Thursday, 21 June 2012

ಬೆಕ್ಕಿನ ಸಂಸಾರ...


ಯಾವ ಮನೆಯ ಮಗಳೋ ನೀ ?
ಇದೇ ಜಾಗ ಬೇಕಿತ್ತಾ ನಿಂಗೆ ?
ಹೊರಗೆ ಜಡಿಮಳೆ !
ಗೋಡೇಲಿ ಜಿನುಗುತ್ತಿರ್ವ ನೀರು
ಮುರಿದ ಬಾಗಿಲಿಂದ 
ನುಗ್ಗುತ್ತಿರ್ವ ಚಳಿಗಾಳಿ !
ಇಲ್ಲೇ ಹೆತ್ತೊಳಲ್ಲಾ
ಮೂರು ಮುದ್ದು ಮಕ್ಕಳಾ...!
ಅದೆಷ್ಟು ಲಾಯ್ಕ...
ನಿನ್ನ ಕಂದಮ್ಮಗ !
ಒಂದಕ್ಕಿಂತ ಒಂದು ಚೆಂದ !
ಆದ್ರೆ ಪಾಪ...
ಆ ಕೋಟನ ಹೇಂಗೆ ತಡ್ಕಂಡವೆ ?
ಬರೀ ನಿನ್ನ ಬೆಚ್ಚನೆ ಅಪ್ಪುಗೆ ಸಾಕಾ ?
ನೀ ಕೊಡ್ವ ಮೊಲೆಹಾಲಿಗೆ
ಅಷ್ಟೊಂದು ಶಕ್ತಿ ಉಟ್ಟಾ ?
ನನ್ನದೊಂದು ಹಳೇ ಕಂಬಳಿ
ಕೊಡ್ನೋತೇಳಿರೆ....
ದುರುಗುಟ್ಟಿಕಂಡ್ ನೋಡಿಯಾ...
ಬಿಸಿ ಬಿಸಿ ಹಾಲು ತಂದರೆ
ದೊಡ್ಡಕಣ್ಣು ಬಿಟ್ಟು ಹೆದರಿಸಿಯಾ...
ನೀ ಅಷ್ಟೊಂದು ಸ್ವಾಭಿಮಾನಿಯಾ ?
ಸಾಕ್ ನಿನ್ನ ಜಂಭ..
ನೋಡಲ್ಲಿ ನಿನ್ನ ಮಕ್ಕ 
ಮೀಯಾಂವ್... ಮಿಯಾಂವ್....ಹೇಳ್ತೊಳೊ !
ಹೋಗಿ ಹಾಲು ಕೊಡು... 

`ಸುಮ'
arebhase@gmail.com

No comments:

Post a Comment