Monday, 2 January 2012

ಮಾವನ ಮನೆಗೆ ಬಂದ ಮುಖ್ಯಮಂತ್ರಿ...






ದೇವರಗುಂಡ ಸದಾನಂದ ಗೌಡ ಮುಖ್ಯಮಂತ್ರಿ ಆದ್ಮೇಲೆ ಮೊದಲ ಸಲ  ಕೊಡಗಿಗೆ ಬಂದಿದ್ದೊ. ಕೊಡಗು ಸದಾನಂದಗೌಡರ ಮಾವನ ಮನೆ. ಅವ್ರ ಹೆಣ್ಣ್ ಡಾಟಿ ಕುಶಾಲನಗರದ ಗುಡ್ಡೇಹೊಸೂರು ಹತ್ರ ಇರ್ವ ಬೊಳ್ಳೂರು ಗ್ರಾಮದವು. ಹಂಗಾಗಿ ಸದಾನಂದ ಗೌಡ ಅವ್ರ ಈ ಭೇಟಿ ತುಂಬಾ ಮಹತ್ವ ಪಡ್ಕಂಡಿತ್ತ್. ಮೊದ್ಲು ಮಡಿಕೇರಿಗೆ ಬಂದ ಸದಾನಂದ ಗೌಡ ಗುಡ್ಡೇಮನೆ ಅಪ್ಪಯ್ಯ ಗೌಡ ಅವ್ರ ಪುತ್ಥಳಿ ಅನಾವರಣ ಮಾಡ್ದೊ. ಅದಾದ್ಮೇಲೆ ಮಡಿಕೇರಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗಿ, ಗುಡ್ಡೇಹೊಸೂರಿಗೆ ಬಂದೊ. ಇಲ್ಲಿನ ಅವ್ರ ಮಾವನ ಮನೇಲಿ ಒಳ್ಳೇ ಸ್ವಾಗತ ಸಿಕ್ತ್. ಮಧ್ಯಾಹ್ನದ ಊಟದ ವ್ಯವಸ್ಥೆ ಸದಾನಂದ ಗೌಡರ ಮಾವನ ಮನೇಲಿ ಇತ್ತ್. ಶ್ಯಾವಿಗೆ ಪಾಯಸ, ಪಲಾವ್, ಅನ್ನ, ಸಾಂಬಾರ್, ಅಕ್ಕಿರೊಟ್ಟಿ, ಕೋಳಿಸಾರ್, ಹಪ್ಪಳ, ಪಾಯಸ ಹಿಂಗೆ ಗಮ್ಮತ್ತಾದ ಊಟ ಇತ್ತ್. ಊಟ ಆದ್ಮೇಲೆ ಕುಶಾಲನಗರ ಗೌಡ ಸಮಾಜಲಿ ನಡ್ದ ಗೌಡ ಸಂತೋಷ ಕೂಟದ ಸಮಾರೋಪ ಸಮಾರಂಭಲಿ ಪಾಲ್ಗೊಂಡಿದ್ದೊ. ಗೌಡರ ಜೊತೆ ಡಾಟಿ ಸದಾನಂದಗೌಡ, ಸ್ಪೀಕರ್ ಕೆಜಿ ಬೋಪಯ್ಯ, ಶಾಸಕ    ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ ರವಿಕುಶಾಲಪ್ಪ ಕೂಡ ಬಂದಿದ್ದೊ...

ಫೋಟೋ ಕಳ್ಸಿದವು: ಮಡಿಕೇರಿಂದ `10ಕುಟುಂಬ18 ಗೋತ್ರ' ಸಾಕ್ಷ್ಯಚಿತ್ರ ಟೀಂ ಕುಶಾಲನಗರಂದ ತೊರೆನೂರು ಪ್ರೇಂಕುಮಾರ
arebhase@gmail.com

1 comment: