಿಕಂಡದೆ. ಸಾಮಾನ್ಯವಾಗಿ ಅಲ್ಲಿ ಮೇ ಕೊನೆಗೆ ಸಣ್ಣಗೆ ಮಳೆ ಬೀಳಿಕೆ ಶುರುವಾದೆ. ಬೇಸಿಗೆ ರಜೆ ಕಳ್ದ್ ಶಾಲೆಯ ಬಾಗಿಲು ತೆಗೆಯಕಾಕನ ಮಳೆನೂ ಸ್ವಲ್ಪ ಸ್ವಲ್ಪನೇ ಜೋರಾಗ್ತಾ ಬಂದದೆ. ಜೂನ್ ಎರಡನೇ ವಾರದ ನಂತರ ಅಂತೂ ಬರೀ ಮಳೆಯದ್ದೇ ಅಬ್ಬರ....ಭಾಗಮಂಡಲ - ಮಡಿಕೇರಿ, ಭಾಗಮಂಡಲ - ನಾಪೋಕ್ಲು ರೋಡ್ ಮೇಲೆ ಎಷ್ಟು ಸಲ ನೀರು ಬಂದದೆತ ಹೇಳಿಕೆ ಆಲೆ. ಆಗಲ್ಲೇ ಮಕ್ಕಳಿಗೆ ತುಂಬಾ ಖುಷಿ... ಶಾಲೆಗೆ ರಜೆ ಸಿಕ್ಕಿದೆಯೆಲ್ಲಾ...
ಹೊರಗೆ ಜೋರು ಮಳೆ ಬರ್ತಿದ್ದರೆ, ಮನೆ ಒಳಗೆ ಒಲೆ ಬುಡಲಿ ಬೆಂಕಿ ಕಾಯಿಸುವ ಮಜಾನೇ ಬೇರೆ. ಅಟ್ಟಲಿ ಒಣಗಿಸಿಟ್ಟ ಹಲಸಿನ ಬೀಜನ ಓಡುಲಿ ಹುರ್ದ್ ಒಂದೊಂದೇ ಕಟುಂ, ಕುಟುಂತಾ ಅಗಿತಾ ಇದ್ದರೆ, ಚಳಿ ಎಲ್ಲಾ ಮಾಯ. ಇನ್ನು ಮಳೆತೇಳಿ ಶಾಲೆಗೆ ರಜೆ ಕೊಟ್ಟಿರ್ಕಾಕನ ನಾವು ಮಕ್ಕ ಎಲ್ಲಾ ಸೇರ್ತಿದ್ದದ್ ರಾಜಣ್ಣನ ಅಂಗಡೀಲಿ. ಮಳೆ ಇದ್ದರೆ ಅವ್ಕೂ ವ್ಯಾಪಾರ ಇರ್ದುಲ್ಲೆ. ನಂ ಜೊತೆ ಸೇರ್ಕಂಡ್ ರಮ್ಮಿ ಆಡ್ತಿದ್ದೊ... ಆಟ ಆಡಿ ಆಡಿ ಬೋರ್ ಆದ್ರೆ ಅಲ್ಲೊಂದು ಲಾಟರಿ ಯೋಜನೆ ! ನಾವು ಎಷ್ಟು ಜನ ಇದ್ದವೆನೋ, ಅಷ್ಟೂ ಸಂಖ್ಯೆಲಿ ಚೀಟಿ ಹಾಕ್ತಿದ್ದೊ. ಆ ಚೀಟಿಲಿ 1 ರಿಂದ 20ರ ವರೆಗೆ ಅಂಕಿ ಬರ್ದಿಡ್ತಿದ್ದೊ. ಲಾಟರಿ ತೆಗೆಯಕಾಕನ ಯಾರಿಗೆ ಯಾವ ಸಂಖ್ಯೆ ಬಂದದೆನೋ ಅವು ಅಷ್ಟು ದುಡ್ಡು ಹಾಕಕ್ಕಾಗಿತ್ತ್. ಅಂದ್ರೆ, 1 ತಾ ಬಂದಿದ್ದರೆ 1 ರೂಪಾಯಿ, 10 ತಾ ಬಂದಿದ್ದರೆ 10 ರೂಪಾಯಿ... ಹಿಂಗೆ ಎಲ್ಲರ ಕೈಯಿಂದ ದುಡ್ಡು ಕಲೆಕ್ಟ್ ಮಾಡಿಕ್ಕಂಡ್, ಸಂತೋಷ್ ಹೊಟೇಲ್ಂದ ಬಿಸಿ ಬಿಸಿ ಕಾಫಿ ಮತ್ತೆ ಪಕೋಡ ತರ್ಸಿಕಂಡ್ ಮೈ, ಮನಸ್ಸು ಎಲ್ಲಾ ಬಿಸಿ ಮಾಡಿಕಣ್ತಿದ್ದೊ....ಇಲ್ಲಿಂದ ಶುರುವಾಗ್ತಿತ್ತ್ ನಮ್ಮ ಕಟ್ಟೆಪುಣಿ ಯಾತ್ರೆ !
ಕಟ್ಟೆಪುಣಿತೇಳಿರೆ ಕಾವೇರಿ ಹೊಳೆಬದೀಲಿ ಎತ್ತರಲಿ ಕಟ್ಟಿರ್ವ ದೊಟ್ಟ ಕಟ್ಟೆ. ಈ ಕಟ್ಟೆದ್ ಒಂದು ಸೈಡ್ಲಿ ನಾರಾಯಾಣಾಚಾರ್ ಅವ್ರ ಗದ್ದೆ ಮತ್ತೊಂದು ಬದೀಲಿ ಸಿರಕಜೆ ಮನೆಯವ್ರ ಗದ್ದೆ ಉಟ್ಟು. ಮಳೆಗಾಲಲಿ ಈ ಎರಡೂ ಗದ್ದೆಗಳ ತುಂಬಾ ನೀರು ತುಂಬಿಕೊಂಡ್, ದೊಡ್ಡ ಕೆರೆನಂಗೆ ಕಂಡದೆ. ಆಗ ಈ ಕಟ್ಟೆಪುಣಿ, ಕೆರೆಗೆ ಹಾಕಿದ ಪಾಲದಂಗೆ ಇದ್ದದೆ. ಜೋರಾಗಿ ಗಾಳಿ ಬೀಸಿಕಾಕನ ಕಟ್ಟೆಪುಣಿಗೆ ಎರಡೂ ಕಡೆಂದ ನೀರು ಬಂದು ಹೊಡ್ದದೆ. ಅಲ್ಲಿ ನಿಂತ್ಕಂಡ್ ಇದ್ನ ನೋಡುದುತೇಳಿರೇ ಅದೊಂಥರ ಖುಷಿ. ಹಂಗೆತೇಳಿ ಸ್ವಲ್ಪ ಎಚ್ಚರ ತಪ್ಪಿರೂ ನೀರಿಗೆ ಬಿದ್ದುಬಿಡ್ವ ಅಪಾಯನೂ ಉಟ್ಟು. ಹಂಗಾಗಿ ನಾವು ಇಲ್ಲಿಗೆ ಬರ್ವ ವಿಷಯನ ಮನೇಲಿ ಹೇಳ್ತಿತ್ಲೆ. ಗೊತ್ತಾದ್ರೆ, ಅಪ್ಪ-ಅಮ್ಮ ಕಳಿಸ್ತಿತ್ಲೆ.
ಮಳೆಗಾಲಲಿ ಕರ್ಮಂಜಿತೇಳಿ ಒಂದು ಹಣ್ಣು ಸಿಕ್ಕಿದೆ. ಮುಳ್ಳು ಬಳ್ಳಿಲಿ ಆಗುವ ಕೆಂಪು ಕೆಂಪು ಹಣ್ಣು, ತಿಂಬಕೆ ತುಂಬಾ ಲಾಯ್ಕ. ಸ್ವಲ್ಪ ಹುಳಿ, ಸ್ವಲ್ಪ ಸಿಹಿ....ಯೋಚನೆ ಮಾಡಿರೆ ಬಾಯಿಲಿ ನೀರು ಬಂದದೆ. ಇದ್ರ ಕಾಯಿನ ಉಪ್ಪಿನಕಾಯಿ ಹಾಕಿವೆ. ಅದೆಂಥ ಮಳೆನೇ ಇರ್ಲಿ, ಈ ಕರ್ಮಂಜಿ ಹಣ್ಣುನ ಮಾತ್ರ ನಾವು ಕಳ್ಕಂತಿತ್ಲೆ. ಒಂದು ಕಡೆ ಕಾಲಿಗೆ ಜಿಗಣೆ ಕಚ್ಚಿ ರಕ್ತ, ಮತ್ತೊಂದು ಕಡೆ ಮೈ ಕೈಗೆ ಮುಳ್ಳು ಚುಚ್ಚಿ ಅಲ್ಲೂ ರಕ್ತ ! ಆದ್ರೂ ಕರ್ಮಂಜಿ ಹಣ್ಣುನ ರುಚಿ ಮುಂದೆ ಅದೆಂಥದ್ದೂ ಲೆಕ್ಕಕ್ಕೆ ಬಾತಿತ್ಲೆ.
ಭಾಗಮಂಡಲಲಿ ಈ ವರ್ಷದ ಮಳೆಗಾಲ ಶುರುವಾಗ್ಯುಟ್ಟು. ರಾಜಣ್ಣನ ಅಂಗಡಿ, ಕಟ್ಟೆಪುಣಿ, ಕರ್ಮಂಜಿ ಹಣ್ಣು ನೆನಪಗ್ತುಟ್ಟು...ರಜೆ ಸಿಕ್ಕಿದ ಕೂಡಲೇ ಭಾಗಮಂಡಲ ಕಡೆ ನನ್ನ ಪಯಣ...
- `ಸುಮ'
arebhase@gmail.com
No comments:
Post a Comment