Thursday, 7 June 2012

ಹಳೇ ರೇಡಿಯೋದ ಹೊಸ ನೆನಪು...


ನನ್ನ ತಾತಮನೇಲಿ ಒಂದು ರೇಡಿಯೋ ಇತ್. ತುಂಬಾ ಪಂಡ್ಕಾಲದ ರೇಡಿಯೋ ಅದ್. ಹೆಚ್ಚು ಕಡಿಮೆ ಈಗಿನ 21 ಇಂಚ್ನ ಟೀವಿಯಷ್ಟೇ ದೊಡ್ಡದಿತ್ತ್ ! ಬೆಳಗ್ಗೆ ಧಾರವಾಡ, ಮಧ್ಯಾಹ್ನ ಸಿಲೋನ್, ರಾತ್ರಿ ಬೆಂಗಳೂರು ಸ್ಟೇಷನ್ನ ಪ್ರೋಗ್ರಾಂಗಳ್ನ ತುಂಬಾ ಲಾಯ್ಕ ಕೇಳಕ್ಕಾಗಿತ್ತ್. ಆ ರೇಡಿಯೋ ಇದ್ದದ್ ಬಾಡೆಲಿ. ಎದುರಂದ ನುಗ್ಗಿದ ಕೂಡ್ಲೇ ಆ ಬಾಡೆನ ಬಲಭಾಗಲಿ ನನ್ನ ತಾತನ ರೂಂ. ಎಡಭಾಗಲಿ ತಾತನ ತಮ್ಮನ ರೂಮ್. ಬಾಡೆಲಿ ದೇವರ ಫೋಟೋ ಇಡಿಕೆ ಒಂದು ಸ್ಟ್ಯಾಂಡ್. ಅದ್ರ ಪಕ್ಕಲೇ ಈ ರೇಡಿಯೋ ಇಡಿಕೂ ಒಂದು ಸ್ಟ್ಯಾಂಡ್. ಮಕ್ಕಳ ಕೈಗೆ ಸಿಕ್ಕದಂಗೆ ಅಟ್ಟಕ್ಕೆ ತಾಗಿಸಿ ರೇಡಿಯೋ ಸ್ಟ್ಯಾಂಡ್ ಮಾಡಿಸಿದ್ದೊ. ಅದ್ರ ಒಳಗೆ ಒಳ್ಳೆ ಚಿನ್ನ ಇಡುವಂಗೆ ರೇಡಿಯೋನ ತುಂಬಾ ಜಾಗರೂಕತೆಲಿ ಇಟ್ಕೊಂಡಿದ್ದೊ.
ಆ ರೇಡಿಯೋ ನೋಡಿಕೆ ತುಂಬಾ ಲಾಯ್ಕ ಇತ್ತ್. ಸ್ಟೇಷನ್ಗಳ್ನ ಅಡ್ಜೆಸ್ಟ್ ಮಾಡಿವೆಯಲ್ಲಾ ಆ ಮೀಟರ್ ಪಟ್ಟಿ, ಅದ್ರಲ್ಲಿ ಕಲರ್ ಕಲರ್ ಲೈಟ್ಗ ಬರ್ತಿದ್ದೊ. ತಾತ ಕುರ್ಚಿ ಮೇಲೆ ಹತ್ತಿಕಂಡ್ ಸ್ಟೆಷನ್ಗಳ್ನ ಚೇಂಜ್ ಮಾಡ್ತಿದ್ರೆ, ಆ ಲೈಟ್ಗ ಫಳ ಫಳ ಮಿಂಚ್ತಿದ್ದೊ....ನಾವು ಸಣ್ಣ ಮಕ್ಕ ಅದನ್ನೇ ಪಿಳಿ ಪಿಳಿ ಕಣ್ಣು ಬಿಡ್ಕಂಡ್ ನೋಡ್ತಿತಿದ್ದೊ.. ಆ ರೇಡಿಯೋನಾ ಆ ಇಬ್ಬರು ತಾತಂದಿರ್ ಮಾತ್ರ ಆಪರೇಟ್ ಮಾಡ್ತಿದ್ದೊ. ನನ್ನ ಮಾವಂದಿರಿಗೂ ಮುಟ್ಟಿಕೆ ಬಿಡ್ತಿತ್ಲೆ. `ಕರಿಯೆತ್ತು ಕಾಳಿಂಗ...' ತೇಳುವ ಹಾಡ್ಂದ ಶುರುವಾಗ್ತಿದ್ದ ಕೃಷಿರಂಗ, ಪ್ರದೇಶಸಮಾಚಾರ, ವಾರ್ತೆಗಳ್ನ ಅವು ಯಾವತ್ತೂ ಮಿಸ್ ಮಾಡಿಕಣ್ತಿತ್ಲೆ....ಶುಕ್ರವಾರ ಬಾತ್ ತ್ತೇಳಿರೆ ನನ್ನ ಮಾವಂದಿರಿಗೆ ತುಂಬಾ ಖುಷಿ...
ಶುಕ್ರವಾರ ಮಡಿಕೇರಿ ಸಂತೆ ಅಲಾ... ನನ್ನ ಇಬ್ಬರು ತಾತಂದಿರೂ ಸಂತೆಗೆ ಹೋಗಿಬಿಡ್ತಿದ್ದೊ. ಅವು ಬೆಳಗ್ಗೆ ಹೋದ್ರೆ, ಬರ್ತಿದ್ದದ್ ಸೂರ್ಯ ಮುಳುಗಿದ ಮೇಲೆನೇ...ಹಂಗಾಗಿ ಮಧ್ಯಾಹ್ನ ಹೊತ್ತು ಮಾವಂದಿರ್  ಕುರ್ಚಿ ಹತ್ತಿ ಸರ್ಕಸ್ ಮಾಡಿಕಂಡ್ ರೇಡಿಯೋಲಿ ಸಿಲೋನ್ ಸ್ಟೇಷನ್ ಹಾಕ್ತಿದ್ದೊ... ಅದ್ಯಾವ್ದೋ ಹೆಂಗಸ್ನ ತಮಿಳು ಮಿಶ್ರದ ಕನ್ನಡ, ಕನ್ನಡ ಚಿತ್ರಗೀತೆಗಳ್ನ ಕೇಳಿಕೆ ತುಂಬಾ ಲಾಯ್ಕ ಇರ್ತಿತ್ತ್. ಇನ್ನೇನು ತಾತಂದಿರು ಬರ್ವ ಟೈಂ ಆತ್ತೇಳಿಕಾಕನ ಬೆಂಗಳೂರು ಸ್ಟೇಷನ್ಗೆ ತಿರುಗಿಸಿ, ಏನೂ ಗೊತ್ತಿಲ್ಲದಂಗೆ ಸುಮ್ಮನೆ ಕುದ್ದುಬಿಡ್ತಿದ್ದೊ. ಅದ್ರಲ್ಲೂ ಆ ತಾತಂದಿರಿಗೆ ಒಮ್ಮೊಮ್ಮೆ ಡೌಟ್ ಬಂದ್ಬಿಡ್ತಿತ್. `ನಾ ಬೆಳಿಗ್ಗೆ ಧಾರವಾಡ ಸ್ಟೇಷನ್ ಇಟ್ಟಿದ್ದೆ...ಈಗ ನೋಡಿರೆ ಬೆಂಗಳೂರ್ಲಿ ಉಟ್ಟಲಾ'ತಾ ಅವವೇ ಮಾತಾಡಿಕೊಳ್ತಿದ್ದೊ. ಆಗೆಲ್ಲಾ ನಮಿಗೆ ಒಳಗೊಳಗೆ ನಗು.
ನಾ ತಾತ ಮನೆಗೆ ಹೋದ್ರೆ, ಇಬ್ಬರೂ ತಾತಂದಿರೂ ನನ್ನ ಮೇಲೆ ಒಂದು ಕಣ್ಣು ಇಟ್ಟಿರ್ತಿದ್ದೊ. ನಾ ಆಗ ದೊಡ್ಡ `ಮೆಕ್ಯಾನಿಕ್'ತಾ ಹೆಸರುವಾಸಿ ಆಗಿದ್ದೆ. ನನ್ನ ಕೈಗೆ ಎಂಥ ಸಿಕ್ಕಿರೂ ಒಂದ್ಸಲ ಅದ್ನ ಬಿಚ್ಚಿ ನೋಡುದು ನಂಗೆ ಅಭ್ಯಾಸ ಆಗಿಬಿಟ್ಟಿತ್ತ್. ಆದ್ರೆ ಅದ್ನ ಮತ್ತೆ ಜೋಡಿಸಿಕೆ ಗೊತ್ತಾಗ್ತಿತ್ಲೆ. ನಮ್ಮ ಮನೆ ರೇಡಿಯೋ, ವಾಚ್ ಎಲ್ಲಾ ನನ್ನ ಈ ಮೆಕ್ಯಾನಿಕ್ ಬುದ್ಧಿಗೆ ಸಿಕ್ಕಿ ಹಾಳಾಗಿತ್ತ್. ಇದ್ ನಮ್ಮ ತಾತಂದಿರಿಗೂ ಗೊತ್ತಿತ್ತ್. ಯಾವತ್ತೂ ಕೂಡ ನನ್ನನ್ನ ಒಬ್ನೇ ರೇಡಿಯೋದ ಹತ್ರ ಬಿಡ್ತಿತ್ಲೆ. ಒಂದೋ ಆ ಇಬ್ಬರು ತಾತಂದಿರು ಇರ್ತಿದ್ದೊ. ಇಲ್ಲದಿದ್ದರೆ ಮಾವಂದಿರ್ನ ಪಾರಕ್ಕೆ ಬಿಡ್ತಿದ್ದೊ. ನಂಗೂ ಆಸೆ ಇತ್, ರೇಡಿಯೋಲಿ ಆ ಫಳ ಫಳ ಹೊಳ್ದದೆ ಅಲಾ ಲೈಟ್, ಅದ್ನ ಬಿಚ್ಚಿ ನೋಡೊಕೂತಾ..! ಆದ್ರೆ ಅವಕಾಶನೇ ಸಿಕ್ಕಿತ್ಲೆ.
ಈಗ ನನ್ನ ಆ ಇಬ್ಬರು ತಾತಂದಿರೂ ಇಲ್ಲೆ. ದೊಡ್ಡ ರೇಡಿಯೋನ ಯಾವಾಗ್ಲೋ ಗುಜರಿಯವ್ಕೆ ಕೊಟ್ಟುಬಿಟ್ಟಿದ್ದೊ. ರೇಡಿಯೋ ಬದಲಿಗೆ ಆ ಬಾಡೆಗೆ ಎಲ್ಸಿಡಿ ಟೀವಿ ಬಂದುಟ್ಟು. ರೇಡಿಯೋ ಇಡ್ತಿದ್ದ ಪೆಟ್ಟಿಗೆ ಖಾಲಿ ಖಾಲಿತಾ ಅನ್ನಿಸಿದೆ... ಆದ್ರೆ ಅದ್ರ ತುಂಬಾ ಹಳೇ ನೆನಪುಗ ಒಳೋ....

- `ಸುಮ'
arebhase@gmail.com

No comments:

Post a Comment