Tuesday, 10 January 2012

ಅಪರೇಷನ್ ಕೋಳಿ+ಮೊಟ್ಟೆ

ಆಗ ಎಲ್ಲವ್ಕೆ  ಗದ್ದೆ ಕೆಲಸ ಜೋರು..ಅವ್ವ ,ತಾತ ಗದ್ದೆ ಗೆ ಹೋಕನ ಅಮ್ಮ ಮತ್ತೆ ದೊಡ್ಡಮಾಮಂಗೆ ಒಂದು ಕೆಲಸ ವಹಿಸಿ ಹೋಗಿದ್ದೋ ಗಡ ..ಆ ಕೆಲಸ ಎಂತ  ಗೊತ್ತ..ಕಾಪುಲಿ ಕೋಳಿ ಮೊಟ್ಟೆ ಹಾಕಿರೆ ತೆಗ್ದ್  ಮಾಡ್ಗುದು ! ಸರಿ ಅವ್ವ ತಾತ ಮತ್ತೆ ದೊಡ್ದಮನೆಲಿ ಇದ್ದ ಎಲ್ಲವೂ  ಗದ್ದೆ ಕೆಲಸಕ್ಕೆ  ಹೋಗಿದ್ದೋ..ನನ್ನ ಅಮ್ಮ ಮತ್ತೆ ದೊಡ್ದಮಾಮಂಗೆ  ಕೋಳಿ ಮೊಟ್ಟೆ ಹಾಕಿತಾ  ಇಲ್ಲೇನಾ ತ ಆಗಾಗ ಹೋಗಿ ನೋಡ್ ದೇ ಕೆಲಸ ..ಹನ್ನೊಂದು ಗಂಟೆ ಆದರೂ  ಕೋಳಿ ಮೊಟ್ಟೆ
ಹಾಕಿತ್ಲೇ..!!(ಇವು ಹಂಗೆ ಹೋಗಿ ನೋಡ್ರೆ ಕೋಳಿಗೆ ನಾಚಿಕೆ ಆಗದೆ ಇದ್ದದೆನಾ ..??ಹ ಹ) ಅವ್ವ ನೋಡ್ರೆ ಹಂಗೆ ಹೇಳಿ ಹೊಗೊಳೋ...ಈ ಕೋಳಿ ನೋಡ್ರೆ ಮೊಟ್ಟೆ ಹಾಕಿತ್ಲೇ...ಎಲ್ಲವೂ ಊಟಕ್ಕೆ  ಬರುವ ಹೊತ್ತಾತ್ ..ಅಷ್ಟ್  ಹೊತ್ತಿಗೆ ನಮ್ಮ ಬ್ರಿಲ್ಲಿಯಂಟ್ ದೊಡ್ದಮಾಮಂಗೆ ಒಂದ್ ಐಡಿಯಾ   ಬಾತ್..ಮಾಮ  ಅಮ್ಮಂಗೆ ಹೇಳ್ದೋ ಗಡ ನಿನ್ ಕೋಳಿನ ಹಿಡಕ ನಾನ್ ಮೊಟ್ಟೆ
ಎಲ್ಡನೆ    ..(ಸಣ್ಣ ಮಕ್ಕಳ ಕಿತಾಪತಿ ನೋಡಿ!!!!!!!) 
ಸರಿ, ಅಪರೇಷನ್  ಕೋಳಿ ಶುರು ಆತ್...ಮನೆಗೆ ಅವ್ವ ಬಂದ್  ನೋಡ್ಕಾಕನ ಮೊಟ್ಟೆ ಒಂದ್ ಕಡೆ ಇತ್ತ್  , ಕೋಳಿ ಇನ್ನೊಂದು ಕಡೆ   ಸತ್ತ ಬಿದ್ದಿತ್ ಗಡ!!! ಯಾಕೆತೆಳಿರೆ ಮಾಮ ಎಳೆದ  ರಭಸಕ್ಕೆ  ಮೊಟ್ಟೆ ಒಟ್ಟಿಗೆ ಅದ್ರ ಮೊಟ್ಟೆ ಚೀಲನೂ  ಹೊರಗೆ ಬಂದಿತ್.... ಅಮ್ಮ ,ಮಾಮ  ನಡ್ದ  ಕಥೆ ಹೇಳ್ದೋ ... ಮನೇಲಿ ಎಲ್ಲವ್ಕೂ ಜೋರು ನಗೆ...ಬೈಗುಳಂದ ಬಚಾವ್ !!! ಹ ಹ ಹ ...ಅಂತೂ ಕೊನೆಗೆ ಸಾಯಂಕಾಲಕ್ಕೆ ಕೋಳಿ ಸಾರ್ ರೆಡಿ ಆಗಿತ್...!!!!!!!!!!ಆದರೆ ಪಾಪ ಕೋಳಿ???
ಇದ್ ನನ್ನ ಅಮ್ಮ ನ ಬಾಲ್ಯದ  ನೆನಪು....  ಮಾಮನ  ಮನೆಗೆ ಹೋದರೆ  ಈಗಲೂ ಈ ಘಟನೆ ಗ್ಯಾನ  ಮಾಡಿ ಎಲ್ಲವು ನಗಾಡುವೆ..!!
ಎಷ್ಟೇ  ದೊಡ್ದವಾದರೂ ನಮ್ಮ ನಮ್ಮ ಬಾಲ್ಯದ ನೆನಪುಗ ಮಾಸಿ ಹೋಕೆ  ಹೆಂಗೆ  ಸಾಧ್ಯ ? ಏನ್ ಹೇಳ್ರೆ ಸ್ನೇಹಿತರೆ ???


- ಪವಿ ನೆರಿಯನ(ಭಾವನೆಗಳ ಪಲ್ಲವಿ)  
arebhase@gmail.com

No comments:

Post a Comment