ಎಲ್ಲಿ ಹೋತ್ ವರುಣ ?
ಭೂರಮೆಯ ಮೇಲೆ ಕೋಪನಾ ?
ಸೂರ್ಯ ಮರೆಯಾಗುವಂಗೆ
ಮೋಡದ ರಾಶಿ..
ಇನ್ನೇನು ಮಳೆ ಬಿದ್ದೇಬಿಟ್ಟದೆ...
ಅಷ್ಟು ಹೊತ್ತಿಗೆ ಜೋರು ಗಾಳಿ !
ಬರ್ವ ಮಳೆಯೂ ಕಾಣದಂಗೆ ಮಾಯ !
ಡಯಟ್ ಮಾಡ್ದ ಗೂಡೆಯಂಗೆ
ಗಾತ್ರ ಇಳಿಸಿಕೊಂಡುಟ್ಟು ಕಾವೇರಿ
ಕನ್ನಿಕೆಯೂ ಲಾಚಾರ್ !
ಬಿಸಿಲ ಹೊಡೆತಕ್ಕೆ ಬೆವರುತ್ತುಟ್ಟು
ಬ್ರಹ್ಮಗಿರಿ !
ಬರಿದಾಗುಟ್ಟು ಅರಸೀಕೆರೆಯ ಒಡಲು
ಭತ್ತ ಬೆಳೆಯ್ವ ಗದ್ದೆ ಬಾಣೆಯಂಗೆ ಗಟ್ಟಿ !
ಹೂಡಿಕೆ ಹೋದರೆ ನೇಗಿಲೇ ಕಚ್ಚುಲ್ಲೆ !
ನೊಗಕ್ಕೆ ಹೆಗಲು ಕೊಡ್ವ
ಬಸವಂಗೆ ಹಸಿರು ಹುಲ್ಲಿಲ್ಲೆ
ಹಾಲು ಕೊಡ್ವ ಗಂಗೆಗೇ ಬಾಯರಿಕೆ...!
ಮಳೆಹುಳಕ್ಕೆ ಸ್ವರನೇ ಹೊರಡುಲ್ಲೆ !
ನಮ್ಮನಾಳುವವರ ಬಾಯೀಲಿ ಹೊಸ ರಾಗ
ಮೋಡಭಿತ್ತನೆ !
ಬರಗಾಲದ ಹೆಸರಲ್ಲಿ ಸಮೃದ್ಧ ಸಂಪಾದನೆ
ಮಳೆ ಬಂದರೂ, ಬಾರದಿದ್ದರೂ...
ಲಾಭ ರಾಜಕಾರಣಿಗಳಿಗೆ !
ರೈತ ಬದುಕೋಕು...
ಬಾ....ಮಳೆಯೇ ಬಾ...
- `ಸುಮ'
No comments:
Post a Comment